Thursday, July 15, 2010

ಹಕ್ಕಿಗಳ ಫೋಟೋಗ್ರಫಿ ಅನುಭವ.....


(ಒರಿಸ್ಸಾ ಪ್ರವಾಸದ ಕೊನೆಯ ಬಾಗ ವನ್ನು ಮುಂದಿನ ಸಾರಿ ಹಾಕುತ್ತೇನೆ,,, ಪುರಿ ದೇವಸ್ತಾನದ ಬಗ್ಗೆ,, ಹಾಗು ಚಿಲಕ lake ಬಗ್ಗೆ ಹೇಳಬೇಕಿದೆ,,, ಆದರೆ ಚಿಲಕ lake ಬಗ್ಗೆ ಸ್ವಲ್ಪ ಮಾಹಿತಿ ಪಡೆದು,, ಅಪ್ಡೇಟ್ ಮಾಡುತ್ತೇನೆ,,,,)

ಇಂದಿನ ಲೇಖನದಲ್ಲಿ,,,, ಈ ವಾರ ಹಕ್ಕಿಗಳ ಫೋಟೋ ತೆಗೆಯಲು ಹೋದಾಗ ಆದ ಅನುಭವದ ಬಗ್ಗೆ ಹಂಚಿಕೊಳ್ಳುತ್ತಿದೇನೆ...
ಚಿಟ್ಟೆ ಮತ್ತೆ, ಹುಳ ಹುಪ್ಪಟೆಗಳ ಫೋಟೋ ಗ್ರಫಿ ನಂತರ ಎರಡು ವಾರ ಎಲ್ಲೂ ಹೋಗಲು ಆಗಿರಲಿಲ್ಲ... ಕಳೆದ ಶನಿವಾರ ಬಿಡುವಾಗಿತ್ತು.... ಸರಿ ಅಂತ ನನ್ನ ಕಸಿನ್ ಕೃಷ್ಣ ಮತ್ತೆ ಫ್ರೆಂಡ್ ರಮೇಶ್ ಜೊತೆ,, ಎಲ್ಲಿಗಾದ್ರೂ ಹೋಗಿ ಬರೋಣ ಅಂತ,, ಅನ್ಕೊಂದ್ವಿ,, ಮನೆ ಇಂದ ಹೊರಡೋದೇ ಲೇಟ್ ಆಗಿ ಬಿಟ್ ಇತ್ತು ,, ಸರಿ ಎಲ್ಲಿ ಹೋಗೋದು ಅಂತ ಯೋಚನೆ ಮಾಡ್ತಾ,,, ಈ ಸರಿ ಹಕ್ಕಿ ಗಳ ಫೋಟೋ ತೆಗೆಯಲು ಹೋಗೋಣ, ಒಂದು ಕೆರೆ ಹತ್ರ ಅಂತ ಅನ್ಕೊಂಡು ಹೊರಟ್ವಿ,,,

ಅ ಕೆರೆ ಇರೋದು ತಾವರೆಕೆರೆ ಬಿಟ್ಟು ಮುಂದೆ,,, ಸೂಲಿ ಕೆರೆ ಅಂತ ಅದರ ಹೆಸರು,,,, ನಮ್ಮ ಮನೆ ಇಂದ ಒಂದು ೧೨ KM ಆಗುತ್ತೆ,,, ಹೋಗ್ತಾ ದಾರಿನಲ್ಲಿ,, ನೈಸ್ ರೋಡ್ ದಾಟಿಕೊಂಡು ಹೋಗಬೇಕು,,, ಹಾಗೆ ಅಲ್ಲಿ ಸ್ವಲ್ಪ ಹೊತ್ತು ಅದು ಇದು ಫೋಟೋ ತೆಗೆದು ಕೊಂಡು,,, ದಾರಿ ನಲ್ಲಿ ಸಿಗುವ ಹೊಲ ತೋಟ ಗಳ,,, fresh ಗಾಳಿ ಕುಡ್ಕೊಂಡು ಸೂಲಿ ಕೆರೆ reach ಅಗೋ ಅಸ್ಟು ಹೊತ್ತಿಗೆ,, ೮:೦೦ ಘಂಟೆ ಆಗಿತ್ತು,,, ಅದರೂ ಡೌಟ್ ನಿಂದಲೇ ಹೋದ್ವಿ,, ಯಾವುದಾದರು ಹಕ್ಕಿ ಗಳು ಸಿಗುತ್ತೇನೋ ಅಂತ,,, ನಮ್ಮ ಅದೃಷ್ಟ ಚೆನ್ನಾಗಿ ಇತ್ತು,,, ಹಕ್ಕಿ ಗಳು ಕೆರೆ ತುಂಬಾ ಇದ್ದವು,,,, egret ಮತ್ತೆ Open Billed Stork (ಹೆಸರು ಅಸ್ಟಾಗಿ ಗೊತ್ತಿಲ್ಲ ) , ಹಕ್ಕಿಗಳು ತುಂಬಾ ಸಿಕ್ಕವು , ಆದರೆ ನಾನು ಅಂದುಕೊಂಡಂತೆ,,, ಫೋಟೋಗಳನ್ನು ತೆಗೆಯ ಲಾಗಲಿಲ್ಲ ,,, ಕಾರಣ,, ನನ್ನ ಹತ್ತಿರ,, SLR ಕ್ಯಾಮೆರಾ ಇರಲಿಲ್ಲ,,, ನನ್ ಹತ್ರ ಇದ್ದದ್ದು,,, 12X zoom ನ, Higher end normal Digital ಕ್ಯಾಮೆರಾ.... ಅದರಲ್ಲೇ ಕೆಲವೊಂದು,,, ಫೋಟೋಗಳನ್ನು ತೆಗೆದೆ
....ಇನ್ನು ಕಲಿತ ಇರೋದು ಅಲ್ವ,, ಇರಲಿ ಅಂತ....

ಒಟ್ಟಿನಲ್ಲಿ... ಇದು ಒಂದು ತರ ಒಳ್ಳೆಯ ಅನುಭವ,,,, ನಿದಾನಕ್ಕೆ ಕೆರೆಯ ಮದ್ಯ ನೀರು ಇಲ್ಲದೆ ಇರುವ ಜಾಗದಲ್ಲಿ,,, ನಡೆದುಕೊಂಡು ಹಕ್ಕಿಗಳ ಹತ್ರ ಹೋಗೋದು,,, ಒಂದು ಚೂರು ಶಬ್ದ ಮಾಡದೆ,,,, ಒಂದೊಂದೇ ಹಜ್ಜೆ ಇಟ್ಟು ಅವುಗಳನ್ನು focuse ಮಾಡಿ ಫೋಟೋ ತೆಗೆಯುವುದು,,, ವೌ,,, ಒಟ್ಟಿನಲ್ಲಿ ಲಾಸ್ಟ್ saturday ಚೆನ್ನಾಗಿ enjoye   ಮಾಡಿದೆ....

ಅದರ ಕೆಲವು ಫೋಟೋಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ,,, ನೋಡಿ ತಮ್ಮ ಅಭಿಪ್ರಾಯ ತಿಳಿಸಿ....

ಹಾಗೆ ಎಲ್ಲ ಫೋಟೋ ಗಳನ್ನು ನನ್ನ ಪಿಕಾಸ ಆಲ್ಬಮ್ ನಲ್ಲಿ ಹಾಕಿದ್ದೇನೆ... ನೋಡಲು ಇಲ್ಲಿ ಕ್ಲಿಕ್ ಮಾಡಿ......ನೈಸ್ ರೋಡ್.....

ದಾರಿ ಮದ್ಯ ಸಿಕ್ಕ ಒಂದು ತೋಟ...

ಸೂಲಿ ಕೆರೆ ಇದರ ಹತ್ರನೇ ಹಕ್ಕಿಗಳ ಫೋಟೋ ತೆಗೆದದ್ದು...

egrate ....  
ಮೀನು ಹಿಡಿಯಲು ಹೊಂಚು ಹಾಕ್ತಾ ಇದೆ.....


ಕೊನೆಗೂ ಸಿಕ್ಕ ಮೀನು.....!!!!
Open Billed Stork ಹಕ್ಕಿಗಳ ಗುಂಪು..


25 comments:

 1. ಗುರು,

  ತಾವರೆ ಕೆರೆ ದಾಟಿದ ಮೇಲೆ ಎಡಭಾಗಕ್ಕೆ ಸಿಗುತ್ತಲ್ಲ ಆ ಕೆರೆನಾ? ಅದರಲ್ಲಿ ಕಿಂಗ್ ಫಿಶರುಗಳು ಸಿಗುತ್ತವೆ. ನಾನು ಫೋಟೊ ತೆಗೆದಿದ್ದೇನೆ. ವಾರಂತ್ಯದಲ್ಲಿ ಹೀಗೆ ಹವ್ಯಾಸಿ ಫೋಟೊಗ್ರಫಿ ಅದು ಚೆನ್ನಾಗಿದೆ. ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ. ಮತ್ತಷ್ಟು ಒಳ್ಳೆಯ ಫೋಟೊಗಳು ಸಿಗಲಿ.

  ReplyDelete
 2. ಥ್ಯಾಂಕ್ಸ್ ಶಿವೂ,,, ಏನೋ ಒಂದುತರ ಚೆನ್ನಾಗಿ ಇದೆ ಹವ್ಯಾಸ..... ಮುಂದುವರಿಸುತ್ತೇನೆ.... ಚೆನ್ನಾಗಿ ಪಳಗಿದ ಮೇಲೆ,,, ನಿಮ್ಮ ಜೊತೆ ನಾನು ಕೂಡ ಬರುತ್ತೇನೆ.... :-)

  ReplyDelete
 3. ಗುರು...

  ಸೊಗಸಾಗಿದೆ ನೀವು ತೆಗೆದ ಫೋಟೊಗಳು...

  ತೆಗೆಯುತ್ತ..ಕ್ಲಿಕ್ಕಿಸುತ್ತ ಇನ್ನಷ್ಟು ಪಳಗುವಿರಿ..

  ಒಳ್ಳೆಯ ಹವ್ಯಾಸ...

  ReplyDelete
 4. ಇದು ಒಳ್ಳೆ ಹವ್ಯಾಸ ಗುರು. ಫೋಟೋಗಳು ಚೆನ್ನಾಗಿವೆ, ಸ್ವಲ್ಪ blur ಅನಿಸಿದರೂ. ಪರವಾಗಿಲ್ಲ, ಹಕ್ಕಿ ಚಿತ್ರ ದೂರದಿಂದ ತೆಗೆಯೋದು ಎಷ್ಟು ಕಷ್ಟ ಅಂತ ಗೊತ್ತು. ಬೆಂಗಳೂರಿನ ಹತ್ತಿರವೇ ಸುತ್ತ ಮುತ್ತ ಕೂಡ ತುಂಬ ಸುಂದರ ಜಾಗಗಳು, ಕೆರೆಗಳು ಇವೆ. ಅವನ್ನು ಗುರುತಿಸಬೇಕು

  ReplyDelete
 5. very Nice photos Good Hobby

  ReplyDelete
 6. ಹಾಂ ಪ್ರಕಾಶಣ್ಣ,,, ಏನೋ ಒಂದು ಹುಚ್ಚು,,,, ಒಳ್ಳೆ ಟೈಮ್ ಪಾಸ್, ಹಾಗೆ ಕೆಲವೊಂದು ವಿಷಯಗಳು ಸಿಗುತ್ತೆ.... ಮುಂದುವರಿಸುತ್ತೇನೆ,,, ಆದರೆ ಬೇಗ SLR ಕ್ಯಾಮೆರಾ ತಗೋಬೇಕು....

  ReplyDelete
 7. ಹೌದು ದೀಪಸ್ಮಿಥ,,, ನಾನು ಫುಲ್ zoom ನಲ್ಲಿ ತೆಗೆದಿದ್ದೇನೆ ಅಲ್ವ,, ಅದಕ್ಕೆ ಇಮೇಜ್ clarity distrub ಆಗಿದೆ.. ನೀವು ಪಿಕಾಸ ಆಲ್ಬಮ್ ನಲ್ಲಿ ನೋಡಿ,,, ಅಲ್ಲಿ ಚೆನ್ನಾಗಿ ಇದೆ..

  ReplyDelete
 8. ಥ್ಯಾಂಕ್ಸ್ ಸೀತಾರಾಮ್ ಸರ್...

  ReplyDelete
 9. ಥ್ಯಾಂಕ್ಸ್ ವೀಣಾ...

  ReplyDelete
 10. ಥ್ಯಾಂಕ್ಸ್ ಪರಾಂಜಪೆ....

  ReplyDelete
 11. ನೈಸ್ ಫೋಟೋಸ್ ಗುರು...
  ನಿಮ್ಮವ,
  ರಾಘು.

  ReplyDelete
 12. ಚಿತ್ರಗಳು ಚೆನ್ನಾಗಿವೆ.... ಒಳ್ಳೆಯ ಹವ್ಯಾಸ.....

  ಶ್ಯಾಮಲ

  ReplyDelete
 13. This comment has been removed by the author.

  ReplyDelete
 14. ಗುರುರವರೆ ಪೋಟೊಗಳಂತು ತುಂಬಾ ಸುಂದರವಾಗಿ ತೆಗೆದಿದ್ದೀರ ತುಂಬಾ ಚೆನ್ನಾಗಿದೆ. ಹಾಗೆಯೆ ನಿಮ್ಮ ವಿವರಣೆಯು ಕೂಡ. ಒಟ್ಟಿನಲ್ಲಿ ಹಕ್ಕಿಗಳನ್ನು ಹಾರಿಹೋಗದಂತೆ ನಿಯಂತ್ರಿಸಿ ಉತ್ತಮ ಪೋಟೊಗಳನ್ನು ತೆಗೆದು ತೋರಿಸಿದ್ದಕ್ಕೆ ಧನ್ಯವಾದಗಳು.

  ReplyDelete
 15. chitragalu tumba chennagide sir :) :)

  ReplyDelete
 16. ಹಕ್ಕಿಗಳ ಫೋಟೋಗೆ ೧೨x ಜೂಮ್ ಕಮ್ಮಿನೇ.. ಆದರೂ ಒಳ್ಳೆಯ ಪ್ರಯತ್ನ.. all the best ಮುಂದಿನ ಪ್ರಯತ್ನಗಳಿಗೆ

  ReplyDelete
 17. ಥ್ಯಾಂಕ್ಸ್ ರಾಘು....

  ReplyDelete
 18. thank you ಶ್ಯಾಮಲಾ ಮೇಡಂ...

  ReplyDelete
 19. ಧನ್ಯವಾದಗಳು ವಸಂತ್....

  ReplyDelete
 20. ಥ್ಯಾಂಕ್ಸ್ snow white ...

  ReplyDelete
 21. ಹೌದು ಪಾಲ ಚಂದ್ರ .... ಥ್ಯಾಂಕ್ಸ್,, ನಿಮ್ಮ ಬ್ಲಾಗ್ ನಿಂದಾನು,, ಕೆಲವೊಂದು ಒಳ್ಳೆ ಟಿಪ್ಸ್ ಸಿಕ್ಕಿದೆ... ಸಮಯ ಸಿಕ್ಕಾಗ ಪ್ರಯತ್ನಿಸುತ್ತೇನೆ....

  ReplyDelete
 22. ಗುರು,
  ಒಳ್ಳೆಯ ವಿವರಣೆ... ಚೆ೦ದದ ಫೋಟೊಗಳು..ಇಷ್ಟವಾಯ್ತು.

  ReplyDelete