Monday, January 16, 2023

ಕಿಚ್ಚು ಹಾಯಿಸುವುದು - ಸಂಕ್ರಾಂತಿ ಸಡಗರ

 ಕಿಚ್ಚು ಹಾಯಿಸುವುದು - ಸಂಕ್ರಾಂತಿ ಸಡಗರ 



ಹಳ್ಳಿಗಳ ಕಡೆ. ಸಂಕ್ರಾಂತಿ ಸುಗ್ಗಿ ಸಂಭ್ರಮ ಬೇರೆಯದ್ದೇ ರೀತಿ ಇರುತ್ತದೆ. ಪಸಲು ಬಂದು ಸುಗ್ಗಿ ಮಾಡುವ ಸಂಭ್ರಮ ಒಂದೆಡೆ ಯಾದರೆ, ಮನೆಯಲ್ಲಿ ಇರುವ ಎತ್ತು, ಹಸು, ರಾಸು ಇವು ಕೂಡ ಹೊಲದಲ್ಲಿ ಕಷ್ಟ ಪಟ್ಟು ತನ್ನದೇ ಆದ ಕಾಣಿಕೆಯನ್ನು ರೈತರಿಗೆ ಕೊಟ್ಟಿರುತ್ತದೆ, ಅದಕ್ಕೆ ಸಂಕ್ರಾಂತಿ ದಿನ ತಮ್ಮ ತಮ್ಮ ಮನೆಗಳಲ್ಲಿ ಇರುವ ಹಸು, ರಾಸು, ಎತ್ತು, ಇವುಗಳನ್ನು ಬೆಳ್ಳಂಬೆಳಿಗ್ಗೆನೇ , ಹಳ್ಳಿ ಹತ್ತಿರವಿರುವ ಕೆರೆ, ತೊರೆ, ನದಿಗಳಲ್ಲಿ ಇವುಗಳ ಮೈ ತೊಳೆಯುವ ಸಂಭ್ರಮ .. ಮನೆಯ ಹಿರಿಯರು , ಕಿರಿಯರು ಎಲ್ಲ ಸೇರಿ ಕುಷಿ ಇಂದ ತಮ್ಮ ನೆಚ್ಚಿನ ಪ್ರಾಣಿಗಳ ಮೈ ತೊಳೆದು, ಅಲಂಕರಿಸುತ್ತಾರೆ..
ಹಳ್ಳಿಗಳ ಕಡೆ ಸಂಕ್ರಾಂತಿ ಹಬ್ಬದ ದಿನ ಹಸುಗಳ ಅಲಂಕಾರ ನೋಡಬೇಕು... ತಮ್ಮ ಶಕ್ತಿಗೆ ಅನುಗುಣವಾಗಿ, ಬಣ್ಣದ ಪೇಪರ್, ಬಲೂನ್, ಪೈಂಟ್ ಮುಂತಾದ ಅಲಂಕಾರಿಕ ವಸ್ತುಗಳಿಂದ ತಮ್ಮ ತಮ್ಮ ನೆಚ್ಚಿನ ಹಸು,ಎತ್ತು ಇವುಗಳನ್ನು ಸಿಂಗರಿಸಿ, ಗೋಧೂಳಿ ಸಮಯಕ್ಕೆ ಮುನ್ನ ಊರಿನಲ್ಲಿ ಮೆರವಣಿಗೆ ಮಾಡುತ್ತಾರೆ, ಊರ ಹೊರಗೆ ಅಥವಾ ಒಳಗೆ ಗೋಪುರ ಆಕಾರದಲ್ಲಿ ಮಾಡಿರುವ ಸಣ್ಣ ದೇವಸ್ಥಾನ ಕ್ಕೆ ಅಥವಾ ಊರ ದೇವರಿಗೆ ಪೂಜೆ ಸಲ್ಲಿಸಿ, ಆಮೇಲೆ ಒಣ ಹುಲ್ಲು, ತೆಂಗಿನ ಗರಿ, ಮತ್ತು ಕಟ್ಟಿಗೆ ಗಳಿಂದ ಕೊಡಿದ ಕಿಚ್ಚು ಹಾಯಿಸಲು ಅಣಿ ಮಾಡಿರುವ ಜಾಗಕ್ಕೆ ಕರೆದು ಕೊಂಡು ಬರುತ್ತಾರೆ..
ಇಲ್ಲಿ ಇರುವ ಒಣಹುಲ್ಲು, ಕಟ್ಟಿಗೆ ಗೆ ಬೆಂಕಿ ಹಚ್ಚಿ ಅದರ ಮೇಲೆ ಹಸು, ರಾಸು, ಎತ್ತು, ಹಾಗೆ ಕುರಿ , ಮೇಕೆ ಇವುಗಳನ್ನು ಧಾಟಿಸಿ ಕಿಚ್ಚು ಹಾಯಿಸುತ್ತಾರೆ, ಹೀಗೆ ಮಾಡಿದರೆ ತಮ್ಮ ಜಾನುವಾರುಗಳಿಗೆ ಯಾವುದೇ ಕಾಯಿಲೆ ಬರದೇ, ಧೈರ್ಯ ವಾಗಿ ಇರುತ್ತದೆ ಎಂಬ ನಂಬಿಕೆ. ಇದರ ಜೊತೆ ಜೊತೆಗೆ ..ಹಳ್ಳಿ ಮಕ್ಕಳು, ದೊಡ್ಡವರು ಹಸುವಿನ ಸಮೇತ ಈ ಬೆಂಕಿ ಹಾರುವುದನ್ನು ನೋಡಲು ಬಲು ಅಂದ..
ಇದಾದ ಮೇಲೆ ತಮ್ಮ ತಮ್ಮ ಜಾನುವಾರುಗಳನ್ನು ಮೆನೆಗೆ ಕರೆದುಕೊಂಡು ಹೋಗಿ ಆರತಿ ಮಾಡಿ, ಬರಮಾಡಿಕೊಳ್ಳುತ್ತಾರೆ. ತದನಂತರ ಪೂಜೆ ಪ್ರಸಾದ ಕೊಟ್ಟು, ಹೆಣ್ಣು ಮಕ್ಕಳು ಎಳ್ಳು ಬೀರುತ್ತಾ ಮನೆ ಮನೆಗೆ ಹೋಗಿ ಸಂಭ್ರಮಿಸುತ್ತಾರೆ...
ಆದುನಿಕ ನಗರೀಕರಣ ದಿಂದ ಇಂತಹ ಒಳ್ಳೆ ಒಳ್ಳೆ ಆಚರಣೆ ...ಮಸುಕಾಗಿ ಮೊದಲಿದ್ದ ಸಂಭ್ರಮ ಸಡಗರ ಇಲ್ಲದೆ ಕ್ಷೀಣಿಸುತ್ತಾ ಬಂದಿದೆ... ಅದಾರು ಕೆಲವೊಂದು ದೊಡ್ಡ ದೊಡ್ಡ ಹಳ್ಳಿ ಗಳಲ್ಲಿ ಇದರ ಆಚರಣೆ ಜೋರು...
ಆಕ್ಷನ್ ಕಂಟೆಂಟ್ ಫೋಟೋಗ್ರಫಿ ಗೆ ಇಂತಹ ಸಬ್ಜೆಕ್ಟ್ ಹೇಳಿ ಮಾಡಿಸಿದ ಒಂದು ಇವೆಂಟ್. ಇದನ್ನು ನೋಡಲೆಂದೇ ನಮ್ಮಂತ ಫೋಟೋಗ್ರಾಫರ್ ದೂರ ದೂರದ ಊರಿಗೆ ಮೊದಲೇ ಹೋಗಿ ಕಾಯುತ್ತ ಇರುತ್ತೇವೆ.. ಇಲ್ಲಿ ಕೆಳಗಿನ ಕೆಲವೇ ಫೋಟೋಗಳು. ಬೆಂಗಳೂರಿಗೆ ಸಮೀಪ ಇರುವ ಮಂಗನಹಳ್ಳಿ ಹತ್ತಿರ ೧೫-ಜನವರಿ-೨೦೨೩ ರಂದು ತೆಗೆದಿದ್ದು '

                              





ಚಿತ್ರ ಹಾಗು ಲೇಖನ 
ಗುರುಪ್ರಸಾದ್ 
15-Jan-2023