Tuesday, January 12, 2010

ಕೊನೆಗೂ ನನ್ನ ಕೈ ಗೆ ಸಿಕ್ಕಿ ಬಿದ್ದ ಭೂತ .....!!!!!--ಭಾಗ ೨

ಶನಿವಾರ, ಹೇಗೆ ಕಳಿತೋ ಗೊತ್ತಾಗಲಿಲ್ಲ,,, ಎಸ್ಟೊಂದು ಕೆಲಸಗಳು.....ಎಲ್ಲ ಮುಗಿಸಿ,, ಸಂಜೆ ಆರಾಮವಾಗಿ ಟಿವಿ ನೋಡಿ ಊಟ ಮಾಡೋ ಹೊತ್ತಿಗೆ ಆಗಲೇ ೯:೩೦ ಆಗಿತ್ತು,,, ಬೇಗ ಊಟ ಮುಗಿಸಿ ಇನ್ನು ಸ್ವಲ್ಪ ಹೂತು ಟಿವಿ ನೋಡ್ಕೊಥ ಕೂತಿದ್ದೆ.. ಆಮೇಲೆ ಮಲ್ಕೊಳನ ಅಂತ ಬಂದೆ .... ನಿಜ ಹೇಳಬೇಕು ಅಂದ್ರೆ ನೆನ್ನೆ ಆಗಿದ ಘಟನೆ ಮರೆತೇ ಹೋಗಿತ್ತು....
ಹಾಗೆ ಮಲ್ಕೊಂಡೆ....ಇದ್ದಕ್ಕೆ ಇದ್ದ ಹಾಗೆ ನೆನ್ನೆಯ ಘಟನೆ ನೆನಪಿಗೆ ಬಂತು,,, ಹೌದು,,,ನೆನ್ನೆ ಏನೋ ಸೌಂಡ್ ಕೇಳಿಸ್ತಾ ಇತ್ತಲ್ವ,, ಅದು ಏನ್ ಇರಬಹುದು,, ಇವೊತ್ತು ಕೇಳಿಸಬಹುದ,,,,,?  ನೆನ್ನೆ ಏನೋ ದೆವ್ವ ಭೂತ ಅಂತ ಫಿಲಂ ನೋಡಿದ್ದೆ ಅದಕ್ಕೆ ಹಾಗೆ ಅನ್ನಿಸಿರಬೇಕು,,, ಆದರೆ ಇವೊತ್ತು... ಇರಲಿ ಹಾಗೇನಾದರೂ ಕೇಳಿಸಿದರೆ ನೋಡೋಣ ಏನು ಅಂತ ಅಂದುಕೊಂಡು ಮಲಗಲಿಕ್ಕೆ ರೆಡಿ ಅದೇ.....
ಒಂದು ೫ ನಿಮಿಷ ಕೂಡ ಆಗಿರಲಿಲ್ಲ.... ನೆನ್ನೆ ಕೇಳಿಸಿದ ಥರಾನೆ ಸೌಂಡ್ ಕೇಳಿಸ್ತು,, ಅದು ನಾನು ಮಲಗಿರುವ  ಪಕ್ಕದಲ್ಲೇ....  ನಿಜವಾಗಲು ಈ ಶಬ್ದ ಎಲ್ಲಿಂದ   ಬರ್ತಾ ಇದೆ ಅಂತ ಗೊತ್ತಗೊವರ್ಗು ನಂಗೆ ನಿದ್ದೆ ಬರೋಲ್ಲ ಅಂತ confirm ಆಯಿತು...ಸರಿ ಆಗಿದ್ದು ಅಗಲಿ, ನೈಟ್ ಪೂರ್ತ ನಿದ್ದೆ ಮಾದಡಿದ್ರು ಪರವಾಗಿಲ್ಲ,, ಹೇಗೆ ಇದ್ರೂ ನಾಳೆ ಸಂಡೇ, ಬೆಳಗ್ಗೆ ಮಲಗಿಕೊಂಡರೆ ಆಯಿತು,,, ಆದರೆ  ಈ ನನ್ ಮಗಂದು ಶಭ್ದ ಎಲ್ಲಿಂದ ಬರ್ತಾ ಇದೆ ಅಂತ ನೋಡಲೇಬೇಕು ಅಂತ ಡಿಸೈಡ್ ಮಾಡಿ,,, ಎಲ್ಲ ಲೈಟ್ ಹಾಕಿ ಮಂಚದ  ಕೆಳಗೇ  ಕುಳಿತು ಕೊಂಡೆ.....ಸುತ್ತಲು ನೋಡಿದೆ... ಹಾಗೆ ಸೌಂಡ್ ಬರೋ  ಯಾವ ವಸ್ತುನು ಮಂಚದ ಹತ್ತಿರ ಇರಲಿಲ್ಲ.... ಮಲ್ಕೊಂಡ ಹಾಗ ಏನಾದ್ರೂ  ತಾಗಿ ಈ ರೀತಿ ಶಭ್ದ ಕೇಳಿಸ್ತಾ ಇರಬಹುದ ಅಂತ ಮಂಚನೆಲ್ಲ  ಜರುಗಿಸಿ ನೋಡಿದೆ ... ಹ್ಞೂ ಹ್ಞೂ ಏನು ಇರಲಿಲ್ಲ , , ಸರಿ ಆ  ಶಭ್ದ ಇನ್ನೊಂದು  ಸರಿ ಬರಲಿ  ಅಂತ wait ಮಾಡ್ತಾ ಇದ್ದೆ.. ಒಂದಂತು ಗೊತ್ತಿತ್ತು,, ದೆವ್ವನು ಇಲ್ಲ ಭೂತ ನು ಇಲ್ಲ ಇದು ಎಲ್ಲೊ ಏನೋ ತಾಗಿ ಇ ರೀತಿ ಶಬ್ದ ಬರ್ತಾ  ಇದೆ ಅಂತ.....ಆದರೆ ಅದು ಏನು ಅಂತ ಗೊತ್ತಾಗಬೇಕಿತ್ತು ಅಸ್ಟೇ ??... ಇಲ್ಲ ಅಂದ್ರೆ ನನ್ನ ತಲೆ ಹೊಕ್ಕಿರುವ ಹುಳ ಸುಮ್ಮನೆ ಆಗ್ತಾ ಇರಲಿಲ್ಲ ...
ಸ್ವಲ್ಪ ಹೊತ್ತು ಆಗಿರಲಿಲ್ಲ ಹಾಗೆ ಲೈಟ್ ಹಾಕಿ ಮಂಚದ ಕೆಳಗಡೆ ಕೂತು ಕೊಂಡು,,, ನೋಡ್ತಾ ಇದ್ದೆ ... sudden ಆಗಿ ಕರೆಂಟ್ ಹೋಯ್ತು....ಪೂರ್ತ ಕತ್ತಲು.. ಅದೇ ಸಮಯಕ್ಕೆ ಪಕ್ಕದ ಮನೆ  ನಲ್ಲಿ ಇರುವ ಒಂದು ಪಾಪು ಕೀಟಾರ್ ಅಂತ ಕಿರಿಚಿಕೊಂಡು  ಜೋರಾಗಿ ಅಳೋಕೆ ಶುರು ಮಾಡ್ತು.... ನನಗೆ ನಿಜವಾಗ್ಲೂ ಅ ಕ್ಷಣಕ್ಕೆ ಭಯ ಪಟ್ಕೊಬೇಕ ಬೇಡ್ವ ಅನ್ನೋ ಹಾಗೆ ಆಯಿತು....!!! , ಅವರ ಅಮ್ಮ ಮಗುನ ಹೊರಗಡೆ ಕರ್ಕೊಂಡ್ ಬಂದು ಸಮಾದಾನ ಮಾಡ್ತಾ ಇದ್ರೂ... ನನ್ನ ರೂಮಿನ ಕಿಟಕಿ, ಪಕ್ಕದ ಮಹಡಿ ಮನೆ ಗೆ ಹತ್ತಿರ   ಇದೆ... ನೈಟ್ ಬೇರೆ ಅಲ್ವ,,, ಸ್ವಲ್ಪ ಗದ್ದಲ ಆದರು ಚೆನ್ನಾಗಿ ಕೇಳಿಸುತ್ತೆ...  ಸರಿ ಇರಲಿ ಅಂತ ನಿದಾನಕ್ಕೆ ಮೊಬೈಲ್ ಲೈಟ್ ಆನ್ ಮಾಡಿಕೊಂಡು ಎಲೆಕ್ಟ್ರಿಕ್ rechargeble ಲೈಟ್ ಹಚ್ಚೋಣ ಅಂತ ಹೋದೆ ... ಇನ್ನೇನು ಹಚ್ಚ ಬೇಕು,,, ಟಕ್ ಅಂತ ಕರೆಂಟ್ ಬಂತು....ಅಲ್ಲ ಇ ಕರೆಂಟ್ ರಾತ್ರಿ 8 ಗಂಟೆ ಇಂದ 3 ಅಥವ 4 ಸರಿ ಹೋಗಿದೆ....ಬರಿ ಒಂದು 2 ನಿಮಿಷ ಹೋಗಿ ಹಾಗೆ ಬರ್ತಾ ಇದೆ... ಇದಕ್ಕೆ ನಾನು ಇಸ್ತೊಂದ್ ಭಯ ಪದಬೇಕ ಅಂತ ನನ್ನನ್ನೇ ನಾನು ಕೇಳಿಕೊಂಡು ಹಾಗೆ ಮನಸಿನಲ್ಲೇ ಯೋಚನೆ ಮಾಡ್ತಾ ಅಮ್ಮ ಇದ್ದ ರೂಮಿನ ಕಡೆಗೆ ಹೋಗಿ ನೋಡಿದೆ...ಪಾಪ ಅಮ್ಮ,, ಆರಾಮವಾಗಿ ಆಗಲೇ ಮಕ್ಕೊಂಡ್ ಬಿಟ್ ಇದ್ರೂ.....
ಸರಿ ನಂದೇ ಯಾಕೋ ಇವೊತ್ತು ಅತಿ ಆಯಿತು ಅಂತ ಬಂದು ನನ್ನ ರೂಂ ಬಾಗಿಲು ಹಾಕಿಕೊಂಡೆ,, ಲೈಟ್ ಎಲ್ಲ ಆನ್ ಆಗೇ ಇತ್ತು,,, ಇರಲಿ ಸುಮ್ಮನೆ ಯಾವುದೊ ಒಂದು ಸಣ್ಣ ಶಬ್ದ ಇಸ್ತೊಂದ್ ಆಟ ಅಡಿಸ್ತ ಇದೆ ಅಲ್ವ,, ಒಂದು ಕೈ ನೋಡೆ ಬಿಡೋಣ ಅಂತ ಕೂತ್ಕೊಂಡೆ....
ಒಂದೆರಡು ನಿಮಿಷ ಆಗಿತ್ತು,, ಕಂಪ್ಯೂಟರ್ ಟೇಬಲ್ ಹತ್ರ ಇರೋ ಕ್ರಿಯೇಟಿವ್ ದೊಡ್ಡ speaker ಕೀರ್.... ಕೀರ್.... ಕೊಯೂನೋ ಅಂತ ಜೋರಾಗಿ ಸೌಂಡ್ ಮಾಡೋಕೆ ಶುರು ಆಯಿತು.....ಇವಾಗ ನಿಜವಾಗ್ಲೂ ಸ್ವಲ್ಪ ಸಣ್ಣಗೆ ಭಯ ಆಯಿತು....sudden ಆಗಿ ಎದ್ದು ಹೋಗಿ ನೋಡಿದೆ,, ನನ್ನ ಬ್ಲಾಕ್ ಬೆರಿ ಮೊಬೈಲ್ Speaker ಹತ್ರನೇ ಇತ್ತು,,, ಯಾವುದೊ mail ಅಥವ sms ಬರ್ತಾ ಇತ್ತು ಅಂತ ಕಾಣುತ್ತೆ .. ಹಾಗೆ ಬರಬೇಕಾದರೆ speaker ಹತ್ರ ಏನಾದ್ರು ಮೊಬೈಲ್ ಇದ್ದರೆ ಅದರ vibrations speaker ನಿಂದ ವಿಚಿತ್ರ ಸೌಂಡ್ ಮಾಡಿಕೊಂಡು   ಬರುತ್ತೆ (ನಿಮಗೂ ಇದು ಅನುಭವ ಆಗಿರುತ್ತೆ ಅಲ್ವ :-) ) ... ಅಲ್ಲ ಇದೆಲ್ಲ ಮಾಮೂಲಿ ಯಾಗಿ ಆಗುವ ಅನುಭವಗಳು ಆದರೆ ಇವೊತ್ತು ಯಾಕೆ ಇಸ್ತೊಂದ್ ವಿಚಿತ್ರ ಅಂತ ಅನಿಸ್ತ ಇದೆ.....ಈ ಪ್ರಶ್ನೆಗೆ ನನ್ನ ಬಳಿನೂ ಉತ್ತರ ಇರಲಿಲ್ಲ  !!!!
ಸರಿ ಏನಾದ್ರು ಹಾಳಾಗಿ ಹೋಗಲಿ,,,ಒಟ್ನಲ್ಲಿ ಆ ಟಪ್ ಟಪ್ ಅಂತ ಬರೋ ಶಬ್ದ ಎಲ್ಲಿಂದ ಬರ್ತಾ ಇದೆ ಅಂತ ಗೊತ್ತಾಗಲೇ ಬೇಕಾಗಿತ್ತು,,, ಇಲ್ಲ ಅಂದರೆ, ಇವಾಗ ಸಣ್ಣದಾಗಿ ಹುಟ್ಟಿರುವ ಭಯ ನಿಜವಾಗ್ಲೂ ಭಯ ಪಟ್ಟು ಕೊಳ್ಳ ಬೇಕಾದ ಸಂದರ್ಬ ಬರಬಹುದೆಂದು ನನ್ನೊಳಗೆ ಒಂದು ಸಣ್ಣ ಭಯ ಸ್ಟಾರ್ಟ್ ಆಯಿತು....
ಅದು ಏನು ಆಗುತ್ತೋ ಅಗಲಿ  "ALL is WELL " ಅಂತ  3 ediots ನ ಅಮೀರ್ ಖಾನ್ ಡೈಲಾಗ್ ನೆನಪಿಸಿಕೊಂಡು, ನನಗೆ ನಾನೇ ಸಮಾದಾನ ಮಾಡಿಕೊಂಡು ಅ ನಿಶಬ್ದ ವಾದ ರಾತ್ರಿ ನಲ್ಲಿ ಒಬ್ಬನೇ ಎಲ್ಲ ಲೈಟ್ ಆನ್ ಮಾಡಿಕೊಂಡು ಚಕ್ಕ೦ಬಕ್ಕ್ಲ ಹಾಗಿಕೊಂಡು ನೆಲದ ಮೇಲೆ ಕುಳಿತುಕೊಂಡೆ......!!!
... ಕೊನೆ ಸರಿ ಆ ಶಬ್ದ ಬಂದಾಗ ನೋಡಿದ ಜಾಗದ ಕಡೆನೇ ಒಂದೇ ದೃಷ್ಟಿಯಲ್ಲಿ ನೋಡುತ್ತ ಕೂತ್ಕೊಂಡ್ ಇದ್ದೆ....
೫ ನಿಮಿಷ ಆಯಿತು....
೧೦ ನಿಮಿಷ ಆಯಿತು....
೧೫  ನಿಮಿಷ ಆಯಿತು.....
ಆಗ ಮತ್ತೆ ಕೇಳಿಸಿತು ನೋಡಿ ಆ ಸಣ್ಣಗಿನ ಶಬ್ದ.... ಅದೇ  ಟಪ್,, ಟಪ್ ಅನ್ನೋ ಶಭ್ದ ಬಂತು.....ಅವಾಗ ಸರಿಯಾಗಿ ಕಾಣಿಸ್ತು ಅದು ಎಲ್ಲಿಂದ ಬರ್ತಾ ಇದೆ ಅಂತ........
"ಆ ಶಬ್ದ ಬರ್ತಾ ಇದ್ದದ್ದು ಒಂದು ಪ್ಲಾಸ್ಟಿಕ್ ನೀರಿನ bottel ನಿಂದ".... usually ನಾನು ನೀರು bottel ನಲ್ಲೆ ಕೂಡಿಯೋದು,, ಸೊ ಯಾವುದೊ bisilary bottel ನಲ್ಲಿ ನೀರು ತುಂಬಿಸಿಕೊಂಡು ಮಂಚದ ಹತ್ತಿರ ಇಟ್ಕೊಂಡ್ ಇದ್ದೆ .. bottel ಸ್ವಲ್ಪ ತೆಳ್ಳಗೆ ಇತ್ತು , ನೀರು ಕುಡಿಬೇಕಾದರೆ,, ಸ್ವಲ್ಪ ಏರ್ ಹೊರಗೆ ಹೋಗಿ, bottel ಸ್ವಲ್ಪ ತಗ್ಗಿದ ಹಾಗೆ ಹಾಗಿತ್ತು,, ಹಾಗೆ ನಿದಾನಕ್ಕೆ ಗಾಳಿ ಹೋಗ್ತಾ,,,ತಗ್ಗಿದ bottle ಟಪ್ ಟಪ್ ಅಂತ ಸೌಂಡ್ ಮಾಡಿ reshink ಆಗ್ತಾ ಇತ್ತು... ಆದೇ ಸೌಂಡ್ ನಿಶಬ್ದ ರಾತ್ರಿ ನಲ್ಲಿ ಫುಲ್ ಸೈಲೆಂಟ್ ಆಗಿ ಇರೋವಾಗ... ನನಗೂ... ಕೇಳಿಸ್ತಾ ತಲೆ ತಿಂತಾ ಇದ್ದದ್ದು.....ಸರಿ ಇದು ಭೂತದ ಕತೆ ಅಲ್ಲ bottel ದು ಅಂತ ಗೊತ್ತಾಗಲಿಕ್ಕೆ ಜಾಸ್ತಿ ಸಮಯ ಬೇಕಾಗಲಿಲ್ಲ... :-)

ಮನುಷ್ಯ ಒಂದು ಚೂರು ಭಯದ ವಾತಾವರಣಕ್ಕೆ ಸಿಕ್ಕರೆ ಹೇಗೆ ಆಗುತ್ತೆ ಅಲ್ವ....  ಅವಾಗ ನೆರಳು ನೋಡಿದರು ಭಯ ಪಟ್ಕೊಲ್ಲೋ ಸ್ತಿತಿಗೆ ಹೋಗಿರ್ತೇವೆ ....
ಇದೆ ರೀತಿ ದೆವ್ವ ಭೂತ ಇಲ್ಲದೆ ಇರದಿದ್ರು,,, ಕೆಲವೊಂದು ಸರಿ,,, ಮಾನಸಿಕೆ ಉದ್ವೇಗ,, ಮತ್ತೆ ಭ್ರಮೆ ಗೆ ಒಳಗಾಗಿ, ನಾವು  ಹೆದರಿಕೊಂಡು ನಂಬಿರ್ತೇವೆ....  ನನ್ನ ಅನಿಸಿಕೆ ಪ್ರಕಾರ ದೆವ್ವ ಭೂತ ಇದೆಲ್ಲ ಏನು ಇಲ್ಲ..... ಮೊನ್ನೆ ಟಿವಿ ನಲ್ಲಿ ಕನ್ನಡ ಮೂವಿ "ಶಶಿರ "  ವಿಮರ್ಶೆ ನೆದಿತ  ಇತ್ತು,, ಚಿತ್ರ ನಟಿ ಪ್ರೇಮ, director , ಎಲ್ಲ ಮಾತಾಡ್ತಾ ಇದ್ರೂ,, ಅದರಲ್ಲಿ ಅವರು ಒಂದು ಪಾಯಿಂಟ್ ಹೇಳಿದ್ರು,, " ಮನುಷ್ಯ ಸತ್ತ ಮೇಲೆ, ದೇಹ ಮಾತ್ರ  ಸಾಯುತ್ತೆ, ಆದರೆ ಆತ್ಮ ಸಾಯೋದಿಲ್ಲ.. ಹಾಗೆ ಈ ಆತ್ಮ ದೆವ್ವ ಆದಾಗ ಅದಕ್ಕೆ ಬಿಳಿ ಸೀರೆ ಎಲ್ಲಿ ಸಿಗುತ್ತೆ... ಅಂತ...?
ಹೌದು ಅಲ್ವ,,, ನಾವು  ದೆವ್ವ ಭೂತ , ಅಂದಾಗ ನೆನಪಾಗುವುದು,, ಬಿಳಿ ಸೀರೆ ಉಟ್ಟು,, ಅಲೆದಾಡುವ ಹೆಣ್ಣು ... ಸೊ ಅದಕ್ಕೆ ಬಿಳಿ ಸೀರೆ ಸತ್ತ ಮೇಲೆ ಯಾರು ಕೊಡುತ್ತಾರೆ....? ಇದೆಲ್ಲ  ನಂಬ ಬೇಕ?
ಅದಿರಲಿ, ಪಾಪ ನಮ್ಮ "ವಿಷ್ಣುವರ್ಧನ " ಸತ್ತು ಹೋಗಿ ಇನ್ನು ಒಂದು ವಾರ ಸಹ ಆಗಿಲ್ಲ,,, ಅವಾಗಲೇ,, ಇದು,,"ನಾಗವಲ್ಲಿ" ಇಂದ ಆಗಿದ್ದು, ಅವರು ಮಾಡ್ತಾ ಇರೋ ಫಿಲಂ ನಿಂದನೆ ಆಗಿದ್ದು ಅಂತ ಎಲ್ಲ ಹೇಳ್ತಾ ಇದ್ದರೆ? ಇದು ನಿಜಾನ? ಟಿವಿ ಚಾನೆಲ್ ನವರು ತಮ್ಮ TRP ಗೋಸ್ಕರ ಒಂದು ಹೆಜ್ಜೆ ಮುಂದೆ ಹೋಗಿ,, ಅದರ ಬಗ್ಗೆನೇ ಒಂದು ಎಪಿಸೋಡ್ ಪೂರ್ತ ತೋರಿಸ್ತಾ ಇದ್ದಾರೆ .... ಇದನ್ನೆಲ್ಲಾ ನೋಡ್ತಾ ಇದ್ರೆ,, ನಿಜವಾಗ್ಲೂ ಸಿಲ್ಲಿ ಅಂತ ಅನ್ನಿಸೋಲ್ವ.....
ಏನ್ ಜನಗಳೋ... ಏನೋ

.... ಏನ್ ಭೂತನೋ,, ದೆವ್ವನೋ,,, ನನಗಂತು ಒಂದು ಗೊತ್ತಿಲ್ಲ....ನಾನು ಅಂತು ನಂಬೋದು ಇಲ್ಲ.......... :-) ಇನ್ನು ನೀವು ?

15 comments:

  1. ಗುರು.....ಏನಿದು..? ಚಿತ್ರ, ವಿಚಿತ್ರ ಕಲೆ, ಹೀಗೆ ಹಲವು ವಿಷಯಗಳ ‘ಗುರುಛಾಪ್‘ ಹೋಗಿ ‘ದೆವ್ವ‘ ಭೂತ‘ ಹೀಗೆ....ನಮ್ಮ ಮೆದುಳಿಗೂ ಭೂತ ಬಿಟ್ರಲ್ಲಾ...?
    ಕೊನೆಗೂ ಇದು ಏನು ಅಂತ ಗೊತ್ತಾಯಿತಲ್ಲ...ನನಗೂ ಒಂದು ಇಂತಹುದೇ ಅನುಭವ ಆಗಿತ್ತು...ನಿಮ್ಮ ಪ್ರೇರಣೆ ಆಗಿದೆಯಲ್ಲಾ ಹಾಕ್ತೇನೆ...

    ReplyDelete
  2. ಏನ್ರೀ ಗುರು, ಬಾಟ್ಟೆಲ್ ಹಿಡಿದರೆ ದೆವ್ವ ಭೂತಗಳು ಹಾಣ್ಸೋದು ಕೇಳಿದೀನಿ. ನೀವು ಬಾಟಲನ್ನೇ ದೆವ್ವ ಅಂದ್ಕೋಣ್ಡ್ರಾ?
    ಒಳ್ಳೆ ಕಥೆ ನಿಮ್ದು.

    ReplyDelete
  3. ಗುರು,
    ಮಲಗುವಾಗ ಆಗಿದೆ...ಮದ್ಯರಾತ್ರಿ ಆಗಿದ್ರೆ ಇನ್ನು ಎಷ್ಟು ಹೆದರುತ್ತಿದ್ರೊ....
    ಚೆನ್ನಾಗಿದೆ ನಿರೂಪಣೆ...

    ReplyDelete
  4. ಹಹ್ಹಃ
    ಗುರು
    ಭೂತದ ಕಥೆ ಚೆನ್ನಾಗಿದೆ
    ನನಗೂ ಕೆಲವೊಮ್ಮೆ ಹಳ್ಳಿಗೆ ಹೋದಾಗ ಭೂತ ಇದೆ ಎಂದು ಜನ ಹೆದರಿಸುತ್ತಾರೆ

    ReplyDelete
  5. ಗುರು,

    ನಿಮ್ಮ ದೆವ್ವ ಕೊನೆಗೂ ಸಿಕ್ಕಿಹಾಕಿಕೊಂಡಿತಲ್ಲ. ನಾನು ಏನೋ ಅಂದುಕೊಂಡಿದ್ದೆ. ನೀವು ಅದನ್ನು ಇಷ್ಟೊಂದು ಕುತೂಹಲಬರಿತವಾಗಿ ವರ್ಣಿಸಿದ್ದು ನೋಡಿದ್ರೆ ಏನೋ ಇರಬೇಕು ಅನ್ನಿಸಿತ್ತು.

    ನೀವು ಚೆನ್ನಾಗಿ ಇಂಥ ವಿಚಾರಗಳನ್ನು ವರ್ಣಿಸುತ್ತೀರಿ...

    ReplyDelete
  6. :-) ha ha chennagide nimma bottle boothada kathe

    ReplyDelete
  7. ಜಲನಯನ,,,
    ಸುಮ್ನೆ ಸಾರ್ ಸ್ವಲ್ಪ ಚೇಂಜ್ ಇರಲಿ ಅಂತ .....ಪ್ರತಿಸಾರಿ,,,ಹೊಸ creativity ನೋಡಿ ಖುಷಿ ಪಡ್ತಾ ಇದ್ರಿ,,, ಇದೊಂದು ತರ ನನ್ನ ಅನುಭವದ ಕತೆ ...
    ಅದಸ್ಟು ಬೇಗ ನಿಮ್ಮ ಅನುಭವವನ್ನು ಬೇಗ ಹೇಳಿ......

    ReplyDelete
  8. ರಾಜೀವ,,,
    ದೆವ್ವದ ಫಿಲಂ ಮಹಿಮೆ ರಾಜೀವ...... ಒಂದೊಂದ್ ಸರಿ ಹೀಗೆ ಅಲ್ವ. ಬಟ್ ನಾನಂತೂ ಇಂತದ್ದೆಲ್ಲ ನಂಬೋಲ್ಲ..... ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು

    ReplyDelete
  9. ಹೌದು ಸವಿಗನಸು,,,, ನನಗೆ ಅಂತ ಹೆದರಿಕೆ ಏನು ಇಲ್ಲ,,,, ಆದರೆ ಏನು ಇದು ಅಂತ,,, ತಲೆ ಕೆಡಿಸಿಕೊಂಡ್ ಇದ್ದೆ ಅಸ್ಟೇ

    ReplyDelete
  10. ಹೌದು ಶಿವ ಪ್ರಕಾಶ್,,,,
    All izz well now :-).....

    ReplyDelete
  11. ಹಾ ಹಾ ,, ಧನ್ಯವಾದಗಳು ಗುರು ಸರ್.... ಸುಮ್ನೆ ಹಾಗೆ ನನ್ನ ಅನುಭವವನ್ನು ಹೇಳಿದೆ ಅಸ್ಟೇ.... ಇದೆಯೋ ಇಲ್ವೋ,,,, ನಂಗಂತೂ ಗೊತ್ತಿಲ್ಲ....

    ReplyDelete
  12. ಹಾ ಹೌದು ಶಿವೂ,,,, ಕೊನೆಗೂ,, ಸಿಕ್ತು....ಬೋತ್ತೆಲ್ ದೆವ್ವ :-)
    ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  13. ಹಾ,, ಥ್ಯಾಂಕ್ಸ್ ನಿಶಾ....ನಿಮ್ಮ ಪ್ರತಿಕ್ರಿಯೆಗೆ ...:-)

    ReplyDelete
  14. antu intu boota siktalla sir :) nice one :)

    ReplyDelete