Showing posts with label ಗುರು. Show all posts
Showing posts with label ಗುರು. Show all posts

Tuesday, January 4, 2011

ನ್ಯೂ ಇಯರ್ ಡೇ ಅನುಭವ -

ನನಗಂತು ಈ ಸಲದ ನ್ಯೂ ಇಯರ್ ಡೇ,,,, ತುಂಬಾ different ಆಗಿ ಇತ್ತು , ಮಿಶ್ರ ಅನುಭವ..... ಒಂದು ಕಡೆ....ನೋವು, ಇನ್ನೊಂದು ಕಡೆ ನನ್ನ ನ್ಯೂ ಇಯರ್ ಡೇ ನ ಆಕಾಶದಲ್ಲೇ ಅನುಭವಿಸುವ ಅವಕಾಶ.....ಅದು ಬೇರೆ ಬೇರೆ ದೇಶಗಳಲ್ಲಿ...... ಒಟ್ಟಿನಲ್ಲಿ ನನ್ನ ನ್ಯೂ ಇಯರ್ ಡೇ.... ಫುಲ್ different ಆಗಿ ಇತ್ತು....


ಸೌತ್ ಅಮೆರಿಕ ದೇಶದಲ್ಲಿ ಇರುವ argentaina , ಗೆ official ಟ್ರಿಪ್ ಇತ್ತು , ಇದಕ್ಕೆ ಲಾಸ್ಟ್ ಡಿಸೆಂಬರ್ ನಲ್ಲೆ ಹೋಗಬೇಕಾಗಿ ಇತ್ತು,,, ವೀಸಾ ಬರೋದು delay ಆದ ಕಾರಣ ಹಾಗು ಕ್ರಿಸ್ಮಸ್ ಟೈಮ್ ನಲ್ಲಿ ಇಲ್ಲಿ ಎಲ್ಲರೂ ರಜೆನಲ್ಲಿ ಇರುವ ಕಾರಣ JAN 3rd ಗೆ postpone ಆಗಿತ್ತು,,, ಅದು ಡೇಟ್ ಸೆಲೆಕ್ಟ್ ಮಾಡೋದ್ರಲ್ಲಿ ನಾನೇ ಎಡವಟ್ಟು ಮಾಡಿಕೊಂಡೆ , ೧ st ನೈಟ್ ಹೋಗ್ಬೇಕು ಅಂತ ಅನ್ಕೊಂಡ್ ಟಿಕೆಟ್ ಬುಕ್ ಮಾಡಿದ್ದೆ... ಆದರೆ, ನನ್ನ ಫ್ಲೈಟ್ ಟಿಕೆಟ್ ಬುಕ್ ಆಗಿದ್ದು ಜನವರಿ ಒಂದನೇ ತಾರೀಕು ಬೆಳಿಗ್ಗೆ 4 :30 ಕ್ಕೆ ಅಂದ್ರೆ ನಾನು 3 hours ಮುಂಚೆನೇ Airport ನಲ್ಲಿ ಇರಬೇಕಾಗಿತ್ತು, ಅದಕ್ಕೆ ಡಿಸೆಂಬರ್ ನೈಟ್ 12 :30 ಗೆ ಮನೆ ಬಿಡಬೇಕಾಗಿ ಇತ್ತು.... ಮದುವೆ ಆದ ಹೊಸದು,,, ನನ್ನ wife ಅಂತು ಫುಲ್ ಕೋಪ ಮಾಡಿಕೊಂಡ ಇದ್ಲು,,, ಫಸ್ಟ್ ಟೈಮ್ ನಿಮ್ ಜೊತೆ ನ್ಯೂ ಇಯರ್ celebrate ಮಾಡೋಕು ಇರೋಲ್ಲ ಅಂತ . ಅಂತು ಭಾರದ ಮನಸಿನಿಂದ ಹೊರಟೆ...

ಸರಿಯಾಗಿ 4 :35 ಕ್ಕೆ quattar Airways ನ flight ಹೊರಡ್ತು,,,, ಅಂತು ಫಸ್ಟ್ ಟೈಮ್ ನನ್ನ ಲೈಫ್ ನಲ್ಲಿ ನ್ಯೂ ಇಯರ್ ನ ಏರ್ ನಲ್ಲಿ ಅಂದ್ರೆ ಫ್ಲೈಟ್ ನಲ್ಲಿ celebrate ಮಾಡಬೇಕಾಗಿ ಬಂತು.... ಹಾಂ ಇದು ಒಂದು ತರ ಹೊಸ ಅನುಭವ , ಯಾರಿಗೆ ಸಿಗುತ್ತೋ ಇಲ್ಲವೋ ಈ ಅನುಭವ.....:-) ಅಲ್ವ

ಇನ್ನೊಂದು ಮಜಾ ಅಂದ್ರೆ ನಾನು ಒಂದು ಕಡೆ ಇಂದ ದೂರದ Argentaina ಗೆ Mr ಸೂರ್ಯನ ಜೋತೆನಲ್ಲೇ ಹೋಗ್ತಾ ಇದ್ದೆ... ೨೪ ಗಂಟೆ ಕಳೆದರು ಕತ್ತಲು ಅಂತ ಆಗಲೇ ಇಲ್ಲ... ಗೊತ್ತ.....

ಮೊದಲು doha (quattar ) international ಏರ್ಪೋರ್ಟ್ ನಲ್ಲಿ ಫ್ಲೈಟ್ ಬಂದು ಲ್ಯಾಂಡ್ ಆಯಿತು,,,, ಇಲ್ಲಿಂದ ಇನ್ನೊಂದು ಫ್ಲೈಟ್ ಚೇಂಜ್ ಮಾಡಬೇಕಾಗಿ ಇತ್ತು Argentaina ಕ್ಯಾಪಿಟಲ್ Buenos Aires ಗೆ ಹೋಗಲು ... ಅಲ್ಲಿ ನನಗೆ ೧ hour ಅಸ್ಟೇ ಟೈಮ್ ಇದ್ದದ್ದು,,,, ಸೊ ಇಲ್ಲಿಗೆ ಬಂದು ಲ್ಯಾಂಡ್ ಅದಾಗ ಲೋಕಲ್ ಟೈಮ್ 6 :45 AM , ಅಂದ್ರೆ ಸೂರ್ಯ ಆಗಲೇ ಉದಯಿಸಿದ್ದ (ಇಂಡಿಯಾ ಟೈಮ್ 9 :30 AM ), ಸೊ ಇಲ್ಲಿಂದ sao polo , (Brazil ) ಗೆ ಫ್ಲೈಟ್, ಇಲ್ಲಿಗೆ 18 hour journy , Brazil ತಲುಪಿದಾಗ ಲೋಕಲ್ ಟೈಮ್ 5 :40 PM, ಸೂರ್ಯ ಇನ್ನು ಪ್ರಕಾಶಮಾನವಾಗಿ ರಾರಾಜಿಸುತ್ತ ಇದ್ದ (ಅವಾಗ ನಮ್ಮ ಇಂಡಿಯಾ ಟೈಮ್ 1 :00 AM 2 nd JAN ) ಇಲ್ಲಿಂದ Buenos Aires 4 :30 ಗಂಟೆಗಳ ಪ್ರಯಾಣ same ಫ್ಲೈಟ್ ನಲ್ಲಿ .

ಅಂತು Buenos Aires ಬಂದು ತಲುಪಿದಾಗ ಲೋಕಲ್ ಟೈಮ್ 8 :55 PM ಜನ 1 st night (ಇಂಡಿಯಾ ಟೈಮ್ 2 nd ಬೆಳಿಗ್ಗೆ 5 :00 AM ಇರಬೇಕು)

ಅಂತು ನಾನು ಸೂರ್ಯನ ಜೋತೆನಲ್ಲಿ ವರ್ಲ್ಡ್ ನ ಒಂದು ಕಡೆ ಇಂದ ಇನ್ನೊಂದು ಕಡೆಗೆ ಸಾಗ್ತಾ ಇದ್ದೆ,,, ಈ ಸಲದ ನ್ಯೂ ಇಯರ್ ಡೇ ನಂಗೆ ಫುಲ್ ಲಾಂಗ್ ಅಂದ್ರೆ 34 hours ಇತ್ತು .... ಅದು ಫ್ಲೈಟ್ ನಲ್ಲೆ ಬೇರೆ ಬೇರೆ ದೇಶಗಳಲ್ಲಿ ನ್ಯೂ ಇಯರ್ ನೋಡಿದ್ದು ಆಯಿತು.... :-)

Buenos Aires ಏರ್ಪೋರ್ಟ್ ನಿಂದ ಹೊರಗಡೆ ಬಂದು ನೋಡ್ತೇನೆ,,, ಈ ಸೂರ್ಯ ಇನ್ನು ಮುಳುಗೋದು ಬೇಡ್ವ,,, ಆಗಲೇ ರಾತ್ರಿ ೮:೩೦ ಆಗಿದೆ ಆದರು ಸೂರ್ಯ ಮಾತ್ರ ಮುಳುಗೆ ಇಲ್ಲ ನಮ್ಮಲ್ಲಿ 5 :30 ಸಂಜೆ ಹೇಗೆ ಇರುತ್ತೋ ಅದೇ ರೀತಿ ಇದೆ . ಯಾಕೋ ಈ ಸೂರ್ಯ ನನ್ನ ಬಿಡೋಲ್ಲ ಅಂತ ಅನಿಸ್ತ ಇತ್ತು,,, ಅಂತು ಏರ್ಪೋರ್ಟ್ ನಿಂದ ನನ್ನ ಅಪಾರ್ಟ್ಮೆಂಟ್ಗೆ ಹೋಗಬೇಕಾದರೆ ದಾರಿನಲ್ಲಿ ಕತ್ತಲು ಆಯಿತು.... ಅದು 9 :00 ರಾತ್ರಿಗೆ .....

ಅಂತು ಈ ಸಲದ ನ್ಯೂ ಇಯರ್ ತುಂಬಾ ವಿಚಿತ್ರವಾಗಿ,,, different ಆಗಿ ಇತ್ತು.....

ನನ್ನ ಅಮ್ಮನ್ನ,,, ನನ್ನ chweet wife ನ ತುಂಬಾನೆ ಮಿಸ್ ಮಾಡ್ಕೋತಾ ಇದೇನೇ,,,:-( ಅವರು ಅಸ್ಟೇ......

ನಾನು ಫ್ಲೈಟ್ ನಲ್ಲಿ ಇರಬೇಕಾದರೆ ತೆಗೆದ ಕೆಲವು ಫೋಟೋಗಳನ್ನು ನೋಡಿ....
http://picaasaweb.google.com/guru.prasadkr/Argentaina?feat=directlink

(ಮುಂದಿನ ಲೇಖನ ದಲ್ಲಿ ಭಾನುವಾರ ಮತ್ತೆ ಸೋಮವಾರದ ಅನುಭವವನ್ನು ಬರೆಯುತ್ತೇನೆ.... ಇಲ್ಲಿ ನನ್ನ ಆಫೀಸ್ ಹುಡುಕೋದೇ ಒಂದು ವಿಚಿತ್ರ ಅನುಭವ ಆಗಿತ್ತು)
quttar Airways -- in Doha   
 
 ದೋಹ  view
ಸಮುದ್ರದ ಮಧ್ಯದಲ್ಲಿ ನಮ್ಮ ಫ್ಲೈಟ್

quattar Airbus ಒಳಗಿನ ಚಿತ್ರ


 sao paulo brazil







 ಅರ್ದ ಭಾಗ ಆಗಲೇ ಕತ್ತಲಾಗಿರುವುದು

Argentaina Buenos Aires ಸಿಟಿ

Monday, December 13, 2010

ಪೆನ್ಸಿಲ್ ಲೆಡ್ ನಲ್ಲೆ ಅರಳುವ ಇವರ ಕಲೆ ಅದ್ಬುತ...


ನಮಸ್ಕಾರ....


ತುಂಬಾ ದಿನಗಳ ಬಳಿಕ, ನನ್ನ ನೆಚ್ಚಿನ ಬ್ಲಾಗ್ ಲೋಕದ ಕಡೆ ತಲೆ ಹಾಕ್ತಾ ಇದೇನೇ,,,, ಮದುವೆ ಗಲಾಟೆ, ಹಾಗು ಕೆಲಸದ ಒತ್ತಡಗಳ ನಡುವೆ.....ನನ್ನ ಈ ಹವ್ಯಾಸ ತಪ್ಪೇ ಹೋಗಿತ್ತು.....ಕಳೆದ ೨ ತಿಂಗಳಿನಿಂದ ನನ್ನ ಬ್ಲಾಗ್ ಅಪ್ಡೇಟ್ ಮಾಡೋದು ಇರಲಿ,,, ಬೇರೆಯವರ ಬ್ಲಾಗ್ ಅನ್ನು ಓದೋಕು ಟೈಮ್ ಇರಲಿಲ್ಲ..... ಕೊನೆಗೂ,, ಸ್ವಲ್ಪ ಫ್ರೀ ಮಾಡಿಕೊಂಡು ಇದರ ಕಡೆ ಬಂದಿದ್ದೇನೆ......

ನಮ್ಮ ಬ್ಲಾಗ್ ಸ್ನೇಹಿತರ ತುಂಬಾ ಒಳ್ಳೆಯ ಲೇಖನಗಳನ್ನು,, ಕವನಗಳನ್ನು ಮಿಸ್ ಮಾಡಿಕೊಂಡೆ ಅಂತ ಕಾಣುತ್ತೆ... ಇರಲಿ... ನಿದಾನಕ್ಕೆ ಸಮಯ ಸಿಕ್ಕಾಗ ,,, ನೋಡಿ ಪ್ರತಿಕ್ರಿಯಿಸುತ್ತೇನೆ .....

ಇವಾಗ ಮತ್ತದೇ ನನ್ನ ಹುಡುಕಾಟದ ಅದ್ಬುತ ವಿಸ್ಮಯಗಳ ವಿಚಾರಗಳೊಂದಿಗೆ ನಿಮ್ಮ ಮುಂದೆ ಬರ್ತಾ ಇದೇನೇ...

ನನ್ನ ಹಿಂದಿನ ಬ್ಲಾಗ್ ಗಳಲ್ಲಿ... ಪೆನ್ಸಿಲ್ ನ ಚಿತ್ತಾರದ.. ಪೆನ್ಸಿಲ್ ಅನ್ನೇ ಉಪಯೋಗಿಸಿ ಅದರಿಂದ ಮಾಡಿದ ಕಲಾಕ್ರುತಿಗಳನ್ನ ಹಾಗು ಅದರ ಬಗ್ಗೆ ಹೇಳಿದ್ದೆ( http://guruprsad.blogspot.com/2009/10/blog-post_22.html).... ಅಲ್ವ... ಹಾಗೆ ಇಲ್ಲಿ ನೋಡಿ, ಯಾರೋ ಒಬ್ಬ ಭೂಪ,,, ಪೆನ್ಸಿಲ್ ಮುಂದಿನ ಲೆಡ್ ನಿಂದಲೇ ಬೆರಗಾಗುವ ರೀತಿನಲ್ಲಿ ತನ್ನ ಕಲೆ ಯನ್ನು ಒರೆಗೆ ಹಚ್ಚಿದ್ದಾನೆ,,,, , ಅಕ್ಕಿ ಕಾಳಿನಲ್ಲಿ ಹೆಸರು ಬರೆಯೋದನ್ನು,,, ಗೋದಿ ಕಾಳಿನಲ್ಲಿ ಹೆಸರು ಬರೆಯೋದನ್ನು,,, ನೋಡಿದ್ದೇವೆ,,, ಆದರೆ ಚಿಕ್ಕ ಪೆನ್ಸಿಲ್ ಮುಂದಿನ ಲೆಡ್ ನಿಂದಲೇ,,,, ಅದ್ಬುತ ಎನಿಸುವ ಕಲೆಗಳನ್ನ ಮಾಡಿ ತನ್ನ ಚಮತ್ಕಾರ ತೋರಿಸಿರುವುದನ್ನು ನೋಡಿದ್ದೀರಾ.... ... ಪೆನ್ಸಿಲ್ ನ ಉಪಯೋಗಿಸಿಕೊಂಡೆ ಎಷ್ಟು ಒಳ್ಳೆಯ ಕಲಾಕೃತಿಗಳನ್ನ ಮಾಡುತ್ತಾರೆ ನೋಡಿ.... ಎಷ್ಟು ವಿಸ್ಮಯ ಅಲ್ವ....

ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ....

















Saturday, September 11, 2010

ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು...........



ಎಲ್ಲರಿಗೂ , ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು...........  ನಿಮ್ಮ ಎಲ್ಲ ಬೇಡಿಕೆಗಳನ್ನು ಗಣಪತಿ ಇಡೇರಿಸಿ, ಸುಖ ಸಂತೋಷ ನೆಮ್ಮದಿ ತರಲೆಂದು,,,, ಹಾರೈಸುವ  ನಿಮ್ಮ 
ಗುರು  
(ಇಲ್ಲಿ ಇರುವ ಗಣೇಶನ್ನ ನಾನು ಕಾನಿಪಕಂ ಗೆ ಹೋಗಿದ್ದಾಗ ತೆಗೆದಿದ್ದದು...)





Monday, August 2, 2010

ನಮ್ಮ ಬೆಂಗಳೂರಿನ ಸುತ್ತ ಮುತ್ತ..........

ನಮ್ಮ ಈ ಬೆಂಗಳೂರಿಗೆ ಎಷ್ಟೊಂದು ಮಾಲ್ ಬಂದ್ರು ಸಾಕಾಗೋದಿಲ್ಲ ಅನ್ನಿಸುತ್ತೆ ....... ಫೋರಂ ಮಾಲ್, ಗರುಡ ಮಾಲ್, ಸಿಗ್ಮಾ ಮಾಲ್, ಗೋಪಾಲನ್ ಮಾಲ್, ಇವಾಗ ಮಂತ್ರಿ ಮಾಲ್,,,,,,, ವೀಕ್ ಎಂಡ್ ಬಂದ್ರೆ ಸಾಕು,,, ನಮ್ಮ ಬೆಂಗಳೂರಿನ ಹುಡುಗಾಸ್ ಹೂಡುಗಿಸ್,,, ,, ಆಂಟಿಸು , ಅಂಕಲ್ಸು,,,,middle age ವೊಮೆನ್ಸು , ಅಜ್ಜಾ ಸು,, ಅಜ್ಜಿಸು.....ಕೊನೆ ಪಿಳ್ಳೆ ಪೀಚುಗಳು,,,,, ಈ ಮಾಲ್ ನಲ್ಲಿ ತುಂಬಿರ್ತಾರೆ alva ...

ಒಂದು ಸರಿ ಮಂತ್ರಿ ಮಾಲ್ ಗೆ ವೀಕ್ ಡೇಸ್ ನಲ್ಲಿ ಹೋಗಿದ್ದೆ,,, ಆದರೆ ವೀಕ್ ಎಂಡ್ ನಲ್ಲಿ ಹೋಗಿರಲಿಲ್ಲ,,, ಮೂನ್ನೆ ನನ್ನ ಹುಡುಗಿ ಜೊತೆ ಹೋಗಿದ್ದೆ,,, ಕಾಲ್ ಇಡೋಕು ಜಾಗ ಇಲ್ಲ,,, ಒಳಗಡೆ ಹೋಗಬೇಕಾದ್ರೆ ಸೆಕ್ಯೂರಿಟಿ ಚೆಕ್,,, ಅದಕ್ಕೆ ಮಾರುದ್ದ quee , ಅಬ್ಬಬ,, ಎಲ್ಲಿರ್ತಾರೆ ಇಷ್ಟೊಂದ್ ಜನ ನಮ್ ಬೆಂಗಳೂರಿನಲ್ಲಿ ......

ನಿಮಗೂ ಇದರ ಅನುಭವ ಆಗಿರಬೇಕು ಅಲ್ವ.....

ಇದು ಬಿಟ್ಟು,,, ಬೇರೆ ಪ್ರಶಾಂತ ವಾದ ಪ್ಲೇಸ್ ಬ್ಯಾಂಗಲೋರ್ ನಲ್ಲಿ,, ಯಾವುದು ಇಲ್ವಾ,,, ಅಥವಾ ಇದ್ರೂ ಈ ಮಾಲ್ ಗಳ ಗಲಾಟೆ ಇಂದ ಕಾಣಿಸ್ತಾ ಇಲ್ವಾ,,,,,

ಖಂಡಿತ ಇದೆ,,, ಒಳ್ಳೆಯ , ಪ್ರಶಾಂತ ವಾದ,, ನೆಮ್ಮದಿಯ,,, ಎಷ್ಟೊಂದು ಸುಂದರ ತಾಣ ಗಳು, ನಮ್ಮ ಸುತ್ತ ಮುತ್ತಲೇ ಇದೆ,,, ಆದರೆ ಅದನ್ನು,,,, ನಿದಾನಕ್ಕೆ ನೋಡಿ ಅನುಭವಿಸ ಬೇಕು ಅಸ್ಟೇ ,,

ಅ ತರ ಒಂದು ಸ್ಥಳದ ಬಗ್ಗೆ , ಈ ಮೊದಲೇ ಒಂದು ಅರ್ತಿಕ್ಲೆ ಬರೆದಿದ್ದೆ,,, ವಿಶ್ವ ಶಾಂತಿ ಆಶ್ರಮ..... ಬಿಡುವಿದ್ದಾಗ.... ಒಮ್ಮೆ ನೋಡಿ ಬನ್ನಿ,,,,
(http://guruprsad.blogspot.com/2009/05/blog-post.ಹ್ತ್ಮ್ಲ್)

ಇವಾಗ ಹೇಳ ಹೊರಟಿರುವುದು,,, ನಮ್ಮ ಮನೆಯ ಹತ್ತಿರ ಇರುವ ಒಂದು ಸುಂದರ , ಪ್ರಶಾಂತ,,, ದೇವಸ್ಥಾನದ ಬಗ್ಗೆ,,,, ಇದು ಸುಭ್ರಮಣ್ಯ ದೇವಸ್ತಾನ,,,, ರಾಜರಾಜೇಶ್ವರಿ ನಗರ ದ ಕೊನೆಯ ಭಾಗದಲ್ಲಿ ಇದೆ..... (ಈಗಿನ ಕಾಲದ ಹುಡುಗರಿಗೆ ಏರಿಯ , ದೇವಸ್ತಾನ ಎಲ್ಲ ಎಲ್ಲಿ ಗೊತ್ತಿರುತ್ತೆ,, ಯಾವುದಾದರು ಕ್ಲಾಬ್ಬೋ , ಪುಬ್ಬೋ ಹೇಳಿದ್ರೆ ಸರಿ,, ಅಲ್ವ,,, ) ಬೆಸ್ಟ್ ಕ್ಲಬ್ ಅಂತ ಒಂದು ಕ್ಲಬ್ ಇದೆ ರಾಜರಾಜೇಶ್ವರಿ ನಗರದಲ್ಲಿ,,, ಅದರ ಹಿಂಬಾಗ ಇದೆ ಈ ಸುಂದರ ದೇವಸ್ತಾನ,,,,,

ಮೊದಲು ಈ ರೋಡ್ ನಲ್ಲಿ ಹೋಗ್ತಾ ಇರಬೇಕಾದರೆ ಬೆಟ್ಟದ (ಗುಡ್ಡದ) ಮೇಲೆ ಇರುವ ಮನಮೋಹಕ ೫ ತಲೆ ಇರುವ ದೇವರು ಕಾಣಿಸ್ತ ಇತ್ತು,,, ಇದು ಇನ್ನು construction ನಲ್ಲಿ ಇದೆಯೇನೋ ಅಂತ,,, ಹೋಗಿರಲಿಲ್ಲ... ಒಂದು ದಿನ,, ನಮ್ಮ ಅಮ್ಮ ನಾನ್ನು ಕರೆದು ಕೊಂಡು ಸಂಜೆ ಇಲ್ಲಿಗೆ ಹೋಗಿಯೇ ಬಿಡೋಣ ಅಂತ ಹೋದೆ.... ಅವಾಗ ಅನ್ನಿಸಿತು,, ಇಷ್ಟು ದಿನ ಇದು ಕಣ್ಣಿಗೆ ಬಿದ್ದಿರಲಿಲ್ಲ,,, ಗೊತ್ತಾಗಿದ್ದರೆ,, ಬಿಡುವಾದಾಗಲೆಲ್ಲ ಬರಬಹುದಿತ್ತು ಅಂತ....

ಅಸ್ಟು ಸುಂದರವಾಗಿ ಇದೆ,, ಈ ಪುಟ್ಟ ಗುಡ್ಡದ ಮೇಲೆ ಇರುವ ಸುಭ್ರಮಣ್ಯ ದೇವಸ್ಥಾನ .

ಮೊದಲು,, ಪಂಚಮುಖಿ ಗಣಪತಿ,ಯಾ ದೇವರು,, ಸಿಗುತ್ತೆ,,, ಪ್ರಾಂಗಣದ ಸುತ್ತಲು,,, ಗಣಪತಿಯ ಪಂಚ ಮುಖಗಳು ಕಾಣಲಿ ಎಂದು,, ಕಿಂಡಿಗಳನ್ನು ಮಾಡಿದ್ದಾರೆ,,, ಎಷ್ಟು ಚೆನ್ನಾಗಿ ಎಲ್ಲ ಮುಖಗಳ ಧರ್ಶನ ಸಿಗುತ್ತೆ,,,, ಅದಾದಮೇಲೆ ಗುಡ್ಡ ಹತ್ತಿ ಕೊಂಡು ಹೋಗಲು...ದೊಡ್ಡದಾದ ಮೆಟ್ಟಿಲು ಗಳಿವೆ,,,ಮೆಟ್ಟಿಲು ಹತ್ತುವವರಿಗೆ ಕಷ್ಟ ಆದರೆ,, ಅಂಥವರು,, ಪಕ್ಕದಲ್ಲೇ ಇರುವ,, ಇಳಿಜಾರಾದ ಸಿಮೆಂಟು ನೆಲದ ಮೇಲೆ ನಿದಾನಕ್ಕೆ ಹತ್ತಿಕೊಂಡು ಹೋಗಬಹುದು,,,,

ಗುಡ್ಡ ಹತ್ತಿದ ಮೇಲೆ ಸುಂದರ ಮಂಟಪ, ದೇವಸ್ತಾನ,,, ಅದರಲ್ಲಿ ಪ್ರಶಾಂತ ವಾಗಿ ಇರುವ,,, ಸುಭ್ರಮಣ್ಯ ದೇವರ ಸುಂದರ ಮೂರ್ತಿ .... ಇದೆ,,, ಅದನ್ನ ಎಷ್ಟು ನೋಡಿದರು ಸಾಲದು,,,, ಅಸ್ಟು ಸುಂದರವಾಗಿ ಅಲಂಕಾರ ಮಾಡಿರುತ್ತಾರೆ,,,,

ಈ ಪುಟ್ಟ ಗುಡ್ಡದ ಮೇಲೆ ನಿಂತು ನೋಡಿದರೆ, ಬೃಹತ್ ಬೆಂಗಳೂರಿನ ಕೆಲವು ಭಾಗದ ಸುಂದರವಾದ ನೋಟ ಕಾಣಸಿಗುತ್ತದೆ,,, ಪೂಜೆ ಆದ ನಂತರ ಅಲ್ಲಿ ಕೊಡುವ ಪ್ರಸಾದ ತೆಗೆದುಕೊಂಡು,,,, ಅಲ್ಲೇ ಇರುವ ಮೆಟ್ಟಿಲುಗಳ ಮೇಲೆ ಕುಳಿತು,,,, ಸುಂದರವಾದ ನೋಟ ವನ್ನು ಸವಿಯುತ್ತ ಕಾಲ ಕಳೆಯ  ಬಹುದು,,,

ಸಂಜೆಯ ಹೊತ್ತು ಹೋದರೆ ತುಂಬಾ ಪ್ರಶಾಂತ ವಾಗಿ ಇರುತ್ತೆ....

ಈ ದೇವಸ್ತಾನದ ಮುಂದೆ , ಒಂದು ಹೊಸದಾಗಿ ಅಮ್ಮನವರ ಗುಡಿ, ಇದೆ,,, ಹೋದ ಸರಿ ಹೋಗಿದ್ದಾಗ,, ಅಲ್ಲಿ ಇನ್ನು ಅಮ್ಮನವರ ಪ್ರತಿಷ್ಟಾಪನೆ ನಡೆಯುತ್ತ ಇತ್ತು,,,

ಒಟ್ಟಿನಲ್ಲಿ,,, ಜನ ಜಂಗುಳಿಯ ಜಂಜಾಟದಿಂದ , ನೆಮ್ಮದಿ, ಪ್ರಶಾಂತತೆ ಬೇಕೆಂದರೆ,, ಒಮ್ಮೆ ಇಲ್ಲಿಗೆ ಹೋಗಿ ಬರಬಹುದು,,,

( ಮೈಸೂರ್ ರೋಡ್ ---> ರಾಜರಾಜೇಶ್ವರಿ ನಗರದ ಆರ್ಚ್ ----> ಉತ್ತರಹಳ್ಳಿ ಗೆ ಹೋಗುವ ರೋಡ್ ----> ಬೆಸ್ಟ್ ಕ್ಲಬ್ ಅಪಾರ್ಟ್ಮೆಂಟ್ ----> ಸುಬ್ರಮಣ್ಯ ದೇವಸ್ಥಾನ  )



ಗುಡ್ಡದ ದೇವಸ್ಥಾನದ ಮೇಲೆ ಇರುವ ಸುಂದರ ಮೂರ್ತಿ

ಮೆಟ್ಟಿಲು ಹತ್ತಿ  ಹೋಗುವಾಗ


ನಮ್ಮ ಸುಂದರ ಬೆಂಗಳೂರಿನ ವಿಹಂಗಮ ನೋಟ.....






ಎದುರುಗಡೆ ಇರುವ ಅಮ್ಮನವರ ದೇವಸ್ಥಾನ ದಿಂದ ಒಂದು ನೋಟ....




Tuesday, June 29, 2010

ಕೊನಾರ್ಕ್ ಸೂರ್ಯ ದೇವಸ್ಥಾನ....ಒರಿಸ್ಸಾ ಪ್ರವಾಸ ಭಾಗ ೨


ಕೊನಾರ್ಕ್ ಸೂರ್ಯ ದೇವಸ್ಥಾನ....


ಸೋಮವಾರ ನಾವು ಪುರಿ ತಲುಪಿದ್ದು ಮಧ್ಯಾನ ೧ ಘಂಟೆ ಆಗಿತ್ತು... ನಾವು ಮೊದಲೇ ಮಾಡಿದ್ದ ಪ್ಲಾನ್ ಎಲ್ಲ ಹಾಳಾಗಿ ಹೋಗಿತ್ತು,,, ಸೊ ಹೇಗೂ ಲೇಟ್ ಆಗಿದೆ,,, ಮೊದಲು ಕೊನಾರ್ಕ್ ಸೂರ್ಯ ದೇವಸ್ಥಾನ ಮುಗಿಸಿಕೊಂಡು,,, ಸಂಜೆ ಟೈಮ್ ಇದ್ದರೆ ಪುರಿ ದೇವಸ್ತಾನಕ್ಕೆ ಹೋಗೋಣ ಅಂತ ಮಾತಾಡಿಕೊಂಡು ಆಯಿತು..... ಬೇಗ ಬೇಗ,, ನಮಗಾಗಿ ಬುಕ್ ಮಾಡಿದ್ದ,, ಹೋಟೆಲ್ ಹಾಲಿಡೇ ಇನ್ ರೆಸಾರ್ಟ್ ನಲ್ಲಿ ಫ್ರೆಶ್ ಅಪ್ ಆಗಿ,,,, ಊಟ ಮಾಡಿಕೊಂಡು,,, ಕೊನಾರ್ಕ್ ದೇವಸ್ಥಾನಕ್ಕೆ ಹೊರಟೆವು,,,,

ಕೊನಾರ್ಕ್ ಇದು ಒಂದು historical place .. ಒರಿಸ್ಸಾ ರಾಜ್ಯದ ಆಕರ್ಷಣೀಯ ಸ್ಥಳ.... ಇದು ಪುರಿ ಇಂದ 35 KM ಗಳ ದೂರದಲ್ಲಿ ಇದೆ.... ಇಲ್ಲಿಗೆ ಹೋಗುವುದಕ್ಕೆ ಬಸ್ ಹಾಗು taxi ವ್ಯವಸ್ತೆ ಇದೆ... ಪುರಿ ಇಂದ 45 ನಿಮಿಷಗಳ ಪ್ರಯಾಣ.... ನಾವು ಒಂದು qualis ಮಾಡಿಕೊಂಡು ಹೊರಟೆವು,,,, ದೇವಸ್ಥಾನ ಬಗ್ಗೆ ಅಸ್ತೊಂದ್ ಮಾಹಿತಿ ಇರಲಿಲ್ಲ..... ಆದರು ಇದು ಒಂದು, ಒಳ್ಳೆಯ ಇತಿಹಾಸಿಕ ಸ್ಥಳ ಅಂತ ಗೊತ್ತಿತು,,,

ಕೊನಾರ್ಕ್ ಗೆ 3 :30 ಗೆ ಬಂದು ಸೇರಿದೆವು,,,, ಯಾವುದೇ vechile ಅನ್ನು temple ಹತ್ತಿರಕ್ಕೆ ಬಿಡುವುದಿಲ್ಲ... ಸ್ವಲ್ಪ ದೂರ ನೆಡೆದು ಕೊಂಡು ಹೋಗಬೇಕು,,,, ನಾವು ಇಳಿದ ಕೂಡಲೇ ಅಲ್ಲಿನ guide ಬಂದು ಸುತ್ತುವರೆದರು,,,, ದೇವಸ್ತಾನದ ಬಗ್ಗೆ ಎಲ್ಲ ತಿಳಿಸಿ ಹೇಳಲು,, ೧೫೦ ರೂ ಕೊಡಬೇಕಾಗುತ್ತೆ ಅಂತ ಕೇಳಿ ಹಿಂದೆ ಬಿದ್ದಿದ್ದರು,,, ಸರಿ ಮೊದಲು ನಾವು ಒಪ್ಪಿಕೊಳ್ಳ ಲಿಲ್ಲ.. ಆಮೇಲೆ ಸ್ವಲ್ಪ ಕಮ್ಮಿಗೆ ಅವರೇ ಬಂದು,, ಎಲ್ಲವನ್ನು explain ಮಾಡುತ್ತೇನೆ ಅಂತ ಬಂದರು,,, ಆದರೆ ನನಗೆ ಅಲ್ಲಿನ ಶಿಲ್ಪಗಳ ಹಾಗು ಕೆತ್ತನೆ ಕೆಲಸಗಳನ್ನು ಫೋಟೋ ತೆಗೆಯಬೇಕಾದ್ದರಿಂದ... ಅವರ ಜೊತೆ ಹೋಗದೆ,, ಒಬ್ಬನೇ ಫೋಟೋ ತೆಗೆಯಲು ಹೊರಟೆ,,,,,

ನಿಜವಾಗಲು ಇದು ಒಂದು ಅದ್ಬುತ ಕಲೆಯ ದೇವಸ್ಥಾನ,,, ಆದರೆ ತುಂಬಾ ಶಿಥಿಲ ವಾಗಿ ಹಾಳಾಗಿ ಹೋಗಿದೆ.... ಒಂದು ಪಾರ್ಶ್ವ ಬಿದ್ದು ಹೋಗಿದೆ ಕೂಡ...

ಇದರ ಇತಿಹಾಸ ಕೆಣಕಿದಾಗ ಸಿಕ್ಕ ಮಾಹಿತಿ....

ಕೊನಾರ್ಕ್ ಗೆ ಈ ಹೆಸರು ಬಂದಿದು ಕೋನ (corner ) + ಅರ್ಕ (ಸೂರ್ಯ) . ಇದಕ್ಕೆ ಇನ್ನೊಂದು ಹೆಸರು ಕೂನಾದಿತ್ಯ ಅಂತ.... ಇದು ಪುರಿ ಯಾ north eastern ಕಾರ್ನೆರ್ ನಲ್ಲಿ ನೆಲೆಸಿದೆ . ಇದಕ್ಕೆ ಮತ್ತೊಂದು ಹೆಸರು ಅರ್ಕಕ್ಷೇತ್ರ ಇದನ್ನ ಕಟ್ಟಿದು,,1278 CE ನಲ್ಲಿ ಅಂತೆ...


"ಗಂಗಾ Dynasty ನಲ್ಲಿ ಈ ದೇವಸ್ಥಾನವನ್ನು ಕಟ್ಟುವುದಕ್ಕೆ ನರಸಿಂಹ ದೇವ -೧ ರಾಜ ಅದೇಶಿಸುತ್ತನಂತೆ.....ಈ ದೇವಸ್ಥಾನವನ್ನು ಆಗಿನ ಅವನ ಕಾಲದ ರಾಜಕೀಯ ಪ್ರತಿಷ್ಟೆ ಯಾ ಸಂಕೇತವಾಗಿ,,, ಕಟ್ಟಿಸಲು ಯೋಚಿಸಿದ್ದರಂತೆ,,, ಅದಕ್ಕಾಗಿ. 12000 ಜನ ನುರಿತ ಶಿಲ್ಪ ಕಲಾವಿದರನ್ನು ಸೇರಿಸಿ ೧೨ ವರುಷಗಳ ಸತತವಾಗಿ ಶ್ರಮ ಪಟ್ಟರಂತೆ ಇದನ್ನ ಕಟ್ಟಲು.... ಆದರು ಇದನ್ನು ಅಂದುಕೊಂಡ ಸಮಯಕ್ಕಿಂತ ಮುಂಚೆ ಕಟ್ಟಲಾಗಲಿಲ್ಲ ... ಇದಕ್ಕೆ ಕಾರಣ,, ಇದನ್ನು ಕಟ್ಟಬೇಕಾದರೆ ಒಂದು ವಾಸ್ತು ದೋಷ ಎದುರಾಯಿತಂತೆ..... ಇದರ ನಿರ್ವಹಣೆ ಹೊಹಿಸಿಕೊಂಡಿದ್ದ..ಬಿಸು ಮಹಾರಾಣ .. ಅವರಿಗೂ ಇದಕ್ಕೆ ಉತ್ತರ ಕಂಡು ಹಿಡಿಯುವುದಕ್ಕೆ ಸಾದ್ಯವಗಲಿಲ್ಲವಂತೆ... ಆಗ,, ಅವರ ಮಗ ಧರ್ಮಪಾದ ಇದಕ್ಕೆ ಉಪಾಯವನ್ನು ಕಂಡು ಹಿಡಿದು,, ಕೊನೆಯ ಕಲ್ಲನ್ನು ತಾನೇ ಗೋಪುರದ ಮೇಲೆ ಇಟ್ತನತ್ತೆ ,, ಆಮೇಲೆ ಧರ್ಮಪಾದನ ಶವ,,, ದೇವಸ್ಥಾನ ದ ಹತ್ತಿರ ಇರುವ ಸಮುದ್ರದಲ್ಲಿ ತೇಲುತ್ತಿತ್ತಂತೆ... ಹೀಗೆ ಅವನ ಹೆಸರು,, ತಮ್ಮ ಸಮುದಾಯದ ರಕ್ಷಣೆಗೋಸ್ಕರ.. ತನ್ನ ಪ್ರಾಣವನ್ನೇ ಕೊಟ್ಟ ಎಂದು ಹೆಸರುವಾಸಿ ಆಯಿತು ಅಂತ ಪ್ರತೀತಿ.....ಆದರೆ ಇಗಲೂ..ಇದರ ವಾಸ್ತು ಸರಿ ಇಲ್ಲದೆ ಇರುವ ಕಾರಣ,, ದೇವಸ್ಥಾನ ಇಷ್ಟು ಅವನತಿ ಹೊಂದಿದೆ ಅಂತ ಹೇಳುತ್ತಾರೆ , ಇಲ್ಲಿನ ಸ್ಥಳೀಯರು,,, "

ಈ ಇಡೀ ದೇವಸ್ಥಾನ ಒಂದು ರಥದ ಮೇಲೆ ನಿಂತಿದೆ.. ಎಲ್ಲ ಕಡೆಗಳಲ್ಲೂ 24 ಚಕ್ರಗಳಿವೆ....ಕೆತ್ತನೆಯ ಕೆಲಸ ತುಂಬಾ ಚೆನ್ನಾಗಿ ಇದ್ದು,,, ಮನಮೋಹಕವಾಗಿ ಇದೆ..... (ಆದರೆ ತುಂಬಾ ಹಾಳಾಗಿ ಹೋಗಿದೆ....ಕೆಲವೊಂದು ಕಡೆ,,, ಏನು ಕಾಣಿಸುವುದಿಲ್ಲಾ. ಕಾಲದ ಮಹಿಮೆಯೋ,, ಅಥವಾ ಇಂಥ ಒಂದು ಅದ್ಬುತ ಕಲೆಯನ್ನು ಉಳಿಸಿಕೊಲ್ಲದೆ ಇರುವ ನಮ್ಮ ಅಸಹಾಯಕತೆಯೋ ಗೊತ್ತಿಲ್ಲ..) ಒಟ್ಟು ೭ ಅಶ್ವಗಳು ಈ ರಥವನ್ನು ಎಳೆಯುತ್ತಿದ್ದರೆ.. ಎರಡು ಸಿಂಹಗಳು ಆನೆ ಯನ್ನು ತುಳಿದು ಮುನ್ನುಗ್ಗುತ್ತಿರುವ ಹಾಗೆ ಕೆತ್ತಲಾಗಿದೆ......

ಒಟ್ಟಿನಲ್ಲಿ ಇದೊಂದು ಒಳ್ಳೆಯ ಕೆತ್ತನೆಯ,,, ಕಲಾ ದೇವಸ್ಥಾನ .... ಆದರೆ ಗರ್ಭಗುಡಿಯ ಮುಖ್ಯ ಗೋಪುರ ಬಿದ್ದು ಹೋಗಿ... ದೇವಸ್ಥಾನವೇ ಇಲ್ಲದೆ,, ಬರಿ ಹೊರಗಿನಿಂದ ನೋಡಬಹುದಾದ ಒಂದು ಆಕರ್ಷಣೀಯ ಸ್ಥಳವಾಗಿದೆ...

ಇಲ್ಲಿನ guide ಹೇಳುತ್ತಿದ್ದ ಇನ್ನೊಂದು ಮಹತ್ವದ ವಿಚಾರ ವೆಂದರೆ... ಈ ಗೋಪುರದ ಮೇಲೆ ಇರುವುದು,,, ಸಾಮಾನ್ಯ ಕಲ್ಲು ಅಲ್ಲ... ಇದು magnetic ಕಲ್ಲು ಗಳು ಅಂತ,,, ಇದು ಇಡೀ ಗೋಪುರವನ್ನಿ ಹಿಡಿದು ಇಟ್ಟಿದೆ ಅಂತೆ....ಇದು ಒಂದು ಕಲ್ಲಿನಿಂದಲೇ ಮುಖ್ಯ ಗೋಪುರ ಬಿದ್ದು ಹೋಗಿರುವುದ್ ಅಂತ ಹೇಳ್ತಾ ಇದ್ದ ,, ಹಾಗೆ ಇಂಥಹ magnet 12 ನೆ ಶತಮಾನದಲ್ಲಿ ನಮ್ಮ ಹತ್ತಿರ ಇತ್ತು ಅಂದರೆ,,, 14 ನೆ ಶತಮಾನದಲ್ಲಿ Europe ನಲ್ಲಿ magnet ಹೇಗೆ ಕಂಡುಹಿಡಿದರು ಅಂತ..... ???????


ಈ ದೇವಸ್ಥಾನ ಕಟ್ಟಲು ಕಾರಣ,,,

The temple was dedicated to the Sun-God (Arka), popularly called Biranchi-Narayan, and the area in which it is located was known as Arka-Kshetra as well as padma-kshetra. According to folklore, Samba, son of Lord Krishna, was struck with leprosy due a curse of Lord Krishna himself. Samba for 12 years underwent harsh atonement at Mitravana, near the convergence area of Chandrabhaga River with the sea at Konark. He was finally successful in pleasing the SUN god (Surya), the healer of all skin diseases, and was cured of his ailment.

In gratitude, he decided to erect a temple in the honor of Surya. The day following his cure, while Samba was bathing in the Chandrabhaga, he discovered an image of the god, which had been fashioned out of Surya's body by Viswakarma. Samba installed this image in a temple he built in Mitravana, where he propitiated the god. Since then, throughout the ages, this place has been regarded as sacred.

...

ಅಲ್ಲಿನ ಕೆಲವು ಫೋಟೋ ಗಳನ್ನ ಇಲ್ಲಿ ಹಾಕಿದ್ದೇನೆ,, ಹಾಗೆ ಇದರ ಎಲ್ಲ ಫೋಟೋಗಳನ್ನು ನನ್ನ ಪಿಕಾಸ ಆಲ್ಬಮ್ ನಲ್ಲಿ ಹಾಕಿದ್ದೇನೆ,, ನೋಡಿ...

 
 








ಮುಂದುವರೆಯುವುದು.......

ಒರಿಸ್ಸಾ ಪ್ರವಾಸದ ಭಾಗ ೧ ಅನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ..... http://guruprsad.blogspot.com/2010/06/blog-post_25.html

ಪಿಕಾಸ ಫೋಟೋಗಳು
http://picasaweb.google.co.in/guru.prasadkr/OrissaTripDay2PhotosKonark#