Wednesday, July 22, 2009

ವಿಚಿತ್ರ ,ವಿಸ್ಮಯಗಳ ಸಂಶೋದನೆ......!!!!!!!

"ಕಗ್ಗತ್ತಲ ಅಮಾವಾಸ್ಯ ರಾತ್ರಿ...........ಎಲ್ಲೆಡೆ ನೀರವ ಮೌನ .....ಒಂದು ದೊಡ್ಡ ಬೆಟ್ಟ....ಅದರ ಹತ್ತಿರ ಇಬ್ಬರು ನೆಡೆದು ಕೊಂಡು ಹೋಗುತ್ತಿದ್ದಾರೆ......ಅವರಿಗೆ ಯಾವ ಭಯನು ಇದ್ದ ಹಾಗೆ ಕಾಣಿಸುತ್ತಿಲ್ಲ ......ದೆವ್ವ ಬೂತ ಇದರ ಬಗ್ಗೆ ಒಂದು ಚೂರು ಹೆದರಿಕೆ ಇಲ್ಲದಿರುವ ಥರ ನೆಡೆದು ಕೊಂಡು ಹೋಗ್ತಾ ಇದ್ದಾರೆ.......ಭಯಂಕರ ಕತ್ತಲು.... ಕೈಯಲ್ಲಿ ಒಂದು lyatin ತರಹದ ದೀಪ.....ಪ್ರಕಾಶಮಾನವಾಗಿ ಬೆಳಕು ಕೊಡ್ತಾ ಇದೆ....ಹಾಗೆ ಮುಂದೆ ಸಾಗುತ್ತ ಇದ್ದಾರೆ......ದೂರದಲ್ಲಿ ಎಲ್ಲೊ ಒಂದು ಕಡೆ ನರಿ ಘೀಳಿಡುವ ಶಬ್ದ.....ಆದರೆ ಅದು ಯಾವುದು ಇವರ ಪರಿವಿಗೆ ಇಲ್ಲ......ಲ್ಯಾಟಿನ್ ನಿನ್ನ ಬೆಳಕಿಗೆ... ಸುತ್ತಮುತ್ತ ಇರುವ ಹುಳ ಹುಪ್ಪಟ್ಟೆ ಗಳು ಬಂದು ಗುಂಯು ಗುಡುತ ಬೆಳಕಿನ ಜೊತೆಯಲ್ಲೇ ಸಾಗುತ್ತಾ ಇದೆ.........ಒಬ್ಬರ ಹಿಂದೆ ಒಬ್ಬರಂತೆ ಒಂದು ಚೂರು ಮಾತನಾಡದೆ ನೆಡೆದು ಕೊಂಡು ಹೋಗುತ್ತಾ ಇದ್ದಾರೆ... ಹಾಗೆ ಎಷ್ಟು ಹೊತ್ತು ನೆಡೆದರೋ ಅವರಿಗೆ ಗೊತ್ತಿಲ್ಲ.......ಇನ್ನು ಎಷ್ಟು ದೂರ ನೆಡಿಬೇಕೋ ಅದು ಮಾತ್ರ ಗೊತ್ತಿರೋ ಹಾಗೆ ಬೇಗ ಬೇಗ... ಹೆಜ್ಜೆ ಹಾಕುತ್ತಲಿದ್ದಾರೆ ......ಎಸ್ಟೋ ಹೊತ್ತು ನೆಡೆದ ಮೇಲೆ.....ಒಬ್ಬ ಸ್ವಲ್ಪ ಹಾಗೆ ನಿಂತು ಲೈಟ್ ನ ಬೆಳಕಿನಲ್ಲಿ ಸುತ್ತಲು ನೋಡಿದ....ಯಾಕೋ ಏನೋ.....ಗೊತ್ತಿಲ್ಲ.... ಹಾಗೆ ಸ್ವಲ್ಪ ದಾರಿ ಸರಿಯಾಗಿ ಇದೆ ಎಂದು ನೋಡಿಕೊಂಡು ಮುಂದೆ ಸಾಗುತಲಿತ್ತು ಅವರ ಪಯಣ.......ಇದ್ದಕ್ಕಿದ್ದ ಹಾಗೆ ಇಬ್ಬರು ಒಂದು ಜಾಗದಲ್ಲಿ ನಿಂತು ಬಿಟ್ಟರು.....ಒಂದು ನಿಮಿಷ ಯೋಚಿಸಿ... ಬೆನ್ನ ಮೇಲೆ ಹೊತ್ತು ತಂದಿದ್ದ ಸಾಮಗ್ರಿಗಳನ್ನು ಬಿಡಿಸಿ.....ಏನೋ ಮಾಡುವುದಕ್ಕೆ ಶುರು ಮಾಡಿದರು,,,, ಸ್ವಲ್ಪ ಹೊತ್ತಿನಲ್ಲೇ ಅವರಿಗೆ ಬೇಕಾಗಿರೋ ಹಾಗೆ ಟೆಂಟ್ ಸಿದ್ದ ಮಾಡಿಕೊಂಡು ತಾವು ತಂದಿದ್ದ... ಸಾಮಗ್ರಿಗಳನ್ನು ತೆಗೆದು !!! ಯಾವುದೊ ದೊಡ್ಡ ಕಾರ್ಯಕ್ಕೆ ಸಿದ್ದ ಆಗುತ್ತ ಇದ್ದರು.......ಅಸ್ಟು ಹೊತ್ತಿಗೆ ರಾತ್ರಿ ಕಳೆದು.... ನಿದಾನಕ್ಕೆ ಬೆಳಕು ಮೂಡುವ ಹೊತ್ತು ಆಗಿತ್ತು....... ಕೆಂಪಗಿನ ಸೂರ್ಯ ನಿದಾನಕ್ಕೆ ತನ್ನ ಬೆಳಕನ್ನು ಹೊರಚಲ್ಲುವುದಕ್ಕೆ ಪ್ರಯತ್ನ ಪಡ್ತಾ ಇತ್ತು..... ಅಬ್ಬ್ಬ!!!!!!! ಆಗ ಕಾಣಿಸಿತು ನೋಡಿ ..... ಒಂದು ಮನುಷ್ಯನ ಅಸ್ತಿ ಪಂಜರ...............


! ಯಾವ ಕಾಲದಲ್ಲಿ ಬದುಕಿದ್ದಾನೋ ಇಷ್ಟು ದೊಡ್ಡ ಮನುಷ್ಯ........
!
!!!!!!
ಓಹೋ ...ಇವನು ಏನೋ ಪತ್ತೆ ದಾರಿ ಥರ,,, ಮಾಟ ಮಂತ್ರ ಮಾಡುವವರ ಬಗ್ಗೆ ಕಥೆ ಹೇಳ್ತಾ ಇದಾನೆ ಅಂಥ ಅನ್ಕೊಂದ್ರ..... ಖಂಡಿತ ಇಲ್ಲ ರೀ....... ನಾನು ಹೇಳ್ತಾ ಇದ್ದಿದ್ದು,,, ಇಬ್ಬರು scientist.. ಹಿಸ್ಟರಿ ಅನ್ನು ಅಗೆದು ಸಂಶೋದನೆ ಮಾಡುವ scientist ಬಗ್ಗೆ .......
ನೋಡಿದಿರಾ... ಮೇಲೆ ಇರುವ ಆಸ್ತಿ ಪಂಜರವನ್ನ.. ಇಂಡೊನೆಸಿಯ ಒಂದು ಜಾಗದಲ್ಲಿ ಸಿಕ್ಕಿರುವ ಈ ಮಾನವನ ದೇಹ ಎಸ್ಟೋ ಸಾವಿರ ವರುಷದ ಹಿಂದಿನದಂತೆ... ನಿಜವಾಗಲು ಈ ಥರ ಮನುಷ್ಯರು ಬದುಕಿದ್ದರ? ಅಂಥ ಸಂಶೋದನೆ ಮಾಡ್ತಾ ಇದ್ದಾರೆ.....
!!!!! ಇಲ್ಲ ದಿದ್ದರೆ ಈ ತರಹ ಅಸ್ತಿ ಪಂಜರ ಸಿಕ್ತ ಇತ್ತಾ?

ನನಗೆ ಡಿಸ್ಕವರಿ...National geographics , ಇಂಥ channellu ಗಳೆಂದರೆ ತುಂಬ ಇಷ್ಟ ... ನನಗೆ history ಬಗ್ಗೆ ಅಸ್ಟೊಂದು ಇಂಟರೆಸ್ಟ್ ಇಲ್ಲದೆ ಇದ್ದರು....ಕೆಲವೊಂದು ವಿಷಯಗಳಲ್ಲಿ ತುಂಬ ಆಸಕ್ತಿ ಇದೆ..... ತುಂಬ adventure ಆಗಿ ಇರೋದನ್ನ ಡೌನ್ಲೋಡ್ ಮಾಡಿ ಏನಾದ್ರು ತಿಳಿದು ಕೊಳ್ಳುತ್ತಾ ಇರುತ್ತೇನೆ ... ಹಾಗೆ ಏನನ್ನೋ ಹುಡುಕುತ್ತ ಇರಬೇಕಾದರೆ ....ಸ್ವಲ್ಪ amezing ಅನ್ನೋ ಥರ ಫೋಟೋಸ್ ಮತ್ತೆ ಡಾಕುಮೆಂಟರಿ ಸಿಕ್ತು......ಕೆಲವು scientist ತಂಡ .. ಹಳೆ ಕಾಲದ ಸಂಶೋದನೆ ನಲ್ಲಿ ಇರಬೇಕಾದರೆ ವಿಸ್ಮಯ ಎನ್ನುವಂಥ... ಅಸ್ತಿಪಂಜರಗಳು..... ಸಿಕ್ಕಿವಿಯಂತೆ.....ಅದು ಎಸ್ಟೋ ವರುಷದ ಕೆಳಗಡೆ ಬದುಕಿದ್ದಿರಬಹುದು ಎಂದು ಸಂಶೋದನೆ ಮಾಡ್ತಾ ಇದ್ದಾರೆ..... ಇಲ್ಲಿ ಇರುವ ಕೆಲವೊಂದು ಅಸ್ತಿಪಂಜರದ ಫೋಟೋ ನೋಡಿ ನಾನು shock ಅದೇ...ಈ ತರನು ಇದ್ದಿರಬಹುದ. ಅಂಥ.... ಎಸ್ಟೋ ವಿಸ್ಮಯಗಳು ಅಡಗಿವೆ ಅಲ್ವ.... ಈ ನಮ್ಮ ಪ್ರಕ್ರುತಿನಲ್ಲಿ...... ಮನುಷ್ಯನ ಬುದ್ದಿ ಎಸ್ಟೆ ಮುಂದುವರಿದು... ಏನೇನೊ ಕಂಡು ಹಿಡಿದ್ದಿದರು... barmuda triangle, Europe ನ ಬತ್ತದ ಕ್ರೊಪಿಂಗ್ .....amejon ಕಾಡು ಇನ್ನು ಮುಂತಾದವುಗಳನ್ನ ತಿಲಿದಿಕೊಳ್ಳಲು ಸದ್ಯನೇ ಆಗಿಲ್ಲ. ಅನ್ನೊಂದು ನಿಜ ತಾನೆ......
ನೀವು ನೋಡಿ ಕೆಲವೊಂದು ವಿಸ್ಮಯಕಾರಿಯಾದ ವಿಚಿತ್ರ ಸಂಶೋದನೆಗಳ ಚಿತ್ರಗಳನ್ನು,,, ಇದರಬಗ್ಗೆ ಗೊತ್ತೀದ್ದರೆ ನಮಗೂ ಸ್ವಲ್ಪ ತಿಳಿಸಿ ಹೇಳಿ......

ವಿಚಿತ್ರ ರೀತಿಯ ಪ್ರಾಣಿಯ ಅಸ್ತಿ ಪಂಜರ .......



ಇದು ನೋಡಿ ಎಷ್ಟು ದೊಡ್ಡದಾದ ಅಸ್ತಿಪಂಜರ ಅಂಥ..... ದೊಡ್ಡ ಬಂಡೆ ಕಲ್ಲಿನಲ್ಲಿ ಹುದುಗಿ ಹೋಗಿದೆ...


ಇದು indonesiyadalli ಸಿಕ್ಕಿದ್ದಂತೆ....ಅಕ್ಕ ಪಕ್ಕ ನಿಂತಿರುವ ಮನುಷ್ಯನಿಗೂ ... ಅಸ್ತಿಪಂಜರಕ್ಕು ಇರುವ ವ್ಯತ್ಯಾಸ ನೋಡಿ


ಇದನ್ನ crane ಮೂಲಕ ಅಗೆಯುತ್ತಾ ಇದ್ದಾರೆ


ಇದು atlanta ಹತ್ರ ಸಿಕ್ಕಿರುವ ದೊಡ್ಡ ಜಾತಿಯ (mammoth elephant)ಅನೆ ಅಂತೆ......ಒಂದು ಚೂರು ಹಾಳಾಗದೆ ಹಾಗೆ ಐಸ್ ನಲ್ಲಿ ಉಳಿದಿತ್ತಂತೆ....ಇವಾಗ ಯಾವುದೊ ಪ್ರಯೋಗಾಲಯದಲ್ಲಿ ಇದೆ ಅಂತೆ ....


ಕಾಲುಗಳೇ ಇಲ್ಲದೆ ಮೀನಿನಾಕರದಲ್ಲಿ ಇರುವ ಮನುಷ್ಯನ ಅಸ್ತಿಪಂಜರ......


ಏನ್ ಸ್ಪೆಷಲ್ ಅಂಥ ಗೊತ್ ಆಯ್ತಾ..... ಹಣೆಯ ಮದ್ಯದಲ್ಲಿ ಒಂದು ಕಣ್ಣು ಇದ್ದಂತೆ ಇದೆ.....ಅಲ್ವ?


ಇದು ಇನ್ನೊಂದು ತರಹದ ಮನುಷ್ಯನ ಅಸ್ತಿ ಪಂಜರ......


ಇಷ್ಟು ದೊಡ್ಡ ತಲೆ ಕೊಂಬು ಇರುವ ಪ್ರಾಣಿ... ಯಾವುದೂ?


ತಲೆ ಮೇಲೆ ಮೂಳೆ ಇಂದಾನೆ ಮೂಡಿರುವ ಕೊಂಬು




ರೆಕ್ಕೆ ಇರುವ ಮನುಷ್ಯನ ಅಸ್ತಿ ಪಂಜರ....



ಐಸ್ ಬರ್ಗ್ ನಲ್ಲಿ ಸಿಕ್ಕಿರುವ ಆಕೃತಿ... ಹಾಳಾಗದೆ ಹಾಗೆ ಉಳಿದಿದೆ ಅಂತೆ.....
ವಿಚಿತ್ರ ವಿಸ್ಮಯ... ಜಗತ್ತು ಅಲ್ವ....... ಇನ್ನು ಏನೇನು ನಿಗೂಡಗಳು ಇದೆಯೋ ಈ ನಮ್ಮ ವಿಶಾಲ ಜಗತ್ತಿನಲ್ಲಿ........
****************
ಇದರ ಬಗ್ಗೆ ಇನ್ನು ಹೆಚ್ಚಿನ ಹುಡುಕಾಟದಲ್ಲಿ ಇರುವಾಗ,,,ಕೆಲವೊಂದು. ದೊಡ್ಡ ಅಸ್ತಿಪಂಜರಗಳು,,, ಸುಳ್ಳು ಅನ್ನುವುದು ಗೊತ್ತಾಯಿತು ...ಇದನ್ನು ರೂಪಶ್ರಿ ಯವರು ತಮ್ಮ ಕಾಮೆಂಟ್ ನಲ್ಲಿ ತಿಳಿಸಿ ಹೇಳಿರುತ್ತಾರೆ....ಆದರೆ ಬೇರೆಯ ಸ್ಕುಲ್ಲ್ಸ್ ಫೋಟೋಗಳು ನಿಜ , ಇದರ ಬಗ್ಗೆ ಇನ್ನು ಹೆಚ್ಚಿನ ಸಂಶೋದನೆ ನಡಿತಾ ಇದೆ.... ನಿಮ್ಮಲ್ಲಿ torrent ಇದ್ದಾರೆ ಇಲ್ಲಿ ಒಂದು ಲಿಂಕ್ ಇದೆ... ಇದರಿಂದ National geographics ನವರು ಸಿಕ್ಕಿರುವ Skulls ಎಷ್ಟು ನಿಜ , ಎಷ್ಟು ಸುಳ್ಳು ಅಂತ ಪ್ರೋವೆ ಮಾಡಿದ್ದರೆ....ಸಾದ್ಯವಾದರೆ ನೋಡಿ...

http://thepiratebay.org/torrent/4097857/%5BNGC%5D_Presents_-_Mystery_Skulls_of_Palau.divx

22 comments:

  1. ನಾನು ಹಿಸ್ಟರಿ ಸ್ಟೂಡೆಂಟ್. ಅದರೆ ಈ ರೀತಿಯಾದ ಭಯಂಕರ ಕಲ್ಪನೆಗಳನ್ನು ನನಗೆ ಮೂಡಿರಲಿಲ್ಲ. ತುಂಬಾ ಇಂಟರೆಸ್ಟಿಂಗಾಗಿದೆ. ಥ್ಯಾಂಕ್ಸ್

    ReplyDelete
  2. ಗುರು ಅವರೆ,
    ನೀವು ಬರೆದ ಮೊದಲ ಸಾಲು ಓದಬೇಕಾದರೆ ನೀವು ಯಾವುದು ಭೂತ ದ ಕತೆ ಹೇಳುತ್ತಿದ್ದಿರಿ ಅ೦ದು ಕೊ೦ಡೆ .. ಆದರೆ ನೀವು ಹೇಳಿದ ವಿಷಯ ಭೂತ ದ ಕತೆ ಗಿ೦ತಲು ಅದ್ಬುತ .. ನನಗೆ ಅಷ್ಟು ದೊಡ್ಡ ಅಸ್ತಿ ಪ೦ಜರ ನೋಡೀ ನಿಜಕ್ಕೂ ಅಚ್ಚರಿ ಹುಟ್ಟಿಸಿತು .. ನೀವು ಹೇಳಿದ ಹಾಗೆ ಪ್ರಕೃತಿಯ ವಿಸ್ಮಯವೇ ಸರಿ ..!!!!!
    ನೀವು ಇ೦ತಹ ಒಳ್ಳೆಯ ಅದ್ಬುತ ವಿಷಯವನ್ನು ನಮ್ಮೊ0ದಿಗೆ ಹ0ಚಿಕೊ0ಡಿದ್ದಕ್ಕೆ ನಿಮಗೆ ತು೦ಬಾ ತು೦ಬಾ ಧನ್ಯವಾದಗಳು ...

    ReplyDelete
  3. ಎ೦ದಿನ೦ತೆ ಮಾಹಿತಿಯುಕ್ತ ಚಿತ್ರ-ಲೇಖನ. ನಿಮ್ಮ ಬ್ಲಾಗ್ ಮಾಹಿತಿ ಕಣಜ. ನನ್ನ ಮಗನಿಗೂ ತೋರಿಸಿದೆ. ತು೦ಬಾ ಚೆನ್ನಾಗಿದೆ. ಹೀಗೆಯೇ ಮುಂದುವರಿಯಲಿ ಹೊಸ ಹೊಸ ವಿಚಾರಗಳ ಮಂಥನ.

    ReplyDelete
  4. ಗುರು,

    ಭಾಗವತ ಪುರಾಣದಲ್ಲಿ ಇದೆಯಂತೆ, ಯುಗಗಳು ಕಳೆದಂತೆ ಮನುಷ್ಯನ ಎತ್ತರವೂ ಕಡಿಮೆಯಾಗತ್ತಂತೆ. ತ್ರೇತಾಯುಗದಲ್ಲಿ ಶ್ರೀ ರಾಮನ ಎತ್ತರ ೧೨ ಅಡಿ ಇತ್ತಂತೆ. ಕಲಿಯುಗದ ಕೊನೆಯಲ್ಲಿ ಎಲ್ಲರೂ ಲಿಲ್ಲಿಪುಟ್ಸ್ ತರ ಇರ್ತಾರಂತೆ. ನಿಮ್ಮ ಬ್ಲಾಗ್ ನೋಡಿ ಇದು ಜ್ಞಾಪಕ ಬಂತು.

    ಪುರಾಣಗಳಲ್ಲಿ ನಾವು ಪ್ರಾಣಿಮುಖದ ರಾಕ್ಷಸರು, ೩ ಕಣ್ಣಿನ ಮಾನವರು, ಗಟೋತ್ಕಚ ಕುಂಭಕರ್ಣರಂತಹ ದೈತ್ಯರು ಮತ್ತಿತರರ ಉಲ್ಲೇಖ ಇದೆ. ಇಂತಹ ಸಂಶೋದನೆಗಳು ಅದೆಲ್ಲ ನಿಜವಾಗ್ಲು ನಡೆದದ್ದು ಎಂಬುದಕ್ಕೆ ಸಾಕ್ಷಿ ಅಲ್ಲವೇ?

    ಮುಂದುವರೆಯಲಿ ನಿಮ್ಮ ಹುಟುಕಾಟ.
    ಹೀಗೇ ಸಿಗುತ್ತಿರಲಿ ನಮಗೆ ವಿಷಯಗಳ ರಸದೂಟ.

    ReplyDelete
  5. ಸತ್ಯ ಸರ್.. ನೀವು ಹಿಸ್ಟರಿ ಸ್ಟುಡೆಂಟ್ ಅಂತ ತಿಳಿದು ಸಂತೋಷ ಆಯಿತು,.... ಸಕತ್ ಇಂಟರೆಸ್ಟಿಂಗ್ ಆಗಿ ಇದೆ.. ಅಲ್ವ... ಇ ಫೋಟೋ ಗಳನ್ನೂ ನೋಡ್ತಾ ಏನೇನೊ ಕಲ್ಪನೆಗಳು ಬರುತ್ತವೆ...
    ಇಷ್ಟ ಪಟ್ಟಿದಕ್ಕೆ ಧನ್ಯವಾದಗಳು

    ReplyDelete
  6. ರೂಪ,,
    ಹೌದು,, ಸುಮ್ನೆ ಹಾಗೆ ಏನೋ ಯೋಚಿಸುತ್ತಾ... ಬರೆದೆ.. ಸ್ವಲ್ಪ ಸಸ್ಪೆನ್ಸ್ ಇರಲಿ ಅಂತ... ಹೌದು ಭೂತದ ಸ್ಟೋರಿ ಗಿಂತ ಭಯಂಕರವಾಗಿ ಇದೆ ನಮ್ಮ ಕಲ್ಪನೆಗೂ ಮೀರಿದ್ದು ಅಲ್ವ....

    ReplyDelete
  7. ಧನ್ಯವಾದಗಳು ಪರಾಂಜಪೆ..... ಎಸ್ಟೋ ವಿಚಿತ್ರಗಳು ಇರುತ್ತವೆ ... ಅದಸ್ತು ತಿಳಿದುಕೊಳ್ಳೋಣ.....

    ReplyDelete
  8. ರಾಜೀವ
    ಯುಗಗಳು ಕಳೆದಂತೆ,,, ಮನುಷ್ಯನ ಎತ್ತರ ಕಡಿಮೆ ಯಾಗುವ ವಿಷಯ ಕೇಳಿ ಆಶ್ಚರ್ಯ ಅನ್ನಿಸಿತು,,, ಹಾಗೆ ಬೆಳವಣಿಗೆಗಳನ್ನು ನೋಡ್ತಾ ಅದು ನಿಜ ಅಂತಾನು ಅನಿಸ್ತ ಇದೆ....
    ನನಗೆ ಇದು ಹೊಳೆದೇ ಇರಲಿಲ್ಲ,,, ಕರೆಕ್ಟ್ ಅಲ್ವ... ಪುರಾಣಗಳಲ್ಲಿ "೩ ಕಣ್ಣಿನ ಮಾನವರು, ಗಟೋತ್ಕಚ ಕುಂಭಕರ್ಣರಂತಹ ದೈತ್ಯರು ಮತ್ತಿತರರ ಉಲ್ಲೇಖ ಇದೆ." ಹೌದು ಈಗ ಇಂತಹ ವಿಸ್ಮಯಗಳನ್ನು ಕಣ್ಣಿನಿಂದ ನೋಡಿ ನಂಬಬೇಕಾಗಿದೆ... ಇದರ ಬಗ್ಗೆ ಇನ್ನಸ್ಟು ಮಾಹಿತಿ ಕಲೆ ಹಾಕುವ ಯೋಚನೆಗೆ ತಳ್ಳಿದಿರಿ.... ನೋಡೋಣ ಇನ್ನು ಹೊಸ ವಿಷಯಗಳು ಏನಾದ್ರು ಸಿಗಬಹುದೇನೋ ಅಂತ ಟ್ರೈ ಮಾಡ್ತೇನೆ.

    ReplyDelete
  9. ಗುರು,

    ನೀವು ಮತ್ತೆ ಏನೋ ಹೊಸತು ಹುಡುಕಿರುತ್ತೀರಿ ಅಂತ ಬಂದರೆ ಈ ಬಾರಿ ಹೆದರಿಕೆಯ, ಸಂಶೋಧನೆಯ ವಿಚಾರವನ್ನೇ ಕೊಟ್ಟುಬಿಟ್ಟಿದ್ದೀರಿ..

    ಕೆಲವು ಅಸ್ತಿಪಂಜರವನ್ನು ನೋಡಿ ಆಶ್ಚರ್ಯವಾಯಿತು. ಆಷ್ಟು ದೊಡ್ಡ ಮನುಷ್ಯರು ಬದುಕಿದ್ರ ಅನ್ನಿಸತೊಡಗಿತು. ಇವೆಲ್ಲಾ ಪ್ರಕೃತಿಯ ವಿಸ್ಮಯಗಳೇ ಅಲ್ವ...

    ಈ ಬಾರಿ ನೋಡಿ ಖುಷಿಪಡುವುದರ ಜೊತೆಗೆ ನಮಗೂ ಚಿಂತನೆಗೆ ಹಚ್ಚುವಂತ ವಿಚಾರವನ್ನು ಹುಡುಕಿಕೊಟ್ಟಿದ್ದಕ್ಕೆ ಧನ್ಯವಾದಗಳು.

    ReplyDelete
  10. ಗುರು ಅವರೆ,
    ನಿಮ್ಮ ಈ ಫೋಟೋಗಳನ್ನು ನೋಡಿ ಮೊದಲಿಗೆ ಆಶ್ಚರ್ಯ ಆಯಿತು. ದೈತ್ಯ ಪಿರಮಿಡ್ ಗಳನ್ನು ಇಷ್ಟು ಎತ್ತರದ ಮನುಷ್ಯರೇ ಕಟ್ಟಿರ ಬಹುದಾ ಅನಿಸಿತು. ಇಲ್ಲಿರೋ ಅಸ್ತಿಪಂಜರದ ಎತ್ತರ ಸುಮಾರು ೬೦-೭೦ ಅಡಿ ಇದ್ದ ಹಾಗಿದೆ, ಕುತೂಹಲ ಹೆಚ್ಚಾಗಿ ಎಂದಿನಂತೆ ಅಂತರ್ಜಾಲದಲ್ಲಿ ಹುಡುಕಿದೆ, ಆಗ ತಿಳಿದದ್ದು ಇದೊಂದು hoax ಎಂದು:((

    ಈ ವಿಚಾರ ಕುರಿತು ಇಲ್ಲಿ ಮತ್ತು ಇಲ್ಲಿ ಪ್ರಕಟವಾಗಿದೆ. ನ್ಯಾಷನಲ್ ಜಿಯಾಗ್ರಫಿ ಕೂಡ ಇದನ್ನು ಸಮರ್ಥಿಸಿದೆ ಓದಿ. ಇಲ್ಲಿ ಮತ್ತು ಇಲ್ಲಿ

    ಇದರ ವಿಡಿಯೋ ಕೂಡ ಇದೆ ನೋಡಿ.

    ಮಿಕ್ಕ ಅಸ್ತಿಪಂಜರಗಳು ನಿಜವಿರಬಹುದು, ಅದ್ರಲ್ಲೂ ಮಾಮೊತ್ ದು !! ಅಂತೂ ಅಂತರ್ಜಾಲದಲ್ಲಿ ಸಿಕ್ಕಿದೆಲ್ಲವನ್ನೂ ನಂಬಬಾರದೆಂಬ ಪಾಠ ಕಲಿತೆ:)

    ReplyDelete
  11. ರೂಪಶ್ರಿ...
    ಹೌದು ನೀವು ಹೇಳಿರುವುದು,,,, ನಿಜ..... ಇವೊತ್ತು ನಾನು ಇದರ ಬಗ್ಗೆ ಇನ್ನು ಹುಡುಕುತ್ತಿರಬೇಕಾದರೆ (ರಾಜೀವ ಹೇಳಿಕೆ ಕುರಿತು)ನೀವು ಹೇಳಿರುವ article ಸಿಕ್ತು... ಆದರೆ ಯಾವುದನ್ನು ನಂಬಬೇಕು ಅಥವಾ ಬಿಡಬೇಕು ಅಂತ ಗೊತ್ತಿಲ್ಲ... ಆದರೆ ನನಗೆ ಸಿಕ್ಕಿರುವ ಡಾಕ್ಯುಮೆಂಟರಿ,,, ಇ ತರಹದ ಅಸ್ತಿ ಪಂಜರ ಸಿಕ್ಕುರುವುದನ್ನು ಸೈಂಟಿಫಿಕ್ ಆಗಿ ಪ್ರೋವೆ ಮಾಡಿದೆ.....ಇದರ ಬಗ್ಗೆ ಇನ್ನು ಕೆಲವು ಮಾಹಿತಿಗಳು ಸಿಕ್ಕಿವೆ....ನಾನು ಸ್ವಲ್ಪ ಗೊಂದಲದಲ್ಲಿ ಇದ್ದೇನೆ,,, ಇದು ನಿಜಾನ... ಅಥವಾ ಸುಳ್ಳ ಅಂತ......
    ಪ್ರತಿಸಾರಿ ನನ್ನ ಹಾಗು ಎಲ್ಲರ ಹುಡುಕಾಟಕ್ಕೆ ಸಾತ್ ಕೊಡುತ್ತಾ ಇನ್ನು ಹೆಚ್ಚಿನ ಮಾಹಿತಿಗಳನ್ನು ತಿಳಿಸುತ್ತಿರುತಿರಿ.....ಧನ್ಯವಾದಗಳು.......

    ReplyDelete
  12. abba!

    jagaththu eshtu vichithra aagide...!

    nimma vivarane thumba hidisithu guru avare...

    ReplyDelete
  13. ಗುರು ಅವರೇ,
    ಮೊದಲೇ ಹೆದರಿಕೊಳ್ಳುವ ಸ್ವಭಾವ ನನ್ನದು, ಅಂತಹುದರಲ್ಲಿ ಮಧ್ಯರಾತ್ರಿ ಹನ್ನೆರಡು ಗಂಟೆಯಲ್ಲಿ ಸರಿಯಾಗಿ ನಿಮ್ಮ ಲೇಖನ ಓದಿ ಆಸ್ತಿ ಪಂಜರಗಳ ಫೋಟೋಗಳನ್ನು ನೋಡಿದ್ದೇನೆ. ಇನ್ನು ರಾತ್ರಿ ನಿದ್ದೆ ಬರುತ್ತೋ ಇಲ್ವೋ ಗೊತ್ತಿಲ್ಲ....?!
    ನಾನೇನಾದ್ರು ಹೆದರಿಕೊಂಡು, ನನಗೆ ಜ್ವರ ಬಂದರೆ, ಅದಕ್ಕೆ ನೀವೇ ಕಾರಣ.....ಹ ಹ್ಹ ಹ್ಹ ಹ್ಹಾ!!!
    ಎಂದಿನಂತೆ ಲೇಖನ ವಿಸ್ಮಯದಿಂದ ಕೂಡಿದ್ದು, ವಿವರಣೆಗಳು ಅಧ್ಬುತವಾಗಿವೆ! ಮಾಹಿತಿಗಳಿಗೆ ಧನ್ಯವಾದಗಳು.!

    ReplyDelete
  14. ವಿಪರೀತ ನಿಗೂಡವಾಗಿದೆ. ರೆಕ್ಕೆಯ ಮಾನವ, ಕೊಂಬಿನ ತಲೆ, ಮೂರನೆ ಕಣ್ಣು... ಪುರಾಣದ ಕಲ್ಪನೆಗಳೆಲ್ಲ ಹಾಗಾದರೆ ನಿಜವೇ? ಗಲಿವರನ ಸಾಹಸಗಳು ಸತ್ಯ ಕಥೆಯೇ? ನೀವು ಏನೇನೋ ತೋರಿಸಿ ಏನೇನೋ ಯೋಚಿಸುವಂತೆ ಮಾಡಿಬಿಡುವಿರಿ. ಸಕತ್ತಾಗಿದೆ.

    ReplyDelete
  15. ಗುರು...

    ಅತ್ಯಂತ ಕುತೂಹಲಕರವಾಗಿದೆ....

    ಇದನ್ನೆಲ್ಲ ಉಣ ಬಡಿಸಿದ ನಿಮಗೆ...

    ಅಭಿನಂದನೆಗಳು...

    ಪ್ರತಿವಾರವೂ ವಿಸ್ಮಯ ಒಂದನು ನೀಡುತ್ತೀರಲ್ಲ...

    ಗ್ರೇಟ್...!

    ReplyDelete
  16. ಪ್ರತಿಕ್ರಿಯೆಗೆ ಧನ್ಯವಾದಗಳು....ಸುದೇಶ್....

    ReplyDelete
  17. ಹಾ ಹಾ. SSK ರವರೆ ನಿದ್ದೆ ಮಾಡಿದ್ರ ಅಥವಾ ಇಲ್ವಾ....ಅದು ಸರಿ,,, ನೈಟ್ ೧೨ ಗೆ ನನ್ನ ಬ್ಲಾಗ್ ಓದು ಅಂತ ನಾನತು ಹೇಳಲಿಲ್ಲ ಅಲ್ವ.... :-)
    ಹೌದು ಇದರಲ್ಲಿ ಇನ್ನೊದು ವಿಚಿತ್ರ ಅಂದ್ರೆ.... ಕೆಲವು ಫೋಟೋಗಳು.... HOAX... ಅಂತೆ.... ಸುಮ್ಮನೆ ಸುದ್ದಿಗೊಸ್ಕರ.... ಸೃಷ್ಟಿ ಅಂತ...prove ಮಾಡಿದ್ದರೆ.... ಇದನು ರೂಪಶ್ರಿ ಅವರ ಕಾಮೆಂಟ್ ನಲ್ಲಿ ನೋಡಿ

    ReplyDelete
  18. ಹೌದು ಮಲ್ಲಿಕಾರ್ಜುನ್... ಇದರಬಗ್ಗೆ NGO ನವರು ಇನ್ನು ಹೆಚ್ಚಿನ ಅವ್ನೆಷಣೆ ಮಾಡ್ತಾ ಇದ್ದಾರೆ.... ನಿಜ ಇದ್ದರು ಇರಬಹುದು....
    ಆದರೆ ಇನ್ನೊದು ವಿಚಿತ್ರ ಅಂದ್ರೆ.... ಕೆಲವು ಫೋಟೋಗಳು.... HOAX... ಅಂತೆ.... ಸುಮ್ಮನೆ ಸುದ್ದಿಗೊಸ್ಕರ.... ಸೃಷ್ಟಿ ಅಂತ...prove ಮಾಡಿದ್ದರೆ.... ಇದನು ರೂಪಶ್ರಿ ಅವರ ಕಾಮೆಂಟ್ ನಲ್ಲಿ ನೋಡಿ .. ಹಾಗೆ ನನ್ನ ಬ್ಲಾಗಿನಲ್ಲೂ ಲಿಂಕ್ ಕೊಟ್ಟು ಅಪ್ಡೇಟ್ ಮಾಡಿದ್ದೇನೆ....

    ReplyDelete
  19. ಧನ್ಯವಾದಗಳು ಪ್ರಕಾಶ್ ಸರ್....

    ReplyDelete
  20. Thanks for the update and the link to the torrent file. Well im very new to this torrent, can u elaborate on how to view these files? I did read the write up given in the website abt such skulls
    Thanks in advance

    ReplyDelete
  21. Hi Roopashri.
    I had sent an detailed mail to your id along with Torrent file,
    Please go through my mail and let me know if you need more help.

    ReplyDelete
  22. ನನಗು ಇಂತಹದನ್ನು ತಿಳಿಯಲು ಆಸಕ್ತಿ

    ReplyDelete