Showing posts with label dance. Show all posts
Showing posts with label dance. Show all posts

Tuesday, October 22, 2019

ಚಿತ್ರಕೂಟ ಶಾಲೆಯ "ಚಿತ್ರ ಕಥಾ"






ಚಿತ್ರಕೂಟ ಶಾಲೆಯ "ಚಿತ್ರ ಕಥಾ"

ನಮಸ್ಕಾರ

ಚಿತ್ರಕೂಟ ಶಾಲೆಯ ಸ್ಕೂಲ್ ಡೇ ಕಾರ್ಯಕ್ರಮವು ಅತ್ಯದ್ಭುತವಾಗಿ ಮೂಡಿಬಂದಿತ್ತು..

ಚಿತ್ರಕೂಟ ಶಾಲೆಯು ಬೆಳೆದು ಬಂದ 15ವರ್ಷಗಳ ಮೆಲಕು ಇದನ್ನೇ ಥೀಮ್ ಆಗಿ ಇಟ್ಟುಕೊಂಡು "ಚಿತ್ರ ಕಥಾ" ಎಂಬುವ ಸ್ಕೂಲ್ ಡೇ ಕಾರ್ಯಕ್ರಮವು ಬಹಳ ಅದ್ದೂರಿ ತನದಿಂದ, ತುಂಬಾ ಅರ್ಥಗರ್ಭಿತವಾಗಿ ಯಶಸ್ವಿಯಾಗಿ ನೆರವೇರಿತು...

ನನಗೆ ಚಿತ್ರಕೂಟ ಶಾಲೆ ಇಷ್ಟವಾಗುವುದು ಇಂತಹ ಪ್ರಯೋಗಗಳಿಂದ... ನನ್ನ ಪ್ರತಿ ಬಾರಿ ಇಂತಹ ಅದ್ಭುತ ಕಾರ್ಯಕ್ರಮಗಳನ್ನು ಯಾವ ಕಾರಣದಿಂದಲೂ ಮಿಸ್ ಮಾಡಿಕೊಳ್ಳುವುದಿಲ್ಲ... ಇದನ್ನು ನಾನು ಒಂದು ರಂಗಪ್ರಯೋಗ ಎಂದರೂ ಕೂಡ ಅತಿಶಯೋಕ್ತಿಯಾಗಲಾರದು....

ನನ್ನ ಮಗ ಈ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಇದ್ದಾನೆ ಈ ಸ್ಕೂಲ್ ಡೇ ಕಾರ್ಯಕ್ರಮ ಇದ ದ್ದು ಇದೇ ಭಾನುವಾರ 2:00 ಗಂಟೆಗೆ.. ಸುಮಾರುಎರಡು ಗಂಟೆಗಳ ಕಾರ್ಯಕ್ರಮ ಇದಾಗಿದ್ದು ... ಅತಿ ಅದ್ಭುತವಾಗಿ ಮೂಡಿಬಂದಿತ್ತು, ಬಂದಿದ್ದ ಎಲ್ಲಾ ಮಕ್ಕಳ ತಂದೆ-ತಾಯಿಯರು ಸಹ ತದೇಕಚಿತ್ತದಿಂದ ಕಾರ್ಯಕ್ರಮವನ್ನು ನೋಡಿ, ಅದರಲ್ಲಿ ಅಡಗಿರುವ ಅಥವ ತಿಳಿಸಿ ಹೇಳುತ್ತಿರುವ ಪ್ರಸಕ್ತ ವಿದ್ಯಮಾನಗಳ ಕನ್ನಡಿಯನ್ನು ನೋಡಿ ,ತಮ್ಮನ್ನು ತಾವೇ ಪ್ರಶ್ನಿಸಿಕೊಂಡು ವಿಮರ್ಶೆ ಮಾಡುವುದಕ್ಕೆ ಕಾರಣವಾಯಿತು...

ಪ್ರತಿಯೊಂದು ಹಂತದಲ್ಲೂ ಕೂಡ ಈ ಕಾರ್ಯಕ್ರಮದ ಹಿಂದಿರುವ ಕಾಳಜಿ, ವಹಿಸಿರುವ ಶ್ರಮ, ಶ್ರದ್ಧೆ ಹಾಗೂ ಅದಕ್ಕೆ ಪೂರಕವಾಗಿ ಅಚ್ಚುಕಟ್ಟಾಗಿ ಎಲ್ಲವನ್ನೂ ನಿಭಾಯಿಸಿದ ರೀತಿ ನಿಜಕ್ಕೂ ಶ್ಲಾಘನೀಯ..

ಡಾಕ್ಟರ್ ಕಶ್ಯಪ್ ಇವರು ಇರುತ್ತಾರೆ ಎಂದರೆ ಅಲ್ಲಿ ಏನಾದರೂ ಒಂದು ಸಾಮಾಜಿಕ ಕಳಕಳಿಯ ಸಾಂದರ್ಭಿಕ ಚಿತ್ರಣಗಳು ಹಾಗೂ ನೆರೆದಿರುವ ಪ್ರೇಕ್ಷಕರನ್ನು ವಿಮರ್ಶೆಗೆ ಒಳಪಡಿಸುವ ಒಂದು ಅದ್ಭುತವಾದ ಮೆಸೇಜ್ ಇರುತ್ತದೆ... ನನ್ನ ಊಹೆ ಕೂಡ ಸರಿಯಾಗಿತ್ತು .

" ಹೊತ್ತಿಗೆಯ ಹೊತ್ತು" ಕಂಪ್ಯೂಟರ್ ಮೊಬೈಲ್ ಫೋನ್ ತರಹೇವಾರಿ ಆಪ್ ಗಳು ಟಿವಿಗಳು ಎಡಬಿಡದೆ ಬರುತ್ತಿರುವ ಲೈವ್ ಶೋಗಳು, ಈ ಎಲ್ಲಾ ಕಾರಣಗಳಿಂದ ಪುಸ್ತಕಗಳನ್ನು ಓದುವವರ ಸಂಖ್ಯೆ ನಿಜವಾಗು ಕಮ್ಮಿಯಾಗುತ್ತಿದೆ, ಇದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಲವೊಂದು ವರ್ಗ ಮಾತ್ರ ಪುಸ್ತಕಗಳನ್ನು ಪ್ರೀತಿಸಿ ಓದುತ್ತಿದ್ದಾರೆ... ಇದರ ಬಗ್ಗೆ ಬೆಳಕು ಚೆಲ್ಲುವ ಒಂದು ಅದ್ಭುತ ಕಲ್ಪನೆಯ " ಹೊತ್ತಿಗೆಯ ಹೊತ್ತು" ರಂಗ ಪ್ರಯೋಗ ತುಂಬಾ ಚೆನ್ನಾಗಿತ್ತು, ಚಿಕ್ಕ ಮಕ್ಕಳು ಮಾಡಿರುವ ಪ್ರತಿಯೊಂದು ಭಾಗ ಅಥವಾ ಪ್ರತಿಯೊಂದು ಪಾತ್ರ ನಮ್ಮನ್ನು ನಾವೇ ಪ್ರಶ್ನಿಸುವ ಹಾಗೆ ಮಾಡಿತ್ತು.

ಹರಿಕಥಾ ಪ್ರ ಸಹನ ದಿಂದ ಶುರುವಾಗುವ ನಾಟಕ ಸಿಂಡ್ರೆಲಾ, ಕ್ರಿಸ್ಮಸ್ ತಾತ, ತೇಜಸ್ವಿಯವರ ಮಂದಣ್ಣ, ಮಾಸ್ತಿಯವರ ಮೊಸರಿನ ಮಂಗಮ್ಮ ಇಂತಹ ಅದ್ಭುತ ಪಾತ್ರಗಳನ್ನು ನಾವುಗಳು ಓದದೆ ನಿರ್ಲಕ್ಷಿಸಿ ಅವುಗಳ ಬಣ್ಣ ಕಳೆದು ಕೊಳ್ಳುವ ಹಾಗೆ ಮಾಡುತ್ತಿರುವ ನಮ್ಮತನವನ್ನು ಪ್ರಶ್ನಿಸಿಕೊಳ್ಳುವ ಸಮಯವನ್ನು ತಿಳಿಹೇಳಿ ಹೇಳಿತು...  ಪುಸ್ತಕದ ಹುಳ  ಕೂಡ ಚಿತ್ರಗಳುಳ್ಳ ಪುಸ್ತಕಗಳು ಬೇಕು ... ಅದು ಯಾಕೆ ಅದನ್ನು ಕೇಳ್ತಾ ಇದೆ ಅಂತ ಪೂರ್ತಿ ನಾಟಕ ನೋಡಿದರೆ ಗೊತ್ತಾಗುವುದು.

ಇದಕ್ಕೆ ಪೂರಕವಾಗಿ ಅಂತರ್ಜಾಲ ಹಾಗೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ರೀತಿ ಅದ್ಭುತ ಕಲ್ಪನೆ ರಂಗಪ್ರಯೋಗ... ಚಿಕ್ಕ ಮಕ್ಕಳಾದಿಯಾಗಿ ಎಲ್ಲಾ ಪಾತ್ರಗಳಿಗೆ ಭಾವತುಂಬಿ ನಟಿಸಿದ ಚಿಕ್ಕಮಕ್ಕಳಿಗೆ ಅನಂತ ಧನ್ಯವಾದಗಳು... ಇದರ ಹಿಂದಿನ ಶಕ್ತಿ ಡಾಕ್ಟರ್ ಕಶ್ಯಪ್ ಅವರಿಗೆ ಅನಂತ ನಮನಗಳು....

ಈ ಕಾರ್ಯಕ್ರಮದ ನಿರೂಪಣೆಯನ್ನು ಇಬ್ಬರು ಪುಟಾಣಿ ಮಕ್ಕಳು ನಡೆಸಿಕೊಟ್ಟರು ಅಬ್ಬಾ ಎಂತಹ ವಾಕ್ಚಾತುರ್ಯ ಹಾಗೂ ಕಾರ್ಯಕ್ರಮ ನಡೆಸಿಕೊಡುವ ರೀತಿ ಅದ್ಭುತ...

ಮಹೇಶ್ ಪ್ರಿಯದರ್ಶಿನಿ ಹಾಗೂ ಮತ್ತೊಬ್ಬ ಸಂಗೀತ ಟೀಚರ್ ರಾಗ ಸಂಯೋಜಿಸಿ ಚಿತ್ರಕೂಟದ ಚಿತ್ರ ಕಥ ಇದರ ಒಂದು ಕವನ ಅಥವಾ ಪದ್ಯ ಅಥವಾ ಹಾಡು ಹಾಗು ಅದಕ್ಕೆ  ಅತಿ ಸಂಯಮದಿಂದ ಚಿಕ್ಕಮಕ್ಕಳನ್ನು ನಾಚಿಸುವಂತೆ ನಟಿಸಿ ಡ್ಯಾನ್ಸ್ ಮಾಡಿ ಅನುಭವಿಸಿದ ಚಿತ್ರಕೂಟದ ಶಿಕ್ಷಕ /ಶಿಕ್ಷಕಿ ವೃಂದದವರಿಗೆ ಒಂದು ಅದ್ಭುತ ಅಭಿನಂದನೆಗಳು ಹಾಗೂ ಚಪ್ಪಾಳೆ ಎದ್ದುನಿಂತು ಕೊಡಬೇಕು.

ಮುಂದೆ ಮಹೇಶ್ ಅವರು ಸಂಯೋಜನೆ ಮಾಡಿದ ದೇಶಭಕ್ತಿ ಅಥವಾ ದೇಶಪ್ರೇಮ ನೆನಪಿಸುವ ಸುಮಧುರ ಗೀತೆಯನ್ನು ಹತ್ತಾರು ಮಕ್ಕಳು ಒಟ್ಟಿಗೆ ಹಾಡುತ್ತಿರುವಾಗ... ನಿಜವಾಗಲೂ ಮೈ ರೋಮಾಂಚನವಾಯಿತು ಅದ್ಭುತ ಪ್ರಯೋಗ...

ಇದರ ಮಧ್ಯದಲ್ಲಿ ಪೋಷಕರು ಹಾಗೂ ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ಹಾಗೂ ಪೋಷಕರು ಮತ್ತು ಮಕ್ಕಳು ಹೀಗೆ ಸಮಾಜದಲ್ಲಿ ಇರಬೇಕು ಎನ್ನುವ ಬಗ್ಗೆ ಬಂದ ತುಣುಕುಗಳು ನಮ್ಮನ್ನು ನಾವು ತಿದ್ದಿಕೊಂಡು ಸರಿ ಮಾಡಬೇಕು ಎಂದು ಒಂದು ಸಣ್ಣ ವಧೆ ಕೊಟ್ಟಹಾಗೆ ನಡೆದು ಬಂತು... ನಮ್ಮ ದೈನಂದಿನ ಪ್ರತಿಯೊಬ್ಬರ ಬದುಕಿನಲ್ಲೂ ಕೂಡ ಕೆಲಸ ಹಾಗೂ ಕನ್ನಡ ನಿಜವಾಗಿಯೂ ಕೂಡ ನಮ್ಮ ಮಕ್ಕಳಬಗ್ಗೆ ಕಾಳಜಿ ವಹಿಸುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಹುಟ್ಟಿಹಾಕಿತ್ತು... ದುಡ್ಡು ಇದೆ ಎಂದ ಮಾತ್ರಕ್ಕೆ ನಾವು ಚೆನ್ನಾಗಿ ಖರ್ಚು ಮಾಡುತ್ತಿದ್ದೇವೆ ಅದರಿಂದ ನಮ್ಮ ಮಕ್ಕಳು ಒಳ್ಳೆಯವರಾಗಿ ಬೆಳೆಯುತ್ತಾರೆ ಎಂಬ ಅವಿವೇಕತನದಿಂದ ಮೌಲ್ಯಯುತ ಹಾಗೂ ಜವಾಬ್ದಾರಿಯುತ ಸಣ್ಣಪುಟ್ಟ ಕೆಲಸ ಕಾರ್ಯಗಳನ್ನು ನಾವು ಕಾಳಜಿ ವಹಿಸದೆ ಅದರ ಅದರ ಮೌಲ್ಯ ತಿಳಿಸಿ ಹೇಳದೆ ನಮಗೆ ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ಬೆಳೆಸಿಕೊಂಡು ಬಂದಿರುತ್ತೇವೆ.. ಇದರ ಬಗ್ಗೆ ಮೂಡಿಬಂದ ನಾಟಕ ಹಾಗೂಚಿಕ್ಕ ಮಕ್ಕಳು ಮಾಡಿದ ಪ್ರಯೋಗ ಅತಿ ಅದ್ಭುತವಾಗಿ ಮೂಡಿಬಂತು.

ಇದಾರೆ ಜೊತೆಗೆ ದೇಶದ  ಸೈನ್ಯದ ಒಂದು ಪ್ರಯೋಗ ಅದ್ಭುತವಾಗಿ ನೆರೆದಿರುವ ಎಲ್ಲರನ್ನು ಮನರಂಜಿಸಿತು...   ಎಲ್ಲದರಲ್ಲೂ ಪುಟ್ಟ ಮಕ್ಕಳ ಅದ್ಬುತ ನಾಟ್ಯ ಹಾಗು ನಾಟಕ... ಮೂಗಿನ ಮೇಲೆ ಬೆರಳಿಟ್ಟು ನೋಡುವ ಹಾಗೆ ಮಾಡಿತು...

ಕೊನೆಯಲ್ಲಿ ಮೂರನೇ ತರಗತಿಯ ಮಕ್ಕಳು ನಡೆಸಿಕೊಟ್ಟ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಪುಣ್ಯಕೋಟಿ ನಾಟ್ಯ ಪ್ರಯೋಗ ಅತಿ ಅದ್ಭುತವಾಗಿ ಮೂಡಿಬಂತು ಹಾಗೆ ಕುಳಿತಿರುವವರ ಕಣ್ಣಂಚಿನಲ್ಲಿ ನೀರನ್ನು ಕೂಡ ತರಿಸಿತು..

ನಿನಗೆ ನಿಜವಾಗಲೂ ಕೂಡ ಯಾವುದೋ ಒಂದು ಲೈವ್ ಕಾಂಟೆಸ್ಟ್ ಅಥವಾ ಒಂದು ರಂಗಭೂಮಿಯ ಮಧ್ಯದಲ್ಲಿ ಇದ್ದೀನಿ ಅಂತ ಅನಿಸಿತು ಸ್ಕೂಲ್ ಡೇ ಇವೆಂಟ್. ಇದು ಒಂದು ತರಹ ಚಿತ್ರಕೂಟ ಫ್ಯಾಮಿಲಿ ಇವೆಂಟ್ ತರ ಇತ್ತು... ಈ ಹದಿನೈದು ವರ್ಷಗಳಲ್ಲಿ ಶ್ರಮಿಸಿದ ಎಲ್ಲರನ್ನೂ ನೆನೆದು ಚಿತ್ರಕೂಟ ಶಾಲೆ ಬೆಳೆದು ಬಂದ ಪ್ರತಿಯೊಂದು ಹಂತವನ್ನು ಜವಾಬ್ದಾರಿಯುತವಾಗಿ ಹೇಳಿ ಮುಂದಿರುವ ಸವಾಲುಗಳನ್ನು ತಿಳಿಸಿ ಒಂದು ರಚನಾತ್ಮಕ ಪ್ರಯೋಗವಾಗಿ ಸ್ಕೂಲ್ ಡೇ ಈವೆಂಟ್ ಅನ್ನು ಆಯೋಜಿಸಿದ ರೀತಿಗೆ ನಮ್ಮೆಲ್ಲರ ಸಹಮತ ಸಹಕಾರ ಇದ್ದೇ ಇರುತ್ತದೆ.

ಇಂತಹ ಪ್ರಯೋಗಗಳಿಂದ ಚಿತ್ರಕೂಟ ಶಾಲೆಯ ಜವಾಬ್ದಾರಿಗಳು ಇನ್ನೂ ಹೆಚ್ಚುತ್ತ, ಭವಿಷ್ಯದಲ್ಲಿ ಇನ್ನೂ ಹೆಚ್ಚು ಹೆಚ್ಚು ಇದೇ ರೀತಿ ಹೊಸತರದ ಪ್ರಯೋಗಗಳನ್ನು ರೂಪಿಸ ಬೇಕಾದ ಜವಾಬ್ದಾರಿಯನ್ನು ಚಿತ್ರಕೂಟ ಶಾಲೆಯು ತನ್ನ ಮೇಲೆ ಹೊರಿಸಿ ಕೊಂಡಿದೆ



" ಹೊತ್ತಿಗೆಯ ಹೊತ್ತು"  ನಾಟಕ 






ಚಿತ್ರಕಥಾ ...ಹಾಡಿಗೆ ರಾಗ ಸಂಮಯೋಜಿಸಿದ ಮಹೇಶ್.. 
 ಎಲ್ಲ ಶಿಕ್ಷಕ ವೃಂದದ ನಾಟ್ಯ....







 ಪ್ರಸ್ತುತ ವಿದ್ಯಮಾನಗಳ ... ಮಕ್ಕಳ ಹಾಗು ಪೋಷಕರ ಜವಾಬ್ದಾರಿ ನೆನಪಿಸುವ ಒಂದು ಅರ್ಥ ಗರ್ಭಿತ  ನಾಟಕ...














 ಎಲ್ಲ ಕಾರ್ಯಕ್ರಮಗಳ ಹಿಂದಿನ ರೂವಾರಿಗಳಾದ ...ಡ್ಯಾನ್ಸ್ ಟೀಚರ್ಸ್......

















Sunday, January 27, 2019

ಸ್ನೇಹಾಂಜಲಿ - ಚಿತ್ರ ಕೂಟ ಶಾಲೆಯ ಪುಟ್ಟ ಮಕ್ಕಳ ಶಾಲಾ ವಾರ್ಷಿಕೋತ್ಸವ...





ಸ್ನೇಹಾಂಜಲಿ ಚಿಕ್ಕ ಚಿಕ್ಕ ಮಕ್ಕಳ ಚೊಕ್ಕ ವಾದ ಅರ್ಥಪೂರ್ಣ ಕಾರ್ಯಕ್ರಮ.. ಚಿತ್ರಕೂಟ ಸ್ಕೂಲ್ ಇವರ ಶಾಲಾ ವಾರ್ಷಿಕೋತ್ಸವ ಸಮಾರಂಭವೇ ಸ್ನೇಹಾಂಜಲಿ ಕಾರ್ಯಕ್ರಮ..



ಇಲ್ಲಿ ಬರೀ ಪುಟ್ಟ ಪುಟ್ಟ ಮಕ್ಕಳ ... ಅಂದರೆ ನರ್ಸರಿ ಯುಕೆಜಿ ಹಾಗು ಎಲ್ ಕೆ ಜಿ ಈ ಮಕ್ಕಳ ಕಾರ್ಯಕ್ರಮಗಳು ಆಯೋಜಿತವಾಗಿತ್ತು...



ಮೊದಲಿಗೆ ರಾಷ್ಟ್ರಕವಿ ಕುವೆಂಪು ರವರ ಒಂದು ಅದ್ಭುತ ಕವನದ ಹಾಡಿಂದ ಮೊದಲುಗೊಂಡು ಕಾರ್ಯಕ್ರಮ ಶುರುವಾಯಿತು... ಚಿತ್ರಕೂಟ ಶಾಲೆಯ ದೊಡ್ಡ ಮಕ್ಕಳು ನಡೆಸಿಕೊಟ್ಟ ಸೂಫಿ ಡ್ಯಾನ್ಸ್ ತುಂಬಾ ಚೆನ್ನಾಗಿ ಮೂಡಿ ಬಂತು. ಬಿಳಿ ಶ್ವೇತವಸ್ತ್ರ ದೊಂದಿಗೆ ಅಚ್ಚುಕಟ್ಟಾಗಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ..ಚಿತ್ರಕೂಟ ಶಾಲೆಯ ಮಕ್ಕಳು ಅತಿ ಅದ್ಭುತವಾಗಿ ನಾಟ್ಯವನ್ನು ಪ್ರದರ್ಶಿಸಿದರು..



ನನ್ನ ಮನಸ್ಸಿಗೆ ಹಾಗು ಆಡಿಟೋರಿಯಂನಲ್ಲಿ ನೆರೆದಿದ್ದ ಎಲ್ಲಾ ತಂದೆ-ತಾಯಿಯರಿಗೆ ಇಷ್ಟವಾಗುವ ಹಾಗೂ ಆಶ್ಚರ್ಯಕರ ಎನಿಸುವ ಒಂದು ಕಾರ್ಯಕ್ರಮ... "ಬಹಳ ಒಳ್ಳೆಯವರು ನಮ್ಮ ಮಿಸ್ಸು" ಈ ಹಾಡನ್ನು ನಾವು ಚಿಕ್ಕವರಾಗಿದ್ದಾಗ ಕೇಳಿರುತ್ತೇವೆ... ಇದೇ ಹಾಡಿಗೆ ಚಿಕ್ಕಮಕ್ಕಳ ರೀತಿಯಲ್ಲಿ ರೆಡಿಯಾಗಿ ಪ್ರಿ ಪ್ರೈಮರಿ ಸ್ಕೂಲಿನ ಎಲ್ಲಾ ಟೀಚರ್ ಗಳು, ಚಿಕ್ಕಮಕ್ಕಳ ರೀತಿಯ ಯೂನಿಫಾರಂ ಹಾಕಿಕೊಂಡು ನಡೆಸಿಕೊಟ್ಟ ಒಂದು ಅದ್ಭುತವಾದ ಕಾರ್ಯಕ್ರಮ... ಇಂತಹ ಕ್ರಿಯೇಟಿವಿಟಿಗೆನಾನು ಚಿತ್ರಕೂಟ ಶಾಲೆಗೆ ಯಾವಾಗಲೂ ಧನ್ಯವಾದ ಹೇಳುವುದು... ಪ್ರತಿ ಸ್ಕೂಲ್ ಡೇ ನಲ್ಲಿ ಚಿಕ್ಕ ಮಕ್ಕಳ ಜೊತೆಗೆ ಟೀಚರ್ ಗಳು ಕೂಡ ತಮ್ಮ ಅಭಿನಯ ನಾಟ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಭೆಗೆ ಮೆರಗು ತಂದಿರುತ್ತಾರೆ, ಅದೇ ರೀತಿ ಈ ಸಲವೂ ಕೂಡ ಅತಿ ಅದ್ಭುತ ಎನ್ನುವಂಥ ಈ ಸುಂದರ ಒಂದು ಪುಟ್ಟ ಕಾರ್ಯಕ್ರಮ ಎಲ್ಲರ ಮನ ಕಣ್ಮನ ಸೆಳೆಯಿತು..... ಬಹಳ ಒಳ್ಳೆಯವರು ನಮ್ ಮಿಸ್ಸು ಈ ಹಾಡನ್ನು ಎಲ್ಲರೂ ಕೂಡ ಏಕಚಿತ್ತದಿಂದ ನೋಡುತ್ತಾ ಟೀಚರ್ ಗಳು ಚಿಕ್ಕ ಮಕ್ಕಳ ರೀತಿ ಮಾಡಿದ ಅಭಿನಯಿಸಿದ ನಾಟ್ಯವನ್ನು ತುಂಬಾ ಚೆನ್ನಾಗಿ ಆಸ್ವಾದಿ ಸಿದರು.



ಇದಾದ ನಂತರ ನರ್ಸರಿ ಎಲ್ ಕೆ ಜಿ ಮಕ್ಕಳ ಪುಟ್ಟ ಪುಟ್ಟ ಹೆಜ್ಜೆಗಳಿಂದ ಕೂಡಿದ ಪ್ರತಿಯೊಂದು ಕಾರ್ಯಕ್ರಮವು ಅದ್ಭುತವಾಗಿತ್ತು .



ಇದರಲ್ಲಿ ಇನ್ನೊಂದು ಬಹಳ ಮುಖ್ಯವಾದ ವಿಷಯವನ್ನು ಹೇಳಬೇಕು, ಚಿಕ್ಕ ಮಕ್ಕಳ ಕೈಯಲ್ಲಿ ಡ್ಯಾನ್ಸ್ ಅನ್ನು ಆಡಿಸುವುದೇ ಕಷ್ಟ ಹಾಗಿದ್ದಲ್ಲಿ ಯುಕೆಜಿ ಮಕ್ಕಳ ಕೈಯಲ್ಲಿ ಒಂದು ಅದ್ಭುತವಾದ ಪಂಚತಂತ್ರದ ಕತೆಯನ್ನು ನಿರೂಪಣೆ ಮಾಡಿ ಅಂತಹ ಒಂದು ಒಳ್ಳೆ ಯಾ ಪ್ರಯೋಗವನ್ನು ಕೊಟ್ಟ ಚಿತ್ರಕೂಟ ಸ್ಕೂಲಿನ ಎಲ್ಲಾ ಶಿಕ್ಷಕ ವೃಂದದವರಿಗೆ ನಿಜವಾದ ನಮನ ಸಲ್ಲಬೇಕು... ಬೃಂದಾ ಮೇಡಂ ಹಾಗೂ ಕಶ್ಯಪ್ ಸರ್( ವಿಜಯನಗರ ಬಿಂಬ) ಇವರ ಮಕ್ಕಳು ಧ್ವನಿಯನ್ನು ಜೋಡಿಸಿದ ರೀತಿ, ಆ ಪುಟ್ಟ ಮಕ್ಕಳು ಅದ್ಭುತವಾಗಿ ನಾಟಕವನ್ನು ಪ್ರಸ್ತುತಃ ಮಾಡಿ ರೀತಿ ... ಅಬ್ಬಾ.... ನಿಜಕ್ಕೂ ಒಂದು ಒಳ್ಳೆಯ ಅದ್ಭುತವಾದ ಪ್ರಯೋಗ... ಇವಾಗಿಲಿಂದಲೇ ಚಿಕ್ಕ ಮಕ್ಕಳಲ್ಲಿ ನಾಟಕ.. ಅಭಿನಯ...ಇದನ್ನು ರೂಢಿಸಿ ... ಅದಕ್ಕೆ ಒಂದು ಒಳ್ಳೆಯ ವೇದಿಕೆಯನ್ನು ಚಿತ್ರಕೂಟ ಶಾಲೆ ಕೊಡುತ್ತ ಇದೆ... 4 ಚಿಕ್ಕ ಪಂಚತಂತ್ರ ಕಥೆಗಳು.. ಹಾಗು ಅದರ ನಿರೂಪಣೆಯಾ ಕಾರ್ಯಕ್ರಮ ನಿಜವಾಗಲೂ ಎಲ್ಲರ ಕಣ್ಮನ ಸೆಳೆದು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿತು....



ನಾಟಕಕ್ಕೆ ಹಾಗೂ ಕಥೆಗೆ ಪ್ರಾಮುಖ್ಯತೆ ಕೊಡುತ್ತಿರುವ ಚಿತ್ರಕೂಟ ಸ್ಕೂಲಿನ ಎಲ್ಲಾ ಉಪಾಧ್ಯ ವೃಂದದವರಿಗೆ ಹಾರ್ದಿಕ ನಮನಗಳು.



ನನ್ನ ಮಗಳ ಒಂದು ಪುಟ್ಟ ಡ್ಯಾನ್ಸ್ ಕೂಡ ಅದ್ಭುತವಾಗಿ ಮೂಡಿಬಂತು ಚಿಕ್ಕ ಮಕ್ಕಳು ಏನು ಮಾಡಿದರೂ ಚೆಂದ.. ಅದರಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಒಂದೊಂದು ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ ನೋಡುವುದೇ ಒಂದು ಮಹದಾನಂದ..



ಇದೆಲ್ಲಕ್ಕಿಂತ ಮುಖ್ಯವಾಗಿ .. ಚೈತನ್ಯ ಸರ್ ಹಾಗೂ ಜೊಯೀತ ಮೇಡಂ ಅವರ ಅದ್ಭುತ ಮಾತುಗಳು... ಸ್ಪೂರ್ತಿದಾಯಕ ಮಾತುಗಳು ಎಲ್ಲರ ಮನಸ್ಸುಗಳನ್ನು ಮತ್ತೆ ಯೋಚಿಸು ವಂತೆ ಮಾಡಿದರು.



ಅದ್ಭುತವಾದ ಸ್ನೇಹಾಂಜಲಿ ಕಾರ್ಯಕ್ರಮ ಚಿಕ್ಕದಾಗಿ ಚೊಕ್ಕವಾಗಿ ಮೂಡಿ ಬಂತು. ಪುಟ್ಟ ಬಾಲಕಿ ಈ ಕಾರ್ಯಕ್ರಮವನ್ನು ಅದ್ಭುತ ಎನ್ನುವಂತೆ ರೂಪಿಸಿಕೊಟ್ಟರು... ಚಿಕ್ಕಮಕ್ಕಳಿಂದ.. ಚಿಕ್ಕ ಮಕ್ಕಳಿಗಾಗಿಯೇ ಮೂಡಿ ಬಂದ ಈ ಸ್ನೇಹಾಂಜಲಿ ಕಾರ್ಯಕ್ರಮ... ಚಿತ್ರಕೂಟ ಶಾಲೆಯ ಸೊಬಗನ್ನು ಹಾಗೂ ಮೆರಗನ್ನು ಇನ್ನೂ ಹೆಚ್ಚಿಸಿದೆ... ಇದೆ ರೀತಿ ವಿಭಿನ್ನ ಪ್ರಯೋಗಗಳಿಗೆ ಚಿತ್ರಕೂಟ ಶಾಲೆ ಮಾದರಿ ಯಾಗಲಿ.......

Event Photos can be access from here


ಸೂಫಿ ನೃತ್ಯ....







"ಬಹಳ ಒಳ್ಳೆಯವರು ನಮ್ಮ ಮಿಸ್ " ಪ್ರಿ ಪ್ರೈಮರಿ ಸ್ಕೂಲ್ ಟೀಚರ್ ಗಳಿಂದ ಒಂದು ಅದ್ಭುತವಾದ ... ಕ್ರಿಯೇಟಿವ್ ಆಗಿ ಮೂಡಿ ಬಂಡಾ ಒಂದು ಡ್ಯಾನ್ಸ್ .....














ಚಿಕ್ಕ ಮಕ್ಕಳ ...ಮುದ್ದು ಮುದ್ದಾದ ಡ್ಯಾನ್ಸ್....   ನರ್ಸರಿ.. LKG  ಹಾಗು UKG  ಮಕ್ಕಳಿಂದ 























ಪಂಚ ತಂತ್ರ ನಾಟಕ...... ಯುಕೆಜಿ ಮಕ್ಕಳಿಂದ.