Showing posts with label ಕಲಾಕೃತಿಗಳು .. Show all posts
Showing posts with label ಕಲಾಕೃತಿಗಳು .. Show all posts

Saturday, September 25, 2010

ಬಲೂನ್ twist ಆರ್ಟ್...

ನಿಮಗೆ ಗೊತ್ತಿದೆಯ,,,, ನಾವು ಚಿಕ್ಕವರಾಗಿದ್ದಾಗ,,, ಯಾವುದದು ಒಂದು ಬಲೂನ್,,,ಒಡೆದು ಹೋದರೆ,, ಅದರಲ್ಲೇ  bubbles  ತರ ಬಾಯಿನಿಂದ ಊದಿ ಚಿಕ್ಕ ಚಿಕ್ಕ ಬಲೂನ್ ... ಮಾಡಿ,,,, ಟ್ವಿಸ್ಟ್ ಮಾಡಿ... ಕೈಗೆ ಉಜ್ಜಿಕೊಂಡು ಸೌಂಡ್ ಮಾಡ್ತಾ ಇದ್ವಿ.. ನೆನಪು ಇದೆಯಾ..... ಹ್ಞೂ  ಅದೇ ತರ ಇಲ್ಲಿ ನೋಡಿ... ಬಲೂನ್ ಟ್ವಿಸ್ಟ್ ನೆ ಒಂದು ತರ ಆರ್ಟ್ ಮಾಡಿಕೊಂಡು,,,, ತರ ತರದ desing ಮಾಡಿದ್ದಾರೆ ಕಂಪ್ಯೂಟರ್, ಬೈಕ್.. ಸೋಫಾ.......  ಕೊನೆಗೂ ಹುಡುಗೀರಾ ಬಟ್ಟೆನು ಈ ಬಲೂನ್ ನಿಂದಲೇ ಟ್ವಿಸ್ಟ್ ಮಾಡಿ ಮಾಡಿದ್ದಾರೆ.....
(ಬಟ್ಟೆ ಬಿಚ್ಚೋ ಗೋಳೇ ಇಲ್ಲ ಅಂತ ಕಾಣುತ್ತೆ... ಚೇಂಜ್ ಮಾಡಬೇಕಾದರೆ, ಒಂದು ಸೂಜಿ ತಗೊಂಡ್ ಚುಚ್ಚಿದರೆ     ಆಯಿತು :-)  ) 
ಎಂತೆಂಥ ಆರ್ಟ್ ಇರುತ್ತೆ ಅಲ್ವ..........  ನೋಡಿ ಮಜಾ ಮಾಡಿ...........


Tuesday, June 29, 2010

ಕೊನಾರ್ಕ್ ಸೂರ್ಯ ದೇವಸ್ಥಾನ....ಒರಿಸ್ಸಾ ಪ್ರವಾಸ ಭಾಗ ೨


ಕೊನಾರ್ಕ್ ಸೂರ್ಯ ದೇವಸ್ಥಾನ....


ಸೋಮವಾರ ನಾವು ಪುರಿ ತಲುಪಿದ್ದು ಮಧ್ಯಾನ ೧ ಘಂಟೆ ಆಗಿತ್ತು... ನಾವು ಮೊದಲೇ ಮಾಡಿದ್ದ ಪ್ಲಾನ್ ಎಲ್ಲ ಹಾಳಾಗಿ ಹೋಗಿತ್ತು,,, ಸೊ ಹೇಗೂ ಲೇಟ್ ಆಗಿದೆ,,, ಮೊದಲು ಕೊನಾರ್ಕ್ ಸೂರ್ಯ ದೇವಸ್ಥಾನ ಮುಗಿಸಿಕೊಂಡು,,, ಸಂಜೆ ಟೈಮ್ ಇದ್ದರೆ ಪುರಿ ದೇವಸ್ತಾನಕ್ಕೆ ಹೋಗೋಣ ಅಂತ ಮಾತಾಡಿಕೊಂಡು ಆಯಿತು..... ಬೇಗ ಬೇಗ,, ನಮಗಾಗಿ ಬುಕ್ ಮಾಡಿದ್ದ,, ಹೋಟೆಲ್ ಹಾಲಿಡೇ ಇನ್ ರೆಸಾರ್ಟ್ ನಲ್ಲಿ ಫ್ರೆಶ್ ಅಪ್ ಆಗಿ,,,, ಊಟ ಮಾಡಿಕೊಂಡು,,, ಕೊನಾರ್ಕ್ ದೇವಸ್ಥಾನಕ್ಕೆ ಹೊರಟೆವು,,,,

ಕೊನಾರ್ಕ್ ಇದು ಒಂದು historical place .. ಒರಿಸ್ಸಾ ರಾಜ್ಯದ ಆಕರ್ಷಣೀಯ ಸ್ಥಳ.... ಇದು ಪುರಿ ಇಂದ 35 KM ಗಳ ದೂರದಲ್ಲಿ ಇದೆ.... ಇಲ್ಲಿಗೆ ಹೋಗುವುದಕ್ಕೆ ಬಸ್ ಹಾಗು taxi ವ್ಯವಸ್ತೆ ಇದೆ... ಪುರಿ ಇಂದ 45 ನಿಮಿಷಗಳ ಪ್ರಯಾಣ.... ನಾವು ಒಂದು qualis ಮಾಡಿಕೊಂಡು ಹೊರಟೆವು,,,, ದೇವಸ್ಥಾನ ಬಗ್ಗೆ ಅಸ್ತೊಂದ್ ಮಾಹಿತಿ ಇರಲಿಲ್ಲ..... ಆದರು ಇದು ಒಂದು, ಒಳ್ಳೆಯ ಇತಿಹಾಸಿಕ ಸ್ಥಳ ಅಂತ ಗೊತ್ತಿತು,,,

ಕೊನಾರ್ಕ್ ಗೆ 3 :30 ಗೆ ಬಂದು ಸೇರಿದೆವು,,,, ಯಾವುದೇ vechile ಅನ್ನು temple ಹತ್ತಿರಕ್ಕೆ ಬಿಡುವುದಿಲ್ಲ... ಸ್ವಲ್ಪ ದೂರ ನೆಡೆದು ಕೊಂಡು ಹೋಗಬೇಕು,,,, ನಾವು ಇಳಿದ ಕೂಡಲೇ ಅಲ್ಲಿನ guide ಬಂದು ಸುತ್ತುವರೆದರು,,,, ದೇವಸ್ತಾನದ ಬಗ್ಗೆ ಎಲ್ಲ ತಿಳಿಸಿ ಹೇಳಲು,, ೧೫೦ ರೂ ಕೊಡಬೇಕಾಗುತ್ತೆ ಅಂತ ಕೇಳಿ ಹಿಂದೆ ಬಿದ್ದಿದ್ದರು,,, ಸರಿ ಮೊದಲು ನಾವು ಒಪ್ಪಿಕೊಳ್ಳ ಲಿಲ್ಲ.. ಆಮೇಲೆ ಸ್ವಲ್ಪ ಕಮ್ಮಿಗೆ ಅವರೇ ಬಂದು,, ಎಲ್ಲವನ್ನು explain ಮಾಡುತ್ತೇನೆ ಅಂತ ಬಂದರು,,, ಆದರೆ ನನಗೆ ಅಲ್ಲಿನ ಶಿಲ್ಪಗಳ ಹಾಗು ಕೆತ್ತನೆ ಕೆಲಸಗಳನ್ನು ಫೋಟೋ ತೆಗೆಯಬೇಕಾದ್ದರಿಂದ... ಅವರ ಜೊತೆ ಹೋಗದೆ,, ಒಬ್ಬನೇ ಫೋಟೋ ತೆಗೆಯಲು ಹೊರಟೆ,,,,,

ನಿಜವಾಗಲು ಇದು ಒಂದು ಅದ್ಬುತ ಕಲೆಯ ದೇವಸ್ಥಾನ,,, ಆದರೆ ತುಂಬಾ ಶಿಥಿಲ ವಾಗಿ ಹಾಳಾಗಿ ಹೋಗಿದೆ.... ಒಂದು ಪಾರ್ಶ್ವ ಬಿದ್ದು ಹೋಗಿದೆ ಕೂಡ...

ಇದರ ಇತಿಹಾಸ ಕೆಣಕಿದಾಗ ಸಿಕ್ಕ ಮಾಹಿತಿ....

ಕೊನಾರ್ಕ್ ಗೆ ಈ ಹೆಸರು ಬಂದಿದು ಕೋನ (corner ) + ಅರ್ಕ (ಸೂರ್ಯ) . ಇದಕ್ಕೆ ಇನ್ನೊಂದು ಹೆಸರು ಕೂನಾದಿತ್ಯ ಅಂತ.... ಇದು ಪುರಿ ಯಾ north eastern ಕಾರ್ನೆರ್ ನಲ್ಲಿ ನೆಲೆಸಿದೆ . ಇದಕ್ಕೆ ಮತ್ತೊಂದು ಹೆಸರು ಅರ್ಕಕ್ಷೇತ್ರ ಇದನ್ನ ಕಟ್ಟಿದು,,1278 CE ನಲ್ಲಿ ಅಂತೆ...


"ಗಂಗಾ Dynasty ನಲ್ಲಿ ಈ ದೇವಸ್ಥಾನವನ್ನು ಕಟ್ಟುವುದಕ್ಕೆ ನರಸಿಂಹ ದೇವ -೧ ರಾಜ ಅದೇಶಿಸುತ್ತನಂತೆ.....ಈ ದೇವಸ್ಥಾನವನ್ನು ಆಗಿನ ಅವನ ಕಾಲದ ರಾಜಕೀಯ ಪ್ರತಿಷ್ಟೆ ಯಾ ಸಂಕೇತವಾಗಿ,,, ಕಟ್ಟಿಸಲು ಯೋಚಿಸಿದ್ದರಂತೆ,,, ಅದಕ್ಕಾಗಿ. 12000 ಜನ ನುರಿತ ಶಿಲ್ಪ ಕಲಾವಿದರನ್ನು ಸೇರಿಸಿ ೧೨ ವರುಷಗಳ ಸತತವಾಗಿ ಶ್ರಮ ಪಟ್ಟರಂತೆ ಇದನ್ನ ಕಟ್ಟಲು.... ಆದರು ಇದನ್ನು ಅಂದುಕೊಂಡ ಸಮಯಕ್ಕಿಂತ ಮುಂಚೆ ಕಟ್ಟಲಾಗಲಿಲ್ಲ ... ಇದಕ್ಕೆ ಕಾರಣ,, ಇದನ್ನು ಕಟ್ಟಬೇಕಾದರೆ ಒಂದು ವಾಸ್ತು ದೋಷ ಎದುರಾಯಿತಂತೆ..... ಇದರ ನಿರ್ವಹಣೆ ಹೊಹಿಸಿಕೊಂಡಿದ್ದ..ಬಿಸು ಮಹಾರಾಣ .. ಅವರಿಗೂ ಇದಕ್ಕೆ ಉತ್ತರ ಕಂಡು ಹಿಡಿಯುವುದಕ್ಕೆ ಸಾದ್ಯವಗಲಿಲ್ಲವಂತೆ... ಆಗ,, ಅವರ ಮಗ ಧರ್ಮಪಾದ ಇದಕ್ಕೆ ಉಪಾಯವನ್ನು ಕಂಡು ಹಿಡಿದು,, ಕೊನೆಯ ಕಲ್ಲನ್ನು ತಾನೇ ಗೋಪುರದ ಮೇಲೆ ಇಟ್ತನತ್ತೆ ,, ಆಮೇಲೆ ಧರ್ಮಪಾದನ ಶವ,,, ದೇವಸ್ಥಾನ ದ ಹತ್ತಿರ ಇರುವ ಸಮುದ್ರದಲ್ಲಿ ತೇಲುತ್ತಿತ್ತಂತೆ... ಹೀಗೆ ಅವನ ಹೆಸರು,, ತಮ್ಮ ಸಮುದಾಯದ ರಕ್ಷಣೆಗೋಸ್ಕರ.. ತನ್ನ ಪ್ರಾಣವನ್ನೇ ಕೊಟ್ಟ ಎಂದು ಹೆಸರುವಾಸಿ ಆಯಿತು ಅಂತ ಪ್ರತೀತಿ.....ಆದರೆ ಇಗಲೂ..ಇದರ ವಾಸ್ತು ಸರಿ ಇಲ್ಲದೆ ಇರುವ ಕಾರಣ,, ದೇವಸ್ಥಾನ ಇಷ್ಟು ಅವನತಿ ಹೊಂದಿದೆ ಅಂತ ಹೇಳುತ್ತಾರೆ , ಇಲ್ಲಿನ ಸ್ಥಳೀಯರು,,, "

ಈ ಇಡೀ ದೇವಸ್ಥಾನ ಒಂದು ರಥದ ಮೇಲೆ ನಿಂತಿದೆ.. ಎಲ್ಲ ಕಡೆಗಳಲ್ಲೂ 24 ಚಕ್ರಗಳಿವೆ....ಕೆತ್ತನೆಯ ಕೆಲಸ ತುಂಬಾ ಚೆನ್ನಾಗಿ ಇದ್ದು,,, ಮನಮೋಹಕವಾಗಿ ಇದೆ..... (ಆದರೆ ತುಂಬಾ ಹಾಳಾಗಿ ಹೋಗಿದೆ....ಕೆಲವೊಂದು ಕಡೆ,,, ಏನು ಕಾಣಿಸುವುದಿಲ್ಲಾ. ಕಾಲದ ಮಹಿಮೆಯೋ,, ಅಥವಾ ಇಂಥ ಒಂದು ಅದ್ಬುತ ಕಲೆಯನ್ನು ಉಳಿಸಿಕೊಲ್ಲದೆ ಇರುವ ನಮ್ಮ ಅಸಹಾಯಕತೆಯೋ ಗೊತ್ತಿಲ್ಲ..) ಒಟ್ಟು ೭ ಅಶ್ವಗಳು ಈ ರಥವನ್ನು ಎಳೆಯುತ್ತಿದ್ದರೆ.. ಎರಡು ಸಿಂಹಗಳು ಆನೆ ಯನ್ನು ತುಳಿದು ಮುನ್ನುಗ್ಗುತ್ತಿರುವ ಹಾಗೆ ಕೆತ್ತಲಾಗಿದೆ......

ಒಟ್ಟಿನಲ್ಲಿ ಇದೊಂದು ಒಳ್ಳೆಯ ಕೆತ್ತನೆಯ,,, ಕಲಾ ದೇವಸ್ಥಾನ .... ಆದರೆ ಗರ್ಭಗುಡಿಯ ಮುಖ್ಯ ಗೋಪುರ ಬಿದ್ದು ಹೋಗಿ... ದೇವಸ್ಥಾನವೇ ಇಲ್ಲದೆ,, ಬರಿ ಹೊರಗಿನಿಂದ ನೋಡಬಹುದಾದ ಒಂದು ಆಕರ್ಷಣೀಯ ಸ್ಥಳವಾಗಿದೆ...

ಇಲ್ಲಿನ guide ಹೇಳುತ್ತಿದ್ದ ಇನ್ನೊಂದು ಮಹತ್ವದ ವಿಚಾರ ವೆಂದರೆ... ಈ ಗೋಪುರದ ಮೇಲೆ ಇರುವುದು,,, ಸಾಮಾನ್ಯ ಕಲ್ಲು ಅಲ್ಲ... ಇದು magnetic ಕಲ್ಲು ಗಳು ಅಂತ,,, ಇದು ಇಡೀ ಗೋಪುರವನ್ನಿ ಹಿಡಿದು ಇಟ್ಟಿದೆ ಅಂತೆ....ಇದು ಒಂದು ಕಲ್ಲಿನಿಂದಲೇ ಮುಖ್ಯ ಗೋಪುರ ಬಿದ್ದು ಹೋಗಿರುವುದ್ ಅಂತ ಹೇಳ್ತಾ ಇದ್ದ ,, ಹಾಗೆ ಇಂಥಹ magnet 12 ನೆ ಶತಮಾನದಲ್ಲಿ ನಮ್ಮ ಹತ್ತಿರ ಇತ್ತು ಅಂದರೆ,,, 14 ನೆ ಶತಮಾನದಲ್ಲಿ Europe ನಲ್ಲಿ magnet ಹೇಗೆ ಕಂಡುಹಿಡಿದರು ಅಂತ..... ???????


ಈ ದೇವಸ್ಥಾನ ಕಟ್ಟಲು ಕಾರಣ,,,

The temple was dedicated to the Sun-God (Arka), popularly called Biranchi-Narayan, and the area in which it is located was known as Arka-Kshetra as well as padma-kshetra. According to folklore, Samba, son of Lord Krishna, was struck with leprosy due a curse of Lord Krishna himself. Samba for 12 years underwent harsh atonement at Mitravana, near the convergence area of Chandrabhaga River with the sea at Konark. He was finally successful in pleasing the SUN god (Surya), the healer of all skin diseases, and was cured of his ailment.

In gratitude, he decided to erect a temple in the honor of Surya. The day following his cure, while Samba was bathing in the Chandrabhaga, he discovered an image of the god, which had been fashioned out of Surya's body by Viswakarma. Samba installed this image in a temple he built in Mitravana, where he propitiated the god. Since then, throughout the ages, this place has been regarded as sacred.

...

ಅಲ್ಲಿನ ಕೆಲವು ಫೋಟೋ ಗಳನ್ನ ಇಲ್ಲಿ ಹಾಕಿದ್ದೇನೆ,, ಹಾಗೆ ಇದರ ಎಲ್ಲ ಫೋಟೋಗಳನ್ನು ನನ್ನ ಪಿಕಾಸ ಆಲ್ಬಮ್ ನಲ್ಲಿ ಹಾಕಿದ್ದೇನೆ,, ನೋಡಿ...

 
 








ಮುಂದುವರೆಯುವುದು.......

ಒರಿಸ್ಸಾ ಪ್ರವಾಸದ ಭಾಗ ೧ ಅನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ..... http://guruprsad.blogspot.com/2010/06/blog-post_25.html

ಪಿಕಾಸ ಫೋಟೋಗಳು
http://picasaweb.google.co.in/guru.prasadkr/OrissaTripDay2PhotosKonark#

Saturday, March 6, 2010

ಕಸದಿಂದ ಕಲೆ -- Tyre Art !!!!!

ಕಸದಿಂದ ರಸ... ಅಂದರೆ ಇದೆ ಅಲ್ವ.....ಇಲ್ಲಿ ನೋಡಿ,,, ಯಾರೋ ಕಲಾವಿದರು .. ಹಳೆಯ ಬಳಸಿದ ಟೈರ್ ನಲ್ಲೆ ಯಾವ ರೀತಿಯ ಕಲಾಕ್ರುತಿಗಳನ್ನ ಮಾಡಿದ್ದಾರೆ ಅಂತ,,, ಇದನ್ನು ಮಾಡಿರುವವರ ಬಗ್ಗೆ ಅಷ್ಟೊಂದು  information ಸಿಗಲಿಲ್ಲ.
ಆದರು,, ಬೇಡವಾಗಿರುವ ವಸ್ತುಗಳನ್ನ ಉಪಯೋಗಿಸಿಕೊಂಡು ಈ ರೀತಿ ಮಾಡಿರುವ ಅದ್ಬುತ ಕಲೆಗೆ,, ಭೇಷ್ ಎನ್ನಲೇ ಬೇಕು........


Monday, February 15, 2010

ಹುಲ್ಲು ಹಾಸಿನ ಕಲಾಕೃತಿಗಳು.... Grass Sculpture!!!!

ಇಲ್ಲಿ ಕೆಳಗೆ ಕೊಟ್ಟಿರುವ grass sculpture. ಹುಲ್ಲಿನಲ್ಲಿ ಮಾಡಿದ ಕಲಾಕೃತಿ ಗಳನ್ನು ನೋಡಿ .. ಇದು ಈ ಪ್ರಪಂಚದ,, ತುಂಬ ವೈಶಿಷ್ಟ್ಯ ಹಾಗು ಅದ್ಬುತ ಹುಲ್ಲು ಹಾಸಿನ ಕಲಾಕೃತಿ ಗಳಲ್ಲಿ ಒಂದಂತೆ...ಜಗತ್ತಿನ ಟಾಪ್ 10 grass sculpture ಗಳು ಅಂತ ಇದಕ್ಕೆ award ಬೇರೆ ಬಂದಿದೆ .....ಕೆಲವೊಂದು sculpture ಗಳನ್ನ ನೋಡಿ ಇದು ಮಾಮೂಲಿ, ನಮ್ಮಲ್ಲೂ ಕಾಣ ಸಿಗುತ್ತೆ ಅಂತ ಅಂದುಕೊಂಡೆ,, ಆದರೆ ಇದನ್ನ ವರ್ಷದ ಎಲ್ಲ ದಿನಗಳಲ್ಲೂ ನೀಟ್ ಆಗಿ maintain ಮಾಡಿ ಕೊಂಡು ಬಂದಿರುವುದರಿಂದ, ಇದಕ್ಕೆ ಹಾಗು ಇದನ್ನು ಮಾಡಿರುವ ಕಲಾವಿದರಿಗೆ ಮನ್ನಣೆ ದೊರಕಿದೆ ಅಂತೆ..... ಹಾಗೆ ಇದನ್ನು ಮಾಡಿರುವ creativity noodi ಆಶ್ಚರ್ಯ ಆಯಿತು... ನಮ್ಮಲ್ಲೂ ನೋಡಿರುತ್ತೇವೆ...ಲಾಲಭಾಗ್ ನಂಥ ಪಾರ್ಕ್ ನಲ್ಲಿ,,, ಕೆಲವೊಂದು museum ಗಳಲ್ಲಿ ಈ ರೀತಿ ಹುಲ್ಲಿನಲ್ಲಿ ಮಾಡಿರುವ ಕಲಾಕ್ರುತಿಗಳನ್ನ ಆದರೆ ಇದರ creativity ಮುಂದೆ ನಮ್ಮಲ್ಲಿ ಇರುವ grass sculpture ಏನು ಇಲ್ಲ ಅಂತ ಅನ್ನಿಸುತ್ತೆ,, ಅಷ್ಟು creative ಆಗಿ ಮಾಡಿದ್ದಾರೆ.... ನೀವೇ ನೋಡಿ......


ಮರಳು ಗಾಡಿನ ಹಸಿರು ಒಂಟೆಗಳು.....
ಕ್ರಿಯೇಟಿವ್ ಫಾರ್ಮುಲ ೧ ಕಾರ್.....
Cow grass sculpture

ಆನೆಯ ದಂತವು ಸಹ ಹುಲ್ಲಿನದೆ ??
girafee grass sculpture - siberia ದ krasnoyarska ಪಾರ್ಕ್ ನಲ್ಲಿ ಅದು summer ಟೈಮ್ ನಲ್ಲಿ ಮಾಡಿದ್ದಂತೆ
ಇದನ್ನ ನೋಡಿ .. museum beelden aaa in scheveningen ನಲ್ಲಿ wim quist ಎಂಬ ಆರ್ಟಿಸ್ಟ್ ಮಾಡಿದ್ದು,,, ಎಷ್ಟು ಕ್ರಿಯೇಟಿವ್ ಆಗಿ ಇದೆ ಅಲ್ವ ....
ಇಂತಹ ಅದ್ಬುತ sculpture ನ ಮಾಡಿದ್ದು,, ಅಣ್ಣ ತಂಗಿ ಅಂತೆ,, sue and pete hill ಅವರ ಹೆಸರು . ಇದು ಇರುವುದು ಗಾರ್ಡನ್ ಆಫ್ ಡ್ರೀಮ್ಸ್,, cornwall  ಎಂಬಲ್ಲಿ  
ಇದು "ಸ್ಪಿನ್ನಿಂಗ್ ಟಾಪ್ " Lucy ಎಂಬುವರ first ಕ್ರಿಯೇಟಿವ್ grass sculpture ....

unicorns united ....

ಇದನ್ನು ಯಾರು ಮಾಡಿದ್ದರೋ ಗೊತ್ತಿಲ್ಲ... ಆದರೆ ಯಾವುದೊ ಒಂದು ಲ್ಯಾಬ್ ನಲ್ಲಿ ಇದನ್ನ ತಯಾರಿಸಲಾಗಿದೆ ಅಂತೆ....ಹೀಗೂ ಮಾಡಬಹುದ...? ನಗಂತು ಗೊತ್ತಿಲ್ಲ fake ಇದ್ದರು ಇರಬಹುದು...
ಸುಮ್ಮನೆ ಬಿದ್ದಿರುವ ಮಣ್ಣು ಗುಡ್ದೆನಲ್ಲೇ ತನ್ನ ಕಲೆಯ ಚಮತ್ಕಾರ ತೋರಿಸಿದ್ದಾನೆ ಕಲಾವಿದ......
ಇದು ನೋಡಿ...ಏನು ಅಂತ ನಂಗೂ  ಗೊತ್ತಾಗಿಲ್ಲ....

ಇದು ಕೂಡ ಅಷ್ಟೇ ,,, ಸುಮ್ಮನೆ ರಾಶಿ ಬಿದ್ದಿರುವ ಮಣ್ಣಿನ ಗುಡ್ಡೆ ನಲ್ಲೆ ಮೂಡಿರುವ ಕಲೆ... ಕ್ರಿಯೇಟಿವ್ ಮೈಂಡ್ ಇದ್ದರೆ,, ಎಲ್ಲೂ ಬೇಕಾದರೂ ಕಲೆ ಅರಳುತ್ತ? ಇದನ್ನ ನೋಡಿದರೆ ಹೌದು ಅನ್ನ ಬೇಕೇನೋ...

^^^^^^^^^^^^^^

ಹಾಗೆ ಇಲ್ಲಿ ಇರುವ ಕೆಲವು grass sculpture ನ ನಾನು ತೆಗೆದಿದ್ದು,, ಹೈದರಾಬಾದ್ ಗೆ ಹೋಗಿದ್ದಾಗ ಅಲ್ಲಿ ರಾಮೋಜಿ ಫಿಲಂ ಸಿಟಿ ಗೆ ಹೋಗಿದ್ದೆ... ಅವಾಗ ತೆಗೆದಿರೋ ಫೋಟೋ ಗಳು ಇವು,,, ಇಲ್ಲಿನು grass sculpture ನ ನೀಟ್ ಆಗಿ maintain ಮಾಡ್ತಾ ಇದ್ದರೆ,, ಆದರೆ ಮೇಲಿನ ಚಿತ್ರಗಲ್ಲಿ ಇರುವಂತೆ  creativity ಇಲ್ಲಿ ಇಲ್ಲ ಅಷ್ಟೇ...ಇದೆ ನಮಗೂ ಬೇರೆಯವರಿಗೂ ಇರುವ difference !!
( ನಾವೇಕೆ ಹೀಗೆ ಅಂತ ನನ್ನ ಹಿಂದಿನ ಪೋಸ್ಟ್ ನಲ್ಲಿ ಒಮ್ಮೆ ಪ್ರಶ್ನಿಸಿ ಕೊಂಡಿದ್ದೆ....ಕ್ರಿಯೇಟಿವ್ ನಲ್ಲಿ ಸಾಕಷ್ಟು ಹಿಂದೆ ಇದ್ದೇವೆ ಅಂತ ಒಂದು ಚಿತ್ರ ಸಹಿತ ಲೇಖನ ಹಾಕಿದ್ದೆ ಬಿಡುವಿದ್ದರೆ ಒಂದು ಸರಿ ಇದನ್ನು ನೋಡಿ...... ಚಿತ್ರ ವಿಚಿತ್ರ ಜಗತ್ತು !!! ಅಲ್ಲ ಇವರಿಗೆ ಮಾಡೋಕ್ಕೆ ಏನು ಕೆಲಸ ಇರೋಲ್ವಾ..... http://guruprsad.blogspot.com/2009/06/blog-post_29.html))


(ಮುಂದಿನ ಪೋಸ್ಟ್ ನಲ್ಲಿ ಇನ್ನು ಹೆಚ್ಚಿನ ಕ್ರಿಯೇಟಿವ್ Grass  art  ಗಳನ್ನ ಹಂಚಿಕೊಳ್ಳುತ್ತೇನೆ.....)