ನಮಸ್ಕಾರ....
ತುಂಬಾ ದಿನ ಆಯಿತು,,, ನನ್ನ ಬ್ಲಾಗ್ ಲೋಕದ ಕಡೆ ತಲೆ ಹಾಕಿ... ಹೀಗೆ ಸ್ವಲ್ಪ ಕೆಲಸದ ಒತ್ತಡ ದಿಂದ,,, ಯಾವ ಲೇಖನ ವನ್ನು ಅಪ್ಡೇಟ್ ಮಾಡಲಾಗಿರಲಿಲ್ಲ..... ಹಾಗು ಎಲ್ಲೂ ಹೊರಗಡೆ (ಫೋಟೋ ಗ್ರಫಿ ) ಕೂಡ ಹೋಗಿರಲಿಲ್ಲ...
ಇಂದು ನಡೆದ ಶಿವೂ ಹಾಗು ಆಜಾದ್ ಸರ್ ಪುಸ್ತಕ ಬಿಡುಗಡೆ ಸಮಾರಂಬದಲ್ಲಿ ಕೆಲವು ಬ್ಲಾಗ್ ಗೆಳೆಯರು ಕೇಳಿದರು,, ಎಲ್ಲಿ ಗುರು ಇತ್ತೀಚಿಗೆ ನಿಮ್ಮ ಯಾವುದು ಬ್ಲಾಗ್ ಪೋಸ್ಟ್ ಇಲ್ಲ ಅಂತ ....ಅವಾಗ್ಲೇ ಗೊತ್ತಾಗಿದ್ದು,, ಹೌದಲ್ವ ತುಂಬಾ ದಿನದಿಂದ ಎನನ್ನು ಬರೆಯಲಾಗಲೇ ಇಲ್ಲ ಅಂತ,,,,..
ಸರಿ,,, ಇವಾಗ ಒಂದು ಹೊಸ ಆರ್ಟ್ ಮತ್ತೆ ಆರ್ಟಿಸ್ಟ್ ನ ಕಲೆಯನ್ನು share ಮಾಡಿಕೊಳ್ಳುವ ನೆಪದಲ್ಲಿ ನಿಮ್ಮ ಮುಂದೆ ಬಂದಿದ್ದೇನೆ....
ನಿಮಗೆ ಗೊತ್ತಿರಬೇಕು ಅಲ್ವ,,, ಕೆಲವು ವರುಷದ ಕೆಳಗೆ,,,ಅಂದರೆ ಈ CD DVD , ಬರೋದಿಕ್ಕೆ ಮುಂಚೆ,, ಕ್ಯಾಸೆಟ್ ಅಂತ ಒಂದು ಇತ್ತು ಅಂತ,,,,, ಗೊತ್ತಿಲ್ಲದೇ ಇರುತ್ತಾ.... ಅವಗಿನ,,, ಪ್ರೇಮಲೋಕ , ರಾಮಾಚಾರಿ,,,, ಇಂತಹ ಹಾಡುಗಳನ್ನ ಈ ಕ್ಯಾಸೆಟ್ ಮೂಲಕನೆ ಕೇಳಿ ಕೇಳಿ ಆನಂದಿಸುತ್ತಾ ಇದ್ದಿದು,,,, ಇವಾಗಂತೂ,,,ಈ ಕ್ಯಾಸೆಟ್ ಹೆಸರೇ ಇಲ್ಲ ದಂತೆ,,, CD ಮತ್ತೆ DVD ಅವರಿಸಿಕೊಂಡ್ ಬಿಟ್ ಇದೆ...
ನನಗೆ ಇನ್ನು ನೆನಪಿದೆ,,, ನಮ್ಮ ಸ್ಕೂಲ್ ಡೇಸ್ ನಲ್ಲಿ ಒಂದು stage ಶೋ ಇತ್ತು , ಅದರಲ್ಲಿ ಡಾನ್ಸ್ ಮಾಡಬೇಕು ಅಂತ,,, ಅದಕ್ಕೆ ಬೇಕಾಗಿರೋ ಹಾಡುಗಳನ್ನ ಈ ಕ್ಯಾಸೆಟ್ ನಲ್ಲಿ ರೆಕಾರ್ಡ್ಸ್ ಮಾಡಿಸಿಕೊಳ್ಳಲು ಪಟ್ಟ ಕಷ್ಟವನ್ನು,,,, ಕೆಲವೊಮ್ಮೆ,, ಈ ಕ್ಯಾಸೆಟ್ ಪ್ಲಯೇರ್ ನಿಂದ,, ಯಾವುದೊ ಹಾಡಿಗೆ ಡಾನ್ಸ್ ಮಾಡಲು ಹೋಗಿ ಇನ್ನ್ಯಾವುದೋ ಹಾಡು ಬಂದು,,, ಗೊಂದಲ ಸೃಷ್ಟಿ ಆಗ್ತಾ ಇತ್ತು...ಅಲ್ವ...
ಹಾಗೆ ಯಾವುದಾದರು ಕ್ಯಾಸೆಟ್ ಹಾಳಾದರೆ ,,, ಅದರಲ್ಲಿ ಇರುವ ರೀಲ್ ಅನ್ನು,,,ಪೂರ್ತ ತೆಗೆದು,,, ಗಾಜಿ ಬಿಜಿ ಮಾಡಿ.... ಸುತ್ತಾಕಿ,,, ಆಟ ಆಡ್ತ ಇದ್ವಿ,, ನೆನಪಿದೆಯ....?
ಅಲ್ಲ ಇದನ್ನೆಲ್ಲಾ ಇವನು ಇವಾಗ ಯಾಕೆ ಹೇಳ್ತಾ ಇದ್ದನಪ್ಪ ಅಂತ ಅನ್ಕೊತ ಇದ್ದೀರಾ... .... ಹಾಂ ಇದೆ ರೀ...
ಇಲ್ಲೊಬ್ಬ ಮಹಾನುಭಾವ....ಹೀಗೆ waste ಆಗಿರೋ ಕ್ಯಾಸೆಟ್ ಅನ್ನು ಬಳಸಿಕೊಂಡು,,,,, ಎಂಥ ಕಲೆಯನ್ನು ಮಾಡಿದ್ದಾನೆ ನೀವೇ ನೋಡಿ..... ಒಂದು ಕ್ಯಾಸೆಟ್ ಹಾಳಾದರೆ,,, ಅದನ್ನು ನಾವುಗಳು ಸುಮ್ಮನೆ ಬಿಸಾಡಿ,,,, ಬಿಡ್ತಾ ಇದ್ವಿ... ಆದರೆ ಇಲ್ಲಿ ನೋಡಿ,,, ಅದರಿಂದನೆ ಏನಾದ್ರು ಮಾಡೋಕೆ ಆಗುತ್ತ ಅಂತ,,, ತಲೆ ಉಪಯೋಗಿಸಿ.... ಹೇಗೆ ಮಾಡಿದಾನೆ ಅಂತ,,,,
ಇದನ್ನು ಮಾಡಿರುವುದು,,, Erika Iris Simmons ಅಂತ... ಸ್ವೀಟ್ ಆಗಿ,,,,, iri5 ಅಂತ ಕರಿತಾರೆ,, ಇವರು ತುಂಬಾ creativity ಇರುವ ಆರ್ಟಿಸ್ಟ್... ಏನಾದ್ರು , ಹಳೇ ವಸ್ತು ಸಿಕ್ಕರೆ,, ಅದನ್ನು ಉಪಯೋಗಿಸಿ ಕೊಂಡೆ,, ಏನಾದರೂ ಮಾಡಬಹುದ ಅಂತ ಯೋಚಿಸುತ್ತ,,, ಏನಾದರೊಂದು ಮಾಡುತ್ತಲಿರುತ್ತರಂತೆ,,,, ಎಂತಹ ಕ್ರಿಯೇಟಿವ್ ಮೈಂಡ್,,,, ಅಬ್ಬ... ಇವರ ಒಂದೊಂದು ಆರ್ಟ್ ಅನ್ನು ನೋಡ್ತಾ ಇರಬೇಕಾದ್ರೆ... ಬರಿ ಕ್ಯಾಸೆಟ್ ರೀಲ್ ನಿಂದ ಹೀಗೂ ಮಾಡಬಹುದ,, ಅಂತ ನಾವೇ ಯೋಚಿಸಬೇಕು,,, ಹಾಗೆ ಇದೆ,,, ಇವರ ಕಲೆ,,,
ನೀವು ನೋಡಿ,, ಆನಂದಿಸಿ,, ನಿಮ್ಮ ಅಭಿಪ್ರಾಯ ತಿಳ್ಸಿ......
hats of you iri5 ಇವರ ಬಗ್ಗೆ ಹೆಚ್ಚು ತಿಳಿದು ಕೊಳ್ಳಲು,,, ಇಲ್ಲಿ ಕ್ಲಿಕ್ ಮಾಡಿ http://www.iri5.com/Home_Page.html