Saturday, September 25, 2010

ಬಲೂನ್ twist ಆರ್ಟ್...

ನಿಮಗೆ ಗೊತ್ತಿದೆಯ,,,, ನಾವು ಚಿಕ್ಕವರಾಗಿದ್ದಾಗ,,, ಯಾವುದದು ಒಂದು ಬಲೂನ್,,,ಒಡೆದು ಹೋದರೆ,, ಅದರಲ್ಲೇ  bubbles  ತರ ಬಾಯಿನಿಂದ ಊದಿ ಚಿಕ್ಕ ಚಿಕ್ಕ ಬಲೂನ್ ... ಮಾಡಿ,,,, ಟ್ವಿಸ್ಟ್ ಮಾಡಿ... ಕೈಗೆ ಉಜ್ಜಿಕೊಂಡು ಸೌಂಡ್ ಮಾಡ್ತಾ ಇದ್ವಿ.. ನೆನಪು ಇದೆಯಾ..... ಹ್ಞೂ  ಅದೇ ತರ ಇಲ್ಲಿ ನೋಡಿ... ಬಲೂನ್ ಟ್ವಿಸ್ಟ್ ನೆ ಒಂದು ತರ ಆರ್ಟ್ ಮಾಡಿಕೊಂಡು,,,, ತರ ತರದ desing ಮಾಡಿದ್ದಾರೆ ಕಂಪ್ಯೂಟರ್, ಬೈಕ್.. ಸೋಫಾ.......  ಕೊನೆಗೂ ಹುಡುಗೀರಾ ಬಟ್ಟೆನು ಈ ಬಲೂನ್ ನಿಂದಲೇ ಟ್ವಿಸ್ಟ್ ಮಾಡಿ ಮಾಡಿದ್ದಾರೆ.....
(ಬಟ್ಟೆ ಬಿಚ್ಚೋ ಗೋಳೇ ಇಲ್ಲ ಅಂತ ಕಾಣುತ್ತೆ... ಚೇಂಜ್ ಮಾಡಬೇಕಾದರೆ, ಒಂದು ಸೂಜಿ ತಗೊಂಡ್ ಚುಚ್ಚಿದರೆ     ಆಯಿತು :-)  ) 
ಎಂತೆಂಥ ಆರ್ಟ್ ಇರುತ್ತೆ ಅಲ್ವ..........  ನೋಡಿ ಮಜಾ ಮಾಡಿ...........


Saturday, September 11, 2010

ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು...........



ಎಲ್ಲರಿಗೂ , ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು...........  ನಿಮ್ಮ ಎಲ್ಲ ಬೇಡಿಕೆಗಳನ್ನು ಗಣಪತಿ ಇಡೇರಿಸಿ, ಸುಖ ಸಂತೋಷ ನೆಮ್ಮದಿ ತರಲೆಂದು,,,, ಹಾರೈಸುವ  ನಿಮ್ಮ 
ಗುರು  
(ಇಲ್ಲಿ ಇರುವ ಗಣೇಶನ್ನ ನಾನು ಕಾನಿಪಕಂ ಗೆ ಹೋಗಿದ್ದಾಗ ತೆಗೆದಿದ್ದದು...)





Thursday, September 9, 2010

ಮೊಟ್ಟೆ ನಲ್ಲೆ ಅರಳುವ ಕಲೆ.....

ಮೊಟ್ಟೆ ನಲ್ಲೆ ಅರಳುವ ಕಲೆ.....
ಮೊಟ್ಟೆ ಗೊತ್ತಲ್ವ ನಿಮಗೆ....ಎಷ್ಟು ನಾಜೂಕಾದ ವಸ್ತು ಅಲ್ವ.... ಜೋರಾಗಿ ಕೆಳಗಡೆ ಬೀಳಿಸಿದರೆ ಹೊಡೆದು ಹೋಗುತ್ತೆ,,, ಅಂಥದರಲ್ಲಿ.... ಆ ಮೊಟ್ಟೆ ನೆ ಉಪಯೋಗಿಸಿಕೊಂಡು,,,, ಅದರಲ್ಲೇ ಕೆತ್ತನೆ ಕೆಲಸ ಮಾಡುವವರನ್ನು ನೋಡಿದ್ದೀರಾ....?  ಅದು ಎಂತ ಕೆಲಸ,,, ಎಷ್ಟು ಸುಂದರವಾಗಿ , ಅದ್ಭುತ ವಾಗಿ ಕೆತ್ತನೆ ಕೆಲಸಗಳನ್ನ,,, ದೇವರ ಚಿತ್ರಗಳನ್ನ ಈ ಪುಟ್ಟ ಮೊಟ್ಟೆ ನಲ್ಲಿ ಕೆತ್ತಿದ್ದಾರೆ ನೋಡಿ... ಹಾಂ,, ಇದನ್ನು ಹೇಳಿಕೊಡಲು ಒಂದು ಆರ್ಟ್ ಸ್ಕೂಲ್ ಕೂಡ ಇದೆ ಅಂತ,,,,, ಇಲ್ಲಿರುವುದು ಕೆಲವು samples ಅಸ್ಟೇ..... ಇದೆ ರೀತಿ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿ ನಲ್ಲಿ ಮೊಟ್ಟೆ ಯನ್ನ ಅಲಂಕಾರ ಮಾಡುತ್ತಿದ್ದಾರೆ......
ಕಲಾವಿದನ ಕೈಗೆ ಏನು ಸಿಕ್ಕರು ಅದಕ್ಕೊಂದು ರೂಪ ಬರುತ್ತೆ ಅನ್ನೋದಕ್ಕೆ ಇದೊಂದು ಉದಾಹರಣೆ ಅಸ್ಟೇ....
ನನ್ನ ಹಿಂದಿನ ಪೋಸ್ಟ್ ನಲ್ಲಿ ಮೊಟ್ಟೆ ಬಾಕ್ಸ್ ನಿಂದ ತಯಾರಾಗುವ ಕಲೆ ಯನ್ನ ಹೇಳಿದ್ದೆ,,,, ಇದು,,, ಬರಿ ಮೊಟ್ಟೆ ದು.....  ಎಷ್ಟು ವಿಚಿತ್ರ ಅಲ್ವ...?
ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.....