ಗೊರವಂಕ
ನಮ್ಮ ಮನೆಯ ಹತ್ತಿರದ ಆಲದ ಮರದ ಸಮೀಪ ಹಾಗೆ ಕುಳಿತು ಇದರ ಹಾಗು ಗಿಳಿ ಗಳ ಚಲನ ವಲನ ವನ್ನು ಅಭ್ಯಸಿಸುತ್ತಾ ಇದ್ದೆ... ಗುಂಪಾಗಿ ಇದ್ದ ಈ ಗೊರವಂಕ ಅಥವಾ ಮೈನ ... ಮರದ ಹಣ್ಣುಗಳನ್ನೂ, ಹಾಗು ಕೀಟಗಳನ್ನು ಬಹಳ ಶಬ್ದ ಮಾಡಿಕೊಂಡು ತಿನ್ನುತ್ತಾ ಇತ್ತು... ಇದ್ದಕ್ಕೆ ಇದ್ದ ಹಾಗೆ ಎಲ್ಲ ಮೈನ ಗಳು ಸುಮಾರು ಒಂದು ೨೦ ರಿಂದ ೨೫ ಇರಬಹುದು, ಒಂದು ಚಿಕ್ಕ ಮರದ ಹತ್ತಿರ ಒಟ್ಟಿಗೆ ಸೇರಿಕೊಂಡು ಜೋರಾಗಿ ಚೀರಾಡಲು ಶುರು ಮಾಡಿತು.... ನಾನು ಕುತೂಹಲ ದಿಂದ ಏನಿರಬಹುದು ಅಂತ ನೋಡುತ್ತಾ ಇದ್ದೆ. ಒಂದೆರಡು ನಿಮಿಷ ಜೋರಾಗಿ ಗಲಾಟೆ ಮಾಡಿ... ಒಂದ್ದು ದೊಡ್ಡ ರಾಪ್ಟರ್ ಹಕ್ಕಿ ಶಿಕ್ರಾ ಅನ್ನು ಓಡಿಸಿಕೊಂಡು ಹೋದವು... ಶಿಕ್ರಾ ಇದು hawk ಅಥವಾ ಗಿಡುಗ ಜಾತಿಗೆ ಸೇರಿದ ಹಕ್ಕಿ, ಸಣ್ಣ ಪುಟ್ಟ ಹಕ್ಕಿಗಳನ್ನು ಹಾರಾಡುತ್ತಲೇ ತಿನ್ನುತ್ತವೆ..... ಇದು ಬಂದಿರುವುದನ್ನು ಗಮನಿಸಿದ ಮೈನ .. ಎಲ್ಲ ಒಟ್ಟುಗೂಡಿ ... ಇದನ್ನು ಓಡಿಸಿದವು ...ಹಾಗೆ ಕಾಗೆಗಳು ಜೊತೆಗೆ ಸೇರಿಕೊಂಡವು....
ಇದರ ಆಕ್ರಮಣ ಶೀಲತೆ ಹಾಗು ಗುಂಪಿನ ಒಗ್ಗಟ್ಟು ನೋಡಿ ಬೆರಗಾದೆ....
ಇದರ ಆಕ್ರಮಣ ಶೀಲತೆ ಹಾಗು ಗುಂಪಿನ ಒಗ್ಗಟ್ಟು ನೋಡಿ ಬೆರಗಾದೆ....
No comments:
Post a Comment