Wednesday, December 23, 2009

ಬಣ್ಣ ಬಣ್ಣದ ಬೆಡಗಿನ ಬೆಂಗಳೂರು ನೋಡಿದ್ದೀರಾ.....!!!

  ನಮ್ಮ ಬೆಂಗಳೂರಿಗೆ ಎಸ್ಟೊಂದ್ ಹೆಸರಿದೆ ಅಲ್ವ... ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ, ಹವಾನಿಯಂತ್ರಿತ ನಗರ, ಹೀಗೆ ಎಸ್ಟೊಂದು ಹೆಸರು ನಮ್ಮ ಬೆಂದಕಾಳೂರಿಗೆ, ಅದಕ್ಕೆ ಹೊಸ ಸೇರ್ಪಡೆ, ಬಣ್ಣದ ನಗರ ಅಥವ color full city ಅಂತ ಕರೆದರೆ ತಪ್ಪಾಗಲಾರದೇನೋ... ಯಾಕೆ ಅಂತೀರಾ..... ಯಾಕಂದ್ರೆ, ನಮ್ಮ ಬೆಂಗಳೂರಿನ ಗೋಡೆಗಳ ಮೇಲೆಲ್ಲಾ ಚೆಂದದ ಚೆಲುವಿನ, ಚಿತ್ರಗಳನ್ನು BBMP ನವರು ಬಿಡಿಸುವುದಕ್ಕೆ ಅವಕಾಶ ಮಾಡಿ ಕೊಟ್ಟು, ಒಳ್ಳೆಯ ಕೆಲಸ ಮಾಡಿದ್ದಾರೆ, ಇದರಿಂದ ಬೆಂಗಳೂರಿನ ಎಸ್ಟೋ ಗೋಡೆಗಳು, ಬಣ್ಣ ಬಣ್ಣದ ಚಿತ್ರಗಳಿಂದ ಹೊಳೆಯುತ್ತ ಮನಸೂರೆ ಗೊಳ್ಳುತ್ತಿದೆ, ಸ್ವಲ್ಪ ದಿನದ ಕೆಳಗೆ, ಕೆಟ್ಟ ಕೆಟ್ಟ ಫಿಲಂ ವಾಲ್ ಪೋಸ್ಟ್ ನಿಂದ, ಅರ್ದಂಬರ್ದ ಹರಿದ , ಗಲೀಜು ಗಲೀಜಾಗಿ ಕಾಣಿಸುತ್ತಿದ್ದ advertisement ಪೋಸ್ಟ್ ನಿಂದ ಎಲ್ಲ ಗೋಡೆಗಳು, ನೋಡುವುದಕ್ಕೆ ಆಗ್ತಾ ಇರಲಿಲ್ಲ . ಆದರೆ ಇವಾಗ,,,,,,ಬಣ್ಣ ಬಣ್ಣದ ಚಿತ್ರಗಳು,, ಅದರಲ್ಲೂ ಕರ್ನಾಟಕದ ಪ್ರಸಿದ್ದ ಪ್ರವಾಸಿ ತಾಣಗಳ, ಹಾಗು ಕರ್ನಾಟಕದ ಪರಂಪರೆಯನ್ನು ಬಿಂಬಿಸುವ ಚಿತ್ರಗಳು, ಎಷ್ಟು ಚೆನ್ನಾಗಿ ಇರುತ್ತೆ ಗೊತ್ತ...


ಆದರೆ ಇದು ಎಷ್ಟು ದಿನ ಬಾಳಿಕೆ ಬರುತ್ತದೆ ಎಂಬುದೇ ಪ್ರಶ್ನೆ,, ಇದನ್ನು ಚೆನ್ನಾಗಿ , ಗಲೀಜು ಮಾಡದೇ ಇಟ್ಟುಕೊಳ್ಳುವುದು ನಮ್ಮ ಬೆಂಗಳೂರಿಗರ ಮುಂದೆ ಇದೆ.... ಇನ್ನು ಮುಂದಾದರು ಕಂಡ ಕಂಡ ಗೋಡೆಗಳ ಮುಂದೆ ಒಂದ ಮಾಡುತ್ತ , ಉಗಿಯುತ್ತ , ಗಲೀಜು ಮಾಡುವುದನ್ನು ಬಿಟ್ಟು, ಇಂಥ ಒಳ್ಳೆಯ ಪ್ರಯತ್ನವನ್ನ ಸಾರ್ತಕ ಗೋಳಿಸ ಬೇಕಾಗಿದೆ . ಅಲ್ವ..

ನನಗೆ ಗೊತ್ತಿರುವ ಪ್ರಕಾರ ಇಂಥ ಒಂದು ಒಳ್ಳೆಯ ಪ್ರಯತ್ನ ಬೆಂಗಳೂರಿನಲ್ಲೇ ಮೊದಲು ಅಂತ ಕಾಣುತ್ತೆ... ಇದಕ್ಕೆ ನಿಜವಾಗಲು BBMP ರವರನ್ನು ಅಭಿನಂದಿಸಬೇಕು , ಆದರೆ ಇದರ ಬಗ್ಗೆ ಕೆಲವು ಅಪಸ್ವರಗಳು ಕೇಳಿಬಂದಿದ್ದವು,, ಯಾರೋ ಒಬ್ಬರು ವಿಜಯಕರ್ನಾಟಕದಲ್ಲಿ ಒಂದು article ಬರೆದಿದ್ದರು. ಹೀಗೆ ಕನ್ನಡ ಕಂಡ ಕಡೆ ಪೇಯಿಂಟ್ ಮಾಡುವುದರಿಂದ ಕೃತಿ ಚೌರ್ಯ ಉಂಟಾಗಿದೆ ಅಂತ.. ಅವರು ಹೇಳಿರುವ ಪ್ರಕಾರ ಕೆಲವೊಂದು ಚಿತ್ರಗಳು ಯಾರೋ ಬಿಡಿಸಿರುವುದು, ಇವಾಗ ಅದು banner , ಹಾಗು board ಪೇಂಟಿಂಗ್ ಮಾಡುವವರು ಬಿಡಿಸಲು ಹೋಗಿ, ಅವರ ಕೃತಿ ಚೌರ್ಯ ಆಗುತ್ತಿದೆ ಅಂತ,, ನನಗಂತೂ ಅವರು ಯಾವ ಅರ್ಥ ದಲ್ಲಿ ಹೇಳುತ್ತಲಿದ್ದರೋ ಗೊತ್ತಿಲ್ಲ... ಇದರ ಬಗ್ಗೆ ಪ್ರತಿಕ್ರಿಯಿಸಬೇಕು ಅಂತ ಇದ್ದೆ, ಆದರೆ ಆಗಲಿಲ್ಲ...but ನನಗೆ ಅನ್ನಿಸುವ ಪ್ರಕಾರ ಇದು ಒಂದು ಒಳ್ಳೆಯ ಪ್ರಯತ್ನ,,,ಒಂದು ಒಳ್ಳೆ ಕೆಲಸ,,, ಸುಮ್ಮನೆ ಹಾಳು ವಾಲ್ ಪೋಸ್ಟ್ ನಿಂದ ಹಾಳಾಗುತ್ತಿದ್ದ ಗೋಡೆಗಳು,, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳಿಂದ ಕಂಗೊಳಿಸುತ್ತ ಇವೆ... ಹಾಗೆ ಎಸ್ಟೋ ಜನ ಚಿಕ್ಕ ಚಿಕ್ಕ ಕಲಾವಿದರು ಇದರ ಉಪಯೋಗ ಪಡೆದುಕೊಂಡು, ತಮ್ಮ ಪ್ರತಿಭೆಯನ್ನು ಅನುಭವವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಹಾಯವಾಗಿದೆ...BBMP ನವರು ಪೇಯಿಂಟ್, ಬ್ರುಶ್, ಎಲ್ಲ ಕೊಟ್ಟು, ದಿನಕ್ಕೆ ಇಷ್ಟು ಅಂತ ದುಡ್ಡು ಬೇರೆ ಕೊಟ್ಟು,, ಬರೆಯಲು ಅವಕಾಶ ಕೊಟ್ಟಿದ್ದಾರೆ....ಇದು ಒಳ್ಳೆಯದಲ್ಲವೇ ?

ಕೆಲವು ದಿನಗಳ ಹಿಂದೆ ಇದರ ಬಗ್ಗೆ ನನ್ನ ಬ್ಲಾಗಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದೆ, ಆದರೆ ಫೋಟೋ ಸಮೇತ ಹಾಕಿ ಅಂತ ಕೆಲವರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದರು, ತುಂಬ ದಿನಗಳಿಂದ ಎಲ್ಲ ಚಿತ್ರಗಳ ಫೋಟೋ ತೆಗೆದು ಹಾಕಬೇಕು ಅಂತ ಅನ್ಕೊತಾ ಇದ್ದೆ ಆದರೆ ಅವಕಾಶ ಸಿಕ್ಕಿರಲಿಲ್ಲ... ಮೊನ್ನೆ, ಆಫೀಸ್ ನಲ್ಲಿ ಏನೋ event ಇದೆ ಅಂತ ನನ್ನ ಕ್ಯಾಮೆರಾ ತೆಗೆದು ಕೊಂಡು ಹೋಗ್ತಾ ಇರಬೇಕಾದರೆ ಮೆಜೆಸ್ಟಿಕ್ ಸುತ್ತ ಮುತ್ತ ಸಿಕ್ಕ ಕೆಲವು ಫೋಟೋಗಳನ್ನು ತೆಗೆದಿದ್ದೇನೆ,, ಇದೆಲ್ಲ ಹಾಗೆ ಕಾರ್ ನಲ್ಲಿ ಹೋಗ್ತಾ ಇರಬೇಕಾದರೆ ತೆಗೆದಿದ್ದು,,,, professional ಕ್ಯಾಮೆರಾ ತರ ತೆಗೆದಿಲ್ಲ.. ಏನು ಅನ್ಕೋ ಬೇಡಿ....

ಹೊರದೇಶದಲ್ಲಿ ಇರುವ ಕನ್ನಡಿಗರಿಗೆ ನಮ್ಮ ಬೆಂಗಳೂರಿನ ಬೆಳವಣಿಗೆ ನೋಡಲು ಅನುಕೂಲ ವಾಗಲಿ ಅಂತ ಎಲ್ಲರ ಜೊತೆ ಹಂಚಿಕೊಳ್ತಾ ಇದ್ದೇನೆ ಅಸ್ಟೇ...

Thank you BBMP ,, ನಿಮ್ಮ ಇಂಥ ಹೊಸ ಪ್ರಯತ್ನಕ್ಕೆ........ ಹೀಗೆ ಮುಂದುವರಿಸಿ,, ಮತ್ತೆ,, ನಮ್ಮ ಹೆಮ್ಮೆಯ ಬೆಂಗಳೂರಿನ ಸೌಂದರ್ಯವನ್ನು ಹೆಚ್ಚಿಸಿ....!!!
 Thursday, December 17, 2009

Cheese Art - Cheese ಲೇಡಿ

ತುಂಬ ದಿನ ಆಯಿತು ನನ್ನ ಬ್ಲಾಗ್ ಅಪ್ಡೇಟ್ ಮಾಡಿ, ನನ್ನ ಕೆಲವು ಬ್ಲಾಗ್ ಸ್ನೇಹಿತರು ಫೋನ್ ಮಾಡಿ, ಮೇಲ್ ಮಾಡಿ ಕೇಳ್ತಾ ಇದ್ರೂ,, ಎಲ್ಲಿ ಕಳೆದು ಹೋಗಿದಿಯ ಅಂತ... ಎಲ್ಲೂ  ಕಳೆದು ಹೋಗಿರಲಿಲ್ಲ,,, ಹಾಗೆ ಸ್ವಲ್ಪ ಕೆಲಸದ ಒತ್ತಡ...ಮತ್ತೆ ಪರ್ಸನಲ್ ಪ್ರಾಬ್ಲಮ್ ನಲ್ಲಿ ಕಳೆದು ಹೋಗಿದ್ದೆ,,, ಟೈಮ್ ಇದ್ರೂ, ಬ್ಲಾಗ್ ನ ಅಪ್ಡೇಟ್ ಮಾಡೋಕೆ ಮನಸ್ಸು ಇರಲಿಲ್ಲ....
ನಾನು ಬ್ಲಾಗ್ ಲೋಕಕ್ಕೆ ಬಂದು ವರ್ಷದ ಮೇಲೆ ಆಗಿದೆ... ಇದು ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದು,
ಪ್ರಾಬ್ಲಮ್, ಕಷ್ಟ ,  ಒತ್ತಡ ಎಲ್ಲರಿಗು ಇರುತ್ತೆ, ಸುಮ್ಮನೆ ಅದರಲ್ಲೇ ತಲೆಕೆಡಿಸಿಕೊಂಡ್ ಇದ್ದರೆ ಆಗೋಲ್ಲ ಅಂತ ಅಂದುಕೊಂಡು,,, ಸ್ವಲ್ಪ active ಆಗಿ ನನ್ನ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಸ್ವಲ್ಪ ಸಂತೋಷವಾಗಿ ಇರೋಣ ಅಂತ ಡಿಸೈಡ್ ಮಾಡಿ, ಹೊಸ ಪೋಸ್ಟ್ ನ ಅಪ್ಡೇಟ್ ಮಾಡ್ತಾ ಇದ್ದೇನೆ,,

ಇವಾಗ ನಾನು ಹೇಳಲು ಹೊರಟಿರುವುದು...sarah kaufmann  ಎಂಬ cheese ಲೇಡಿ ಬಗ್ಗೆ . ಇ ವಯಸ್ಸಾದ ಅಜ್ಜಿ, ನೈಸ್ ಆಗಿ, ಸ್ವೀಟ್ ಆಗಿ  ಇರುವ ಚೀಸ್ ನಲ್ಲೆ ತನ್ನ ಕಲೆಯನ್ನ, ಕೈ ಚಳಕವನ್ನು ತೋರಿಸಿದ್ದಾಳೆ. , commercial art ನಲ್ಲಿ ಡಿಗ್ರಿ ಪಡೆದು, wisconsin dairy indrustry ನಲ್ಲಿ 16 ವರ್ಷದಿಂದ ವರ್ಕ್ ಮಾಡ್ತಾ ,, ಇ ಚೀಸ್ ಆರ್ಟ್ ಬಗ್ಗೆ , ಚೀಸ್ ನಿಂದಲೇ ಮಾಡುವ  ಕಲೆ , sculptor  ಬಗ್ಗೆ ಆಸಕ್ತಿ ಬೆಳೆಸಿಕೊಂಡು,, ಇವೊತ್ತು  ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ  ,, ಹಾಗೆ ತುಂಬ ಕಡೆ ಇಂದ ಅವಾರ್ಡ್ ಬೇರೆ ಪಡ್ಕೊಂಡ್ ಇದ್ದಾರೆ... ಎಸ್ಟೋ ಫುಡ್ ಫೆಸ್ಟಿವಲ್ ನಲ್ಲಿ ಇವರ ಚೀಸ್ ಆರ್ಟ್ ಪ್ರದರ್ಶನ ಗೊಂಡು, ಹೆಸರುವಾಸಿ ಆಗಿದೆ ಅಂತೆ..
ಇತ್ತೇಚೆಗೆ ಲಂಡನ್ ನಲ್ಲಿ ನಡೆಯುತ್ತಿದ್ದ ಫುಡ್ ಫೆಸ್ಟಿವಲ್ ನಲ್ಲಿ ಇವರ ಆರ್ಟ್ ಬಗ್ಗೆ ಒಂದು Article ಬಂದಿತ್ತು ,, ಆದರೆ ಜಾಡು ಹಿಡಿದು ಹೊರಟಾಗ ಇವರ ಅದ್ಬುತ ಕಲೆಯ ಪರಿಚಯ ಆಯಿತು....ಅದನ್ನ ಹಾಗೆ ನಿಮ್ಮಗಳ ಜೊತೆ share ಮಾಡ್ಕೋತಾ ಇದ್ದೇನೆ.
ಇವರ ಬಗ್ಗೆ , ಹಾಗು ಇವರ ಕಲೆ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ.. ಇವರದೇ ವೆಬ್ ಸೈಟ್ ನಲ್ಲಿ ನೋಡಬಹುದು,,,
ಇವರ ಕೆಲವು ಆಯ್ದ , ಅದ್ಬುತ ಕಲಾಕೃತಿಗಳು ಇಲ್ಲಿವೆ ನೋಡಿ.....