Sunday, November 20, 2011

IT ಕಂಪನಿ ನಲ್ಲಿ... ಹೀಗೊಂದು ಕನ್ನಡ ರಾಜ್ಯೋತ್ಸವ ....2011

                                                                  
IT ಕಂಪನಿ ನಲ್ಲಿ... ಹೀಗೊಂದು ಕನ್ನಡ ರಾಜ್ಯೋತ್ಸವ ....




ನವೆಂಬರ್ ತಿಂಗಳು ಎಂದರೆ ಎಲ್ಲೆಲ್ಲು ಕನ್ನಡದ ಕರಲವ..... ಪ್ರತಿ ವರುಷದಂತೆ ಈ ವರ್ಷ ಕೂಡ... ನಮ್ಮ ಕಂಪನಿ ನಲ್ಲಿ ನಾವು ಸಹ ಅದ್ದೂರಿಯ ಕನ್ನಡ ರಾಜ್ಯೋತ್ಸವ ವನ್ನು ಆಚರಿಸಿದೆವು.... ಇವಗಿನ IT ಕಂಪನಿ ನಲ್ಲಿ ಕನ್ನಡ ಮಾತನಾಡಲು ಕೂಡ ಹಿಂಜೆರಿಯುವ ಈಗಿನ ಕಾಲದಲ್ಲಿ.... ಕನ್ನಡ ರಾಜ್ಯೋತ್ಸವ ನ ಅಂತ ನೀವು ಕೇಳಬಹುದು.... ಹೌದು.... ನಮ್ಮ ಕನ್ನಡ ಮಿತ್ರ ಬಂದುಗಳ ಸತತ ಪ್ರಯತ್ನ ದಿಂದ ನಮಗೆ ಇದು ಸಾಧ್ಯವಾಗಿದೆ....ಪ್ರತಿ ವರುಷ ಇದು ವೃದ್ದಿಸುತ್ತ ಇದೆ... ಈ ವರುಷ ವಂತು ಬೇರೆ ಬೇರೆ ರಾಜ್ಯದಿಂದ ಬಂದಿರುವ ಮಿತ್ರ ಸಹದ್ಯೋಗಿಗಳು ಕೈ ಜೋಡಿಸಿದರು... ನಾವು ನಿಜವಾಗ್ಲೂ ಅಂದುಕೊಂಡೆ ಇರಲಿಲ್ಲ ಇಷ್ಟು ಅದ್ದೂರಿಯಾಗಿ ನಡೆಯುತ್ತೆ ಅಂತ.....

ಐದು ವರುಷದ ಹಿಂದೆ.... Technical ಟೀಂ members ಸೇರಿ .. ನಮ್ಮ ಕಂಪನಿ ನಲ್ಲಿ ಕನ್ನಡ ರಾಜೋತ್ಸವ ವನ್ನು ಆಚರಿಸೋಣ ,,, ಒಂದು ದಿನ ಎಲ್ಲರೂ ಒಂದೇ T -shirt ನಲ್ಲಿ ಬರೋಣ ಅಂತ ಮಾತಡಿಕೊಂಡ್ ಸ್ಟಾರ್ಟ್ ಮಾಡಿದರು ....ಅಂದು,,, ಆ ಟೀಂ ನಲ್ಲಿ ಇರುವ ಕೆಲವರಿಗೆ ಮಾತ್ರ ಸಿಹಿಯನ್ನು ಹಂಚಿ...ಸರಳವಾಗಿ ಆಚರಿಸಿದರು..... ಅದೇ ಈಗ ವರ್ಷ ದಿಂದ ವರ್ಷ ಬೆಳೆದು ... ಈ ವರುಷ ಒಟ್ಟು 600 members ಕೈ ಜೋಡಿಸಿದ್ದರು....... ಎಲ್ಲಾ ೬೦೦ members ಒಂದೇ ರೀತಿ ಕನ್ನಡ ಪ್ರಿಂಟ್ ಇರುವ T -ಶರ್ಟ್ ಹಾಕಿ ಕೊಂಡು ಬಂದರೆ ಹೇಗೆ ಇರುತ್ತೆ ಅಲ್ವ..... :-)

ಹಾಂ ನಾವು ಬರಿ ಕನ್ನಡ ರಾಜ್ಯೋತ್ಸವ ಅಂತ ಮಾತ್ರ ಮಾಡಿ ಸುಮ್ಮನಾಗುತ್ತಿಲ್ಲ ಈ ಕಾರ್ಯಕ್ರಮಕ್ಕಾಗಿ... ಪ್ರತಿಯೊಬ್ಬರ ಹತ್ರ 300 Rs collect ಮಾಡ್ತೇವೆ... ಇದರಲ್ಲಿ,,, 150-160 Rs T-ಶರ್ಟ್ ಗೆ ಅಂತ.. ಮತ್ತೆ ಸ್ವಲ್ಪ ದುಡ್ಡು ಸ್ವೀಟ್ಸ್ ಗೆ ಅಂತ ಹೋಗುತ್ತೆ ಪ್ರತಿ ಸರಿ.. ನಂದಿನಿ ಪೇಡ ಮತ್ತೆ,,, ಸುಬ್ಬಮ್ಮ store ಕೋಡುಬಳೆ ಮಾತ್ರ ಕೊಡುತ್ತೇವೆ ... ಮಿಕ್ಕ ದುಡ್ಡಿನಲ್ಲಿ.... ಯಾವುದಾದರು charitige ... ದಿನಸಿ ರೂಪದಲ್ಲಿ.... ನಮ್ಮ ಕಡೆ ಇಂದ ಸಹಾಯ ಮಾಡುತ್ತೇವೆ.... ಕಳೆದ ವರುಷ ಅಂದ ಮಕ್ಕಳ ಶಾಲೆಗೆ , ಅಕ್ಕಿ , ಗೋದಿ, ಬೆಲ್ಲ, ಸಕ್ಕರೆ... ಇವುಗಳನ್ನು ಕೊಟ್ಟಿದ್ದೆವು... ಅದೇ ಈ ವರುಷ ನೆಲೆ ಎನ್ನುವ ಒಂದು ಬಡ ಮಕ್ಕಳ ಕಲ್ಯಾಣ ಸಂಸ್ಥೆ ಗೆ donate ಮಾಡಿದ್ದೇವೆ ..... ಅದರ details



1 Akki (Rice) 500 KG


2 Togari Bele (Toor Dal) 50 KG


3 Uddina Bele (Split Black Gram) 50 KG


4 Surya Kanti Yenne (Ruchi Gold Sunflower Oil) 2 Tin (30 Ltrs)


5 Avalakki (Beaten Rice) 60 KG


6 Sakkare (Sugar) 50 KG


7 Togari Bele (Toor Dal) 10 KG


8 Nirma Soap 200 Nos


9 Nirma Washing Powder 30 KG


10 Promise Tooth Paste 15 Nos


11 Medimix Soap 100 Nos


ಬರಿ ಕನ್ನಡ ಕಾರ್ಯಕ್ರಮ ಮಾತ್ರವಲ್ಲ ಇದರ ಜೊತೆ ಒಂದು ಸಣ್ಣ ಸಹಾಯ ನಮ್ಮ ತಂಡದ ಕಡೆ ಇಂದ... .. ಕನ್ನಡ ಕಂಪನು ... ಹರಿಸುವ ಹಾಗೆ.... ಒಂದು ಒಳ್ಳೆಯ ಕಾರ್ಯದಲ್ಲಿ ನಾವೆಲ್ಲಾ ಕೈಜೋಡಿಸಿ , ಭಾಗಿಯಗಿದ್ದೇವೆ ಎಂಬುದೇ ನಮ್ಮ ಸಂತೋಷ.......

ನೋಡಿ...ಇನ್ನು ನವೆಂಬರ್ ತಿಂಗಳು ಮುಗಿದಿಲ್ಲ.... ನಿಮ್ಮ ಕಂಪನಿ ಯಲ್ಲಿ... ಕನ್ನಡ ಸಹದ್ಯೋಗಿಗಳು ಇದ್ದರೆ... ನೀವು ಕೂಡ ಇಂಥ ಒಂದು ಕಾರ್ಯಕ್ರಮವನ್ನು ಮಾಡಬಹುದು..... ಆದಷ್ಟು ನಮ್ಮ ಕನ್ನಡದ ಕಂಪನ್ನು ... ನಮ್ಮ ನಾಡಿನ ಬಗ್ಗೆ ಮಾಹಿತಿಯನ್ನು ಕೊಡಬಹುದು.... ನಿಮಗೆ ಯಾವುದೇ ರೀತಿಯ ಸಹಾಯ ಬೇಕಾದಲ್ಲಿ ನಮ್ಮನು ಸಂಪರ್ಕಿಸಬಹುದು....



ನಮ್ಮ ಕಂಪನಿಯಾ ಬೇರೆ ಬೇರೆ ಬ್ರಾಂಚ್ ಗಳಲ್ಲೂ ಒಂದೇ ದಿನ ಕನ್ನಡ ರಾಜೋತ್ಸವ ನಡೆಸಿದೆವು .... ಎಲ್ಲಾ ಬೇರೆ ಬೇರೆ location ಆಫೀಸ್ ನಿಂದನು ಒಳ್ಳೆ response ಬಂದಿತ್ತು .. ಎಲ್ಲಾ ಕಡೆ ಕೆಲವು ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಇದ್ದೆವು ... ರಂಗೋಲಿ ಬಿಡಿಸುವುದು... ಕನ್ನಡದ ಬಗ್ಗೆ quize , ಗಾದೆಗಳನ್ನು ಪೂರ್ತಿ ಮಾಡುವುದು... ಇಂಗ್ಲಿಷ್ ನಲ್ಲಿ ಇರುವ ಪದವನ್ನ್ನು ಕನ್ನಡದಲ್ಲಿ ಹೇಳುವುದು ಮತ್ತೆ ಅದರ ಬಗ್ಗೆ ಒಂದು ನಿಮಿಷ ಕನ್ನಡದಲ್ಲೇ ಮಾತನಾಡುವುದು..... ಕನ್ನಡ ಭಾವ ಗೀತೆಗಳನ್ನ ಹಾಡುವುದು... ಕುವೆಂಪು ರವರ ಕವನಗಳನ್ನ ಹೇಳುವುದು.... ಹೇಗೆ.... ಎಲ್ಲರೂ ಅತಿ ಆಸಕ್ತಿ ಇಂದ ಪಾಲ್ಗೊಂಡಿದ್ದರು....

ಅದರ ಕೆಲವು ಫೋಟೋಗಳು ಇಲ್ಲಿವೆ ನೋಡಿ...



                                                                 Entrence - Decoration 

 ಕನ್ನಡದ ಬಾವುಟ...

 ಪ್ರತಿ ಯೊಂದು .. ಫ್ಲೂರ್ ನಲ್ಲೂ ... ಹೂವ ದ  decoration 






 ರಂಗೋಲಿ ಬಿಡಿಸುವುದರಲ್ಲಿ.... ತಲ್ಲೀನರಗಿರುವುದ್ ...



ಭುವನೇಶ್ವರಿ ಫೋಟೋ ಜೊತೆಗೆ ... 
 


ಹಚ್ಚೇವು ಕನ್ನಡದ ದೀಪ .... ಗ್ರೂಪ್ ಸಾಂಗ್.....

ಸಿಹಿ ಯನ್ನು ಹಂಚುತ್ತಿರುವುದ್......

ಕನ್ನಡ quize 
 .

Titanium  ಆಫೀಸ್ ನಲ್ಲಿನ ಕನ್ನಡ ಬಂದುಗಳು....



                                                  
T-ಶರ್ಟ್ ಹಿಂದೆ ಇರುವ ಪ್ರಿಂಟ್... 



UB -Plaza  ಆಫೀಸ್ ನಲ್ಲಿ .... 

ಕನ್ನಡದ ಬಗ್ಗೆ,, ಕನ್ನಡ ನಾಡಿನ ಬಗ್ಗೆ .. ಮಾಹಿತಿ....






Saturday, October 8, 2011

ಅಜ್ಜ ಅಜ್ಜಿಯರ ಜೊತೆ ಒಂದು ದಿನ.........

ಈ ನನ್ನ ಬರಹ,,, ಎಲ್ಲಾ ಅಜ್ಜ ಅಜ್ಜಿಯರಿಗೆ ಹಾಗು ವಯಸ್ಸಾದವರಿಗೆ ಅರ್ಪಣೆ......





ಇದನ್ನು ಅಕ್ಟೋಬರ್ ಒಂದನೇ ತಾರೀಕಿನಂದು ಹಾಕಬೇಕು ಅಂತ ಇದ್ದೆ,,, ಆದರೆ ಸದ್ಯ ವಾಗಲಿಲ್ಲ... ಅಕ್ಟೋಬರ್ ೧ ದು,, World Elders’ Day’ .

ನಮ್ಮ ಕಂಪನಿ ನಲ್ಲಿ,, community service program ಅಂತ ಒಂದು ಪ್ರಾಜೆಕ್ಟ್ ನೆಡಿತ ಇದೆ . ಇದರಲ್ಲಿ,, ನಾವುಗಳು Voluntary ಆಗಿ ಭಾಗವಹಿಸ ಬಹುದು.... ಎಷ್ಟೊಂದ್ ಪ್ರೊಗ್ರಮ್ಸ್ , events ಇದೆ.....

ಅದರಲ್ಲಿ ನಾನು.... ಒಂದು ಪ್ರೊಗ್ರಾಮ್ ನಲ್ಲಿ ಭಾಗವಹಿಸಿದ್ದೆ... ಅದು,, ಮಲ್ಲೇಶ್ವರಂ ನಲ್ಲಿ ಇರುವ (Nightingales Elders Enrichment Center) ನೈಟಿಂಗ್ಎಲೆಸ್ ಹಿರಿಯ ನಾಗರಿಕರ ಸಮೃದ್ದಿ ಕೇಂದ್ರ ಇಲ್ಲಿ, ಒಂದು ದಿನ ಕಳೆಯುವ ಅವಕಾಶ ಸಿಕ್ತು..... ನಮ್ಮ ಪ್ರೊಗ್ರಾಮ್ ಇದ್ದದ್ದು,, ಒಂದು ದಿನ ಪೂರ್ತಿ ಹಿರಿಯರ ಜೊತೆ ಕಳೆಯುವುದು , ಅವರ ಜೊತೆ ಆಟ ಆಡುವುದು, ಒಟ್ಟಿನಲ್ಲಿ ಒಂದು ದಿನ ಅವರನ್ನು ಅವರ ಜೊತೆಗೂಡಿ ಸಂತೋಷದಿಂದ ನೋಡಿಕೊಳ್ಳುವುದು..... ಅಷ್ಟೇ....

ಅಂದಿನ ದಿನ, ನಮ್ಮ ಆಫೀಸ್ ನ ಸಹಧ್ಯೋಗಿಗಳೆಲ್ಲ ,, ಒಟ್ಟು ಗೂಡಿ, ಬೆಳಿಗ್ಗೆ ೧೦ ಘಂಟೆಯಾ ಹೊತ್ತಿಗೆ ಅಲ್ಲಿ ಸೇರಿದೆವು ,,, ನಿಜ ಹೇಳಬೇಕು ಅಂದರೆ ಅಲ್ಲಿ ಏನು ಮಾಡಬೇಕು, ಏನ್ activities ನಡೆಸಬೇಕು ಅನ್ನೋದು prepare ಆಗಿರಲಿಲ್ಲ , ಅದರೂ ನಾನು ನನ್ನ ಹತ್ರ ಇದ್ದ ಕೆಲವೊಂದು fun activities , ಗೇಮ್ಸ್ ಅನ್ನು prepare ಮಾಡಿಕೊಂಡ್ ಹೋಗಿದ್ದೆ..

ನಮ್ಮ ಟೀಂ ನಲ್ಲಿ ನಲ್ಲಿ ಒಟ್ಟು ೧೧ ಜನ ಇದ್ದೆವು,,, ನಮ್ಮ ಟೀಂ ನ ಒಟ್ಟು ೫ ಜನ ಮತ್ತೆ ಬೇರೆ ಬೇರೆ ಟೀಂ ನಲ್ಲಿ ವರ್ಕ್ ಮಾಡ್ತಾ ಇದ್ದವರು ಎಲ್ಲಾ ಸೇರಿದ್ದೆವು.... ಮೊದಲು ಹೋಗಿ,,, ಅಲ್ಲಿನ ಮ್ಯಾನೇಜರ್ ಶಿಲ್ಪ ಅನ್ನು ಪರಿಚಯ ಮಾಡಿಕೊಂಡು ನಮ್ಮ ಕಾರ್ಯಕ್ರಮದ ಬಗ್ಗೆ ಹೇಳಿದೆವು,,,, ನಮ್ಮ ಕಂಪನಿ ಕಡೆ ಇಂದ ಎಲ್ಲಾ ಮೊದಲೇ ಸಿದ್ದತೆ ನಡೆದಿತ್ತು.....

Nightingales Elders Enrichment Center ಇದು ಒಂದು, NGO ನೆಡೆಸಿತ್ತಿರುವ ಪ್ರಾಜೆಕ್ಟ್ , ಇಲ್ಲಿ ವಯಸ್ಸಾದ ಸಮಾನ ವಯಸ್ಸಿನ ವೃದ್ದರು , ಅಜ್ಜಿಯರು,, ತಾತಂದಿರು,, ಒಟ್ಟಿಗೆ ಸೇರಿ... ತಮ್ಮ ಒಂಟಿತನದಿಂದ ದೂರ ಇರುವ ಒಂದು ವೇದಿಕೆ.... ಒಂದೇ ಕಡೆ ಬೆರೆತು,, ತಮ್ಮ ತಮ್ಮ ವಿಚಾರ ಲಹರಿ ,, ಅನುಭವ , ನೋವು ನಲಿವು, ಎಲ್ಲವನ್ನು ಹಂಚಿಕೊಳ್ಳಲು ಮಾಡಿರುವ ಒಂದು ಜಾಗ....

ಇಲ್ಲಿಗೆ ಬರುವ members ಬಗ್ಗೆ ನಮಗೆ ಇಲ್ಲಿನ ಮ್ಯಾನೇಜರ್ ನಿಂದ ಮಾಹಿತಿ ಸಿಕ್ಕಿತು.... ಅದಾದ ಮೇಲೆ,, ನಾವು ನಮ್ಮ ಕಾರ್ಯಕ್ರಮದಲಿ ಬದಲಾವಣೆ ಮಾಡಿ... ಅವರ ಜೊತೆ ಕೆಲವು ಗಂಟೆಗಳ ಕಾಲ ಸಂತೋಷ ದಿನ ಇರುವ ಹಾಗೆ ಪ್ರೊಗ್ರಾಮ್ ನ ಪ್ಲಾನ್ ಮಾಡಿದೆವು,,

ಮೊದಲು, ನಮ್ಮ ಬಗ್ಗೆ ಹಾಗು ನಮ್ಮ ಕಂಪನಿ ಯಾ ಬಗ್ಗೆ, ಮತ್ತೆ ನಮ್ಮ ಈ ಕಾರ್ಯಕ್ರಮದ ಬಗ್ಗೆ ಕಿರು ಪರಿಚಯ.....

ನಾವು ಒಬ್ಬೊಬ್ಬರು ನಮ್ಮ ಪರಿಚಯವನ್ನು ಮಾಡಿಕೊಳ್ತ ಇದ್ವಿ,,,, ಒಂದು ೫ ನಿಮಿಷ ಕಳೆದ ಮೇಲೆ.... ನಮಗೆ ಆಶ್ಚರ್ಯ ಮತ್ತೆ ಭಯ ಆಯಿತು .... ಯಾಕೆ ಗೊತ್ತ... ಅಲ್ಲಿರುವ ಒಬ್ಬೊಬರು ಒಂದೊಂದು ರೀತಿಯ ಪ್ರಶ್ನೆ ಗಳನ್ನು ಕೇಳೋಕೆ ಸ್ಟಾರ್ಟ್ ಮಾಡಿದ್ರು,,,, ಏನ್ ಪ್ರಶ್ನೆ ಅಂತಿರ... ಅಬ್ಬ...... ಒಂದಕಿಂಥ ಒಂದು.... ನಮ್ಮ ಬಗ್ಗೆ,, ನಮ್ಮ ಕಂಪನಿ ಬಗ್ಗೆ...... ಅದು ಏನ್ ಮಾಡುತ್ತೆ... ಹೇಗೆ, ಯಾಕೆ.... ಒಂದ ಎರಡ.... ನಾವಂತೂ ಇದನ್ನ ನಿರೀಷ್ಕಿಸಿರಲಿಲ್ಲ .... ಕಿರು ಪರಿಚಯ ಹೋಗಿ,,, ದೊಡ್ಡ ಸಂವಾದಾನೆ ಸ್ಟಾರ್ಟ್ ಆಗಿತ್ತು.... ಅಲ್ಲೇ 30 mins ಮುಗಿದಿತ್ತು.... ....

ಮಗುವಿನ ಮನಸು,,, ಮತ್ತೆ,, ವಯಸದವರ ಮನಸು ಒಂದೇ ಅಂತ ಕೇಳಿದ್ದೆ... ಆದರೆ ಇಲ್ಲಿ ನೋಡಿದೆ... ಎಷ್ಟು ಮುಗ್ದತೆ ಇತ್ತು ಗೊತ್ತ... ಅವರ ಅ ಪ್ರಶ್ನೆ ಗಳಲ್ಲಿ...

ಇದಾದ ಮೇಲೆ,,, ನಾನು ತಂದಿದ್ದ ಕೆಲವೊಂದು ಕುಳಿತಲ್ಲೇ ಅದುವ ಬ್ರಿನ್ ಟೀಸೆರ್ ಗೇಮ್ಸ್ ಅನ್ನು ಅಡಿಸುವುದಕ್ಕೆ ಶುರು ಮಾಡಿದೆವು... ಅಲ್ಲಿ ಇದ್ದ ೫೦ ರಿಂದ ೬೦ ಜನರನ್ನು ೬ ಗುಂಪುಗಳಾಗಿ ಮಾಡಿ... ಅಡಿಸಿದೆವು.... ಅಬ್ಬ ಎಷ್ಟು ಅದ್ಬುತ ವಾಗಿ ,, ಉಲ್ಲಾಸದಿಂದ ಭಾಗವಹಿಸಿದರು ಎಂದರೆ,, ನಮಗೆ ನಾಚಿಕೆ ಆಗಬೇಕು....

places ಹೆಸರು,,, ವಸ್ತುವಿನ ಹೆಸರು,,, puzzles , illusion ಗೇಮ್ಸ್,,, ಹೇಗೆ ನಾನು ತಂದಿದ್ದ ಎಲ್ಲವನು ಅವರ ಜೊತೆ... ಆಟ ಆಡಿಸುತ್ತ,,, ಅವರ ಸಂತೋಷ ಉತ್ಸಾಹ ದ ಜೊತೆ,, ನಾವು ಒಬ್ಬರಾಗಿದ್ದೆವು....

ಕೊನೆಯಲ್ಲಿ .... ಯಾವ ಟೀಂ ಹೆಚ್ಚು ಮಾರ್ಕ್ಸ್ ತೆಗೆದು ಕೊಂಡಿತ್ತೋ,,, ಆ ಟೀಂ ಅನ್ನು ವಿನ್ನೆರ್ ಅಂತ ಹೇಳಿ ಅವರಿಗೆ ನಮ್ಮ ಕಂಪನಿ ಕಡೆ ಇಂದ ತಂದಿದ್ದ...ಗಿಫ್ಟ್ ಗಳನ್ನು ಕೊಟ್ಟೆವು.....

ಇದೆಲ್ಲ ಮುಗಿಯುವ ಹೊತ್ತಿಗೆ..... ಮಧ್ಯಾನದ ಊಟದ ಸಮಯ ಆಗಿತ್ತು....

ಇದೆಲ್ಲ ನೋಡಿದ ಮೇಲೆ.... ಯುವಕರು ನಾವೋ ಅಥವಾ ಅಲ್ಲಿದ್ದ ಅವರುಗಳೋ... ಗೊತ್ತಾಗಲಿಲ್ಲ.....



ಒಟ್ನಲ್ಲಿ ಅವರುಗಳ ಜೊತೆ ಅ ಸಮಯ ಕಳೆದಿದ್ದು,,, ಗೊತ್ತಾಗಲೇ ಇಲ್ಲ.... ಈ ವಯಸಿನಲ್ಲೂ ಎಷ್ಟು ಉತ್ಸಾಹ ದಿಂದ ಇದ್ದರು ಅವರು ... ಒಬ್ಬರದು ಒಂದೊಂದು ಕತೆ... ಕೆಲವರಿಗೆ ನೋವು,, ಆ ವಯಸಿನಲ್ಲಿ ಬರುವ ಕಾಯಿಲೆ , ತಮ್ಮ ತಮ್ಮ ಮಕ್ಕಳಿಂದ,, ದೂರ ಇರುವ ನೋವು,,, ಒಂದ ಎರಡ...... ಎಷ್ಟೋ ನೋವುಗಳಿದ್ದರು.... ಅವರ ಅ ಸಂತೋಷಕ್ಕೆ ಕಾರಣವಾಗಲಿಲ್ಲ....

ಅಲ್ಲಿ ಇದ್ದ ಒಂದಿಬ್ಬರನ್ನು ಮಾತನಾಡಿಸಿದೆ... ಅಜ್ಜಿ ತಾತ.... 70 ರ ಮೇಲೆ ವಯಸ್ಸಾಗಿದೆ... ಬೇಕಾದಷ್ಟು ದುಡ್ಡು ಆಸ್ತಿ ಎಲ್ಲಾ ಇದೆ. ಸ್ವಂತ ಮನೆ, ಅಪಾರ್ಟ್ಮೆಂಟ್ , ಕಾರು, ಎಲ್ಲಾ .... ಅವರ ಮಕ್ಕಳು,, ಒಳ್ಳೆ ಕೆಲಸದಲ್ಲಿ ಇದ್ದಾರೆ,, ಅದು ಹೊರದೇಶದಲ್ಲಿ...... ಆದರೆ..... ಇವರನ್ನು ನೋಡಿಕೊಳ್ಳೋದಕ್ಕೆ ಮಾತ್ರ ಜೋತೆನಲ್ಲಿ ಯಾರು ಇಲ್ಲ.... ಕೊನೆಯ ದಿನಗಳಲಿ,, ವಯಸ್ಸು ಆಗ್ತಾ ಇದ್ದಂತೆ,,, ಒಂಟಿತನ ಕಾಡುತ್ತೆ.... ನೋಡಿಕೊಳ್ಳೋದಕ್ಕೆ,, ನೋವು ನಲಿವನ್ನು ಹಂಚಿಕೊಳ್ಳೋದಕ್ಕೆ,,, ತಮ್ಮ ಮಕ್ಕಳು ಜೊತೆಯಲ್ಲಿ ಇರಬೇಕು ಅಂತ ಅನ್ನಿಸುತ್ತೆ.... ಪಾಪ ನಮ್ಮ ಈಗಿನ ಸಮಾಜದಲ್ಲಿ ಇದಕ್ಕೆಲ್ಲ ಬೆಲೆ ಇದೆಯಾ,,, ಎಲ್ಲರೂ ದುಡ್ಡು,,, ತಮ್ಮ ತಮ್ಮ ಕೆಲಸ... ಇದರಲ್ಲಿ ಹಂಚಿ ಹೋಗಿದ್ದಾರೆ,,, ವೃದ್ದರ ನೋವು ,,, ಅವರ ಸಂಕಟವನ್ನು ನೋಡೋದಿಕ್ಕೆ ಟೈಮ್ ಇಲ್ಲ ಪಾಪ...... ಎಷ್ಟು ಕ್ರೂರ ಆಗ್ತಾ ಇದೆ ಅಲ್ವ ನಮ್ಮ ಇವಗಿನ ಲೈಫ್ ಸ್ಟೈಲ್......



ಅವರ ಬಗ್ಗೆನೇ ಯೋಚನೆ ಮಾಡ್ತಾ..... ,,, ಅವರೊಟ್ಟಿಗೆ ಊಟ ಮಾಡಿ.... ಮನಸಿನಲ್ಲಿ ನೂರಾರು ಪ್ರಶ್ನೆ ತುಂಬಿಕೊಂಡು ಮನೆಯ ಕಡೆ ಹೊರಟೆ.... ಇಂಥಾ ಕೆಲವೊಂದು ವಿಚಾರ ದಲ್ಲಿ ನಮ್ಮ ನಡುವೆಯೇ ಎಸ್ಟೊಂದು ಉದಾಹರಣೆಗಳು ಇವೆ..... ನಮ್ಮ ಕುಟುಂಬ ಗಳಲ್ಲೇ ಆಗುತ್ತೆ,, ದಯವಿಟ್ಟು,,, ಇದಕ್ಕೆಲ್ಲ ಅವಕಾಶ ಕೊಡ ಬೇಡಿ.... ಹೆತ್ತು ಹೊತ್ತು ಸಾಕಿದ ಅಪ್ಪ ಅಮ್ಮ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ ಚಿಕ್ಕಮ್ಮ,, ಅಜ್ಜಿ ತಾತ.... ಯಾರೇ ಇರಲಿ... ಇವರುಗಳನ್ನು,,, ಅವರ ಬದುಕಿನ ಕೊನೆಯ ದಿನಗಳಲಿ... ದೂರ ಮಾಡಬೇಡಿ... ಎಷ್ಟು ಕಷ್ಟ ಪಟ್ಟಿರುತ್ತಾರೆ....ನಮಗೋಸ್ಕರ... ಎಷ್ಟು ನೋವು ತಿಂದು,,, ನಮ್ಮನ್ನೆಲ್ಲ ಬೆಳೆಸಿ,, ಈ stage ತಂದಿರುತ್ತಾರೆ... ಅವರ ಬದುಕಿನ ಕೊನೆಯ ದಿನಗಳಲಿ,,, ನಮ್ಮ ಆಸರೆ ಜಾಸ್ತಿ ಬೇಕಾಗಿರುತ್ತೆ,,,, ಆದಷ್ಟು ಅವರನ್ನು ಚೆನ್ನಾಗಿ ನೋಡಿಕೊಳ್ಳೋದಕ್ಕೆ ಪ್ರಯತ್ನಿಸಿ...




    

   puzzel   ಗೇಮ್ ಅಡಿಸ್ತಾ ಇರೋದು... 





ನಮ್ಮ ಟೀಂ ...




ಗೆದ್ದ ಟೀಂ ಗೆ ಬಹುಮಾನ ವಿತರಣೆ....





ಕೊನೆಯಲ್ಲಿ ನಮ್ಮ ಕಾರ್ಯಕ್ರಮದ ಬಗ್ಗೆ ಸಂತೋಷದ ಮಾತು..... ಮತ್ತು ಹಾರೈಕೆ .

Thursday, September 22, 2011

ಸವಿ ಸವಿ ನೆನಪು ,,,,,, ಸಾವಿರ ನೆನಪು !!!!!

ಸವಿ ಸವಿ ನೆನಪು ,,,,,, ಸಾವಿರ ನೆನಪು..... ಎದೆಯಾಳದಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೆನಪು.........

ಈ ಸಾಂಗ್ ಹಾಡ್ಕೊಂಡು ಸುದೀಪ್,,, ಅವನು ಓದಿದ ಸ್ಕೂಲ್, ಹಳ್ಳಿ... ಅಲ್ಲಿನ ಅನುಭವಗಳನ್ನ,,, ನೆನಪು ಮಾಡ್ಕೋತಾ ಇದ್ದ ಅಲ್ವ.... ಅದೇ ರೀತಿ,,, ನೆನಪು ಮಾಡಿಕೊಂಡು,,, ನಾನು ಓದಿದ ಸ್ಕೂಲ್ ನೆನ್ನ ಸುತ್ತಾಡಿಕೊಂಡು,,, ನಾನು ಓದುತ್ತ ಇದ್ದಾಗ ನನಗೆ ಪಾಠ ಹೇಳಿ ಕೊಟ್ಟ ನನ್ನ ಟೀಚೆರ್ಸ್ ನೆಲ್ಲ ಮಾತಾಡಿಸಿಕೊಂಡು,,,, ಹಳೆಯ ದಿನಗಳ ಅ ಕಾಲದ ಅನುಭವಗಳ ಮಧ್ಯ ಕಳೆದು ಹೋಗುವ ಅವಕಾಶ ನನಗೂ ಸಿಕ್ಕಿತ್ತು....

ಕಳೆದ ತಿಂಗಳು,,, 28 ನೆ ತಾರೀಕು , ನಾನು ಓದಿದ ಸ್ಕೂಲ್ ನಲ್ಲಿ,,, "ಸ್ನೇಹ ಮಿಲನ ಕಾರ್ಯಕ್ರಮ ವನ್ನು" ,, ನನ್ನ batch ನ ಹುಡುಗರು,, ಮತ್ತೆ ನನ್ನ seniors arrange ಮಾಡಿದ್ದರು... ವೌ,,, ನಾನಂತು ... ಈ ಕಾರ್ಯಕ್ರಮ ಇಷ್ಟು ಚೆನ್ನಾಗಿ ನಡೆಯುತ್ತೆ ಅಂತ expect ಮಾಡಿರಲಿಲ್ಲ,

ಅಂದ ಹಾಗೆ ನಾನು ಒದ್ದಿದು,,, St Rita , High School ... ಕುಣಿಗಲ್ ನಲ್ಲಿ.... ನಾನು ಹುಟ್ಟಿದು,, ಮತ್ತೆ ಬೆಳೆದದ್ದು ಎಲ್ಲಾ ಕುಣಿಗಲ್ ಅನ್ನೋ ಪುಟ್ಟ ಪಟ್ಟಣದಲ್ಲಿ... 17 ವರುಷ ನನ್ನ ಸಾಕಿ ಸಲಹಿದೆ,,, ಅದಕ್ಕಾಗಿ ನನಗೆ ಏನೋ ಒಂದು ತರ ನಂಟು ನನ್ನ ಊರಿನ ಬಗ್ಗೆ,,,

ನನ್ನ ಸ್ಕೂಲ್ ನಲ್ಲಿ ಆಗುವ ಸ್ನೇಹ ಮಿಲನ ಕಾರ್ಯಕ್ರಮದ ಬಗ್ಗೆ ನನ್ನ ಬಾಲ್ಯ ಸ್ನೇಹಿತರಿಂದ ಗೊತ್ತಾಗಿತ್ತು,,, ನಮ್ಮ ಸ್ಕೂಲ್ ನ , ನಮ್ಮ batch ನ,,, ಕೆಲವು ಹುಡುಗರು ಸೇರಬುದೇನೋ ಅಂತ ಅಂದುಕೊಂಡಿದ್ದೆ. ಆದರೆ ಅಲ್ಲಿ ಆ ದಿನ ಹೋಗಿ ನೋಡಿದಾಗ ,,, ನಮಗಿಂತ 20 ವರುಷ ಹಿಂದ batch students ಎಲ್ಲಾ ಬಂದು ಸೇರಿದ್ದರು,,, ಏನಿಲ್ಲ ಅಂದರು,,, ಒಂದು 600 old students ಸೇರಿದ್ದರೆನ್ನಬಹುದು .

ಆ ಭಾನುವಾರದ ಒಂದು ದಿನ ಹೇಗೆ ಕಳೆಯಿತು ಅಂತ ಗೊತ್ತೇ ಆಗಲಿಲ್ಲ..... ಎಲ್ಲರಿಗೂ ಒಂದು ರೀತಿ ಸಂತೋಷ,,, ಆನಂದ,,, ಖುಷಿ .....ಎಸ್ಟೋ ವರ್ಷಗಳ ಬಳಿಕ ತಮ್ಮ ಸ್ಕೂಲ್ ಸ್ನೇಹಿತ /ಸ್ನೇಹಿತೆಯರನ್ನು ಮಾತನಾಡಿಸುವ ಒಂದು ಅದ್ಬುತ ಅವಕಾಶ..... ವೌ... ನಿಜವಾಗಿಯೂ ಅಲ್ಲಿನ ಸಂಬ್ರಮವನ್ನ ನೋಡಿ ಅನಂದಿಸಬೇಕಾಗಿತ್ತು......

ಇದೆಲ್ಲಕಿಂತ ಮುಖ್ಯವಾಗಿ.... ನಮಗೆ ಚಿಕ್ಕವರಾಗಿದ್ದಾಗ ಪಾಠ ಹೇಳಿಕೊಟ್ಟ ಗುರುಗಳು,,ಟೀಚೆರ್ಸ್ . (systers ಇದು christrian ಸ್ಕೂಲ್ ಆಗಿದ್ದರಿಂದ ಎಲ್ಲರನ್ನು systers ಅಂತ ಕರಿತ ಇದ್ವಿ..) ಅವರನ್ನು ನೋಡಿ ಮಾತನಾಡಿಸುವ ಅವಕಾಶ... ಅಬ್ಬ,,,, ನಿಜವಾಗಲು,, ನಾವು ಎಲ್ಲವನ್ನು ಮರೆತು,, ೨೦ ವರುಷದ ಹಿಂದೆ,,, ನಮ್ಮ ಮಕ್ಕಳ ಲೋಕಕ್ಕೆ ಹೋಗಿ ಬಿಟ್ ಇದ್ದೆವು....

ಕಾರ್ಯಕ್ರಮ ಉದ್ಗಾಟನೆ ಬಳಿಕ... ಕೆಲವು ಹಳೆಯ students ಗಳ ಅನುಭವಗಳು... ಮತ್ತೆ ಇದೆ ಸ್ಕೂಲ್ ನಲ್ಲಿ ಓದಿ,, ಅಲ್ಲೇ ಟೀಚರ್ ಆಗಿರುವವರ ಅನಿಸಿಕೆಗಳು,,,, cultaral ಪ್ರೊಗ್ರಮ್ಸ್,, ಇದು ಯಾವುದರ ಅರಿವೆಯೇ ಇಲ್ಲದೆ,, ಅವರವರ batch ನ ಹುಡುಗರು,,, students ,, ಒಂದು ಕಡೆ ಸೇರಿ,,,ಗುಂಪು ಗುಂಪಾಗಿ ಹರಟೆ ಹೊಡಿತಾ ಇದ್ದರು..... ಒಟ್ಟಿನಲ್ಲಿ... ಅದೊಂದು ಅದ್ಬುತ ಗಳಿಗೆ.....



ನಾನಂತು... ನನ್ನ ಸ್ಚೂಲ್ನ,, ಕ್ಲಾಸ್ ರೂಂ ನ,, ಎಲ್ಲಾನು ನೋಡಿಕೊಂಡು,, ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡಿಕೊಂಡು , ನನ್ನ ಹಳೆಯ ಸ್ಕೂಲ್ mates ನ ಮಾತಾಡಿಸಿಕೊಂಡು,,, ಓಡಾಡಿದ್ದೆ ಓಡಾಡಿದ್ದು,,,

ಅದೆಲ್ಲ ಕಿಂತ ಮುಖ್ಯವಾಗಿ,,, ಅವರವರ batch ನ students ಎಲ್ಲಾ ಸೇರಿ,, ಅವರ ಟೀಚೆರ್ಸ್ ಗೆ, ನೆನಪಿನ ಕಾಣಿಕೆ ನೀಡಿದ್ದು,,,,, ಎಸ್ಟೋ students ,, ಇವಗ್ಲೂ ತಮ್ಮ ಗುರುಗಳ ಬಗ್ಗೆ ಬಕ್ತಿ , ಗೌರವ ದಿಂದ,, ಕಾಲಿಗೆ ಬಿದ್ದು,, ನಮಸ್ಕಾರ ಮಾಡಿದ್ದು,, ಕಣ್ಣಂಚಿನಲ್ಲಿ ನೀರನ್ನು ತುಂಬಿಸಿ ಕೊಂಡಿದ್ದು,,,, ಎಲ್ಲಾ ಟೀಚೆರ್ಸ್ ಜೊತೆ ಫೋಟೋ ತೆಗೆಸಿಕೊಳೋಕೆ ನಾ ಮುಂದು , ತಾ ಮುಂದು,, ಅಂತ ಮುಗಿ ಬಿತ ಇದ್ದದ್ದು,,,, ವೌ,,,,, ಸೂಪರ್,,,,



ನನಗಂತು ಒಂದು ವಿಷಯದಲ್ಲಿ,,, ತುಂಬಾ ಹೆಮ್ಮೆ ಆಯಿತು,, ಹಾಗೆ ಅಳು ಕೂಡ ಬಂತು,,, ೨೦ ವರ್ಷ ಆದಮೇಲೆ ಅಂದರೆ ನಾನು ನನ್ನ 7th ಸ್ಟ್ಯಾಂಡರ್ಡ್ ನ ಪಾಸ್ ಮಾಡಿಕೊಂಡ್ ಇದ್ದು,, 1992 -93 ನಲ್ಲಿ , ಇವಾಗ ಆಗಲೇ ೨೦ ವರುಷ ಆಗಿದೆ,,, ಅಂತದರಲ್ಲಿ,, ನನ್ನ ನೆಚ್ಚಿನ ಟೀಚರ್, ನನ್ನನ್ನು ಗುರುತು ಹಿಡಿದು ,, ನನ್ನ ಹೆಸರಿನಿಂದ ಮಾತನಾಡಿಸದ ಗಳಿಗೆ ನಿಜಕ್ಕೂ,,, ಗ್ರೇಟ್ .... ನನ್ನನು ಗುರುತು ಹಿಡಿತರೋ ಇಲ್ಲವೋ ಅಂತ ಅನ್ನ್ದುಕೊಂಡಿದ್ದೆ,, ಅದರಲ್ಲಿ,, ನನ್ನ ಹೆಸರು ಕೂಡ... ನೆನಪಿಟ್ಟು ಕೊಂಡು ಮಾತನಾಡಿಸಿದರಲ್ಲ,, ನನಗೆ ತುಂಬಾ ಖುಷಿ ಆಯಿತು,, ಅದಕ್ಕೆ ಇರಬೇಕು,, teachers ಮತ್ತೆ students ಸಂಬಂದ ಅನ್ನೋದು,,,,,

ಇದೆಲ್ಲ ಮುಗಿಯುವ ಹೊತ್ತಿಗೆ,, ಎಲ್ಲಾ batch students ನಿಂದ ಅಂದ್ರೆ 1979 -80 ಇಂದ ಹಿಡಿದು,, 2005 -2006 ವರೆವಿಗೂ,,, ಒಂದು ಸಾಂಗ್ ಗೆ ಡಾನ್ಸ್ ಮಾಡುವ ಒಂದು ಪ್ರೊಗ್ರಾಮ್,,, ಅಬ್ಬ ಎಷ್ಟು ಚೆನ್ನಾಗಿ ಇತ್ತು ಅಂದ್ರೆ,,, ವೌ... ವರ್ಣಿಸೋಕೆ ಅಗೊಲ್ಲ್ಲ... ಎಸ್ಟೋ ಜನಕ್ಕೆ ಮದುವೆ ಆಗಿ ಮಕ್ಕಳಗಿದ್ದಾರೆ,,, ಅದರೂ ಅವರೆಲ್ಲ stage ಮೇಲೆ ಬಂದ ಕೂಡಲೇ,,, ಚಿಕ್ಕ ಮಕ್ಕಳ ತರ ಡಾನ್ಸ್ ಆಡಿದ್ದೆ ಆಡಿದ್ದು,,, !!!!

ಇದೆಲ್ಲ ಮುಗಿಯುವ ಹೊತ್ತಿಗೆ,, ಸಂಜೆ ಆಗಿತ್ತು,,, ಅಲ್ಲೇ ಊಟದ ವ್ಯವಸ್ತೆ ಕೂಡ ಮಾಡಿದ್ದರು,,,, ಒಟ್ನಲ್ಲಿ,,, ಒಂದು ದಿನ,,, ನಾನು ೨೦ ವರ್ಷ ಹಿಂದೆ ಹೋಗಿ,,, ಚಿಕ್ಕ ಮಕ್ಕಳ ತರ ಆಟ ಅಡಿ,, ನನ್ನ ಹಳೆಯ ನೆನಪುಗಳನ್ನೆಲ್ಲ ತಿರುವಿಹಾಕಿ,,, ನನ್ನ ಸ್ಕೂಲ್ , ಕ್ಲಾಸ್, ರೂಂ, ಆಟದ ಮೈದಾನ,,, ನಾನು ನಾಟಕ ಅದಿದ್ದ stage ,,, HM ರೂಂ ಎಲ್ಲವನ್ನು ನೋಡಿ ಕೊಂಡು,, ವಾಪಸ್ ಬೆಂಗಳೂರಿಗೆ ಹೊರಟಾಗ ಸಂಜೆ ಆಗಿತ್ತು,,, ಅಲ್ಲಿಂದ ಬರೋಕೆ ಮನಸು ಆಗಲಿಲ್ಲ,,, ಅದರೂ ಕೆಲಸದ ಒತ್ತಡ,, ಅವೊತ್ತು ಏನೋ importent ಕಾಲ್ ಇತ್ತು ,, ಸೊ ಬೇಗ ಹೊರಟು ಬಂದೆ,,,,:-(



ಎಲ್ಲಾ ಚಿತ್ರಗಳನ್ನು ನನ್ನ ಪಿಕಾಸ ಆಲ್ಬಮ್ ನಲ್ಲಿ ಹಾಕಿದ್ದೇನೆ,,, ನೀವು ನೋಡಿ,,, ನನ್ನ ಹೆಮ್ಮೆಯ ಸ್ಕೂಲ್ ನ,,,, https://picasaweb.google.com/guru.prasadkr/September222011?authuser=0&feat=directlink





 ನನ್ನ ಸ್ಕೂಲ್.... ನಾನು ಡಾನ್ಸ್, ನಾಟಕ , ಚೆರ್ಚೆ ,,, ಡಿಬೇಟ್ ,,, ಮಾಡಿದ stage



                                                              ನಮ್ಮ ಟೀಚೆರ್ಸ್

ಆಪಾರ ಸಂಖ್ಯೆ ಯಲ್ಲಿ... ಸೇರಿರುವ ಸ್ಕೂಲ್ ನ, ಹಳೆಯ ವಿದ್ಯಾರ್ಥಿ ವಿಧ್ಯಾರ್ಥಿನಿಯರು,,,,,


ತಮ್ಮ ತಮ್ಮ ಹಳೆಯ ಸಹಪಾಟಿ ಗಳೊಂದಿಗೆ ಸಂವಾದ....


ಈಗಿನ students 

 ನಮ್ಮ ನೆಚ್ಚಿನ ಗುರುಗಳಿಗೆ,,, ನೆನಪಿನ ಕಾಣಿಕೆ.....

 ನಮ್ಮ Batch ನ students 
 ತಮ್ಮ ನೆಚ್ಚಿನ ಗುರುಗಳ ಕಾಲಿಗೆ,, ನಮಸ್ಕರಿಸುತ್ತಿರುವ ವಿದ್ಯಾರ್ಥಿಗಳು


ನಮ್ಮ ಕ್ಲಾಸ್ ನ students  ಗುಂಪು

 ಚಿಕ್ಕವನಾಗಿದ್ದಾಗ,, ನಾನು ಇದೆ stage  ಮೇಲೆ ಎಸ್ಟೋ ಡಾನ್ಸ್ , ನಾಟಕ ಗಳನ್ನ ಆಡಿದ್ದೇನೆ...

ಎಲ್ಲ ಟೀಚೆರ್ಸ್ ಜೊತೆ ನಮ್ಮ batch
ನಾನು ಓದುತ್ತಿದ್ದ 6th ಸ್ಟ್ಯಾಂಡರ್ಡ್ ಕ್ಲಾಸ್ ರೂಂ.......


ರಾಣಿ ಮಿಸ್, ಮತ್ತೆ PT ಮಾಸ್ಟರ್ ಜೊತೆ
ಟೀಚೆರ್ಸ್ ವೃಂದ......


    ಕೊನೆಯದಾಗಿ..... ನಮ್ಮ batch students  ಜೊತೆ,,,, ಹಳೆಯ ಕ್ಲಾಸ್ ರೂಂ ನಲ್ಲಿ,, 20  ವರುಷದ ಬಳಿಕ,,  ಎಲ್ಲರೂ ಒಂದೇ ಬೆಂಚ್ ನಲ್ಲಿ... ಇನ್ನು ಎಸ್ಟೋ ಜನ ಮಿಸ್ ಆಗಿದ್ದರು,,, ಸಧ್ಯ 15  students ಮಾತ್ರ ಸೇರಿದ್ದೆವು,,,,,