Showing posts with label 3D photos. Show all posts
Showing posts with label 3D photos. Show all posts

Thursday, July 15, 2010

ಹಕ್ಕಿಗಳ ಫೋಟೋಗ್ರಫಿ ಅನುಭವ.....


(ಒರಿಸ್ಸಾ ಪ್ರವಾಸದ ಕೊನೆಯ ಬಾಗ ವನ್ನು ಮುಂದಿನ ಸಾರಿ ಹಾಕುತ್ತೇನೆ,,, ಪುರಿ ದೇವಸ್ತಾನದ ಬಗ್ಗೆ,, ಹಾಗು ಚಿಲಕ lake ಬಗ್ಗೆ ಹೇಳಬೇಕಿದೆ,,, ಆದರೆ ಚಿಲಕ lake ಬಗ್ಗೆ ಸ್ವಲ್ಪ ಮಾಹಿತಿ ಪಡೆದು,, ಅಪ್ಡೇಟ್ ಮಾಡುತ್ತೇನೆ,,,,)

ಇಂದಿನ ಲೇಖನದಲ್ಲಿ,,,, ಈ ವಾರ ಹಕ್ಕಿಗಳ ಫೋಟೋ ತೆಗೆಯಲು ಹೋದಾಗ ಆದ ಅನುಭವದ ಬಗ್ಗೆ ಹಂಚಿಕೊಳ್ಳುತ್ತಿದೇನೆ...
ಚಿಟ್ಟೆ ಮತ್ತೆ, ಹುಳ ಹುಪ್ಪಟೆಗಳ ಫೋಟೋ ಗ್ರಫಿ ನಂತರ ಎರಡು ವಾರ ಎಲ್ಲೂ ಹೋಗಲು ಆಗಿರಲಿಲ್ಲ... ಕಳೆದ ಶನಿವಾರ ಬಿಡುವಾಗಿತ್ತು.... ಸರಿ ಅಂತ ನನ್ನ ಕಸಿನ್ ಕೃಷ್ಣ ಮತ್ತೆ ಫ್ರೆಂಡ್ ರಮೇಶ್ ಜೊತೆ,, ಎಲ್ಲಿಗಾದ್ರೂ ಹೋಗಿ ಬರೋಣ ಅಂತ,, ಅನ್ಕೊಂದ್ವಿ,, ಮನೆ ಇಂದ ಹೊರಡೋದೇ ಲೇಟ್ ಆಗಿ ಬಿಟ್ ಇತ್ತು ,, ಸರಿ ಎಲ್ಲಿ ಹೋಗೋದು ಅಂತ ಯೋಚನೆ ಮಾಡ್ತಾ,,, ಈ ಸರಿ ಹಕ್ಕಿ ಗಳ ಫೋಟೋ ತೆಗೆಯಲು ಹೋಗೋಣ, ಒಂದು ಕೆರೆ ಹತ್ರ ಅಂತ ಅನ್ಕೊಂಡು ಹೊರಟ್ವಿ,,,

ಅ ಕೆರೆ ಇರೋದು ತಾವರೆಕೆರೆ ಬಿಟ್ಟು ಮುಂದೆ,,, ಸೂಲಿ ಕೆರೆ ಅಂತ ಅದರ ಹೆಸರು,,,, ನಮ್ಮ ಮನೆ ಇಂದ ಒಂದು ೧೨ KM ಆಗುತ್ತೆ,,, ಹೋಗ್ತಾ ದಾರಿನಲ್ಲಿ,, ನೈಸ್ ರೋಡ್ ದಾಟಿಕೊಂಡು ಹೋಗಬೇಕು,,, ಹಾಗೆ ಅಲ್ಲಿ ಸ್ವಲ್ಪ ಹೊತ್ತು ಅದು ಇದು ಫೋಟೋ ತೆಗೆದು ಕೊಂಡು,,, ದಾರಿ ನಲ್ಲಿ ಸಿಗುವ ಹೊಲ ತೋಟ ಗಳ,,, fresh ಗಾಳಿ ಕುಡ್ಕೊಂಡು ಸೂಲಿ ಕೆರೆ reach ಅಗೋ ಅಸ್ಟು ಹೊತ್ತಿಗೆ,, ೮:೦೦ ಘಂಟೆ ಆಗಿತ್ತು,,, ಅದರೂ ಡೌಟ್ ನಿಂದಲೇ ಹೋದ್ವಿ,, ಯಾವುದಾದರು ಹಕ್ಕಿ ಗಳು ಸಿಗುತ್ತೇನೋ ಅಂತ,,, ನಮ್ಮ ಅದೃಷ್ಟ ಚೆನ್ನಾಗಿ ಇತ್ತು,,, ಹಕ್ಕಿ ಗಳು ಕೆರೆ ತುಂಬಾ ಇದ್ದವು,,,, egret ಮತ್ತೆ Open Billed Stork (ಹೆಸರು ಅಸ್ಟಾಗಿ ಗೊತ್ತಿಲ್ಲ ) , ಹಕ್ಕಿಗಳು ತುಂಬಾ ಸಿಕ್ಕವು , ಆದರೆ ನಾನು ಅಂದುಕೊಂಡಂತೆ,,, ಫೋಟೋಗಳನ್ನು ತೆಗೆಯ ಲಾಗಲಿಲ್ಲ ,,, ಕಾರಣ,, ನನ್ನ ಹತ್ತಿರ,, SLR ಕ್ಯಾಮೆರಾ ಇರಲಿಲ್ಲ,,, ನನ್ ಹತ್ರ ಇದ್ದದ್ದು,,, 12X zoom ನ, Higher end normal Digital ಕ್ಯಾಮೆರಾ.... ಅದರಲ್ಲೇ ಕೆಲವೊಂದು,,, ಫೋಟೋಗಳನ್ನು ತೆಗೆದೆ
....ಇನ್ನು ಕಲಿತ ಇರೋದು ಅಲ್ವ,, ಇರಲಿ ಅಂತ....

ಒಟ್ಟಿನಲ್ಲಿ... ಇದು ಒಂದು ತರ ಒಳ್ಳೆಯ ಅನುಭವ,,,, ನಿದಾನಕ್ಕೆ ಕೆರೆಯ ಮದ್ಯ ನೀರು ಇಲ್ಲದೆ ಇರುವ ಜಾಗದಲ್ಲಿ,,, ನಡೆದುಕೊಂಡು ಹಕ್ಕಿಗಳ ಹತ್ರ ಹೋಗೋದು,,, ಒಂದು ಚೂರು ಶಬ್ದ ಮಾಡದೆ,,,, ಒಂದೊಂದೇ ಹಜ್ಜೆ ಇಟ್ಟು ಅವುಗಳನ್ನು focuse ಮಾಡಿ ಫೋಟೋ ತೆಗೆಯುವುದು,,, ವೌ,,, ಒಟ್ಟಿನಲ್ಲಿ ಲಾಸ್ಟ್ saturday ಚೆನ್ನಾಗಿ enjoye   ಮಾಡಿದೆ....

ಅದರ ಕೆಲವು ಫೋಟೋಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ,,, ನೋಡಿ ತಮ್ಮ ಅಭಿಪ್ರಾಯ ತಿಳಿಸಿ....

ಹಾಗೆ ಎಲ್ಲ ಫೋಟೋ ಗಳನ್ನು ನನ್ನ ಪಿಕಾಸ ಆಲ್ಬಮ್ ನಲ್ಲಿ ಹಾಕಿದ್ದೇನೆ... ನೋಡಲು ಇಲ್ಲಿ ಕ್ಲಿಕ್ ಮಾಡಿ......



ನೈಸ್ ರೋಡ್.....

ದಾರಿ ಮದ್ಯ ಸಿಕ್ಕ ಒಂದು ತೋಟ...

ಸೂಲಿ ಕೆರೆ ಇದರ ಹತ್ರನೇ ಹಕ್ಕಿಗಳ ಫೋಟೋ ತೆಗೆದದ್ದು...

egrate ....  
ಮೀನು ಹಿಡಿಯಲು ಹೊಂಚು ಹಾಕ್ತಾ ಇದೆ.....


ಕೊನೆಗೂ ಸಿಕ್ಕ ಮೀನು.....!!!!




Open Billed Stork ಹಕ್ಕಿಗಳ ಗುಂಪು..


Wednesday, January 6, 2010

Sidewalk-Art---ರೋಡ್ ಸೈಡ್ ನ 3d ಪೇಂಟಿಂಗ್ ಮತ್ತೆ ಬಂದಿದೆ!!!!!!!


ರೋಡ್ ಸೈಡ್ ನ 3d ಪೇಂಟಿಂಗ್ ಮತ್ತೆ ಬಂದಿದೆ,,, ಹೊಸ ವರ್ಷದ ಸಲುವಾಗಿ ಈ ಹವ್ಯಾಸಿ ರೋಡ್ ಸೈಡ್ painters ಮತ್ತೆ ತಮ್ಮ ಚಮತ್ಕಾರ ತೋರಿಸಿದ್ದಾರೆ, ಇದಕ್ಕೂ ಮೊದಲು ನನ್ನ ಬ್ಲಾಗಿನಲ್ಲಿ ಈ ಹವ್ಯಾಸಿ ತಂಡದ ಬಗ್ಗೆ ಕೆಲವು ಲೇಖನಗಳನ್ನ ಚಿತ್ರ ಸಮೇತ ಬರೆದಿದ್ದೆ, ಇವಾಗ ಮತ್ತೆ ಇವರ ಕೈಚಳಕ ನೋಡಿ ಕಣ್ಣ ತುಂಬಿಸಿಕೊಳ್ಳಿ.... ಈ ರೋಡ್ ಸೈಡ್ ಪೈಂಟರ್ ಗಳಿಗೆ ಒಂದು ಸ್ಪರ್ದೆ ನಡೆಯುತ್ತೆ ಸ್ಪೇನ್ ಮತ್ತೆ ಯುರೋಪ್ ನಲ್ಲಿ, ಅಲ್ಲಿನ ಕೆಲವು amezing ಪೇಂಟಿಂಗ್ ಚಿತ್ರಗಳನ್ನ ನನ್ನ ಮುಂದಿನ ಬ್ಲಾಗಿನಲ್ಲಿ ಹಾಕುವೆ,, ಅಲ್ಲಿವರೆವಿಗು ಇವರ ಈ ಪೇಂಟಿಂಗ್ ನೋಡ್ತಾ ಇರಿ.....:-)

ಇವರ ಬಗ್ಗೆ ಎಲ್ಲ ನನ್ನ ಹಿಂದಿನ ಲೇಖನದಲ್ಲಿ ಬರಿದಿದ್ದೆ ಇನ್ನು ಹೆಚ್ಚಿಗೆ ಬರೆಯುವುದು ಏನು ಇಲ್ಲ ಅಂತ ಅನ್ಕೊಂಡ್ ಇದೇನೇ, ಇವರ ಈ ಕಲೆ ನೋಡಿ ಬೆರಗಾಗಿ, ವಾಹ್ ಅಂತ ಅನ್ನಬೇಕು ಅಸ್ಟೇ.... ಅಲ್ವ

ಇಂತಹ ಅದ್ಬುತ ಚಮತ್ಕಾರದ ಕೈ ಚಳಕಕ್ಕೆ ನನ್ನ ದೊಡ್ಡ ಸಲಾಂ.... !!!!!

ಈ ಹವ್ಯಾಸಿ ಪೈಂಟರ್ ಹಾಗು ತಂಡದ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ .

ನಿಜವಾಗಲು AMAZING paintings......!!!!!!! http://guruprsad.blogspot.com/2009/03/amazing-paintings.html
3D paintings.. ಮತ್ತೆ ಬಂದಿದೆ,,, !!!!! http://guruprsad.blogspot.com/2009/06/3d-paintings.html



Saturday, June 20, 2009

3D paintings.. ಮತ್ತೆ ಬಂದಿದೆ,,, !!!!!

ನನ್ನ ಬ್ಲಾಗ್ ನಲ್ಲಿ ಹಿಂದೆ ರೋಡ್ side ನಲ್ಲಿ ಮಾಡೋ 3D ಪೇಂಟಿಂಗ್ pictures ಹಾಕ್ಕಿದ್ದೆ .. ನೀವೆಲ್ಲ ನೋಡಿ ಕುಶಿ ಪಟ್ಟಿದ್ರಿ ಅಲ್ವ.... ನೋಡಿಲ್ಲ ಅಂದ್ರೆ ಅದನ್ನ ಇನ್ನೊಮೆ ನೋಡಿ....(http://guruprsad.blogspot.com/2009/03/amazing-paintings.html) ಇ ಬ್ಲಾಗ್ ಅನ್ನು ಆಮೇಲೆ ನೋಡಿ. ಅದರ ಮುಂದುವರಿದ ಭಾಗನೇ ಇಲ್ಲಿ ಇರೋದು..... ಅಂದ್ರೆ ಅದೇ ಥರದದ್ದು

..............

ಇಲ್ಲೊಂದು ಟೀಂ ಅದೇ ತರ ರೋಡ್ ಸೈಡ್ ನಲ್ಲಿ ಅದು ಕೆಲವೇ ಗಂಟೆಗಳಲ್ಲಿ ಒಂದು ದೊಡ್ಡ ದಾದ ice ಕಂದಕವನ್ನೇ ಸೃಷ್ಟಿ ಮಾಡಿದ್ದರೆ ನೋಡಿ.......ಏನ್ ಕಲೆ ಅಲ್ವ .......



























ಚಿತ್ರ ಕೃಪೆ :- ಹಾಗೆ ಹುಡುಕಾಡುತ್ತ ಸಿಕ್ಕಿದ್ದು.....(mostly ಮೇಲ್ ನಲ್ಲೂ ಬಂದಿರುತ್ತೆ)