Showing posts with label ankegowda. Show all posts
Showing posts with label ankegowda. Show all posts

Friday, November 27, 2015

ಕನ್ನಡ ಹಬ್ಬ 2015 - IT ಕಂಪನಿ ನಲ್ಲಿ ಕನ್ನಡ ಹಬ್ಬದ ಸಡಗರ ಸಂಬ್ರಮ

ಕನ್ನಡ ಹಬ್ಬ ೨೦೧೫ – Thomson Reuters

        






ಕನ್ನಡ ಏನೆ ಕುಣಿದಾಡುವುದೆನ್ನೆದೆ....ಕನ್ನಡ ಎನೆ ಕಿವಿ ನಿಮಿರುವುದು...
ಏನೋ ಗೊತ್ತಿಲ್ಲ ನಮ್ಮ ಕನ್ನಡ ರಾಜ್ಯೋತ್ಸವ ಅಂದರೆ ನಮ್ಮ ಮನೆ ಹಬ್ಬದ ತರ.. ಏನೋ ಸಂಬ್ರಮ .. ಪ್ರತಿ ವರ್ಷದಂತೆ ಈ ವರುಷವೂ ನಮ್ಮ ಕಂಪನಿ “Thomson Reuters “ ನಲ್ಲಿ ಕನ್ನಡ ರಾಜ್ಯೋತ್ಸವದ ಕರಲವ ಜೋರಾಗಿತ್ತು... ಒಂಬತ್ತು ವರುಷದ ಕೆಳಗೆ ನಮ್ಮ ಕಂಪನಿ ಕೆಲವು ಸಮಾನ ಮನಸ್ಕರು ಸೇರಿ ಶುರು ಮಾಡಿದ ಕನ್ನಡದ ಹಬ್ಬ ..(ನಾಗೇಶ್ ಪ್ರಭುಸ್ವಾಮಿ , ಮಹೇಶ್ ಕೊರ, ಹರೀಶ್ ಕೊರವಂಗಳ , ಭರತ್ ಕುಮಾರ್ ಹೀಗೆ ಕೆಲ ಸ್ನೇಹಿತರು ಇವಾಗ ನಮ್ಮ ಕಂಪನಿ ನಲ್ಲಿ ಇಲ್ಲ) ಆದರೆ ಅವರು ಹಾಕಿಕೊಟ್ಟ ಮಾರ್ಗದರ್ಶನ ಈಗ ದೊಡ್ಡ ಹೆಮ್ಮರವಾಗಿ ಬೆಳೆದಿದೆ ಪ್ರತಿ ವರುಷ ಈ ನಮ್ಮ ಹಬ್ಬದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಬೆಳೆಯುತ್ತಾ ಇದೆ . ಈ ಉತ್ಸವ ಸಡಗರ ದಲ್ಲಿ ನನ್ನದು ಒಂದು ಚಿಕ್ಕ ಸೇವೆ, ಶ್ರಮ, ಓಡಾಟ ಎಲ್ಲವೂ ಸೇರಿ ನನಗೆ ನೆಮ್ಮದಿ ಮತ್ತೆ ಸಂತೋಷ ಕೊಡುತ್ತಿದ್ದೆ ... ಪ್ರತಿ ವರುಷವೂ ಹೊಸ ಹೊಸ ಪ್ರಯತ್ನ ಗಳನ್ನೂ ಮಾಡುತ್ತಾ ಮುಂದುವರಿತಾ ಇದೆ ನಮ್ಮ ಕನ್ನಡ ಹಬ್ಬ.
ನಮ್ಮಂಥ IT ಕಂಪನಿ ನಲ್ಲಿ ಕನ್ನಡ ಮಾತನಾಡುವವರನ್ನು ಹುಡುಕಬೇಕು .... ಮಾತನಾಡಲು ಬಂದರು ಏನೋ ಸಂಕೋಚ , ಏನೋ ಹಿಂಜರಿತ ಆದರೆ ನಮ್ಮ ಕಂಪನಿ ನಲ್ಲಿ ಇದೆಲ್ಲವನ್ನು ತೊರೆದು ಉತ್ಸಾಹ ದಿಂದ ನಮ್ಮ ಕನ್ನಡ ಸಹದ್ಯೋಗಿಗಳು ಕೈ ಜೋಡಿಸುತ್ತಾರೆ. ಹಾಗೆಯೇ ನಮ್ಮ ಕಂಪನಿಯ ಆಡಳಿತ ವರ್ಗವು ಸಂಪೂರ್ಣ ಬೆಂಬಲ ನೀಡ ಪ್ರೋತ್ಸಾಹಿಸುತ್ತಾರೆ. ಇಷ್ಟು ಸಾಕಲ್ಲವೇ ಕನ್ನಡ ಹಬ್ಬದ ಸಡಗರ ಮನೆ ಮಾಡಲು.....!!!!!
ಒಂದು ತಿಂಗಳಿನಿಂದ ನಡೆಸಿದ ಓಡಾಟ ಶ್ರಮ ನವೆಂಬರ್ ೨೫ ಬುದವಾರದಂದು ಸಾರ್ಥಕ ಎನಿಸಿತು. ಈ ಸರಿಯ ನಮ್ಮ ಕಾರ್ಯಕ್ರಮಕ್ಕೆ ಪ್ರಸಿದ್ದ ಹಾಸ್ಯ ಕಲಾವಿದರಾದ ಶ್ರೀ ನಾಗರಾಜ್ ಕೋಟೆ ಅವರು ಹಾಗು ಸರಸ್ವತಿ ಪುತ್ರ, ತಮ್ಮ ಜೀವಮಾನದ ಪ್ರತಿ ಸಮಯವನ್ನು ಪುಸ್ತಕ ಸಂಗ್ರಹಕ್ಕೆ ಮೀಸಲಿಟ್ಟು ಹಳ್ಳಿಗಾಡಿನಲ್ಲಿ ಒಂದು ಅದ್ಭುತ ಎನ್ನುವ ಏಕ ವ್ಯಕ್ತಿ ನಿರ್ಮಿತ ಬೃಹತ್ ಗ್ರಂಥಾಲಯವನ್ನು ನಿರ್ಮಿಸಿರುವ ಶ್ರೀಯುತ “ ಅಂಕೆ ಗೌಡರು” ಆಗಮಿಸಿದ್ದರು.

ಪ್ರತಿ ವರುಷವೂ ನಮ್ಮ ಕನ್ನಡ ನಾಡು ನುಡಿ ಗಾಗಿ ಸೇವೆ ಸಲ್ಲಿಸಿದ ವ್ಯಕ್ತಿ ಗಳನ್ನೂ ಗುರುತಿಸಿ ಸನ್ಮಾನ ಮಾಡುವ ಕಾರ್ಯಕ್ರಮ ರೂಡಿಯಲ್ಲಿ ಇದೆ. ಹಾಗೆ ಈ ಸಾರಿ ನಮ್ಮ ಅಂಕೆ ಗೌಡರನ್ನು ಕರೆಸಿದ್ದು ತುಂಬ ಸಂತೋಷ ಹಾಗು ಖುಷಿ ಕೊಟ್ಟಿತು. ಇವರ ಬಗ್ಗೆ ನನಗೆ ಮೊದಲೇ ತಿಳಿದಿತ್ತು , ಕೆಲವು ವರುಷದ ಕೆಳಗೆ ನಮ್ಮ ಬ್ಲಾಗ್ ಸಂಗದಿಂದ ಇವರ ಪುಸ್ತಕದ ಮನೆಗೆ ಹೋಗಿ ಸನ್ಮಾನ ಮಾಡಿ ಬಂದಿದ್ದೆವು (ಅದರ ಬಗ್ಗೆ ಹೆಚ್ಚು ಮಾಹಿತಿಯನ್ನು ಇಲ್ಲಿ ನೋಡಿ http://guruprsad.blogspot.in/2012/06/blog-post.html) ಇವರನ್ನು ಅವಕಾಶ ಸಿಕ್ಕಾಗ ಮತ್ತೆ ಕರೆಸಿ ಎಲ್ಲರಿಗೂ ಪರಿಚಯ ಮಾಡಬೇಕು ಎಂಬ ಬಹು ದಿನಗಳ ಕನಸು ನನಸಾಯಿತು ..

ನೂರಾರು ಜನ ಒಂದೇ ತರದ T-shirt ಹಾಕಿಕೊಂಡು ಓಡಾಡುತ್ತಿದ್ದ ಆ ಸಂಬ್ರಮ ಅದ್ಬುತ...





ಮೊದಲಿಗೆ ನಮ್ಮ ಕರ್ನಾಟಕ ಜಾನಪದ ಕಲೆಗಳಲ್ಲಿ ಒಂದಾದ “ಕಂಸಾಳೆ” ಯೊಂದಿಗೆ ಕಾರ್ಯಕ್ರಮ ಉತ್ಸವ ಶುರು ಆಯಿತು ಆಮೇಲೆ ಕಂಪನಿ ಮುಖ್ಯಸ್ಥ ರಿಂದ ಹಾಗು ಕಾರ್ಯಕ್ರಮಕ್ಕೆ ಬಂದಿದ್ದ ಗಣ್ಯರಿಂದ ದೀಪ ಬೆಳಗುವ ಕಾರ್ಯಕ್ರಮ ನಂತರ ನಾಡಗೀತೆ ಯನ್ನು ಹಾಡಲಾಯಿತು .




ಪ್ರತಿ ವರುಷ ಕರ್ನಾಟಕ ಒಂದೊಂದು ಜಾನಪದ ಕಲೆ ಹಾಗು ಸಂಸ್ಕೃತಿ ಬಿಂಬಿಸುವ ಪ್ರಯತ್ನ ನೆಡಯುತ್ತಿದೆ.  ಡೊಳ್ಳು ಕುಣಿತ, ಪೂಜಾಕುಣಿತ, ಬೊಂಬೆ ಆಟ , ದೇವರ ಪಟದ ಕುಣಿತ.  ಹೀಗೆ ವರ್ಷ ವರ್ಷವೂ ಒಂದೊಂದು ಕಲೆ ಯನ್ನು ನಮ್ಮ ಕಂಪನಿಯ ಹೊರ ರಾಜ್ಯದ ಸಹದ್ಯೋಗಿಗಳಿಗೆ ತಿಳಿಸುವ ಒಂದು ಪ್ರಯತ್ನ...  



ಅಂಕೆ ಗೌಡರ ಚಿಕ್ಕ ಹಾಗು ಸೊಗಸಾದ ಭಾಷಣ ಎಲ್ಲರ ಮನಸಿನಲ್ಲೂ ಪುಸ್ತಕದ ಬಗ್ಗೆ , ಅದರ ಮಾಹಿತಿ ಸಂಗ್ರಹಿಸುವ ಬಗ್ಗೆ ಅರಿವು ಹಾಗು ಚಿಂತನೆ ಮೂಡಿಸಿತು....  



ತದನಂತರ ನಾಗರಾಜ್ ಕೋಟೆ ಅವರ ಹಾಸ್ಯ ನಗೆಯ ಹೊನಲನ್ನೇ ಹರಿಸಿತು.


ನಮ್ಮ ಈ  ಎಲ್ಲ ಕಾರ್ಯಕ್ರಮಗಳಿಗೆ ಕಿರೀಟ ಎಂದರೆ “ನಮ್ಮ   ಸಂಸ್ಥೆಯ ಸಹದ್ಯೋಗಿ ಗಳಾದ  Alexander Brooks ಅವರ ಟೀಂ  (ಅಮೇರಿಕ ದಿಂದ ಬಂದಿರುವ) ಹಾಡಿದ ಕನ್ನಡ ಹಾಡು, ಅದ್ಬುತ !!! ಅಮೋಘ !!!! ಹಾಗು ಆಶ್ಚರ್ಯ ಚಕಿತರನ್ನಗಿಸಿತು.  ಅವರು ಅದೆಷ್ಟು ಚೆನ್ನಾಗಿ ಶಿವನ ಹಾಡನ್ನು ಹಾಡಿದರೆಂದರೆ ಅಬ್ಬ  ಅಲ್ಲಿ ನೆರೆದಿದ್ದ ಎಲ್ಲರೂ ಒಂದು ಚೂರು ಗಲಾಟೆ ಮಾಡದೆ ಸದ್ದೇ ಇಲ್ಲದೆ ಅವರ ಹಾಡನ್ನು ಕೇಳುತ್ತ ಇದ್ದರು. ಹಾಡು ಮುಗಿದ ಮೇಲೆ ಮತ್ತೊಮ್ಮೆ ಮತ್ತೊಮ್ಮೆ... ಎನ್ನುವ ಕರಾಡತನ......      ಅದರ ವೀಡಿಯೊ ಇಲ್ಲಿದೆ ನೋಡಿ


ಅಮೇಲೆ ನಮ್ಮ ಸಹದ್ಯೋಗಿ ಒಬ್ಬರು ನರ್ತನ ಡ್ಯಾನ್ಸ್ ಶಾಲೆ ಸ್ಟೂಡೆಂಟ್ , ಅವರ ಗ್ರೂಪ್ ನಿಂದ ಮೂಡಿ ಬಂದ ಕನ್ನಡ ನಾಡು ನುಡಿ ಹಾಗು ಸಂಸ್ಕೃತಿಯ ಹಾಡು, ನೃತ್ಯ ಮನಮೋಹಕ.    ಅದಾದಮೇಲೆ ಚಿಕ್ಕ ಮಕ್ಕಳಿಂದ ಭಾರತ ನಾಟ್ಯ ಕಾರ್ಯಕ್ರಮ .  ಹಾಗೆ ನಮ್ಮ ಕಂಪನಿ ಸಹದ್ಯೋಗಿಗಳಿಂದ ಅಣಕು ಪ್ರದರ್ಶನ (MAD Ads)




ಅದಾದ ಮೇಲೆ ವಿಜಯ್ ಶ್ರೀಕಂಠ ಮೂರ್ತಿ ಅವರಿಂದ ಏಕಪಾತ್ರ ಅಭಿನಯ “ ಸ್ತ್ರೀ ಎಂದರೆ ಇಷ್ಟೇ ಸಾಕೆ “   ತುಂಬ ಅದ್ಬುತ ವಾಗಿ ಮೂಡಿ ಬಂದಿತ್ತು ..    ಹಾಗೆ ಮತ್ತೊಂದು ಸೋಲೋ ಡಾನ್ಸ್ ಜಾನ್ ಮತ್ತು ತಂಡದವರಿಂದ.
ಕೊನೆಯದಾಗಿ Flash mob  ...   ಕಾರ್ಯಕ್ರಮದ ಮಧ್ಯದಿಂದ ಎದ್ದು ಬಂದು ಗ್ರೂಪ್ ಡಾನ್ಸ್....  ಅದ್ಬುತವಾಗಿತ್ತು








ನನ್ನ ಕಡೆ ಇಂದ ಒಂದು ಚಿಕ್ಕ ಫೋಟೋ ಪ್ರದರ್ಶನ ಏರ್ಪಡಿಸಿದ್ದೆ.  ನಮ್ಮ ಕರ್ನಾಟಕದ ಬಗ್ಗೆ, ನಮ್ಮ ಕರ್ನಾಟಕದಲ್ಲಿ ಇರುವ ಪ್ರೇಕ್ಷಣಿಯ ಸ್ಥಳಗಳ ಬಗ್ಗೆ  ನಾನೇ ತೆಗೆದ ಕೆಲವು ಫೋಟೋ ಹಾಗು ಮಾಹಿತಿ ಯನ್ನು ಹಾಕಿ ಪುಟ್ಟ ಸ್ಟಾಲ್ ಹಾಕಿದ್ದೆವು.   ಹೊರ ರಾಜ್ಯದ ಸಹದ್ಯೋಗಿ ಮಿತ್ರರು ಬಂದು ಅದನ್ನು ನೋಡಿ ಇದು ಕರ್ನಾಟಕ ದಲ್ಲಿ ಇದ್ದೀಯ ಇಲ್ಲಿಗೆ ಹೋಗಲೇ ಬೇಕು ಎಂದು  ಮತ್ತಷ್ಟು ಮಾಹಿತಿ ಪಡೆದರು .






ವರ್ಷದಿಂದ ವರ್ಷ ಬಹಳ ಅದ್ದೂರಿಯಾಗಿ ನೆಡಿತಾ ಇದೆ ನಮ್ಮ ಕನ್ನಡ ಹಬ್ಬ.   ಈ ಕಾರ್ಯಕ್ರಮಕ್ಕೆ ಹಗಲಿರುಳೂ  ತಮ್ಮ ಕೆಲಸದ ಮದ್ಯೆ ಬಿಡುವು ಮಾಡಿ ಕೊಂಡು ಓಡಾಡಿದ ನಮ್ಮ ಸಹದ್ಯೋಗಿ ಮಿತ್ರರಿಗೆಲ್ಲ ಧನ್ಯವಾದಗಳು.  ಮುಖ್ಯವಾಗಿ “ಮನು ಗೌಡ” , “ಲಕ್ಷ್ಮಿ ಸಿದ್ದಪ್ಪ”, “ಉಮೇಶ್” , “ಜಯಪ್ರಕಾಶ ಗೌಡ” , ಸೂರಜ್, ಉಮೇಶ್ ನಿರಂಜನ್, ಅಭಿಷೇಕ್. ಇನ್ನು ತುಂಬ ಜನ..... ಎಲ್ಲರಿಗೂ ಧನ್ಯವಾದಗಳು 

Thursday, June 28, 2012

ಅಂಕೆ ಗೌಡರ ಪುಸ್ತಕದ ಅಂಗಳ... ಅಂಕೆಗೂ ನಿಲುಕದ ಪುಸ್ತಕಗಳ ಬಂಡಾರ .....


 ಅಂಕೆ ಗೌಡರ ಪುಸ್ತಕದ  ಅಂಗಳ... ಅಂಕೆಗೂ ನಿಲುಕದ ಪುಸ್ತಕಗಳ ಬಂಡಾರ .....

ಸಾದನೆ ಅಂದ್ರೆ ಏನು..... ನಿಜವಾಗ್ಲೂ ನಾವೆಲ್ಲಾ ಅಂದುಕೊಂಡಿದ್ದನ್ನು ಸಾದಿಸಿದ್ದೇವ.....?  ಇ ಒಂದು ಪ್ರೆಶ್ನೆ ನನ್ನ ಮುಂದೆ ಬಂದಿದ್ದು,,, ನಾವೆಲ್ಲಾ ಅಂಕೆ ಗೌಡರ ಪುಸ್ತಕದ ಅಂಗಳದೊಳಕ್ಕೆ ಕಾಲಿಟ್ಟಾಗ..... ಒಬ್ಬೊಬ್ಬರದು ಒಂದೊಂದು ಹವ್ಯಾಸ ಇರುತ್ತೆ.... ಅವರ ಹಾವ್ಯಸದಿಂದ .... ಅವರು ಮಾಡುವ ಸಾದನೆ ಇಂದ... ಸಿಗೋ ಸಂತೋಷ ಇದೆ ಅಲ್ವ ....ವಃ....
ನಾನು ನೋಡಿರುವ ಅಥವಾ ಓದಿರುವ ಮಟ್ಟಿಗೆ... ಜೀವನದಲ್ಲಿ ಒಂದು ಗುರಿ ಅನ್ನು ಇಟ್ಟುಕೊಂಡು... ಜೀವನ ಪೂರ್ತ ಆ ಗುರಿ ಮುಟ್ಟಿ ತಾವು ಅಂದುಕೊಂಡಿದ್ದನ್ನು ಸಾದಿಸಿರುವ ಕೆಲವೇ ಕೆಲವು ಅಗ್ರಮಾನ್ಯರಲ್ಲಿ... ಈ ಅಂಕೆಗೌದರು ಒಬ್ಬರು  ......  
ಅಲ್ಲ ತಮಗಾಗಿ ಏನು ಉಳಿಸಿಕೊಳ್ಳದೆ ಎಲ್ಲವನ್ನು ಪುಸ್ತಕ ಖರೀದಿ  ಮಾಡಿ ಮುಂದಿನ ಪೀಳಿಗೆಗೆ ಹಾಗು ಸುತ್ತ ಮುತ್ತಲಿನ ಹಳ್ಳಿ ಜನರಿಗೆ, ವಿಧ್ಯಾರ್ಥಿ  ಗಳಿಗೆ ಸಿಗಲಿ ಅಂತ ಇಟ್ಟಿದ್ದಾರಲ್ಲ ನಿಜಕ್ಕೂ ಗ್ರೇಟ್.

ಇಂಥಹ ಒಂದು ಅದ್ಬುತ ಲೋಕಕ್ಕೆ ಒಂದು ವಿಸ್ಮಯ ಪ್ರಪಂಚಕ್ಕೆ ಹೋಗುವ ಅವಕಾಶ ನಮ್ಮ ಬ್ಲಾಗಿಗರಿಗೆ ಸಿಕ್ಕಿತ್ತು ...... ಇದಕ್ಕೆ ಅವಕಾಶ ಮಾಡಿಕೊಟ್ಟ ಬಾಲಣ್ಣ ಹಾಗು ಪ್ರಕಾಶಣ್ಣ ಅವರಿಗೆ ನನ್ನ ಅನಂತ  ನಮಸ್ಕಾರಗಳು .....
ಇವರ ಬಗ್ಗೆ ಇವರ ಪುಸ್ತಕ ಪ್ರೀತಿ ಬಗ್ಗೆ ಯೀನೆ ಬರೆದರೂ ಸಾಲದು.... ಇಲ್ಲಿಗೆ ಒಮ್ಮೆ ಹೋಗಿ ಬರಬೇಕು ಅಷ್ಟೇ..... ಅಲ್ಲಿ ಕಳೆದ ಆ 4 ಗಂಟೆಗಳು....ಅವಿಸ್ಮರಣೀಯ..... 
ಇಂತಹ ಪುಸ್ತಕ ಇಲ್ಲ ಅನ್ನುವ ಹಾಗೆ ಇಲ್ಲವೇನೋ... ನಮ್ಮ ಯಾವ ದೊಡ್ಡ ದೊಡ್ಡ ಗ್ರಂಥಾಲಯದಲ್ಲೂ ಇರುವುದಿಲ್ಲವೇನೋ ಅಷ್ಟು  ಪುಸ್ತಕಗಳು..... ಅಬ್ಬ.... ಏನು ಹೇಳೋದು ೨೦೦ ವರುಷ ಹಳೆಯ ಮುದ್ರಣದ ಕೆಲವು ಅಪರೂಪವೆನಿಸುವ ಪುಸ್ತಕಗಳು ಇವರ ಬಳಿ ಇವೆ... ಯಾವ ವಿಷ್ಯದ ಪುಸ್ತಕ ಬೇಕು ನಿಮಗೆ... ಫೋಟೋಗ್ರಫಿ... science  , history ., ಫಿಲಾಸಫಿ , ಮೆಡಿಕಲ್, ಹಳೆಗನ್ನಡ..ಸಂಸ್ಕೃತ, ಹಾಗೆ ಕೆಲವು ಗೆರ್ಮನ್, ಮತ್ತೆ ಫ್ರೆಂಚ್ ಭಾಷೆ ಪುಸ್ತಕಗಳು ಇವರ ಬಳಿ ಇವೆ... ಮೈಸೂರ್ ಮತ್ತೆ ಶ್ರೀರಂಗಪಟ್ಟಣ  ಕ್ಕೆ ಬರುವ ಎಲ್ಲಾ ಅನ್ವೇಷಕರಿಗೂ... ಇಲ್ಲಿನ ಇವರ ಗ್ರಂಥಾಲಯದ ಮಾಹಿತಿಗಳು ಬೇಕೆ ಬೇಕು....
ಇವರ ಬಗ್ಗೆ ಎಷ್ಟು ಬರೆದರೂ ಸಾಲದು.... ಇಂಥ ಅದ್ಬುತ ವ್ಯಕ್ತಿ ನಮ್ಮ ನಡುವೆ ಇದ್ದಾರೆ , ಇವರಿಗೆ ನಮ್ಮಗಳ ಸಹಕಾರ ಅಭಿಮಾನ ಬೇಕಾಗಿದೆ..... ದಯವಿಟ್ಟು ಕೈ ಜೋಡಿಸಿ......ತಮ್ಮ ಜೀವನವನ್ನು ಪುಸ್ತಕಗಳಿಗಾಗಿ ಮುಡಿಪಾಗಿಟ್ಟು,,,  ಇಂತಹ ನಿಸ್ವಾರ್ಥ ಸೇವೆ ಮಾಡುತ್ತಿರುವ ಅಂಕೆಗೌದರಿಗೆ.. ನಮ್ಮ  ಸಹಕಾರ ಸಿಗುವಂತಾಗಲಿ......

ಅಲ್ಲಿನ ಕೆಲವು ಚಿತ್ರಗಳನು ಹಾಕಿದ್ದೇನೆ... ನೀವೇ ನೋಡಿ.... 

ವಿಳಾಸ  
ಶ್ರೀ ಅಂಕೆ ಗೌಡ ಜ್ಞಾನ ಪ್ರತಿಷ್ಠಾನ [ರಿ] 
ಪುಸ್ತಕದ ಮನೆ
ವಿಶ್ವೇಶ್ವರ ನಗರ
ಹರಳ ಹಳ್ಳಿ
ಪಾಂಡವಪುರ ತಾಲೂಕು
ಮಂಡ್ಯ - 571434
ದೂರವಾಣಿ :  9242844934 ,9242844206



ಪುಸ್ತಕಗಳ  ಭಂಡಾರ   


 ಇದು ಜ್ಞಾನ ದೇಗುಲ 




 ಅಂಕೆ ಗೌಡರು 
 1800 ಇಸವಿಯ ಮುದ್ರಣದ ಪುಸ್ತಕಗಳು 

ಚಿಣ್ಣರಿಗಾಗಿ ಅದ್ಬುತ ಪುಸ್ತಕಗಳ ಲೋಕ್ಹವೇ ಇಲ್ಲಿ ಇದೆ 


 ಅಂಕೆ ಗೌಡರಿಗೆ ನಮ್ಮ ಬ್ಲಾಗಿಗರ ಪರವಾಗಿ ಚಿಕ್ಕ ಸನ್ಮಾನ 


 ಅಂಕೆ ಗೌಡರ ಎಲ್ಲ ಸಾದನೆಗಳಲ್ಲು ಜೊತೆಗೆ ಇರುವ ಅವರ ಧರ್ಮ ಪತ್ನಿ...


 ಬಜ್ಜಿಗರ ಗ್ರೂಪ್ 

 ಮೊಟ್ಟ ಮೊದಲ ಸುಧಾ ಪತ್ರಿಕೆ