Showing posts with label Eveningview. Show all posts
Showing posts with label Eveningview. Show all posts

Friday, December 30, 2022

ಸ್ಕಂದಗಿರಿ ಬೆಟ್ಟದ ತಪ್ಪಲಲ್ಲಿ ಸೂರ್ಯಾಸ್ತದ ದೃಶ್ಯ ಕಾವ್ಯ..

 

ಸೂರ್ಯಾಸ್ತದ ದೃಶ್ಯ ಕಾವ್ಯ..
ಮೊನ್ನೆ ಸ್ಕಂದಗಿರಿ ಬೆಟ್ಟದ ಹತ್ತಿರ ಹೋಗಿದ್ದೆ... ಒಂದು ಮಗ್ಗುಲಲ್ಲಿ ನಂದಿ ಬೆಟ್ಟ,, ಇನ್ನೊಂದು ಕಡೆ ಸ್ಕಂದಗಿರಿ ಬೆಟ್ಟ...ಮುಂಜಾನೆಯ ಹಾಗು ಸವಿ ಸಂಜೆಯ ಪ್ರಕೃತಿ ಸೊಬಗನ್ನು ಇಂತಹ ಬೆಟ್ಟಗಳ ಮೇಲಿನಿಂದ ನೋಡಬೇಕು..ಆಹಾ ಎಂಥ ಪ್ರಕೃತಿ ಸೌಂದರ್ಯ ...
ಬೆಟ್ಟದ ತಪ್ಪಲಲ್ಲಿ ಇದ್ದ ಒಂದು ಚಿಕ್ಕ ಕೆರೆ, ಹಳ್ಳಿ ಜನರ ಓಡಾಟ, ಹಕ್ಕಿಗಳ ಗೂಡು ಸೇರುವ ತವಕ. 
ಕೆರೆ ಪಕ್ಕದ ಕಾಲಿ  ಜಾಗದಲ್ಲಿ ಲೋಕದ ಪರಿವೆ ಇಲ್ಲದೆ ಒಂದಷ್ಟು ನಾಯಿಗಳ ಆಟೋಟ...
ಇದಾವುದರ ಪರಿವೇ ಇಲ್ಲದೆ ಸೂರ್ಯ , ತನ್ನ ಪಾಡಿಗೆ ಕೆಲಸ ಮುಗಿಸಿ, ವಿರಮಿಸುವ ಪರಿ..
ನೀಲಿ ಆಗಸದಲ್ಲಿ ಚಂದ್ರ ನಕ್ಷತ್ರ ಗಳ ಗೋಚರ,,,,    ಪ್ರಕೃತಿ ಯಾವಾಗಲು ವಿಸ್ಮಯ ಪಾತ್ರೆ.. ಅಲ್ವ 









Friday, February 9, 2018

ಮುಂಜಾನೆಯ ಹಾಗು ಮುಸ್ಸಂಜೆ ಸೂರ್ಯನ ಸೊಬಗಿನ ಚಿತ್ತಾರ ನೋಡುವ ಆನಂದವೇ ಬೇರೆ...   ಏನೋ ಗೊತ್ತಿಲ್ಲ... ನನಗಂತೂ ಸುರ್ಯೋದಯ ಹಾಗು ಸೂರ್ಯಸ್ತಮ ದ ಸೊಬಗನ್ನು ಎಲ್ಲಿ ನೋಡಿದರು ನಾನು ಕ್ಯಾಮೆರನಲ್ಲಿ ಸೆರೆ ಹಿಡಿಯಲು ಬಯಸುತ್ತೇನೆ..  ನನ್ನ ಹೆಂಡತಿ ಯಾವಾಗಲು ಕೇಳ್ತಾ ಇರುತ್ತಾಳೆ  ಅದು ಎಷ್ಟು ಫೋಟೋಗಳನ್ನು ತೆಗೆದಿದ್ದೆ ತೆಗೆಯುತ್ತಿರಿ ಅಂತ...     ಏನು ಹೇಳೋದು... ಪ್ರತಿ ಸಾರಿ ನೋಡಿದಾಗಲು ಅಷ್ಟು ಚೆಂದ, ಅದ್ಬುತ ವಾಗಿ ಇರುತ್ತೆ ಅಂತ..  ಅದರಲ್ಲೂ ಸಂಕ್ರಮಣ ಮುಂಚೆ ಮತ್ತು ಸಂಕ್ರಮಣ ಆದಮೇಲೆ ಅದರ ಚಿತ್ತಾರ ಬೇರೆ ತರಾನೆ ಇರುತ್ತೆ..   
ಡಿಸೆಂಬರ್ ೨೦೧೭  ಮತ್ತು ಜನವರಿ ೨೦೧೮  ರಲ್ಲಿ ತೆಗೆದ ಕೆಲವು ಫೋಟೋಗಳನ್ನು ಹಾಕಿದ್ದೇನೆ ನೀವು ಕುಶಿ ಪಡಿ..  ಹಾಗೆ ಸಮಯ ಸಿಕ್ಕಾಗ ಸೂರ್ಯೋದಯ ಮತ್ತು ಸೂರ್ಯಸ್ತಮ ದೃಶ್ಯವನ್ನು ನೋಡಲು ಮರೆಯದಿರಿ....

ಸೂರ್ಯಸ್ತಮ  ಮನೆ ಹತ್ತಿರದ ಕೆರೆ 










 ಸೂರ್ಯೋದಯ ಕೇರಳ ಹತ್ತಿರ 

 ಸೂರ್ಯಸ್ತಮ
 ಸಾಯಂಕಾಲ ಮಂಗಳೂರು ಹೈವೇ ನಲ್ಲಿ
 ಮೈಸೂರು ಹತ್ತಿರ


 ಸೂರ್ಯಸ್ತಮ ಮಾಗಡಿ ರೋಡ್

 ಸೂರ್ಯಾಸ್ತಮ ದೇವರಾಯನ ದುರ್ಗಾ