Showing posts with label amezing. Show all posts
Showing posts with label amezing. Show all posts

Friday, May 3, 2019

ಗೊರವಂಕ - ಮೈನ - common myna

ಗೊರವಂಕ 

ಕಪ್ಪು ಮಿಶ್ರಿತ ಕಂದು ಮೈಬಣ್ಣ, ರೆಕ್ಕೆಯಲ್ಲಿ ಬಿಳಿ ಬಣ್ಣದ ರೇಖೆ, ಕಪ್ಪು ತಲೆ, ಕಣ್ಣಿನ ಸುತ್ತ ಹಳದಿ ಬಣ್ಣದ ,  ಕಾಲು ಹಾಗು ಕೊಕ್ಕು ಹಳದಿ ಬಣ್ಣ,   ಸಾಮಾನ್ಯವಾಗಿ ಇದು ಗುಂಪಾಗಿ ಅಥವಾ ಜೋಡಿ ಯಾಗಿ ಇರುತ್ತವೆ...  ಈ ಹಕ್ಕಿಯು ಆಕ್ರಮಣಶೀಲ ಕ್ಕೆ ಹೆಸರು ವಾಸಿಯಾಗಿದ್ದು... ತನ್ನ ಗೂಡುಗಳ ಹತ್ತಿರ ಬರುವ ಬೇರೆ ಪಕ್ಷಿಗಳನ್ನು ಓಡಿಸುತ್ತಾ .. ಇರುತ್ತವೆ... ಏಷ್ಯಾ ದಲ್ಲಿ ಎಲ್ಲಕಡೆ ಸಾಮಾನ್ಯವಾಗಿ ಕಾಣಸಿಗುವ ಇವು ಪ್ರಪಂಚದ ಬೇರೆ ಭಾಗ ಗಳ್ಳಿ  ಕಾಣಸಿಗುತ್ತವೆ ...

ನಮ್ಮ ಮನೆಯ ಹತ್ತಿರದ ಆಲದ ಮರದ ಸಮೀಪ ಹಾಗೆ ಕುಳಿತು ಇದರ ಹಾಗು ಗಿಳಿ ಗಳ  ಚಲನ ವಲನ ವನ್ನು ಅಭ್ಯಸಿಸುತ್ತಾ ಇದ್ದೆ...  ಗುಂಪಾಗಿ ಇದ್ದ ಈ ಗೊರವಂಕ ಅಥವಾ ಮೈನ ... ಮರದ ಹಣ್ಣುಗಳನ್ನೂ, ಹಾಗು ಕೀಟಗಳನ್ನು ಬಹಳ ಶಬ್ದ ಮಾಡಿಕೊಂಡು ತಿನ್ನುತ್ತಾ ಇತ್ತು...  ಇದ್ದಕ್ಕೆ ಇದ್ದ ಹಾಗೆ ಎಲ್ಲ ಮೈನ ಗಳು  ಸುಮಾರು ಒಂದು ೨೦ ರಿಂದ ೨೫ ಇರಬಹುದು,  ಒಂದು ಚಿಕ್ಕ ಮರದ ಹತ್ತಿರ ಒಟ್ಟಿಗೆ ಸೇರಿಕೊಂಡು ಜೋರಾಗಿ ಚೀರಾಡಲು ಶುರು ಮಾಡಿತು....  ನಾನು ಕುತೂಹಲ ದಿಂದ ಏನಿರಬಹುದು ಅಂತ ನೋಡುತ್ತಾ ಇದ್ದೆ.  ಒಂದೆರಡು ನಿಮಿಷ ಜೋರಾಗಿ ಗಲಾಟೆ ಮಾಡಿ... ಒಂದ್ದು ದೊಡ್ಡ ರಾಪ್ಟರ್ ಹಕ್ಕಿ ಶಿಕ್ರಾ ಅನ್ನು ಓಡಿಸಿಕೊಂಡು  ಹೋದವು...  ಶಿಕ್ರಾ ಇದು hawk  ಅಥವಾ ಗಿಡುಗ ಜಾತಿಗೆ ಸೇರಿದ ಹಕ್ಕಿ, ಸಣ್ಣ ಪುಟ್ಟ ಹಕ್ಕಿಗಳನ್ನು ಹಾರಾಡುತ್ತಲೇ ತಿನ್ನುತ್ತವೆ.....  ಇದು ಬಂದಿರುವುದನ್ನು ಗಮನಿಸಿದ ಮೈನ .. ಎಲ್ಲ ಒಟ್ಟುಗೂಡಿ ... ಇದನ್ನು ಓಡಿಸಿದವು ...ಹಾಗೆ ಕಾಗೆಗಳು ಜೊತೆಗೆ ಸೇರಿಕೊಂಡವು....
ಇದರ ಆಕ್ರಮಣ ಶೀಲತೆ ಹಾಗು ಗುಂಪಿನ ಒಗ್ಗಟ್ಟು ನೋಡಿ ಬೆರಗಾದೆ....



Monday, December 13, 2010

ಪೆನ್ಸಿಲ್ ಲೆಡ್ ನಲ್ಲೆ ಅರಳುವ ಇವರ ಕಲೆ ಅದ್ಬುತ...


ನಮಸ್ಕಾರ....


ತುಂಬಾ ದಿನಗಳ ಬಳಿಕ, ನನ್ನ ನೆಚ್ಚಿನ ಬ್ಲಾಗ್ ಲೋಕದ ಕಡೆ ತಲೆ ಹಾಕ್ತಾ ಇದೇನೇ,,,, ಮದುವೆ ಗಲಾಟೆ, ಹಾಗು ಕೆಲಸದ ಒತ್ತಡಗಳ ನಡುವೆ.....ನನ್ನ ಈ ಹವ್ಯಾಸ ತಪ್ಪೇ ಹೋಗಿತ್ತು.....ಕಳೆದ ೨ ತಿಂಗಳಿನಿಂದ ನನ್ನ ಬ್ಲಾಗ್ ಅಪ್ಡೇಟ್ ಮಾಡೋದು ಇರಲಿ,,, ಬೇರೆಯವರ ಬ್ಲಾಗ್ ಅನ್ನು ಓದೋಕು ಟೈಮ್ ಇರಲಿಲ್ಲ..... ಕೊನೆಗೂ,, ಸ್ವಲ್ಪ ಫ್ರೀ ಮಾಡಿಕೊಂಡು ಇದರ ಕಡೆ ಬಂದಿದ್ದೇನೆ......

ನಮ್ಮ ಬ್ಲಾಗ್ ಸ್ನೇಹಿತರ ತುಂಬಾ ಒಳ್ಳೆಯ ಲೇಖನಗಳನ್ನು,, ಕವನಗಳನ್ನು ಮಿಸ್ ಮಾಡಿಕೊಂಡೆ ಅಂತ ಕಾಣುತ್ತೆ... ಇರಲಿ... ನಿದಾನಕ್ಕೆ ಸಮಯ ಸಿಕ್ಕಾಗ ,,, ನೋಡಿ ಪ್ರತಿಕ್ರಿಯಿಸುತ್ತೇನೆ .....

ಇವಾಗ ಮತ್ತದೇ ನನ್ನ ಹುಡುಕಾಟದ ಅದ್ಬುತ ವಿಸ್ಮಯಗಳ ವಿಚಾರಗಳೊಂದಿಗೆ ನಿಮ್ಮ ಮುಂದೆ ಬರ್ತಾ ಇದೇನೇ...

ನನ್ನ ಹಿಂದಿನ ಬ್ಲಾಗ್ ಗಳಲ್ಲಿ... ಪೆನ್ಸಿಲ್ ನ ಚಿತ್ತಾರದ.. ಪೆನ್ಸಿಲ್ ಅನ್ನೇ ಉಪಯೋಗಿಸಿ ಅದರಿಂದ ಮಾಡಿದ ಕಲಾಕ್ರುತಿಗಳನ್ನ ಹಾಗು ಅದರ ಬಗ್ಗೆ ಹೇಳಿದ್ದೆ( http://guruprsad.blogspot.com/2009/10/blog-post_22.html).... ಅಲ್ವ... ಹಾಗೆ ಇಲ್ಲಿ ನೋಡಿ, ಯಾರೋ ಒಬ್ಬ ಭೂಪ,,, ಪೆನ್ಸಿಲ್ ಮುಂದಿನ ಲೆಡ್ ನಿಂದಲೇ ಬೆರಗಾಗುವ ರೀತಿನಲ್ಲಿ ತನ್ನ ಕಲೆ ಯನ್ನು ಒರೆಗೆ ಹಚ್ಚಿದ್ದಾನೆ,,,, , ಅಕ್ಕಿ ಕಾಳಿನಲ್ಲಿ ಹೆಸರು ಬರೆಯೋದನ್ನು,,, ಗೋದಿ ಕಾಳಿನಲ್ಲಿ ಹೆಸರು ಬರೆಯೋದನ್ನು,,, ನೋಡಿದ್ದೇವೆ,,, ಆದರೆ ಚಿಕ್ಕ ಪೆನ್ಸಿಲ್ ಮುಂದಿನ ಲೆಡ್ ನಿಂದಲೇ,,,, ಅದ್ಬುತ ಎನಿಸುವ ಕಲೆಗಳನ್ನ ಮಾಡಿ ತನ್ನ ಚಮತ್ಕಾರ ತೋರಿಸಿರುವುದನ್ನು ನೋಡಿದ್ದೀರಾ.... ... ಪೆನ್ಸಿಲ್ ನ ಉಪಯೋಗಿಸಿಕೊಂಡೆ ಎಷ್ಟು ಒಳ್ಳೆಯ ಕಲಾಕೃತಿಗಳನ್ನ ಮಾಡುತ್ತಾರೆ ನೋಡಿ.... ಎಷ್ಟು ವಿಸ್ಮಯ ಅಲ್ವ....

ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ....

















Monday, October 4, 2010

ಟಿನ್ ನಲ್ಲೆ ಅರಳುವ.... ಅದ್ಬುತ ಕಲೆ... ಭಾಗ ೨...


ಕೆಲವು  ದಿನದ ಹಿಂದೆ. ಟಿನ್ ಆರ್ಟ್ ನಲ್ಲಿ... ಮಾಡಿರುವ...ಕಲೆ ಬಗ್ಗೆ ಹೇಳಿದ್ದೆ.... (http://guruprsad.blogspot.com/2009/04/tin.html ) ಇವಾಗ ಅಂತದ್ದೇ ಒಂದು.... ಕಲೆ ಬಗ್ಗೆ ಬರಿತಾ ಇದ್ದೇನೆ,,,

ಟಿನ್, ಕ್ಯಾನ್ ಗಳನ್ನು ಉಪಯೋಗಿಸಿ... ತರಹ ತರಹದ ಆಕೃತಿಗಳನ್ನ ಮಾಡಿದ್ದಾರೆ ನೋಡಿ....... ಏನನ್ನಾದರೂ ಮಾಡಲೇಬೇಕು ಅಂತ ಮನಸ್ಸಿದ್ದರೆ ಏನು ಸಿಕ್ಕರು...ಅದರಲ್ಲೇ ಅದ್ಬುತ ಕಲೆಗಳನ್ನ ಕಲಾಕೃತಿಗಳನ್ನ ಮಾಡಿಯೇ ತೀರುತ್ತಾರೆ.....

ಇಲ್ಲಿ ಕೆಳಗಡೆ ಕೊಟ್ಟಿರುವುದೆಲ್ಲ,,, ಟಿನ್ ಕ್ಯಾನ್ ಉಪಯೋಗಿಸಿಕೊಂಡು,,, ಮಾಡಿರುವ ಆಕೃತಿಗಳು... ಬೇರೆ ಬೇರೆ ಕಡೆಗಳಿಂದ ಕಲೆ ಹಾಕಿ,, ನಿಮ್ಮ ಜೊತೆ ಹಂಚ್ಕೊಥ ಇದ್ದೇನೆ,,, ಚೆನ್ನಾಗಿ ಇದ್ದರೆ ನೋಡಿ ಪ್ರತಿಕ್ರಿಯಿಸಿ....

 ಟಿನ್ ಮನೆ...


 ಟಿನ್ ಚಾಕು....
 ಟಿನ್ ಹುಳ.... :-)
 ಟಿನ್ ಬೊಂಬೆಗಳು...
 ಟಿನ್ ಪ್ಲೈನ್....:-)
 ಟಿನ್ ಜಿರಳೆ.....

 ಟಿನ್ ಗಾಡಿ....
 ಟಿನ್ ಗೋಪುರ...
 ಟಿನ್ ಡ್ರಾಗನ್...


 ಟಿನ್ ಫಿಶ್,,,




 ಟಿನ್ ಕಪ್.