Showing posts with label bread art. Show all posts
Showing posts with label bread art. Show all posts

Wednesday, August 25, 2010

ಮೊಟ್ಟೆ ಗಳನ್ನು ಇಡುವ ಬಾಕ್ಸ್ ನಲ್ಲೆ ಅರಳುವ ಚೆಂದದ ಕಲೆ....

ಮೊಟ್ಟೆ ಗಳನ್ನು(EGG ) ಇಡುವ ಬಾಕ್ಸ್ ನಲ್ಲೆ ಅರಳುವ ಚೆಂದದ ಕಲೆ....
     ಮೊಟ್ಟೆ ಯಲ್ಲಿ ಮಾಡಿರುವ ಚಿತ್ರಗಳನ್ನ , ಅಥವಾ ಕಲೆಯನ್ನ ನೋಡಿರುತ್ತೀರಿ ಅಲ್ವ...  ಆದರೆ ಮೊಟ್ಟೆ ಇಡುವ ಬಾಕ್ಸ್ ನಿಂದ ಕೂಡ ಸುಂದರವಾದ ಅದ್ಬುತ ವಾದ ಕಲಾಕ್ರುತಿಗಳನ್ನ ರಚಿಸಬಹುದು ಅಂತ ಗೊತ್ತ? ಗೊತ್ತಿಲ್ಲದೇ ಇದ್ದರೆ ಇಲ್ಲಿ ನೋಡಿ....
ಏನಾದರೂ ಮಾಡಲೇ ಬೇಕು ಅಂತ ಕ್ರಿಯೇಟಿವ್ ಮೈಂಡ್ ಇರುವವರು ಏನು ಸಿಕ್ಕರು ಅದರಲ್ಲೇ ಅದ್ಬುತ ಎನಿಸುವ ವಿಚಿತ್ರ ಎನಿಸುವ ಕಲೆ ನ ಮಾಡಿರುತ್ತಾರೆ.......ಎಷ್ಟು ವಿಸ್ಮಯ ಅಲ್ವ.... ಕೆಲವೊಂದು ಊಹೆ ಮಾಡಿಕೊಳ್ಳಲು ಆಗೋಲ್ಲ ಅಂಥದನ್ನ ಮಾಡಿ, ಹೀಗೂ ಮಾಡಬಹುದು ಅಂತ ಹೇಳಿರುತ್ತಾರೆ.....
ಮುಂದಿನ ಲೇಖನದಲ್ಲಿ.... ಮೊಟ್ಟೆ ನಲ್ಲೆ ಕೆತ್ತಿರುವ ಸುಂದರ ಕಲೆಯನ್ನು ಹಾಗು ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ......























ಇದೆ ರೀತಿ,, ಇನ್ನು ವಿಚಿತ್ರ ವಾದ ಕೆಲವು ಕಲೆಗಳಿವೆ... ಇದನೆಲ್ಲ ನನ್ನ  ಬ್ಲಾಗಿನಲ್ಲಿ ಹಾಕಿದ್ದೇನೆ,,, ನೋಡಬೇಕೆನಿಸಿದರೆ ಒಮ್ಮೆ ಕ್ಲಿಕ್ಕಿಸಿ ನೋಡಿ.....
1) ದುಡ್ಡು ದುಡ್ಡು ದುಡ್ಡು...!!!!! ಮನಿ ನಲ್ಲೆ ಅರಳುವ ಕಲೆ......!!!
2)  ಕಸದಿಂದ ಕಲೆ -- Tyre Art !!!!!
3)    ಹಕ್ಕಿಯ ಪುಕ್ಕದಲ್ಲೇ ಅರಳುವ ಅದ್ಬುತ ಕಲೆ.... Julie ತ್ಹೊಮ್ಪ್ಸೋನ್
4 ) ಹಸಿರು ಹುಲ್ಲಿನ ಕಲೆ... Grass ART !!! ಪರಿಸರ ಪ್ರೇಮಿ ಕಟ್ಟಡಗಳು
5 ) ಕಲ್ಲಂಗಡಿ ಹಣ್ಣಿನಲ್ಲಿ ಅರಳುವ ಕಲೆ.....!!!!!
6 ) ಪೇಪರ್ ಮಡಚುವ ಕಲೆ -- Origami !!!!
7 ) ಬ್ರೆಡ್ ಆರ್ಟ್ .......ನೋಡಿದಿರಾ?
8 ) ಪೆನ್ಸಿಲ್ ನಿಂದಲೇ ಅರಳುವ ಸುಂದರ ಕಲೆ....
9 ) ಹಳೇ ಗಡಿಯಾರದಲ್ಲೇ ಅರಳುವ ಇವರ ಕಲೆ.....ಅದ್ಬುತ !!!!
10 ) ಎಲೆಕ್ಟ್ರಿಕ್ ವೈರ್ ನಲ್ಲೆ ಅರಳುವ ಇವರ ಕಲೆ.........ಅದ್ಬುತ !!!!!!! 



Friday, October 2, 2009

ಬ್ರೆಡ್ ಆರ್ಟ್ .......ನೋಡಿದಿರಾ?

ಅಲ್ಲ ಕಣ್ರೀ ... ಇವರು ತಿನ್ನೋ ವಸ್ತುನು ಬಿಡೋಲ್ಲ ನೋಡ್ರಿ,,,ಒಟ್ಟಿನಲ್ಲಿ ತಮ್ಮಲ್ಲಿರೋ ಕಲೆ ತೋರಿಸಬೇಕು ಅಂದ್ರೆ ಏನ್ ಸಿಕ್ರು ಬಿಡೋದಿಲ್ಲ ಅಂತಾರಲ್ಲ ಈ ಜನ..... :-)
ನಾವು ಬ್ರೆಡ್ ನ ತಿನ್ನೋಕೆ ಮಾತ್ರ ಉಪಯೋಗಿಸುತ್ತೇವೆ ಅಲ್ವ... (ಹೌದು ಅದು ಇರೋದೇ ತಿನ್ನೋಕೆ ಅಂಥ,!! ) ಆದರೆ ಇಲ್ಲಿ ನೋಡಿ ಕೆಲವು ಮಹಾನುಭಾವರು,, ಬ್ರೆಡ್ ಬರಿ ತಿನ್ನೋದಕ್ಕೆ ಮಾತ್ರ ಅಲ್ಲ , ಟೈಮ್ ಸಿಕ್ರೆ ಈ ತರ ಚಿತ್ರ ಗಳನ್ನು ಮಾಡ್ತೇವೆ ಅಂಥ ತೋರಿಸಿದ್ದರೆ... ಏನ್ ವಿಚಿತ್ರ ಅಲ್ವ....!!!
ಹೌದು ನಾನು ಯೋಚಿಸ್ತಾ ಇದ್ದೆ.. ಚಿಕ್ಕವನಗಿರಬೇಕಾದರೆ..ಬ್ರೆಡ್ ಪೀಸ್ ನ ಚಿಕ್ಕ ಲೋಟದಲ್ಲಿ ಇರೋ ಕಾಫೀ ನಲ್ಲೋ ಅಥವ ಹಾಲ್ ನಲ್ಲೋ ಅಡ್ಡಿ ಕೊಂಡ ತಿನ್ನಬೇಕಾದರೆ ಬರಿ ಬ್ರೆಡ್ ನಲ್ಲೆ ಏನೇನೊ ತರ ಡಿಸೈನ್ ಮಾಡ್ತಾ ಇದ್ದದ್ದು ನೆನಪಿಗೆ ಬಂತು...
ಹಾಗೆ,, ಕೆಲವರು ಚಿಕ್ಕ ಅಕ್ಕಿ ಕಾಳಿನಲ್ಲಿ ಹೆಸರು ಬರೆಯುವುದು , ಡಿಸೈನ್ ಮಾಡುವುದು , ಮತ್ತೆ ದೊಡ್ಡ ದೊಡ್ಡ ಹೋಟೆಲ್ ನಲ್ಲಿ ಸಲಾಡ್ಸ್, ತರಕಾರಿನಲ್ಲಿ different ಆಗಿ ಜೋಡಿಸಿ ಕೊಡುವುದು, ಹಾಗೇನೇ ಮದುವೆ ಮನೆಗಳಲ್ಲಿ ದೊಡ್ಡ ದೊಡ್ಡ ಕುಂಬಳ ಕಾಯಿ ನಲ್ಲೋ ಅಥವ ಬೇರೆ ತರಕಾರಿನಲ್ಲೋ ಚೆಂದದ ಕಲಾಕೃತಿ ಗಳನ್ನ ಮಾಡಿರುತ್ತಾರೆ ಅಲ್ವ...

ಆದರೆ ಹೀಗೆ ಬ್ರೆಡ್ ನಲ್ಲಿ ಮಾಡಿರುವುದನ್ನ ಇದೆ ಮೊದಲ ಸಲ ನೋಡ್ತಾ ಇರೋದು.....



ಬ್ರೆಡ್ ಪೌಂಡ್ ನಲ್ಲಿ ಮಾಡಿರೋದು, ಆದರೆ ಈ ತರ ಚಿತ್ರ ಕಾಣುವ ಹಾಗೆ ಹೇಗೆ ಬೀಯಿಸಿದ್ದರೋ ಗೊತ್ತಿಲ್ಲ..!!!




ಬ್ರೆಡ್ ಒಳಗಡೆ ಚಿತ್ರ ಬಿಡಿಸಿರೋದಲ್ಲ ,, ಇದೆ ರೀತಿ ಬೈಸಿರೊದಂತೆ



(ಮದುವೆ ಮನೆಗಳಲ್ಲಿ ಮಾಡಿರುವ ತರಕಾರಿಯ ಕೆಲವು ವಿಚಿತ್ರ ಚಿತ್ರಗಳು ಇದೆ,, ಇನ್ನಸ್ಟು ಸಿಕ್ಕರೆ ಅದನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ)