Showing posts with label sarah kaufmann. Show all posts
Showing posts with label sarah kaufmann. Show all posts

Thursday, December 17, 2009

Cheese Art - Cheese ಲೇಡಿ

ತುಂಬ ದಿನ ಆಯಿತು ನನ್ನ ಬ್ಲಾಗ್ ಅಪ್ಡೇಟ್ ಮಾಡಿ, ನನ್ನ ಕೆಲವು ಬ್ಲಾಗ್ ಸ್ನೇಹಿತರು ಫೋನ್ ಮಾಡಿ, ಮೇಲ್ ಮಾಡಿ ಕೇಳ್ತಾ ಇದ್ರೂ,, ಎಲ್ಲಿ ಕಳೆದು ಹೋಗಿದಿಯ ಅಂತ... ಎಲ್ಲೂ  ಕಳೆದು ಹೋಗಿರಲಿಲ್ಲ,,, ಹಾಗೆ ಸ್ವಲ್ಪ ಕೆಲಸದ ಒತ್ತಡ...ಮತ್ತೆ ಪರ್ಸನಲ್ ಪ್ರಾಬ್ಲಮ್ ನಲ್ಲಿ ಕಳೆದು ಹೋಗಿದ್ದೆ,,, ಟೈಮ್ ಇದ್ರೂ, ಬ್ಲಾಗ್ ನ ಅಪ್ಡೇಟ್ ಮಾಡೋಕೆ ಮನಸ್ಸು ಇರಲಿಲ್ಲ....
ನಾನು ಬ್ಲಾಗ್ ಲೋಕಕ್ಕೆ ಬಂದು ವರ್ಷದ ಮೇಲೆ ಆಗಿದೆ... ಇದು ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದು,
ಪ್ರಾಬ್ಲಮ್, ಕಷ್ಟ ,  ಒತ್ತಡ ಎಲ್ಲರಿಗು ಇರುತ್ತೆ, ಸುಮ್ಮನೆ ಅದರಲ್ಲೇ ತಲೆಕೆಡಿಸಿಕೊಂಡ್ ಇದ್ದರೆ ಆಗೋಲ್ಲ ಅಂತ ಅಂದುಕೊಂಡು,,, ಸ್ವಲ್ಪ active ಆಗಿ ನನ್ನ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಸ್ವಲ್ಪ ಸಂತೋಷವಾಗಿ ಇರೋಣ ಅಂತ ಡಿಸೈಡ್ ಮಾಡಿ, ಹೊಸ ಪೋಸ್ಟ್ ನ ಅಪ್ಡೇಟ್ ಮಾಡ್ತಾ ಇದ್ದೇನೆ,,

ಇವಾಗ ನಾನು ಹೇಳಲು ಹೊರಟಿರುವುದು...sarah kaufmann  ಎಂಬ cheese ಲೇಡಿ ಬಗ್ಗೆ . ಇ ವಯಸ್ಸಾದ ಅಜ್ಜಿ, ನೈಸ್ ಆಗಿ, ಸ್ವೀಟ್ ಆಗಿ  ಇರುವ ಚೀಸ್ ನಲ್ಲೆ ತನ್ನ ಕಲೆಯನ್ನ, ಕೈ ಚಳಕವನ್ನು ತೋರಿಸಿದ್ದಾಳೆ. , commercial art ನಲ್ಲಿ ಡಿಗ್ರಿ ಪಡೆದು, wisconsin dairy indrustry ನಲ್ಲಿ 16 ವರ್ಷದಿಂದ ವರ್ಕ್ ಮಾಡ್ತಾ ,, ಇ ಚೀಸ್ ಆರ್ಟ್ ಬಗ್ಗೆ , ಚೀಸ್ ನಿಂದಲೇ ಮಾಡುವ  ಕಲೆ , sculptor  ಬಗ್ಗೆ ಆಸಕ್ತಿ ಬೆಳೆಸಿಕೊಂಡು,, ಇವೊತ್ತು  ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ  ,, ಹಾಗೆ ತುಂಬ ಕಡೆ ಇಂದ ಅವಾರ್ಡ್ ಬೇರೆ ಪಡ್ಕೊಂಡ್ ಇದ್ದಾರೆ... ಎಸ್ಟೋ ಫುಡ್ ಫೆಸ್ಟಿವಲ್ ನಲ್ಲಿ ಇವರ ಚೀಸ್ ಆರ್ಟ್ ಪ್ರದರ್ಶನ ಗೊಂಡು, ಹೆಸರುವಾಸಿ ಆಗಿದೆ ಅಂತೆ..
ಇತ್ತೇಚೆಗೆ ಲಂಡನ್ ನಲ್ಲಿ ನಡೆಯುತ್ತಿದ್ದ ಫುಡ್ ಫೆಸ್ಟಿವಲ್ ನಲ್ಲಿ ಇವರ ಆರ್ಟ್ ಬಗ್ಗೆ ಒಂದು Article ಬಂದಿತ್ತು ,, ಆದರೆ ಜಾಡು ಹಿಡಿದು ಹೊರಟಾಗ ಇವರ ಅದ್ಬುತ ಕಲೆಯ ಪರಿಚಯ ಆಯಿತು....ಅದನ್ನ ಹಾಗೆ ನಿಮ್ಮಗಳ ಜೊತೆ share ಮಾಡ್ಕೋತಾ ಇದ್ದೇನೆ.
ಇವರ ಬಗ್ಗೆ , ಹಾಗು ಇವರ ಕಲೆ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ.. ಇವರದೇ ವೆಬ್ ಸೈಟ್ ನಲ್ಲಿ ನೋಡಬಹುದು,,,
ಇವರ ಕೆಲವು ಆಯ್ದ , ಅದ್ಬುತ ಕಲಾಕೃತಿಗಳು ಇಲ್ಲಿವೆ ನೋಡಿ.....