Thursday, May 9, 2019

ದೇಸಿ ಹಸುಗಳ ಮಹತ್ವ - ಮಾಲೂರಿನ ಗೋಶಾಲೆ ಯಲ್ಲಿ ಒಂದು ದಿನ..




World Earth Day ವರ್ಲ್ಡ್ ಅರ್ಥ್ ಡೇ . ಈ ದಿನದ ಅಂಗವಾಗಿ ಗೋಪಾಲ' (GoPals) ಅಂದರೆ ಗೋವು  ಪಾಲಕರು ಅಥವಾ ಗೋ ಫ್ರೆಂಡ್ಸ್... ಈ ಸಂಸ್ಥೆಯ ವತಿಯಿಂದ ಬೆಂಗಳೂರಿನಿಂದ ಸುಮಾರು 50ರಿಂದ 60 ಕಿಲೋಮೀಟರ್ ದೂರದಲ್ಲಿ ಇರುವ ಮಾಲೂರು ಇದರ ಹತ್ತಿರ ರಾಘವೇಂದ್ರ ಗೋಶಾಲೆಯ ಅಂತ ಇದೆ. ಇಲ್ಲಿಗೆ ಒಂದು ದಿನದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು, ದೇಸಿ ಹಸುಗಳ ಬಗ್ಗೆ ದೇಸಿ ತಳಿಗಳ ಬಗ್ಗೆ ಹಾಗೂ ಪರಿಸರದ ಬಗ್ಗೆ ಆಸಕ್ತಿ ಇರುವ ನೂರಾರು ಕಾರ್ಯಕರ್ತರು ಅದುವ ಪರಿಸರ ಪ್ರೇಮಿಗಳು ಏಪ್ರಿಲ್ 28 ಭಾನುವಾರ ಇಲ್ಲಿ ಸೇರಿದ್ದರು...
  


ಚಿಕ್ಕದಾದ ಬೆಳಗಿನ ಉಪಹಾರವನ್ನು ಸೇವಿಸಿ ಬಂದಿದ್ದ ಎಲ್ಲಾ ಕಾರ್ಯಕರ್ತರು ರಾಘವೇಂದ್ರ ಗೋಶಾಲೆ ಇಲ್ಲಿರುವ ದನದ ಕೊಟ್ಟಿಗೆ ಅಥವಾ ಗೋವುಗಳ ಕೊಟ್ಟಿಗೆಯನ್ನು ತಮ್ಮ ಕೈಲಾದ ಮಟ್ಟಿಗೆ ಸ್ವಚ್ಛ ಮಾಡಿ ಅಲ್ಲಿದ್ದ ಗೋಮೂತ್ರ ಗಂಜಲ ಹಾಗು ಸಗಣಿ ಗಳನ್ನು ಬೇರೆ ಕಡೆ ಸಾಗಿಸುವಲ್ಲಿ ನೆರವಾದರು... ತುಂಬಾ ದೂರದ ಊರುಗಳಿಂದ ಬಂದಿದ್ದ ಆಸಕ್ತಿದಾಯಕ ರೈತರು ಕೂಡ ಇದರಲ್ಲಿ ಪಾಲ್ಗೊಂಡು ಇದರ ಮಹತ್ವವನ್ನು ಇಲ್ಲಿ ಸೇರಿದ್ದ ಜನರಿಗೆ ತಿಳಿಸಿ ಹೇಳಿದರು... ದೇಸಿ ಹಸುಗಳ ಗಂಜಲ ಹಾಗೂ ಸಗಣಿ ಅಂತ ನಾವು ಏನು ಕರೆಯುತ್ತೇವೆ ಅದರ ವಾಸನೆ ಕುಡಿಯುವುದರಿಂದಲೂ ಎಷ್ಟು ರೋಗಗಳಿಂದ ದೂರವಿರಬಹುದು...





ರಾಮಚಂದ್ರಾಪುರ ಮಠ ಇದರ ಅಂಗಸಂಸ್ಥೆಯಾದ ರಾಘವೇಂದ್ರ ಗೋಶಾಲೆಯ ನೂರಾರು ದೇಸಿ ತಳಿಗಳ ಹಸುಗಳನ್ನು ಸಾಕಿ ಸಲಹುತ್ತಿದೆ.. ಗೋವುಗಳ ಕೊಟ್ಟಿಗೆಗಳನ್ನು ಸ್ವಚ್ಛ ಅಭಿಯಾನದ ಮೂಲಕ ನಮ್ಮ ಕೈಲಾದ ಮಟ್ಟಿಗೆ ಸ್ವಚ್ಛ ಮಾಡಿ, ಇಲ್ಲಿರುವ ಗೋವಿನ ತಳಿಗಳ ಬಗ್ಗೆ ಅದರ ಮಹತ್ವ ಹಾಗು ಅದರಿಂದ ಆಗುವ ಉಪಯೋಗದ ಬಗ್ಗೆ ನಮ್ಮ "ಗೂ ಪಾಲ್ಸ್" ತಂಡದ ಸಂದೀಪ್ ಹಾಗೂ ಅವರ ಸ್ನೇಹಿತರು ತುಂಬಾ ಚೆನ್ನಾಗಿ ವಿವರಿಸಿ ಅಲ್ಲಿ ನೆರೆದಿದ್ದ ಮಿತ್ರರಿಗೆ ಇದರ ಮಹತ್ವ ಹಾಗೂ ಉಪಯೋಗಗಳನ್ನು ತಿಳಿಸಿ ಹೇಳಿದರು.... ದೇಸಿ ತಳಿ ಹಸುಗಳ ಹಾಲು 100 ಎಂಎಲ್ ಕುಡಿದರೂ ಸಾಕು... ಅದರಿಂದ ಎಷ್ಟು ಉಪಯೋಗ ಇರುತ್ತದೆ... ಈ ದೇಸಿ ತಳಿಗಳು.. ಹಾಲು ಕೊಡುವುದು ಸ್ವಲ್ಪ ಕಮ್ಮಿ.. ಈ ಹಾಲಿನ ಮಹತ್ವ ತುಂಬಾನೇ ಜಾಸ್ತಿ ಇದೆ... ನಮ್ಮ ರೈತರು ಮಿಶ್ರ ತಳಿಗಳ ಹಸುಗಳನ್ನು ಹೆಚ್ಚು ಹೆಚ್ಚು ಸಾಕುತ್ತ ಅದರಿಂದ ಹೆಚ್ಚಿಗೆ ಬರುವ ಹಾಲನ್ನು ಪಡೆಯುವ ಉದ್ದೇಶದಿಂದ ದೇಸಿ ತಳಿಗಳ ಅಳಿಯುವಿಕೆ ಎಲ್ಲಿ ತಿಳಿದು ಅಥವಾ ತಿಳಿಯದೆಯೋ ಪಾತ್ರವನ್ನು ವಹಿಸುತ್ತಿದ್ದಾರೆ... ಸಂದೀಪ್ ಜಿ ಅವರು ಹೇಳಿದ ಒಂದು ಮಾತಂತೂ ನಮ್ಮನ್ನೆಲ್ಲ ಯೋಚಿಸುವಂತೆ ಮಾಡಿತು... ಸಾಮಾನ್ಯವಾಗಿ ಹಸುಗಳಿಗೆ ಯಾವುದಾದರೂ ರೋಗ ಬಂದರೆ ಅದಕ್ಕೆ ರೋಗನಿರೋಧಕ ಔಷಧಿಗಳನ್ನು ಕೊಡುತ್ತಾರೆ.. ಹಾಗೆ ಕೊಟ್ಟಾಗ ಆಂಟಿ ಬಯೋಟಿಕ್ ಅದು ರೋಗ ನಿರೋಧಕ ಔಷಧಿ ಇವುಗಳು ಹಾಲಿನ ಮುಖಾಂತರ ಹೊರಬರುತ್ತವೆ... ಎಲ್ಲಾ ರೋಗ ನಿರೋಧಕ ಔಷಧಿಗಳ ಮೇಲೆ ಸ್ಪಷ್ಟವಾಗಿ ಬರೆದಿರುತ್ತಾರೆ.. ಔಷದ ಕೊಟ್ಟಾಗ ಕನಿಷ್ಠ ಎಂದರು ಎರಡರಿಂದ ಮೂರು ದಿನ ಹಾಲನ್ನು ಬಳಕೆ ಮಾಡುವ ಹಾಗಿಲ್ಲ.... ವಿಪರ್ಯಾಸ ಎಂದರೆ ನಿಮ್ಮ ಮಾನವನ ದುರಾಸೆ ಇದೆಲ್ಲವನ್ನು ನಿರ್ಲಕ್ಷಿಸಿ ಬಿಟ್ಟಿದೆ.. ದಿನದಲ್ಲಿ ಕೊಡುವ ಹತ್ತರಿಂದ ಹದಿನೈದು ಲೀಟರ್ ಹಾಲು ಯಾರು ತಾನೇ ಚೆಲ್ಲಲು ಬಯಸುತ್ತಾರೆ... ನೀವೇ ಯೋಚಿಸಿ... ಗೊತ್ತಿದ್ದೋ ಗೊತ್ತಿಲ್ಲದೆಯೋ ರೋಗನಿರೋಧಕ ಸೇರಿರುವ ಹಾಲು.. ನಂದಿನಿ ಪ್ಯಾಕೆಟ್ ಮೂಲಕ ಅದು ಯಾವುದು ಕಂಪನಿಯ ಪ್ಯಾಕೆಟ್ ಹಾಲಿನ ಮೂಲಕ ನಮ್ಮ ದೇಹಕ್ಕೆ ಸೇರುತ್ತಿದೆ.... ಕೆಲವೊಂದು ಅಧ್ಯಯನದ ಪ್ರಕಾರ ಈಗಿನ ಕಾಲದ ಹೆಣ್ಣು ಮಕ್ಕಳು ಅತಿ ಚಿಕ್ಕ ವಯಸ್ಸಿಗೆ ಋತುಮತಿ ಆಗುತ್ತಿರುವುದಕ್ಕೆ ಇದು ಒಂದು ಕಾರಣವಂತೆ...









ದೇಸಿ ತಳಿ ಗಳ ಬಗ್ಗೆ ಹಾಗೂ ಹಸುಗಳ ಮಹತ್ವದ ಬಗ್ಗೆ ತಿಳಿದುಕೊಳ್ಳಲು ಬೇಕಾದಷ್ಟು ವಿಷಯಗಳಿವೆ... ನಮ್ಮ ರೈತರಿಗೆ ಇದೆಲ್ಲಾ ಗೊತ್ತಿಲ್ಲ ಎನ್ನುವ ಹಾಗಿಲ್ಲ... ಹಳೆ ತಲೆಮಾರಿನ ರೈತರಿಗೆಲ್ಲಾ ಗೊತ್ತಿರುವ ವಿಷಯವೇ ಆದರೆ ಅನಿವಾರ್ಯ ಕಾರಣಗಳಿಂದಾಗಿ ಹೆಚ್ಚಿನ ಆಸೆ ಮತ್ತು ಲಾಭಕ್ಕೋಸ್ಕರ, ದೇಸಿ ಹಸುವಿನ ತಳಿಗಳ ಸಂತತಿ ನಾಶವಾಗುತ್ತಾ ಬರುತ್ತಿದೆ.. ಇನ್ನಾದರೂ ಮನುಷ್ಯ ತನ್ನ ಸ್ವಾರ್ಥ ಲಾಭವನ್ನು ಬದಿಗಿಟ್ಟು ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗಾಗಿ ಹಾಗೂ ಭವಿಷ್ಯದ ದೃಷ್ಟಿಯಿಂದ ದೇಸಿ ತಳಿ ತಳಿ ಗಳ ಸಂಸ್ಕರಿಸುವಿಕೆ ಹಾಗೂ ಅದನ್ನು ಬೆಳೆಸುವ ಒಂದು ಕಾರ್ಯವನ್ನು ಎಲ್ಲರೂ ಜೊತೆಗೂಡಿ ಮಾಡಬೇಕಾಗಿದೆ...

ದೇಸಿ ಹಸುಗಳ ಹಾಗೂ ಅವುಗಳ ಬಗ್ಗೆ ಆಶ್ರಮದಲ್ಲಿರುವ ದೇಸಿ ಹಸುಗಳ ನೋಡಿಕೊಂಡೆ ಅದರ ಬಗ್ಗೆ ಅಪಾರವಾದ ಜ್ಞಾನ ಸಂಪತ್ತನ್ನು ತಿಳಿದುಕೊಂಡು ಮುಂದಿನ ಕಾರ್ಯಕ್ರಮಕ್ಕೆ ಅಣಿಯಾದೆವು...

ಮುಂದಿನ ಕಾರ್ಯಕ್ರಮಕ್ಕೆ ಮುಂಚೆ ಶುಂಠಿ ಶುಂಠಿ ಹಾಗೂ ಮಸಾಲೆ ಮಜ್ಜಿಗೆಯನ್ನು ಕುಡಿದು... ಮುಂದಿನ ಕಾರ್ಯಕ್ರಮವಾದ ಗೋಪೂಜೆ ಅಭಿಯಾನಕ್ಕೆ ಮತ್ತೆ ಎಲ್ಲಾ ಒಟ್ಟಿಗೆ ಸೇರಿದವು... ಬೆಂಗಳೂರಿನಿಂದ ಬಂದಿದ್ದ ದಂಪತಿಗಳು ಒಟ್ಟಿಗೆ ಸೇರಿ ಗೋ ಪೂಜೆಯನ್ನು ಮಾಡಿ ಎಲ್ಲಾ ಹಸುಗಳಿಗೂ ಬಾಳೆಹಣ್ಣು ನೀಡಿದರು..

ಇದಾದ ಬಳಿಕ ಸಂದೀಪ್ ಮಂಜುನಾಥ್ ಅವರು "ಘನ ಜೀವಮೃತ" ಇದನ್ನು ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕ ಮಾಹಿತಿಯನ್ನು ಹಾಗು ತಯಾರಿಸುವ ವಿಧಾನವನ್ನು ತಿಳಿಸಿಕೊಟ್ಟರು ಅಲ್ಲಿ ನೆರೆದಿದ್ದ ಅಂತ ಎಲ್ಲರೂ "ಘನ ಜೀವಮೃತ" ಇದರ ಬಿರಣಿ ಗಳನ್ನು ತಯಾರಿಸಿ ಹೋಗುವಾಗ ತಮ್ಮ ಜೊತೆಯಲ್ಲಿ ತಮ್ಮ ಮನೆಯಲ್ಲಿರುವ ಸಸ್ಯಗಳಿಗೆ ಹಾಕಲೆಂದು ತೆಗೆದುಕೊಂಡು ಹೊರಟರು...





ಯಾದ ಬಳಿಕ ಅತಿ ಉಪಯುಕ್ತ ಮರದ ಬೀಜಗಳನ್ನು ಉಪಯೋಗಿಸಿ ಮಣ್ಣಿನ ಬೀಜದ ಉಂಡೆ ಅಂದರೆ ಸೀಡ್ಸ್ ಬಾಲ್.. ಇದನ್ನು ಚಿಕ್ಕ ಮಕ್ಕಳು ,ವಯೋವೃದ್ಧರು, ಹಿರಿಯರು.. ಎಲ್ಲರೂ ಜೊತೆಗೂಡಿ ತಮ್ಮ ಕೈಲಾದ ಮಟ್ಟಿಗೆ ಮಣ್ಣಿನ ಬೀಜದ ಉಂಡೆ ಗಳನ್ನು ಮಾಡಿ ಅದನ್ನು ಒಣಗಲು ಇಟ್ಟರು..
test








ಇದಾದ ಬಳಿಕ Shri Mallinath Hemadi ji ಇವರು ತಮ್ಮ ಅನುಭವದ ಮೇಲೆ ಬರೆದ ಒಂದು ಸಣ್ಣ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು... ಇದು ನಿಜವಾಗಲೂ ಹಳ್ಳಿ ರೈತರಿಗೆ ಹಾಗೂ ನೈಸರ್ಗಿಕವಾಗಿ ಗಿಡಮರಗಳನ್ನು ಬೆಳೆಸಲು ಉಪಯೋಗಿಸುವ ವಿಧಾನಗಳನ್ನು ತುಂಬಾ ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿ ಈ ಪುಸ್ತಕದಲ್ಲಿ ಬರೆದಿದ್ದಾರೆ.

ಮೂಲತಹ ಇವರು ಪ್ರೊಫೆಸರ್... ಅರ್ಧಗಂಟೆ ಇವರು ಆಡಿದ ಮಾತುಗಳು.. ಅದ್ಭುತವಾಗಿದೆ... ಪರಿಸರದ ಬಗ್ಗೆ ದೇಸಿ ಹಸುಗಳ ಬಗ್ಗೆ .. ಇವರು ಹೊಂದಿರುವಂತಹ ಜ್ಞಾನ ಅಪಾರ... ಒಂದೇ ದಿನದಲ್ಲಿ ಇವರ ಎಲ್ಲಾ ಪುಸ್ತಕಗಳು ಮಾರಾಟವಾಗಿ ಮರುಮುದ್ರಣಕ್ಕೆ ಹೋಗಿದೆ... ಕೃಷಿಯ ಬಗ್ಗೆ ಹಾಗೂ ಮರಗಿಡಗಳ ಔಷಧಿಗಳ ಬಗ್ಗೆ ಒಂದು ಉಪಯುಕ್ತ ಕೈಪಿಡಿ ಅಂತ ಅನ್ನಬಹುದು.. ನಿಮಗೆ ಇದರ ಪುಸ್ತಕ ಬೇಕಿದ್ದಲ್ಲಿ ದಯಮಾಡಿ ನನ್ನನ್ನು ಅಥವಾ ಗೋಪಾಲ್ ಟೀಮ್ ಇವರನ್ನು ಸಂಪರ್ಕಿಸಿ.. ಹೆಚ್ಚು ಹೆಚ್ಚು ಜನರಿಗೆ ಮುಖ್ಯವಾಗಿ ಹಳ್ಳಿಗರಿಗೆ ಈ ಪುಸ್ತಕದಿಂದ ಆಗುವ ಉಪಯೋಗ ತುಂಬಾ ಹೆಚ್ಚಾಗಿರುತ್ತದೆ ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಜನರಿಗೆ ಇಂತಹ ಅಮೂಲ್ಯ ವಿಷಯಗಳನ್ನು ತಿಳಿಸಿ ಹೇಳಬೇಕಾದ ಕರ್ತವ್ಯ ಅನಿವಾರ್ಯತೆ ನಮ್ಮ ಮೇಲೆ ಇದೆ...









https://www.facebook.com/wegopals/videos/861007737567547/?t=1050


ಇದಾದ ಬಳಿಕ ಶುದ್ಧ ಹಳ್ಳಿ ಸೊಗಡಿನ ಊಟ ಹಾಗೂ ಅದರಲ್ಲಿದ್ದ ಹಲಸಿನ ಹಣ್ಣಿನ ಪಾಯಸ ತುಂಬಾ ಚೆನ್ನಾಗಿದ್ದು.. ಎಲ್ಲರೂ ಎರಡೆರಡು ಬಾರಿ ಹಾಕಿಸಿಕೊಂಡು ಊಟವನ್ನು ಮಾಡಿದರು...









ನಾನು ಕೂಡ ನಮ್ಮ ಸಂಸಾರ ಸಮೇತನಾಗಿ ನಮ್ಮ ತಾಯಿಯನ್ನು ಕರೆದುಕೊಂಡು ಈ ಕಾರ್ಯಕ್ರಮಕ್ಕೆ ಹೋಗಿದ್ದು ಒಂದು ಒಳ್ಳೆಯ ವಿಚಾರವನ್ನು ವಿನಿಮಯ ಮಾಡಿಕೊಳ್ಳುವ ಹಾಗಾಯಿತು. ನನ್ನ ಪುಟ್ಟ ಮಕ್ಕಳಾದ ಪ್ರಣವ್ ಹಾಗೂ ತೀಕ್ಷ್ಣ ಅತಿ ಉತ್ಸಾಹದಿಂದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಪುಟ್ಟ ಪುಟ್ಟ ಹಸುವಿನ ಕರುಗಳ ಮೈದ ವಡಿ.. ಕರುಗಳ ಜೊತೆ ಚೆನ್ನಾಗಿ ಆಟವಾಡಿ ಒಂದು ಅಮೂಲ್ಯವಾದ ದಿನವನ್ನು ಕಳೆದರು...

ಮುಂದೆ ಈ ತರಹದ ತುಂಬಾ ಕಾರ್ಯಕ್ರಮಗಳು ನಡೆಯಬೇಕು ಹಾಗೂ ನಡೆಯಬೇಕಾದ ಅನಿವಾರ್ಯತೆ ಇದೆ ಅದೇ ರೀತಿ ಇನ್ನು ಹೆಚ್ಚು ಹೆಚ್ಚು ಹೆಚ್ಚು ಪರಿಸರ ಪ್ರಿಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ತನ್ಮೂಲಕ ದೇಸಿ ಹಸುಗಳ ಹಾಗೂ ಅದರ ಮಹತ್ವದ ಬಗ್ಗೆ ಅರ್ಥಪೂರ್ಣ ವಿವರಗಳನ್ನು ತಿಳಿದು ತಿಳಿಸಿ ಹೇಳಬೇಕಾಗಿ ವಿನಂತಿ.

ಕಾರ್ಯಕ್ರಮದ ಸಂಪೂರ್ಣ ಫೋಟೋಗಳು ಈ ಕೆಳಗಿನ ಲಿಂಕ್ ನಲ್ಲಿ

https://photos.app.goo.gl/kuMNnjnmSv7e3Vjw5


ಗೋಪಾಲ್ಸ್  ಬಗ್ಗೆ ಮಾಹಿತಿ :- http://wegopals.com/
ಗೋಪಾಲ್ಸ್ ತಂಡ ನೆಡೆದು ಬಂಡ ರೀತಿ :- http://wegopals.com/our-journey/



Friday, May 3, 2019

ಗೊರವಂಕ - ಮೈನ - common myna

ಗೊರವಂಕ 

ಕಪ್ಪು ಮಿಶ್ರಿತ ಕಂದು ಮೈಬಣ್ಣ, ರೆಕ್ಕೆಯಲ್ಲಿ ಬಿಳಿ ಬಣ್ಣದ ರೇಖೆ, ಕಪ್ಪು ತಲೆ, ಕಣ್ಣಿನ ಸುತ್ತ ಹಳದಿ ಬಣ್ಣದ ,  ಕಾಲು ಹಾಗು ಕೊಕ್ಕು ಹಳದಿ ಬಣ್ಣ,   ಸಾಮಾನ್ಯವಾಗಿ ಇದು ಗುಂಪಾಗಿ ಅಥವಾ ಜೋಡಿ ಯಾಗಿ ಇರುತ್ತವೆ...  ಈ ಹಕ್ಕಿಯು ಆಕ್ರಮಣಶೀಲ ಕ್ಕೆ ಹೆಸರು ವಾಸಿಯಾಗಿದ್ದು... ತನ್ನ ಗೂಡುಗಳ ಹತ್ತಿರ ಬರುವ ಬೇರೆ ಪಕ್ಷಿಗಳನ್ನು ಓಡಿಸುತ್ತಾ .. ಇರುತ್ತವೆ... ಏಷ್ಯಾ ದಲ್ಲಿ ಎಲ್ಲಕಡೆ ಸಾಮಾನ್ಯವಾಗಿ ಕಾಣಸಿಗುವ ಇವು ಪ್ರಪಂಚದ ಬೇರೆ ಭಾಗ ಗಳ್ಳಿ  ಕಾಣಸಿಗುತ್ತವೆ ...

ನಮ್ಮ ಮನೆಯ ಹತ್ತಿರದ ಆಲದ ಮರದ ಸಮೀಪ ಹಾಗೆ ಕುಳಿತು ಇದರ ಹಾಗು ಗಿಳಿ ಗಳ  ಚಲನ ವಲನ ವನ್ನು ಅಭ್ಯಸಿಸುತ್ತಾ ಇದ್ದೆ...  ಗುಂಪಾಗಿ ಇದ್ದ ಈ ಗೊರವಂಕ ಅಥವಾ ಮೈನ ... ಮರದ ಹಣ್ಣುಗಳನ್ನೂ, ಹಾಗು ಕೀಟಗಳನ್ನು ಬಹಳ ಶಬ್ದ ಮಾಡಿಕೊಂಡು ತಿನ್ನುತ್ತಾ ಇತ್ತು...  ಇದ್ದಕ್ಕೆ ಇದ್ದ ಹಾಗೆ ಎಲ್ಲ ಮೈನ ಗಳು  ಸುಮಾರು ಒಂದು ೨೦ ರಿಂದ ೨೫ ಇರಬಹುದು,  ಒಂದು ಚಿಕ್ಕ ಮರದ ಹತ್ತಿರ ಒಟ್ಟಿಗೆ ಸೇರಿಕೊಂಡು ಜೋರಾಗಿ ಚೀರಾಡಲು ಶುರು ಮಾಡಿತು....  ನಾನು ಕುತೂಹಲ ದಿಂದ ಏನಿರಬಹುದು ಅಂತ ನೋಡುತ್ತಾ ಇದ್ದೆ.  ಒಂದೆರಡು ನಿಮಿಷ ಜೋರಾಗಿ ಗಲಾಟೆ ಮಾಡಿ... ಒಂದ್ದು ದೊಡ್ಡ ರಾಪ್ಟರ್ ಹಕ್ಕಿ ಶಿಕ್ರಾ ಅನ್ನು ಓಡಿಸಿಕೊಂಡು  ಹೋದವು...  ಶಿಕ್ರಾ ಇದು hawk  ಅಥವಾ ಗಿಡುಗ ಜಾತಿಗೆ ಸೇರಿದ ಹಕ್ಕಿ, ಸಣ್ಣ ಪುಟ್ಟ ಹಕ್ಕಿಗಳನ್ನು ಹಾರಾಡುತ್ತಲೇ ತಿನ್ನುತ್ತವೆ.....  ಇದು ಬಂದಿರುವುದನ್ನು ಗಮನಿಸಿದ ಮೈನ .. ಎಲ್ಲ ಒಟ್ಟುಗೂಡಿ ... ಇದನ್ನು ಓಡಿಸಿದವು ...ಹಾಗೆ ಕಾಗೆಗಳು ಜೊತೆಗೆ ಸೇರಿಕೊಂಡವು....
ಇದರ ಆಕ್ರಮಣ ಶೀಲತೆ ಹಾಗು ಗುಂಪಿನ ಒಗ್ಗಟ್ಟು ನೋಡಿ ಬೆರಗಾದೆ....