Showing posts with label hand paintings.. Show all posts
Showing posts with label hand paintings.. Show all posts

Saturday, February 27, 2010

ಹಕ್ಕಿಯ ಪುಕ್ಕದಲ್ಲೇ ಅರಳುವ ಅದ್ಬುತ ಕಲೆ.... Julie Thompson

"ಕಲೆಗೆ ಯಾವ ವಸ್ತುವಾದರೆನೈಯ್ಯ ....ಎಲ್ಲಿದ್ದರು ಹೇಗಿದ್ದರು,,, ಕಲಾವಿದನ ಕೈ ನಲ್ಲಿ ಸಿಕ್ಕರೆ.. ಅದೊಂದು ಅಪರೂಪದ ಸೌಂದರ್ಯದ ವಸ್ತು ಆಗುತ್ತದೆ....."
ನಿಮಗೆ ನೆನಪಿರಬೇಕು ಅಲ್ವ... ನಾವು ಚಿಕ್ಕವರಿದ್ದಾಗ, ಯಾವುದಾದರು ಹಕ್ಕಿಯ ಪುಕ್ಕ ಸಿಕ್ಕರೆ ಎಷ್ಟು ಕುಷಿ ಇಂದ ಅದರ ಜೊತೆ ಆಟ ಆಡ್ತ ಇದ್ವಿ.. ಅದರ ನವಿರಾದ ಸ್ಪಂಜಿನಂಥ ಪುಕ್ಕದಿಂದ,, ಯಾರಾದರು ಪಕ್ಕದಲ್ಲಿ ಇರುವವರ ಕಿವಿಗೆ ತಾಗಿಸಿ.. ಹುಳ ಬಿಟ್ಟ ಹಾಗೆ ಮಾಡಿ ತಮಾಷೆ ನೋಡ್ತಾ ಇದ್ವಿ... ಇನ್ನು ಯಾವುದಾದರು ಒಳ್ಳೆಯಾ ಬೆಳ್ಳಗಿನ ಪುಕ್ಕ ಸಿಕ್ಕರೆ... ಎಸ್ಟೋ ದಿನ ಜೋಪಾನ ಮಾಡ್ಕೊಂಡ್ ಪುಸ್ತಕದ ಮದ್ಯ ಇಟ್ಟುಕೊಂಡು ಆನಂದ ಪಡ್ತಾ ಇದ್ವಿ. ಅಲ್ವ....
ನವಿಲು ಗರಿಗೆ , ಅದರ ಪುಕ್ಕಕ್ಕೆ, ಅದರದೇ ಅದ ಸೌಂದರ್ಯ ಇರುತ್ತದೆ.. ಆದರೆ ಬೇರೆ ಪಕ್ಷಿಗಳ ಪುಕ್ಕ ಸಿಂಪಲ್ ಆಗಿ ನೀಟ್ ಆಗಿ plain ಆಗಿ ಇರುತ್ತವೆ .. ಇದೆ ಸಿಂಪಲ್ ಆಗಿ plain ಆಗಿ ಇರುವ ಹಕ್ಕಿಯ ಪುಕ್ಕ Julie Thompson ಎಂಬುವರ ಕೈಗೆ ಸಿಕ್ಕಿ ಹೇಗೇ ಅರಳಿದೆ ನೀವೇ ನೋಡಿ....
ಎಂತೆಂತ ಕಲಾವಿದರು ಇರುತ್ತಾರೆ ... ಎಷ್ಟು ಸಣ್ಣ ವಸ್ತು ಸಿಕ್ಕರೂ ಬಿಡದೆ ಅದರಲ್ಲೇ ಏನೋ ಮಾಡಿ ತೋರಿಸ್ತಾ ಇರ್ತಾರೆ.....ವೌಹ್
ಬರಿ (feather ) ಪುಕ್ಕದಲ್ಲಿ ಬಿಡಿಸಿರುವ ಚಿತ್ರಗಳಿಗೆ ಏನು ಹೇಳಿದರು ಸಾಲದು....
ಇವರು feathers ನಲ್ಲಿ ಪೇಂಟಿಂಗ್ ಮಾಡೋದನ್ನ ಶುರು ಮಾಡಿದ್ದು 1990 ನಲ್ಲಿ ಅಂತೆ,  ಮೊದಮೊದಲು ಅವರ ಅಮ್ಮನ ಮನೆಯಲ್ಲಿ ಇದ್ದ ನವಿಲಿನ ಗರಿಗಳಿಂದ ಪೇಯಿಂಟ್ ಚಿತ್ರ ಬಿಡಿಸುವುದಕ್ಕೆ ಟ್ರೈ ಮಾಡ್ತಾ ಇದ್ದರಂತೆ.. ಆಮೇಲೆ ನಿದಾನಕ್ಕೆ ಕೆಲವೊಂದು ಸಣ್ಣ ಸಣ್ಣ ಸಬ್ಜೆಕ್ಟ್ ವಸ್ತುಗಳನ್ನು  ನೋಡಿಕೊಂಡು ಅದನ್ನು ಈ feather ಮೇಲೆ ಬಿಡಿಸ್ತ ಇದ್ದರಂತೆ,, ಆಮೇಲೆ ಇದು ಇವರಿಗೆ ಚೆನ್ನಾಗಿ ಕರಗತ ವಾಗಿ,, pictographs , still lifes ಹೀಗೆ ಬೇರೆ ಬೇರೆ ತರ broad range ಸಬ್ಜೆಕ್ಟ್ ನ focus ಮಾಡಿಕೊಂಡು ಬಿಡಿಸಲಿಕ್ಕೆ ಶುರು ಮಾಡಿದರಂತೆ... ಇವರ ವೆಬ್ ಸೈಟ್ ನಲ್ಲಿ ಇದರ ಬಗ್ಗೆ ಇನ್ನು ಹೆಚ್ಚು ವಿವರಿಸಿದ್ದಾರೆ....

ಇವರ ಬಗ್ಗೆ ಹಾಗು ಇವರ ಕಲೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲ್ಲಿ ಬೇಟಿ ನೀಡಿ http://www.featherlady.net/index.html
ಇದರಲ್ಲಿ ಇವರ ಆರ್ಟ್ ಬಗ್ಗೆ , ಇವರ studio ಬಗ್ಗೆ,, ಹಾಗು ಇವರ ಅನುಭವದ ಬಗ್ಗೆ ಹೇಳಿಕೊಂಡ್  ಇದ್ದಾರೆ ..
ಏನೇ ಇರಲಿ,, hats of to you julie ...
ಇವರ ಕಲೆ ನೋಡಿ ನಿಮ್ಮ ಅನಿಸಿಕೆ ತಿಳಿಸಿ.....



Sunday, April 19, 2009

ಕೈ ನಲ್ಲೇ ಅರಳಿದ ಕಲೆ........(ಕೈ ಕ್ರಿಯೇಟಿವಿಟಿ.....)

ಸ್ನೇಹಿತರೇ,


ನಾವೆಲ್ಲ ಕೈ ನಿಂದ ನೆರಳಿನಲ್ಲಿ ತರಹ ತರಹದ ಚಿತ್ತಾರಗಳನ್ನು ಮಾಡುವುದನ್ನು ನೋಡಿರುತ್ತೇವೆ ಅಲ್ವ. infact ನಾವು ಚಿಕ್ಕವರಿರಬೇಕಾದ್ರೆ ಮನೆನಲ್ಲಿ ವಿದ್ಯುತ್ ಹೋದಾಗ ಮೇಣದ ಬತ್ತಿ (Candel light) ಹಚ್ಚಿರಬೇಕದ್ರೆ ನಮ್ಮ ಕೈ ನಲ್ಲಿ ಬಾತು ಕೋಳಿ, ಜಿರಾಫೆ , ಕೋತಿ , ಈ ಥರ ಎಲ್ಲ ಮಾಡಿ ನೆರಳಿನಲ್ಲಿ ಆಟ ಆಡ್ತ ಇದ್ದಿದ್ದು ನೆನಪಿದೆಯೆ? ಹೌದು ಅದು ಒಂದು ಕಲೆ,,ಅದಕ್ಕೆ ಏನೋ ಹೆಸರಿದೆ, ನೆನಪು ಬರ್ತಾ ಇಲ್ಲ.... ಈ ಥರ ಕಲೆ ನಲ್ಲೂ ಚೆನ್ನಾಗಿ ಪ್ರವಿನ್ಯತೆ ಪಡೆದು ಮ್ಯಾಜಿಕ್ ಶೋ ನಲ್ಲಿ ಕೂಡ ತೋರಿಸ್ತಾ ಇದ್ದರು ..... ಹಾಗೆ...ಇಲ್ಲಿ ಕೆಲವು ಕೈ ನಿಂದ ಮೂಡಿದ ವಿಸ್ಮಯಗಳಿವೆ ನೋಡಿ... ಆದರೆ ಇದು ನೆರಳಲ್ಲಿ ಆಡಿರುವ ಆಟ ಅಲ್ಲ , ಕೈ ಮೇಲೆ ಪೇಯಿಂಟ್ ಮಾಡಿ. ಎಷ್ಟು ಚೆನ್ನಾಗಿ ಪ್ರಾಣಿ ಪಕ್ಷಿ ಗಳನ್ನೂ ನಮ್ಮ ಹಸ್ತದ , ಬೆರಳುಗಳಲ್ಲೇ ಮೂಡಿಸಿದ್ದಾರೆ ನೋಡಿ....


..


....


...... ಕೈ ನಿಂದ ಎಸ್ಟೋ ಕಲೆಗಳು ಕಲಾಕೃತಿ ಗಳು, ಚಿತ್ರಗಳು, ಪೇಯಿಂಟ್ ಗಳು,,,,ಎಲ್ಲ ಮಾಡ್ಬೋದು,,, ಅರೆ ಇಲ್ಲಿ ನೋಡಿ.. ಬರಿ ಕೈ ಗೆ ಕಲೆಯ ಬಣ್ಣ ಹಚ್ಚಿದ್ದಾರೆ.... ಏನ್ ಕಲೆ ಅಲ್ವ.....


ಇತರ ಮಾಡ್ಬೋದು ಅಂಥ imagin ಮಾಡ್ಕೊಳಕ್ಕು ಕಷ್ಟ ಆಗುತ್ತೆ ಅಲ್ವ...ಏನ್ ಕ್ರಿಯೇಟಿವಿಟಿ.......





ಇದಂತೂ ಅದ್ಬುತ......

ಇದು ಹೀಗೆ ಇದೆ?



ಹಾ ನಿಜವಾಗ್ಲೂ ಗ್ರೇಟ್ ....

ಸೂಪರ್ ಅಲ್ವ.. imagin ಮಾಡ್ಕೊಲೋಕೆ ಕಷ್ಟ..... ಅಂತೊದ್ರಲ್ಲಿ....

ಎಷ್ಟು cute ನಾಯಿ ಮರಿ ತರಾನೆ ಇದೆ....
ಬಿಡಿಸಿರುವ ಚಿತ್ರಕ್ಕೆ ಕೊಡಬೇಕು.....ವಾಹ ......



ಆಗದು ಎಂದು ...., ಹಾಂ ...ಕೈಲಿ ಆಗದು ಎಂದು ..... ಕೈ ಬಿಚ್ಚಿ ಕುಳಿತರೆ ಅಲ್ಲೇ ಆಗುವದು ಕಲೆ ಯೊಂದು.....
ಮನಸೊಂದಿದ್ದರೆ ಮಾರ್ಗ ಎಂಬಂತೆ ಕೈ ಅಗಲಿ ಕಲಾಗಲಿ.. ಅಲ್ಲೇ ಅರಳುವುದು ಕಲೆಯೊಂದು.....

(ನಿರೀಕ್ಷಿಸಿ....ಅತಿ ಶೀಗ್ರದಲ್ಲೇ... ಕಾಲಲ್ಲಿ ಅರಳಿದ ಕಲಾಕೃತಿಗಳು..... ನಾನೆ ಮಾಡಬೇಕು ಅಂಥ ಅನ್ಕೊಂಡ್ ಇದೇನೇ... ಆದ್ರೆ ಯಾರ ಕಾಲ್ ಹಿಡಿಬೇಕು ಅಂಥ ಗೊತ್ತಾಗ್ತಾ ಇಲ್ಲ...... :-) )