Sunday, January 27, 2019

ಸ್ನೇಹಾಂಜಲಿ - ಚಿತ್ರ ಕೂಟ ಶಾಲೆಯ ಪುಟ್ಟ ಮಕ್ಕಳ ಶಾಲಾ ವಾರ್ಷಿಕೋತ್ಸವ...

ಸ್ನೇಹಾಂಜಲಿ ಚಿಕ್ಕ ಚಿಕ್ಕ ಮಕ್ಕಳ ಚೊಕ್ಕ ವಾದ ಅರ್ಥಪೂರ್ಣ ಕಾರ್ಯಕ್ರಮ.. ಚಿತ್ರಕೂಟ ಸ್ಕೂಲ್ ಇವರ ಶಾಲಾ ವಾರ್ಷಿಕೋತ್ಸವ ಸಮಾರಂಭವೇ ಸ್ನೇಹಾಂಜಲಿ ಕಾರ್ಯಕ್ರಮ..ಇಲ್ಲಿ ಬರೀ ಪುಟ್ಟ ಪುಟ್ಟ ಮಕ್ಕಳ ... ಅಂದರೆ ನರ್ಸರಿ ಯುಕೆಜಿ ಹಾಗು ಎಲ್ ಕೆ ಜಿ ಈ ಮಕ್ಕಳ ಕಾರ್ಯಕ್ರಮಗಳು ಆಯೋಜಿತವಾಗಿತ್ತು...ಮೊದಲಿಗೆ ರಾಷ್ಟ್ರಕವಿ ಕುವೆಂಪು ರವರ ಒಂದು ಅದ್ಭುತ ಕವನದ ಹಾಡಿಂದ ಮೊದಲುಗೊಂಡು ಕಾರ್ಯಕ್ರಮ ಶುರುವಾಯಿತು... ಚಿತ್ರಕೂಟ ಶಾಲೆಯ ದೊಡ್ಡ ಮಕ್ಕಳು ನಡೆಸಿಕೊಟ್ಟ ಸೂಫಿ ಡ್ಯಾನ್ಸ್ ತುಂಬಾ ಚೆನ್ನಾಗಿ ಮೂಡಿ ಬಂತು. ಬಿಳಿ ಶ್ವೇತವಸ್ತ್ರ ದೊಂದಿಗೆ ಅಚ್ಚುಕಟ್ಟಾಗಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ..ಚಿತ್ರಕೂಟ ಶಾಲೆಯ ಮಕ್ಕಳು ಅತಿ ಅದ್ಭುತವಾಗಿ ನಾಟ್ಯವನ್ನು ಪ್ರದರ್ಶಿಸಿದರು..ನನ್ನ ಮನಸ್ಸಿಗೆ ಹಾಗು ಆಡಿಟೋರಿಯಂನಲ್ಲಿ ನೆರೆದಿದ್ದ ಎಲ್ಲಾ ತಂದೆ-ತಾಯಿಯರಿಗೆ ಇಷ್ಟವಾಗುವ ಹಾಗೂ ಆಶ್ಚರ್ಯಕರ ಎನಿಸುವ ಒಂದು ಕಾರ್ಯಕ್ರಮ... "ಬಹಳ ಒಳ್ಳೆಯವರು ನಮ್ಮ ಮಿಸ್ಸು" ಈ ಹಾಡನ್ನು ನಾವು ಚಿಕ್ಕವರಾಗಿದ್ದಾಗ ಕೇಳಿರುತ್ತೇವೆ... ಇದೇ ಹಾಡಿಗೆ ಚಿಕ್ಕಮಕ್ಕಳ ರೀತಿಯಲ್ಲಿ ರೆಡಿಯಾಗಿ ಪ್ರಿ ಪ್ರೈಮರಿ ಸ್ಕೂಲಿನ ಎಲ್ಲಾ ಟೀಚರ್ ಗಳು, ಚಿಕ್ಕಮಕ್ಕಳ ರೀತಿಯ ಯೂನಿಫಾರಂ ಹಾಕಿಕೊಂಡು ನಡೆಸಿಕೊಟ್ಟ ಒಂದು ಅದ್ಭುತವಾದ ಕಾರ್ಯಕ್ರಮ... ಇಂತಹ ಕ್ರಿಯೇಟಿವಿಟಿಗೆನಾನು ಚಿತ್ರಕೂಟ ಶಾಲೆಗೆ ಯಾವಾಗಲೂ ಧನ್ಯವಾದ ಹೇಳುವುದು... ಪ್ರತಿ ಸ್ಕೂಲ್ ಡೇ ನಲ್ಲಿ ಚಿಕ್ಕ ಮಕ್ಕಳ ಜೊತೆಗೆ ಟೀಚರ್ ಗಳು ಕೂಡ ತಮ್ಮ ಅಭಿನಯ ನಾಟ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಭೆಗೆ ಮೆರಗು ತಂದಿರುತ್ತಾರೆ, ಅದೇ ರೀತಿ ಈ ಸಲವೂ ಕೂಡ ಅತಿ ಅದ್ಭುತ ಎನ್ನುವಂಥ ಈ ಸುಂದರ ಒಂದು ಪುಟ್ಟ ಕಾರ್ಯಕ್ರಮ ಎಲ್ಲರ ಮನ ಕಣ್ಮನ ಸೆಳೆಯಿತು..... ಬಹಳ ಒಳ್ಳೆಯವರು ನಮ್ ಮಿಸ್ಸು ಈ ಹಾಡನ್ನು ಎಲ್ಲರೂ ಕೂಡ ಏಕಚಿತ್ತದಿಂದ ನೋಡುತ್ತಾ ಟೀಚರ್ ಗಳು ಚಿಕ್ಕ ಮಕ್ಕಳ ರೀತಿ ಮಾಡಿದ ಅಭಿನಯಿಸಿದ ನಾಟ್ಯವನ್ನು ತುಂಬಾ ಚೆನ್ನಾಗಿ ಆಸ್ವಾದಿ ಸಿದರು.ಇದಾದ ನಂತರ ನರ್ಸರಿ ಎಲ್ ಕೆ ಜಿ ಮಕ್ಕಳ ಪುಟ್ಟ ಪುಟ್ಟ ಹೆಜ್ಜೆಗಳಿಂದ ಕೂಡಿದ ಪ್ರತಿಯೊಂದು ಕಾರ್ಯಕ್ರಮವು ಅದ್ಭುತವಾಗಿತ್ತು .ಇದರಲ್ಲಿ ಇನ್ನೊಂದು ಬಹಳ ಮುಖ್ಯವಾದ ವಿಷಯವನ್ನು ಹೇಳಬೇಕು, ಚಿಕ್ಕ ಮಕ್ಕಳ ಕೈಯಲ್ಲಿ ಡ್ಯಾನ್ಸ್ ಅನ್ನು ಆಡಿಸುವುದೇ ಕಷ್ಟ ಹಾಗಿದ್ದಲ್ಲಿ ಯುಕೆಜಿ ಮಕ್ಕಳ ಕೈಯಲ್ಲಿ ಒಂದು ಅದ್ಭುತವಾದ ಪಂಚತಂತ್ರದ ಕತೆಯನ್ನು ನಿರೂಪಣೆ ಮಾಡಿ ಅಂತಹ ಒಂದು ಒಳ್ಳೆ ಯಾ ಪ್ರಯೋಗವನ್ನು ಕೊಟ್ಟ ಚಿತ್ರಕೂಟ ಸ್ಕೂಲಿನ ಎಲ್ಲಾ ಶಿಕ್ಷಕ ವೃಂದದವರಿಗೆ ನಿಜವಾದ ನಮನ ಸಲ್ಲಬೇಕು... ಬೃಂದಾ ಮೇಡಂ ಹಾಗೂ ಕಶ್ಯಪ್ ಸರ್( ವಿಜಯನಗರ ಬಿಂಬ) ಇವರ ಮಕ್ಕಳು ಧ್ವನಿಯನ್ನು ಜೋಡಿಸಿದ ರೀತಿ, ಆ ಪುಟ್ಟ ಮಕ್ಕಳು ಅದ್ಭುತವಾಗಿ ನಾಟಕವನ್ನು ಪ್ರಸ್ತುತಃ ಮಾಡಿ ರೀತಿ ... ಅಬ್ಬಾ.... ನಿಜಕ್ಕೂ ಒಂದು ಒಳ್ಳೆಯ ಅದ್ಭುತವಾದ ಪ್ರಯೋಗ... ಇವಾಗಿಲಿಂದಲೇ ಚಿಕ್ಕ ಮಕ್ಕಳಲ್ಲಿ ನಾಟಕ.. ಅಭಿನಯ...ಇದನ್ನು ರೂಢಿಸಿ ... ಅದಕ್ಕೆ ಒಂದು ಒಳ್ಳೆಯ ವೇದಿಕೆಯನ್ನು ಚಿತ್ರಕೂಟ ಶಾಲೆ ಕೊಡುತ್ತ ಇದೆ... 4 ಚಿಕ್ಕ ಪಂಚತಂತ್ರ ಕಥೆಗಳು.. ಹಾಗು ಅದರ ನಿರೂಪಣೆಯಾ ಕಾರ್ಯಕ್ರಮ ನಿಜವಾಗಲೂ ಎಲ್ಲರ ಕಣ್ಮನ ಸೆಳೆದು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿತು....ನಾಟಕಕ್ಕೆ ಹಾಗೂ ಕಥೆಗೆ ಪ್ರಾಮುಖ್ಯತೆ ಕೊಡುತ್ತಿರುವ ಚಿತ್ರಕೂಟ ಸ್ಕೂಲಿನ ಎಲ್ಲಾ ಉಪಾಧ್ಯ ವೃಂದದವರಿಗೆ ಹಾರ್ದಿಕ ನಮನಗಳು.ನನ್ನ ಮಗಳ ಒಂದು ಪುಟ್ಟ ಡ್ಯಾನ್ಸ್ ಕೂಡ ಅದ್ಭುತವಾಗಿ ಮೂಡಿಬಂತು ಚಿಕ್ಕ ಮಕ್ಕಳು ಏನು ಮಾಡಿದರೂ ಚೆಂದ.. ಅದರಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಒಂದೊಂದು ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ ನೋಡುವುದೇ ಒಂದು ಮಹದಾನಂದ..ಇದೆಲ್ಲಕ್ಕಿಂತ ಮುಖ್ಯವಾಗಿ .. ಚೈತನ್ಯ ಸರ್ ಹಾಗೂ ಜೊಯೀತ ಮೇಡಂ ಅವರ ಅದ್ಭುತ ಮಾತುಗಳು... ಸ್ಪೂರ್ತಿದಾಯಕ ಮಾತುಗಳು ಎಲ್ಲರ ಮನಸ್ಸುಗಳನ್ನು ಮತ್ತೆ ಯೋಚಿಸು ವಂತೆ ಮಾಡಿದರು.ಅದ್ಭುತವಾದ ಸ್ನೇಹಾಂಜಲಿ ಕಾರ್ಯಕ್ರಮ ಚಿಕ್ಕದಾಗಿ ಚೊಕ್ಕವಾಗಿ ಮೂಡಿ ಬಂತು. ಪುಟ್ಟ ಬಾಲಕಿ ಈ ಕಾರ್ಯಕ್ರಮವನ್ನು ಅದ್ಭುತ ಎನ್ನುವಂತೆ ರೂಪಿಸಿಕೊಟ್ಟರು... ಚಿಕ್ಕಮಕ್ಕಳಿಂದ.. ಚಿಕ್ಕ ಮಕ್ಕಳಿಗಾಗಿಯೇ ಮೂಡಿ ಬಂದ ಈ ಸ್ನೇಹಾಂಜಲಿ ಕಾರ್ಯಕ್ರಮ... ಚಿತ್ರಕೂಟ ಶಾಲೆಯ ಸೊಬಗನ್ನು ಹಾಗೂ ಮೆರಗನ್ನು ಇನ್ನೂ ಹೆಚ್ಚಿಸಿದೆ... ಇದೆ ರೀತಿ ವಿಭಿನ್ನ ಪ್ರಯೋಗಗಳಿಗೆ ಚಿತ್ರಕೂಟ ಶಾಲೆ ಮಾದರಿ ಯಾಗಲಿ.......

Event Photos can be access from here


ಸೂಫಿ ನೃತ್ಯ...."ಬಹಳ ಒಳ್ಳೆಯವರು ನಮ್ಮ ಮಿಸ್ " ಪ್ರಿ ಪ್ರೈಮರಿ ಸ್ಕೂಲ್ ಟೀಚರ್ ಗಳಿಂದ ಒಂದು ಅದ್ಭುತವಾದ ... ಕ್ರಿಯೇಟಿವ್ ಆಗಿ ಮೂಡಿ ಬಂಡಾ ಒಂದು ಡ್ಯಾನ್ಸ್ .....


ಚಿಕ್ಕ ಮಕ್ಕಳ ...ಮುದ್ದು ಮುದ್ದಾದ ಡ್ಯಾನ್ಸ್....   ನರ್ಸರಿ.. LKG  ಹಾಗು UKG  ಮಕ್ಕಳಿಂದ ಪಂಚ ತಂತ್ರ ನಾಟಕ...... ಯುಕೆಜಿ ಮಕ್ಕಳಿಂದ.


2 comments:

 1. ಒಂದು ಕಾರ್ಯಕ್ರಮದ ಜೀವಾಳ ಅದರ ಪೂರ್ವಸಿದ್ಧತೆ
  ಒಂದು ಕಾರ್ಯಕ್ರಮದ ಯಶಸ್ಸು ಅದರ ನಿರೂಪಣೆ
  ಒಂದು ಕಾರ್ಯಕ್ರಮದ ಜನಪ್ರಿಯತೆ ಅದನ್ನು ಮೆಚ್ಚಿಕೊಂಡು ಬರೆದ ಬರಹ
  ಒಂದು ಕಾರ್ಯಕ್ರಮದ ವಿಶೇಷತೆ ಅದರ ಚಿತ್ರಗಳು

  ಈ ನಾಲ್ಕು ವಿಭಾಗಗಳಲ್ಲಿ ಗೆದ್ದಿರುವ ಈ ಕಾರ್ಯಕ್ರಮಕದ ಆಯೋಜಕರಿಗೆ.. ಸುಂದರವಾಗಿ ಬರಹದಲ್ಲಿ, ಮತ್ತು ಕ್ಯಾಮೆರಾದಲ್ಲಿ ಚಿತ್ರಿಸಿರುವ ನಿಮಗೆ ಅಭಿನಂದನೆಗಳು..

  ಸೂಪರ್ ಗುರು

  ReplyDelete
  Replies
  1. ಧನ್ಯವಾದಗಳು ಶ್ರೀಕಾಂತ್ ಅಣ್ಣ.

   Delete