Friday, January 29, 2010

ಪೇಪರ್ ಮಡಚುವ ಕಲೆ -- Origami !!!!

Origami Paper Folding , ಇದು ಒಂದು ರೀತಿಯ traditional ಜಪಾನೀಸ್ ನ ಪೇಪರ್ ಮಡಚುವ ಕಲೆ ಅಂತೆ, ಈ ಕಲೆ ವಿಶೇಷತೆ ಏನು ಅಂದ್ರೆ.. ಬರಿ ಒಂದು ಕಾಗದವನ್ನು ಉಪಯೋಗಿಸಿ ಕೊಂಡು ಯಾವುದಾದರು ಒಂದು ವಸ್ತು ಚಿತ್ರವನ್ನು ಬಿಂಬಿಸುವ ಹಾಗೆ ಮಡಚುವುದು, ಅದೂ ಏನು ಉಪಯೋಗಿಸದೆ,, ಅಂದರೆ ಕತ್ತರಿ,, gum , gluing , ಯಾವುದನ್ನೂ ಕೂಡ ಉಪಯೋಗಿಸದೆ,, ಬರಿ ಕೈ ನಲ್ಲೆ ಪೇಪರ್ ಅಥವಾ ಕಾಗದವನ್ನು ಮಡಚುವುದು,,, ಇದಕ್ಕೆ Origami ಅಂತ ಹೆಸರು !!!!!!


Won Park ಎಂಬುವವರು ಈ ಕಲೆಯಲ್ಲಿ ಪ್ರಸಿದ್ದಿಯನ್ನು ಪಡೆದಿದ್ದಾರಂತೆ.... ಇದರಲ್ಲಿ ಇನ್ನೊಂದು ವಿಶೇಷ ಏನು ಅಂದರೆ, ಇವರು ಈ Origami ಕಲೆಗೆ ಉಪಯೋಗಿಸುವುದು , currency ನೋಟ್ ಗಳನ್ನ ಅಂತೆ....ಅಂದರೆ ಡಾಲರು, ಯುರೋ.. ಹೀಗೆ ಅನೇಕ currency ನೋಟ್ ಗಳಲ್ಲೇ ತಮ್ಮ ಕಲಾ ನೈಪುಣ್ಯವನ್ನ , ಚಮತ್ಕಾರವನ್ನ ತೋರಿಸುತ್ತಾ ಇದ್ದಾರೆ....ಇದನ್ನು ನೋಡಿ ಇವರಿಗೆ "money folder " ಅಂತ ಹೆಸರು ಬೇರೆ ಬಂದಿದೆ ಅಂತೆ,,,

Won Park ಇವರು,, United States ನ ಒಂದು dollor , ಎರಡು dollor , ಹೀಗೆ ನೋಟು ಗಳನ್ನು ಉಪಯೋಗಿಸಿ,,,ಟ್ವಿಸ್ಟ್ ಮಾಡಿ, ಮಡಚಿ...ಬೆಂಡ್ ಮಾಡಿ, ಕೆಲವೊಂದು ವಸ್ತುಗಳನ್ನೇ ಯತಾವತ್ತಾಗಿ ಹೋಲುವ ಹಾಗೆ money ನ ಫೋಲ್ಡ್ ಮಾಡುತ್ತಾರೆ.... ಅವರ ಕೆಲವೊಂದು ಅದ್ಬುತ ಚಿತ್ರಗಳು ಇಲ್ಲಿವೆ ನೋಡಿ....

ಜಗತ್ತಿನಲ್ಲಿ ಎಂತೆಂತ ಕಲೆ ಇರುತ್ತೆ ಅಲ್ವ.... ಅಲ್ಲ ದುಡ್ಡು ಸ್ಕಿಕ್ಕರು ಬಿಡೋಲ್ಲ ಈ ಜನ,,,, ಅದೇ ನಮ್ಮಲ್ಲಿ ಆಗಿದ್ದರೆ...ಇರುವ ನೋಟ್ (ರುಪಾಯಿ) ಅನ್ನು ನೀಟ್ ಆಗಿ,, ಜೋಪಾನವಾಗಿ, ಕಣ್ಣಿಗೆ ಹೊತ್ತು ಕೊಂಡು ಪೆರ್ಸ್ ನಲ್ಲಿ ಇಟ್ಟು ಕೊಳ್ತಾ ಇದ್ವಿ ಅಲ್ವ..... :-)
mostly ಈ ಯಪ್ಪನಿಗೆ ದುಡ್ಡು ಜಾಸ್ತಿ ಆಗಿರಬೇಕು.....ಏನ್ ಅಂತಿರ....?

ಅದು ಏನಾದರೂ ಇರಲಿ... ಇವರ ಈ ಪೇಪರ್ ಅಲ್ಲ ಅಲ್ಲ money ಮಡಚುವ ಕಲೆಗೆ ಹಾಗು "Won Park " ಗೆ  ನನ್ನ ದೊಂದು ದೊಡ್ಡ ನಮಸ್ಕಾರ.....


One Dollar ಫಿಶ್

One Dollar Butterfly

One Dollar Camera


Two Dollars Battle Tank

Two Dollars Chinese Dragon

One Dollar Crab

One Dollar Dolphin
Two Dollars Jacket

Two Dollars Spider

One Dollor Scorpion

One Dollar Bat


One Dollar Toilet Bowl


One Dollar Penguin
One Dollar Shark

One Dollar Jet

One Dollar Hammer Head Shark

One Dollar Stegasaurus
Two Dollar X Wing

Vader’s Tie and Escorts
Dollar Tie Interceptor
Three Dollar Millenium Falcon
Enterprise Bottom View
Two Dollar Bird of Prey
One Dollar Stag Beetle

Sunday, January 24, 2010

ನಮ್ಮಲ್ಲೂ ಹೀಗೊಬ್ಬ Idiot ಫ್ರೆಂಡ್...

ನಾವೆಲ್ಲಾ ನಮ್ಮ ಎಜುಕೇಶನ್ ಮುಗಿಸಿ ಕೆಲಸಕ್ಕೆ ಕಾಲಿಡಬೇಕು ಅನ್ನುತ್ತಿರುವಾಗ IT ಉದ್ಯಮ ಅಧೋಗತಿಗೆ ಇಳಿದಿತ್ತು....ಇವಾಗ ಏನು Recession ಅಂತ ಹೇಳ್ತಾರೋ...ಇದಕ್ಕಿಂತ ವೊರ್ಸ್ಟ್ situation   2001 - 2003 ನಲ್ಲಿ ಇತ್ತು ...ಅವಾಗ ನಾವೆಲ್ಲ ಸಿಕ್ಕ ಸಿಕ್ಕ ಕಡೆ ನಮ್ಮ CV ನ ಅಪ್ಡೇಟ್ ಮಾಡಿಕೊಂಡು, ಎಲ್ಲೆಲ್ಲಿ walkin ಇಂಟರ್ವ್ಯೂ ಇರುತ್ತೋ ಅಲ್ಲೆಲ್ಲ ಹೋಗಿ ಬರ್ತಾ ಇದ್ವಿ.....
ಆ ದಿನಗಳಲ್ಲಿ ಏನಾದರೂ,, ಕಂಪ್ಯೂಟರ್ ನಲ್ಲಿ ಹೆಲ್ಪ್ ಬೇಕು ಅಂದ್ರೆ ಯಾವಾಗಲು ನನ್ನನ್ನೇ ಕೇಳ್ತಾ ಇದ್ರೂ....(ಇವಗ್ಲೂ ಅಸ್ಟೇ  ಸ್ವಲ್ಪ ಕಮ್ಮಿ ಆಗಿದೆ ಅಸ್ಟೇ....) ಅವಾಗ ಎಲ್ಲ ನನ್ನ ಸ್ನೇಹಿತರ ಮುಂದೆ ನಾನೇ ಕಂಪ್ಯೂಟರ್ ಗುರು ಆಗಿ ಬಿಟ್ ಇದ್ದೆ... :-)
ನನ್ ಸ್ಕೂಲ್ ಫ್ರೆಂಡ್ ಒಬ್ಬ ಇದ್ದ,, PUC ತನಕ ಒಟ್ಟಿಗೆ ಓದಿದ್ದು,,,,ಆಮೇಲೆ ಅವನು BE ಮಾಡ್ಬೇಕು ಅಂತ ಎಲ್ಲೊ ಬೇರೆ ಕಡೆ ಹೋದ,,, ನಾನು ಇನ್ನೊಂದು ಕಡೆ ಆಗಿದ್ದೆ... ಆಮೇಲೆ ಡಿಗ್ರಿ ಮುಗಿದ ಮೇಲೆ ಬೆಂಗಳೂರಿನಲ್ಲೇ ಒಟ್ಟಿಗೆ ಸಿಕ್ಕೆವು....ಈ ನನ್ನ ಫ್ರೆಂಡ್ (ಅವನ ಹೆಸರು ಬೇಡ , ಯಾಕೆ ಅಂದ್ರೆ ಅವನು ನನ್ನ ಬ್ಲಾಗ್ ಅನ್ನು ಅಪರೂಪಕೊಮ್ಮೆ ನೋಡ್ತಾ ಇರ್ತಾನೆ) ಸಿಕ್ಕ ಪಟ್ಟೇ ಸೋಂಬೇರಿ.....BE  ಎಲೆಕ್ಟ್ರಾನಿಕ್ಸ್ ನಲ್ಲಿ 1st ಕ್ಲಾಸ್ ನಲ್ಲಿ ಪಾಸ್ ಮಾಡಿದ್ದರು,, ಯಾವುದೊ,, ಒಂದು ಚಿಕ್ಕ ಕಂಪನಿ ನಲ್ಲಿ ಕೆಲಸ ಮಾಡಬೇಕೋ ಬೇಡವೋ ಅಂತ ಕೆಲಸ ಮಾಡ್ತಾ ಇದ್ದ .... ಅವಗಂತು ಇವನಿಗೆ ಯಾವುದರಲ್ಲೂ ಇಂಟರೆಸ್ಟ್ ಇರಲಿಲ್ಲ.....ಅಸ್ಟು ಸೋಂಬೇರಿ.... ಸರಿ ಒಂದು ಸ್ವಲ್ಪ ವರ್ಷ ಆದಮೇಲೆ...ಕೆಲಸ ಚೇಂಜ್ ಮಾಡಬೇಕು ಅಂತ ಅನ್ನಿಸಿ....ಎಲ್ಲ ಕಡೆ ಅಪ್ಲೈ ಮಾಡಿದ್ದ.....
ಒಂದು ದಿನ ಬೆಳಿಗ್ಗೆ ಬೆಳಿಗ್ಗೆನೆ ಫೋನ್ ಮಾಡಿ.. "ಗುರು ನಾನು ಒಂದು ಕಡೆ ಕೆಲಸಕ್ಕೆ ಅಪ್ಲೈ ಮಾಡಿದ್ದೆ,,, ಅವರಿಂದ ರಿಪ್ಲೈ ಬಂದಿದೆ... ನಾನು ಅರ್ಜೆಂಟ್ ಆಗಿ ನನ್ನ CV ಅನ್ನು ಅವರಿಗೆ ಕಳುಹಿಸಬೇಕು, ಆದರೆ ಅವರು  .asap format ನಲ್ಲಿ ಕಳುಹಿಸಬೇಕು ಅಂತ ಕೇಳ್ತಾ ಇದ್ದಾರೆ,, ಅರ್ಜೆಂಟ್ ಆಗಿ ಹೆಲ್ಪ್ ಮಾಡೋ.. ಆದರೆ ನೀನೆ ನನ್ನ CV ನ .asap format ನಲ್ಲಿ ಕಳುಹಿಸೋ ಅಂತ ಒಂದೇ ಉಸುರಿಗೆ ಹೇಳಿದ."
ನಾನು ಪರವಾಗಿಲ್ಲ ಇವಗಲಾದರು ಒಳ್ಳೆ ಬುದ್ದಿ ಬಂದಿದೆ,,, ಸರಿ ಅವನ ಪರವಾಗಿ ನಾನೇ CV ನ ಅಪ್ಡೇಟ್ ಮಾಡಿ ಕಳುಹಿಸೋಣ ಅಂತ, ಸರಿ ಕಣೋ ಕಳುಹಿಸುತ್ತೇನೆ ಅಂತ ಹೇಳಿದೆ..... ಆದರೆ ಅವನು ಹೇಳಿದ file format ಯಾವುದು ಅಂತ ಚಿಂತೆ ಆಯಿತು.... normal ಆಗಿ ಯಾವುದಾದರು ಕಂಪನಿ ನವರು,, ನಮ್ಮ CV ನ,  .doc (MS world ಡಾಕುಮೆಂಟ್)  , .rtf ( rich text  format ) ಅಥವ   .pdf ಫಾರ್ಮಾಟ್ ನಲ್ಲಿ ಕಳುಹಿಸಿ ಅಂತ ಹೇಳ್ತಾರೆ,,, ಇವನು ಯಾವುದೊ .asap ಫಾರ್ಮಾಟ್ ಅಂತ ಹೇಳ್ತಾ ಇದ್ದನಲ್ವ ಅಂತ ತೆಲೆ ಕೆರೆದುಕೊಂಡೆ . ಸರಿ ಇವನು ವರ್ಕ್ ಮಾಡ್ತಾ ಇರೋದು electronic ಫೀಲ್ಡ್ ಅಲ್ವ,, ಇದು ಯಾವುದೊ ಒಂದು file ಫಾರ್ಮಾಟ್ ಇರಬೇಕು ಅಂತ,,,,ಹುಡುಕೋಕೆ ಶುರು ಮಾಡಿದೆ.....ಒಂದು ಗಂಟೆ ಇಂಟರ್ನೆಟ್ ನಲ್ಲಿ ಎಲ್ಲ ಹುಡುಕಾಡಿದೆ. .asap ಫಾರ್ಮಾಟ್ ಇರೋ ಯಾವ file ಕೂಡ ಇಲ್ಲ..... ಮದ್ಯ ದಲ್ಲಿ... ಇವ ಎರೆಡೆರಡು ಸರಿ ಫೋನ್ ಮಾಡಿ,, "ಗುರು ಸಿಕ್ತ ಅ ಫಾರ್ಮಾಟ್ ಯಾವುದು ಅಂತ,,, ಅರ್ಜೆಂಟ್ ಆಗಿ  ಕಳುಹಿಸ ಬೇಕೋ ಬೇಗ ಹುಡುಕಿಕೊಡು ಅಂತ ತಲೆ ತಿಂತಾ ಇದ್ದ "  ನಾನು ಸ್ವಲ್ಪ ತಲೆ ಕೆಡಿಸಿಕೊಂಡ್ ಹುಡುಕುತ್ತ ಇದ್ದೆ....ಎಷ್ಟು ಟ್ರೈ ಮಾಡಿದರು ಇದು ಯಾವುದೊ ಹೊಸ ಫಾರ್ಮಾಟ್ ಸಿಕ್ತ ಇರಲಿಲ್ಲ... ಸರಿ ನಾನೇ ನನ್ ಫ್ರೆಂಡ್ ಗೆ ಫೋನ್ ಮಾಡಿ,, ಅವರು ಕಳುಹಿಸಿರುವ ಮೇಲ್ ಅನ್ನು ನನಗೆ farword ಮಾಡು,,, ನಾನೇ ನೋಡ್ತೇನೆ correct ಆಗಿ ಏನು ಅಂತ ಹೇಳಿದೆ. ಸರಿ ಅವನು ಕೂಡಲೇ ಆ ಕಂಪನಿ HR  ಕಳುಹಿಸಿದ  ಮೇಲ್ ಅನ್ನು farword ಮಾಡಿದ.. " ಆ ಮೇಲ್ ನ ನೋಡಿ, ನಂಗೆ ಶಾಕ್....ಅವಾಗ ಅವನ ಮೇಲೆ ಎಷ್ಟು ಸಿಟ್ಟು ಬಂತು ಅಂದ್ರೆ....ಪಕ್ಕದಲ್ಲಿ ಇದ್ದಿದ್ದರೆ ಏನಾದರೂ ತಗೊಂಡು ಸರಿಯಾಗಿ ಬಾರಿಸ್ತಾ ಇದ್ದೆ... ಒಂದು ಕಡೆ ನಗು,, ಇನ್ನೊಂದು ಕಡೆ ಸಿಟ್ಟು,,, ಎರಡು ಒಟ್ಟಿಗೆ ಬರೋಕೆ ಶುರು ಆಯಿತು,,,,actually ಅ ಮೇಲ್ ನಲ್ಲಿ ಅ ಕಂಪನಿ HR ಏನ್ ಕೇಳಿದ್ರು ಅಂದ್ರೆ     " We have short listed your name for final round of interview, kindly send your updated CV ASAP"  ಅಂತ ಇತ್ತು,,, ಅಂದರೆ ನಿಮ್ಮ ಹೆಸರು ಫೈನಲ್ ರೌಂಡ್ ಇಂಟರ್ವ್ಯೂ ಗೆ short list ಆಗಿದೆ , ನಿಮ್ಮ CV ನ ಅದಸ್ಟು ಬೇಗ ಕಳುಹಿಸಿ ಅಂತ ಇತ್ತು (ASAP - As  Soon As  Possible )  ಇದನ್ನ ನಮ್ಮ ಸೋಂಬೇರಿ enginer   ಮಹಾನುಭಾವ  .asap file ಫಾರ್ಮಾಟ್ ನಲ್ಲಿ ಕಳುಹಿಸಬೇಕು ಅಂತ ಅರ್ಥ ಮಾಡಿ ಕೊಂಡು,,, ನನ್ನ ತಲೆ ತಿಂದು,,, ನನ್ನ braingu ಕೆಲಸ ಕೊಟ್ಟು,, 2 hours time ನ ವೇಸ್ಟ್ ಮಾಡಿಸಿದ್ದ.... ಆಮೇಲೆ ಫೋನ್ ಮಾಡಿ ಸರಿ ಯಾಗಿ ಬೈದು,,,,ಅರ್ಥ ಮಾಡಿಸಿದ್ದು ಆಯಿತು.... ಅವಾಗ ಅವನು ನಿಜವಾಗ್ಲೂ BE Electornics ನ ಹೇಗೆ ಪಾಸ್ ಮಾಡಿದ್ದ ಅಂತ ಡೌಟ್ ಬಂದಿತ್ತು,,, ಇದೊಂದೇ ಅಲ್ಲ.... ಇದೆ ತರಹದ ಎಸ್ಟೋ ವಿಚಿತ್ರಗಳು ಅವನಲ್ಲಿ ಇವಗ್ಲೂ ಇದೆ.... ಇವಾಗ ಸ್ವಲ್ಪ ಪರವಾಗಿಲ್ಲ... ಬೇರೆ ಬೇರೆ ಕಂಪನಿ ಚೇಂಜ್ ಮಾಡಿ,,, US ಗೆ ಬೇರೆ 2 times ಹೋಗಿ ಬಂದಿದ್ದಾನೆ... ನನ್ನ ಬ್ಲಾಗ್ ನಲ್ಲಿ ಒಂದು ಹೊಸ ಪೋಸ್ಟ್ ಅಪ್ಡೇಟ್ ಮಾಡಿದೇನೆ ನೋಡೋ ಮಾರಾಯ ಅಂದ್ರೆ..." ನಂಗೆ ನೀನು ಕಳುಹಿಸಿರುವ ಮೇಲ್ ನ ಡಿಲೀಟ್ ಮಾಡೋದಕ್ಕೆ ಟೈಮ್ ಇಲ್ಲ,,, ಇನ್ನು ಇದನ್ನೆಲ್ಲಾ ಎಲ್ಲಿ ನೋಡೋಕೆ ಆಗುತ್ತೋ ಅಂತ ಹೇಳ್ತಾನೆ :-)
(ನೆನ್ನೆ ಯಾವುದೊ ಕಾರ್ಯಕ್ರಮಕ್ಕೆ ಅಂತ ನಮ್ಮ ಸ್ಕೂಲ್ ಫ್ರೆಂಡ್ಸ್ ಎಲ್ಲ ಸೇರಿದ್ವಿ,,, ಹಾಗೆ ಏನೋ ಹರಟೆ ಹೊಡೆಯುತ್ತ ಇರಬೇಕಾದರೆ 3 Idiots ಫಿಲಂ ಬಗ್ಗೆ ಮಾತಾಡ್ತಾ ಇರಬೇಕಾದರೆ ,,, ಅವಾಗ ನಾನು ಈ Idiot ಫ್ರೆಂಡ್ ನ ಪುರಾಣ ವನ್ನ ಹೇಳಿದೆ,,,, ಎಲ್ಲ ಕೇಳಿ ಬಿದ್ದು ಬಿದ್ದು ನಗ್ತಾ ಇದ್ರೂ....ಅವನು ಅಲ್ಲೇ ಪಕ್ಕದಲ್ಲೇ ಏನು ಗೊತಿಲ್ವೇನೋ ಅನ್ನೋ ಹಾಗೆ ಕೂತಿದ್ದ... :-)) 

Saturday, January 16, 2010

amazing baby ---- ಡುಮ್ಮು ಪಾಪುಎಷ್ಟು ಮುದ್ದಾಗಿ  ಇದೆ ಅಲ್ವ ಈ  ಪಾಪು......ಇದಕ್ಕೆ ಇನ್ನು 7 ತಿಂಗಳಂತೆ..... ಆಗಲೇ ಇದರ ತೂಕ 20 KG (44 ಪೌಂಡ್ಸ್) , ಇದು ಹುಟ್ಟಿ ಬೆಳಿತಾ ಇರೋದು,,, ಇರಾನ್ ನ ಕ್ಯಾಪಿಟಲ್ theran ಎಂಬಲ್ಲಿ,  Hamed Jafarnejad ಎಂಬುವರು, ತಮ್ಮ News agency ಗೆ ಅಂತ ಈ cute ಅಂಡ್ ಬುಬ್ಲಿ ಪಾಪುವಿನ  ಫೋಟೋನ ಕ್ಲಿಕ್ ಮಾಡಿದ್ದಾರೆ ,, ಪಾಪು ಚೆನ್ನಾಗಿ ಆರೋಗ್ಯವಾಗಿ ಇದೆ ಅಂತೆ.....ಇನ್ನು ದೊಡ್ಡದಾದ ಮೇಲೆ ಎಷ್ಟು KG ತನಕ ಬೆಳೆಯುತ್ತೋ.....
ಈ ಪುಟ್ಟ ಪಾಪುವಿನ ಫೋಟೋ ಗಳು ಚೆನ್ನಾಗಿ ಇತ್ತು,, ಹಾಗೆ ಸುಮ್ನೆ ನಿಮ್ಮ ಗಳ ಜೊತೆ ಹಂಚ್ಕೊಥ ಇದ್ದೇನೆ..... ನೀವು ನೋಡಿ ಕುಷಿ ಪಡಿ......:-)
Tuesday, January 12, 2010

ಕೊನೆಗೂ ನನ್ನ ಕೈ ಗೆ ಸಿಕ್ಕಿ ಬಿದ್ದ ಭೂತ .....!!!!!--ಭಾಗ ೨

ಶನಿವಾರ, ಹೇಗೆ ಕಳಿತೋ ಗೊತ್ತಾಗಲಿಲ್ಲ,,, ಎಸ್ಟೊಂದು ಕೆಲಸಗಳು.....ಎಲ್ಲ ಮುಗಿಸಿ,, ಸಂಜೆ ಆರಾಮವಾಗಿ ಟಿವಿ ನೋಡಿ ಊಟ ಮಾಡೋ ಹೊತ್ತಿಗೆ ಆಗಲೇ ೯:೩೦ ಆಗಿತ್ತು,,, ಬೇಗ ಊಟ ಮುಗಿಸಿ ಇನ್ನು ಸ್ವಲ್ಪ ಹೂತು ಟಿವಿ ನೋಡ್ಕೊಥ ಕೂತಿದ್ದೆ.. ಆಮೇಲೆ ಮಲ್ಕೊಳನ ಅಂತ ಬಂದೆ .... ನಿಜ ಹೇಳಬೇಕು ಅಂದ್ರೆ ನೆನ್ನೆ ಆಗಿದ ಘಟನೆ ಮರೆತೇ ಹೋಗಿತ್ತು....
ಹಾಗೆ ಮಲ್ಕೊಂಡೆ....ಇದ್ದಕ್ಕೆ ಇದ್ದ ಹಾಗೆ ನೆನ್ನೆಯ ಘಟನೆ ನೆನಪಿಗೆ ಬಂತು,,, ಹೌದು,,,ನೆನ್ನೆ ಏನೋ ಸೌಂಡ್ ಕೇಳಿಸ್ತಾ ಇತ್ತಲ್ವ,, ಅದು ಏನ್ ಇರಬಹುದು,, ಇವೊತ್ತು ಕೇಳಿಸಬಹುದ,,,,,?  ನೆನ್ನೆ ಏನೋ ದೆವ್ವ ಭೂತ ಅಂತ ಫಿಲಂ ನೋಡಿದ್ದೆ ಅದಕ್ಕೆ ಹಾಗೆ ಅನ್ನಿಸಿರಬೇಕು,,, ಆದರೆ ಇವೊತ್ತು... ಇರಲಿ ಹಾಗೇನಾದರೂ ಕೇಳಿಸಿದರೆ ನೋಡೋಣ ಏನು ಅಂತ ಅಂದುಕೊಂಡು ಮಲಗಲಿಕ್ಕೆ ರೆಡಿ ಅದೇ.....
ಒಂದು ೫ ನಿಮಿಷ ಕೂಡ ಆಗಿರಲಿಲ್ಲ.... ನೆನ್ನೆ ಕೇಳಿಸಿದ ಥರಾನೆ ಸೌಂಡ್ ಕೇಳಿಸ್ತು,, ಅದು ನಾನು ಮಲಗಿರುವ  ಪಕ್ಕದಲ್ಲೇ....  ನಿಜವಾಗಲು ಈ ಶಬ್ದ ಎಲ್ಲಿಂದ   ಬರ್ತಾ ಇದೆ ಅಂತ ಗೊತ್ತಗೊವರ್ಗು ನಂಗೆ ನಿದ್ದೆ ಬರೋಲ್ಲ ಅಂತ confirm ಆಯಿತು...ಸರಿ ಆಗಿದ್ದು ಅಗಲಿ, ನೈಟ್ ಪೂರ್ತ ನಿದ್ದೆ ಮಾದಡಿದ್ರು ಪರವಾಗಿಲ್ಲ,, ಹೇಗೆ ಇದ್ರೂ ನಾಳೆ ಸಂಡೇ, ಬೆಳಗ್ಗೆ ಮಲಗಿಕೊಂಡರೆ ಆಯಿತು,,, ಆದರೆ  ಈ ನನ್ ಮಗಂದು ಶಭ್ದ ಎಲ್ಲಿಂದ ಬರ್ತಾ ಇದೆ ಅಂತ ನೋಡಲೇಬೇಕು ಅಂತ ಡಿಸೈಡ್ ಮಾಡಿ,,, ಎಲ್ಲ ಲೈಟ್ ಹಾಕಿ ಮಂಚದ  ಕೆಳಗೇ  ಕುಳಿತು ಕೊಂಡೆ.....ಸುತ್ತಲು ನೋಡಿದೆ... ಹಾಗೆ ಸೌಂಡ್ ಬರೋ  ಯಾವ ವಸ್ತುನು ಮಂಚದ ಹತ್ತಿರ ಇರಲಿಲ್ಲ.... ಮಲ್ಕೊಂಡ ಹಾಗ ಏನಾದ್ರೂ  ತಾಗಿ ಈ ರೀತಿ ಶಭ್ದ ಕೇಳಿಸ್ತಾ ಇರಬಹುದ ಅಂತ ಮಂಚನೆಲ್ಲ  ಜರುಗಿಸಿ ನೋಡಿದೆ ... ಹ್ಞೂ ಹ್ಞೂ ಏನು ಇರಲಿಲ್ಲ , , ಸರಿ ಆ  ಶಭ್ದ ಇನ್ನೊಂದು  ಸರಿ ಬರಲಿ  ಅಂತ wait ಮಾಡ್ತಾ ಇದ್ದೆ.. ಒಂದಂತು ಗೊತ್ತಿತ್ತು,, ದೆವ್ವನು ಇಲ್ಲ ಭೂತ ನು ಇಲ್ಲ ಇದು ಎಲ್ಲೊ ಏನೋ ತಾಗಿ ಇ ರೀತಿ ಶಬ್ದ ಬರ್ತಾ  ಇದೆ ಅಂತ.....ಆದರೆ ಅದು ಏನು ಅಂತ ಗೊತ್ತಾಗಬೇಕಿತ್ತು ಅಸ್ಟೇ ??... ಇಲ್ಲ ಅಂದ್ರೆ ನನ್ನ ತಲೆ ಹೊಕ್ಕಿರುವ ಹುಳ ಸುಮ್ಮನೆ ಆಗ್ತಾ ಇರಲಿಲ್ಲ ...
ಸ್ವಲ್ಪ ಹೊತ್ತು ಆಗಿರಲಿಲ್ಲ ಹಾಗೆ ಲೈಟ್ ಹಾಕಿ ಮಂಚದ ಕೆಳಗಡೆ ಕೂತು ಕೊಂಡು,,, ನೋಡ್ತಾ ಇದ್ದೆ ... sudden ಆಗಿ ಕರೆಂಟ್ ಹೋಯ್ತು....ಪೂರ್ತ ಕತ್ತಲು.. ಅದೇ ಸಮಯಕ್ಕೆ ಪಕ್ಕದ ಮನೆ  ನಲ್ಲಿ ಇರುವ ಒಂದು ಪಾಪು ಕೀಟಾರ್ ಅಂತ ಕಿರಿಚಿಕೊಂಡು  ಜೋರಾಗಿ ಅಳೋಕೆ ಶುರು ಮಾಡ್ತು.... ನನಗೆ ನಿಜವಾಗ್ಲೂ ಅ ಕ್ಷಣಕ್ಕೆ ಭಯ ಪಟ್ಕೊಬೇಕ ಬೇಡ್ವ ಅನ್ನೋ ಹಾಗೆ ಆಯಿತು....!!! , ಅವರ ಅಮ್ಮ ಮಗುನ ಹೊರಗಡೆ ಕರ್ಕೊಂಡ್ ಬಂದು ಸಮಾದಾನ ಮಾಡ್ತಾ ಇದ್ರೂ... ನನ್ನ ರೂಮಿನ ಕಿಟಕಿ, ಪಕ್ಕದ ಮಹಡಿ ಮನೆ ಗೆ ಹತ್ತಿರ   ಇದೆ... ನೈಟ್ ಬೇರೆ ಅಲ್ವ,,, ಸ್ವಲ್ಪ ಗದ್ದಲ ಆದರು ಚೆನ್ನಾಗಿ ಕೇಳಿಸುತ್ತೆ...  ಸರಿ ಇರಲಿ ಅಂತ ನಿದಾನಕ್ಕೆ ಮೊಬೈಲ್ ಲೈಟ್ ಆನ್ ಮಾಡಿಕೊಂಡು ಎಲೆಕ್ಟ್ರಿಕ್ rechargeble ಲೈಟ್ ಹಚ್ಚೋಣ ಅಂತ ಹೋದೆ ... ಇನ್ನೇನು ಹಚ್ಚ ಬೇಕು,,, ಟಕ್ ಅಂತ ಕರೆಂಟ್ ಬಂತು....ಅಲ್ಲ ಇ ಕರೆಂಟ್ ರಾತ್ರಿ 8 ಗಂಟೆ ಇಂದ 3 ಅಥವ 4 ಸರಿ ಹೋಗಿದೆ....ಬರಿ ಒಂದು 2 ನಿಮಿಷ ಹೋಗಿ ಹಾಗೆ ಬರ್ತಾ ಇದೆ... ಇದಕ್ಕೆ ನಾನು ಇಸ್ತೊಂದ್ ಭಯ ಪದಬೇಕ ಅಂತ ನನ್ನನ್ನೇ ನಾನು ಕೇಳಿಕೊಂಡು ಹಾಗೆ ಮನಸಿನಲ್ಲೇ ಯೋಚನೆ ಮಾಡ್ತಾ ಅಮ್ಮ ಇದ್ದ ರೂಮಿನ ಕಡೆಗೆ ಹೋಗಿ ನೋಡಿದೆ...ಪಾಪ ಅಮ್ಮ,, ಆರಾಮವಾಗಿ ಆಗಲೇ ಮಕ್ಕೊಂಡ್ ಬಿಟ್ ಇದ್ರೂ.....
ಸರಿ ನಂದೇ ಯಾಕೋ ಇವೊತ್ತು ಅತಿ ಆಯಿತು ಅಂತ ಬಂದು ನನ್ನ ರೂಂ ಬಾಗಿಲು ಹಾಕಿಕೊಂಡೆ,, ಲೈಟ್ ಎಲ್ಲ ಆನ್ ಆಗೇ ಇತ್ತು,,, ಇರಲಿ ಸುಮ್ಮನೆ ಯಾವುದೊ ಒಂದು ಸಣ್ಣ ಶಬ್ದ ಇಸ್ತೊಂದ್ ಆಟ ಅಡಿಸ್ತ ಇದೆ ಅಲ್ವ,, ಒಂದು ಕೈ ನೋಡೆ ಬಿಡೋಣ ಅಂತ ಕೂತ್ಕೊಂಡೆ....
ಒಂದೆರಡು ನಿಮಿಷ ಆಗಿತ್ತು,, ಕಂಪ್ಯೂಟರ್ ಟೇಬಲ್ ಹತ್ರ ಇರೋ ಕ್ರಿಯೇಟಿವ್ ದೊಡ್ಡ speaker ಕೀರ್.... ಕೀರ್.... ಕೊಯೂನೋ ಅಂತ ಜೋರಾಗಿ ಸೌಂಡ್ ಮಾಡೋಕೆ ಶುರು ಆಯಿತು.....ಇವಾಗ ನಿಜವಾಗ್ಲೂ ಸ್ವಲ್ಪ ಸಣ್ಣಗೆ ಭಯ ಆಯಿತು....sudden ಆಗಿ ಎದ್ದು ಹೋಗಿ ನೋಡಿದೆ,, ನನ್ನ ಬ್ಲಾಕ್ ಬೆರಿ ಮೊಬೈಲ್ Speaker ಹತ್ರನೇ ಇತ್ತು,,, ಯಾವುದೊ mail ಅಥವ sms ಬರ್ತಾ ಇತ್ತು ಅಂತ ಕಾಣುತ್ತೆ .. ಹಾಗೆ ಬರಬೇಕಾದರೆ speaker ಹತ್ರ ಏನಾದ್ರು ಮೊಬೈಲ್ ಇದ್ದರೆ ಅದರ vibrations speaker ನಿಂದ ವಿಚಿತ್ರ ಸೌಂಡ್ ಮಾಡಿಕೊಂಡು   ಬರುತ್ತೆ (ನಿಮಗೂ ಇದು ಅನುಭವ ಆಗಿರುತ್ತೆ ಅಲ್ವ :-) ) ... ಅಲ್ಲ ಇದೆಲ್ಲ ಮಾಮೂಲಿ ಯಾಗಿ ಆಗುವ ಅನುಭವಗಳು ಆದರೆ ಇವೊತ್ತು ಯಾಕೆ ಇಸ್ತೊಂದ್ ವಿಚಿತ್ರ ಅಂತ ಅನಿಸ್ತ ಇದೆ.....ಈ ಪ್ರಶ್ನೆಗೆ ನನ್ನ ಬಳಿನೂ ಉತ್ತರ ಇರಲಿಲ್ಲ  !!!!
ಸರಿ ಏನಾದ್ರು ಹಾಳಾಗಿ ಹೋಗಲಿ,,,ಒಟ್ನಲ್ಲಿ ಆ ಟಪ್ ಟಪ್ ಅಂತ ಬರೋ ಶಬ್ದ ಎಲ್ಲಿಂದ ಬರ್ತಾ ಇದೆ ಅಂತ ಗೊತ್ತಾಗಲೇ ಬೇಕಾಗಿತ್ತು,,, ಇಲ್ಲ ಅಂದರೆ, ಇವಾಗ ಸಣ್ಣದಾಗಿ ಹುಟ್ಟಿರುವ ಭಯ ನಿಜವಾಗ್ಲೂ ಭಯ ಪಟ್ಟು ಕೊಳ್ಳ ಬೇಕಾದ ಸಂದರ್ಬ ಬರಬಹುದೆಂದು ನನ್ನೊಳಗೆ ಒಂದು ಸಣ್ಣ ಭಯ ಸ್ಟಾರ್ಟ್ ಆಯಿತು....
ಅದು ಏನು ಆಗುತ್ತೋ ಅಗಲಿ  "ALL is WELL " ಅಂತ  3 ediots ನ ಅಮೀರ್ ಖಾನ್ ಡೈಲಾಗ್ ನೆನಪಿಸಿಕೊಂಡು, ನನಗೆ ನಾನೇ ಸಮಾದಾನ ಮಾಡಿಕೊಂಡು ಅ ನಿಶಬ್ದ ವಾದ ರಾತ್ರಿ ನಲ್ಲಿ ಒಬ್ಬನೇ ಎಲ್ಲ ಲೈಟ್ ಆನ್ ಮಾಡಿಕೊಂಡು ಚಕ್ಕ೦ಬಕ್ಕ್ಲ ಹಾಗಿಕೊಂಡು ನೆಲದ ಮೇಲೆ ಕುಳಿತುಕೊಂಡೆ......!!!
... ಕೊನೆ ಸರಿ ಆ ಶಬ್ದ ಬಂದಾಗ ನೋಡಿದ ಜಾಗದ ಕಡೆನೇ ಒಂದೇ ದೃಷ್ಟಿಯಲ್ಲಿ ನೋಡುತ್ತ ಕೂತ್ಕೊಂಡ್ ಇದ್ದೆ....
೫ ನಿಮಿಷ ಆಯಿತು....
೧೦ ನಿಮಿಷ ಆಯಿತು....
೧೫  ನಿಮಿಷ ಆಯಿತು.....
ಆಗ ಮತ್ತೆ ಕೇಳಿಸಿತು ನೋಡಿ ಆ ಸಣ್ಣಗಿನ ಶಬ್ದ.... ಅದೇ  ಟಪ್,, ಟಪ್ ಅನ್ನೋ ಶಭ್ದ ಬಂತು.....ಅವಾಗ ಸರಿಯಾಗಿ ಕಾಣಿಸ್ತು ಅದು ಎಲ್ಲಿಂದ ಬರ್ತಾ ಇದೆ ಅಂತ........
"ಆ ಶಬ್ದ ಬರ್ತಾ ಇದ್ದದ್ದು ಒಂದು ಪ್ಲಾಸ್ಟಿಕ್ ನೀರಿನ bottel ನಿಂದ".... usually ನಾನು ನೀರು bottel ನಲ್ಲೆ ಕೂಡಿಯೋದು,, ಸೊ ಯಾವುದೊ bisilary bottel ನಲ್ಲಿ ನೀರು ತುಂಬಿಸಿಕೊಂಡು ಮಂಚದ ಹತ್ತಿರ ಇಟ್ಕೊಂಡ್ ಇದ್ದೆ .. bottel ಸ್ವಲ್ಪ ತೆಳ್ಳಗೆ ಇತ್ತು , ನೀರು ಕುಡಿಬೇಕಾದರೆ,, ಸ್ವಲ್ಪ ಏರ್ ಹೊರಗೆ ಹೋಗಿ, bottel ಸ್ವಲ್ಪ ತಗ್ಗಿದ ಹಾಗೆ ಹಾಗಿತ್ತು,, ಹಾಗೆ ನಿದಾನಕ್ಕೆ ಗಾಳಿ ಹೋಗ್ತಾ,,,ತಗ್ಗಿದ bottle ಟಪ್ ಟಪ್ ಅಂತ ಸೌಂಡ್ ಮಾಡಿ reshink ಆಗ್ತಾ ಇತ್ತು... ಆದೇ ಸೌಂಡ್ ನಿಶಬ್ದ ರಾತ್ರಿ ನಲ್ಲಿ ಫುಲ್ ಸೈಲೆಂಟ್ ಆಗಿ ಇರೋವಾಗ... ನನಗೂ... ಕೇಳಿಸ್ತಾ ತಲೆ ತಿಂತಾ ಇದ್ದದ್ದು.....ಸರಿ ಇದು ಭೂತದ ಕತೆ ಅಲ್ಲ bottel ದು ಅಂತ ಗೊತ್ತಾಗಲಿಕ್ಕೆ ಜಾಸ್ತಿ ಸಮಯ ಬೇಕಾಗಲಿಲ್ಲ... :-)

ಮನುಷ್ಯ ಒಂದು ಚೂರು ಭಯದ ವಾತಾವರಣಕ್ಕೆ ಸಿಕ್ಕರೆ ಹೇಗೆ ಆಗುತ್ತೆ ಅಲ್ವ....  ಅವಾಗ ನೆರಳು ನೋಡಿದರು ಭಯ ಪಟ್ಕೊಲ್ಲೋ ಸ್ತಿತಿಗೆ ಹೋಗಿರ್ತೇವೆ ....
ಇದೆ ರೀತಿ ದೆವ್ವ ಭೂತ ಇಲ್ಲದೆ ಇರದಿದ್ರು,,, ಕೆಲವೊಂದು ಸರಿ,,, ಮಾನಸಿಕೆ ಉದ್ವೇಗ,, ಮತ್ತೆ ಭ್ರಮೆ ಗೆ ಒಳಗಾಗಿ, ನಾವು  ಹೆದರಿಕೊಂಡು ನಂಬಿರ್ತೇವೆ....  ನನ್ನ ಅನಿಸಿಕೆ ಪ್ರಕಾರ ದೆವ್ವ ಭೂತ ಇದೆಲ್ಲ ಏನು ಇಲ್ಲ..... ಮೊನ್ನೆ ಟಿವಿ ನಲ್ಲಿ ಕನ್ನಡ ಮೂವಿ "ಶಶಿರ "  ವಿಮರ್ಶೆ ನೆದಿತ  ಇತ್ತು,, ಚಿತ್ರ ನಟಿ ಪ್ರೇಮ, director , ಎಲ್ಲ ಮಾತಾಡ್ತಾ ಇದ್ರೂ,, ಅದರಲ್ಲಿ ಅವರು ಒಂದು ಪಾಯಿಂಟ್ ಹೇಳಿದ್ರು,, " ಮನುಷ್ಯ ಸತ್ತ ಮೇಲೆ, ದೇಹ ಮಾತ್ರ  ಸಾಯುತ್ತೆ, ಆದರೆ ಆತ್ಮ ಸಾಯೋದಿಲ್ಲ.. ಹಾಗೆ ಈ ಆತ್ಮ ದೆವ್ವ ಆದಾಗ ಅದಕ್ಕೆ ಬಿಳಿ ಸೀರೆ ಎಲ್ಲಿ ಸಿಗುತ್ತೆ... ಅಂತ...?
ಹೌದು ಅಲ್ವ,,, ನಾವು  ದೆವ್ವ ಭೂತ , ಅಂದಾಗ ನೆನಪಾಗುವುದು,, ಬಿಳಿ ಸೀರೆ ಉಟ್ಟು,, ಅಲೆದಾಡುವ ಹೆಣ್ಣು ... ಸೊ ಅದಕ್ಕೆ ಬಿಳಿ ಸೀರೆ ಸತ್ತ ಮೇಲೆ ಯಾರು ಕೊಡುತ್ತಾರೆ....? ಇದೆಲ್ಲ  ನಂಬ ಬೇಕ?
ಅದಿರಲಿ, ಪಾಪ ನಮ್ಮ "ವಿಷ್ಣುವರ್ಧನ " ಸತ್ತು ಹೋಗಿ ಇನ್ನು ಒಂದು ವಾರ ಸಹ ಆಗಿಲ್ಲ,,, ಅವಾಗಲೇ,, ಇದು,,"ನಾಗವಲ್ಲಿ" ಇಂದ ಆಗಿದ್ದು, ಅವರು ಮಾಡ್ತಾ ಇರೋ ಫಿಲಂ ನಿಂದನೆ ಆಗಿದ್ದು ಅಂತ ಎಲ್ಲ ಹೇಳ್ತಾ ಇದ್ದರೆ? ಇದು ನಿಜಾನ? ಟಿವಿ ಚಾನೆಲ್ ನವರು ತಮ್ಮ TRP ಗೋಸ್ಕರ ಒಂದು ಹೆಜ್ಜೆ ಮುಂದೆ ಹೋಗಿ,, ಅದರ ಬಗ್ಗೆನೇ ಒಂದು ಎಪಿಸೋಡ್ ಪೂರ್ತ ತೋರಿಸ್ತಾ ಇದ್ದಾರೆ .... ಇದನ್ನೆಲ್ಲಾ ನೋಡ್ತಾ ಇದ್ರೆ,, ನಿಜವಾಗ್ಲೂ ಸಿಲ್ಲಿ ಅಂತ ಅನ್ನಿಸೋಲ್ವ.....
ಏನ್ ಜನಗಳೋ... ಏನೋ

.... ಏನ್ ಭೂತನೋ,, ದೆವ್ವನೋ,,, ನನಗಂತು ಒಂದು ಗೊತ್ತಿಲ್ಲ....ನಾನು ಅಂತು ನಂಬೋದು ಇಲ್ಲ.......... :-) ಇನ್ನು ನೀವು ?

Sunday, January 10, 2010

ಕೊನೆಗೂ ನನ್ನ ಕೈ ಗೆ ಸಿಕ್ಕಿ ಬಿದ್ದ ಭೂತ .....!!!!!ಕೊನೆಗೂ ನನ್ನ ಕೈ ಗೆ ಸಿಕ್ಕಿ ಬಿದ್ದ ಭೂತ .....!!!!!


ಹೌದು ಎರಡು ದಿನದಿಂದ ನನ್ನ ನಿದ್ದೆ ಕೆಡಿಸಿದ ಭೂತ ಮತ್ತೆ ಆದರೆ ಚೆಸ್ಟೆ ಆಟ ಕೊನೆಗೂ ನನ್ನ ಕೈ ಗೆ ಸಿಕ್ಕಿ ಬಿತ್ತು....ಕೊನೆಗೆ ನಾನೇ ಗೆದ್ದೇ....!!!!

ನಿಜ ಹೇಳಬೇಕು ಅಂದ್ರೆ ನನಗೆ ಈ ಭೂತ ದೆವ್ವ ಇದರಲ್ಲಿ ನಂಬಿಕೆ ಇಲ್ಲ... ಆದರೆ ಇಂಥ ಫಿಲಂಸ್ ಅನ್ನು ತುಂಬ ಚೆನ್ನಾಗಿ ನೋಡ್ತೇನೆ.....actually ನಾನು ಚಿಕ್ಕವ ನಿದ್ದಾಗ್ಲಿಂದ ,,,ಇದರ ಬಗ್ಗೆ ಸ್ವಲ್ಪ ಜಾಸ್ತಿ ನೆ ಆಸಕ್ತಿ ಇತ್ತು,,, ಎಲ್ಲರಿಗೂ, ದೆವ್ವದ ಕತೆ ಹೇಳಿ (ರೀಲು ಬಿಟ್ಟು ) ಚೆನ್ನಾಗಿ ಹೆದರಿಸ್ತಾ ಇದ್ದೆ ....

ಇವಾಗ ಇದರಲ್ಲಿ ಅಸ್ತೊಂದ್ ಆಸಕ್ತಿ ಇಲ್ಲ, ನನಗೆ ಇರೋ ಪ್ರಾಬ್ಲಮ್ ನೆ ಯೋಚನೆ ಮಾಡೋಕೆ ನಂಗೆ ಟೈಮ್ ಇಲ್ಲ ಇದರಲ್ಲಿ ಇದೆಲ್ಲ no way ....ಆದರೆ ನೆನ್ನೆ ಏನಪ್ಪಾ ಆಯಿತು ಅಂದ್ರೆ!!!!, ನನ್ನ ಫ್ರೆಂಡ್ ಒಬ್ಬ ಕೆಲವೊಂದು ಫಿಲಂಸ್ ಡೌನ್ಲೋಡ್ ಮಾಡಿದೇನೆ ಬೇಕಾದರೆ ತೆಗೆದುಕೊಂಡು ಹೋಗು ಅಂತ ಹೇಳ್ದ,,, ನನಗೆ ಇಂಟರೆಸ್ಟ್ ಇರಲಿಲ್ಲ ಆದರು ಇರಲಿ ಯಾವಾಗ್ಲಾದ್ರು ಬೇಜಾರ್ ಆದಾಗ ನೋದೊದಗುತ್ತೆ ಅಂತ, ಎಲ್ಲ ನನ್ನ ಲ್ಯಾಪ್ಟಾಪ್ ಗೆ ಕಾಪಿ ಮಾಡಿಕೊಂಡೆ.....

ವೀಕ್ ಎಂಡ್ ಫ್ರೀ ಇದ್ದಾಗ ನೋಡೋಣ ಅಂತ ಸುಮ್ಮನೆ ಆಗಿದ್ದೆ... ಮೊನ್ನೆ friday ಆಫೀಸ್ ನಿಂದ ಬೇಗ ಬಂದಿದ್ದೆ, ಸರಿ ಮನೆಗೆ ಬಂದಾಗಲು ಕೆಲವೊಮ್ಮೆ ಆಫೀಸ್ ಕೆಲಸ ಇರುತ್ತೆ,, ರಾತ್ರಿ ಊಟ ಮುಗಿಸಿ, ಸ್ವಲ್ಪ ಹೊತ್ತು ಆಫೀಸಿನ ಕೆಲಸ ಮಾಡ್ಕೋತಾ ಕೂತಿದ್ದೆ...ಟೈಮ್ ಹೋಗಿದ್ದೆ ಗೊತ್ತಾಗಲಿಲ್ಲ ಆಗಲೇ 11 :00 ಆಗಿತ್ತು,,, ಸರಿ ಮಲ್ಕೊಳೋಣ ಅಂದ್ರೆ ಯಾಕೋ ನಿದ್ದೆ ಬರ್ತಾ ಇಲ್ಲ. ಸರಿ ಮೊನ್ನೆ ಕಾಪಿ ಮಾಡಿಕೊಂಡು ಬಂದಿದ್ದ ಯಾವುದಾದರು ಒಳ್ಳೆ ಫಿಲಂ ಇದೆಯೋ ನೋಡೋಣ ಅಂತ ಸರ್ಚ್ ಮಾಡಿದೆ,, ಒಂದು ೧೦ movies ಇತ್ತು,,, ಅದರಲ್ಲಿ ಒಂದು "Drag me to hell " ಇದರ ಬಗ್ಗೆ ಕೇಳಿದ್ದೆ, ನಮ್ಮ ಒಬ್ಬ ಇಂಡಿಯನ್ ಇದರಲ್ಲಿ ಮಾಡಿದ್ದಾನೆ . ತುಂಬ ಚೆನ್ನಾಗಿ ಇದೆ ಅಂತ,, ಸರಿ ಇದನ್ನೇ ನೋಡೋಣ ಅಂತ ನೋಡ್ತಾ ಇದ್ದೆ. ಫಿಲಂ ತುಂಬ ಇಷ್ಟ ಆಯಿತು,,, ಸಕತ್ ಭಯ ಕೂಡ ಅಗೋ ತರ ಇತ್ತು,, ನನಗೆ ಇದೇನು ಹೊಸದಲ್ಲ ಈ ತರಹದ ತುಂಬ movies ನೋಡಿದ್ದೇನೆ,,, ಇದು ಸ್ವಲ್ಪ ಜಾಸ್ತಿ ಎಫೆಕ್ಟ್ ಆಗಿ ಇತ್ತು,,,,ಸರಿ,,ಫಿಲಂ ಏನೋ ಮುಗಿತು,,ಆಗಲೇ ೧೨:೪೫ ಸರಿ ಮಲ್ಕೊಳೋಣ ಅಂತ ಅನ್ಕೊಂಡು ಲ್ಯಾಪ್ಟಾಪ್ off ಮಾಡಿ ಮಲ್ಕೊಂಡೆ....

ಸ್ವಲ್ಪ ಹೊತ್ತು ಆ ಫಿಲಂ ದೇ ಯೋಚನೆ,,,ಹಾಗೆ ಏನೇನೊ ಯೋಚನೆ ದೆವ್ವದ ಬಗ್ಗೆ,,,,ನಿದಾನಕ್ಕೆ ಕಣ್ಣು ಎಳ್ಕೊಂಡ್ ಹೋಗ್ತಾ ಇತ್ತು,,,,,ಸ್ವಲ್ಪ ಹೊತ್ತು ಆಗಿತ್ತು ಮಲಗಿ.....ಇದ್ದಕ್ಕೆ ಇದ್ದ ಹಾಗೆ ಏನೋ ಒಂದು ಸಣ್ಣ ಶಬ್ದಕ್ಕೆ ಎಚ್ಚರಿಕೆ ಆಯಿತು....ಏನೋ ಸೌಂಡ್ ಇರಬೇಕು ಅಂತ ಹಾಗೆ ಮಲ್ಕೊಂಡೆ, ಮತ್ತೆ ಅದೇ ಶಬ್ದ,,,horror ಮೂವಿ ನೋಡಿದ್ರಿಂದ ನೋ ಏನೋ,,, ಅದೇ trap ನಲ್ಲಿ ಇದ್ದೆ.. (ಕೆಲವೊಮ್ಮೆ ಹೀಗೆ ಆಗುತ್ತೆ,,, ಯಾವುದಾದರು ಮನಸ್ಸಿನ ಮೇಲೆ ಜಾಸ್ತಿ ಪ್ರಭಾವ ಬೀರಿದ್ದಾರೆ,, ಅದರ ಗುಂಗಿನಲ್ಲೇ ಇರುತ್ತೇವೆ) ಯಾವೊತ್ತು ಈ ತರ ಹಾಗಿರಲಿಲ್ಲ.. ಇವೊತ್ತು ಯಾಕೆ ಹೀಗೆ ಅನ್ಕೊಂಡು, ಲೈಟ್ ಹಾಕಿ ನೋಡಿದೆ ಏನು ಇಲ್ಲ,,, ಎಲ್ಲ ಸರಿಯಾಗೆ ಇದೆ,, ಮತ್ತೆ ಏನೋ ಟಪ್ ಅಂತ ಶಬ್ದ ಬಂತಲ್ವಾ ತುಂಬ ಹತ್ತಿರ ದಿಂದ ಕೇಳಿಸಿತು,,,ಅದು ಸುಳ್ಳ ?, ನಿಜ ಹಾಗಿದ್ರೆ ಎಲ್ಲಿಂದ ಬಂತು ಅಂತ ತಲೆಕೆಡಿಸಿಕೊಂಡು ಅಲ್ಲಿ ಇಲ್ಲಿ ನೋಡಿದೆ ಏನು ಸಿಗಲಿಲ್ಲ ,, ಸರಿ ಅಂತ ಹಾಗೆ ಸುಮ್ಮನೆ ಮಲ್ಕೊಂಡೆ.....

ಮಲಗಿ ಸ್ವಲ್ಪ ಹೊತ್ತು ಆಗಿರಲಿಲ್ಲ ಮತ್ತದೇ ಶಬ್ದ.....ಇವಗ್ಲಂತೂ ತಲೆನಲ್ಲಿ ಯಾವುದೊ ಹುಳ ಸೇರಿಕೊಂಡ ಹಾಗೆ ಆಯಿತು,,,,ಇದು ನನ್ನ ಭ್ರಮೇನ ಏನು ಅಂತ ಯೋಚಿಸ್ತಾ ಫುಲ್ alert ಆಗಿ, ಈ ನಿಶಬ್ದ ರಾತ್ರಿ ನಲ್ಲಿ ಅದು ನನ್ನ ರೂಂ ಒಳಗಡೆ ಇಂದ ಬರ್ತಾ ಇರೋ ಶಬ್ದಕ್ಕೆ ಹೊಂಚ್ ಹಾಕಿ ಕಂಡು ಹಿಡಿಲೇಬೇಕು ಅಂತ ಕೂತ್ಕೊಂಡೆ......ಸ್ವಲ್ಪ ಹೊತ್ತು ಆಯಿತು,,, ಇನ್ನು ಸ್ವಲ್ಪ ಹೊತ್ತು ಆಯಿತು ,,, ಯಾವ ಶಬ್ದನು ಪತ್ತೆ ಇಲ್ಲ.... ಸರಿ

ಹಾಗೆ ಕಣ್ಣು ಎಳ್ಕೊಂಡ್ ಹೋಗ್ತಾ ಇತ್ತು , ನಿದ್ರಾ ನಿದಾನಕ್ಕೆ ಬರ್ತಾ ಇತ್ತು,, ಅವಾಗ ಕೆಳಗಡೆ ಇಂದ, ಕಾಲೀ ತಳ್ಳೋ ಗಾಡಿಯ

ಜೋರು ಶಭ್ದಕ್ಕೆ ಎಚ್ಚರ ಆಯಿತು ಕಿಟಕಿ ಹತ್ರ ಹೋಗಿ ನೋಡಿದೆ... ಚಿಕನ್ ಕಾಬಬ್, ಮಾಡೋ ಒಂದು ತಗಡಿನ ಗಾಡಿ ನ ಯಾರೋ ಒಬ್ಬ ತಳ್ಕೊಂಡ್ ಹೋಗ್ತಾ ಇದ್ದ... ಇದು ನಮ್ಮ ಮನೆ ರೋಡಿನಲ್ಲಿ ಪ್ರತಿ ದಿನ ರಾತ್ರಿ,, ತಳ್ಕೊಂಡ್ ಹೋಗ್ತಾನೆ , ಸರಿ ಇದಕ್ಕೆ ಯಾಕೆ ಇವೊತ್ತು ಇಸ್ತೊಂದ್ ಎಚ್ಚರ ಆಗ್ತಾ ಇದೆ.. ಇದರ ಬಗ್ಗೆ ಯಾಕೆ ಇಸ್ತೊಂದ್ ತಲೆ ಕೆಡಿಸಿ ಕೊಳ್ತಾ ಇದೇನೇ ಅಂತ ಅನ್ಕೊಂಡ್ ಮಲ್ಕೊಂಡೆ,,, ನನ್ನ ಮೊಬೈಲ್ ನ ಯಾವಾಗಲು ನನ್ನ ಪಕ್ಕನೆ ಇಟ್ಕೊಂಡ್ ಮಲ್ಕೊತೇನೆ,,, ನಿದ್ದೆ ಬರಲಿಲ್ಲ ಅಂತ ಯಾವುದೊ songs ಕೇಳ್ತಾ ಹಾಗೆ ಬಿಟ್ಟಿದ್ದೆ. ಅದರ hands ಫ್ರೀ, ಬಿಚ್ಚಿ ಹೋಗಿತ್ತು,,, songs list ಹಾಗೆ ಸೆಲೆಕ್ಟ್ ಆಗಿತ್ತು ಅಂತ ಕಾಣುತ್ತೆ ಮೊಬೈಲ್ ಪಕ್ಕದಲ್ಲೇ ಇತ್ತಲ್ವ,,,ಸ್ವಲ್ಪ ಟಚ್ ಆಗಿ,,"ಓಹ್ ಓಹೋ ಹೋಓಒ ತಂಗಾಳಿ ಯಲ್ಲಿ ನಾನು ತೇಲಿ ಬಂದೆ " ಈ ಹಾಡೇ ಬರಬೇಕ,,,,!!! ಅದು ಫುಲ್ ಲೌಡ್ ಸ್ಪೀಕರ್ ನಲ್ಲಿ, ಇದು ಕಾಕತಳೆಯವೋ, ಏನೋ,,, ನಂಗಂತೂ,, ನಿಜವಾಗ್ಲೂ ಏನೋ ಒಂದು ತರ ವಿಚಿತ್ರ ಅನುಭವ....ನಾನು ಯಾವೊತ್ತು ದೆವ್ವ ಬೂತ ಅಂತ ನಂಬೋದಿಲ್ಲ... ಹಾಗೆ ಎಸ್ಟೋ ಸಲ ನೈಟ್ ದೆವ್ವದ ಪಿಕ್ಚರ್ ನೋಡಿ ಮಲ್ಕೊಂಡ್ ಇದೇನೇ,, ಇವೊತ್ತು ಯಾಕೆ ಇಸ್ತೊಂದ್ ವಿಚಿತ್ರವಾಗಿ ಆಗ್ತಾ ಇದೆ ಅಂತ ನಂಗೆ ಆಶ್ಚರ್ಯ.....!!!! ಇದೆಲ್ಲ ಏನೋ ನನ್ನದೇ ಬ್ರಮೆ,,, ಏನು ಇಲ್ಲ ಸುಮ್ನೆ ನಾನೇ ಏನೇನೊ ಅನ್ನ್ಕೊಥ ಇದೇನೇ ಅಂತ ಧೈರ್ಯ ಮಾಡಿ,,, ಕಿವಿಗೆ ಹತ್ತಿ ಇಟ್ಕೊಂಡ್ ಮಲ್ಕೊಂಡೆ.....

ಶನಿವಾರ ಬೆಳಿಗ್ಗೆ ಕ್ರಿಕೆಟ್ ಆಡೋ ಅಭ್ಯಾಸ,,, ಅದರ ನನ್ನ frnds ಇವೊತ್ತು ಫೋನ್ ಮಾಡಿ ಎಬ್ಬಿಸಲಿಲ್ಲ ರಾತ್ರಿ ತುಂಬ ತಡವಾಗಿ ಮಲ್ಕೊಂಡ್ ಇದ್ದಕ್ಕೆ ಬೆಳಗ್ಗೆ ಲೇಟ್ ಆಗಿ ಎಚ್ಚರ ಆಯಿತು... ಬೆಳಿಗ್ಗೆ ಎದ್ದಾಗ,,ಸ್ವಲ್ಪ ಹೊತ್ತು ನೆನ್ನೆ ರಾತ್ರಿ ಆದ ಅನುಭವದ್ದೆ ಯೋಚನೆ,, ಯಾಕೆ ಹೀಗೆ ಆಯಿತು... ಏನು ಇಲ್ಲ ಅಂದ್ರೆ ತಪ ತಪ ಅಂತ ಜೋರ್ ಆಗಿ ಶಬ್ದ ಬಂದಿದ್ದು ಸುಳ್ಳ... ಇದು ನನ್ನ ಬ್ರಮೆನ....ಏನೋ ಇರಬೇಕು ಇದಕ್ಕೆ ಯಾಕೋ ಇಸ್ತೊಂದ್ ಇಂಟರೆಸ್ಟ್ ಕೊಡಬೇಕು ಅಂತ ಮರೆತು ನನ್ನ ವೀಕ್ ಎಂಡ್ ಪ್ಲಾನ್ಸ್ ಬಗ್ಗೆ ಥಿಂಕ್ ಮಾಡ್ತಾ ಎದ್ದು ಹೋದೆ....ಮುಂದುವರಿಯುವುದು.......

(ಶನಿವಾರ ರಾತ್ರಿನೂ ಅದೇ ತರಹದ ಟಪ್ ಅಂತ ಜೋರಾಗಿ ಕೀಳಿಸ್ತ ಇರೋ ಶಬ್ದ... !!!ಇವೊತ್ತು ಎರಡರಲ್ಲಿ ಒಂದು ತೀರ್ಮಾನ ಆಗಬೇಕು,, ಇದು ಏನು ಎಲ್ಲಿಂದ ಬರ್ತಾ ಇದೆ,, ಅದು ಯಾಕೆ ಹೀಗೆ sudden ಆಗಿ ನನ್ನ ತಲೆ ತಿಂದ ಇದೆ.. ಕೊನೆಗೂ, ಈ ಭೂತ ಚೀಸ್ಟೇ ನ ರಾತ್ರಿ ಎಲ್ಲ ಎದ್ದು ಕಂಡುಹಿಡಿದ ರೀತಿ ...... ಮುಂದಿನ ಪೋಸ್ಟ್ ನಲ್ಲಿ )
 
(Photo :- Internet )

Wednesday, January 6, 2010

Sidewalk-Art---ರೋಡ್ ಸೈಡ್ ನ 3d ಪೇಂಟಿಂಗ್ ಮತ್ತೆ ಬಂದಿದೆ!!!!!!!


ರೋಡ್ ಸೈಡ್ ನ 3d ಪೇಂಟಿಂಗ್ ಮತ್ತೆ ಬಂದಿದೆ,,, ಹೊಸ ವರ್ಷದ ಸಲುವಾಗಿ ಈ ಹವ್ಯಾಸಿ ರೋಡ್ ಸೈಡ್ painters ಮತ್ತೆ ತಮ್ಮ ಚಮತ್ಕಾರ ತೋರಿಸಿದ್ದಾರೆ, ಇದಕ್ಕೂ ಮೊದಲು ನನ್ನ ಬ್ಲಾಗಿನಲ್ಲಿ ಈ ಹವ್ಯಾಸಿ ತಂಡದ ಬಗ್ಗೆ ಕೆಲವು ಲೇಖನಗಳನ್ನ ಚಿತ್ರ ಸಮೇತ ಬರೆದಿದ್ದೆ, ಇವಾಗ ಮತ್ತೆ ಇವರ ಕೈಚಳಕ ನೋಡಿ ಕಣ್ಣ ತುಂಬಿಸಿಕೊಳ್ಳಿ.... ಈ ರೋಡ್ ಸೈಡ್ ಪೈಂಟರ್ ಗಳಿಗೆ ಒಂದು ಸ್ಪರ್ದೆ ನಡೆಯುತ್ತೆ ಸ್ಪೇನ್ ಮತ್ತೆ ಯುರೋಪ್ ನಲ್ಲಿ, ಅಲ್ಲಿನ ಕೆಲವು amezing ಪೇಂಟಿಂಗ್ ಚಿತ್ರಗಳನ್ನ ನನ್ನ ಮುಂದಿನ ಬ್ಲಾಗಿನಲ್ಲಿ ಹಾಕುವೆ,, ಅಲ್ಲಿವರೆವಿಗು ಇವರ ಈ ಪೇಂಟಿಂಗ್ ನೋಡ್ತಾ ಇರಿ.....:-)

ಇವರ ಬಗ್ಗೆ ಎಲ್ಲ ನನ್ನ ಹಿಂದಿನ ಲೇಖನದಲ್ಲಿ ಬರಿದಿದ್ದೆ ಇನ್ನು ಹೆಚ್ಚಿಗೆ ಬರೆಯುವುದು ಏನು ಇಲ್ಲ ಅಂತ ಅನ್ಕೊಂಡ್ ಇದೇನೇ, ಇವರ ಈ ಕಲೆ ನೋಡಿ ಬೆರಗಾಗಿ, ವಾಹ್ ಅಂತ ಅನ್ನಬೇಕು ಅಸ್ಟೇ.... ಅಲ್ವ

ಇಂತಹ ಅದ್ಬುತ ಚಮತ್ಕಾರದ ಕೈ ಚಳಕಕ್ಕೆ ನನ್ನ ದೊಡ್ಡ ಸಲಾಂ.... !!!!!

ಈ ಹವ್ಯಾಸಿ ಪೈಂಟರ್ ಹಾಗು ತಂಡದ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ .

ನಿಜವಾಗಲು AMAZING paintings......!!!!!!! http://guruprsad.blogspot.com/2009/03/amazing-paintings.html
3D paintings.. ಮತ್ತೆ ಬಂದಿದೆ,,, !!!!! http://guruprsad.blogspot.com/2009/06/3d-paintings.html