Monday, November 16, 2009

IT ಕಂಪನಿನಲ್ಲಿ ಹೀಗೊಂದು ಕನ್ನಡ ರಾಜ್ಯೋತ್ಸವ.....

ನಮಸ್ಕಾರ
ನನ್ನ ಇಂದಿನ article ,, ನಮ್ಮ ಕಂಪನಿ ನಲ್ಲಿ ಆಚರಿಸಿದ ಕನ್ನಡ ರಾಜ್ಯೋತ್ಸವದ ಬಗ್ಗೆ .. ಹೌದು IT ಕಂಪನಿನಲ್ಲಿ ಕನ್ನಡ ಮಾತಾಡೋದೇ ಕಷ್ಟ ಆಗಿರೋವಾಗ, ಕನ್ನಡ ರಾಜ್ಯೋತ್ಸವ ಎಲ್ಲಿಂದ ಆಚರಿಸ ಬೇಕು ಅಂತೀರಾ... ಕನ್ನಡದ ಬಗ್ಗೆ ಅಭಿಮಾನ ಇದ್ದರೆ, ಆಚರಿಸಲೇ ಬೇಕು ಅನ್ನೋ ಆಸಕ್ತಿ ಇದ್ದರೆ ಖಂಡಿತ ಆಚರಿಸಬಹುದು,, ಆದರೆ ನಮ್ಮ ಕನ್ನಡಿಗರು ಸ್ವಲ್ಪ ಸೋಮಾರಿಗಳು....ಬರಿ ಮಾತಿನಲ್ಲಿ ಹೇಳ್ತಾರೆ ಅಸ್ಟೇ ಅದು ಮಾಡಬೇಕು , ನಮ್ಮ ಕನ್ನಡ ಬಗ್ಗೆ ಹೀಗೆ ಅಭಿಮಾನ ಇರಬೇಕು ಅಂತ, ಆದರೆ ಮುಂದೆ ಬಂದು ಮಾಡಬೇಕು ಅಸ್ಟೇ... ಮೊನ್ನೆ ತಾನೆ ವಿಜಯ ಕರ್ನಾಟಕ ಪೇಪರ್ ನಲ್ಲಿ ಒಂದು Article  ಬಂದಿತ್ತು "ಸ್ನೇಹ ಭಟ್ಟ್ " ಎಂಬ IT ಉದ್ಯೋಗಿ ಒಬ್ಬರು IT ಕಂಪನಿ ನಲ್ಲಿ ಇರುವ ಕನ್ನದಭಿಮಾನದ ಬಗ್ಗೆ ಅವಲತ್ತು ಕೊಂಡು ಬರೆದಿದ್ದರು,,, ( ನವೆಂಬರ್ 12, 2009 Page 9 ) " ಆಟೋ , ಕ್ಯಾಬ್ ಡ್ರೈವರ್ ಗಳಲ್ಲಿ ಇರುವ ಕನ್ನಡಾಭಿಮಾನ IT ಕಂಪನಿ ನಲ್ಲಿ ಇರುವ ಕನ್ನಡಿಗರಿಗೀಕೆ ಇಲ್ಲ ಅಂತ" ಹೌದು IT ಕಂಪನಿ ನಲ್ಲಿ ಇರುವ ವಾಸ್ತವವನ್ನು ತುಂಬ ಚೆನ್ನಾಗಿ ಬರೆದಿದ್ದಾರೆ. ನ್ಯೂ ಇಯರ್ day, ಕ್ರಿಸ್ಮಸ್ day ಅಂತ ಕಂಪನಿ ಎಲ್ಲ ಅಲಂಕಾರ ಮಾಡಿ, ಸಿಹಿ , ಪಾರ್ಟಿ ಅಂತ ಹೇಳಿ celebrate ಮಾಡಬೇಕಾದರೆ, ನಮ್ಮ ದೇಶದ ಬಗ್ಗೆ, ನಮ್ಮ ನಾಡಿನ ಬಗ್ಗೆ ಇರುವ ಅಭಿಮಾನವನ್ನು ಯಾಕೆ ತೋರಿಸಬಾರದು.... ಅದೇ ಆಟೋ ಡ್ರೈವರ್, ಕ್ಯಾಬ್ ಡ್ರೈವರ್ ನೋಡಿ,, ಎಷ್ಟು ಚೆನ್ನಾಗಿ ತಮ್ಮ ಗಾಡಿಗಳನ್ನು ಅಲಂಕಾರ ಮಾಡಿ, ಕನ್ನಡ ಬಾವುಟ ಹಾಕಿಕೊಂಡು ಅಭಿಮಾನವನ್ನು ಮೆರಿತಾರೆ....ಅದು ನಮ್ಮಿಂದ ಯಾಕೆ ಸಾದ್ಯವಿಲ್ಲ... ಆದರೆ ನಮ್ಮ ಕಂಪನಿ ನಲ್ಲಿ ಇರುವ ಕನ್ನಡ ಸಹದ್ಯೋಗಿಗಳು, ಇದು ಸಾದ್ಯ ಅಂತ ತೋರಿಸಿದ್ದೇವೆ...
ಕಳೆದ ಒಂದು ವರುಷದಿಂದ ನಾವುಗಳು ನಮ್ಮ ಕಂಪನಿ ನಲ್ಲಿ ಇರುವ ಕನ್ನಡ ಸಹದ್ಯೋಗಿ ಬಂದುಗಳನ್ನು ಒಟ್ಟಿಗೆ ಸೇರಿಸಿ, ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಿಸುವುದಕ್ಕೆ ಶುರು ಮಾಡಿದ್ದೆವು,, ಈ ಸರಿ ಅಂತು ಅದಕ್ಕೆ ಅದ್ಬುತ ಪ್ರತಿಕ್ರಿಯೆ ಸಿಕ್ಕಿದೆ....ತುಂಬ ಜನ ಕನ್ನಡ ಸಹದ್ಯೋಗಿಗಳು ಕೈ ಜೋಡಿಸಿ,, ಕನ್ನಡಾಭಿಮಾನವನ್ನು ಮೆರೆದಿದ್ದೇವೆ...
ಮೊದಲೇ ಎಲ್ಲ ಪ್ಲಾನ್ ಮಾಡಿ,,, ನವೆಂಬರ್ ತಿಂಗಳಲ್ಲಿ ಒಂದು ದಿನ ಸರಳವಾಗಿ ಕನ್ನಡ ರಾಜ್ಯೋತ್ಸವ ವನ್ನು ಆಚರಿಸಬೇಕು ಅಂತ ನಿರ್ಧರಿಸಿ,, ಅಂದು ಎಲ್ಲ ಕನ್ನಡ ಸಹದ್ಯೋಗಿಗಳು ಒಂದೇ ಥರದ ಕನ್ನಡ T-shirt ಅನ್ನು ಹಾಕಿಕೊಂಡು ಬರಬೇಕು ಹಾಗೆ ಅಂದು ಸಂಜೆ, ನಮ್ಮ ಕಂಪನಿ ನಲ್ಲಿ ಇರುವ ಎಲ್ಲರಿಗೂ, ಸಿಹಿ ಯನ್ನು ಹಂಚಿ ಸರಳವಾಗಿ ಕನ್ನಡ ರಾಜ್ಯೋತ್ಸವನನ್ನು ಆಚರಿಸಬೇಕು ಅಂತ ಅಂದುಕೊಂಡು ಹಾಗೆ ಆಚರಿಸಿ ಸಂಭ್ರಮಿಸಿದ್ದೇವೆ ..... ಅದರ ಕೆಲವು ಫೋಟೋಗಳು ಇಲ್ಲಿವೆ ನೋಡಿ,,
ಎಲ್ಲರಿಗೂ ವೈಟ್ color T -shirt ನಲ್ಲಿ ಕನ್ನಡ ಹೆಸರಾಂತ ಕವಿಗಳ ಫೋಟೋ ಇರುವ ಚಿತ್ರ ಹಾಕಿಸಿ,, ಕನ್ನಡದಲ್ಲಿ " IT ನಲ್ಲಾದರು ಇರು , ಅಂತರಿಕ್ಷದಲ್ಲಿಯಾದರು ಇರು ಎಂದೆಂದಿಗೂ ನೀ ಕನ್ನಡಿಗನಾಗಿರು" ಅಂತ ಬರೆಸಿದ್ದೆವು, ಕಳೆದ ಶುಕ್ರವಾರ Nov 13 ರಂದು ಎಲ್ಲರೂ ಅದೇ T-ಶರ್ಟ್ ನಲ್ಲಿ ಬಂದಿದ್ದೆವು,, ಹಾಗೆ ಸಂಜೆ ಆಫೀಸ್ ನಲ್ಲಿ ಇರುವ ಎಲ್ಲರಿಗೂ ನಂದಿನಿ ಪೇಡ ಹಾಗು ಚಿಕ್ಕ ಕೋಡುಬಳೆಯನ್ನು ಕೊಟ್ಟು, ತುಂಬ ಸಿಂಪಲ್ ಆಗಿ ಆಚರಿಸಿದ್ದು ಒಂದು ವಿಶೇಷ, ಮತ್ತೊಂದು ವಿಶೇಷವೆಂದರೆ,, ಬೇರೆ State ನಿಂದ ಬಂದಿರುವವರು,, ನಮ್ಮ ಈ ಕಾರ್ಯಕ್ರಮಕ್ಕೆ ಅವರಾಗಿಯೇ ಕೇಳಿಕೊಂಡು ನಮ್ಮ ಜೊತೆ ಕೈಜೋಡಿಸಿದ್ದರು, north ಇಂಡಿಯಾ ನಿಂದ ಬಂದ ಸಹದ್ಯೋಗಿ ಒಬ್ಬರು " ನಾವು ಬೇರೆ ಕಡೆ ಇಂದ ಬಂದಿರಬಹುದು,, ಆದರೆ ನಾವು ಇವಾಗ ಇರುವುದು ಬೆಂಗಳೂರಿನಲ್ಲಿ , ನಿಮ್ಮ ಈ ಕಾರ್ಯಕ್ರಮದಲ್ಲಿ ನಾವು ಬಾಗವಹಿಸುವ ಹಕ್ಕಿದೆ , ನನಗು ಒಂದು ಕನ್ನಡದ T-ಶರ್ಟ್ ಕೊಡಿ ಅಂತ ಕೇಳಿ ಭಾಗವಹಿಸಿದ್ದು ತುಂಬ ವಿಶೇಷವಾಗಿತ್ತು"
ಗೆಳೆಯರೇ ನೋಡಿ ನಿಮ್ಮ ಕಂಪನಿ ನಲ್ಲೂ ಕನ್ನಡದ ಸಹದ್ಯೋಗಿಗಳು ಇದ್ದರೆ, ನೀವು ಕೂಡ ಕೈಜೋಡಿಸಿ, ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಸಾದ್ಯ ವಿದ್ದರೆ ಆಚರಿಸಿ, ನವೆಂಬರ್ ತಿಂಗಳು ಇನ್ನು ಮುಗಿದಿಲ್ಲ , ನಮ್ಮ ಕನ್ನಡವನ್ನು ಉಳಿಸಿ ಹಾಗೆ ಬೆಳೆಯುವುದಕ್ಕೆ ಅವಕಾಶ ಮಾಡಿ ಕೊಡಿ, , ಹಾಂ ನಿಮ್ಮ  ಕಂಪನಿ ನಲ್ಲಿ ಯಾರು organizers ಇಲ್ಲ ಅಂತ ಅಂದುಕೊಂಡು ಸುಮ್ಮನೆ ಇರಬೇಡಿ,, ಅವಕಾಶ ಇದ್ದರೆ ನೀವೇ organise ಮಾಡಿ ಎಲ್ಲರನ್ನು ಸೇರಿಸಿ , ಖಂಡಿತ ಚೆನ್ನಾಗಿ ಇರುತ್ತೆ...ಎಲ್ಲರು ಖುಷಿ ಪಡುತ್ತಾರೆ... ಆದರೆ ಯಾರನ್ನು (ಅನ್ಯ ಭಾಷಿಕರನ್ನು ) ಬಲವಂತ ಪಡಿಸಬೇಡಿ, ಸರಳವಾಗಿ ನಮ್ಮ ಸಂಸ್ಕೃತಿಯನ್ನು ತಿಳಿಸಿ ಹೇಳಿ ಅಸ್ಟೇ ...












ಜೈ ಕರ್ನಾಟಕ.....