Thursday, June 28, 2012

ಅಂಕೆ ಗೌಡರ ಪುಸ್ತಕದ ಅಂಗಳ... ಅಂಕೆಗೂ ನಿಲುಕದ ಪುಸ್ತಕಗಳ ಬಂಡಾರ .....


 ಅಂಕೆ ಗೌಡರ ಪುಸ್ತಕದ  ಅಂಗಳ... ಅಂಕೆಗೂ ನಿಲುಕದ ಪುಸ್ತಕಗಳ ಬಂಡಾರ .....

ಸಾದನೆ ಅಂದ್ರೆ ಏನು..... ನಿಜವಾಗ್ಲೂ ನಾವೆಲ್ಲಾ ಅಂದುಕೊಂಡಿದ್ದನ್ನು ಸಾದಿಸಿದ್ದೇವ.....?  ಇ ಒಂದು ಪ್ರೆಶ್ನೆ ನನ್ನ ಮುಂದೆ ಬಂದಿದ್ದು,,, ನಾವೆಲ್ಲಾ ಅಂಕೆ ಗೌಡರ ಪುಸ್ತಕದ ಅಂಗಳದೊಳಕ್ಕೆ ಕಾಲಿಟ್ಟಾಗ..... ಒಬ್ಬೊಬ್ಬರದು ಒಂದೊಂದು ಹವ್ಯಾಸ ಇರುತ್ತೆ.... ಅವರ ಹಾವ್ಯಸದಿಂದ .... ಅವರು ಮಾಡುವ ಸಾದನೆ ಇಂದ... ಸಿಗೋ ಸಂತೋಷ ಇದೆ ಅಲ್ವ ....ವಃ....
ನಾನು ನೋಡಿರುವ ಅಥವಾ ಓದಿರುವ ಮಟ್ಟಿಗೆ... ಜೀವನದಲ್ಲಿ ಒಂದು ಗುರಿ ಅನ್ನು ಇಟ್ಟುಕೊಂಡು... ಜೀವನ ಪೂರ್ತ ಆ ಗುರಿ ಮುಟ್ಟಿ ತಾವು ಅಂದುಕೊಂಡಿದ್ದನ್ನು ಸಾದಿಸಿರುವ ಕೆಲವೇ ಕೆಲವು ಅಗ್ರಮಾನ್ಯರಲ್ಲಿ... ಈ ಅಂಕೆಗೌದರು ಒಬ್ಬರು  ......  
ಅಲ್ಲ ತಮಗಾಗಿ ಏನು ಉಳಿಸಿಕೊಳ್ಳದೆ ಎಲ್ಲವನ್ನು ಪುಸ್ತಕ ಖರೀದಿ  ಮಾಡಿ ಮುಂದಿನ ಪೀಳಿಗೆಗೆ ಹಾಗು ಸುತ್ತ ಮುತ್ತಲಿನ ಹಳ್ಳಿ ಜನರಿಗೆ, ವಿಧ್ಯಾರ್ಥಿ  ಗಳಿಗೆ ಸಿಗಲಿ ಅಂತ ಇಟ್ಟಿದ್ದಾರಲ್ಲ ನಿಜಕ್ಕೂ ಗ್ರೇಟ್.

ಇಂಥಹ ಒಂದು ಅದ್ಬುತ ಲೋಕಕ್ಕೆ ಒಂದು ವಿಸ್ಮಯ ಪ್ರಪಂಚಕ್ಕೆ ಹೋಗುವ ಅವಕಾಶ ನಮ್ಮ ಬ್ಲಾಗಿಗರಿಗೆ ಸಿಕ್ಕಿತ್ತು ...... ಇದಕ್ಕೆ ಅವಕಾಶ ಮಾಡಿಕೊಟ್ಟ ಬಾಲಣ್ಣ ಹಾಗು ಪ್ರಕಾಶಣ್ಣ ಅವರಿಗೆ ನನ್ನ ಅನಂತ  ನಮಸ್ಕಾರಗಳು .....
ಇವರ ಬಗ್ಗೆ ಇವರ ಪುಸ್ತಕ ಪ್ರೀತಿ ಬಗ್ಗೆ ಯೀನೆ ಬರೆದರೂ ಸಾಲದು.... ಇಲ್ಲಿಗೆ ಒಮ್ಮೆ ಹೋಗಿ ಬರಬೇಕು ಅಷ್ಟೇ..... ಅಲ್ಲಿ ಕಳೆದ ಆ 4 ಗಂಟೆಗಳು....ಅವಿಸ್ಮರಣೀಯ..... 
ಇಂತಹ ಪುಸ್ತಕ ಇಲ್ಲ ಅನ್ನುವ ಹಾಗೆ ಇಲ್ಲವೇನೋ... ನಮ್ಮ ಯಾವ ದೊಡ್ಡ ದೊಡ್ಡ ಗ್ರಂಥಾಲಯದಲ್ಲೂ ಇರುವುದಿಲ್ಲವೇನೋ ಅಷ್ಟು  ಪುಸ್ತಕಗಳು..... ಅಬ್ಬ.... ಏನು ಹೇಳೋದು ೨೦೦ ವರುಷ ಹಳೆಯ ಮುದ್ರಣದ ಕೆಲವು ಅಪರೂಪವೆನಿಸುವ ಪುಸ್ತಕಗಳು ಇವರ ಬಳಿ ಇವೆ... ಯಾವ ವಿಷ್ಯದ ಪುಸ್ತಕ ಬೇಕು ನಿಮಗೆ... ಫೋಟೋಗ್ರಫಿ... science  , history ., ಫಿಲಾಸಫಿ , ಮೆಡಿಕಲ್, ಹಳೆಗನ್ನಡ..ಸಂಸ್ಕೃತ, ಹಾಗೆ ಕೆಲವು ಗೆರ್ಮನ್, ಮತ್ತೆ ಫ್ರೆಂಚ್ ಭಾಷೆ ಪುಸ್ತಕಗಳು ಇವರ ಬಳಿ ಇವೆ... ಮೈಸೂರ್ ಮತ್ತೆ ಶ್ರೀರಂಗಪಟ್ಟಣ  ಕ್ಕೆ ಬರುವ ಎಲ್ಲಾ ಅನ್ವೇಷಕರಿಗೂ... ಇಲ್ಲಿನ ಇವರ ಗ್ರಂಥಾಲಯದ ಮಾಹಿತಿಗಳು ಬೇಕೆ ಬೇಕು....
ಇವರ ಬಗ್ಗೆ ಎಷ್ಟು ಬರೆದರೂ ಸಾಲದು.... ಇಂಥ ಅದ್ಬುತ ವ್ಯಕ್ತಿ ನಮ್ಮ ನಡುವೆ ಇದ್ದಾರೆ , ಇವರಿಗೆ ನಮ್ಮಗಳ ಸಹಕಾರ ಅಭಿಮಾನ ಬೇಕಾಗಿದೆ..... ದಯವಿಟ್ಟು ಕೈ ಜೋಡಿಸಿ......ತಮ್ಮ ಜೀವನವನ್ನು ಪುಸ್ತಕಗಳಿಗಾಗಿ ಮುಡಿಪಾಗಿಟ್ಟು,,,  ಇಂತಹ ನಿಸ್ವಾರ್ಥ ಸೇವೆ ಮಾಡುತ್ತಿರುವ ಅಂಕೆಗೌದರಿಗೆ.. ನಮ್ಮ  ಸಹಕಾರ ಸಿಗುವಂತಾಗಲಿ......

ಅಲ್ಲಿನ ಕೆಲವು ಚಿತ್ರಗಳನು ಹಾಕಿದ್ದೇನೆ... ನೀವೇ ನೋಡಿ.... 

ವಿಳಾಸ  
ಶ್ರೀ ಅಂಕೆ ಗೌಡ ಜ್ಞಾನ ಪ್ರತಿಷ್ಠಾನ [ರಿ] 
ಪುಸ್ತಕದ ಮನೆ
ವಿಶ್ವೇಶ್ವರ ನಗರ
ಹರಳ ಹಳ್ಳಿ
ಪಾಂಡವಪುರ ತಾಲೂಕು
ಮಂಡ್ಯ - 571434
ದೂರವಾಣಿ :  9242844934 ,9242844206



ಪುಸ್ತಕಗಳ  ಭಂಡಾರ   


 ಇದು ಜ್ಞಾನ ದೇಗುಲ 




 ಅಂಕೆ ಗೌಡರು 
 1800 ಇಸವಿಯ ಮುದ್ರಣದ ಪುಸ್ತಕಗಳು 

ಚಿಣ್ಣರಿಗಾಗಿ ಅದ್ಬುತ ಪುಸ್ತಕಗಳ ಲೋಕ್ಹವೇ ಇಲ್ಲಿ ಇದೆ 


 ಅಂಕೆ ಗೌಡರಿಗೆ ನಮ್ಮ ಬ್ಲಾಗಿಗರ ಪರವಾಗಿ ಚಿಕ್ಕ ಸನ್ಮಾನ 


 ಅಂಕೆ ಗೌಡರ ಎಲ್ಲ ಸಾದನೆಗಳಲ್ಲು ಜೊತೆಗೆ ಇರುವ ಅವರ ಧರ್ಮ ಪತ್ನಿ...


 ಬಜ್ಜಿಗರ ಗ್ರೂಪ್ 

 ಮೊಟ್ಟ ಮೊದಲ ಸುಧಾ ಪತ್ರಿಕೆ 

Saturday, May 5, 2012

ತಲೆ ಕೂದಲಿನಲ್ಲೇ ಅರಳುವ ಕಲೆ......

ಹೆಣ್ಣಿಗೆ ಕೇಶ ರಾಶಿನೇ ಒಂದು ಸೌಂದರ್ಯ ..... ತನ್ನ ತಲೆ ಕೂದಲನ್ನು ಎಷ್ಟು ತರ ಕಟ್ ಮಾಡಿಸಿಕೊಂಡು ಹೈರ್ ಸ್ಟೈಲ್ ಮಾಡ್ಕೊತಾರೆ ಅಲ್ವ....
ಆದರೆ ಇಲ್ಲಿ ನೋಡಿ,, ಅದೇ ಕೂದಲು ಒಬ್ಬ ಕಲಾವಿದನ ಕೈಗೆ ಸಿಕ್ಕಿ ಹೇಗೆ ಅದರಲ್ಲೇ ಒಂದು ಕಲೆ ಯಾಗಿ ಅರಳಿದೆ ಅಂತ.....     


ಹೌದು ಇದು ಒರಿಜಿನಲ್ ನೆಕ್ಲೆಸ್ ಅಲ್ಲ... ಕೂದಲಿನ ನೆಕ್ಲೆಸ್ ..... 


ಕೂದಲಿನ Embroidery ವರ್ಕ್ 

ಕೂದಲಿನ ಮೆಟ್ಟಿಲು...



        ಮನುಷ್ಯನ ತಲೆ ಕುದಲಿಂದ ಮಾಡಿರುವ Gate of Heavenly Peace in Beijing ನ ಮಾಡೆಲ್ 

54 ಜನರ ತಲೆ ಕೂದಲನ್ನು ಬಳಸಿ. ೧ ಮಿಲಿಯನ್ ಮೀಟರ್ ನಿಂದ ಮಾಡಿರುವ ಸ್ವೆಟರ್ 


                                             ಎಲೆಯ Sculptures ಅನ್ನು  ತಲೆ ಕೂದಲಿನಿಂದ ಮಾಡಿರುವುದು   




                                                   ಹೆಡ್ ಫೋನ್ ಕೂಡ,,, ಕೂದಲಿನಿಂದ ಮಾಡಿರುವುದು...


ಬಣ್ಣದ ಡ್ರೆಸ್ ಮಾಡಿರುವುದು  250 yards ಆಫ್ human hair  

Thursday, March 15, 2012

ಬುದ್ದ ಶಾಂತಿ ಕಣಿವೆ,...... Buddha Park

ಬುದ್ದ ಶಾಂತಿ ಕಣಿವೆ,......
ಬುದ್ದ ಶಾಂತಿ ಕಣಿವೆ  ನಾಗರಭಾವಿ 2nd ಬ್ಲಾಕ್  ಹತ್ರ ಹೊಸದಾಗಿ ಆಗಿರುವ ಒಂದು ಸುಂದರವಾದ ಪಾರ್ಕ್.  ಮೊನ್ನೆ ಸಂಜೆ ನಮ್ಮ ಫ್ಯಾಮಿಲಿ ಜೊತೆ ಇಲ್ಲಿಗೆ ಹೋಗಿದ್ದೆ... ನಿಜವಾಗ್ಲೂ ತುಂಬಾ ಚೆನ್ನಾಗಿ ಇದೆ ಈ ಪಾರ್ಕ್, ಯಾವುದೊ ಪ್ರೈವೇಟ್ ಕಂಪನಿ "ಮಾಯಾ"  ಇದನ್ನ maintain ಮಾಡ್ತಾ ಇರೋದಂತೆ....  ತುಂಬಾ ಚೆನ್ನಾಗಿ  maintain ಮಾಡಿದ್ದಾರೆ .
ಮೊದಲು ಈ ಪಾರ್ಕ್ ನ ಹೊರಾಂಗಣ ನೋಡಿ ಯಾವುದೊ ಬೇರೆ ದೇಶದ ಪಾರ್ಕ್ ಇರಬೇಕು ಇದು ಅಂತ ಅನ್ನಿಸಿತು....ಸುಂದರವಾದ ಹೂವಿನ ಸಾಲುಗಳು,,,, ಚೊಕ್ಕವಾಗಿ ಮೂಡಿರುವ ಹಸಿರಿನ ನೆಲ ಹಾಸು....    ಚಿಕ್ಕ ಗುಡ್ಡದ ಮೇಲೆ ಪ್ರಶಾಂತತೆ ಇಂದ ಕೂತಿರುವ ಬುದ್ದನ ವಿಗ್ರಹ ..... ಬುದ್ದನ ಇತಿಹಾಸವನ್ನು ಸಾರುವ ದೊಡ್ಡ ಮುಖದಾಕರದ ಸ್ಥಬ್ದ ಪ್ರತಿಮೆ...  ಚೈನೀಸ್ ಸ್ಟೈಲ್ ನ ಮಂಟಪ ಗಳು...
ಡ್ರಾಗನ್...  ಸುಂದರವಾದ fountain  ಸಣ್ಣಗೆ ಹರಿಯುವ ನೀರಿನ ಜಲಪಾತ... ವಃ.. ಇದರ ಮಧ್ಯ ಒಂದು ಅಮ್ಮನವರ ಗುಡಿ ಕೂಡ ಇದೆ...  ಒಂದು ಸುಂದರವಾದ ಸಂಜೆಯನ್ನು... ನಿಮ್ಮ ಫ್ಯಾಮಿಲಿ ಜೊತೆ ಇಲ್ಲಿ ಆರಾಮವಾಗಿ ಕಳೆಯಬಹುದು.....
ಸದ್ಯವಾದಾಗ ಒಮ್ಮೆ ಬೀಟಿ ನೀಡಿ.....