Monday, October 16, 2017

ಕಲಾಸಂಗಮ - ಚಿತ್ರಕೂಟ ಸ್ಕೂಲ್ 2017 .

ಕಲಾಸಂಗಮ - ಚಿತ್ರಕೂಟ ಸ್ಕೂಲ್ ೨೦೧೭ .

ಎಂಥ ಅದ್ಬುತ ದೃಶ್ಯ ಕಾವ್ಯ....    wow ,   ಚಿತ್ರಕೂಟ ಶಾಲೆಯ ಇಡಿ ಕುಟುಂಬಕ್ಕೆ ನನ್ನ ಹಾಗು ಎಲ್ಲ parents ಪರವಾಗಿ ಹಾರ್ದಿಕ ನಮನಗಳು.  
ನಾನು ತುಂಬ ಸ್ಕೂಲ್ ಡೇ ಸ್ಟೇಜ್ ಶೋ  ನೋಡಿದ್ದೇನೆ .   ಕೆಲವೊಂದು ಶಾಲೆಯಲ್ಲಿ  ಸ್ಕೂಲ್ ಡೇ ಅನ್ನುವುದು ಪ್ರತಿಷ್ಠೆಯ ವಿಷಯ  ಯಾಕೆ ಅಂದ್ರೆ ತುಂಬ ಜನ ಸೇರುತ್ತಾರೆ ಅದರಲ್ಲಿ ಸ್ಕೂಲ್ ಇಮೇಜ್ ನ ಬಿಲ್ಡ್ ಮಾಡಿ ಮುಂದಿನ ವರ್ಷದ ಅಡ್ಮಿಶನ್ ಗೆ ಅನುಕೂಲ ಅಗಲಿ ಅಂತ ತುಂಬ ಶಾಲೆಗಳು ಯೋಚಿಸುತ್ತಾರೆ...   ಪ್ರಸಕ್ತ ಸನ್ನಿವೇಶದ ಡಾನ್ಸ್ ಮತ್ತೆ ರಂಜಿಸುವ ಹಾಡುಗಳಿಂದ ಚಿಕ್ಕ ಮಕ್ಕಳ ಕೈನಲ್ಲಿ ಏನೋ ಒಂದು ಡಾನ್ಸ್ ಮತ್ತು ನಾಟಕ ಅಯೋಜಿಸಿರುತ್ತಾರೆ...     
ಆದರೆ ಚಿತ್ರಕೂಟ ಶಾಲೆ  ನಿಜವಾಗಲು ವಿಭಿನ್ನ ಪ್ರಯೋಗಗಳಿಂದ ಒಂದು ಮಾದರಿ ಶಾಲೆ ಯಾಗಿ ರೂಪುಗೊಂಡಿದೆ.   ನನ್ನ ಮಗ ಒಂದನೇ ತರಗತಿ ನಲ್ಲಿ ಓದುತ್ತಿದ್ದಾನೆ... ಹಾಗಂತ ಹೊಗಳಿ ಹೇಳ್ತಾ ಇಲ್ಲ..  ಒಳ್ಳೆಯ ಪ್ರಯೋಗಗಳಿಂದ,  ಹೊಸ ವಿಚಾರಧಾರೆ ಇಂದ ನಡೆಸಿಕೊಂಡು ಬರುತ್ತಿರುವ ಸ್ಕೂಲ್ ಡೇ ಬಗ್ಗೆ ಹೇಳಲೇಬೇಕು ಅಂತ ಬರೆದಿದ್ದೇನೆ.  ಹೋದ ವರ್ಷನೆ UKG ಮಕ್ಕಳ ಕೈನಲ್ಲಿ  ಅದ್ಬುತವಾದ ನಾಟಕ ವನ್ನು ಆಡಿಸಿದ್ದರು.   ಅದೇ ಈ ವರುಷ... ಒಂದು ಒಳ್ಳೆಯ ಮೆಸೇಜ್ ಅಂಡ್ theam ತೆಗೆದುಕೊಂಡು  ಅದ್ಬುತ ಎನ್ನುವಂಥ ಸಾದನೆ ಯನ್ನು  ಚಿಕ್ಕ ಹಾಗು ದೊಡ್ಡ ಮಕ್ಕಳ ಕೈನಲ್ಲಿ ಮಾಡಿಸಿದ್ದಾರೆ ಚಿತ್ರ ಕೂಟ ಶಾಲೆಯವರು...  
ಥಿಯೇಟರ್ , ರಂಗಭೂಮಿ , ನಾಟಕ  ಅದಕ್ಕೆ ತಕ್ಕದಾದ ನೃತ್ಯ ಸಂಯೋಜನೆ.  ಮದ್ಯ  ಮದ್ಯದಲ್ಲಿ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಸಾರುವ  ಮೊಬೈಲ್ ಬಗೆಗಿನ ಅರ್ಥಪೂರ್ಣ ನಾಟಕ.   ಅಬ್ಬಾ !!!!   ಅದ್ಬುತ .... ಇದರ ಮದ್ಯದಲ್ಲಿ ತುಂಬ ಇಷ್ಟ ಆಗಿದ್ದು ಖುದ್ದು  ಶಿಕ್ಷಕ ವೃಂದ ಮಾಡಿದ ನೃತ್ಯ ಹಾಗು ಫ್ಲೋಕ್ ಸಾಂಗ್....   
ಮೊದಲೇ ಹೇಳಿದ ಹಾಗೆ ಒಂದು ಒಳ್ಳೆಯ ದೃಶ್ಯ ಕಾವ್ಯ ಸಂಯೋಜನೆ..   ಈ ರೀತಿ ಎಲ್ಲ ಮಕ್ಕಳು ಹಾಗು ಶಿಕ್ಷಕ ವೃಂದ ಸೇರಿ ಮಾಡಿಸುವುದು ಸಾದಾರಣ ವಿಷಯವಲ್ಲ.   ಎಲ್ಲವನ್ನು ಅಚ್ಚುಕ್ಕಟ್ಟಾಗಿ ಎಲ್ಲೂ ಬೋರ್ ಹಾಗದೆ ಇರುವ ಹಾಗೆ ನೆಡೆಸಿಕೊಡುವಲ್ಲಿ  ಅದ್ಬುತ ಪಾತ್ರ ವಹಿಸಿದ ಕಲಾ ಶಿಕ್ಷಕರು ಹಾಗು ಶಾಲೆಯ ಮಂಡಳಿಗೆ ಮತ್ತೊಮ್ಮೆ ನಮನಗಳು  ಹಾಗು ಅಭಿನಂದನೆಗಳು.   
ಚೈತನ್ಯ ಸರ್, ಜ್ಯೊಯತಿ ಮಾಡಮ್, "ಕಶ್ಯಪ್ ಸರ್ "  ಹಾಗು   ಎಲ್ಲ ಶಿಕ್ಷಕ ವೃಂದ  ಅದ್ಬುತವಾದ ಕಾರ್ಯಕ್ರಮಕ್ಕೆ ಸಾಕ್ಷಿ ಯಾಗಿದ್ದಿರ.     ನಿಮ್ಮ ಶಾಲೆಯ ಘನತೆ ಹೀಗೆ ಮುಂದುವರಿಯಲಿ


complete Pictures for 4:00PM Batch Students can be seen here.  -  All Photos 




ಶಾಲೆಯ ಶಿಕ್ಷಕ ವೃಂದ ಮಾಡಿದ ನೃತ್ಯ ,  " ಚಾಮುಂಡೇಶ್ವರಿ ದೇವಿಯ “ಹಯಗಿರಿ ನಂದಿನಿ ನಂದಿತ ಮೇಧಿನಿ"    ಅದ್ಬುತ !!!






ಭೂಮಿ ಮತ್ತು ಆಕಾಶ ಬಗೆಗಿನ ಒಂದು ಚೆಂದದ ನಾಟಕ




2 ತರಗತಿ ಮಕ್ಕಳ ಡಾನ್ಸ್





ಒಂದನೇ ತರಗತಿ ಮಕ್ಕಳಿಂದ  "ಕರಗ" "ಹುಲಿವೇಷ " "ಕೀಲುಕುದುರೆ "  ಜನಪದ ಶೈಲಿಯ ನೃತ್ಯ ಸಂಯೋಜನೆ 














ವಚನ ಸಾಹಿತ್ಯ  ಅಚ್ಚುಕಟ್ಟಾದ ಶರಣರ ಗಾಯನ 



ಶಾಲೆಯ ಶಿಕ್ಷಕ ವೃಂದದಿಂದ ಸಂಗೀತ ಲಹರಿ...  ದೇಶಬಕ್ತಿ ಗೀತೆಯ ಅದ್ಬುತ ಲಹರಿ ....









ಶ್ರೀ ಕೃಷ್ಣಾವತಾರ   ಸಂಪೂರ್ಣ  ರಂಗಸಂಯೋಜನೆ .   ಬಾಲ ಕೃಷ್ಣ ನಿಂದ ಹಿಡಿದು  ಕೃಷ್ಣಾವತಾರ ದ ಸಂಪೂರ್ಣ ಚಿತ್ರಣ...   ತುಂಬಾ ಚೆನ್ನಾಗಿ ಸಂಯೋಜಿಸಿದ್ದರು...
















ಒಂಬತ್ತು ಮತ್ತು ಹತ್ತನೇ ತರಗತಿ ಮಕ್ಕಳ ನೃತ್ಯ ಸಂಯೋಜನೆ...








ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಸಾರುವ  ಮೊಬೈಲ್  ಹಾಗು ಟೆಕ್ನಾಲಜಿ ಬಗೆಗಿನ  ಅನಾಹುತದ ಅದ್ಬುತ ರಂಗಪ್ರಯೋಗ.   ಪ್ರತಿ ಕಾರ್ಯಕ್ರಮದ ಮದ್ಯದಲ್ಲಿ ಬಂದು ಸಂದೇಶ ಸಾರುತ್ತಿದ್ದ ... ಮೊಬೈಲ್ ನಿಂದ ಆಗುವ ಅನಾಹುತದ ಬಗೆಗಿನ ನಾಟಕ ಪ್ರಯೋಗ ಅದ್ಬುತ ವಾಗಿತ್ತು....