ನನ್ನ ಇಂದಿನ article ,, ನಮ್ಮ ಕಂಪನಿ ನಲ್ಲಿ ಆಚರಿಸಿದ ಕನ್ನಡ ರಾಜ್ಯೋತ್ಸವದ ಬಗ್ಗೆ .. ಹೌದು IT ಕಂಪನಿನಲ್ಲಿ ಕನ್ನಡ ಮಾತಾಡೋದೇ ಕಷ್ಟ ಆಗಿರೋವಾಗ, ಕನ್ನಡ ರಾಜ್ಯೋತ್ಸವ ಎಲ್ಲಿಂದ ಆಚರಿಸ ಬೇಕು ಅಂತೀರಾ... ಕನ್ನಡದ ಬಗ್ಗೆ ಅಭಿಮಾನ ಇದ್ದರೆ, ಆಚರಿಸಲೇ ಬೇಕು ಅನ್ನೋ ಆಸಕ್ತಿ ಇದ್ದರೆ ಖಂಡಿತ ಆಚರಿಸಬಹುದು,, ಆದರೆ ನಮ್ಮ ಕನ್ನಡಿಗರು ಸ್ವಲ್ಪ ಸೋಮಾರಿಗಳು....ಬರಿ ಮಾತಿನಲ್ಲಿ ಹೇಳ್ತಾರೆ ಅಸ್ಟೇ ಅದು ಮಾಡಬೇಕು , ನಮ್ಮ ಕನ್ನಡ ಬಗ್ಗೆ ಹೀಗೆ ಅಭಿಮಾನ ಇರಬೇಕು ಅಂತ, ಆದರೆ ಮುಂದೆ ಬಂದು ಮಾಡಬೇಕು ಅಸ್ಟೇ... ಮೊನ್ನೆ ತಾನೆ ವಿಜಯ ಕರ್ನಾಟಕ ಪೇಪರ್ ನಲ್ಲಿ ಒಂದು Article ಬಂದಿತ್ತು "ಸ್ನೇಹ ಭಟ್ಟ್ " ಎಂಬ IT ಉದ್ಯೋಗಿ ಒಬ್ಬರು IT ಕಂಪನಿ ನಲ್ಲಿ ಇರುವ ಕನ್ನದಭಿಮಾನದ ಬಗ್ಗೆ ಅವಲತ್ತು ಕೊಂಡು ಬರೆದಿದ್ದರು,,, ( ನವೆಂಬರ್ 12, 2009 Page 9 ) " ಆಟೋ , ಕ್ಯಾಬ್ ಡ್ರೈವರ್ ಗಳಲ್ಲಿ ಇರುವ ಕನ್ನಡಾಭಿಮಾನ IT ಕಂಪನಿ ನಲ್ಲಿ ಇರುವ ಕನ್ನಡಿಗರಿಗೀಕೆ ಇಲ್ಲ ಅಂತ" ಹೌದು IT ಕಂಪನಿ ನಲ್ಲಿ ಇರುವ ವಾಸ್ತವವನ್ನು ತುಂಬ ಚೆನ್ನಾಗಿ ಬರೆದಿದ್ದಾರೆ. ನ್ಯೂ ಇಯರ್ day, ಕ್ರಿಸ್ಮಸ್ day ಅಂತ ಕಂಪನಿ ಎಲ್ಲ ಅಲಂಕಾರ ಮಾಡಿ, ಸಿಹಿ , ಪಾರ್ಟಿ ಅಂತ ಹೇಳಿ celebrate ಮಾಡಬೇಕಾದರೆ, ನಮ್ಮ ದೇಶದ ಬಗ್ಗೆ, ನಮ್ಮ ನಾಡಿನ ಬಗ್ಗೆ ಇರುವ ಅಭಿಮಾನವನ್ನು ಯಾಕೆ ತೋರಿಸಬಾರದು.... ಅದೇ ಆಟೋ ಡ್ರೈವರ್, ಕ್ಯಾಬ್ ಡ್ರೈವರ್ ನೋಡಿ,, ಎಷ್ಟು ಚೆನ್ನಾಗಿ ತಮ್ಮ ಗಾಡಿಗಳನ್ನು ಅಲಂಕಾರ ಮಾಡಿ, ಕನ್ನಡ ಬಾವುಟ ಹಾಕಿಕೊಂಡು ಅಭಿಮಾನವನ್ನು ಮೆರಿತಾರೆ....ಅದು ನಮ್ಮಿಂದ ಯಾಕೆ ಸಾದ್ಯವಿಲ್ಲ... ಆದರೆ ನಮ್ಮ ಕಂಪನಿ ನಲ್ಲಿ ಇರುವ ಕನ್ನಡ ಸಹದ್ಯೋಗಿಗಳು, ಇದು ಸಾದ್ಯ ಅಂತ ತೋರಿಸಿದ್ದೇವೆ...
ಕಳೆದ ಒಂದು ವರುಷದಿಂದ ನಾವುಗಳು ನಮ್ಮ ಕಂಪನಿ ನಲ್ಲಿ ಇರುವ ಕನ್ನಡ ಸಹದ್ಯೋಗಿ ಬಂದುಗಳನ್ನು ಒಟ್ಟಿಗೆ ಸೇರಿಸಿ, ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಿಸುವುದಕ್ಕೆ ಶುರು ಮಾಡಿದ್ದೆವು,, ಈ ಸರಿ ಅಂತು ಅದಕ್ಕೆ ಅದ್ಬುತ ಪ್ರತಿಕ್ರಿಯೆ ಸಿಕ್ಕಿದೆ....ತುಂಬ ಜನ ಕನ್ನಡ ಸಹದ್ಯೋಗಿಗಳು ಕೈ ಜೋಡಿಸಿ,, ಕನ್ನಡಾಭಿಮಾನವನ್ನು ಮೆರೆದಿದ್ದೇವೆ...
ಮೊದಲೇ ಎಲ್ಲ ಪ್ಲಾನ್ ಮಾಡಿ,,, ನವೆಂಬರ್ ತಿಂಗಳಲ್ಲಿ ಒಂದು ದಿನ ಸರಳವಾಗಿ ಕನ್ನಡ ರಾಜ್ಯೋತ್ಸವ ವನ್ನು ಆಚರಿಸಬೇಕು ಅಂತ ನಿರ್ಧರಿಸಿ,, ಅಂದು ಎಲ್ಲ ಕನ್ನಡ ಸಹದ್ಯೋಗಿಗಳು ಒಂದೇ ಥರದ ಕನ್ನಡ T-shirt ಅನ್ನು ಹಾಕಿಕೊಂಡು ಬರಬೇಕು ಹಾಗೆ ಅಂದು ಸಂಜೆ, ನಮ್ಮ ಕಂಪನಿ ನಲ್ಲಿ ಇರುವ ಎಲ್ಲರಿಗೂ, ಸಿಹಿ ಯನ್ನು ಹಂಚಿ ಸರಳವಾಗಿ ಕನ್ನಡ ರಾಜ್ಯೋತ್ಸವನನ್ನು ಆಚರಿಸಬೇಕು ಅಂತ ಅಂದುಕೊಂಡು ಹಾಗೆ ಆಚರಿಸಿ ಸಂಭ್ರಮಿಸಿದ್ದೇವೆ ..... ಅದರ ಕೆಲವು ಫೋಟೋಗಳು ಇಲ್ಲಿವೆ ನೋಡಿ,,
ಎಲ್ಲರಿಗೂ ವೈಟ್ color T -shirt ನಲ್ಲಿ ಕನ್ನಡ ಹೆಸರಾಂತ ಕವಿಗಳ ಫೋಟೋ ಇರುವ ಚಿತ್ರ ಹಾಕಿಸಿ,, ಕನ್ನಡದಲ್ಲಿ " IT ನಲ್ಲಾದರು ಇರು , ಅಂತರಿಕ್ಷದಲ್ಲಿಯಾದರು ಇರು ಎಂದೆಂದಿಗೂ ನೀ ಕನ್ನಡಿಗನಾಗಿರು" ಅಂತ ಬರೆಸಿದ್ದೆವು, ಕಳೆದ ಶುಕ್ರವಾರ Nov 13 ರಂದು ಎಲ್ಲರೂ ಅದೇ T-ಶರ್ಟ್ ನಲ್ಲಿ ಬಂದಿದ್ದೆವು,, ಹಾಗೆ ಸಂಜೆ ಆಫೀಸ್ ನಲ್ಲಿ ಇರುವ ಎಲ್ಲರಿಗೂ ನಂದಿನಿ ಪೇಡ ಹಾಗು ಚಿಕ್ಕ ಕೋಡುಬಳೆಯನ್ನು ಕೊಟ್ಟು, ತುಂಬ ಸಿಂಪಲ್ ಆಗಿ ಆಚರಿಸಿದ್ದು ಒಂದು ವಿಶೇಷ, ಮತ್ತೊಂದು ವಿಶೇಷವೆಂದರೆ,, ಬೇರೆ State ನಿಂದ ಬಂದಿರುವವರು,, ನಮ್ಮ ಈ ಕಾರ್ಯಕ್ರಮಕ್ಕೆ ಅವರಾಗಿಯೇ ಕೇಳಿಕೊಂಡು ನಮ್ಮ ಜೊತೆ ಕೈಜೋಡಿಸಿದ್ದರು, north ಇಂಡಿಯಾ ನಿಂದ ಬಂದ ಸಹದ್ಯೋಗಿ ಒಬ್ಬರು " ನಾವು ಬೇರೆ ಕಡೆ ಇಂದ ಬಂದಿರಬಹುದು,, ಆದರೆ ನಾವು ಇವಾಗ ಇರುವುದು ಬೆಂಗಳೂರಿನಲ್ಲಿ , ನಿಮ್ಮ ಈ ಕಾರ್ಯಕ್ರಮದಲ್ಲಿ ನಾವು ಬಾಗವಹಿಸುವ ಹಕ್ಕಿದೆ , ನನಗು ಒಂದು ಕನ್ನಡದ T-ಶರ್ಟ್ ಕೊಡಿ ಅಂತ ಕೇಳಿ ಭಾಗವಹಿಸಿದ್ದು ತುಂಬ ವಿಶೇಷವಾಗಿತ್ತು"
ಗೆಳೆಯರೇ ನೋಡಿ ನಿಮ್ಮ ಕಂಪನಿ ನಲ್ಲೂ ಕನ್ನಡದ ಸಹದ್ಯೋಗಿಗಳು ಇದ್ದರೆ, ನೀವು ಕೂಡ ಕೈಜೋಡಿಸಿ, ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಸಾದ್ಯ ವಿದ್ದರೆ ಆಚರಿಸಿ, ನವೆಂಬರ್ ತಿಂಗಳು ಇನ್ನು ಮುಗಿದಿಲ್ಲ , ನಮ್ಮ ಕನ್ನಡವನ್ನು ಉಳಿಸಿ ಹಾಗೆ ಬೆಳೆಯುವುದಕ್ಕೆ ಅವಕಾಶ ಮಾಡಿ ಕೊಡಿ, , ಹಾಂ ನಿಮ್ಮ ಕಂಪನಿ ನಲ್ಲಿ ಯಾರು organizers ಇಲ್ಲ ಅಂತ ಅಂದುಕೊಂಡು ಸುಮ್ಮನೆ ಇರಬೇಡಿ,, ಅವಕಾಶ ಇದ್ದರೆ ನೀವೇ organise ಮಾಡಿ ಎಲ್ಲರನ್ನು ಸೇರಿಸಿ , ಖಂಡಿತ ಚೆನ್ನಾಗಿ ಇರುತ್ತೆ...ಎಲ್ಲರು ಖುಷಿ ಪಡುತ್ತಾರೆ... ಆದರೆ ಯಾರನ್ನು (ಅನ್ಯ ಭಾಷಿಕರನ್ನು ) ಬಲವಂತ ಪಡಿಸಬೇಡಿ, ಸರಳವಾಗಿ ನಮ್ಮ ಸಂಸ್ಕೃತಿಯನ್ನು ತಿಳಿಸಿ ಹೇಳಿ ಅಸ್ಟೇ ...
ಜೈ ಕರ್ನಾಟಕ.....
ಖುಷಿಯಾಯ್ತು, ನಿಮ್ಮ ಕನ್ನಡಾಭಿಮಾನ ಕಂಡು. ರಾಜ್ಯೋತ್ಸವ ಆಚರಣೆಯ ಹಿ೦ದಿರುವ ನಿಮ್ಮ ಸದಾಶಯ ಮೆಚ್ಚುವಂಥಾದ್ದು. ನಿಮ್ಮ ಕಾರ್ಯ ಉಳಿದೆಲ್ಲ IT ಕ೦ಪೆನಿಗಳಿಗೆ ಮಾದರಿಯಾಗಲಿ ಎ೦ದು ಹಾರೈಸುವೆ.
ReplyDeleteಗುರು ತುಂಬಾ ಖುಷಿಯಾಯಿತು. ಇಂದು ಶಾಲಾಕಾಲೇಜುಗಳಲ್ಲೇ ಕನ್ನಡ ರಾಜ್ಯೋತ್ಸವ ಆಚರಿಸುವುದು ಕಡಿಮೆಯಾಗಿದೆ. ಅದರಲ್ಲಿ ನಿಮ್ಮ ತರದ ಉತ್ಸಾಹಿ ಯುವಕರುಸೇರಿ ವಿಶೇಷ ಹಾಗೂ ವಿಭಿನ್ನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದು ತುಂಬಾನೆ ಖುಷಿಕೊಟ್ಟಿದೆ. ನಿಮ್ಮ ಈ ಉತ್ಸಾಹ ನೂರ್ಮಡಿಯಾಗಲೀ ಎಂದು ಹಾರೈಸುತ್ತೇನೆ.
ReplyDeleteಸಕ್ಕತ್. ತುಂಬ ಸಂತೋಷವಾಯಿತು ನಿಮ್ಮ ಆಚರಣೆಯ ರೀತಿ ನೋಡಿ. ಸ್ವೀಟ್ ಆಂಡ್ ಸಿಂಪಲ್. ಅಂತಹ ಟಿ-ಶರ್ಟ್ ಧರಿಸುವುದರಲ್ಲೇ ಇಂದು ಉತ್ಸಾಹ ಅಲ್ವ?
ReplyDeleteಹೀಗೇ ಮುಂದುವರಿಯಲಿ ನಿಮ್ಮ ಆಚರಣೆಗಳು.
’ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು’, ಎಂಬ ಕುವೆಂಪುವಾಣಿಯನ್ನು ಪಾಲಿಸಿ ತೋರಿಸಿದ್ದೀರಿ. ಇತರರಿಗೆ ಆದರ್ಶರಾಗಿದ್ದೀರಿ.
ReplyDeleteಧನ್ಯವಾದಗಳು ಪರಾಂಜಪೆ...
ReplyDeleteಹೌದು ಸತ್ಯನಾರಾಯಣ ಸರ್, ಶಾಲಾ ಕಾಲೇಜು ಗಳಲ್ಲೇ ಅಭಿಮಾನ ಕಮ್ಮಿ ಆಗಿದೆ... ಅದೇ ರೀತಿ, ಕೆಲವು IT ಕಂಪನಿ ಗಳಲ್ಲಿ , ಕನ್ನಡ ದಲ್ಲಿ ಮಾತನಾಡುವುದೆಂದರೆ ಏನೋ ಒಂದು ತರ ತಾತ್ಸಾರದಿಂದ ನೋಡುತ್ತಾರೆ.. ಬೇರೆಯವರಿಗೆ ನಮ್ಮ ನಾಡಿನಲ್ಲಿ ಜಾಗ ಕೊಟ್ಟು, ಅವರು ಉದ್ದಾರ ಆಗುವುದಕ್ಕೆ ಅವಕಾಶ ಮಾಡಿ ಕೊಟ್ಟು,, ಇನ್ನು ಅಂತಹವರ ಕೈನಲ್ಲೇ ಅನ್ನಿಸಿಕೊಳ್ಳುವುದು ಏನಿದೆ.... ನಮ್ಮ ತನ, ನಮ್ಮ ಭಾಷೆಯನ್ನು ಯಾವಾಗಲು ಬಿಡಬಾರದು,,, ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲೆ ಇದೆ ಅಲ್ವೇ...
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು ರಾಜೀವ.. ಹೌದು,, ಕನ್ನಡ T-shirt, ಅನ್ನು ಧರಿಸುವುದರಲ್ಲೇ ಏನೋ ಒಂದು ಹೆಮ್ಮೆ,
ReplyDeleteಧನ್ಯವಾದಗಳು ಆನಂದರಾಮ ಶಾಸ್ತ್ರೀ ಸರ್ .
ReplyDeleteಗುರು ತುಂಬಾ ಖುಷಿಯಾಯಿತು. :)
ReplyDeleteThanks ಶಿವಪ್ರಕಾಶ್ .. :-)
ReplyDeleteಗುರು,
ReplyDeleteಬಹಳ ಖುಷಿಯಾಯಿತು......
ಅಭಿನಂದನೆಗಳು...
"ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು"
ಧನ್ಯವಾದಗಳು ಸವಿಗನಸು ....
ReplyDeleteಗುರು, ತುಂಬಾ ಚೆನ್ನಾಗಿದೆ ನಿಮ್ಮ ಆಚರಣೆ, ಆ ಟಿ-ಶರ್ಟುಗಳು ತುಂಬಾ ಚೆನ್ನಾಗಿವೆ...
ReplyDeleteಗುರು,
ReplyDeleteIT ಕಂಪನಿನಲ್ಲಿ ಹೀಗೊಂದು ಕನ್ನಡ ರಾಜ್ಯೋತ್ಸವ..... ಒಳ್ಳೇದನ್ನ ಮಾಡಿದ್ದಿರ.. ಟೀ-ಶರ್ಟ್ ಮೇಲೆ ಒಳ್ಳೊಳ್ಳೆಯ ಕನ್ನಡ ಸಾಲುಗಳನ್ನೂ ಹಾಕಿ ಕವಿಗಳ ಚಿತ್ರಗಳನ್ನು ಅಚ್ಚು ಹಾಕಿಸಿದ್ದಿರಿ... ಅಬಿನಂಧನೆಗಳು... ಎಲ್ಲರು ಸೇರಿ ಕನ್ನಡ ಹಂಚೋಣ...
ನಿಮ್ಮವ,
ರಾಘು.
ಗುರು ಅವರೇ....
ReplyDeleteತು೦ಬಾ ಅರ್ಥಪೂರ್ಣವಾಗೇ ಆಚರಿಸಿದ್ದೀರಿ ಕರ್ನಾಟಕ ರಾಜ್ಯೋತ್ಸವವನ್ನು.... ಆ ಟಿ ಶರ್ಟುಗಳನ್ನು ಪಡೆಯುವ ಬಗೆ ಹೇಗೆ?
ಗುರು ಅವರೇ ,
ReplyDeleteತುಂಬ ಸಂತೋಷವಾಯಿತು ನಿಮ್ಮ ಲೇಖನ ಓದಿ ..ನಿಮ್ಮ ಟೀಶರ್ಟ್ ಗಳು ಚೆನ್ನಾಗಿವೆ ..
ನಿಮ್ಮ ಕನ್ನಡ ಅಭಿಮಾನ ಕಂಡು ಖುಷಿಯಾಯಿತು :) ಧನ್ಯವಾದಗಳು :)
ಸುಮಾ
ಧನ್ಯವಾದಗಳು ಮನಸು....
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ರಾಘು , ಹೌದು ಎಲ್ಲರೂ ಸೇರಿ,, ಹಂಚಿದರೆನೆ, ನಮ್ಮ ಕನ್ನಡ ಉಳಿಯುವುದು .....ಅಲ್ವ
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು ಸುದೇಶ್, ನಾವು ಇ T -ಶರ್ಟ್ ಗಳನ್ನ ಆರ್ಡರ್ ಕೊಟ್ಟಿ ಮಾಡಿಸಿದ್ದೆವು,,,ಟೋಟಲ್ ಕನ್ನಡ ಎಂಬ ಒಂದು ಅಂಗಡಿ ನಲ್ಲಿ ಆರ್ಡರ್ ಕೊಟ್ಟು ಮಾಡಿಸಿದ್ದು.
ReplyDeleteಫೋನ್ ನಂಬರ್ ಮತ್ತೆ ಅಡ್ರೆಸ್ ಅನ್ನು ನಿಮ್ಮ ಮೇಲ್ idge ಮೇಲ್ ಮಾಡ್ತೇನೆ..
ಸುಮಾ ನನ್ನ ಬ್ಲಾಗಿಗೆ ಸ್ವಾಗತ,,, ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,, ಹೀಗೆ ಬರುತ್ತಿರಿ...
ReplyDeleteಗುರು, ಯಾರೋ ರೂಪಿಸಿದ ವ್ಯಾಲಂಟೈನು ..ನಮ್ಮದಲ್ಲದ ಸಂಸ್ಕೃತಿಯ birth day, ಏನೇನನ್ನೋ ಆಚರಿಸುವ ನಾವು ನಮ್ಮ ಆಶ್ರಯದಾಣ - ಕನ್ನಡನಾಡಿನ ಆಚರಣೆ ಏಕೆ ಮಾಡಲು ಹಿಂಜರಿಕೆ..ನಿಮ್ಮ ಪ್ರಯತ್ನ ಅಮೋಘ..ನಿಮ್ಮನ್ನು ಎಲ್ಲರೂ ಅನುಕರಿಸಲಿ...
ReplyDeleteಅಭಿನಂದನೆಗಳು, ಕನ್ನಡದ ಕಂಪನ್ನು ಪಸರಿಸುತ್ತಿರುವುದಕ್ಕೆ. ನಮ್ಮ ಕಂಪನಿಯಲ್ಲೂ ಕಳೆದ ೪ ವರ್ಷಗಳಿಂದ ವೈಭವಯುತವಾಗಿ ಆಚರಿಸುತ್ತಿದ್ದೇವೆ.
ReplyDeleteಅಭಿನಂದನೆಗಳು, ಕನ್ನಡದ ಕಂಪನ್ನು ಪಸರಿಸುತ್ತಿರುವುದಕ್ಕೆ. ನಮ್ಮ ಕಂಪನಿಯಲ್ಲೂ ಕಳೆದ ೪ ವರ್ಷಗಳಿಂದ ವೈಭವಯುತವಾಗಿ ಆಚರಿಸುತ್ತಿದ್ದೇವೆ.
ReplyDeleteಗುರು ಅವರೇ, ನಿಮ್ಮ ಕನ್ನಡಾಭಿಮಾನ ಮೆಚ್ಚಲೇಬೇಕು.. ನಿಮಗೆ ಹಾಗೂ ನಿಮ್ಮ ಸಹೋದ್ಯೋಗಿಗಳಿಗೆ ಅಭಿನಂದನೆಗಳು..ನಿಮ್ಮ ಈ Initiative ನಮ್ಮೆಲ್ಲ ಐಟಿ ನೌಕರರಿಗೆ ಮಾದರಿ..ನಿಮ್ಮಂತಹ ಟೆಕ್ಕಿಗಳ ಸಂಖ್ಯೆ ನೂರ್ಮಡಿಯಾಗಲಿ....ಜೈ ಕನ್ನಡ ! ಜೈ ಕರ್ನಾಟಕ !!
ReplyDeleteಜಲನಯನ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ
ReplyDeletethanks ವಿನುತ,,,, ಹೌದ ನಿಮ್ಮ ಕಂಪನಿ ನಲ್ಲೂ ಕೂಡ ಕನ್ನಡ ರಾಜ್ಯೋತ್ಸವ ಆಚರಿಸುತ್ತಾ ಇದ್ದೀರಾ....ಗುಡ್, ಜೈ ಕರ್ನಾಟಕ..... ಹಾಗೆ ಇನ್ನು ಚೆನ್ನಾಗಿ ಮುಂದುವರಿಸಿ.....
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಧಾನ್....
ReplyDeleteGuru..u guys have done a great job in a meaningful way.Keep rocking...!!! and thanks for mentioning about my article here.And you are right.. instead of waiting for someone to take initiative, we should take a step ahead to set a trend.Then the entire system accepts it.
ReplyDeleteSorry, I am unable to post my comment in kannada due to technical problem in my comp.
ಹೆಲೋ ಸ್ನೇಹ .. ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯೆ ನೀಡಿದ್ದಕೆ,, ತುಂಬ ಧನ್ಯವಾದಗಳು... ಹೌದು ನೀವು ಕೂಡ VK ನಲ್ಲಿ ತುಂಬ ಚೆನ್ನಾಗಿ ಬರೆದಿದ್ದೀರ.... ಅದನ್ನು ನೋಡಿಯಾದರೂ ನಮ್ಮವರು ಮುಂದೆಬರುವರೆನೋ ನೋಡೋಣ.... :-)
ReplyDeleteತಡವಾಗಿ ನೋಡಿ ಪ್ರತಿಕ್ರಿಯಿಸಿದ್ದಕ್ಕೇ ಕ್ಷಮಿಸಿ.
ReplyDeleteತಮ್ಮ ಆಚರಣೆ ಕ೦ಡು ಖುಷಿಯಾಯಿತು.
ತಮ್ಮ ಮಿತ್ರವೃ೦ದಕ್ಕೆ ನಮ್ಮ ಅಭಿನ೦ದನೆಗಳು.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸೀತಾರಾಮ್ ಸರ್. ಹೇಗೆ ಬರುತ್ತಿರಿ.
ReplyDelete