Showing posts with label ನಾಣ್ಯ. ಕಲೆ. Show all posts
Showing posts with label ನಾಣ್ಯ. ಕಲೆ. Show all posts

Saturday, September 25, 2010

ಬಲೂನ್ twist ಆರ್ಟ್...

ನಿಮಗೆ ಗೊತ್ತಿದೆಯ,,,, ನಾವು ಚಿಕ್ಕವರಾಗಿದ್ದಾಗ,,, ಯಾವುದದು ಒಂದು ಬಲೂನ್,,,ಒಡೆದು ಹೋದರೆ,, ಅದರಲ್ಲೇ  bubbles  ತರ ಬಾಯಿನಿಂದ ಊದಿ ಚಿಕ್ಕ ಚಿಕ್ಕ ಬಲೂನ್ ... ಮಾಡಿ,,,, ಟ್ವಿಸ್ಟ್ ಮಾಡಿ... ಕೈಗೆ ಉಜ್ಜಿಕೊಂಡು ಸೌಂಡ್ ಮಾಡ್ತಾ ಇದ್ವಿ.. ನೆನಪು ಇದೆಯಾ..... ಹ್ಞೂ  ಅದೇ ತರ ಇಲ್ಲಿ ನೋಡಿ... ಬಲೂನ್ ಟ್ವಿಸ್ಟ್ ನೆ ಒಂದು ತರ ಆರ್ಟ್ ಮಾಡಿಕೊಂಡು,,,, ತರ ತರದ desing ಮಾಡಿದ್ದಾರೆ ಕಂಪ್ಯೂಟರ್, ಬೈಕ್.. ಸೋಫಾ.......  ಕೊನೆಗೂ ಹುಡುಗೀರಾ ಬಟ್ಟೆನು ಈ ಬಲೂನ್ ನಿಂದಲೇ ಟ್ವಿಸ್ಟ್ ಮಾಡಿ ಮಾಡಿದ್ದಾರೆ.....
(ಬಟ್ಟೆ ಬಿಚ್ಚೋ ಗೋಳೇ ಇಲ್ಲ ಅಂತ ಕಾಣುತ್ತೆ... ಚೇಂಜ್ ಮಾಡಬೇಕಾದರೆ, ಒಂದು ಸೂಜಿ ತಗೊಂಡ್ ಚುಚ್ಚಿದರೆ     ಆಯಿತು :-)  ) 
ಎಂತೆಂಥ ಆರ್ಟ್ ಇರುತ್ತೆ ಅಲ್ವ..........  ನೋಡಿ ಮಜಾ ಮಾಡಿ...........


Tuesday, August 11, 2009

coins ನಲ್ಲೆ ಅರಳುವ ಕಲೆ....

ನಾವು ಚಿಕ್ಕವರಾಗಿದ್ದಾಗ ನಾಣ್ಯಗಳ ಜೊತೆ ಆಟ ಆಡ್ತ ಇದ್ದಿದು ನೆನಪಿದೆಯೆ.... 5ಪೈಸ, 10 ಪೈಸ, 20 ಪೈಸ, 25 ಪೈಸ, 50 ಪೈಸ, 1 ರೂಪಾಯಿ ......ಇವಾಗ ಅದೆಲ್ಲ ಬರಿ ನೆನಪು, ಅಲ್ವ...ಅದಕ್ಕೆಲ್ಲ ಎಷ್ಟು ವ್ಯಾಲ್ಯೂ ಇತ್ತು ಆಗಿನ ಕಾಲದಲ್ಲಿ.....೧ ರೂಪಾಯಿ ಇಟ್ಕೊಂಡ್ ಹೋದ್ರೆ ಎಸ್ಟೆಲ್ಲ ಪೆಪ್ಪರೆಮೆಂಟ್, ಚಿಕ್ಕ ಚಿಕ್ಕ ಚಾಕಲೇಟ್, ಮತ್ತೆ ನಿಂಬೆ ಹುಳಿ ಆಮೇಲೆ,, ಬೆಲ್ಲ ಮತ್ತೆ ಕೊಬ್ಬರಿ ಇಂದ ಮಾಡಿದ ಮಿಟಾಯಿ.. ಎಸ್ಟೆಲ್ಲ ಸಿಕ್ತ ಇತ್ತು ಅಲ್ವ ..... ಇವಾಗ ೧ ರೂಪಾಯಿಗೆ ಅಲ್ಲ.. ೫ ರೂಪಾಯಿ ನಾಣ್ಯಕ್ಕೂ ಬೆಲೆ ಇಲ್ಲದಿರೋ ತರ ಆಗಿದೆ.... ಇರಲಿ ಬಿಡಿ,, ನಾನು ಇದರ ವಿಷ್ಯ ಹೇಳೋಕೆ ಹೊರಟಿಲ್ಲ... ನಾವು ಚಿಕ್ಕವರಿದ್ದಾಗ... ನಾಣ್ಯ ಗಳಲ್ಲಿ ಏನೇನೋ ಡಿಸೈನ್ ಮಾಡಿ ಆಟ ಆಡ್ತ ಇದ್ದದ್ದು ನೆನಪಿಗೆ ಬಂದು......ಅದು ಯಾಕೆ ಬಂತು ಅಂದ್ರೆ... ಇಲ್ಲಿ ಕೆಳಗಿನ ಚಿತ್ರಗಳನ್ನು ನೋಡಿ....
ರಷ್ಯ ದೇಶದ ಒಬ್ಬ ಕಲಾಕಾರ ...ಬರಿ ನಾಣ್ಯ(coins) ದಿಂದ ಏನೆಲ್ಲ ಚಮತ್ಕಾರ ತೋರಿಸಿದ್ದಾನೆ ನೋಡಿ.. ಸುಮ್ಮನೆ ಕುಳಿತಿರಬೇಕಾದರೆ ಒಂದಸ್ಟು ನಾಣ್ಯಗಳ ಜೊತೆ ಆಟ ಆಡ್ತ ಇದ್ದನಂತೆ.. ಹಾಗೆ ಇದೇ ಒಂದು ತರ ಹವ್ಯಾಸ ಆಗಿ.. ತುಂಬ different ಆಗಿ , ಕ್ರಿಯೇಟಿವ್ ಆಗಿ, ನಾಣ್ಯಗಳನ್ನು ಜೋಡಿಸುತ್ತ ಆಕೃತಿ ಗಳನ್ನು ಮಾಡಿದ್ದಾನೆ....ನೋಡಿದರೆ ಒಂದಕ್ಕೊಂದು ಅಂಟಿಸಿದ್ದಾರೆ ಅಂಥ ಅನ್ನಿಸಬೇಕು.. ಆದರೆ ಹಾಗೆ ಮಾಡಿಲ್ಲ.. ಬರಿ ನಾಣ್ಯ ದಿಂದಲೇ, ಈ ತರ ಮಾಡಿದ್ದಾನೆ, ನೀವೇ ನೋಡಿ ಹೇಳಿ ಹೇಗೆ ಇದೆ ಅಂಥ ....


ಏನು ಸಪೋರ್ಟ್ ಇಲ್ಲ...ಒಳ್ಳೆ bridge ತರ ಇದೆ ಅಲ್ವ...?


ಬರಿ ಅರ್ದ coins ನಿಂದ ಜೋಡಿಸಿ ಮಾಡಿದ್ದಾನೆ,,, ಎಷ್ಟು ತಾಳ್ಮೆ ಇರಬೇಕಲ್ವ...

coins ಬಿಲ್ಡಿಂಗ್...


ಮದ್ಯದಲ್ಲಿ ಏನು ಸಪೋರ್ಟ್ ಇಲ್ಲ.....ಸರಿಯಾಗಿ ನೋಡಿ.....
ನನಗೆ ತುಂಬ ಇಷ್ಟ ಹಾಗೆ ಆಶ್ಚರ್ಯ ಆಗಿದ್ದು ಅಂದ್ರೆ ಇದು.....ಒಂದು ಚೂರು ಸಪೋರ್ಟ್ ಇಲ್ಲದಿರ ಹೀಗೆ ನಿಂತಿದೆ ಅದು ಅರ್ದ ಟೇಬಲ್ ನಿಂದ ಹೊರಗಡೆ....ಅಬ್ಬ....ಏನ್ talent ನೋಡಿ.....ಸೂಪರ್ ಅಲ್ವ....
ಇದನ್ನ ನೋಡಿ ನಾನು ಸ್ವಲ್ಪ ಟ್ರೈ ಮಾಡಿದೆ... ಆದ್ರೆ ತುಂಬ ತಾಳ್ಮೆ ಬೇಕು. ಸಕತ್ ಕಷ್ಟ ಇದೇ ರೀ.......ನೀವು ಒಂದ್ಸಲ ಟ್ರೈ ಮಾಡಿ ನೋಡಿ.....ಮಜಾ ಇರುತ್ತೆ....