Showing posts with label Carlos Alberto-Portuguese carpenter. Show all posts
Showing posts with label Carlos Alberto-Portuguese carpenter. Show all posts

Saturday, July 25, 2009

ಮರದ ಸ್ಕೂಟರ್ ......ನೋಡಿದಿರಾ?

ಮನುಷ್ಯನ ತಲೆಗೆ ಏನಾದರೂ ಮಾಡಬೇಕು ಅಂತ ಬಂದರೆ......ಅದಕ್ಕೆ ಸರಿಯಾಗಿ ಛಲ ಅಂತ ಒಂದು ಇದ್ದರೆ... ಏನ್ ಬೇಕಾದರು ಮಾಡಿ ಬಿಡುತ್ತಾನೆ ಅನ್ನೋದಕ್ಕೆ ಇದು ಒಂದು ಉದಾಹರಣೆ.......(ನಮ್ಮಂಥ ಸೋಮಾರಿಗಳನ್ನು ಹೊರತುಪಡಿಸಿ :-)) ಅದಕ್ಕೆ ಅಲ್ವ... ಪ್ರಕೃತಿ ಯನ್ನು ಕೂಡ ಬಿಡದೆ.... ಎಲ್ಲ ನಮಗೆ ಬೇಕಾದ ಹಾಗೆ ಬದಲಾಯಿಸಿ ಕೊಳ್ಳುತ್ತಿರುವುದು.... ಇರಲಿ,, ಇವಾಗ ನಾನು ಹೇಳಲು ಹೊರಟಿರುವುದು..ಒಬ್ಬರ ಕ್ರಿಯೇಟಿವಿಟಿ ಬಗ್ಗೆ.. ಹಾಗೆ ಅವರ ಛಲ ದ ಬಗ್ಗೆ....
Carlos Alberto ಅನ್ನೋ ಒಬ್ಬ Portuguese carpenter .. ಇವರು, ತಮ್ಮಲ್ಲಿ ಇರುವ ಕಲೆಯನ್ನು ಹೇಗಾದರೂ ಮಾಡಿ... ಸುದ್ದಿ ಮಾಡಬೇಕು ಅಂತ ಯೋಚಿಸುತ್ತಾ ಇದ್ದರಂತೆ....ಅವಗ ಇವರ ಕಣ್ಣಿಗೆ ಕಾಣಿಸಿದ್ದು... ಗೋಡನ್ ನಲ್ಲಿ ಬಿದ್ದಿರುವ ಒಂದು ಹಳೆ ವೆಸ್ಪ ಸ್ಕೂಟರ್.....(ಗೊತ್ತಲ್ವ... ನಮ್ಮ ಹಳೆ ಕಾಲದ...ಹ್ಯಾಂಡ್ gear ಸ್ಕೂಟರ್... ಇವಗಂತು ನೋಡಕ್ಕೆ ಸಿಗೋದು ಸ್ವಲ್ಪ ಅಪರೂಪನೆ ಅಲ್ವ ) .. ಸರಿ ಇದನ್ನು ನೋಡ್ತಾ ಒಂದು ಯೋಚನೆ ಇವರಿಗೆ ಹೊಳೆಯಿತಂತೆ ...ನಾನು ಯಾಕೆ ಇದೆ ಮಾದರಿಯ,,, wooden ಸ್ಕೂಟರ್ ಮಾಡಬಾರದು ಎಂದು . ಇನ್ನೇನು... ಈ ತರಹದ ಯೋಚನೆ ಬಂದ ಕೂಡಲೇ ಅವರ ಒಳಗಿನ ಕಲೆಗಾರ ಎದ್ದು ಕುಳಿತುಬಿತ್ ಇದ್ದ.... ಅದಕ್ಕೆ ಸರಿಯಾಗಿ ಅವರ ಮಗಳು ಅಪ್ಪನಿಗೆ ಸಾತ್ ಕೊಡೋದಕ್ಕೆ ನಿಂತುಕೊಂಡಳು.....ಅದಾದ ಮೇಲೆ ಮುಂದಿನದು ಇತಿಹಾಸ.....ಕೊನೆಗೂ,,, ತನ್ನ ಛಲ ಬೇಡದೆ.....ಏನು ಅನ್ನುದೊಕೊಂಡ್ ಇದ್ದರೋ ಅದನ್ನು ಸಾದಿಸೆ ಬಿಟ್ಟರು....engine ಮಾತ್ರ ಹಳೆಯ ವೆಸ್ಪ ಸ್ಕೂಟರ್ ದು.... ಹಾಗೆ suspensions and wheels ಇದೆರಡು... ಮೆಟಲ್ ನಿಂದ ಮಾಡಿದ್ದೂ ಅಸ್ಟೆ... ಮಿಕ್ಕಿದೆಲ್ಲ ಬರಿ ಮರ........ಇದರ ಬಗ್ಗೆ ನಾನು ಏನು ಹೇಳೋದಿಲ್ಲ... ನೀವೇ ನೋಡಿ ಇವರ ಫೋಟೋಗಳೇ ಕತೆ ಹೇಳುತ್ತವೆ.........
ಅಂದ ಹಾಗೆ ಇದರ ಹೆಸರು Vespa Daniela ಅಂತೆ.. ಇದನ್ನು ತಮ್ಮ ಮಗಳಿಗೋಸ್ಕರ dedicate ಮಾಡಿ ತಯಾರಿಸಿರುವುದಂತೆ.... ಸೂಪರ್ ಅಪ್ಪ ಅಲ್ವ .....





















http://www.carpintariacarlosalberto.com/ ಇದು ಇವರ ಅದಿಕೃತ ವೆಬ್ ಸೈಟ್.... ಆದರೆ ಸೆಕ್ಯೂರಿಟಿ reason ನಿಂದ ಓಪನ್ ಮಾಡೋಕೆ ಆಗೋಲ್ಲ... ಪರ್ಸನಲ್ usege ಮಾತ್ರ ಇಟ್ಕೊಂಡ್ ಇದ್ದರೆ ಅಂತ ಕಾಣುತ್ತೆ.