Showing posts with label Mothers Day. Show all posts
Showing posts with label Mothers Day. Show all posts

Tuesday, May 12, 2009

ನನ್ನ ಪ್ರೀತಿಯ ಅಮ್ಮನ.. ಕೈಚಳಕದ ಕಲೆ....

ನನ್ನ ಮುದ್ದಿನ ,,, ಪ್ರೀತಿಯ ಅಮ್ಮನಿಗೆ Mothers day ಶುಭಾಶಯ ಹೇಳುತ್ತಾ... ಅವರ ಬಗ್ಗೆನೇ ಈ ಬ್ಲಾಗನ್ನು ಬರೆದಿದ್ದೇನೆ...... ಎಲ್ಲರಿಗೂ ಅಮ್ಮನ ಮೇಲೆ ಪ್ರೀತಿ ಇರುವಂತೆ.. ನನಗು ನನ್ನ ಮುದ್ದು ಅಮ್ಮನ ಮೇಲೆ... ಎಲ್ಲಿಲ್ಲದ ಪ್ರೀತಿ....ನಮ್ಮ ಅಮ್ಮನಿಗೂ ಅಸ್ಟೆ.. ನಾನು ಅಂದರೆ ಅಸ್ಟು ಪ್ರೀತಿ....ಯಾಕೆ ಅಂದ್ರೆ ನಾನು ಒಬ್ಬನೇ ಇದ್ದಿನಲ್ವ.. ನಂಗೆ compit ಮಾಡೋಕೆ ನನ್ನ ಜೊತೆ ಯಾರು ಇಲ್ಲ.. ಅದಕ್ಕೆ ನನ್ನ ಅಮ್ಮ ಎಲ್ಲ ಪ್ರೀತಿಯನ್ನು ನನಗೆ ಕೊಟ್ಟಿದ್ದಾರೆ.... ಇದರಲ್ಲಿ ನಾನು ತುಂಬ ಲಕ್ಕಿ... ಅಮ್ಮನ ಬಗ್ಗೆ ಏನ್ ಬರಿಯೋದು,,, ಏನ್ ಅಂತ ಹೇಳ್ಕೊಳೋದು...ಅಲ್ವ.. ? ಏನ್ ಹೇಳಿದ್ರು ಸಾಲೊಲ್ಲ ಏನ್ ಬರೆದರು ಮುಗಿಯೊಲ್ಲ... ನಾವು ಚಿಕ್ಕ ಮಕ್ಕಳಾಗಿದ್ದ ಗಿನಿಂದಲೂ,,,ನಮ್ಮ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ನಮ್ಮ ಜೊತೆಯಲ್ಲಿ ಇರುತ್ತಾ ನಮಗೆ ನೋವು ಅದಾಗ ಅವರು ಅದನ್ನ ಅನುಭವಿಸಿ.. ನಮಗೆ ಧೈರ್ಯ ತುಂಬುತ್ತಾ..ನಮ್ಮ ನಗುವಿನಲ್ಲಿ ಅವರ ನಗುವನ್ನು ಕಾಣುತ್ತ... ಓಹ್ ಏನ್ ಅಂತ ಬರೆಯೋದು ರೀ ಅಮ್ಮನ ಬಗ್ಗೆ... ಅವರಿಗಾಗಿಯೇ ಒಂದು ದಿನ Mothers day ಅಂತ ಹೇಳಿ ಬಿಟ್ರೆ ಏನು ಸಾಕಾಗೋಲ್ಲ.... ಅಮ್ಮ ಅನ್ನುವುದು yavagalu ಎವರ್ ಗ್ರೀನ್...... ಪ್ರತಿ ಕ್ಷಣದಲ್ಲೂ ನೆನಪಾದಾಗ ನೆನಸಿ ನಮಿಸ ಬೇಕು ಅವರಿಗೆ.... ಸರಿ ಬಿಡಿ.. ನನಗೆ emotional ಆಗಿ ಅಸ್ಟು ಚೆನ್ನಾಗಿ ಬರಿಯೋಕೆ ಬರೋಲ್ಲ....(ಇದರಲ್ಲಿ ಬರಿಯುವಂತ್ತದ್ದು ಏನು ಇಲ್ಲ) .. ಆದರೆ ನನ್ನ ಪ್ರೀತಿಯ ಅಮ್ಮನ ಹಳೆಯ ನೆನಪುಗಳನ್ನು ... ಅವರ ಕೆಲವು ಒಳ್ಳೆ ಕಲೆಯನ್ನು ಅವರ ಹವ್ಯಾಸವನ್ನು ನಿಮ್ಮ ಜೊತೆ ಬಿಚ್ಚಿಡುತ್ತಾ ಇದ್ದೇನೆ...




ನನ್ನ ಜೊತೆಗಿರುವವರು, ನನ್ನ ಬಲ್ಲವರು ಎಲ್ಲ ಹೇಳ್ತಾರೆ,, ಗುರು ನೀನು ತುಂಬ ಕ್ರಿಯೇಟಿವ್ ಮೈಂಡ್ ಕಣೋ .. ಏನಾದ್ರು ಹೊಸದನ್ನು ಮಾಡ್ತಾ ಇರುತ್ತಿಯ,, ಏನಾದ್ರು ವೆರೈಟಿ ಇರುತ್ತೆ ನಿನ್ನ ಹವ್ಯಾಸಗಳಲ್ಲಿ ಅಂತ........ ಹೌದು ಇದು ನನಗೆ ಬಂದಿದ್ದು ನನ್ನ ಅಮ್ಮನಿಂದ.....ಅವರು ಅಸ್ಟೆ... ಚಿಕ್ಕವರಿರಬೇಕದ್ರೆ ಎಲ್ಲ activities ನಲ್ಲೂ ಮುಂದಿದ್ದರಂತೆ.... ನಮ್ಮ ಅಮ್ಮ ಓದಿದ್ದು ಬರಿ SSLC ಅಸ್ಟೆ.. ಆದರೆ ಅಮ್ಮನಿಗೆ ಓದಿಗಿಂತ ಬೇರೆ ಚಟುವಟಿಗೆ ಗಳಲ್ಲಿ ಆಸಕ್ತಿ ಜಾಸ್ತಿ ಇತ್ತಂತೆ. ಅಮ್ಮ ಚಿಕ್ಕವರಿರಬೇಕಾದರೆ handy craft ನಲ್ಲಿ ತುಂಬ ಆಸಕ್ತಿ ಬೆಳೆಸಿಕೊಂಡು ಇದ್ದರು... ಏನಾದರೂ ಹೊಸ ಡಿಸೈನ್ ಕಂಡರೆ ಅದಸ್ಟು ಬೇಗನೆ ಅದನ್ನ ನೋಡಿ ಇವರು ಅದೇ ಥರ ಮಾಡುತ್ತ ಇದ್ದರಂತೆ... ಅಸ್ಟು ಇಂಟರೆಸ್ಟ್ ಅವರಿಗೆ.. ನನ್ನ ಅಮ್ಮ ಉಲ್ಲನ್ ನಿಂದ ಸ್ವೆಟರ್ , ಟೋಪಿ, ಶಾಲು ಹಾಕೋದ್ರಲ್ಲಿ expert.... ನನಗೆ ಗೊತ್ತಿರೋ ಪ್ರಕಾರ ನಾನು PUC ಓದೋವರವಿಗು ಹೊರಗಡೆ ಉಲ್ಲನ್ ಸ್ವೆಟರ್ , ಶಾಲು ಅಂತ ತೆಗೆದುಕೊಂಡಿರೋ ನೆನಪಿಲ್ಲ... ನನ್ನ ಹಾಗು ನನ್ನ ಅಪ್ಪನ swterna ಅಮ್ಮನೇ ನಿದಾನಕ್ಕೆ ಕೂತು ಹಾಕಿ ಕೊಟ್ಟಿರುವುದು... ನಮ್ಮ ಅಪ್ಪ ಇವಾಗಲು ಕೂಡ ಅಮ್ಮ ಹಾಕಿಕೊಟ್ಟಿರುವ ಸ್ವೆಟರ್ ಅನ್ನೇ ಹಾಕೊಥ ಇರೋದು... ನಾನು ಚಿಕ್ಕವನಿರಬೇಕಾದರೆ ನನಗೆ ಹಾವಿನ desing ಇರುವ ಒಂದು ಹಸರು ಬಣ್ಣದ ಸ್ವೆಟರ್ ಹಾಕಿ ಕೊಟ್ಟಿದ್ದರು.... ಅದು ಎಷ್ಟು ಚೆನ್ನಾಗಿ ಇತ್ತು ಅಂದರೆ, ಎಲ್ಲರೂ ಹೊಟ್ಟೆ ಉರಿ ಪಟ್ತ್ಕೊಥ ಇದ್ರೂ... ದಾರಿನಲ್ಲಿ ಹೋಗ್ತಾ ಇರಬೇಕಾದ್ರೆ ಎಸ್ಟೋ ಜನ ಆಂಟಿ ಬಂದು " ಪುಟ್ಟ ಈ ಸ್ವೆಟರ್ ಎಲ್ಲಿಂದ ತಗೊಂಡ್ ಬಂದಿದ್ದು " ಅಂತ ಕೇಳಿರುವುದು ಇನ್ನು ನೆನಪಿದೆ...... ಇದಿಸ್ಟೇ ಅಲ್ಲ.. ನನ್ನ ಅಮ್ಮ ಮಣಿ ನಲ್ಲಿ , ವೈರ್ ನಲ್ಲಿ ತುಂಬ ತರಹದ ಕಲ ಕೃತಿಗಳನ್ನ ಮಾಡಿದ್ದರೆ... ಆದರೆ ಎಲ್ಲವನ್ನು ಜೋಪಾನ ಮಾಡಲಿಕ್ಕೆ ಆಗಲಿಲ್ಲಾ.... ( ಕೆಲವರು desing ನೋಡಿ ಕೊಡ್ತೇವೆ ಅಂತ ತೆಗೆದುಕೊಂಡು ಹೋದವರು ವಾಪಸ್ ತಂದೇ ಕೊಡಲಿಲ್ಲ ...ಅವರ ಮೇಲೆ ನನಗೆ ಇನ್ನು ಸಿಟ್ಟು ಇದೆ , ಪಾಪ ಅಮ್ಮ ಎಷ್ಟು ಕಷ್ಟ ಪಟ್ಟು ಹಾಕಿದ್ದರು ಗೊತ್ತ...) ಆದರೆ ಅದರಲ್ಲಿ ಕೆಲವೊಂತು ಹಾಗೆ ಜೋಪಾನ ಮಾಡಿ ಇಟ್ಟುಕೊಂಡಿದ್ದೇನೆ....... ನಾನ್ ಅಂತು ಒಂದು ಸಾಮಾನನ್ನು ಕಳೆದು ಹಾಕುವುದಿಲ್ಲ... ನನಗೆ ಚಿಕ್ಕವನಿರಬೇಕಾದರೆ ತೆಗೆದು ಕೊಟ್ಟ ಪಿಲ್ಲಂಗೊವಿ .. ಸಣ್ಣ ಸಣ್ಣ ಬೊಂಬೆ ಸಹ ಜೋಪಾನವಾಗಿ ಇಟ್ಟಿದ್ದೇನೆ.. ಅಂತದ್ರಲ್ಲಿ ನಮ್ ಅಮ್ಮ ಮಾಡಿದ ಅಸ್ಟು ಒಳ್ಳೆ ಕಲಾಕೃತಿಗಳನ್ನ ಬಿಡೋಕೆ ಆಗುತ್ತ.... ಮೊದಲು ಪ್ರತಿಬಾರಿ ದಸರಾ ಟೈಮ್ ನಲ್ಲಿ ಎಲ್ಲ ಬೊಂಬೆ , ಎಲ್ಲ ಮಣಿ ಸಾಮಾನುಗಳನ್ನು (ಎಲ್ಲ ಅಮ್ಮ ಮಾಡಿದ್ದೂ ಚಿತ್ರಸಮೇತ ಹಾಕಿದ್ದೇನೆ ನೋಡಿ ಕೆಳಗಡೆ ) ಇಡ್ತಾ ಇದ್ವಿ... ಇವಾಗ ಅದಕೆಲ್ಲ ಟೈಮ್ ಇಲ್ಲ.. ಅದೆಲ್ಲ ಇವಾಗ ನಮ್ಮ ಮನೆ ಶೋ ಕೇಸ್ ನಲ್ಲಿ ಜೋಪಾನವಾಗಿ ಎಲ್ಲರೂ ನೋಡುವ ಹಾಗೆ ಕುಳಿತಿದೆ..... ನಾನು ಚಿಕ್ಕವ ನಿದ್ದಾಗ ಅಮ್ಮನ ಜೊತೆ ಸೇರಿಕೊಂಡು ಇಂಥ ಕಲಾಕೃತಿಗಳನ್ನ ಮಾಡೋಕ್ಕೆ help ಮಾಡ್ತಾ ಇದ್ದೆ.. ನನಗೆ ಇನ್ನು ನೆನಪಿದೆ... ಅಮ್ಮ ಏನಾದ್ರು ಕತೆ ಹೇಳ್ತಾ,, ಶಾಲನ್ನೋ ಸ್ವೆಟರ್ ಅನ್ನೋ ..ಹಾಕ್ತಾ ಇರಬೇಕಾದ್ರೆ ನಾನು ಉಲ್ಲನ್ ತಗೊಂಡು ಸುತ್ತುತ್ತ ಇದ್ದೆ...ಕೆಲವೊಮ್ಮೆ ಗಜಿ ಬಿಜಿ ಮಾಡಿ ಸುಕ್ಕು ಮಾಡಿ ಬಿಟ್ಟು ಓಡಿಹೊಗ್ತಾ ಇದ್ದೆ. ಹಾ ಹಾ... ನೆನೆಸಿಕೊಂಡರೆ ಮಜಾ ಇರುತ್ತೆ... ಹಾಗೆ ಅಮ್ಮನಿಗೆ ಹೆಲ್ಪ್ ಕೂಡ ಮಾಡ್ತಾ ಇದ್ದೆ ಗೊತ್ತ... ಅಮ್ಮ ಏನಾದ್ರು ಹೊಸ ಚಿತ್ರ ಬಿಡಿಸಿ ಏನಾದ್ರು ಮಾಡ್ತಾ ಇರಬೇಕಾದ್ರೆ ನಾನು ಫೆವಿಕಾಲ್ ತಗೊಂಡು ಅದನ್ನೆಲ್ಲಾ ಜೋಡಿಸಿ ಅಂಟಿಸ್ಥ ಇದ್ದೆ.. ಹೀಗೆ ಸಣ್ಣ ಪುಟ್ಟ ಕೆಲಸಗಳನು ಮಾಡ್ತಾ ಅಮ್ಮನ ಜೊತೆ ನಾನು ಸಾತ್ ಕೊಡ್ತಾ ಇದ್ದೆ... ಒಹ್ ಜಾಸ್ತಿ ಹೇಳಿದೆ ಅಂತ ಕಾಣುತ್ತೆ ಅಮ್ಮನ ಬಗ್ಗೆ,, ಇವಾಗ ಅವರೇ ಅವರ ಕೈಯಾರ ಮಾಡಿರುವ ಕಾಲಕೃತಿಗಳನ್ನ ನೋಡಿ... ನೀವೇ ಹೇಳಿ ... ಹೀಗೆ ಇದೆ ಅಂತ.....


(Mothers Day ದಿನ ಇದನ್ನ ಅಪ್ಲೋಡ್ ಮಾಡಬೇಕು ಅಂಥ ಇದ್ದೆ ಆದರೆ, ಅವೊತ್ತು ಮನೆಯಲ್ಲಿ ಇಂಟರ್ನೆಟ್ ಪ್ರಾಬ್ಲಮ್ ಇದ್ದದ್ದರಿಂದ ಅಪ್ಲೋಡ್ ಮಾಡೋಕ್ಕೆ ಆಗಲಿಲ್ಲಾ)

ಎಲ್ಲ ಮಣಿ ಬೊಂಬೆಗಳನ್ನು ಒಟ್ಟಿಗೆ ಇಟ್ಟಾಗ........






ಪ್ರಾಣಿ ಸಂಕುಲದ ಬೊಂಬೆಗಳೇ ಬೇರೆ







ಹೂವಿನ ಕುಂಡ ದಿಂದ ಹಿಡಿದು...ಬೇರೆ ಬೇರೆ ಕಲಾಕೃತಿಗಳು



ನಮ್ಮ ಮನೆ ಶೋ ಕೇಸ್ ನಲ್ಲಿ ಆರಾಮವಾಗಿ ಕುಳಿತಿರುವ ಅಮ್ಮನ ಕೈಯ ಬೊಂಬೆಗಳು ...




ಇವಾಗ ಒಂದೊಂದಾಗಿ ನೋಡೋಣ ಬನ್ನಿ....



ನಮ್ಮ ಮನೆ ಸೋಫಾ ಸೆಟ್ ಅಲ್ಲರಿ...... ನನ್ನ ಅಮ್ಮ ಹಾಕಿದ್ದು...... 20 ವರುಷದ ಕೆಳಗೆ !!! (ಇದರಲ್ಲಿ ಒಂದು table ಫ್ಯಾನ್ ಅನ್ನು ಯಾರೋ ತೆಗೆದು ಕೊಂಡು ಹೋಗಿ ವಾಪಸ್ ಕೊಡಲೇ ಇಲ್ಲ)










ಮಣಿ ಹಾಗು ನೈಲಾನ್ ದಾರದಿಂದ ಮಾಡಿದ್ದು....ತಾಜ್ ಮಹಲ್......







ಒಂದು ಬಾಟಲಿ, ಒಂದು parachoot ಕೊಬ್ಬರಿ ಎಣ್ಣೆ ಡಬ್ಬಿ, ಮತ್ತೆ ಒಂದು ಗ್ಲಾಸ್ ಬೌಲ್ ನಿಂದ ಮಾಡಿದ ಹೂವಿನ ಕುಂಡ.....





ಗಂಡು ಬೇರುಂಡ.......ಬರಿ ಮಣಿ ಇಂದ ಮಾಡಿದ್ದು.... ಎರಡು ಬೇರೆ ಬೇರೆ desing.....








ಇದು ನನ್ನ ಆಲ್ ಟೈಮ್ ಫೇವರೆಟ್ ... ಮಂಟಪ,, ಹಾಗು ಅದರ ಒಳಗೆ ಪುಟ್ಟ ಶಿವ ಲಿಂಗ...... ಲಿಂಗದ ಮೇಲಇನ ಹಾವಿನ ಹೆಡೆಯನ್ನು ನೋಡಿ ...







ಎಲ್ಲ ಮಣಿ ಬೊಂಬೆಗಳು......ನಮ್ಮ ದೀವಾನದ ಮೇಲೆ... ರೆಡಿ ಆಗಿ ಕುಳಿತಿವೆ... ಫೋಟೋ ಸೆಶನ್ ge.......

ಅವೊತ್ತು ಅಮ್ಮ ಕೂಡ ಎಷ್ಟು ಕುಶಿ ಇಂದ ಎಲ್ಲ ಬೊಂಬೆಗಳನ್ನು ಕ್ಲೀನ್ ಮಾಡಿ ಕೊಡ್ತಾ ಇದ್ರೂ ಗೊತ್ತ.... mothers day ದಿನ.....ನನಗೆ ಅಮ್ಮ ಮಾಡಿರುವ ಫೋಟೋಸ್ ತೆಗೆದು ಅವರನ್ನ ಹೋಗಳೊದ್ರಲ್ಲೇ ಕಾಲ ಕಳೆದು ಹೋಯ್ತು........ಹಾಗೆ ಅವರ ಹಳೆ ನೆನಪುಗಳನ್ನು ಕೂಡ.........




ಪುಟ್ಟ ಹುಡುಗಿ........ಡಾನ್ಸ್ ಮಾಡ್ತಾ ಇರೋ ಬೊಂಬೆ..... ಗೋಡೆಗೆ ತಗಲಾಕಿ ಆಟ ಆಡಿಸಬೇಕು.....


ಈ ತರಹದ ಎಸ್ಟೋ ಆನೆಗಳನ್ನು ಹಾಕಿದ್ದರೆ ನನ್ನ ಅಮ್ಮ...... ಕೆಲವರಿಗೆ ಗಿಫ್ಟ್ ಅಂತಾನು ಕೊಟ್ಟಿದ್ದಾರೆ......

ಕೊಕ್ಕರೆ ಹಾಗು ಮೊಲ...........


ಕುದುರೆ......

ಪುಟ್ಟ duck.........

ಏನ್ ಹೇಳಿ..... ಕೋಳಿ ಹುಂಜ...........




ಹಾಂ ... ಕಾಡಿನ ರಾಜ....ಸಿಂಹ.......




show kasininda tegeyuva modalu.........



ಬೃಂದಾವನ..... ಅದರ ಪಕ್ಕ ಚಿಕ್ಕ ಮಣಿ ಇಂದ ಮಾಡಿದ ಬಾಳೇ ಚಿಪ್ಪು...






ತಲೆ ಮೇಲೆ ಏನೋ ಹೊತ್ತುಕೊಂಡಿರುವ ಬೊಂಬೆ......


ನಮ್ಮ ಮನೆಯ ನಾಯಿಗಳ ಹಿಂದೂ..... ಪಮೊರಿಯನ್, ಜೂಲಿ ನಾಯಿ,




ಬುಟ್ಟಿ.... ಅದರೊಳಗೆ ಪುಟ್ಟ ಬಾಳೇ ಹಣ್ಣು.....


ಚಿಕ್ಕ ಚೇರು......



ವೈರ್ ನಿಂದ ಕಟ್ ಮಾಡಿ ಹಾಕಿರುವ ನಾಯಿ ಮರಿ...







ಇದು ನನ್ನ ಹಾಗು ಅಮ್ಮನ ಅಚ್ಚು ಮೆಚ್ಚಿನ ಚಿಟ್ಟೆ.... ಇದನ್ನ ಹಾಕೋಕೆ ಅಮ್ಮ ತುಂಬ ಒದ್ದಡಿದ್ದರಂತೆ.... ಆದರೆ ಇದರಲ್ಲಿ ಕೆಲವು ಚಿಟ್ಟೆಗಳು ಯಾರೋ desing ನೋಡಿ ಹಾಕಿ ಕೊಡ್ತೇವೆ ಅಂಥ ತೆಗೆದು ಕೊಂಡು ಹೋಗಿ ಹಾಳು ಮಾಡಿ ಬಿಟ್ ಇದ್ದಾರೆ.....




ಹಾ,,, ಹಾ ತೊಟ್ಟಿಲು ಹಾಗು ಅದರೊಳಗೆ ಇರುವ ಪುಟ್ಟ ಪಾಪು......



ಇದು ಅಸ್ತೆ... ಇವಾಗ desing ಗೆ ಅಂಥ ಒಂದೇ ಉಳಿಡಿರುವುದು


ಬರಿ ವೈರ್ ನಿಂದ ಸುಮ್ನೆ ಕೂತಿರಬೇಕಾದರೆ ಹಾಕಿರುವ ಜಿಂಕೆ......



ಮನೆ ಯಾ ಹೂವಿನ ಕುಂಡ...... ಗಟ್ಟಿ ತಂತಿ ಹಾಗು ವೈರ್ ಬಳಸಿ ಮಾಡಿರುವುದು.....



ಪುಟ್ಟ ಬುಟ್ಟಿ..... ಹಾಗು ವೈರ್ ನಲ್ಲಿ ಹಾಕಿರುವ ಅರಿಶಿನ ದ ಗಿಳಿ.. ಮಾಡುವೆ ಮನೆಗಳಲ್ಲಿ ಈ ಥರಹದು ಕೊಡುತಿದ್ದರು...



ನನ್ನ ಪ್ರೀತಿಯ ಕರಿ ಆನೆ............


ಉಲ್ಲನ್ ಹಾಗು mesh ನಿಂದ ಮಾಡಿರುವ ವೆಂಕಟೇಶ್ವರ ಸ್ವಾಮಿ......

ಕುಕ್ಕರ್ ಗೆ ಹಾಕೋ ಗಾಸ್ಕೆಟ್ ಬರುತಲ್ವ ಅದರಿಂದ ಮಾಡಿರುವುದು.... ಇವಾಗಲು ಗೋಡೆ ಮೇಲೆ ಎಷ್ಟು ಚೆನ್ನಾಗಿ ಕಾಣುತ್ತೆ ಗೊತ್ತ...






ಒಂದು ಬಲ್ಬ್ ನಲ್ಲಿ ಮಾಡಿರುವ ಹೂವಿನ ಕುಂಡ.......


ಇದನ್ನ ಏಲಕ್ಕಿ ಸಿಪ್ಪೆ ನಲ್ಲಿ ಮಾಡಿರುವದು... ಇದು ಮಾಡುವುದಕ್ಕೆ ಅಮ್ಮ ತುಂಬ ಕಸ್ಟ ಪಟ್ಟಿದ್ದರಂತೆ ಮೊದಲು ಚಿತ್ರ ಬಿಡಿಸಿ,, ಆಮೇಲೆ ಏಲಕ್ಕಿ ಸಿಪ್ಪೆನಲ್ಲಿ ಅಂಟಿಸಿ ಮಾಡಿರುವದು.........







ನಮ್ಮ ಮನೆಗೆ ಬಂದೋರೆಲ್ಲ ಈ ಗೋಲಿ ಗೊಂಚಲಿನ ದ್ರಾಕ್ಷಿ ನ ಹೊಗಳದೆ ಹೋಗೋದಿಲ್ಲ....... ಬರಿ ಗೋಲಿ ಹಾಗು ವೈರ್ ನಿಂದ ಮಾಡಿರುವ ಈ ದ್ರಾಕ್ಷಿ ಗೊಂಚಲು 25 ವರುಷದ ಕೆಳಗೆ ಮಾಡಿದ್ದು... ಇಂದಿಗೂ ಕೂಡ ಎಷ್ಟು ಚೆನ್ನಾಗಿ ಇದೆ ಗೊತ್ತ..... ನೆನ್ನೆ ಮೊನ್ನೆ ಹಾಕಿರೋ ಹಾಗೆ ಇದೆ.....





ಮೈಸೂರಿನ ಅನೆ ಅಂಬಾರಿ



ಇದು ಅಮ್ಮ ಮಾಡಿರು ಅಪರೂಪದ ಕಲೆ..... ಬರಿ ಬೆಂಕಿ ಕಡ್ಡಿ use ಮಾಡ್ಕೊಂಡು ಹಾಕಿರುವುದು...... ಇವಾಗ್ಲು ಎಷ್ಟು ಚೆನ್ನಾಗಿ ಇದೆ ಗೊತ್ತ... ಯಾರು ಬಂದ್ರು ಇದನ್ನ ನೋಡಿ ಕೇಳ್ತಾರೆ...........



ಇದು ಹತ್ತಿ ಹಾಗು ಸಿಲ್ವರ್ ಮಣಿ ಇಂದ ಮಾಡಿದ್ದು....... ನಮ್ಮರೂಮಿನಲ್ಲಿ ಜೋಪಾನವಾಗಿ ಇದೆ...... ಇ ಮೊಲ....





ಕೊನೆಯದಾಗಿ , ಸಿರಿಂಜ್ (ಇಂಜೆಕ್ಷನ್ ಕೊಡಬೇಕಾದರೆ ಒಂದು ಚಿಕ್ಕ ಬಾಟಲಿನಿಂದ ಔಷದನ ತಗೊತರಲ್ವ) ಬಾಟಲಿ ನಲ್ಲಿ ಮಾಡಿರುವ ಮಂಟಪ..... ಮನೆ ಚೇಂಜ್ ಮಾಡೋವಾಗ ಸ್ವಲ್ಪ ಹಾಳಾಗಿ,, ಹಾಗು ಹೀಗೂ ಇಸ್ಟು ಉಳ್ಕೊಂಡ್ ಇದೆ.........









(ಇಲ್ಲಿರುವುದೆಲ್ಲ ನಮ್ಮ ಅಮ್ಮ ಚಿಕ್ಕವರಾಗಿದ್ದಾಗ ಮಾಡಿರುವುದು ಅಂದರೆ 20 25 varshada ಕೆಳಗೆ ..... ಇವಾಗ ಅಸ್ಟೊಂದು ಮಾಡ್ತಾ ಇಲ್ಲ.......)

ಮುಂದಿನ ಬ್ಲಾಗ್ ನಲ್ಲಿ ಅಮ್ಮ ಹಾಕಿರುವ ಸ್ವೆಟರ್ ಹಾಗು ಉಲ್ಲನ್ ನಿಂದ ಮಾಡಿರುವ ಕೆಲವೊಂದು ಚಿತ್ರಗಳನು ಅಪ್ಲೋಡ್ ಮಾಡ್ತೇನೆ...)




ಇದು istte ಅಲ್ಲ ಇನ್ನು ಕೆಲವು ಫೋಟೋಗಳನ್ನು ಅಪ್ಲೋಡ್ ಮಾಡೋದಕ್ಕೆ ಆಗಲಿಲ್ಲಾ ಅದೆಲ್ಲವನ್ನೂ ನನ್ನ ಪಿಕಾಸ alubum ನಲ್ಲಿ ಇಟ್ಟಿದ್ದೇನೆ.... ಇನ್ನು ನೋಡಬೇಕೆಂದರೆ.....ಇಲ್ಲಿ ಕ್ಲಿಕ್ ಮಾಡಿ .....






My mothers Arts - Saraswathi.

http://picasaweb.google.co.in/guru.prasadkr/MyMothersArtsSaraswathi?authkey=Gv1sRgCL7D6rm008DonwE#