Tuesday, June 29, 2010

ಕೊನಾರ್ಕ್ ಸೂರ್ಯ ದೇವಸ್ಥಾನ....ಒರಿಸ್ಸಾ ಪ್ರವಾಸ ಭಾಗ ೨


ಕೊನಾರ್ಕ್ ಸೂರ್ಯ ದೇವಸ್ಥಾನ....


ಸೋಮವಾರ ನಾವು ಪುರಿ ತಲುಪಿದ್ದು ಮಧ್ಯಾನ ೧ ಘಂಟೆ ಆಗಿತ್ತು... ನಾವು ಮೊದಲೇ ಮಾಡಿದ್ದ ಪ್ಲಾನ್ ಎಲ್ಲ ಹಾಳಾಗಿ ಹೋಗಿತ್ತು,,, ಸೊ ಹೇಗೂ ಲೇಟ್ ಆಗಿದೆ,,, ಮೊದಲು ಕೊನಾರ್ಕ್ ಸೂರ್ಯ ದೇವಸ್ಥಾನ ಮುಗಿಸಿಕೊಂಡು,,, ಸಂಜೆ ಟೈಮ್ ಇದ್ದರೆ ಪುರಿ ದೇವಸ್ತಾನಕ್ಕೆ ಹೋಗೋಣ ಅಂತ ಮಾತಾಡಿಕೊಂಡು ಆಯಿತು..... ಬೇಗ ಬೇಗ,, ನಮಗಾಗಿ ಬುಕ್ ಮಾಡಿದ್ದ,, ಹೋಟೆಲ್ ಹಾಲಿಡೇ ಇನ್ ರೆಸಾರ್ಟ್ ನಲ್ಲಿ ಫ್ರೆಶ್ ಅಪ್ ಆಗಿ,,,, ಊಟ ಮಾಡಿಕೊಂಡು,,, ಕೊನಾರ್ಕ್ ದೇವಸ್ಥಾನಕ್ಕೆ ಹೊರಟೆವು,,,,

ಕೊನಾರ್ಕ್ ಇದು ಒಂದು historical place .. ಒರಿಸ್ಸಾ ರಾಜ್ಯದ ಆಕರ್ಷಣೀಯ ಸ್ಥಳ.... ಇದು ಪುರಿ ಇಂದ 35 KM ಗಳ ದೂರದಲ್ಲಿ ಇದೆ.... ಇಲ್ಲಿಗೆ ಹೋಗುವುದಕ್ಕೆ ಬಸ್ ಹಾಗು taxi ವ್ಯವಸ್ತೆ ಇದೆ... ಪುರಿ ಇಂದ 45 ನಿಮಿಷಗಳ ಪ್ರಯಾಣ.... ನಾವು ಒಂದು qualis ಮಾಡಿಕೊಂಡು ಹೊರಟೆವು,,,, ದೇವಸ್ಥಾನ ಬಗ್ಗೆ ಅಸ್ತೊಂದ್ ಮಾಹಿತಿ ಇರಲಿಲ್ಲ..... ಆದರು ಇದು ಒಂದು, ಒಳ್ಳೆಯ ಇತಿಹಾಸಿಕ ಸ್ಥಳ ಅಂತ ಗೊತ್ತಿತು,,,

ಕೊನಾರ್ಕ್ ಗೆ 3 :30 ಗೆ ಬಂದು ಸೇರಿದೆವು,,,, ಯಾವುದೇ vechile ಅನ್ನು temple ಹತ್ತಿರಕ್ಕೆ ಬಿಡುವುದಿಲ್ಲ... ಸ್ವಲ್ಪ ದೂರ ನೆಡೆದು ಕೊಂಡು ಹೋಗಬೇಕು,,,, ನಾವು ಇಳಿದ ಕೂಡಲೇ ಅಲ್ಲಿನ guide ಬಂದು ಸುತ್ತುವರೆದರು,,,, ದೇವಸ್ತಾನದ ಬಗ್ಗೆ ಎಲ್ಲ ತಿಳಿಸಿ ಹೇಳಲು,, ೧೫೦ ರೂ ಕೊಡಬೇಕಾಗುತ್ತೆ ಅಂತ ಕೇಳಿ ಹಿಂದೆ ಬಿದ್ದಿದ್ದರು,,, ಸರಿ ಮೊದಲು ನಾವು ಒಪ್ಪಿಕೊಳ್ಳ ಲಿಲ್ಲ.. ಆಮೇಲೆ ಸ್ವಲ್ಪ ಕಮ್ಮಿಗೆ ಅವರೇ ಬಂದು,, ಎಲ್ಲವನ್ನು explain ಮಾಡುತ್ತೇನೆ ಅಂತ ಬಂದರು,,, ಆದರೆ ನನಗೆ ಅಲ್ಲಿನ ಶಿಲ್ಪಗಳ ಹಾಗು ಕೆತ್ತನೆ ಕೆಲಸಗಳನ್ನು ಫೋಟೋ ತೆಗೆಯಬೇಕಾದ್ದರಿಂದ... ಅವರ ಜೊತೆ ಹೋಗದೆ,, ಒಬ್ಬನೇ ಫೋಟೋ ತೆಗೆಯಲು ಹೊರಟೆ,,,,,

ನಿಜವಾಗಲು ಇದು ಒಂದು ಅದ್ಬುತ ಕಲೆಯ ದೇವಸ್ಥಾನ,,, ಆದರೆ ತುಂಬಾ ಶಿಥಿಲ ವಾಗಿ ಹಾಳಾಗಿ ಹೋಗಿದೆ.... ಒಂದು ಪಾರ್ಶ್ವ ಬಿದ್ದು ಹೋಗಿದೆ ಕೂಡ...

ಇದರ ಇತಿಹಾಸ ಕೆಣಕಿದಾಗ ಸಿಕ್ಕ ಮಾಹಿತಿ....

ಕೊನಾರ್ಕ್ ಗೆ ಈ ಹೆಸರು ಬಂದಿದು ಕೋನ (corner ) + ಅರ್ಕ (ಸೂರ್ಯ) . ಇದಕ್ಕೆ ಇನ್ನೊಂದು ಹೆಸರು ಕೂನಾದಿತ್ಯ ಅಂತ.... ಇದು ಪುರಿ ಯಾ north eastern ಕಾರ್ನೆರ್ ನಲ್ಲಿ ನೆಲೆಸಿದೆ . ಇದಕ್ಕೆ ಮತ್ತೊಂದು ಹೆಸರು ಅರ್ಕಕ್ಷೇತ್ರ ಇದನ್ನ ಕಟ್ಟಿದು,,1278 CE ನಲ್ಲಿ ಅಂತೆ...


"ಗಂಗಾ Dynasty ನಲ್ಲಿ ಈ ದೇವಸ್ಥಾನವನ್ನು ಕಟ್ಟುವುದಕ್ಕೆ ನರಸಿಂಹ ದೇವ -೧ ರಾಜ ಅದೇಶಿಸುತ್ತನಂತೆ.....ಈ ದೇವಸ್ಥಾನವನ್ನು ಆಗಿನ ಅವನ ಕಾಲದ ರಾಜಕೀಯ ಪ್ರತಿಷ್ಟೆ ಯಾ ಸಂಕೇತವಾಗಿ,,, ಕಟ್ಟಿಸಲು ಯೋಚಿಸಿದ್ದರಂತೆ,,, ಅದಕ್ಕಾಗಿ. 12000 ಜನ ನುರಿತ ಶಿಲ್ಪ ಕಲಾವಿದರನ್ನು ಸೇರಿಸಿ ೧೨ ವರುಷಗಳ ಸತತವಾಗಿ ಶ್ರಮ ಪಟ್ಟರಂತೆ ಇದನ್ನ ಕಟ್ಟಲು.... ಆದರು ಇದನ್ನು ಅಂದುಕೊಂಡ ಸಮಯಕ್ಕಿಂತ ಮುಂಚೆ ಕಟ್ಟಲಾಗಲಿಲ್ಲ ... ಇದಕ್ಕೆ ಕಾರಣ,, ಇದನ್ನು ಕಟ್ಟಬೇಕಾದರೆ ಒಂದು ವಾಸ್ತು ದೋಷ ಎದುರಾಯಿತಂತೆ..... ಇದರ ನಿರ್ವಹಣೆ ಹೊಹಿಸಿಕೊಂಡಿದ್ದ..ಬಿಸು ಮಹಾರಾಣ .. ಅವರಿಗೂ ಇದಕ್ಕೆ ಉತ್ತರ ಕಂಡು ಹಿಡಿಯುವುದಕ್ಕೆ ಸಾದ್ಯವಗಲಿಲ್ಲವಂತೆ... ಆಗ,, ಅವರ ಮಗ ಧರ್ಮಪಾದ ಇದಕ್ಕೆ ಉಪಾಯವನ್ನು ಕಂಡು ಹಿಡಿದು,, ಕೊನೆಯ ಕಲ್ಲನ್ನು ತಾನೇ ಗೋಪುರದ ಮೇಲೆ ಇಟ್ತನತ್ತೆ ,, ಆಮೇಲೆ ಧರ್ಮಪಾದನ ಶವ,,, ದೇವಸ್ಥಾನ ದ ಹತ್ತಿರ ಇರುವ ಸಮುದ್ರದಲ್ಲಿ ತೇಲುತ್ತಿತ್ತಂತೆ... ಹೀಗೆ ಅವನ ಹೆಸರು,, ತಮ್ಮ ಸಮುದಾಯದ ರಕ್ಷಣೆಗೋಸ್ಕರ.. ತನ್ನ ಪ್ರಾಣವನ್ನೇ ಕೊಟ್ಟ ಎಂದು ಹೆಸರುವಾಸಿ ಆಯಿತು ಅಂತ ಪ್ರತೀತಿ.....ಆದರೆ ಇಗಲೂ..ಇದರ ವಾಸ್ತು ಸರಿ ಇಲ್ಲದೆ ಇರುವ ಕಾರಣ,, ದೇವಸ್ಥಾನ ಇಷ್ಟು ಅವನತಿ ಹೊಂದಿದೆ ಅಂತ ಹೇಳುತ್ತಾರೆ , ಇಲ್ಲಿನ ಸ್ಥಳೀಯರು,,, "

ಈ ಇಡೀ ದೇವಸ್ಥಾನ ಒಂದು ರಥದ ಮೇಲೆ ನಿಂತಿದೆ.. ಎಲ್ಲ ಕಡೆಗಳಲ್ಲೂ 24 ಚಕ್ರಗಳಿವೆ....ಕೆತ್ತನೆಯ ಕೆಲಸ ತುಂಬಾ ಚೆನ್ನಾಗಿ ಇದ್ದು,,, ಮನಮೋಹಕವಾಗಿ ಇದೆ..... (ಆದರೆ ತುಂಬಾ ಹಾಳಾಗಿ ಹೋಗಿದೆ....ಕೆಲವೊಂದು ಕಡೆ,,, ಏನು ಕಾಣಿಸುವುದಿಲ್ಲಾ. ಕಾಲದ ಮಹಿಮೆಯೋ,, ಅಥವಾ ಇಂಥ ಒಂದು ಅದ್ಬುತ ಕಲೆಯನ್ನು ಉಳಿಸಿಕೊಲ್ಲದೆ ಇರುವ ನಮ್ಮ ಅಸಹಾಯಕತೆಯೋ ಗೊತ್ತಿಲ್ಲ..) ಒಟ್ಟು ೭ ಅಶ್ವಗಳು ಈ ರಥವನ್ನು ಎಳೆಯುತ್ತಿದ್ದರೆ.. ಎರಡು ಸಿಂಹಗಳು ಆನೆ ಯನ್ನು ತುಳಿದು ಮುನ್ನುಗ್ಗುತ್ತಿರುವ ಹಾಗೆ ಕೆತ್ತಲಾಗಿದೆ......

ಒಟ್ಟಿನಲ್ಲಿ ಇದೊಂದು ಒಳ್ಳೆಯ ಕೆತ್ತನೆಯ,,, ಕಲಾ ದೇವಸ್ಥಾನ .... ಆದರೆ ಗರ್ಭಗುಡಿಯ ಮುಖ್ಯ ಗೋಪುರ ಬಿದ್ದು ಹೋಗಿ... ದೇವಸ್ಥಾನವೇ ಇಲ್ಲದೆ,, ಬರಿ ಹೊರಗಿನಿಂದ ನೋಡಬಹುದಾದ ಒಂದು ಆಕರ್ಷಣೀಯ ಸ್ಥಳವಾಗಿದೆ...

ಇಲ್ಲಿನ guide ಹೇಳುತ್ತಿದ್ದ ಇನ್ನೊಂದು ಮಹತ್ವದ ವಿಚಾರ ವೆಂದರೆ... ಈ ಗೋಪುರದ ಮೇಲೆ ಇರುವುದು,,, ಸಾಮಾನ್ಯ ಕಲ್ಲು ಅಲ್ಲ... ಇದು magnetic ಕಲ್ಲು ಗಳು ಅಂತ,,, ಇದು ಇಡೀ ಗೋಪುರವನ್ನಿ ಹಿಡಿದು ಇಟ್ಟಿದೆ ಅಂತೆ....ಇದು ಒಂದು ಕಲ್ಲಿನಿಂದಲೇ ಮುಖ್ಯ ಗೋಪುರ ಬಿದ್ದು ಹೋಗಿರುವುದ್ ಅಂತ ಹೇಳ್ತಾ ಇದ್ದ ,, ಹಾಗೆ ಇಂಥಹ magnet 12 ನೆ ಶತಮಾನದಲ್ಲಿ ನಮ್ಮ ಹತ್ತಿರ ಇತ್ತು ಅಂದರೆ,,, 14 ನೆ ಶತಮಾನದಲ್ಲಿ Europe ನಲ್ಲಿ magnet ಹೇಗೆ ಕಂಡುಹಿಡಿದರು ಅಂತ..... ???????


ಈ ದೇವಸ್ಥಾನ ಕಟ್ಟಲು ಕಾರಣ,,,

The temple was dedicated to the Sun-God (Arka), popularly called Biranchi-Narayan, and the area in which it is located was known as Arka-Kshetra as well as padma-kshetra. According to folklore, Samba, son of Lord Krishna, was struck with leprosy due a curse of Lord Krishna himself. Samba for 12 years underwent harsh atonement at Mitravana, near the convergence area of Chandrabhaga River with the sea at Konark. He was finally successful in pleasing the SUN god (Surya), the healer of all skin diseases, and was cured of his ailment.

In gratitude, he decided to erect a temple in the honor of Surya. The day following his cure, while Samba was bathing in the Chandrabhaga, he discovered an image of the god, which had been fashioned out of Surya's body by Viswakarma. Samba installed this image in a temple he built in Mitravana, where he propitiated the god. Since then, throughout the ages, this place has been regarded as sacred.

...

ಅಲ್ಲಿನ ಕೆಲವು ಫೋಟೋ ಗಳನ್ನ ಇಲ್ಲಿ ಹಾಕಿದ್ದೇನೆ,, ಹಾಗೆ ಇದರ ಎಲ್ಲ ಫೋಟೋಗಳನ್ನು ನನ್ನ ಪಿಕಾಸ ಆಲ್ಬಮ್ ನಲ್ಲಿ ಹಾಕಿದ್ದೇನೆ,, ನೋಡಿ...

 
 








ಮುಂದುವರೆಯುವುದು.......

ಒರಿಸ್ಸಾ ಪ್ರವಾಸದ ಭಾಗ ೧ ಅನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ..... http://guruprsad.blogspot.com/2010/06/blog-post_25.html

ಪಿಕಾಸ ಫೋಟೋಗಳು
http://picasaweb.google.co.in/guru.prasadkr/OrissaTripDay2PhotosKonark#

29 comments:

  1. ಉತ್ತಮ ಮಾಹಿತಿ.....
    ಒಳ್ಳೆಯ ಪ್ರವಾಸ ಮಾಡಿದ್ದೀರಾ......, ಕೊನಾರ್ಕ್ ದೇವಾಲಯ ಪ್ರಪಂಚದ ಅದ್ಭುತ ಶಿಲ್ಪಕಲಾ ದೇವಾಲಯ. ಅಂತಹ ಪುಣ್ಯಕ್ಷೇತ್ರದ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ......
    ಧನ್ಯವಾದಗಳು.

    ReplyDelete
  2. ಗುರು ಸರ್ .. ಈ ದೇವಾಲಯದ ಬಗ್ಗೆ ಓದಿದ್ದೆ ಅಸ್ಟೆ ಈಗ ನೋಡಿ ಬಂದತೆಯೇ ಆಯಿತು .. ಚಿತ್ರ ಲೇಖನ ತುಂಬಾ ಚೆನ್ನಾಗಿದೆ ..ನಿಮ್ಮ ಪ್ರವಾಸ ಕಥನಗಳು ಸುಖಕರವಾಗಿ ಹೀಗೆ ಮುಂದುವರೆಯಲಿ :)

    ReplyDelete
  3. ಉತ್ತಮ ಮಾಹಿತಿ!!!
    ತಮ್ಮ ಗೈಡ್ ಹತ್ತಿರ ಉತ್ತಮ ಮಾಹಿತಿ ಇತ್ತು....
    ತಾವು ಗೈಡ್ ಜೊತೆ ಹೋಗಿ ಮಾಹಿತಿ ಪಡೆದು ಆಮೇಲೆ ಫೋಟೋ ತೆಗೆದಿದ್ದಾರೆ ಒಳ್ಳೆಯದಿರುತಿತ್ತು..
    ದಕ್ಷಿಣಾಯಣ-ಮತ್ತು ಉತ್ತರಾಯಣದ ಮಧ್ಯದ ಸೂರ್ಯ ವಾಲುವ ರೇಖಾ೦ಷಗಳ ನಡುವಿನ ಕೋನವೇ ಆರ್ಕ್ ಅದಕ್ಕೆ ತಕ್ಕದಾಗಿ ಸೂರ್ಯನ ಮುಖ್ಯದೆಗುಲದ ಮು೦ದೆ ಮಂಟಪವೊದನ್ನು ಆ ಅರ್ಕದ ಪ್ರಕಾರ ಮಾಡಿ ವರ್ಷವಿಡಿ ಸೂರ್ಯನ ಮುಂಜಾವಿನ ಮೊದಲ ಕಿರಣ ಪ್ರತಿಮೆಗೆ ಬೀಲುವ೦ತೆ ಮಾಡಿರುವ ಖಗೋಳ ಪಕ್ಕಾಲೆಕ್ಕಾಚಾರದ ದೇಗುಲವಿದು. ಸೂರ್ಯನ ದೇಗುಲದ ಬಾಗಿಲ ಅಳತೆ ಮುಂದಿನ ಮ೦ಟಪದ ದೂರ ಮ೦ಟಪದ ಬಾಗಿಲು ವಿನ್ಯಾಸ ಅಳತೆ ಮತ್ತು ಓರೆ ಎಲ್ಲವೂ ಪಕ್ಕಾಲೆಕ್ಕಾಚಾರದಲ್ಲಿದ್ದು ಸೂರ್ಯನ ಪಥ ಬದಲಾದರೂ ಪ್ರಥಮ ಕಿರಣ ಅಲ್ಲಿ ಬರುವ೦ತೆ ಮಾಡಿದೆ. ರಥದ ಚಕ್ರಗಳು ಗಡಿಯಾರವನ್ನ ತೋರಿಸುತ್ತಿದೆ. ೭ ಅಶ್ವಗಳು ಏಳು ದಿನಕ್ಕೆ ಸಂಕೇತ, ೨೪ ಚಕ್ರಗಳು ಗ೦ತೆಗೆ ಸಂಕೇತ, ಚಕ್ರದ ೮ ಮುಕ್ಯ ಕಡ್ಡಿಗಳು ಆಗಿನ ಪ್ರಹರದ ಸಂಕೇತ ಅದನ್ನು ಅರ್ಧ ಪ್ರಹರವನ್ನಾಗಿ ವಿಭಾಗಿಸಲಾಗಿದೆ ಸಣ್ಣ ಚಕ್ರಗಳಲ್ಲಿ. ಪೂರ್ತಿ ದೇವಾಲಯದ ಕಲ್ಲುಗಳನ್ನೂ ಕಬ್ಬಿಣದ ಸಹಾಯದಿ೦ದ ಹಿಡಿದು ಗರ್ಭಗುದಿಯ ಗೋಪುರದ ಮುಖ್ಯ ಆಯಸ್ಕಾ೦ತದಿ೦ದ ಇಡೀ ದೇವಾಲಯದ ಕಲ್ಲಿನ ನಡುವಿನ ಕಬ್ಬಿಣದ ತುಂಡುಗಳು ಅಯಸ್ಕಾ೦ತಿಯ ಪ್ರೇರಣೆಯಿಂದ ಇಡೀ ದೇವಾಲಯದ ಹೊಂದಿಸಿದ ಕಲ್ಲು ಮತ್ತು ಗರ್ಭಗುಡಿಯ ಸೂರ್ಯನ ಮುರ್ಥಿಯನ್ನು ಅಂತರದಲ್ಲಿ ನಿಲ್ಲಿಸಿದ್ದವು ವ್ಯವಸ್ತಿತವಾಗಿ. ಆ ಆಯಸ್ಕಾಂತ ವನ್ನೂ ಯುರೋಪ ನಾವಿಕರು ತಮ್ಮ ನೌಕೆಗೆ ದಿಕ್ಕು ತಪ್ಪಿಸುವದರಿಂದ ತೆಗೆದು ಹಾಕಿದ್ದಕ್ಕೆ ದೇವಾಲಯ ಶಿಥಿಳವಾಯಿತು ಎನ್ನುತ್ತಾರೆ. ಆದರೆ ಇದರ ಬಗ್ಗೆ ಸಾಕಷ್ಟು ಸ೦ಶೊಧನೆಯಾಗಬೇಕಾಗಿದೆ.
    ಜೊತೆಗೆ ಆಗಿನ ಕಾಲದಲ್ಲಿ ಹೆಚ್ಚಿನ ಜನ ಸ೦ಸಾರದಲ್ಲಿ ವಿರಕ್ತಿಗಳಾಗಿ (ಜೈನ-ಭುಧ್ಧ)ಸ್ತ್ರೀಯರ ಪಾಡು ಶೋಚನೀಯವಾಗಿ ಮತ್ತು ಸೈನ್ಯಕ್ಕೆ ವೀರರ ಕೊರತೆಯಾಗಿದ್ದಕ್ಕೆ ಆಗಿನ ರಾಜರು ಚಿತ್ತ ಕೆರಳಿಸುವ ಮಿಥುನ ಕಲೆಯನ್ನು ದೇವಸ್ಥಾನದ ಸುತ್ತಲಿನ ಬಂಡೆಗಳಲ್ಲಿ ಅಳವಡಿಸಿ, ಜನರನ್ನು ಕಾಮದ ಕಡೆ ಪ್ರಚೋದಿಸಿ ಜನಸಂಖ್ಯೆ ಹೆಚ್ಚಿಸುವಲ್ಲಿನ ಪ್ರಯತ್ನವೆಂದು ಬಿ೦ಬಿಸಲಾಗಿದೆ.
    ಶೈಶವ, ತರುಣ ಮತ್ತು ವೃದ್ದ್ಯಾಪ್ಯದ ಚಿತ್ರಣಗಳನ್ನು ಶಿಲ್ಪಕಲೆಯಲ್ಲಿ ನೋಡಬಹುದು. ದೇವಸ್ಥಾನದ ಪ್ರಾರ೦ಭದಲ್ಲಿ ಮಕ್ಕಳ ಆಮೇಲಿನ ಮುಕ್ಯ ದ್ವಾರದ ಹೊರಪ್ರಾಗ೦ನದಲ್ಲಿ ಮೈಥುನ ಚಿತ್ರಗಳು ಮತ್ತು ಗರ್ಭ ಗುಡಿಯಲ್ಲಿ ಯಾವದೇ ಶಿಲ್ಪವಿಲ್ಲದೇ ಜೀವನದ ಕಲೆಯನ್ನು ವಿವರಿಸಿದ್ದಾರೆ.
    ಈ ಗುಡಿ ಪ್ರಪಂಚದ ಅದ್ಭುತ ಶಿಲಾಕುಶಲ್ಯದಲ್ಲೊಂದು. ಆದರೆ ಪ್ರಚಾರವಿಲ್ಲ! ಅಧ್ಯಯನವಿಲ್ಲ!
    ನನ್ನ ಪಿಕಾಸ ಅಲ್ಬುಮ್ನಲ್ಲಿ ಹೆಚ್ಚಿನ ಚಿತ್ರಗಳಿವೆ.
    http://picasaweb.google.com/sitara123/KonarkPhotos?locked=true#

    ReplyDelete
  4. ಚಿತ್ರಗಳು ಚೆನ್ನಾಗಿವೆ. ನಿಮ್ಮ ವಿವರಣೆ, ಚಿತ್ರಗಳು ಎಲ್ಲಾ ನೋಡಿ, ೧೫ ವರ್ಷಗಳ ಹಿಂದೆ ಹೋಗಿದ್ದ ಕೊನಾರ್ಕ, ಪುರಿ ಪ್ರವಾಸ ನೆನಪಾಯಿತು. ಧನ್ಯವಾದಗಳು......

    ಶ್ಯಾಮಲ

    ReplyDelete
  5. Valid point about Magnet... :)
    photogalu super :)

    ReplyDelete
  6. e dhevasthaanadha bagge nanage yaavaagaloo kuthoohala ittu. thumba chennagidhe Guru vivaraNe mattu photogaLu.... Puri jagannatha devasthaanadha bagge kELalu kaathuranaagiddene thumba... bega barali...

    Sitharam sir avare.. nimagu kooda thanks maahitigaagi.. neevu kotta picasa weblink nalli photogaLannu nodalu aagalilla nange... :( bahushaha nanage access illa anisutte...

    ReplyDelete
  7. ಉತ್ತಮ ಮಾಹಿತಿ ಮತ್ತು ಚಿತ್ರಗಳು. ನಾವು 2005ರಲ್ಲಿ ಒರಿಸ್ಸಾ ಪ್ರವಾಸ ಮಾಡಿದಾಗ ಕೋನಾರ್ಕಿಗೆ ಕೂಡಾ ಭೇಟಿ ಕೊಟ್ಟಿದ್ದೆವು. ಭವ್ಯವಾದ ದೇಗುಲ. ಆಗಿನ ಜನರ ತಾಂತ್ರಿಕ ಜ್ಞಾನಕ್ಕೆ ದೊಡ್ಡ ನಮಸ್ಕಾರ

    ReplyDelete
  8. ಗುರು ಬಹಳ ವಿಷಯಗಳು ವಿವರಿಸಿದ್ದಾರ ಹಾಗೂ ಸೀತಾರಾಮ. ಕೆ. ಅವರಿಗೆ ಧನ್ಯವಾದಗಳು.

    ReplyDelete
  9. ಗುರು,

    ನಾನು ನಿಮ್ಮ ಎರಡನೆ ಭಾಗವನ್ನು ಮೊದಲು ನೋಡಿದೆನಾದರೂ ಕಾಮೆಂಟ್ ಹಾಕಿದರೆ ಹೋಗುತ್ತಿರಲಿಲ್ಲ. ಈಗ ಕಾಮೆಂಟಿಸಿದರೆ ಎಲ್ಲಾ ಸರಿಹೋಯಿತು. ಮಾಹಿತಿಪೂರ್ಣ ಚಿತ್ರಗಳನ್ನು ಕೊಟ್ಟಿದ್ದೀರಿ. ಅದಕ್ಕಾಗಿ ಧನ್ಯವಾದಗಳು

    ReplyDelete
  10. ತುಂಬಾ ಥ್ಯಾಂಕ್ಸ್ ಪ್ರವೀಣ್, ಹೌದು ನೀವು ಹೇಳಿದಂತೆ ಕೊನಾರ್ಕ್ ದೇವಾಲಯ ಅದ್ಬುತ ಶಿಲ್ಪ ಕಲಾ ನಾಡು... ತುಂಬಾ ಚೆನ್ನಾಗಿ...

    ReplyDelete
  11. ಥ್ಯಾಂಕ್ಸ್ ರಂಜಿತ...

    ReplyDelete
  12. ಸೀತಾರಾಮ್ ಸರ್..
    ತುಂಬಾ ಚೆನ್ನಾಗಿದೆ ನಿಮ್ಮ ವಿವರಣೆ,, ನನಗೆ ಗೊತ್ತಿಲ್ಲದೇ ಇರೋ .. ಎಸ್ಟೋ ವಿಷಯ ಗೊತ್ತು ಆಯಿತು.... ತುಂಬಾ ಧನ್ಯವಾದಗಳು ನಿಮ್ಮ ಅಪೂರ್ವ ಮಾಹಿತಿಗಾಗಿ.... ಹೌದು ನೀವು ಹೇಳಿದ ಹಾಗೆ ನಾನು ಮೊದಲು,, guide ಜೊತೆ ಹೋಗಬೇಕಾಗಿತ್ತು... ಸಮಯದ ಅಭಾವದ ಕಾರಣ,, ಬೇಗ ಬೇಗ ಅಲ್ಲಿನ ಕಲೆಗಳ ಚಿತ್ರ ತೆಗೆಯಬೇಕು ಅಂತ,, ಬೇರೆ ಕಡೆ ಇದ್ದೆ.. ಆಮೇಲೆ ಅವರ ಜೊತೆ ಸೇರಿ ಕೊಂಡೆ.....
    ನಿಮ್ಮ ಪಿಕಾಸ ಆಲ್ಬಮ್ ನ access ಕೊಡಿ ಯಾವ ಫೋಟೋಗಳನ್ನು ನೋಡಲಾಗುತ್ತಿಲ್ಲ

    ReplyDelete
  13. ಹೌದ,, ತುಂಬಾ ಸಂತೋಷ... ಥ್ಯಾಂಕ್ಸ್ ಶ್ಯಾಮಲಾ ......

    ReplyDelete
  14. ಹೌದು ಶಿವೂ,, ನಂಗು ಅದೇ ಆಶ್ಚರ್ಯ.... ಬಟ್ ಇದಂತೂ ನೋಡಲೇ ಬೇಕಾದ ಸ್ತಳ.. ಸಮಯ ಸಿಕ್ಕಾಗ ನೋಡಿ ಬನ್ನಿ....

    ReplyDelete
  15. ಥ್ಯಾಂಕ್ಸ್ ಸುದೇಶ್,,, ಖಂಡಿತ ಪುರಿ ದೇವಸ್ತಾನದ ಬಗ್ಗೆ ಮುಂದಿನ ಲೇಖನ ದಲ್ಲಿ ಬರೆಯುತ್ತೇನೆ....

    ReplyDelete
  16. ಹೌದು ದೀಪಸ್ಮಿಥ,,, ನಿಜವಾಗ್ಲೂ ಅವರ ಕುಶಲತೆಗೆ.. ತಲೆ ಬಾಗಲೇ ಬೇಕು...

    ReplyDelete
  17. ಹಾ ಹಾ ಧನ್ಯವಾದಗಳು ಶಾಂತಿ ಪ್ರಸಾದ... ನೀವು ಕೂಡ ನಮ್ಮ ಜೋತೆನಲ್ಲೇ ಇದ್ದರಲ್ವ....

    ReplyDelete
  18. ಥ್ಯಾಂಕ್ಸ್ ದಿವ್ಯ....

    ReplyDelete
  19. ಥ್ಯಾಂಕ್ಸ್ ಶಿವೂ.....

    ReplyDelete
  20. ಗುರು, ಕೊನಾರ್ಕ್ ಗೆ ಸುಮಾರು ಮೂರು-ನಾಲ್ಕು ಸರ್ತಿ ಹೋಗಿದ್ದೆ...(ನಮ್ಮ Institute ಒಂದು ಭುವನೇಶ್ವರ್ ನಲ್ಲಿದೆ...ಆಕಾರಣ)....ಆದರೆ ಸುಮ್ನೆ ಎಲ್ಲ ನೋಡಿ ಬಂದಿದ್ದೇ...ಫೋಟೋಸ್ ಒಮ್ಮೆ ತಂದಿದ್ದೆ ..ಆದರೆ ನಿಮ್ಮ ಚಿತ್ರಗಳು ಮತ್ತು ಲೇಖನ ಸೂಪರ್....

    ReplyDelete
  21. Verey useful article, thanks for sharing

    ReplyDelete
  22. Guru's World ,
    ಅದ್ಭುತ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..

    ReplyDelete
  23. ಧನ್ಯವಾದಗಳು ವಿ ಅರ್ ಭಟ್ ಸರ್

    ReplyDelete
  24. ಧನ್ಯವಾದಗಳು ವಸಂತ್....

    ReplyDelete
  25. ಜ್ಞಾನಾರ್ಪಣಾಮಸ್ತು !! ...ಧನ್ಯವಾದಗಳು...

    ReplyDelete
  26. http://picasaweb.google.com/sitara123/KonarkPhotos#


    NOW IT IS MADE VISIBLE TO ALL
    SORRY FOR INCONVENIENCE

    ReplyDelete
  27. ಗುರು ನಿಮ್ಮ ಜಗತ್ತನ್ನು ನೋಡುತ್ತಿದ್ದೇನೆ. ಈ ಜಾಲಕ್ಕೆ ನಾನೀಗಸ್ಟೆ ಕಾಲಿಟ್ಟಿದ್ದೇನೆ ಮಾಹಿತಿ ಕಡಿಮೆ

    ReplyDelete