Showing posts with label paitings. Show all posts
Showing posts with label paitings. Show all posts

Saturday, February 27, 2010

ಹಕ್ಕಿಯ ಪುಕ್ಕದಲ್ಲೇ ಅರಳುವ ಅದ್ಬುತ ಕಲೆ.... Julie Thompson

"ಕಲೆಗೆ ಯಾವ ವಸ್ತುವಾದರೆನೈಯ್ಯ ....ಎಲ್ಲಿದ್ದರು ಹೇಗಿದ್ದರು,,, ಕಲಾವಿದನ ಕೈ ನಲ್ಲಿ ಸಿಕ್ಕರೆ.. ಅದೊಂದು ಅಪರೂಪದ ಸೌಂದರ್ಯದ ವಸ್ತು ಆಗುತ್ತದೆ....."
ನಿಮಗೆ ನೆನಪಿರಬೇಕು ಅಲ್ವ... ನಾವು ಚಿಕ್ಕವರಿದ್ದಾಗ, ಯಾವುದಾದರು ಹಕ್ಕಿಯ ಪುಕ್ಕ ಸಿಕ್ಕರೆ ಎಷ್ಟು ಕುಷಿ ಇಂದ ಅದರ ಜೊತೆ ಆಟ ಆಡ್ತ ಇದ್ವಿ.. ಅದರ ನವಿರಾದ ಸ್ಪಂಜಿನಂಥ ಪುಕ್ಕದಿಂದ,, ಯಾರಾದರು ಪಕ್ಕದಲ್ಲಿ ಇರುವವರ ಕಿವಿಗೆ ತಾಗಿಸಿ.. ಹುಳ ಬಿಟ್ಟ ಹಾಗೆ ಮಾಡಿ ತಮಾಷೆ ನೋಡ್ತಾ ಇದ್ವಿ... ಇನ್ನು ಯಾವುದಾದರು ಒಳ್ಳೆಯಾ ಬೆಳ್ಳಗಿನ ಪುಕ್ಕ ಸಿಕ್ಕರೆ... ಎಸ್ಟೋ ದಿನ ಜೋಪಾನ ಮಾಡ್ಕೊಂಡ್ ಪುಸ್ತಕದ ಮದ್ಯ ಇಟ್ಟುಕೊಂಡು ಆನಂದ ಪಡ್ತಾ ಇದ್ವಿ. ಅಲ್ವ....
ನವಿಲು ಗರಿಗೆ , ಅದರ ಪುಕ್ಕಕ್ಕೆ, ಅದರದೇ ಅದ ಸೌಂದರ್ಯ ಇರುತ್ತದೆ.. ಆದರೆ ಬೇರೆ ಪಕ್ಷಿಗಳ ಪುಕ್ಕ ಸಿಂಪಲ್ ಆಗಿ ನೀಟ್ ಆಗಿ plain ಆಗಿ ಇರುತ್ತವೆ .. ಇದೆ ಸಿಂಪಲ್ ಆಗಿ plain ಆಗಿ ಇರುವ ಹಕ್ಕಿಯ ಪುಕ್ಕ Julie Thompson ಎಂಬುವರ ಕೈಗೆ ಸಿಕ್ಕಿ ಹೇಗೇ ಅರಳಿದೆ ನೀವೇ ನೋಡಿ....
ಎಂತೆಂತ ಕಲಾವಿದರು ಇರುತ್ತಾರೆ ... ಎಷ್ಟು ಸಣ್ಣ ವಸ್ತು ಸಿಕ್ಕರೂ ಬಿಡದೆ ಅದರಲ್ಲೇ ಏನೋ ಮಾಡಿ ತೋರಿಸ್ತಾ ಇರ್ತಾರೆ.....ವೌಹ್
ಬರಿ (feather ) ಪುಕ್ಕದಲ್ಲಿ ಬಿಡಿಸಿರುವ ಚಿತ್ರಗಳಿಗೆ ಏನು ಹೇಳಿದರು ಸಾಲದು....
ಇವರು feathers ನಲ್ಲಿ ಪೇಂಟಿಂಗ್ ಮಾಡೋದನ್ನ ಶುರು ಮಾಡಿದ್ದು 1990 ನಲ್ಲಿ ಅಂತೆ,  ಮೊದಮೊದಲು ಅವರ ಅಮ್ಮನ ಮನೆಯಲ್ಲಿ ಇದ್ದ ನವಿಲಿನ ಗರಿಗಳಿಂದ ಪೇಯಿಂಟ್ ಚಿತ್ರ ಬಿಡಿಸುವುದಕ್ಕೆ ಟ್ರೈ ಮಾಡ್ತಾ ಇದ್ದರಂತೆ.. ಆಮೇಲೆ ನಿದಾನಕ್ಕೆ ಕೆಲವೊಂದು ಸಣ್ಣ ಸಣ್ಣ ಸಬ್ಜೆಕ್ಟ್ ವಸ್ತುಗಳನ್ನು  ನೋಡಿಕೊಂಡು ಅದನ್ನು ಈ feather ಮೇಲೆ ಬಿಡಿಸ್ತ ಇದ್ದರಂತೆ,, ಆಮೇಲೆ ಇದು ಇವರಿಗೆ ಚೆನ್ನಾಗಿ ಕರಗತ ವಾಗಿ,, pictographs , still lifes ಹೀಗೆ ಬೇರೆ ಬೇರೆ ತರ broad range ಸಬ್ಜೆಕ್ಟ್ ನ focus ಮಾಡಿಕೊಂಡು ಬಿಡಿಸಲಿಕ್ಕೆ ಶುರು ಮಾಡಿದರಂತೆ... ಇವರ ವೆಬ್ ಸೈಟ್ ನಲ್ಲಿ ಇದರ ಬಗ್ಗೆ ಇನ್ನು ಹೆಚ್ಚು ವಿವರಿಸಿದ್ದಾರೆ....

ಇವರ ಬಗ್ಗೆ ಹಾಗು ಇವರ ಕಲೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲ್ಲಿ ಬೇಟಿ ನೀಡಿ http://www.featherlady.net/index.html
ಇದರಲ್ಲಿ ಇವರ ಆರ್ಟ್ ಬಗ್ಗೆ , ಇವರ studio ಬಗ್ಗೆ,, ಹಾಗು ಇವರ ಅನುಭವದ ಬಗ್ಗೆ ಹೇಳಿಕೊಂಡ್  ಇದ್ದಾರೆ ..
ಏನೇ ಇರಲಿ,, hats of to you julie ...
ಇವರ ಕಲೆ ನೋಡಿ ನಿಮ್ಮ ಅನಿಸಿಕೆ ತಿಳಿಸಿ.....



Wednesday, December 23, 2009

ಬಣ್ಣ ಬಣ್ಣದ ಬೆಡಗಿನ ಬೆಂಗಳೂರು ನೋಡಿದ್ದೀರಾ.....!!!

  ನಮ್ಮ ಬೆಂಗಳೂರಿಗೆ ಎಸ್ಟೊಂದ್ ಹೆಸರಿದೆ ಅಲ್ವ... ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ, ಹವಾನಿಯಂತ್ರಿತ ನಗರ, ಹೀಗೆ ಎಸ್ಟೊಂದು ಹೆಸರು ನಮ್ಮ ಬೆಂದಕಾಳೂರಿಗೆ, ಅದಕ್ಕೆ ಹೊಸ ಸೇರ್ಪಡೆ, ಬಣ್ಣದ ನಗರ ಅಥವ color full city ಅಂತ ಕರೆದರೆ ತಪ್ಪಾಗಲಾರದೇನೋ... ಯಾಕೆ ಅಂತೀರಾ..... ಯಾಕಂದ್ರೆ, ನಮ್ಮ ಬೆಂಗಳೂರಿನ ಗೋಡೆಗಳ ಮೇಲೆಲ್ಲಾ ಚೆಂದದ ಚೆಲುವಿನ, ಚಿತ್ರಗಳನ್ನು BBMP ನವರು ಬಿಡಿಸುವುದಕ್ಕೆ ಅವಕಾಶ ಮಾಡಿ ಕೊಟ್ಟು, ಒಳ್ಳೆಯ ಕೆಲಸ ಮಾಡಿದ್ದಾರೆ, ಇದರಿಂದ ಬೆಂಗಳೂರಿನ ಎಸ್ಟೋ ಗೋಡೆಗಳು, ಬಣ್ಣ ಬಣ್ಣದ ಚಿತ್ರಗಳಿಂದ ಹೊಳೆಯುತ್ತ ಮನಸೂರೆ ಗೊಳ್ಳುತ್ತಿದೆ, ಸ್ವಲ್ಪ ದಿನದ ಕೆಳಗೆ, ಕೆಟ್ಟ ಕೆಟ್ಟ ಫಿಲಂ ವಾಲ್ ಪೋಸ್ಟ್ ನಿಂದ, ಅರ್ದಂಬರ್ದ ಹರಿದ , ಗಲೀಜು ಗಲೀಜಾಗಿ ಕಾಣಿಸುತ್ತಿದ್ದ advertisement ಪೋಸ್ಟ್ ನಿಂದ ಎಲ್ಲ ಗೋಡೆಗಳು, ನೋಡುವುದಕ್ಕೆ ಆಗ್ತಾ ಇರಲಿಲ್ಲ . ಆದರೆ ಇವಾಗ,,,,,,ಬಣ್ಣ ಬಣ್ಣದ ಚಿತ್ರಗಳು,, ಅದರಲ್ಲೂ ಕರ್ನಾಟಕದ ಪ್ರಸಿದ್ದ ಪ್ರವಾಸಿ ತಾಣಗಳ, ಹಾಗು ಕರ್ನಾಟಕದ ಪರಂಪರೆಯನ್ನು ಬಿಂಬಿಸುವ ಚಿತ್ರಗಳು, ಎಷ್ಟು ಚೆನ್ನಾಗಿ ಇರುತ್ತೆ ಗೊತ್ತ...


ಆದರೆ ಇದು ಎಷ್ಟು ದಿನ ಬಾಳಿಕೆ ಬರುತ್ತದೆ ಎಂಬುದೇ ಪ್ರಶ್ನೆ,, ಇದನ್ನು ಚೆನ್ನಾಗಿ , ಗಲೀಜು ಮಾಡದೇ ಇಟ್ಟುಕೊಳ್ಳುವುದು ನಮ್ಮ ಬೆಂಗಳೂರಿಗರ ಮುಂದೆ ಇದೆ.... ಇನ್ನು ಮುಂದಾದರು ಕಂಡ ಕಂಡ ಗೋಡೆಗಳ ಮುಂದೆ ಒಂದ ಮಾಡುತ್ತ , ಉಗಿಯುತ್ತ , ಗಲೀಜು ಮಾಡುವುದನ್ನು ಬಿಟ್ಟು, ಇಂಥ ಒಳ್ಳೆಯ ಪ್ರಯತ್ನವನ್ನ ಸಾರ್ತಕ ಗೋಳಿಸ ಬೇಕಾಗಿದೆ . ಅಲ್ವ..

ನನಗೆ ಗೊತ್ತಿರುವ ಪ್ರಕಾರ ಇಂಥ ಒಂದು ಒಳ್ಳೆಯ ಪ್ರಯತ್ನ ಬೆಂಗಳೂರಿನಲ್ಲೇ ಮೊದಲು ಅಂತ ಕಾಣುತ್ತೆ... ಇದಕ್ಕೆ ನಿಜವಾಗಲು BBMP ರವರನ್ನು ಅಭಿನಂದಿಸಬೇಕು , ಆದರೆ ಇದರ ಬಗ್ಗೆ ಕೆಲವು ಅಪಸ್ವರಗಳು ಕೇಳಿಬಂದಿದ್ದವು,, ಯಾರೋ ಒಬ್ಬರು ವಿಜಯಕರ್ನಾಟಕದಲ್ಲಿ ಒಂದು article ಬರೆದಿದ್ದರು. ಹೀಗೆ ಕನ್ನಡ ಕಂಡ ಕಡೆ ಪೇಯಿಂಟ್ ಮಾಡುವುದರಿಂದ ಕೃತಿ ಚೌರ್ಯ ಉಂಟಾಗಿದೆ ಅಂತ.. ಅವರು ಹೇಳಿರುವ ಪ್ರಕಾರ ಕೆಲವೊಂದು ಚಿತ್ರಗಳು ಯಾರೋ ಬಿಡಿಸಿರುವುದು, ಇವಾಗ ಅದು banner , ಹಾಗು board ಪೇಂಟಿಂಗ್ ಮಾಡುವವರು ಬಿಡಿಸಲು ಹೋಗಿ, ಅವರ ಕೃತಿ ಚೌರ್ಯ ಆಗುತ್ತಿದೆ ಅಂತ,, ನನಗಂತೂ ಅವರು ಯಾವ ಅರ್ಥ ದಲ್ಲಿ ಹೇಳುತ್ತಲಿದ್ದರೋ ಗೊತ್ತಿಲ್ಲ... ಇದರ ಬಗ್ಗೆ ಪ್ರತಿಕ್ರಿಯಿಸಬೇಕು ಅಂತ ಇದ್ದೆ, ಆದರೆ ಆಗಲಿಲ್ಲ...but ನನಗೆ ಅನ್ನಿಸುವ ಪ್ರಕಾರ ಇದು ಒಂದು ಒಳ್ಳೆಯ ಪ್ರಯತ್ನ,,,ಒಂದು ಒಳ್ಳೆ ಕೆಲಸ,,, ಸುಮ್ಮನೆ ಹಾಳು ವಾಲ್ ಪೋಸ್ಟ್ ನಿಂದ ಹಾಳಾಗುತ್ತಿದ್ದ ಗೋಡೆಗಳು,, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳಿಂದ ಕಂಗೊಳಿಸುತ್ತ ಇವೆ... ಹಾಗೆ ಎಸ್ಟೋ ಜನ ಚಿಕ್ಕ ಚಿಕ್ಕ ಕಲಾವಿದರು ಇದರ ಉಪಯೋಗ ಪಡೆದುಕೊಂಡು, ತಮ್ಮ ಪ್ರತಿಭೆಯನ್ನು ಅನುಭವವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಹಾಯವಾಗಿದೆ...BBMP ನವರು ಪೇಯಿಂಟ್, ಬ್ರುಶ್, ಎಲ್ಲ ಕೊಟ್ಟು, ದಿನಕ್ಕೆ ಇಷ್ಟು ಅಂತ ದುಡ್ಡು ಬೇರೆ ಕೊಟ್ಟು,, ಬರೆಯಲು ಅವಕಾಶ ಕೊಟ್ಟಿದ್ದಾರೆ....ಇದು ಒಳ್ಳೆಯದಲ್ಲವೇ ?

ಕೆಲವು ದಿನಗಳ ಹಿಂದೆ ಇದರ ಬಗ್ಗೆ ನನ್ನ ಬ್ಲಾಗಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದೆ, ಆದರೆ ಫೋಟೋ ಸಮೇತ ಹಾಕಿ ಅಂತ ಕೆಲವರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದರು, ತುಂಬ ದಿನಗಳಿಂದ ಎಲ್ಲ ಚಿತ್ರಗಳ ಫೋಟೋ ತೆಗೆದು ಹಾಕಬೇಕು ಅಂತ ಅನ್ಕೊತಾ ಇದ್ದೆ ಆದರೆ ಅವಕಾಶ ಸಿಕ್ಕಿರಲಿಲ್ಲ... ಮೊನ್ನೆ, ಆಫೀಸ್ ನಲ್ಲಿ ಏನೋ event ಇದೆ ಅಂತ ನನ್ನ ಕ್ಯಾಮೆರಾ ತೆಗೆದು ಕೊಂಡು ಹೋಗ್ತಾ ಇರಬೇಕಾದರೆ ಮೆಜೆಸ್ಟಿಕ್ ಸುತ್ತ ಮುತ್ತ ಸಿಕ್ಕ ಕೆಲವು ಫೋಟೋಗಳನ್ನು ತೆಗೆದಿದ್ದೇನೆ,, ಇದೆಲ್ಲ ಹಾಗೆ ಕಾರ್ ನಲ್ಲಿ ಹೋಗ್ತಾ ಇರಬೇಕಾದರೆ ತೆಗೆದಿದ್ದು,,,, professional ಕ್ಯಾಮೆರಾ ತರ ತೆಗೆದಿಲ್ಲ.. ಏನು ಅನ್ಕೋ ಬೇಡಿ....

ಹೊರದೇಶದಲ್ಲಿ ಇರುವ ಕನ್ನಡಿಗರಿಗೆ ನಮ್ಮ ಬೆಂಗಳೂರಿನ ಬೆಳವಣಿಗೆ ನೋಡಲು ಅನುಕೂಲ ವಾಗಲಿ ಅಂತ ಎಲ್ಲರ ಜೊತೆ ಹಂಚಿಕೊಳ್ತಾ ಇದ್ದೇನೆ ಅಸ್ಟೇ...

Thank you BBMP ,, ನಿಮ್ಮ ಇಂಥ ಹೊಸ ಪ್ರಯತ್ನಕ್ಕೆ........ ಹೀಗೆ ಮುಂದುವರಿಸಿ,, ಮತ್ತೆ,, ನಮ್ಮ ಹೆಮ್ಮೆಯ ಬೆಂಗಳೂರಿನ ಸೌಂದರ್ಯವನ್ನು ಹೆಚ್ಚಿಸಿ....!!!
 







Friday, April 10, 2009

ನೀವು ಕೂಡ ನಂಬಲೇ ಬೇಕು......!!!!! amezing artist..


















ಇ ಮೇಲಿನ ಚಿತ್ರ ನೋಡಿದರೆ ನಿಮಗೆ ಏನ್ ಅನ್ನಿಸುತ್ತೆ, ಇದು ಯಾವುದಾದರು ಒಂದು ಫೋಟೋ ನಲ್ಲಿ ತೆಗೆದಿರುವ ಫೋಟೋನ ಅಥವ ಯಾರಾದರು ಬಿಡಿಸಿರುವ ಪೇಂಟಿಂಗ್ ಚಿತ್ರಣನ? ನೋಡಿ ನೋಡಿ,, ,,, ಸರಿಯಾಗಿ ನೋಡಿ......
.
.
.

?
ಗೊತ್ ಆಯ್ತಾ ಏನ್ ಇದು ಅಂಥ, ಫೋಟೋನ ಅಥವ ಪೇಂಟಿಂಗ್ ಅ?

ಸರಿ ಗೊತ್ತಾಗಲಿಲ್ವಾ.. ಇದನ್ನ ನೋಡಿ ಹೇಳಿ.. ಇವಗ್ಲಾದ್ರು ಗೊತ್ ಆಯ್ತಾ? ........

ಹಾಂ ಹೌದ್ರಿ .....ಇದು ನಿಜವಾಗ್ಲೂ ಪೇಂಟಿಂಗ್ ಗೆ ...... ನಿಜವಾಗಲು ನಂಬೋಕೆ ಕಷ್ಟ ಆಗ್ತಿರಬೇಕು ಅಲ್ವ.. ಇಸ್ಸ್ಟು realistic ಆಗಿ ಯಾರಪ್ಪ ಪೇಯಿಂಟ್ ಮಾಡ್ತಾರೆ ಅಂಥ ? ಹೌದು ಕೆಳಗೆ ನೋಡಿ,,,,,,


ಇವರ ಹೆಸರು :- Iman Maleki ..



ಹುಟ್ಟಿದು :- 1976 ರ ರಲ್ಲಿ, Teheran ಎಂಬ ಉರಿನಲ್ಲಿ....



ಇತ ಚಿಕ್ಕವರಿರಬೇಕದ್ರೆ ಪೇಂಟಿಂಗ್ ಬಗ್ಗೆ ತುಂಬ ಆಸಕ್ತಿ ಹೊಂದಿದ್ದರು... ಅವಗ್ಲಿಂದನೆ ಪೇಂಟಿಂಗ್ ಗೀಳು ಬೆಳೆಸಿಕೊಂಡ ಇವರು, ತನ್ನ 15 ನೆ ವಯಸಿನಲ್ಲಿ, ಇರಾನ್ ಮತ್ತೆ ಈ worldna
greatest realist painter " Morteza Katouzian" ಎಂಬುವರ ಹತ್ತಿರ ಪೇಂಟಿಂಗ್ ಅನ್ನು ಕಲಿತುಕೊಂಡರು. ಅಲ್ಲಿಂದ ಮುಂದೆ ,, ಇವರ ಎಲ್ಲ ಕಲಾಕೃತಿಗಳು ದೇಶ ವಿದೇಶ ಗಳಲ್ಲಿ ಪ್ರದಶನ ಗೊಳ್ಳುತ್ತ ಬಂದಿದೆ. ಇವಾಗ ಇವರೊಬ್ಬ ಈ worldna ಫೇಮಸ್ realist painter ಆಗಿದ್ದಾರೆ ,
"
The most important exhibition to date was the “Exhibition of Realist painters of Iran” in the Contemporary Museum of Art in Teheran(1999) and the “Group Exhibition of KARA Studio Painters” in the SABZ galerie(1998) and the SA'AD ABAD Palace(2003) "



ಎಷ್ಟು real ಆಗಿ natural ಆಗಿ ಇದೆ ಅಲ್ವ ಫೋಟೋಗಳು...... ಇನ್ನು ನೋಡಿ ಆನಂದಿಸಬೇಕೆ ಇವರ ಅದ್ಬುತ ಕಲಾ ಕೃತಿಗಳನ್ನ ....... ಹಾಗಾದರೆ ನೋಡಿ ಕೆಳಗೆ..........

ಇದು ನಿಜವಾಗ್ಲೂ ಯಾವುದೊ ಹಳೇ ಕಾಲದ ಫೋಟೋ ತರಹ ಇದೆ ಅಲ್ವ.......





background ಎಫೆಕ್ಟ್ ನ ಇಷ್ಟು deep ಆಗಿ, ಬಿಡಿಸೋಕೆ ಆಗುತ್ತ?


ಇದು ನಿಜವಾಗಲು... amezing....... ಯಾವುದೊ ordinari ಕ್ಯಾಮೆರಾದಲ್ಲಿ ಫೋಟೋ ತೆಗೆದ ಹಾಗಿದೆ... ಅಲ್ವ ?



ಏನ್ ಅದ್ಭುತ ವಾಗಿ ಇದೆ ...... ಈ ಹುಡುಗಿಯರು ಯಾವುದೊ ಫೋಟೋನ ನೋಡ್ತಾ ಇದ್ದರೆ,,, ಅವರ ಭಾವ ,, facial expression, ಕೆಳಗೆ ಬಿದ್ದಿರುವುದು ಫೋಟೋಸ್ ಅಲ್ಲ,,, ಅದು ಕೂಡ ಪೇಂಟಿಂಗ್!!!!!!!!




ಈ ಚಿತ್ರ ನೋಡಿ... ಮರ ಗಿಡಗಳ ನೆರಳು ಕೂಡ ಎಷ್ಟು ಚೆನ್ನಾಗಿ ಮೂಡಿ ಬಂದಿದೆ ಅಲ್ವ......





ನನಗೆ ಏನು ವರ್ಣಿಸುವುದಕ್ಕೆ ಬರ್ತಾ ಇಲ್ಲ,,, ನಿಮಗೆ ಏನಾದ್ರು ತೋಚಿದರೆ ಈ ಫೋಟೋ ಅಲ್ಲ ಅಲ್ಲ.... ಕಲಾಕೃತಿ ಬಗ್ಗೆ ಸ್ವಲ್ಪ ಬರೀರಿ.......



ವಾಹ್ ..... ಅಸ್ಟೆ ಹೇಳೋಕೆ ಆಗೋದು ನನ್ ಕಡೆ ಇಂದ......






ಈ ಫೋಟೋನ ಕ್ಲಿಕ್ ಮಾಡಿ, ದೊಡ್ಡದು ಮಾಡಿ ನೋಡಿರಿ..... ಗುಬ್ಬಚಿ ಯಾ ಫೋಟೋಗಳು...ವಾಹ್ ಅದ್ಭುತ ........





ಪರದೆ ಒಳಗಿನಿಂದ ಬರುವ ಎಲೆ ಬಿಸಿಲು ಕೂಡ ಇಷ್ಟು real ಆಗಿ ಇರಲ್ವೇನೋ......






ಅಬ್ಬ ....... ಫೋಟೋ ಮತ್ತೆ ಪೇಂಟಿಂಗ್ ನಲ್ಲಿ ಯಾರದ್ರು ಆಸಕ್ತಿ ಇದ್ದರೆ ....ಇಲ್ಲಿ ಇರುವ techniques ಅಂಡ್ talent ನ ಸ್ವಲ್ಪ ನಮಗೂ ತಿಳಿಸಿ ಹೇಳಿ..... i am surrender to Iman Maleki ".... You really proved your self as worlds greatest realistic painter sir….. Hats of you……