Thursday, June 11, 2009

ಪುಟ್ಟ ಪುಟ್ಟ ಪಾಪುವಿನ ತಾಯಿ - Camille Allen !!!!


ಎಷ್ಟು ಪುಟ್ಟ ಮಗು ಅಲ್ವ....ಬರಿ ಅಂಗೈ ನಲ್ಲಿ ಮಲಗಿಸಿಕೊಳ್ಳ ಬಹುದು ....ಎಲ್ಲಿ ಹುಟ್ಟಿರೋದು ಇ ಮಗು ಅಂಥ ಯೋಚಿಸ್ತಾ ಇದ್ದೀರಾ ? ಇದು ಅನಿಮೇಷನ್ ನ ? ಅಥವಾ ಫೋಟೋ ಕೈ ಚಳಕನ........... ಏನ್ ಇರಬೋದು.....
ಮುಂದೆ ಓದಿ........


Camille Allen ಇವರು ಸದ್ಯ ಇರುವುದು Powell River, in British Columbia, Canada. ಇವರಿಗೆ ಮದುವೆ ಆಗಿದೆ... ಆದರೆ ಮಕ್ಕಳು ಇಲ್ಲ... ಇನ್ನು 28 ವರ್ಷ ವಯಸು ... ಆದರೆ ಇವರಿಗೆ ಮಕ್ಕಳ ಮೇಲೆ ಇರುವ ಪ್ರೀತಿ ಮಾತ್ರ ಅಸ್ಟಿಸ್ತಲ್ಲ ....ನೀವು ನೋಡಿರಬಹುದು,, ಚಿಕ್ಕ ಚಿಕ್ಕ baby dolls ಅನ್ನು ಮೇಲ್ ನಲ್ಲಿ,,, ಇದು ಯಾವ ಥರ ಅನಿಮೇಷನ್ ಅಥವ ಫೋಟೋಗ್ರಫಿ ಅಂತ ಯೋಚಿಸಿರಬೇಕಲ್ವ? ಹೌದು,, ಇದು ಅನಿಮೇಷನ್ ಅಲ್ಲ, ಫೋಟೋಗ್ರಫಿ ಕೂಡ ಅಲ್ಲ... ಇದನ್ನು ಮಾಡಿರುವುದು Camille Allen ಅನ್ನುವ ಅದ್ಬುತ ಆರ್ಟಿಸ್ಟ್.ಈ ರೀತಿ ಮಾಡುವುದನ್ನು ಇವರ ಗಂಡನ ತಾಯಿ ಇಂದ ಕಲಿತರಂತೆ..polymer clay ಇಂದ ರಿಯಲ್ ಪಾಪುವಿನ ದೊಡ್ಡದಾದ Sculpt ಮಾಡ್ತಾ ಇದ್ದರಂತೆ... ಹಾಗೆ ಮಾಡುತ್ತ ಇರಬೇಕಾದರೆ ಮಿಕ್ಕಿದ polymer clay ಇಂದ ಪುಟ್ಟ clay into a miniature baby ಮಾಡಿದರಂತೆ ... ಹೀಗೆ ಫಸ್ಟ್ ಟೈಮ್ ಮಾಡಿದ baby ಅವರಿಗೆ ತುಂಬ ಇಷ್ಟ ಆಗಿ.. ಇದರಲ್ಲೇ ಇನ್ನು ಅನೇಕ ಈ ರೀತಿಯ ಪುಟ್ಟ ಪುಟ್ಟ ಪಾಪು ವಿನ Sculpt ಮಾಡುತ್ತಾ ಅದನ್ನು ಸೇಲ್ ಮಾಡ್ತಾ ಇದ್ದರೆ... ಈ ತರಹದ ಎಸ್ಟೋ ಕಲಾಕೃತಿಗಳು ಅವಾರ್ಡ್ ಕೂಡ ತಗೊಂಡ ಇದೆ......ತುಂಬ ಚಿಕ್ಕ ದಾಗಿ ಇರುವ baby modlings ಮಾಡೋದಕ್ಕೆ ತುಂಬ ಕಷ್ಟ ಅಂತೆ,,,, ಆದರು ತಮ್ಮ ಛಲ ವನ್ನು ಬಿಡದೆ.. ಚಿಕ್ಕ ಮಗು ಹೇಗೆ ಇರುತ್ತೋ ಅದೇ ರೀತಿ,, ಒಂದು ಚಿಕ್ಕ ಸುಕ್ಕು, ಕೈ ನ ಉಗುರು ಕೂಡ ಬಿಡದಂತೆ ಮಾಡುವುದರಲ್ಲಿ ಪಳಗಿದ್ದಾರೆ......ಎಷ್ಟು realistic ಆಗಿ ಇದೆ ಇವರ ಪುಟ್ಟ ಪುಟ್ಟ baby Sculpt ಅಂದ್ರೆ , ನೀವೇ ನೋಡಿ ಹೇಳಿ.... ಇವರ ಒಂದೊಂದು ಕಲಾಕೃತಿಗಳನ್ನು ಹಾಗು ಅದನ್ನು ಮಾಡಿರುವ ರೀತಿಯನ್ನು ಅವರ ವೆಬ್ಸೈಟ್ ನಲ್ಲಿ ಹೇಳಿಕೊಂಡಿದ್ದಾರೆ....ಕೆಳಗಿನ ಫೋಟೋ ನೋಡಿ ಇಷ್ಟ ಆದರೆ ಇವರ ವೆಬ್ ಸೈಟ್ ಗೆ ಒಮ್ಮೆ ಬೇಟಿ ಕೊಡಿ....http://camilleallen.com/


ಗುರು :-)

23 comments:

 1. ಗುರು


  ಎಷ್ಟು ಚಂದದ ಮುದ್ದಾದ ಮಗು...!!

  ಒಮ್ಮೆ ಮುದ್ದಾಡಿ ಬಿಡೋಣ ಅನಿಸ್ತದೆ...
  ಇವೆಲ್ಲ ಆ ತಾಯಿಯ ಮಕ್ಕಳು (ಸ್ರಷ್ಟಿ) ತಾನೆ...

  ಮಕ್ಕಳಿಲ್ಲ ಅನ್ನುವ ಆತಾಯಿಗೆ ...
  ಅವಳ ಕ್ರಿಯೇಟಿವಿಟಿಗೆ...
  ನನ್ನ ವಂದನೆಗಳು...

  ನಮಗೆಲ್ಲ ಪ್ರತಿ ಬಾರಿ ಹೊಸ ವಿಸ್ಮಯ ತೋರಿಸುವ
  ನಿಮಗೂ ಅಭಿನಂದನೆಗಳು...

  ReplyDelete
 2. ಭಲೆ ಮುದ್ದಾದ ಮಕ್ಕಳು. ೨-೩ ಇಂಚುಗಳಲ್ಲಿ ಇಷ್ಟೆಲ್ಲಾ ಡೀಟೈಲಾಗಿ ಗೊಂಬೆ(ಗೊಂಬೆ ಎನ್ನಲು ಮನಸ್ಸಾಗುತ್ತಿಲ್ಲ!) ಮಾಡೋದು ಅಂದ್ರೆ ಅದ್ಭುತನೇ ಸರಿ!
  ಅವರು ಬಹುತೇಕ ಎಲ್ಲಾ ಕ್ರಿಯೇಶನ್ಸ್ one of a kind.. ಹ್ಯಾಟ್ಸ್ ಆಫ್ ಟೂ ಹರ್!!
  ಹಾಗೆಯೇ ಇವರನ್ನು, ಇವರ ಮುದ್ದಾದ ಮಕಳನ್ನು ಪರಿಚಯಿಸಿದ ನಿಮಗೂ ವಂದನೆಗಳು.

  ReplyDelete
 3. ಧನ್ಯವಾದಗಳು ಪ್ರಕಾಶ್ ಸರ್.... :-)

  ReplyDelete
 4. ರೂಪಶ್ರಿ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.....

  ReplyDelete
 5. ಗುರು ಅವರೆ,
  ದೇವರು ಮನುಷ್ಯರನ್ನು ಸೃಷ್ಟಿಸಿದ್ದಂತೆ. ಆದರೆ ಈ ತಾಯಿ ಎಷ್ಟೊಂದು ಮಕ್ಕಳನ್ನು ಸೃಷ್ಟಿಸಿದ್ದಾಳಲ್ವಾ? ಗೊಂಬೆಗಳು ಅಂದರೆ ಅಪಚಾರ. ಎಷ್ಟು ಮುದ್ದಾಗಿವೆ. ಈತರಹದ್ದು ತೋರಿಸುವ ನಿಮಗೆ ಥ್ಯಾಂಕ್ಸ್.

  ReplyDelete
 6. ಅದ್ಭುತವಾಗಿದೆ. ಪುಟ್ಟ ಪುಟ್ಟ ಮಕ್ಕಳ ಗೊ೦ಬೆಗಳನ್ನು ನೋಡಿ ರೋಮಾ೦ಚಿತಗೊ೦ಡೆ. ಅವುಗಳನ್ನು ಗೊ೦ಬೆ ಎನ್ನುವ೦ತಿಲ್ಲ, ಅಷ್ಟು ಮುದ್ದಾಗಿವೆ.

  ReplyDelete
 7. ತುಂಬಾ ಧನ್ಯವಾದಗಳು ಮಲ್ಲಿಕಾರ್ಜುನ್ ಸರ್... ನಿಜವಾದ ಮಗು ಥರಾನೆ ಇದೆ ಅಲ್ವಾ

  ReplyDelete
 8. ಪಾರಂಜಾಪೆ, ಹೌದು...ಎಸ್ಟು ಮುದ್ದಾಗಿ ಇದೆ ಅಲ್ವಾ ಬೊಂಬೆಗಳು ಅಲ್ಲ ಅಲ್ಲ ಮಕ್ಕಳು.....!! ಕೆಮೀಲ್ ಅಲ್ಲೇನ್ ಗೆ ಒಂದು ದೊಡ್ಡ ಸಾಲಾಮ್ ಹೇಳಲೇ ಬೇಕು....

  ReplyDelete
 9. i saw in my mails .. by reading u r blog i came to know that that is clay baby .. really not believable .. hats of to that lady :-) :-)

  ReplyDelete
 10. ಗುರು,

  ನಿಜಕ್ಕೂ ಇವು ಅಧ್ಬುತ ಕಲಾಕೃತಿಗಳೇ....

  ಕೆಲವು ತಿಂಗಳ ಹಿಂದೆ ಇವುಗಳ ಚಿತ್ರದ ಮೇಲ್ ಬಂದಾಗ ನನಗೆ ಫೋಟೋಷಾಪ್ ಕೆಲಸವಿರಬಹುದೆಂದು ಅನ್ನಿಸಿತ್ತು. ಇನ್ನೊಮ್ಮೆ animation ಕೂಡ ಇರಬಹುದು ಅನ್ನಿಸಿತ್ತು. ನಾನು ಕಳೆದ ವರ್ಷ "MAYA" animation ಆರು ತಿಂಗಳು ಹೋಗಿದ್ದೆ. ಅದರ ಸ್ವಲ್ಪ ಜ್ಞಾನದಿಂದಾಗಿ ಇದನ್ನು animation ನಿಂದಲೂ ಮಾಡಬಹುದು ಅಂದುಕೊಂಡೆ...

  ಆದರಿಲ್ಲಿ ಇದು ಸಂಪೂರ್ಣ ಕೈ ಚಳಕವೆಂದು ಗೊತ್ತಾಗಿ ಬೆರಗಾಗಿ ಹೋದೆ....ಪ್ರತಿಯೊಂದು ಮಗುವಿನ ಗೊಂಬೆಯೂ ಅದೆಷ್ಟು ಪರಿಪೂರ್ಣ ಕೆಲಸದಿಂದ ಕೂಡಿದೆ. ಮತ್ತು ಅವುಗಳ ಭಾವನೆಗಳನ್ನು ಹೊರಹೊಮ್ಮಿಸಿರುವುದಂತೂ ನಿಜಕ್ಕೂ ಆಕೆಗೆ hats off ಹೇಳಬೇಕೆನಿಸುತ್ತದೆ..
  ಧನ್ಯವಾದಗಳು.

  ReplyDelete
 11. so beautiful,

  thank you Guru for this wonderful artist's intro !

  i am impressed also with the naming of baby dolls she has created.
  that gives a human touch to these little ones !

  ReplyDelete
 12. ಮುದ್ದು...ಮುದ್ದು...ಮುದ್ದು...ಮಗು.

  ನಲ್ಮೆಯ
  ಚಂದಿನ

  ReplyDelete
 13. ಗುರು...
  ತಡವಾಯಿತು..ನಿಮ್ಮ ಜಗತ್ತಿಗೆ ಭೇಟಿ ಕೊಡುವಾಗ!...ಕೆಲಸದೊತ್ತಡಗಳ ನಡುವೆ ಇತ್ತ ತಲೆಹಾಕಿಲ್ಲ.
  ಪುಟ್ಟ ಪುಟ್ಟ ಪಾಪುವಿನ ತಾಯಿ....ತುಂಬಾ ಚೆನ್ನಾಗಿದೆ. ನಂಗೂ ಈ ಮೇಲ್ ಬಂದಿತ್ತು...ಆದರೆ ನಾನು ಮಗು ಅಂತಾನೆ ಅಂದುಕೊಂಡಿದ್ದೆ..ಇದರ ಹಿಂದಿನ ಕಥೆ ಈವಾಗಲೇ ಗೊತ್ತಾಗಿದ್ದು...ಅಭಿನಂದನೆಗಳು.
  -ಧರಿತ್ರಿ

  ReplyDelete
 14. ಶಿವೂ,
  ನಾನು ಮೊದಲು ಹಾಗೆ ಅಂದುಕೊಂಡ ಇದ್ದೆ.. ಆದರೆ ಇವರ ಬಗ್ಗೆ ತಿಳಿದು,,, ಆಶ್ಚರ್ಯ ಆಯಿತು.....ಎಂಥ ಅದ್ಬುತ ಕಲೆ ಅಲ್ವ... ಇಷ್ಟು ಚಿಕ್ಕ ಅಕ್ರುತಿನಲ್ಲಿ ಎಷ್ಟು ಚೆನ್ನಾಗಿ expression ಮೂಡಿಸಿದ್ದಾರೆ . really gr8 to her Art.
  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
  ಗುರು

  ReplyDelete
 15. ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕೆ ಧನ್ಯವಾದಗಳು... ಹೇಮಶ್ರೀ......

  ReplyDelete
 16. ಧನ್ಯವಾದಗಳು ಚಂದಿನ,,,,ಹೀಗೆ ಬರುತ್ತಿರಿ...
  ಗುರು

  ReplyDelete
 17. ಧರಿತ್ರಿ
  ಪರವಾಗಿಲ್ಲ,,, ಅಂತು ಬಂದಿರಲ್ಲ.....ಗೊತ್ತಿತ್ತು ನಿಮಗೆ ತುಂಬ ಕೆಲಸದ ಒತ್ತಡ ಇದೆ ಅಂತ... ಅಂತದರಲ್ಲೂ ಬಿಡುವು ಮಡಿ ಕೊಂಡ ಬಂತು ಪ್ರತಿಕ್ರಿಯಿಸಿದ್ದಕೆ ಧನ್ಯವಾದಗಳು....
  ನಿದಾನವಾದರು ಬರುತ್ತಿರಿ ...... :-)

  ReplyDelete
 18. ಕಲೆ ಎನ್ನುವುದು ಯಾವುದೇ ಆದರೂ, ಎಲ್ಲರಿಗೂ ಒಲಿಯುವಂತಹುದಲ್ಲ! ಎಷ್ಟು ನೈಜವಾಗಿ ಮಗುವಿನಂತೆ ರೂಪಿಸಿರುವ ಸುಂದರ ಚಿತ್ರಗಳು, ನನಗಂತೂ ನೋಡಿದಷ್ಟೂ ಇನ್ನು ಇನ್ನೂ ನೋಡಬೇಕೆನಿಸುತಿತ್ತು. ಅಷ್ಟು ಸುಂದರ ಮತ್ತು ರೋಚಕವಾಗಿವೆ!! ಇಂತಹ ಕಲೆಯಲ್ಲಿ ತೊಡಗಿಸಿಕೊಂಡಿರುವ ಆ ಮಹಾತಾಯಿಗೆ ನನ್ನ ಹೃತ್ಪೂರ್ವಕ ನಮಃ ಸುಮಾಂಜಲಿ!!!

  ReplyDelete
 19. ಒ೦ದು ಉತ್ತಮ ಕಲೆ ಹಾಗೂ ಕಲಾವಿದರ ಪರಿಚಯಕ್ಕಾಗಿ ಧನ್ಯವಾದಗಳು. ಒ೦ದಕ್ಕಿ೦ತ ಒ೦ದು ಮುದ್ದಾಗಿವೆ!

  ReplyDelete
 20. SSK ರವರೆ ನಿಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು ಹೀಗೆ ಬರುತ್ತಿರಿ....

  ReplyDelete