Sunday, November 20, 2011

IT ಕಂಪನಿ ನಲ್ಲಿ... ಹೀಗೊಂದು ಕನ್ನಡ ರಾಜ್ಯೋತ್ಸವ ....2011

                                                                  
IT ಕಂಪನಿ ನಲ್ಲಿ... ಹೀಗೊಂದು ಕನ್ನಡ ರಾಜ್ಯೋತ್ಸವ ....
ನವೆಂಬರ್ ತಿಂಗಳು ಎಂದರೆ ಎಲ್ಲೆಲ್ಲು ಕನ್ನಡದ ಕರಲವ..... ಪ್ರತಿ ವರುಷದಂತೆ ಈ ವರ್ಷ ಕೂಡ... ನಮ್ಮ ಕಂಪನಿ ನಲ್ಲಿ ನಾವು ಸಹ ಅದ್ದೂರಿಯ ಕನ್ನಡ ರಾಜ್ಯೋತ್ಸವ ವನ್ನು ಆಚರಿಸಿದೆವು.... ಇವಗಿನ IT ಕಂಪನಿ ನಲ್ಲಿ ಕನ್ನಡ ಮಾತನಾಡಲು ಕೂಡ ಹಿಂಜೆರಿಯುವ ಈಗಿನ ಕಾಲದಲ್ಲಿ.... ಕನ್ನಡ ರಾಜ್ಯೋತ್ಸವ ನ ಅಂತ ನೀವು ಕೇಳಬಹುದು.... ಹೌದು.... ನಮ್ಮ ಕನ್ನಡ ಮಿತ್ರ ಬಂದುಗಳ ಸತತ ಪ್ರಯತ್ನ ದಿಂದ ನಮಗೆ ಇದು ಸಾಧ್ಯವಾಗಿದೆ....ಪ್ರತಿ ವರುಷ ಇದು ವೃದ್ದಿಸುತ್ತ ಇದೆ... ಈ ವರುಷ ವಂತು ಬೇರೆ ಬೇರೆ ರಾಜ್ಯದಿಂದ ಬಂದಿರುವ ಮಿತ್ರ ಸಹದ್ಯೋಗಿಗಳು ಕೈ ಜೋಡಿಸಿದರು... ನಾವು ನಿಜವಾಗ್ಲೂ ಅಂದುಕೊಂಡೆ ಇರಲಿಲ್ಲ ಇಷ್ಟು ಅದ್ದೂರಿಯಾಗಿ ನಡೆಯುತ್ತೆ ಅಂತ.....

ಐದು ವರುಷದ ಹಿಂದೆ.... Technical ಟೀಂ members ಸೇರಿ .. ನಮ್ಮ ಕಂಪನಿ ನಲ್ಲಿ ಕನ್ನಡ ರಾಜೋತ್ಸವ ವನ್ನು ಆಚರಿಸೋಣ ,,, ಒಂದು ದಿನ ಎಲ್ಲರೂ ಒಂದೇ T -shirt ನಲ್ಲಿ ಬರೋಣ ಅಂತ ಮಾತಡಿಕೊಂಡ್ ಸ್ಟಾರ್ಟ್ ಮಾಡಿದರು ....ಅಂದು,,, ಆ ಟೀಂ ನಲ್ಲಿ ಇರುವ ಕೆಲವರಿಗೆ ಮಾತ್ರ ಸಿಹಿಯನ್ನು ಹಂಚಿ...ಸರಳವಾಗಿ ಆಚರಿಸಿದರು..... ಅದೇ ಈಗ ವರ್ಷ ದಿಂದ ವರ್ಷ ಬೆಳೆದು ... ಈ ವರುಷ ಒಟ್ಟು 600 members ಕೈ ಜೋಡಿಸಿದ್ದರು....... ಎಲ್ಲಾ ೬೦೦ members ಒಂದೇ ರೀತಿ ಕನ್ನಡ ಪ್ರಿಂಟ್ ಇರುವ T -ಶರ್ಟ್ ಹಾಕಿ ಕೊಂಡು ಬಂದರೆ ಹೇಗೆ ಇರುತ್ತೆ ಅಲ್ವ..... :-)

ಹಾಂ ನಾವು ಬರಿ ಕನ್ನಡ ರಾಜ್ಯೋತ್ಸವ ಅಂತ ಮಾತ್ರ ಮಾಡಿ ಸುಮ್ಮನಾಗುತ್ತಿಲ್ಲ ಈ ಕಾರ್ಯಕ್ರಮಕ್ಕಾಗಿ... ಪ್ರತಿಯೊಬ್ಬರ ಹತ್ರ 300 Rs collect ಮಾಡ್ತೇವೆ... ಇದರಲ್ಲಿ,,, 150-160 Rs T-ಶರ್ಟ್ ಗೆ ಅಂತ.. ಮತ್ತೆ ಸ್ವಲ್ಪ ದುಡ್ಡು ಸ್ವೀಟ್ಸ್ ಗೆ ಅಂತ ಹೋಗುತ್ತೆ ಪ್ರತಿ ಸರಿ.. ನಂದಿನಿ ಪೇಡ ಮತ್ತೆ,,, ಸುಬ್ಬಮ್ಮ store ಕೋಡುಬಳೆ ಮಾತ್ರ ಕೊಡುತ್ತೇವೆ ... ಮಿಕ್ಕ ದುಡ್ಡಿನಲ್ಲಿ.... ಯಾವುದಾದರು charitige ... ದಿನಸಿ ರೂಪದಲ್ಲಿ.... ನಮ್ಮ ಕಡೆ ಇಂದ ಸಹಾಯ ಮಾಡುತ್ತೇವೆ.... ಕಳೆದ ವರುಷ ಅಂದ ಮಕ್ಕಳ ಶಾಲೆಗೆ , ಅಕ್ಕಿ , ಗೋದಿ, ಬೆಲ್ಲ, ಸಕ್ಕರೆ... ಇವುಗಳನ್ನು ಕೊಟ್ಟಿದ್ದೆವು... ಅದೇ ಈ ವರುಷ ನೆಲೆ ಎನ್ನುವ ಒಂದು ಬಡ ಮಕ್ಕಳ ಕಲ್ಯಾಣ ಸಂಸ್ಥೆ ಗೆ donate ಮಾಡಿದ್ದೇವೆ ..... ಅದರ details1 Akki (Rice) 500 KG


2 Togari Bele (Toor Dal) 50 KG


3 Uddina Bele (Split Black Gram) 50 KG


4 Surya Kanti Yenne (Ruchi Gold Sunflower Oil) 2 Tin (30 Ltrs)


5 Avalakki (Beaten Rice) 60 KG


6 Sakkare (Sugar) 50 KG


7 Togari Bele (Toor Dal) 10 KG


8 Nirma Soap 200 Nos


9 Nirma Washing Powder 30 KG


10 Promise Tooth Paste 15 Nos


11 Medimix Soap 100 Nos


ಬರಿ ಕನ್ನಡ ಕಾರ್ಯಕ್ರಮ ಮಾತ್ರವಲ್ಲ ಇದರ ಜೊತೆ ಒಂದು ಸಣ್ಣ ಸಹಾಯ ನಮ್ಮ ತಂಡದ ಕಡೆ ಇಂದ... .. ಕನ್ನಡ ಕಂಪನು ... ಹರಿಸುವ ಹಾಗೆ.... ಒಂದು ಒಳ್ಳೆಯ ಕಾರ್ಯದಲ್ಲಿ ನಾವೆಲ್ಲಾ ಕೈಜೋಡಿಸಿ , ಭಾಗಿಯಗಿದ್ದೇವೆ ಎಂಬುದೇ ನಮ್ಮ ಸಂತೋಷ.......

ನೋಡಿ...ಇನ್ನು ನವೆಂಬರ್ ತಿಂಗಳು ಮುಗಿದಿಲ್ಲ.... ನಿಮ್ಮ ಕಂಪನಿ ಯಲ್ಲಿ... ಕನ್ನಡ ಸಹದ್ಯೋಗಿಗಳು ಇದ್ದರೆ... ನೀವು ಕೂಡ ಇಂಥ ಒಂದು ಕಾರ್ಯಕ್ರಮವನ್ನು ಮಾಡಬಹುದು..... ಆದಷ್ಟು ನಮ್ಮ ಕನ್ನಡದ ಕಂಪನ್ನು ... ನಮ್ಮ ನಾಡಿನ ಬಗ್ಗೆ ಮಾಹಿತಿಯನ್ನು ಕೊಡಬಹುದು.... ನಿಮಗೆ ಯಾವುದೇ ರೀತಿಯ ಸಹಾಯ ಬೇಕಾದಲ್ಲಿ ನಮ್ಮನು ಸಂಪರ್ಕಿಸಬಹುದು....ನಮ್ಮ ಕಂಪನಿಯಾ ಬೇರೆ ಬೇರೆ ಬ್ರಾಂಚ್ ಗಳಲ್ಲೂ ಒಂದೇ ದಿನ ಕನ್ನಡ ರಾಜೋತ್ಸವ ನಡೆಸಿದೆವು .... ಎಲ್ಲಾ ಬೇರೆ ಬೇರೆ location ಆಫೀಸ್ ನಿಂದನು ಒಳ್ಳೆ response ಬಂದಿತ್ತು .. ಎಲ್ಲಾ ಕಡೆ ಕೆಲವು ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಇದ್ದೆವು ... ರಂಗೋಲಿ ಬಿಡಿಸುವುದು... ಕನ್ನಡದ ಬಗ್ಗೆ quize , ಗಾದೆಗಳನ್ನು ಪೂರ್ತಿ ಮಾಡುವುದು... ಇಂಗ್ಲಿಷ್ ನಲ್ಲಿ ಇರುವ ಪದವನ್ನ್ನು ಕನ್ನಡದಲ್ಲಿ ಹೇಳುವುದು ಮತ್ತೆ ಅದರ ಬಗ್ಗೆ ಒಂದು ನಿಮಿಷ ಕನ್ನಡದಲ್ಲೇ ಮಾತನಾಡುವುದು..... ಕನ್ನಡ ಭಾವ ಗೀತೆಗಳನ್ನ ಹಾಡುವುದು... ಕುವೆಂಪು ರವರ ಕವನಗಳನ್ನ ಹೇಳುವುದು.... ಹೇಗೆ.... ಎಲ್ಲರೂ ಅತಿ ಆಸಕ್ತಿ ಇಂದ ಪಾಲ್ಗೊಂಡಿದ್ದರು....

ಅದರ ಕೆಲವು ಫೋಟೋಗಳು ಇಲ್ಲಿವೆ ನೋಡಿ...                                                                 Entrence - Decoration 

 ಕನ್ನಡದ ಬಾವುಟ...

 ಪ್ರತಿ ಯೊಂದು .. ಫ್ಲೂರ್ ನಲ್ಲೂ ... ಹೂವ ದ  decoration 


 ರಂಗೋಲಿ ಬಿಡಿಸುವುದರಲ್ಲಿ.... ತಲ್ಲೀನರಗಿರುವುದ್ ...ಭುವನೇಶ್ವರಿ ಫೋಟೋ ಜೊತೆಗೆ ... 
 


ಹಚ್ಚೇವು ಕನ್ನಡದ ದೀಪ .... ಗ್ರೂಪ್ ಸಾಂಗ್.....

ಸಿಹಿ ಯನ್ನು ಹಂಚುತ್ತಿರುವುದ್......

ಕನ್ನಡ quize 
 .

Titanium  ಆಫೀಸ್ ನಲ್ಲಿನ ಕನ್ನಡ ಬಂದುಗಳು....                                                  
T-ಶರ್ಟ್ ಹಿಂದೆ ಇರುವ ಪ್ರಿಂಟ್... UB -Plaza  ಆಫೀಸ್ ನಲ್ಲಿ .... 

ಕನ್ನಡದ ಬಗ್ಗೆ,, ಕನ್ನಡ ನಾಡಿನ ಬಗ್ಗೆ .. ಮಾಹಿತಿ....


13 comments:

 1. ರಾಜ್ಯೋತ್ಸವದ ದಿನದ ನಿಮ್ಮ ಚಟುವಟಿಕೆಗಳ ಬಗೆಗೆ ಓದಿ ಹಾಗು ನಿಮ್ಮ ಫೋಟೋಗಳನ್ನು ನೋಡಿ ತುಂಬ ಸಂತೋಷವಾಯಿತು. ಕನ್ನಡ ನಾಡಿಗೆ ಇದು ನಿಜವಾಗಿಯೂ ಉತ್ತಮ ಸೇವೆಯಾಗಿದೆ.

  ReplyDelete
 2. balasubrahmanya kesthur seetharamaiah - ನಿಮ್ಮ ತಂಡದ ಒಳ್ಳೆಯ ಕೆಲಸಕ್ಕೆ ಶುಭಾಶಯಗಳು , ಸಾಹಿತಿಗಳಂತೆ ಕಿತ್ತಾಟ ಮಾಡದೆ ಸದ್ದಿಲ್ಲದೇ ಕನ್ನಡ ಕಟ್ಟುವ ಕೆಲಸ ಮಾಡುವ ನಿಮಗೆಲ್ಲರಿಗೂ ಕನ್ನಡ ತಾಯಿಯ ಆಶೀರ್ವಾದ ಲಭಿಸಲಿ.11

  ReplyDelete
 3. Prakash Hegde - Jai ho.......Very gud Guru....

  ReplyDelete
 4. Thumba Santosha aiythu namma kacheriyalli nadedha vishesha karyagala baggey neevu bahala chennaghi bannisidhiri...mundina varsha inashtu vijrumbaney indha nadeyalli antha naanu prarthaney...

  ReplyDelete
 5. Sakkat Guru.
  Chennagi barididira. Nimma paapu blog nodide. tumba khushi aaytu.

  ReplyDelete
 6. ಧನ್ಯವಾದಗಳು ಸುನಾಥ ಸರ್... ನಮ್ಮ ನಾಡಿನಲ್ಲಿ ಇದ್ದು ಇಷ್ಟು ಮಾಡಲಾಗದಿದ್ದರೆ ಹೇಗೆ....

  ReplyDelete
 7. ಧನ್ಯವಾದಗಳು ಬಾಲು ಸರ್..

  ReplyDelete
 8. ಜೈ ಹೋ... ಪ್ರಕಾಶಣ್ಣ... ಥ್ಯಾಂಕ್ಸ್ ...

  ReplyDelete
 9. ಥ್ಯಾಂಕ್ಸ್ ಪಂಡಿತ್ ಸರ್...

  ಹಾಗೆ ಥ್ಯಾಂಕ್ಸ್ ಅನಾಮಿಕ ರವರೆ....

  ReplyDelete
 10. ಉತ್ತಮ ಕೆಲಸ. ಕನ್ನಡನಾಡಿನಲ್ಲಿ ಇರುವ ಯಾರೇ ಆಗಲಿ ಕನ್ನಡಕ್ಕೆ ಕಿಂಚಿತ್ತಾದರೂ ಸೇವೆ ಸಲ್ಲಿಸಬೇಕು, ಕಂಪನಿಯಲ್ಲಿ ನಡೆಸಿದ ರಾಜ್ಯೋತ್ಸವ ನೋಡಿ ಆನಂದಿಸಿದೆ.

  ReplyDelete
 11. ನಿಮ್ಮ ಕಂಪನಿಯಲ್ಲಿ ನಡೆಸಿದ `ಕನ್ನಡ ರಾಜ್ಯೋತ್ಸವ'ದ ಸ೦ಭ್ರಮದಲ್ಲಿ ನಮ್ಮನ್ನೂ ಭಾಗಿಯಾಗಿಸಿದ್ದಕ್ಕಾಗಿ ಹಾಗೂ ಅದೇ ಸ೦ದರ್ಭದಲ್ಲಿ ಸಮಾಜಸೇವೆಯನ್ನು ಮಾಡುತ್ತಿರುವುದಕ್ಕಾಗಿ ಧನ್ಯವಾದಗಳು.ಫೋಟೋಗಳು ಹಾಗೂ ನಿರೂಪಣೆ ಬಹಳ ಚೆನ್ನಾಗಿದೆ. ನನ್ನ ಬ್ಲಾಗ್ ಗೆ ಭೇಟಿ ಕೊಡಿ.

  ReplyDelete
 12. ® ಲೇಖನಗಳನ್ನೂ ನೋಡಿ ತುಂಬಾ ಸಂತೋಷವಾಯಿತು.
  visit my site

  http://spn3187.blogspot.in/

  Also say Your Friends
  Find me

  ReplyDelete
 13. ಧನ್ಯವಾದಗಳು ಶಿವಕುಮಾರ್ ಖಂಡಿತ ನಿಮ್ಮ ಬ್ಲಾಗಿಗೆ ಬೀಟಿ ನೀಡುತ್ತೇನೆ

  ReplyDelete