Showing posts with label ಕಲೆ. Show all posts
Showing posts with label ಕಲೆ. Show all posts

Saturday, September 25, 2010

ಬಲೂನ್ twist ಆರ್ಟ್...

ನಿಮಗೆ ಗೊತ್ತಿದೆಯ,,,, ನಾವು ಚಿಕ್ಕವರಾಗಿದ್ದಾಗ,,, ಯಾವುದದು ಒಂದು ಬಲೂನ್,,,ಒಡೆದು ಹೋದರೆ,, ಅದರಲ್ಲೇ  bubbles  ತರ ಬಾಯಿನಿಂದ ಊದಿ ಚಿಕ್ಕ ಚಿಕ್ಕ ಬಲೂನ್ ... ಮಾಡಿ,,,, ಟ್ವಿಸ್ಟ್ ಮಾಡಿ... ಕೈಗೆ ಉಜ್ಜಿಕೊಂಡು ಸೌಂಡ್ ಮಾಡ್ತಾ ಇದ್ವಿ.. ನೆನಪು ಇದೆಯಾ..... ಹ್ಞೂ  ಅದೇ ತರ ಇಲ್ಲಿ ನೋಡಿ... ಬಲೂನ್ ಟ್ವಿಸ್ಟ್ ನೆ ಒಂದು ತರ ಆರ್ಟ್ ಮಾಡಿಕೊಂಡು,,,, ತರ ತರದ desing ಮಾಡಿದ್ದಾರೆ ಕಂಪ್ಯೂಟರ್, ಬೈಕ್.. ಸೋಫಾ.......  ಕೊನೆಗೂ ಹುಡುಗೀರಾ ಬಟ್ಟೆನು ಈ ಬಲೂನ್ ನಿಂದಲೇ ಟ್ವಿಸ್ಟ್ ಮಾಡಿ ಮಾಡಿದ್ದಾರೆ.....
(ಬಟ್ಟೆ ಬಿಚ್ಚೋ ಗೋಳೇ ಇಲ್ಲ ಅಂತ ಕಾಣುತ್ತೆ... ಚೇಂಜ್ ಮಾಡಬೇಕಾದರೆ, ಒಂದು ಸೂಜಿ ತಗೊಂಡ್ ಚುಚ್ಚಿದರೆ     ಆಯಿತು :-)  ) 
ಎಂತೆಂಥ ಆರ್ಟ್ ಇರುತ್ತೆ ಅಲ್ವ..........  ನೋಡಿ ಮಜಾ ಮಾಡಿ...........


Wednesday, August 25, 2010

ಮೊಟ್ಟೆ ಗಳನ್ನು ಇಡುವ ಬಾಕ್ಸ್ ನಲ್ಲೆ ಅರಳುವ ಚೆಂದದ ಕಲೆ....

ಮೊಟ್ಟೆ ಗಳನ್ನು(EGG ) ಇಡುವ ಬಾಕ್ಸ್ ನಲ್ಲೆ ಅರಳುವ ಚೆಂದದ ಕಲೆ....
     ಮೊಟ್ಟೆ ಯಲ್ಲಿ ಮಾಡಿರುವ ಚಿತ್ರಗಳನ್ನ , ಅಥವಾ ಕಲೆಯನ್ನ ನೋಡಿರುತ್ತೀರಿ ಅಲ್ವ...  ಆದರೆ ಮೊಟ್ಟೆ ಇಡುವ ಬಾಕ್ಸ್ ನಿಂದ ಕೂಡ ಸುಂದರವಾದ ಅದ್ಬುತ ವಾದ ಕಲಾಕ್ರುತಿಗಳನ್ನ ರಚಿಸಬಹುದು ಅಂತ ಗೊತ್ತ? ಗೊತ್ತಿಲ್ಲದೇ ಇದ್ದರೆ ಇಲ್ಲಿ ನೋಡಿ....
ಏನಾದರೂ ಮಾಡಲೇ ಬೇಕು ಅಂತ ಕ್ರಿಯೇಟಿವ್ ಮೈಂಡ್ ಇರುವವರು ಏನು ಸಿಕ್ಕರು ಅದರಲ್ಲೇ ಅದ್ಬುತ ಎನಿಸುವ ವಿಚಿತ್ರ ಎನಿಸುವ ಕಲೆ ನ ಮಾಡಿರುತ್ತಾರೆ.......ಎಷ್ಟು ವಿಸ್ಮಯ ಅಲ್ವ.... ಕೆಲವೊಂದು ಊಹೆ ಮಾಡಿಕೊಳ್ಳಲು ಆಗೋಲ್ಲ ಅಂಥದನ್ನ ಮಾಡಿ, ಹೀಗೂ ಮಾಡಬಹುದು ಅಂತ ಹೇಳಿರುತ್ತಾರೆ.....
ಮುಂದಿನ ಲೇಖನದಲ್ಲಿ.... ಮೊಟ್ಟೆ ನಲ್ಲೆ ಕೆತ್ತಿರುವ ಸುಂದರ ಕಲೆಯನ್ನು ಹಾಗು ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ......























ಇದೆ ರೀತಿ,, ಇನ್ನು ವಿಚಿತ್ರ ವಾದ ಕೆಲವು ಕಲೆಗಳಿವೆ... ಇದನೆಲ್ಲ ನನ್ನ  ಬ್ಲಾಗಿನಲ್ಲಿ ಹಾಕಿದ್ದೇನೆ,,, ನೋಡಬೇಕೆನಿಸಿದರೆ ಒಮ್ಮೆ ಕ್ಲಿಕ್ಕಿಸಿ ನೋಡಿ.....
1) ದುಡ್ಡು ದುಡ್ಡು ದುಡ್ಡು...!!!!! ಮನಿ ನಲ್ಲೆ ಅರಳುವ ಕಲೆ......!!!
2)  ಕಸದಿಂದ ಕಲೆ -- Tyre Art !!!!!
3)    ಹಕ್ಕಿಯ ಪುಕ್ಕದಲ್ಲೇ ಅರಳುವ ಅದ್ಬುತ ಕಲೆ.... Julie ತ್ಹೊಮ್ಪ್ಸೋನ್
4 ) ಹಸಿರು ಹುಲ್ಲಿನ ಕಲೆ... Grass ART !!! ಪರಿಸರ ಪ್ರೇಮಿ ಕಟ್ಟಡಗಳು
5 ) ಕಲ್ಲಂಗಡಿ ಹಣ್ಣಿನಲ್ಲಿ ಅರಳುವ ಕಲೆ.....!!!!!
6 ) ಪೇಪರ್ ಮಡಚುವ ಕಲೆ -- Origami !!!!
7 ) ಬ್ರೆಡ್ ಆರ್ಟ್ .......ನೋಡಿದಿರಾ?
8 ) ಪೆನ್ಸಿಲ್ ನಿಂದಲೇ ಅರಳುವ ಸುಂದರ ಕಲೆ....
9 ) ಹಳೇ ಗಡಿಯಾರದಲ್ಲೇ ಅರಳುವ ಇವರ ಕಲೆ.....ಅದ್ಬುತ !!!!
10 ) ಎಲೆಕ್ಟ್ರಿಕ್ ವೈರ್ ನಲ್ಲೆ ಅರಳುವ ಇವರ ಕಲೆ.........ಅದ್ಬುತ !!!!!!! 



Tuesday, June 29, 2010

ಕೊನಾರ್ಕ್ ಸೂರ್ಯ ದೇವಸ್ಥಾನ....ಒರಿಸ್ಸಾ ಪ್ರವಾಸ ಭಾಗ ೨


ಕೊನಾರ್ಕ್ ಸೂರ್ಯ ದೇವಸ್ಥಾನ....


ಸೋಮವಾರ ನಾವು ಪುರಿ ತಲುಪಿದ್ದು ಮಧ್ಯಾನ ೧ ಘಂಟೆ ಆಗಿತ್ತು... ನಾವು ಮೊದಲೇ ಮಾಡಿದ್ದ ಪ್ಲಾನ್ ಎಲ್ಲ ಹಾಳಾಗಿ ಹೋಗಿತ್ತು,,, ಸೊ ಹೇಗೂ ಲೇಟ್ ಆಗಿದೆ,,, ಮೊದಲು ಕೊನಾರ್ಕ್ ಸೂರ್ಯ ದೇವಸ್ಥಾನ ಮುಗಿಸಿಕೊಂಡು,,, ಸಂಜೆ ಟೈಮ್ ಇದ್ದರೆ ಪುರಿ ದೇವಸ್ತಾನಕ್ಕೆ ಹೋಗೋಣ ಅಂತ ಮಾತಾಡಿಕೊಂಡು ಆಯಿತು..... ಬೇಗ ಬೇಗ,, ನಮಗಾಗಿ ಬುಕ್ ಮಾಡಿದ್ದ,, ಹೋಟೆಲ್ ಹಾಲಿಡೇ ಇನ್ ರೆಸಾರ್ಟ್ ನಲ್ಲಿ ಫ್ರೆಶ್ ಅಪ್ ಆಗಿ,,,, ಊಟ ಮಾಡಿಕೊಂಡು,,, ಕೊನಾರ್ಕ್ ದೇವಸ್ಥಾನಕ್ಕೆ ಹೊರಟೆವು,,,,

ಕೊನಾರ್ಕ್ ಇದು ಒಂದು historical place .. ಒರಿಸ್ಸಾ ರಾಜ್ಯದ ಆಕರ್ಷಣೀಯ ಸ್ಥಳ.... ಇದು ಪುರಿ ಇಂದ 35 KM ಗಳ ದೂರದಲ್ಲಿ ಇದೆ.... ಇಲ್ಲಿಗೆ ಹೋಗುವುದಕ್ಕೆ ಬಸ್ ಹಾಗು taxi ವ್ಯವಸ್ತೆ ಇದೆ... ಪುರಿ ಇಂದ 45 ನಿಮಿಷಗಳ ಪ್ರಯಾಣ.... ನಾವು ಒಂದು qualis ಮಾಡಿಕೊಂಡು ಹೊರಟೆವು,,,, ದೇವಸ್ಥಾನ ಬಗ್ಗೆ ಅಸ್ತೊಂದ್ ಮಾಹಿತಿ ಇರಲಿಲ್ಲ..... ಆದರು ಇದು ಒಂದು, ಒಳ್ಳೆಯ ಇತಿಹಾಸಿಕ ಸ್ಥಳ ಅಂತ ಗೊತ್ತಿತು,,,

ಕೊನಾರ್ಕ್ ಗೆ 3 :30 ಗೆ ಬಂದು ಸೇರಿದೆವು,,,, ಯಾವುದೇ vechile ಅನ್ನು temple ಹತ್ತಿರಕ್ಕೆ ಬಿಡುವುದಿಲ್ಲ... ಸ್ವಲ್ಪ ದೂರ ನೆಡೆದು ಕೊಂಡು ಹೋಗಬೇಕು,,,, ನಾವು ಇಳಿದ ಕೂಡಲೇ ಅಲ್ಲಿನ guide ಬಂದು ಸುತ್ತುವರೆದರು,,,, ದೇವಸ್ತಾನದ ಬಗ್ಗೆ ಎಲ್ಲ ತಿಳಿಸಿ ಹೇಳಲು,, ೧೫೦ ರೂ ಕೊಡಬೇಕಾಗುತ್ತೆ ಅಂತ ಕೇಳಿ ಹಿಂದೆ ಬಿದ್ದಿದ್ದರು,,, ಸರಿ ಮೊದಲು ನಾವು ಒಪ್ಪಿಕೊಳ್ಳ ಲಿಲ್ಲ.. ಆಮೇಲೆ ಸ್ವಲ್ಪ ಕಮ್ಮಿಗೆ ಅವರೇ ಬಂದು,, ಎಲ್ಲವನ್ನು explain ಮಾಡುತ್ತೇನೆ ಅಂತ ಬಂದರು,,, ಆದರೆ ನನಗೆ ಅಲ್ಲಿನ ಶಿಲ್ಪಗಳ ಹಾಗು ಕೆತ್ತನೆ ಕೆಲಸಗಳನ್ನು ಫೋಟೋ ತೆಗೆಯಬೇಕಾದ್ದರಿಂದ... ಅವರ ಜೊತೆ ಹೋಗದೆ,, ಒಬ್ಬನೇ ಫೋಟೋ ತೆಗೆಯಲು ಹೊರಟೆ,,,,,

ನಿಜವಾಗಲು ಇದು ಒಂದು ಅದ್ಬುತ ಕಲೆಯ ದೇವಸ್ಥಾನ,,, ಆದರೆ ತುಂಬಾ ಶಿಥಿಲ ವಾಗಿ ಹಾಳಾಗಿ ಹೋಗಿದೆ.... ಒಂದು ಪಾರ್ಶ್ವ ಬಿದ್ದು ಹೋಗಿದೆ ಕೂಡ...

ಇದರ ಇತಿಹಾಸ ಕೆಣಕಿದಾಗ ಸಿಕ್ಕ ಮಾಹಿತಿ....

ಕೊನಾರ್ಕ್ ಗೆ ಈ ಹೆಸರು ಬಂದಿದು ಕೋನ (corner ) + ಅರ್ಕ (ಸೂರ್ಯ) . ಇದಕ್ಕೆ ಇನ್ನೊಂದು ಹೆಸರು ಕೂನಾದಿತ್ಯ ಅಂತ.... ಇದು ಪುರಿ ಯಾ north eastern ಕಾರ್ನೆರ್ ನಲ್ಲಿ ನೆಲೆಸಿದೆ . ಇದಕ್ಕೆ ಮತ್ತೊಂದು ಹೆಸರು ಅರ್ಕಕ್ಷೇತ್ರ ಇದನ್ನ ಕಟ್ಟಿದು,,1278 CE ನಲ್ಲಿ ಅಂತೆ...


"ಗಂಗಾ Dynasty ನಲ್ಲಿ ಈ ದೇವಸ್ಥಾನವನ್ನು ಕಟ್ಟುವುದಕ್ಕೆ ನರಸಿಂಹ ದೇವ -೧ ರಾಜ ಅದೇಶಿಸುತ್ತನಂತೆ.....ಈ ದೇವಸ್ಥಾನವನ್ನು ಆಗಿನ ಅವನ ಕಾಲದ ರಾಜಕೀಯ ಪ್ರತಿಷ್ಟೆ ಯಾ ಸಂಕೇತವಾಗಿ,,, ಕಟ್ಟಿಸಲು ಯೋಚಿಸಿದ್ದರಂತೆ,,, ಅದಕ್ಕಾಗಿ. 12000 ಜನ ನುರಿತ ಶಿಲ್ಪ ಕಲಾವಿದರನ್ನು ಸೇರಿಸಿ ೧೨ ವರುಷಗಳ ಸತತವಾಗಿ ಶ್ರಮ ಪಟ್ಟರಂತೆ ಇದನ್ನ ಕಟ್ಟಲು.... ಆದರು ಇದನ್ನು ಅಂದುಕೊಂಡ ಸಮಯಕ್ಕಿಂತ ಮುಂಚೆ ಕಟ್ಟಲಾಗಲಿಲ್ಲ ... ಇದಕ್ಕೆ ಕಾರಣ,, ಇದನ್ನು ಕಟ್ಟಬೇಕಾದರೆ ಒಂದು ವಾಸ್ತು ದೋಷ ಎದುರಾಯಿತಂತೆ..... ಇದರ ನಿರ್ವಹಣೆ ಹೊಹಿಸಿಕೊಂಡಿದ್ದ..ಬಿಸು ಮಹಾರಾಣ .. ಅವರಿಗೂ ಇದಕ್ಕೆ ಉತ್ತರ ಕಂಡು ಹಿಡಿಯುವುದಕ್ಕೆ ಸಾದ್ಯವಗಲಿಲ್ಲವಂತೆ... ಆಗ,, ಅವರ ಮಗ ಧರ್ಮಪಾದ ಇದಕ್ಕೆ ಉಪಾಯವನ್ನು ಕಂಡು ಹಿಡಿದು,, ಕೊನೆಯ ಕಲ್ಲನ್ನು ತಾನೇ ಗೋಪುರದ ಮೇಲೆ ಇಟ್ತನತ್ತೆ ,, ಆಮೇಲೆ ಧರ್ಮಪಾದನ ಶವ,,, ದೇವಸ್ಥಾನ ದ ಹತ್ತಿರ ಇರುವ ಸಮುದ್ರದಲ್ಲಿ ತೇಲುತ್ತಿತ್ತಂತೆ... ಹೀಗೆ ಅವನ ಹೆಸರು,, ತಮ್ಮ ಸಮುದಾಯದ ರಕ್ಷಣೆಗೋಸ್ಕರ.. ತನ್ನ ಪ್ರಾಣವನ್ನೇ ಕೊಟ್ಟ ಎಂದು ಹೆಸರುವಾಸಿ ಆಯಿತು ಅಂತ ಪ್ರತೀತಿ.....ಆದರೆ ಇಗಲೂ..ಇದರ ವಾಸ್ತು ಸರಿ ಇಲ್ಲದೆ ಇರುವ ಕಾರಣ,, ದೇವಸ್ಥಾನ ಇಷ್ಟು ಅವನತಿ ಹೊಂದಿದೆ ಅಂತ ಹೇಳುತ್ತಾರೆ , ಇಲ್ಲಿನ ಸ್ಥಳೀಯರು,,, "

ಈ ಇಡೀ ದೇವಸ್ಥಾನ ಒಂದು ರಥದ ಮೇಲೆ ನಿಂತಿದೆ.. ಎಲ್ಲ ಕಡೆಗಳಲ್ಲೂ 24 ಚಕ್ರಗಳಿವೆ....ಕೆತ್ತನೆಯ ಕೆಲಸ ತುಂಬಾ ಚೆನ್ನಾಗಿ ಇದ್ದು,,, ಮನಮೋಹಕವಾಗಿ ಇದೆ..... (ಆದರೆ ತುಂಬಾ ಹಾಳಾಗಿ ಹೋಗಿದೆ....ಕೆಲವೊಂದು ಕಡೆ,,, ಏನು ಕಾಣಿಸುವುದಿಲ್ಲಾ. ಕಾಲದ ಮಹಿಮೆಯೋ,, ಅಥವಾ ಇಂಥ ಒಂದು ಅದ್ಬುತ ಕಲೆಯನ್ನು ಉಳಿಸಿಕೊಲ್ಲದೆ ಇರುವ ನಮ್ಮ ಅಸಹಾಯಕತೆಯೋ ಗೊತ್ತಿಲ್ಲ..) ಒಟ್ಟು ೭ ಅಶ್ವಗಳು ಈ ರಥವನ್ನು ಎಳೆಯುತ್ತಿದ್ದರೆ.. ಎರಡು ಸಿಂಹಗಳು ಆನೆ ಯನ್ನು ತುಳಿದು ಮುನ್ನುಗ್ಗುತ್ತಿರುವ ಹಾಗೆ ಕೆತ್ತಲಾಗಿದೆ......

ಒಟ್ಟಿನಲ್ಲಿ ಇದೊಂದು ಒಳ್ಳೆಯ ಕೆತ್ತನೆಯ,,, ಕಲಾ ದೇವಸ್ಥಾನ .... ಆದರೆ ಗರ್ಭಗುಡಿಯ ಮುಖ್ಯ ಗೋಪುರ ಬಿದ್ದು ಹೋಗಿ... ದೇವಸ್ಥಾನವೇ ಇಲ್ಲದೆ,, ಬರಿ ಹೊರಗಿನಿಂದ ನೋಡಬಹುದಾದ ಒಂದು ಆಕರ್ಷಣೀಯ ಸ್ಥಳವಾಗಿದೆ...

ಇಲ್ಲಿನ guide ಹೇಳುತ್ತಿದ್ದ ಇನ್ನೊಂದು ಮಹತ್ವದ ವಿಚಾರ ವೆಂದರೆ... ಈ ಗೋಪುರದ ಮೇಲೆ ಇರುವುದು,,, ಸಾಮಾನ್ಯ ಕಲ್ಲು ಅಲ್ಲ... ಇದು magnetic ಕಲ್ಲು ಗಳು ಅಂತ,,, ಇದು ಇಡೀ ಗೋಪುರವನ್ನಿ ಹಿಡಿದು ಇಟ್ಟಿದೆ ಅಂತೆ....ಇದು ಒಂದು ಕಲ್ಲಿನಿಂದಲೇ ಮುಖ್ಯ ಗೋಪುರ ಬಿದ್ದು ಹೋಗಿರುವುದ್ ಅಂತ ಹೇಳ್ತಾ ಇದ್ದ ,, ಹಾಗೆ ಇಂಥಹ magnet 12 ನೆ ಶತಮಾನದಲ್ಲಿ ನಮ್ಮ ಹತ್ತಿರ ಇತ್ತು ಅಂದರೆ,,, 14 ನೆ ಶತಮಾನದಲ್ಲಿ Europe ನಲ್ಲಿ magnet ಹೇಗೆ ಕಂಡುಹಿಡಿದರು ಅಂತ..... ???????


ಈ ದೇವಸ್ಥಾನ ಕಟ್ಟಲು ಕಾರಣ,,,

The temple was dedicated to the Sun-God (Arka), popularly called Biranchi-Narayan, and the area in which it is located was known as Arka-Kshetra as well as padma-kshetra. According to folklore, Samba, son of Lord Krishna, was struck with leprosy due a curse of Lord Krishna himself. Samba for 12 years underwent harsh atonement at Mitravana, near the convergence area of Chandrabhaga River with the sea at Konark. He was finally successful in pleasing the SUN god (Surya), the healer of all skin diseases, and was cured of his ailment.

In gratitude, he decided to erect a temple in the honor of Surya. The day following his cure, while Samba was bathing in the Chandrabhaga, he discovered an image of the god, which had been fashioned out of Surya's body by Viswakarma. Samba installed this image in a temple he built in Mitravana, where he propitiated the god. Since then, throughout the ages, this place has been regarded as sacred.

...

ಅಲ್ಲಿನ ಕೆಲವು ಫೋಟೋ ಗಳನ್ನ ಇಲ್ಲಿ ಹಾಕಿದ್ದೇನೆ,, ಹಾಗೆ ಇದರ ಎಲ್ಲ ಫೋಟೋಗಳನ್ನು ನನ್ನ ಪಿಕಾಸ ಆಲ್ಬಮ್ ನಲ್ಲಿ ಹಾಕಿದ್ದೇನೆ,, ನೋಡಿ...

 
 








ಮುಂದುವರೆಯುವುದು.......

ಒರಿಸ್ಸಾ ಪ್ರವಾಸದ ಭಾಗ ೧ ಅನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ..... http://guruprsad.blogspot.com/2010/06/blog-post_25.html

ಪಿಕಾಸ ಫೋಟೋಗಳು
http://picasaweb.google.co.in/guru.prasadkr/OrissaTripDay2PhotosKonark#

Sunday, October 11, 2009

ಅದುನಿಕ ಯುಗದ ಬೆಂಕಿ ಕಡ್ಡಿ ಶಿಲ್ಪಿ...Michael Arndt !!!


ಈ ಮೇಲಿನ ಚಿತ್ರ ನೋಡಿ...maclaren f1  ಕಾರು.... ಎಷ್ಟು  ಚೆನ್ನಾಗಿ ಇದೆ ಅಲ್ವ
"ಏನ್ ಇದು ,, ಯಾವುದೊ ಒಂದು ಕಾರ್ ,,ಮರದಲ್ಲಿ neat ಆಗಿ ಕೆತ್ತಿದ್ದಾರೆ ಅಸ್ಟೇ...ಇದನ್ನ ನೋಡಿ ಅಂತ ಹೇಳ್ತಾ ಇದ್ದನಾಲ್ಲ " ಅಂತ ಅನ್ಕೊತಾ ಇದ್ದೀರಾ....ಅಲ್ಲೇ ಇರೋದು ಇದರ ಹಿಂದಿನ ರೋಚಕ ಕತೆ....ನೀವು ಕೇಳಿದ್ರೆ ನಿಜವಾಗ್ಲೂ ಸುಸ್ತು ಅಗಿಬಿಡ್ತಿರ.....ಹೌದು ಇದನ್ನ ಮಾಡಿರುವುದು ಮರದಲ್ಲಿ ಅಲ್ಲ . ಬೆಂಕಿ ಕಡ್ಡಿ ಯಲ್ಲಿ.....!!!!!  ಬೆಂಕಿ ಕಡ್ಡಿನಲ್ಲಿ ಈ ಥರ ಕಾರ್ ಮಾಡೋದ.....? ಅಂತ ನೀವು ಕೂಡ ಅನ್ಕೊತಾ ಇದ್ದೀರಾ ಅಲ್ವ... ಹೌದು ರೀ...
"Michael Arndt" ಎಂಬ ಕಲೆಗಾರ....956,000 matchsticks , (ಬೆಂಕಿ ಕಡ್ಡಿಗಳನ್ನ) ಉಪಯೋಗಿಸಿ. 1686 tubes of glue (ಫೆವಿಕಾಲ್ )  ನ  ಉಪಯೋಗಿಸಿ ಬರೋಬ್ಬರಿ 6 ವರ್ಷ ತಗೊಂಡು ಇದನ್ನ ಮುಗಿಸಿದ್ದಾನಂತೆ.......!!!!!
ನಿಜವಾಗ್ಲೂ ತಾಳ್ಮೆ ಅಂದ್ರೆ ಇದು ಅಲ್ವ....ಏನೋ ಒಂದು ವಸ್ತುವನ್ನ ಕಲೆಯನ್ನ ಮಾಡಬೇಕು ಅಂತ ಮನಸು ಮಾಡಿದರೆ ಅಬ್ಬಬ್ಬ ಅಂದ್ರು ಒಂದು 6 ತಿಂಗಳು ಅಥವಾ ಒಂದು ವರ್ಷ ತಗೊಬೋದು... ಆದರೆ ಈ ಬೆಂಕಿ ಕಡ್ಡಿಯ ಶಿಲ್ಪಿ...maclaren f1 ಕಾರು ಹೇಗೆ ಇದೆಯೋ ಅದೇ ರೀತಿ..matchstick ನಲ್ಲಿ ಮಾಡಲೇ ಬೇಕು ಅಂತ ಪಣತೊಟ್ಟು  6 ವರ್ಷ ಕಷ್ಟ ಪಟ್ಟು ಮಾಡಿಯೇ ತೀರಿಸಿದ್ದಾನೆ ನೋಡಿ... ಛಲ ಅಂದ್ರೆ ಇದು ಅಲ್ವ.... "ನಿಜವಾಗ್ಲೂ Michael Arndt ಛಲ. ತಾಳ್ಮೆ, ಶ್ರದ್ದೆ, ಹಾಗು ಕಲೆಗೆ ,, ನನ್ನ ಅನಂತ ಅನಂತ ನಮನಗಳು......"
ಇವನು McLaren 4/14 F1 car, ಹೇಗೆ ಇದೆಯೋ ಅದೇ ರೀತಿ ಇದನ್ನ ಮಾಡಿದ್ದರಂತೆ, ಇದಕ್ಕೆ ತಗುಲಿರುವ ಕರ್ಚು...6000 Euros ,
ಇದರ ಇನ್ನೊದು ವಿಶೇಷ ಏನು ಅಂದ್ರೆ, ಇದನ್ನು 45  ಪಾರ್ಟ್ಸ್ ಮಾಡಿ ಎಲ್ಲೆಲ್ಲಿ ಬೆಂಕಿಕಡ್ಡಿಯ ಪ್ರದರ್ಶನ ಇರುತ್ತೋ ಅಲ್ಲೆಲ್ಲ ತೆಗೆದುಕೊಂಡು ಹೋಗಿ ಪ್ರದರ್ಶನ ಮಾಡ್ತಾ ಇದ್ದಾರಂತೆ....
ಅಬ್ಬ ಎಂತೆಂಥ ಮಹಾನುಭಾವರಿರುತ್ತಾರೆ ... ಇವನ ಕೆಲಸ ನೋಡ್ತಾ ಇರಬೇಕಾದ್ರೆ ನನಗೆ ನಮ್ಮ ಶಿಲ್ಪಿಗಳ ನೆನಪಾಯಿತು.. ಅವರು ಅಸ್ಟೇ .. ಒಂದು ಕಲ್ಲನ್ನು ಕೆತ್ತಿ ಶಿಲ್ಪ ಮಾಡಬೇಕಾದರೆ ವರ್ಷನು ಗಟ್ಟಲೆ ಕಷ್ಟ ಪಡ್ತಾ ಇದ್ರೂ,,, ಇವನು ಈಗ ಅದುನಿಕಯುಗದ ಬೆಂಕಿ ಕಡ್ಡಿ ಶಿಲ್ಪಿ ಅಂದರೆ ತಪ್ಪೇನು ಇಲ್ಲ ಅಲ್ವ....!!!!
Once again hats of you Mr Michael Arndt .......

ನನ್ನ ಹಿಂದಿನ post ಗಳಲ್ಲಿ ಬೆಂಕಿ ಕಡ್ಡಿಯ ಬೇರೆ ಬೇರೆ ಕಲೆ ಬಗ್ಗೆ ಉಲ್ಲೇಕಿಸಿದ್ದೇನೆ, ನೋಡಲು ಇಲ್ಲಿ ಕ್ಲಿಕ್ ಮಾಡಿ