Wednesday, December 23, 2009

ಬಣ್ಣ ಬಣ್ಣದ ಬೆಡಗಿನ ಬೆಂಗಳೂರು ನೋಡಿದ್ದೀರಾ.....!!!

  ನಮ್ಮ ಬೆಂಗಳೂರಿಗೆ ಎಸ್ಟೊಂದ್ ಹೆಸರಿದೆ ಅಲ್ವ... ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ, ಹವಾನಿಯಂತ್ರಿತ ನಗರ, ಹೀಗೆ ಎಸ್ಟೊಂದು ಹೆಸರು ನಮ್ಮ ಬೆಂದಕಾಳೂರಿಗೆ, ಅದಕ್ಕೆ ಹೊಸ ಸೇರ್ಪಡೆ, ಬಣ್ಣದ ನಗರ ಅಥವ color full city ಅಂತ ಕರೆದರೆ ತಪ್ಪಾಗಲಾರದೇನೋ... ಯಾಕೆ ಅಂತೀರಾ..... ಯಾಕಂದ್ರೆ, ನಮ್ಮ ಬೆಂಗಳೂರಿನ ಗೋಡೆಗಳ ಮೇಲೆಲ್ಲಾ ಚೆಂದದ ಚೆಲುವಿನ, ಚಿತ್ರಗಳನ್ನು BBMP ನವರು ಬಿಡಿಸುವುದಕ್ಕೆ ಅವಕಾಶ ಮಾಡಿ ಕೊಟ್ಟು, ಒಳ್ಳೆಯ ಕೆಲಸ ಮಾಡಿದ್ದಾರೆ, ಇದರಿಂದ ಬೆಂಗಳೂರಿನ ಎಸ್ಟೋ ಗೋಡೆಗಳು, ಬಣ್ಣ ಬಣ್ಣದ ಚಿತ್ರಗಳಿಂದ ಹೊಳೆಯುತ್ತ ಮನಸೂರೆ ಗೊಳ್ಳುತ್ತಿದೆ, ಸ್ವಲ್ಪ ದಿನದ ಕೆಳಗೆ, ಕೆಟ್ಟ ಕೆಟ್ಟ ಫಿಲಂ ವಾಲ್ ಪೋಸ್ಟ್ ನಿಂದ, ಅರ್ದಂಬರ್ದ ಹರಿದ , ಗಲೀಜು ಗಲೀಜಾಗಿ ಕಾಣಿಸುತ್ತಿದ್ದ advertisement ಪೋಸ್ಟ್ ನಿಂದ ಎಲ್ಲ ಗೋಡೆಗಳು, ನೋಡುವುದಕ್ಕೆ ಆಗ್ತಾ ಇರಲಿಲ್ಲ . ಆದರೆ ಇವಾಗ,,,,,,ಬಣ್ಣ ಬಣ್ಣದ ಚಿತ್ರಗಳು,, ಅದರಲ್ಲೂ ಕರ್ನಾಟಕದ ಪ್ರಸಿದ್ದ ಪ್ರವಾಸಿ ತಾಣಗಳ, ಹಾಗು ಕರ್ನಾಟಕದ ಪರಂಪರೆಯನ್ನು ಬಿಂಬಿಸುವ ಚಿತ್ರಗಳು, ಎಷ್ಟು ಚೆನ್ನಾಗಿ ಇರುತ್ತೆ ಗೊತ್ತ...


ಆದರೆ ಇದು ಎಷ್ಟು ದಿನ ಬಾಳಿಕೆ ಬರುತ್ತದೆ ಎಂಬುದೇ ಪ್ರಶ್ನೆ,, ಇದನ್ನು ಚೆನ್ನಾಗಿ , ಗಲೀಜು ಮಾಡದೇ ಇಟ್ಟುಕೊಳ್ಳುವುದು ನಮ್ಮ ಬೆಂಗಳೂರಿಗರ ಮುಂದೆ ಇದೆ.... ಇನ್ನು ಮುಂದಾದರು ಕಂಡ ಕಂಡ ಗೋಡೆಗಳ ಮುಂದೆ ಒಂದ ಮಾಡುತ್ತ , ಉಗಿಯುತ್ತ , ಗಲೀಜು ಮಾಡುವುದನ್ನು ಬಿಟ್ಟು, ಇಂಥ ಒಳ್ಳೆಯ ಪ್ರಯತ್ನವನ್ನ ಸಾರ್ತಕ ಗೋಳಿಸ ಬೇಕಾಗಿದೆ . ಅಲ್ವ..

ನನಗೆ ಗೊತ್ತಿರುವ ಪ್ರಕಾರ ಇಂಥ ಒಂದು ಒಳ್ಳೆಯ ಪ್ರಯತ್ನ ಬೆಂಗಳೂರಿನಲ್ಲೇ ಮೊದಲು ಅಂತ ಕಾಣುತ್ತೆ... ಇದಕ್ಕೆ ನಿಜವಾಗಲು BBMP ರವರನ್ನು ಅಭಿನಂದಿಸಬೇಕು , ಆದರೆ ಇದರ ಬಗ್ಗೆ ಕೆಲವು ಅಪಸ್ವರಗಳು ಕೇಳಿಬಂದಿದ್ದವು,, ಯಾರೋ ಒಬ್ಬರು ವಿಜಯಕರ್ನಾಟಕದಲ್ಲಿ ಒಂದು article ಬರೆದಿದ್ದರು. ಹೀಗೆ ಕನ್ನಡ ಕಂಡ ಕಡೆ ಪೇಯಿಂಟ್ ಮಾಡುವುದರಿಂದ ಕೃತಿ ಚೌರ್ಯ ಉಂಟಾಗಿದೆ ಅಂತ.. ಅವರು ಹೇಳಿರುವ ಪ್ರಕಾರ ಕೆಲವೊಂದು ಚಿತ್ರಗಳು ಯಾರೋ ಬಿಡಿಸಿರುವುದು, ಇವಾಗ ಅದು banner , ಹಾಗು board ಪೇಂಟಿಂಗ್ ಮಾಡುವವರು ಬಿಡಿಸಲು ಹೋಗಿ, ಅವರ ಕೃತಿ ಚೌರ್ಯ ಆಗುತ್ತಿದೆ ಅಂತ,, ನನಗಂತೂ ಅವರು ಯಾವ ಅರ್ಥ ದಲ್ಲಿ ಹೇಳುತ್ತಲಿದ್ದರೋ ಗೊತ್ತಿಲ್ಲ... ಇದರ ಬಗ್ಗೆ ಪ್ರತಿಕ್ರಿಯಿಸಬೇಕು ಅಂತ ಇದ್ದೆ, ಆದರೆ ಆಗಲಿಲ್ಲ...but ನನಗೆ ಅನ್ನಿಸುವ ಪ್ರಕಾರ ಇದು ಒಂದು ಒಳ್ಳೆಯ ಪ್ರಯತ್ನ,,,ಒಂದು ಒಳ್ಳೆ ಕೆಲಸ,,, ಸುಮ್ಮನೆ ಹಾಳು ವಾಲ್ ಪೋಸ್ಟ್ ನಿಂದ ಹಾಳಾಗುತ್ತಿದ್ದ ಗೋಡೆಗಳು,, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳಿಂದ ಕಂಗೊಳಿಸುತ್ತ ಇವೆ... ಹಾಗೆ ಎಸ್ಟೋ ಜನ ಚಿಕ್ಕ ಚಿಕ್ಕ ಕಲಾವಿದರು ಇದರ ಉಪಯೋಗ ಪಡೆದುಕೊಂಡು, ತಮ್ಮ ಪ್ರತಿಭೆಯನ್ನು ಅನುಭವವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಹಾಯವಾಗಿದೆ...BBMP ನವರು ಪೇಯಿಂಟ್, ಬ್ರುಶ್, ಎಲ್ಲ ಕೊಟ್ಟು, ದಿನಕ್ಕೆ ಇಷ್ಟು ಅಂತ ದುಡ್ಡು ಬೇರೆ ಕೊಟ್ಟು,, ಬರೆಯಲು ಅವಕಾಶ ಕೊಟ್ಟಿದ್ದಾರೆ....ಇದು ಒಳ್ಳೆಯದಲ್ಲವೇ ?

ಕೆಲವು ದಿನಗಳ ಹಿಂದೆ ಇದರ ಬಗ್ಗೆ ನನ್ನ ಬ್ಲಾಗಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದೆ, ಆದರೆ ಫೋಟೋ ಸಮೇತ ಹಾಕಿ ಅಂತ ಕೆಲವರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದರು, ತುಂಬ ದಿನಗಳಿಂದ ಎಲ್ಲ ಚಿತ್ರಗಳ ಫೋಟೋ ತೆಗೆದು ಹಾಕಬೇಕು ಅಂತ ಅನ್ಕೊತಾ ಇದ್ದೆ ಆದರೆ ಅವಕಾಶ ಸಿಕ್ಕಿರಲಿಲ್ಲ... ಮೊನ್ನೆ, ಆಫೀಸ್ ನಲ್ಲಿ ಏನೋ event ಇದೆ ಅಂತ ನನ್ನ ಕ್ಯಾಮೆರಾ ತೆಗೆದು ಕೊಂಡು ಹೋಗ್ತಾ ಇರಬೇಕಾದರೆ ಮೆಜೆಸ್ಟಿಕ್ ಸುತ್ತ ಮುತ್ತ ಸಿಕ್ಕ ಕೆಲವು ಫೋಟೋಗಳನ್ನು ತೆಗೆದಿದ್ದೇನೆ,, ಇದೆಲ್ಲ ಹಾಗೆ ಕಾರ್ ನಲ್ಲಿ ಹೋಗ್ತಾ ಇರಬೇಕಾದರೆ ತೆಗೆದಿದ್ದು,,,, professional ಕ್ಯಾಮೆರಾ ತರ ತೆಗೆದಿಲ್ಲ.. ಏನು ಅನ್ಕೋ ಬೇಡಿ....

ಹೊರದೇಶದಲ್ಲಿ ಇರುವ ಕನ್ನಡಿಗರಿಗೆ ನಮ್ಮ ಬೆಂಗಳೂರಿನ ಬೆಳವಣಿಗೆ ನೋಡಲು ಅನುಕೂಲ ವಾಗಲಿ ಅಂತ ಎಲ್ಲರ ಜೊತೆ ಹಂಚಿಕೊಳ್ತಾ ಇದ್ದೇನೆ ಅಸ್ಟೇ...

Thank you BBMP ,, ನಿಮ್ಮ ಇಂಥ ಹೊಸ ಪ್ರಯತ್ನಕ್ಕೆ........ ಹೀಗೆ ಮುಂದುವರಿಸಿ,, ಮತ್ತೆ,, ನಮ್ಮ ಹೆಮ್ಮೆಯ ಬೆಂಗಳೂರಿನ ಸೌಂದರ್ಯವನ್ನು ಹೆಚ್ಚಿಸಿ....!!!
 







26 comments:

  1. ಗುರು,
    BBMPಯ ಒಳ್ಳೆ ಕೆಲಸ....
    ಮೊನ್ನೆ ಬೆಂಗಳೂರಿಗೆ ಹೋದಾಗ ಸಿಟಿ ಎಲ್ಲ ನೋಡಲು ಆಗಲಿಲ್ಲ....ನೀವು ತೋರಿಸಿದ್ದಕ್ಕೆ ಧನ್ಯವಾದಗಳು....
    ಹೀಗೆ ಮುಂದುವರೆಯಲಿ....
    ಚೆನ್ನಾಗಿದೆ ಬರಹ......

    ReplyDelete
  2. ಗುರು,

    ನೀವು ಹಾಕಿದ ಫೋಟೊಗಳನ್ನು ಮತ್ತೆ ನೋಡಿ ಖುಷಿಯಾಯ್ತು. ಮೊದಲು ಒಂದೆರಡು ಕಡೆ ಬರೆದಾಗ ನಾನು ಕ್ಯಾಮೆರ ತೆಗೆದುಕೊಂಡು ಹೋಗಿ ಕ್ಲಿಕ್ಕಿಸಿದ್ದೆ. ನನ್ನ ಬಳಿಯೂ ಸುಮಾರು ಫೋಟೊಗಳಿವೆ. ಅದರ ಬಗ್ಗೆ ವಿಭಿನ್ನವಾಗಿ ಬರೆಯೋಣವೆಂದುಕೊಂಡೆ. ಆದ್ರೆ ಆಷ್ಟರಲ್ಲಿ ಎಲ್ಲ ದಿನಪತ್ರಿಕೆಗಳಲ್ಲಿ ಇದರ ಬಗ್ಗೆ ಬರೆದಾಗ ಇದೇನು ವಿಶೇಷ ವಿಚಾರವಾಗಲ್ಲಿಲ್ಲವೆಂದು ಹಾಗೆ ಬಿಟ್ಟೆ. ಸದ್ಯ ನಮ್ಮ ಮನೆಯ ಮೇಲಿನ ರಸ್ತೆಯ ಶಾಲೆಯ ಮೇಲೂ ಚಿತ್ರಗಳಿವೆ. ಅವುಗಳನ್ನು ದಿನಾ ನೋಡುತ್ತಾ ಖುಷಿಪಡುತ್ತೇನೆ.
    ನಾನಂದುಕೊಂಡಿದ್ದನ್ನು ನೀವು ಮಾಡಿದ್ದೀರಿ..ಅದಕ್ಕಾಗಿ ಧನ್ಯವಾದಗಳು.

    ReplyDelete
  3. ಗುರು...

    ನಿಮ್ಮ ಹುಡುಕಾಟಕ್ಕೆ ನನ್ನ ಅಭಿನಂದನೆಗಳು...

    ಬೆಂಗಳೂರು ಮಹಾನಗರ ಪಾಲಿಕೆಯವರ ಈ ಕೆಲಸ ತುಂಬಾ ಒಳ್ಳೆಯದು..

    ನಾನಂತೂ ದಿನಾಲೂ ಹೋಗುವಾಗ ಈ ಚಿತ್ರಗಳನ್ನು ಮನದಣಿಯೇ ನೋಡುವೆ...

    ಇವೆಲ್ಲವನ್ನೂ ಸೆರೆ ಹಿಡಿದು ನಮಗೆಲ್ಲ ತೋರಿಸಿದ ನಿಮಗೆ ಮತ್ತೊಮ್ಮೆ ಅಭಿನಂದನೆಗಳು...

    ReplyDelete
  4. ಹೌದು ಗುರು. ಕಲರ್ಫುಲ್ ಸಿಟಿ ಎಂದರೆ ತಪ್ಪಿಲ್ಲ.
    ಈಗ ಬೆಂಗಲೂರಿಗೆ ಹೊಸ ಕಳೆ ಬಂದಹಾಗಿದೆ.
    ಚಿತ್ರಗಳು ನಶಿಸಿಹೋಗದೇ ಇದ್ದರೆ ಇನ್ನೂ ಸಂತೋಷ.
    ಒಳ್ಳೊಳ್ಳೆಯ ಚಿತ್ರಗಳನ್ನು ತೋರಿಸಿದ್ದಕ್ಕೆ ಧನ್ಯವಾದ.

    ReplyDelete
  5. ಗುರು,
    ನಾನು ಕೂಡ ನಿಮ್ಮ ಹಾಗೆ ಈ ಗೊದೆಚಿತ್ರಗಳನ್ನು ನೋಡಿ ಖುಷಿ ಪತ್ತೆ. ಚೆನ್ನಾಗಿವೆ. ಬೆ೦ಗಳೋರಿಗೆ ಹೊಸ ರೂಪ ಬ೦ದಿದೆ. ಸಿನಿಮಾ ಪೋಸ್ಟರುಗಳಿ೦ದ ಕೆಟ್ಟು ಕೆರ ಹಿಡಿದಿದ್ದ ಕಾ೦ಪೌ೦ಡ್ ಗೋಡೆಗಳಿಗೆ ಕಾಯಕಲ್ಪ ವನ್ನು ನೀಡುವ ಮೂಲಕ ಬಿ.ಬಿ.ಎ೦.ಪಿ. ಶ್ಲಾಘನೀಯ ಕೆಲಸ ಮಾಡಿದೆ. ಆದರೆ ಇನ್ನೊ೦ದು ವರುಷದ ಒಳಗಾಗಿ ಜನರ ಅಪಸವ್ಯಗಳಿ೦ದ, ವಿಸರ್ಜನೆ ಗಳಿ೦ದ ಈ ಚಿತ್ರಗಳಿಗೆ ಒದಗಬಹುದಾದ ಗತಿ ನೆನೆದಾಗ ಖೇದವೆನಿಸುತ್ತದೆ.

    ReplyDelete
  6. ವಾಹ್!!! ಸೂಪರ್ ಬೆಂಗಳೂರು ಬಣ್ಣದ ನಗರಿ ತುಂಬಾ ಇಷ್ಟವಾಯಿತು. ಈ ಕಲೆಯನ್ನು ಸಾರ್ವಜನಿಕರು ಉಳಿಸಿ ಬೆಳಸಲಿ.

    ReplyDelete
  7. Hello Guru,

    Everyone are so happy for doing this to BLR. But somewhere I feel its too late to do all these things.. Tech is much farther now. BLR is booming in that. Probably I would have felt nice if this was done 10 yrs back.. But hats off to you for taking time to get picz and to post it.. Nice effort.. And nimma Kannada Abhimanakke naa sada Abhimani . Your collegue and Corner House group friend

    ReplyDelete
  8. Guru its a nice collection you have taken, Bengalooru is shining!! rich heritage and cultural land. We should be proud to be an Indian and Bangalorean... Jai karnataka maate..... Pramod Nadig....

    ReplyDelete
  9. ಗುರು ಅವ್ರೆ ನಿಮ್ಮನ್ನ ನೋಡಿ ತುಂಬಾ ದಿನ ಆಯ್ತು ನಮಸ್ಕಾರ, ಫೋಟೋಗಳು ತುಂಬಾನೇ ಚೆನ್ನಾಗಿ ಬಂದಿದೆ, ನಮ್ಮ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆಲಸವೂ ಅಚ್ಚುಕಟ್ಟಾಗಿದೆ , ಆದ್ರೆ ಅದನ್ನು ವರುಷಗಳ ತನಕ ಬಾಳಿಸ ಬೇಕಾದ್ದು ಅದರ ಜವಾಬ್ದಾರಿ, ಆದ್ರೆ ಮುಂದೊಂದು ದಿನ ಈ ಚಿತ್ತಾರಗಳ ಗೋಡೆಯನ್ನೇ ಅಭಿವೃದ್ದಿಯ ಹೆಸರಿನಲ್ಲಿ ಕೆದವಿಬಿಡ್ತಾರೆ.

    ReplyDelete
  10. guru,,, . really superb allvaaa,,
    neevu photo tegedirodu sahaa tumbha chennagide,,

    ReplyDelete
  11. ಸವಿಗನಸು,,
    ನಾನೇನು, ಎಲ್ಲ ಬೆಂಗಳೂರು ತೋರಿಸಿಲ್ಲ ಸರ್,, ಏನೋ ಹೋಗ್ತಾ ಇರಬೇಕಾದರೆ ಕಣ್ಣಿಗೆ ಕಾನಿಸಿದ್ದನ್ನು ಕ್ಲಿಕ್ ಕಿಸಿದ್ದೇನೆ ಅಸ್ಟೇ .
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ....

    ReplyDelete
  12. ಶಿವೂ,
    ಹೌದು,, ನಾನು wait ಮಾಡ್ತಾ ಇದ್ದೆ .. ನೀವು ಇದರಬಗ್ಗೆ ನಿಮ್ಮ ಫೋಟೋಗಳ ಮೂಲಕ ಒಂದು ಬರಹ ಹಾಕುತ್ತಿರೆಂದು, ಎಲ್ಲೊ ಹೇಳಿದ್ದರಲ್ವ, ಚಿತ್ರ ಬಿಡಿಸುವವರ ಹತ್ರನು ಮಾತಾಡಿ ಮಾಹಿತಿ ಪಡೆದುಕೊಂಡು ಇದ್ದೇನೆ ಅಂತ,. ಯಾಕೆ ಹಾಕಲಿಲ್ಲ...ನನಗೆ ಹಾಗೆ ಹೋಗ್ತಾ ಇರಬೇಕಾದರೆ ಕೆಲವೊಂದು ಚಿತ್ರಗಳನ್ನು ತೆಗೆದುಕೊಂಡೆ, ಅದನ್ನ ಶೇರ್ ಮಾಡಿಕೊಳ್ಳ ಬೇಕು ಅಂತ ಹಾಕಿದ್ದೇನೆ ಅಸ್ಟೇ...

    ReplyDelete
  13. ಧನ್ಯವಾದಗಳು ಪ್ರಕಾಶಣ್ಣ,,,

    ReplyDelete
  14. ಹೌದು ರಾಜೀವ,,, ಇಂದು ಒಂದು ವರುಷ ಚೆನ್ನಾಗಿ ನಶಿಸದೆ ಉಳಿದರೆ... ಅದೇ ನಮ್ಮ ಪುಣ್ಯ, ಅಲ್ವ .

    ReplyDelete
  15. ಪರಾಂಜಪೆ,,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....ಚೆನ್ನಾಗಿ ಇರುತ್ತೆ, ಇಂಥ ಒಳ್ಳೆ ಪೇಂಟಿಂಗ್ ನೋಡ್ತಾ ದಾರಿನಲ್ಲಿ ಹೋಗ್ತಾ ಇದ್ರೆ ಅಲ್ವ...ಎಷ್ಟು ಬಾಳಿಕೆ ಬರುತ್ತೆ ಎಂಬುದೇ ಪ್ರಶ್ನೆ

    ReplyDelete
  16. ಮನಸು,,,
    ಹೌದು, ಇದನ್ನು ಉಳಿಸಿ, ಬೆಳೆಸುವ ಜವಾಬ್ದಾರಿ, ಎಲ್ಲ ಬೆಂಗಳೂರಿಗರ ಮೇಲೆ ಇದೆ ..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  17. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಮೋದ್..

    ReplyDelete
  18. ನಮಸ್ತೆ ಉಮೇಶ್,
    ಹೌದು,, ಕೆಲವು ದಿನಗಳಿಂದ ಒತ್ತಡದ ಕಾರಣದಿಂದಾಗಿ,, ನನ್ನ ಬ್ಲಾಗನ್ನು ಅಪ್ಡೇಟ್ ಮಾಡಿರಲಿಲ್ಲ.... ನಿಮ್ಮ ಕಾಳಜಿ ಪೂರ್ವ ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  19. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮಹೇಶ್,,

    ReplyDelete
  20. ಧನ್ಯವಾದಗಳು ಶಿವೂ,,,

    ReplyDelete
  21. ತುಂಬಾ ಅಂದವಾಗಿದೆ ಸರ್.. :) ನಿಮ್ಮ ತಾಳ್ಮೆಗೆ ನನ್ನ ವಂದನೆಗಳು ... :)ಬೆಂಗಳೂರು ಇನ್ನಷ್ಟು ಅಂದವಾಗಿ ಕಾಣುತಿದೆ :)ಹೊಸ ವರ್ಷದ ಶುಭಾಶಯಗಳು ಸರ್ :)

    ReplyDelete
  22. ಪ್ರಾಮಾಣಿಕ ಬರಹ..ಚೆ೦ದದ ಛಾಯಾಚಿತ್ರಗಳು..
    ಹೊಸ ವರ್ಷದ ಶುಭಾಶಯಗಳು.

    ReplyDelete
  23. ಧನ್ಯವಾದಗಳು snow ವೈಟ್....:-) ನಿಮಗೂ ಹೊಸ ವರ್ಷದ ಶುಭಾಶಯಗಳು

    ReplyDelete
  24. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಚುಕ್ಕಿ ಚಿತ್ತಾರರವರೆ , ನಿಮಗೂ ಹೊಸ ವರ್ಷದ ಶುಭಾಶಯಗಳು . ಹೀಗೆ ಬರುತ್ತಿರಿ....

    ReplyDelete