Thursday, March 15, 2012

ಬುದ್ದ ಶಾಂತಿ ಕಣಿವೆ,...... Buddha Park

ಬುದ್ದ ಶಾಂತಿ ಕಣಿವೆ,......
ಬುದ್ದ ಶಾಂತಿ ಕಣಿವೆ  ನಾಗರಭಾವಿ 2nd ಬ್ಲಾಕ್  ಹತ್ರ ಹೊಸದಾಗಿ ಆಗಿರುವ ಒಂದು ಸುಂದರವಾದ ಪಾರ್ಕ್.  ಮೊನ್ನೆ ಸಂಜೆ ನಮ್ಮ ಫ್ಯಾಮಿಲಿ ಜೊತೆ ಇಲ್ಲಿಗೆ ಹೋಗಿದ್ದೆ... ನಿಜವಾಗ್ಲೂ ತುಂಬಾ ಚೆನ್ನಾಗಿ ಇದೆ ಈ ಪಾರ್ಕ್, ಯಾವುದೊ ಪ್ರೈವೇಟ್ ಕಂಪನಿ "ಮಾಯಾ"  ಇದನ್ನ maintain ಮಾಡ್ತಾ ಇರೋದಂತೆ....  ತುಂಬಾ ಚೆನ್ನಾಗಿ  maintain ಮಾಡಿದ್ದಾರೆ .
ಮೊದಲು ಈ ಪಾರ್ಕ್ ನ ಹೊರಾಂಗಣ ನೋಡಿ ಯಾವುದೊ ಬೇರೆ ದೇಶದ ಪಾರ್ಕ್ ಇರಬೇಕು ಇದು ಅಂತ ಅನ್ನಿಸಿತು....ಸುಂದರವಾದ ಹೂವಿನ ಸಾಲುಗಳು,,,, ಚೊಕ್ಕವಾಗಿ ಮೂಡಿರುವ ಹಸಿರಿನ ನೆಲ ಹಾಸು....    ಚಿಕ್ಕ ಗುಡ್ಡದ ಮೇಲೆ ಪ್ರಶಾಂತತೆ ಇಂದ ಕೂತಿರುವ ಬುದ್ದನ ವಿಗ್ರಹ ..... ಬುದ್ದನ ಇತಿಹಾಸವನ್ನು ಸಾರುವ ದೊಡ್ಡ ಮುಖದಾಕರದ ಸ್ಥಬ್ದ ಪ್ರತಿಮೆ...  ಚೈನೀಸ್ ಸ್ಟೈಲ್ ನ ಮಂಟಪ ಗಳು...
ಡ್ರಾಗನ್...  ಸುಂದರವಾದ fountain  ಸಣ್ಣಗೆ ಹರಿಯುವ ನೀರಿನ ಜಲಪಾತ... ವಃ.. ಇದರ ಮಧ್ಯ ಒಂದು ಅಮ್ಮನವರ ಗುಡಿ ಕೂಡ ಇದೆ...  ಒಂದು ಸುಂದರವಾದ ಸಂಜೆಯನ್ನು... ನಿಮ್ಮ ಫ್ಯಾಮಿಲಿ ಜೊತೆ ಇಲ್ಲಿ ಆರಾಮವಾಗಿ ಕಳೆಯಬಹುದು.....
ಸದ್ಯವಾದಾಗ ಒಮ್ಮೆ ಬೀಟಿ ನೀಡಿ.....