Tuesday, February 23, 2010

ಹಸಿರು ಹುಲ್ಲಿನ ಕಲೆ... Grass ART !!! ಪರಿಸರ ಪ್ರೇಮಿ ಕಟ್ಟಡಗಳು

ಇವಾಗ ಎಲ್ಲ ಕಡೆ ಗ್ಲೋಬಲ್ ವಾರ್ಮಿಂಗ್ ದೇ discussion .... ನಮ್ಮಗಳ ಅನುಕೂಲಕ್ಕೆ ಎಷ್ಟು ಅಂತ pollution ಮಾಡ್ತಾ ಇದ್ದೇವೆ ಅಲ್ವ ನಾವು.... ಮರ ಗಿಡ ನೆಟ್ಟು ಬೆಳೆಸೋದು ಇರಲಿ..ಮೆಟ್ರೋ, ರಸ್ತೆ ಅಗಲೀಕರಣ , ಅಂತ ಸಮೃದ್ದವಾಗಿ ಬೆಳೆದಿರುವ ಮರಗಳನ್ನೇ ಮುಲಾಜಿಲ್ಲದೆ ಅಭಿವೃದ್ದಿ ಹೆಸರಿನಲ್ಲಿ ಕಡಿದು ಹಾಕ್ತಾ ಇದ್ದೇವೆ.. ಅಲ್ವ...? ಹಾಗೆ ಇನ್ನು ಕಾಡಿನ ಕಡೆ ಹೋದರೆ,,, ಒತ್ತುವರಿ,, ಮೈನಿಂಗ್. ಅದು ಇದು ಅಂತ ಅದನ್ನು ಒಂದು ಕಡೆ ಇಂದ ನಾಶ ಮಾಡ್ತಾ ಇದ್ದೇವೆ,,, ಹಾಂ ದೇವರಿಗೆ ಗೊತ್ತು,, ಇದು ಎಲ್ಲಿಗೆ ಹೋಗಿ ಮುಟ್ಟುತ್ತೋ ಅಂತ...

ಇದು ಹಾಗೆ ಇರಲಿ ಬಿಡಿ ಇದರ ಬಗ್ಗೆ ಎಷ್ಟು ಮಾತನಾಡಿದರು ಅಷ್ಟೇ ...... ಆದರೆ ಇಲ್ಲಿ ನೋಡಿ. ಒಂದು ಕಡೆ.. Patrick Blanc ಎಂಬ Architect ಹಸಿರು ಹುಲ್ಲಿನಿಂದ ಇಡಿ ಕಟ್ಟಡವನ್ನೇ ಅಲಂಕರಿಸಿದ್ದಾನೆ. ಇದೆ ರೀತಿ ಎಸ್ಟೊಂದ್ ಪ್ರಾಜೆಕ್ಟ್ ಗಳನ್ನು ಇವರು ಮಾಡಿದ್ದಾರೆ ಅಂತೆ....ನಾವುಗಳು ಬರಿ ಲಾನ್ ನಲ್ಲಿ ಹುಲ್ಲು ನೋಡಿರುತ್ತೇವೆ,, ಆದರೆ ಕೆಳಗಿನ ಚಿತ್ರಗಳನ್ನು ನೋಡಿ... ಕಟ್ಟಡದ ಮೇಲೆ ಎಲ್ಲ ಡಿಸೈನ್ ಡಿಸೈನ್ ಹುಲ್ಲು ಹಾಸಿನ ಚಿತ್ತಾರಗಳು... ಒಳಗಡೆ ಇರುವವರಿಗೆ AC ಫ್ಯಾನ್ ಏನು ಬೇಡ ಅಂತ ಕಾಣುತ್ತೆ ಅಲ್ವ... :-)

(Patric  Blanc  ಬಗ್ಗೆ , ಇವರ ಹಲವು ಪ್ರಾಜೆಕ್ಟ್ ಬಗ್ಗೆ, ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲ್ಲಿ ನೋಡಬಹುದು... http://www.verticalgardenpatrickblanc.com/ )








ಇದು ಇರುವುದು ಲಂಡನ್ ನಲ್ಲಿ ಅಂತೆ,, largest green wall in Britain , Covering over 820sq metres, it covers an area larger than 3 tennis courts!
London ನಲ್ಲಿ ನಮ್ಮ ಹೊಸ ಆಫೀಸ್ Docklands ಎಂಬಲ್ಲಿಗೆ ಶಿಫ್ಟ್ ಆಗಿದೆ,, ಸೊ next time ಲಂಡನ್ ಗೆ ಹೋಗೋಕೆ ಚಾನ್ಸ್ ಸಿಕ್ಕಾಗ,, ಇದರ ಹತ್ತಿರ ಇರುವ ಈ Largest ಗ್ರೀನ್ ವಾಲ್ ನ ನೋಡಿಕೊಂಡ್ ಬರಬೇಕು ಅಂತ ಅಸೆ .. ನೋಡೋಣ :-)



ಹಾಗೆ ಇಲ್ಲಿ ನೋಡಿ,,, ಸ್ಯಾನ್ ಫಾನ್ಸಿಸ್ಕೋ ನಗರದಲ್ಲಿ ಗ್ರೀನ್ ಸಿಟಿ ನ ಪ್ರಮೋಟ್ ಮಾಡಲಿಕ್ಕೆ ಹುಲ್ಲಿನ ಸೋಫಾ ನೆ ಮಾಡಿ ಪ್ರಚಾರ ಮಾಡ್ತಾ ಇದ್ದಾರೆ....





ನಾವು ಕಾಗದ (ಪೇಪರ್) ತಯಾರು ಮಾಡುವುದಕ್ಕೆ ಇಡೀ ಮರವನ್ನೇ ಕಟ್ ಮಾಡ್ತೇವೆ,, ಆದರೆ ಇಲ್ಲೊಂದ್ ಹಸಿರು ಹುಲ್ಲಿನ ಪುಸ್ತಕ ನೋಡಿ.... ಎಲ್ಲ ಪುಸ್ತಕಗಳು ಹೀಗೆ ಹಸಿರು ಹುಲ್ಲಿನಿಂದಲೇ ಇದ್ದರೆ ಹೇಗೆ ಇರುತ್ತೆ ಅಲ್ವ.? ಜಸ್ಟ್ imagin ಮಾಡಿಕೊಳ್ಳಿ  



ಇದೆ ರೀತಿ ಪರಿಸರ ಪ್ರೇಮ ಇರುವವರು ಕಟ್ಟಿಕೊಂಡ ಹುಲ್ಲಿನ ಚಾವಣಿಯ ಮನೆ ನೋಡಿ...ಮನೆ ಮೇಲು ಹಸಿರು ಹುಲ್ಲು ಹಾಗೆ ,, ಮನೆ ಒಳಗೂ ಸಹ....




25 comments:

  1. ಗುರು...,
    ಮತ್ತೊಂದು ಸೂಪರ್ ಕಲೆಕ್ಷನ್ ಜೊತೆ ಬಂದಿದ್ದೀರಿ. ಸೋಫಾ ಮತ್ತು ಪುಸ್ತಕದ ಚಿತ್ರಗಳು ಮೆಸೇಜ್ ಕೂಡಾ ಆಗಬಹುದೇನೋ..ದೊಡ್ಡ ಆಲದ ಮರ ಉರುಳಿದಾಗ ನೋಡಿ ಬಂದೆ....ತುಂಬಾ ಚೆನ್ನಾಗಿದೆ. thank u

    ReplyDelete
  2. ಗುರು ಸರ್ ಸೂಪರ್ ಕಲೆಕ್ಷನ್ ,
    ಎಲ್ಲ ಕಡೆಗಳಲ್ಲೂ ಈ ತರಹ ಹಸಿರು ವನಗಳು ಕಂಗೊಳಿಸಿದರೆ ಅದೆಸ್ಟು ಚೆನ್ನ ...

    ReplyDelete
  3. ಗುರು,

    ಮತ್ತೆ ಎರಡನೇ ಬಾರಿ ಸುಂದರ ಹುಲ್ಲುಹಾಸಿನ ಕಲಾಕೃತಿಗಳನ್ನು ಹುಡುಕಿತಂದಿದ್ದೀರಿ. ದಿನದ ಪ್ರಾರಂಭದಲ್ಲಿ ಇಂಥವನ್ನು ನೋಡಿದಾಗ ಮನಸ್ಸು ಉಲ್ಲಾಸಗೊಳ್ಳುವುದು ಖಂಡಿತ. ಧನ್ಯವಾದಗಳು.

    ReplyDelete
  4. nice collection of useful information & thanks for sharing.

    ReplyDelete
  5. ಮತ್ತೊಮ್ಮೆ ಒಳ್ಳೆಯ ಹಾಗೂ ಪ್ರಕೃತಿ ಸೌಂದರ್ಯ ಪ್ರಜ್ಞೆಯನ್ನು ನಮ್ಮಲ್ಲಿ ಮೂಡಿಸಿದ್ದೀರಿ. ಧನ್ಯವಾದಗಳು

    ReplyDelete
  6. ಸುಂದರ-ಅತಿ ಸುಂದರ. ನಿಮ್ಮ ಹಿಂದಿನ ಬ್ಲಾಗ್ ಪೋಸ್ಟಿನ ಚಿತ್ರಕ್ಕೆ ಕವನ ಬರೆದಿದ್ದೆ, ಚಿತ್ರಗಳು, ವಿವರಣೆ ಎಲ್ಲವು ಸೂಪರ್

    ReplyDelete
  7. ಗುರುಪ್ರಸಾದ್ ಅವರೆ...
    ಚೆಂದದ ಚಿತ್ರಗಳಿಗೆ ಸುಂದರ ವಿವರಣೆ.
    ಪರಿಸರಪ್ರೇಮದ ಬರಹ.
    ಇಷ್ಟವಾಯ್ತು.

    ReplyDelete
  8. ಅ೦ದದ ಚಿತ್ರಗಳೊ೦ದಿಗೆ ಸು೦ದರ ವಿವರಣೆ!
    thanks..

    ReplyDelete
  9. ಗುರುಗಳೆ, Supeer ree nimma collection... I like it...

    ReplyDelete
  10. ಗುರು ಸರ್
    ಸುಂದರ ಫೋಟೋಗಳು
    ಜೊತೆಗೆ ಅಚ್ಚು ಕಟ್ಟಾದ ವಿವರಣೆ
    ನಿಮ್ಮ ಬ್ಲಾಗಿನ ವೈವಿದ್ಯತೆಗೆ ಮನಸೋತೆ

    ReplyDelete
  11. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸುಬ್ರಮಣ್ಯ .. ಹೌದು ನೀವು ಹೇಳಿದ ಹಾಗೆ ,, ಸೋಫಾ ಹಾಗು ಹುಲ್ಲಿನ ಪುಸ್ತಕ ಮೆಸೇಜ್ ಕೂಡ ಹೌದು,,
    ಹಿಂದಿನ ಲೇಖನ " ದೊಡ್ಡ ಆಲದ ಮರ ಉರುಳಿದಾಗ" ನೋಡಿ ಇಷ್ಟ ಪಟ್ಟಿದ್ದಕೆ ಧನ್ಯವಾದಗಳು

    ReplyDelete
  12. ಹೌದು ರಂಜಿತ,,, ಎಲ್ಲ ಕಡೆನು ಹಸಿರು ಹಸಿರು ಕೊಂಗೊಲಿಸುತ್ತಲಿದ್ದರೆ ಎಷ್ಟು ಚೆನ್ನಾಗಿ ಇರುತ್ತೆ ಅಲ್ವ ...

    ReplyDelete
  13. ಶಿವೂ
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.. ಹೌದಲ್ವ,, ಹಸಿರಿನ ಮಹಿಮೆಯೇ ಅಂತಹುದು...ಇದರ ಬಗ್ಗೆ ಹವ್ಯಾಸಿ photographer ಆಗಿರುವ ನಿಮಗೆ ಚೆನ್ನಾಗಿ ಗೊತ್ತಿರುತ್ತೆ....

    ReplyDelete
  14. ಥ್ಯಾಂಕ್ಸ್ ಸೀತಾರಾಮ ಸರ್,,

    ReplyDelete
  15. ಧನ್ಯವಾದಗಳು ಮನಸು....

    ReplyDelete
  16. ಪರಾಂಜಪೆ,,
    ನೋಡಿದೆ ನಿಮ್ಮ ಕವನ,,, ತುಂಬ ಚೆನ್ನಾಗಿ ಮೂಡಿ ಬಂದಿದೆ. .. ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  17. ಶಾಂತಲ ಅಕ್ಕ ..
    ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.... ಹೀಗೆ ಬರುತ್ತಿರಿ...

    ReplyDelete
  18. ಧನ್ಯವಾದಗಳು ಮನಮುಕ್ತಾ...

    ReplyDelete
  19. ನಮಸ್ಕಾರ ಶಾಂತಿಪ್ರಸಾದ್,,, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ,,, ಹೀಗೆ ಬರುತ್ತಿರಿ...

    ReplyDelete
  20. ಥ್ಯಾಂಕ್ಸ್ ಗುರು ಸರ್..

    ReplyDelete
  21. Superb Collection Guru...ತುಂಬಾ ಚೆನ್ನಾಗಿದೆ :)

    ReplyDelete