ಮೊನ್ನೆ ನಮ್ಮ ಸಂಬಂದಿಕರ ಒಂದು ಮದುವೆ Reception ಗೆ ಹೋಗಿದ್ದೆ. ನನ್ನ ಕಣ್ಣಿಗೆ ಒಂದು ಏನಾದರೂ ಒಂದು ಹೊಸ ವಿಷಯ, ವಿನ್ಯಾಸ ಬಿದ್ದರೆ...ಬಿಡೋಲ್ಲ ಅದನ್ನೇ ನೋಡಿ ಅದರ ಬಗ್ಗೆ ಇನ್ನು ಹೆಚ್ಚಿಗೆ ತಿಳಿದು ಕೊಳ್ಳೋಕೆ ಪ್ರಯತ್ನ ಪಡ್ತಾ ಇರ್ತೇನೆ .. ಸ್ವಲ್ಪ ಕ್ರಿಯೇಟಿವ್ ಮೈಂಡ್ ನನ್ನದು,, reception ನಲ್ಲಿ ಮಾಡಿರುವ back ground decoration ಬಗ್ಗೆ... color color ಹೂವ ಗಳನ್ನು ಜೋಡಿಸಿರುವ ಬಗ್ಗೆ, ನೋಡ್ತಾ ಇರ್ತೇನೆ, ಇದನ್ನ ಇನ್ನು ಯಾವ ರೀತಿ ಕ್ರಿಯೇಟಿವ್ ಆಗಿ ಮಾಡಬಹುದಿತ್ತು ಅಂತ ಯೋಚಿಸ್ತಾ ಇರ್ತೇನೆ...
ಹಾಗೆ ಇನ್ನು ಒಂದು ವಿಷಯ ಜಾಸ್ತಿ ಗಮನ ಸೆಳೆಯುವುದು ಅಂದ್ರೆ, ತರಕಾರಿ ಅಥವಾ ಹಣ್ಣುಗಳಲ್ಲಿ ಮಾಡಿರುವ ಕಲೆಯ ಬಗ್ಗೆ. (Fruit Art ) , ಹಸಿ ತರಕಾರಿಗಳನ್ನು ನೀಟ್ ಆಗಿ ಕತ್ತರಿಸಿ, ಎಷ್ಟು desing ನಿಂದ ಜೋಡಿಸಿರುತ್ತಾರೆ , ಹಾಗೆ ಬೂದ ಕುಂಬಳಕಾಯಿ, ಪರಂಗಿ ಹಣ್ಣು, ಕಲ್ಲಂಗಡಿ ಹಣ್ಣು,, ಹೀಗೆ ತರ ತರ ಹಣ್ಣು ಗಳನ್ನು ಆ ಸೀಸನ್ ನಲ್ಲಿ ಸಿಗುವ ಹಣ್ಣುಗಳಿಂದ ಒಳ್ಳೆ ಒಳ್ಳೆಯ ಕಲಾಕೃತಿ ಮಾಡಿರುತ್ತಾರೆ... ನೋಡೋಕೆ ಎಷ್ಟು ಚೆನ್ನಾಗಿ ಇರುತ್ತೆ ಅಲ್ವ...
ಒಂದು ಸರಿ ಅಂತು, ನನ್ನ ಫ್ರೆಂಡ್ ತಂಗಿ ಮದುವೆಗೆ ಅಂತ ಹೋಗಿದೆ.. ಅಲ್ಲಿ ಮಾಡೋ ಕೆಲಸ ಬಿಟ್ಟು,, ಈ ತರಕಾರಿ desing ಮಾಡುವವನ ಹಿಂದೆ ಬಿದ್ದು ಅವನು ಹೇಗೇ ಮಾಡುತ್ತಾನೆ,, ಎಲ್ಲಿಂದ ಕಲಿತ ಹೀಗೆ ಮಾಡುವುದನ್ನ ಅಂತ ಮಾತದ್ಕೊಂಡ್ ಕೂತ್ಕೊಂಡ್ ಇದ್ದೆ. ಆಮೇಲೆ ಅವನಿಗೆ ಬೇಕಾದ ತರಕಾರಿ,, ಹಣ್ಣುಗಳನ್ನು ನಾನೇ ತಂದು ಕೊಡುವ ಕೆಲಸ ಒಪ್ಪಿಕೊಂಡು,, ಅವರ ಜೊತೇನೆ ಸ್ವಲ್ಪ ಹೊತ್ತು ಇದ್ದೆ......ಪಾಪ ಅವನು ಒಬ್ಬ ಪೇಪರ್ ಕಟ್ ಮಾಡುವ ಆರ್ಟಿಸ್ಟ್,,, ಈ ಕಲೆ ಬಗ್ಗೆ ಏನು ಗೊತ್ತಿರಲಿಲ್ಲ,,, ದುಡ್ಡಿಗೋಸ್ಕರ,, ತರಕಾರಿಗಳಲ್ಲಿ desing ಮಾಡ್ತಾ ಇದ್ದ ಅಷ್ಟೇ ... ಆದರು ಅವನೊಬ್ಬ ಒಳ್ಳೆ ಆರ್ಟಿಸ್ಟ್... ತುಂಬ ಚೆನ್ನಾಗಿ ನೀಟ್ ಆಗಿ, ತರ ತರಹದ desing ಮಾಡಿ ಕೊಡ್ತಾ ಇದ್ದ..
Actually ಈ fruit ಆರ್ಟ್ "The art of fruit and vegetable carving " ಕಲೆ ಹುಟ್ಟಿಕೊಂಡ್ ಇದ್ದು ಚೀನಾ ದಲ್ಲಿ ಅಂತೆ, Chinese Tang Dynasty (AD 618-906) and Sung Dynasty (AD 960-1279) ಈ ಸಮಯದಲ್ಲಿ ಈ ಕಲೆ ಬೆಳಕಿಗೆ ಬಂದಿದ್ದು,, ಆಮೇಲೆ ನಿದಾನಕ್ಕೆ ಪ್ರಪಂಚದ ಎಲ್ಲ ಕಡೆ ಹರಡಿ ಹೊಸ ಹೊಸ ವಿನ್ಯಾಸಕ್ಕೆ, ಹೊಸ ಹೊಸ creativiti ಗೆ ಅವಕಾಶ ಮಾಡಿ ಕೊಟ್ಟಿದೆ.
ಇವಾಗ Thai ಮತ್ತೆ ಫ್ರೆಂಚ್ ದೇಶದವರು ಈ ಆರ್ಟ್ ಅನ್ನು ಹೆಚ್ಚಾಗಿ ಬಳಸುತ್ತಾ ಇದ್ದಾರೆ, ಆರ್ಟ್ ಕ್ಲಾಸ್ ನಲ್ಲಿ ಇದರ ಬಗ್ಗೆನೇ ಒಂದು subject ಕೂಡ ಇದೆ ಅಂತೆ..
ಕೆಲವೊಂದು ಮದುವೆ ಮನೆಗೆ ಹೋದಾಗ,, ಅಲ್ಲಿ ಇರುವ ಒಳ್ಳೆ ಯಾ fruit ಆರ್ಟ್ ಚಿತ್ರಗಳನ್ನ ಸೆರೆ ಹಿಡಿದಿದ್ದೆ, ಆದರೆ, ನನ್ನ ಹಾರ್ಡ್ ಡಿಸ್ಕ್ ಪ್ರಾಬ್ಲಮ್ ಆಗಿ ನಾನು collect ಮಾಡಿದ್ದ ಚಿತ್ರಗಳೆಲ್ಲ ಹಾಳಾಗಿ ಹೋಗಿದೆ.. ಅದರ backup copy ನ ಎಲ್ಲೊ CD ಮಾಡಿ ಇಟ್ಟಿದ್ದೆ ಆದರೆ ಇವಾಗ ಸದ್ಯಕ್ಕೆ ಸಿಕ್ತಾ ಇಲ್ಲ.. ಇನ್ನೊಮ್ಮೆ ಅದನ್ನ ನಿಮ್ಮಗಳ ಜೊತೆ share ಮಾಡ್ಕೋತೇನೆ,
ಸದ್ಯಕ್ಕೆ ನನ್ನ collection ನಲ್ಲಿ ಇದ್ದ ಕೆಲವು international art of fruit and vegetable carving festival ಫೋಟೋಗಳನ್ನು ಹಂಚಿಕೊಳ್ತಾ ಇದ್ದೇನೆ,,, ನೋಡಿ ಖುಷಿ ಪಡಿ,, ಹಾಗೆ ಇದರ ಬಗ್ಗೆ ನಿಮಗೆ ಏನಾದ್ರು ಗೊತ್ತಿದ್ದರೆ, ತಿಳಿಸಿ ಹೇಳಿ....
(ಹೆಚ್ಚಿನ ಮಾಹಿತಿಗಾಗಿ http://www.lartedellintaglio.it/ ಬೀಟಿ ಕೊಡಿ,, ಇದು ಯಾವುದೊ ಬೇರೆ language ನಲ್ಲಿ ಇದೆ . ಆದರೆ ಈ ಕಲೆಗೆ ಉಪಯೋಗಿಸುವ ಚಾಕು, ಇನ್ನಿತರ ಉಪಕರಣಗಳ ಬಗ್ಗೆ ಮಾಹಿತಿ ಇದೆ,, ನೋಡಿ,
ಹಾಗೆ ನನ್ನ ಹಿಂದಿನ ಬ್ಲಾಗ್ ಪೋಸ್ಟ್ ನಲ್ಲಿ ಅದ್ಬುತ ಕೈಚಳಕದ ಕಲಾಕೃತಿಗಳು
http://guruprsad.blogspot.com/2009/02/blog-post.html fruit ಬಗ್ಗೆ ಒಂದು ಲೇಖನ ಹಾಕಿದ್ದೆ,, ನೋಡಿ..)
ಈ ಕಲೆಗೆ ಉಪಯೋಗಿಸುವ ಸಲಕರಣೆಗಳು........















































