*ಚಿಕ್ಕ ಮಗು , ಬೇರೆ ಮಕ್ಕಳ ಸೈಕಲ್ ನ ನೋಡಿ ನನಗು ಅದೇ ತರಹದ ಸೈಕಲ್ ಬೇಕು ಅಂಥ ಇರೋ ಸೈಕಲ್ ಅನ್ನೇ ಮುಟ್ಟೋದಿಲ್ಲ
* ಸ್ವಲ್ಪ ದೊಡ್ಡವರಾದ ಮೇಲೆ ಅದು ಯಾವುದೊ ಪುಸ್ತಕ ಓದಕ್ಕೆ ಸಿಕ್ಕಲಿಲ್ಲ ಅಂಥ ಓದಕ್ಕೆ ಕಷ್ಟ ಪಡ್ತೇವೆ..
* ಇನ್ನು ಸ್ವಲ್ಪ ದೊಡ್ಡವರಾದಾಗ ಕಂಪ್ಯೂಟರ್ ಇಲ್ಲ ಅಂಥ ಕಲಿಯೋದನ್ನೇ ನಿದಾನ ಮಾಡ್ತೇವೆ (ಈಗಿನ generation ಮಕ್ಕಳು)
*ಸೈಕಲ್ ಇದ್ದರೆ , ಮೋಟರ್ ಸೈಕಲ್ ಬೇಕು ಅಂಥ, ಮೋಟರ್ ಸೈಕಲ್ ಇದ್ದರೆ ಕಾರ್ ಬೇಕು ಅಂಥ, ಕಾರ್ ಇದ್ದರೆ ಇನ್ನು ಚೆನ್ನಾಗಿ ಇರುವ ಕಾರ್ ಇದ್ದಿದರೆ ಚೆನ್ನಾಗಿ ಇರ್ತ ಇತ್ತು ಅಂಥ ಮನಸು ಯೋಚಿಸುವುದನ್ನೇ ಬಿಡೋದಿಲ್ಲ ಅಲ್ವ..
ನನಗು ಈ ತರಹದ ಎಸ್ಟೋ incident ಆಗಿದೆ.. ಏನಾದ್ರು ಕೆಲಸ ಮಾಡಬೇಕಾದರೆ ಕೆಲವೊಂದು ವಸ್ತುಗಳು ಇರುತ್ತೆ ಅದರಿಂದನೆ ಮಾಡಬೇಕು ಅಂದು ಕೊಂಡಿರುವ ಕೆಲಸ ಮಾಡಬಹುದು...ಆದರೆ ಇದಕ್ಕಿಂದ ಚೆನ್ನಾಗಿರೋದು ವಸ್ತು ಸಿಕ್ಕರೆ ಇನ್ನು ಚೆನ್ನಾಗಿ ಇರುತ್ತೆ ಅಂಥ ಇರೋ ಕೆಲಸವನ್ನು ಎಸ್ಟೋ ಸರ್ತಿ ಮಾಡಕ್ಕೆ ಆಗದೆ ಸುಮ್ಮನೆ ಬಿಟ್ಟಿರುತ್ತೇವೆ ಅಲ್ವ....ಇದು ಎಲ್ಲರಿಗೂ ಆಗುವ ಅನುಭವ... ಎಲ್ಲರೂ ಹೇಳುತ್ತೇವೆ ಕೇಳುತ್ತೇವೆ ಆದರೆ ವಾಸ್ತವಕ್ಕೆ ಬಂದಾಗ ಆಗುವುದೇ ಬೇರೆ..... ಇಸ್ಸ್ತೆಲ್ಲ ಯೋಚನೆಗಳು ನನಗೆ ಯಾಕೆ ಬಂದವು ಅಂದ್ರೆ......ಈ ಕೆಳಗಿನ ಚಿತ್ರಗಳನ್ನು ನೋಡಿ.... ಯಾರೋ ಕಲಾವಿದ ತುಂಬ ಕ್ರಿಯೇಟಿವ್ ಆಗಿ ಒಳ್ಳೆ imagination ನಿಂದ ಅದ್ಬುತ ಕಲ್ಪನೆ ಇಂದ ಈ ಫೋಟೋಗಳಿಗೆ ಎಫೆಕ್ಟ್ ಕೊಟ್ಟಿದ್ದಾನೆ,,, ನಾನು ಈ ಥರ ಇದ್ದಿದ್ದರೆ ಹೇಗೆ ಅಂಥ .... ಸರಿ ಸುಮ್ಮನೆ ಯೋಚನೆ ಮಾಡುವುದನ್ನು ಬಿಟ್ಟು ಇದನ್ನು ನೋಡಿ ಯೋಚಿಸಿ....... :-)

ನಾನು ಚಿಕ್ಕ ಹುಡುಗಿ ಆಗಿದ್ದರೆ ಹೇಗೆ ಇರ್ತ ಇತ್ತು?

ನಾನು ಕೊಕ್ಕರೆ ಆಗಿದ್ದರೆ ಇನ್ನು ದೊಡ್ಡ ಮೀನು ಸಿಕ್ತ ಇತ್ತೇನೋ ?

ನಾನು ಜೆಟ್ flight ಆಗಿದ್ದರೆ ಈ ಮರಳುಗಾಡನ್ನು ಎಷ್ಟು ಬೇಗ ದಾಟಬಹುದಿತ್ತು !!!!






