Friday, July 3, 2009

ಕಲ್ಪನೆಯ ನೆರಳಿನ ಚಿತ್ತಾರ.----shadow of imagination

ಮನುಷ್ಯನ ಆಸೆಗೆ ಮಿತಿ ಇದೆಯಾ ..... ಒಟ್ಟಿನಲ್ಲಿ ನಮಗೆ ಏನು ಇರುತ್ತದೋ ಅದರಲ್ಲಿ ತೃಪ್ತಿ ಪಡುವುದಿಲ್ಲ.... ಅಯ್ಯೋ ಅದು ಇದ್ದಿದ್ದರೆ ಚೆನ್ನಾಗಿ ಇರ್ತ ಇತ್ತೇನೋ ... ಇದು ಇದ್ದಿದ್ದರೆ ಚೆನ್ನಾಗಿ ಇರ್ತ ಇತ್ತೇನೋ ಅಂಥ ಇಲ್ಲದಿರುವುದರ ಬಗ್ಗೆ ಯೋಚಿಸುವುದೇ ಒಂದು ಕೆಲಸ ಆಗಿ ಬಿಟ್ ಇರುತ್ತೆ... ಇದರಲ್ಲಿ ಯಾರು ಏನು ಕಮ್ಮಿ ಇಲ್ಲ... ಇವಗಿನ ಜೀವನಾನೆ ಹೀಗೆ ಅಗ್ಬಿತ್ ಇದ್ದೆ...ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ... ಇರೋದನ್ನ ಬಿಟ್ಟು ಇಲ್ಲದೆ ಇರೋದನ್ನ ಯೋಚಿಸಿ ಅದು ಇಲ್ಲ ಅಂಥ ಇರುವ ಕೆಲಸವನ್ನು ಮುಂದುಡುತ್ತಾ ಇರುತ್ತೇವೆ ಅಲ್ವ..
*ಚಿಕ್ಕ ಮಗು , ಬೇರೆ ಮಕ್ಕಳ ಸೈಕಲ್ ನ ನೋಡಿ ನನಗು ಅದೇ ತರಹದ ಸೈಕಲ್ ಬೇಕು ಅಂಥ ಇರೋ ಸೈಕಲ್ ಅನ್ನೇ ಮುಟ್ಟೋದಿಲ್ಲ
* ಸ್ವಲ್ಪ ದೊಡ್ಡವರಾದ ಮೇಲೆ ಅದು ಯಾವುದೊ ಪುಸ್ತಕ ಓದಕ್ಕೆ ಸಿಕ್ಕಲಿಲ್ಲ ಅಂಥ ಓದಕ್ಕೆ ಕಷ್ಟ ಪಡ್ತೇವೆ..
* ಇನ್ನು ಸ್ವಲ್ಪ ದೊಡ್ಡವರಾದಾಗ ಕಂಪ್ಯೂಟರ್ ಇಲ್ಲ ಅಂಥ ಕಲಿಯೋದನ್ನೇ ನಿದಾನ ಮಾಡ್ತೇವೆ (ಈಗಿನ generation ಮಕ್ಕಳು)
*ಸೈಕಲ್ ಇದ್ದರೆ , ಮೋಟರ್ ಸೈಕಲ್ ಬೇಕು ಅಂಥ, ಮೋಟರ್ ಸೈಕಲ್ ಇದ್ದರೆ ಕಾರ್ ಬೇಕು ಅಂಥ, ಕಾರ್ ಇದ್ದರೆ ಇನ್ನು ಚೆನ್ನಾಗಿ ಇರುವ ಕಾರ್ ಇದ್ದಿದರೆ ಚೆನ್ನಾಗಿ ಇರ್ತ ಇತ್ತು ಅಂಥ ಮನಸು ಯೋಚಿಸುವುದನ್ನೇ ಬಿಡೋದಿಲ್ಲ ಅಲ್ವ..

ನನಗು ಈ ತರಹದ ಎಸ್ಟೋ incident ಆಗಿದೆ.. ಏನಾದ್ರು ಕೆಲಸ ಮಾಡಬೇಕಾದರೆ ಕೆಲವೊಂದು ವಸ್ತುಗಳು ಇರುತ್ತೆ ಅದರಿಂದನೆ ಮಾಡಬೇಕು ಅಂದು ಕೊಂಡಿರುವ ಕೆಲಸ ಮಾಡಬಹುದು...ಆದರೆ ಇದಕ್ಕಿಂದ ಚೆನ್ನಾಗಿರೋದು ವಸ್ತು ಸಿಕ್ಕರೆ ಇನ್ನು ಚೆನ್ನಾಗಿ ಇರುತ್ತೆ ಅಂಥ ಇರೋ ಕೆಲಸವನ್ನು ಎಸ್ಟೋ ಸರ್ತಿ ಮಾಡಕ್ಕೆ ಆಗದೆ ಸುಮ್ಮನೆ ಬಿಟ್ಟಿರುತ್ತೇವೆ ಅಲ್ವ....ಇದು ಎಲ್ಲರಿಗೂ ಆಗುವ ಅನುಭವ... ಎಲ್ಲರೂ ಹೇಳುತ್ತೇವೆ ಕೇಳುತ್ತೇವೆ ಆದರೆ ವಾಸ್ತವಕ್ಕೆ ಬಂದಾಗ ಆಗುವುದೇ ಬೇರೆ..... ಇಸ್ಸ್ತೆಲ್ಲ ಯೋಚನೆಗಳು ನನಗೆ ಯಾಕೆ ಬಂದವು ಅಂದ್ರೆ......ಈ ಕೆಳಗಿನ ಚಿತ್ರಗಳನ್ನು ನೋಡಿ.... ಯಾರೋ ಕಲಾವಿದ ತುಂಬ ಕ್ರಿಯೇಟಿವ್ ಆಗಿ ಒಳ್ಳೆ imagination ನಿಂದ ಅದ್ಬುತ ಕಲ್ಪನೆ ಇಂದ ಈ ಫೋಟೋಗಳಿಗೆ ಎಫೆಕ್ಟ್ ಕೊಟ್ಟಿದ್ದಾನೆ,,, ನಾನು ಈ ಥರ ಇದ್ದಿದ್ದರೆ ಹೇಗೆ ಅಂಥ .... ಸರಿ ಸುಮ್ಮನೆ ಯೋಚನೆ ಮಾಡುವುದನ್ನು ಬಿಟ್ಟು ಇದನ್ನು ನೋಡಿ ಯೋಚಿಸಿ....... :-)


ನಾನು ಚಿಕ್ಕ ಹುಡುಗಿ ಆಗಿದ್ದರೆ ಹೇಗೆ ಇರ್ತ ಇತ್ತು?


ನಾನು ಕೊಕ್ಕರೆ ಆಗಿದ್ದರೆ ಇನ್ನು ದೊಡ್ಡ ಮೀನು ಸಿಕ್ತ ಇತ್ತೇನೋ ?


ನಾನು ಜೆಟ್ flight ಆಗಿದ್ದರೆ ಈ ಮರಳುಗಾಡನ್ನು ಎಷ್ಟು ಬೇಗ ದಾಟಬಹುದಿತ್ತು !!!!


ಓಹ್ ನಾನು ಹದ್ದು ಆಗಿದ್ದರೆ ಹೇಗೆ ?


ಈ ಚಿಕ್ಕ ಎರೋಪ್ಲೈನ್ ಚಿಟ್ಟೆ ಅನ್ನ್ಕೊಳೋದು ನೋಡಿ... ನಾನು ಈ ಥರ ದೊಡ್ಡ ಪಕ್ಷಿ ಆಗಿದ್ದರೆ?


ನಾನು ಸಾಗುವ ದಾರಿನಲ್ಲು ಇತರ ಇದ್ದಿದ್ದರೆ...


ನಾನೇನಾದ್ರು ನಾಯಿ ಆಗಿದ್ದರೆ !!!!! ಅವಾಗ ನೋಡ್ಕೊಥ ಇದ್ದೆ


ನಾನೇನಾದರು ಈ ಥರ ಆಗಿರಬೇಕಿತ್ತು,,, ಎಲ್ಲರನ್ನು ಎದುರಿಸುತ್ತ ಇದ್ದೆ....!!


ಏಂಜೆಲ್ !!!!! ಆಗಿದ್ದರೆ ಚೆನ್ನಾಗಿ ಇರ್ತ ಇತ್ತು....


ಈ ಸುಂದರವಾದ ಸಂಜೆನಲ್ಲಿ ನನ್ನ ಜೊತೆಗಾರ್ತಿ ಇದ್ದಿದ್ದರೆ.....ಎಷ್ಟು ಚೆನ್ನಾಗಿ ಇರ್ತ ಇತ್ತು ಅಲ್ವ......
( ಕೊನೆ ಫೋಟೋ ಮಾತ್ರ ನನಗೆ ತುಂಬ ಇಷ್ಟ ಆಯಿತು.......) ಏನ್ ಅದ್ಬುತ ಕಲ್ಪನೆಗಳು ಅಲ್ವ......
.
.
.
.
.
ಹಲೋ ಇಸ್ಟೇ ರೀ.... ಇವಾಗ ನೀವು ಹೇಳಿ ನೀವು ಏನಾಗಿದ್ದಾರೆ ಅಂಥ ಯೋಚಿಸ್ತಾ ಇದ್ರಿ ಅಂಥ.........?

16 comments:

 1. ಗುರು,

  ಸೂಪರ್ ಕಣ್ರಿ,.....ಎಂಥ ಫಿಲಾಸಫಿ ಅಲ್ವಾ...ಬೇರೆಯವರಿಗಿರುವುದು ನಮಗಿಲ್ವಲ್ಲ ಅಂತ ಕೊರಗೋದು...ಅದೆಲ್ಲಾ ಇದುವರೆಗೆ ಮಾತಿನಲ್ಲಿ ಮಾತ್ರವಿತ್ತು..ಈಗ ಅದು ಚಿತ್ರಗಳ ಮೂಲಕ ಹೇಳುವಂತಾಗಿಬಿಟ್ಟಿದೆಯಲ್ಲಾ...ಇವುಗಳನೆಲ್ಲಾ ಅದೆಷ್ಟು ಸರಳವಾಗಿ ಸುಲಭವಾಗಿ ಅರ್ಥವಾಗುವಂತೆ ಸೃಷ್ಟಿಸಿರುವ ಕಲಾವಿಧನಿಗೆ ನನ್ನ ಸಾವಿರ ನಮನ..

  ನಿಮ್ಮ ಇಂಥ ಹೊಸತನದ ನಿಮ್ಮ ಹುಡುಕಾಟಕ್ಕೆ ಅಭಿನಂದನೆಗಳು.

  ReplyDelete
 2. ಹಲೋ ಶಿವೂ...
  ತುಂಬ ಧನ್ಯವಾದಗಳು......ನಿಮ್ಮ ಹೊಸ ಲೀಖನವನ್ನು ಇನ್ನು ನೋಡಿಲ್ಲ ಬೇಗ ನೋಡಿ ಪ್ರತಿಕ್ರಿಯಿಸುತ್ತೇನೆ.....

  ReplyDelete
 3. ಗುರು,

  ಕೊನೆಯ ಫೋಟೋವನ್ನು ಉಲ್ಟಾ ಹಾಕಿದಿರಾ!! ಈಗಿನ ಕಾಲದಲ್ಲಿ ಇಬ್ಬರಾದವರು ಒಬ್ಬನೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಬಯಸುತ್ತಿದ್ದಾರೆ ಅಲ್ಲವೇ? (ನಾನಿನ್ನು ಬ್ರಹ್ಮಚಾರಿ. ನನಗೆ ಹೀಗೆ ಇರುವುದೇ ಇಷ್ಟ.) ;)

  ಚಿತ್ರಗಳು ಸೂಪರ್.

  ReplyDelete
 4. ಗುರು,
  ನನಗೂ ಕೊನೆ ಫೋಟೋ ಇಷ್ಟವಾಯ್ತು. ಸುಂದರ ಸಂಜೆಯಲ್ಲಿ ಸಂಗಾತಿಯಿರದೆ ಹೇಗಿರಲಿ? ವಾಸ್ತವದಿಂದ ಕಲ್ಪನೆಗೆ ಜಾರಿಸುವ ಹೊಸ ಚಿತ್ರಗಳಿಂದ ಕನಸಿನ ಲೋಕಕ್ಕೆ ಹೋಗಿಬಂದಂತಾಯ್ತು.

  ReplyDelete
 5. ರಾಜೀವ
  ಈಗಿನ ಕಾಲದಲ್ಲಿ ಇಬ್ಬರಾದವರು ಒಬ್ಬನೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳ್ತೀರಾ,, ಹಾಗೆ ನಾನು ಬ್ರಹ್ಮಚಾರಿ ಅಂತಾನು ಹೇಳ್ತೀರಾ.... ಏನ್ ಸರ್,, ಬ್ರಹ್ಮಚಾರಿ ಆಗಿ ಇದ್ದುಕೊಂಡೇ ಇಸ್ಟೊಂದು ಅನುಭವನ........ :-)
  ಹಾ ಹಾ
  ನಿಮ್ಮ ಪ್ರತಿಕ್ರಿಯೆಗೆ,, ಧನ್ಯವಾದಗಳು......

  ReplyDelete
 6. ಮಲ್ಲಿಕಾರ್ಜುನ್....
  ವಾಸ್ತವವನ್ನು ಮರೆತು ಕಲ್ಪನಾ ಲೋಕಕ್ಕೆ ಹೋಗಿಬಂದು,, ನನ್ನ ಲೇಖನಕ್ಕೆ ಪ್ರತಿಕ್ರಿಯೆ ಹಾಕಿದಕ್ಕೆ ಧನ್ಯವಾದಗಳು....
  ಗುರು

  ReplyDelete
 7. ಗುರು ಅವರೇ,
  ಪ್ರತಿಸಲವೂ ಹೊಚ್ಚ ಹೊಸದು!! ಊಹಿಸಲೂ ಸಾಧ್ಯವಾಗದಂತಹ ವಿಚಾರಧಾರೆಗಳ ಬಗ್ಗೆ, ಒಳ್ಳೊಳ್ಳೆ ಸಂಗ್ರಹವಿದೆ ನಿಮ್ಮಲ್ಲಿ!
  ನಿತ್ಯ ನೂತನ ವಿಸ್ಮಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವ ನಿಮಗೆ, ನನ್ನ ಹೃದಯ ಪೂರ್ವಕ ವಂದನೆಗಳು!

  ಲೇಖನ ಮತ್ತು ಫೋಟೋಗಳು ಚೆನ್ನಾಗಿವೆ. ಹೀಗೆ ಮುಂದುವರೆಯಲಿ ನಿಮ್ಮ ಅನ್ವೇಷಣೆ!!!

  ReplyDelete
 8. vaav !!! vaaVv !!! o0doo0du chitragaLu nammannu bEreyade lokakke kareduko0Du hOguttade.
  nanagu anisuttaa u0Tu naanu su0dara haDagaagiddare e0du .. .. a su0daravaada Urannu kaNNa tu0ba tu0bi koLLuttidde :-( ...
  nanage tu0baa meccuge yaadaddu ... haDagu haagu kaDeya citra.. adaralli sUrya muLuguvaagina a baNNa !!!! adannu baNNisalu padagaLe sigutilla.

  I citravannu nammodi0ge ha0ciko0Diddakke nimage sahasra va0danegaLu.

  ReplyDelete
 9. ವಾಹ್ ಸಕ್ಕತ್ ಫೋಟೋಗಳು!!

  ಹೌದು ಗುರು, ನಾವು ಹೀಗೆನೆ. ಗೋಪಾಲಕೃಷ್ಣ ಅಡಿಗರು ಹೇಳಿದಂತೆ "ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ".

  ReplyDelete
 10. SSK ರವರೆ ...
  ತುಂಬ ಧನ್ಯವಾದಗಳು....

  ReplyDelete
 11. ರೂಪ,, ನಿಮ್ಮ ಪ್ರತಿಕ್ರಿಯೆಗೆ... ಧನ್ಯವಾದಗಳು....
  ಹೌದು ನೀವು ಹಡಗಾಗಿದ್ದರೆ ಅಂತ ಯೋಚನೆ ಮಾಡ್ತಾ ಇದ್ದೀರಾ? ಯಾಕೆ?
  ಗುರು

  ReplyDelete
 12. thank you ರೂಪಶ್ರಿಜಿ

  ReplyDelete
 13. ಗುರು, ಎಲ್ಲಿಂದ ಹುಡುಕಿಕೊಂಡು ಬರ್ತೀರೊ ನೀವು. ಅದ್ಭುತ ಕಲ್ಪನೆ. ಜೀವನದ ಸತ್ಯಗಳನ್ನು ಇಂಥಾ ಕಲ್ಪನೆಗಳ ಮೂಲಕ ತುಂಬಾ ಸುಂದರವಾಗಿ ಕಲಾವಿದ ಮೂಡಿಸಿದ್ದಾನೆ

  ReplyDelete
 14. haDagaadare, iDI pra0pacavenne noDabahudalla e0ba dUrada aase
  :-) :-)

  ReplyDelete
 15. ಗುರು....

  ತುಂಬಾ ಚೆನ್ನಾಗಿದೆ....
  ಇದೆಲ್ಲ ಹೇಗೆ ಹುಡುಕುತ್ತೀರೋ ಗೊತ್ತಿಲ್ಲ...
  ನಮಗಂತೂ ಸೋಜಿಗ....

  ಪ್ರತಿಬಾರಿಯೂ ಆಶ್ಚರ್ಯ ತೋರಿಸುವ ನಿಮಗೆ
  ಅಭಿನಂದನೆಗಳು....

  ನನಗೆ ನೀವು ಹಾಕಿದ ಈ ಪೋಸ್ಟ್ ಗೊತ್ತಾಗಲೇ ಇಲ್ಲ...
  ನಾನು ನಿಮ್ಮ ಬ್ಲಾಗ್ ಫಾಲೋ ಮಾಡ್ತ ಇದ್ದರೂ ಗೊತ್ತಾಗಲಿಲ್ಲ...
  ಈ ಬಾರಿ ಈಮೇಲ್ ಸಹ ಬಂದಿಲ್ಲ...

  ಪ್ಲೀಸ್ ಹೇಗಾದರೂ ತಿಳಿಸಿ ಬಿಡಿ ಮಾರಾಯ್ರೆ...!

  ReplyDelete
 16. ಪ್ರಕಾಶ್ ,,, ನಿಮಗೆ ನಾನು ಮೊದಲೇ ಮೇಲ್ ಮಾಡಿದ್ದೆ.... mostly ನೀವು ಗಮನಿಸಿರಲಿಲ್ಲ ಅಂತ ಕಾಣುತ್ತೆ.....
  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.....
  ಗುರು

  ReplyDelete