Tuesday, May 12, 2009

ನನ್ನ ಪ್ರೀತಿಯ ಅಮ್ಮನ.. ಕೈಚಳಕದ ಕಲೆ....

ನನ್ನ ಮುದ್ದಿನ ,,, ಪ್ರೀತಿಯ ಅಮ್ಮನಿಗೆ Mothers day ಶುಭಾಶಯ ಹೇಳುತ್ತಾ... ಅವರ ಬಗ್ಗೆನೇ ಈ ಬ್ಲಾಗನ್ನು ಬರೆದಿದ್ದೇನೆ...... ಎಲ್ಲರಿಗೂ ಅಮ್ಮನ ಮೇಲೆ ಪ್ರೀತಿ ಇರುವಂತೆ.. ನನಗು ನನ್ನ ಮುದ್ದು ಅಮ್ಮನ ಮೇಲೆ... ಎಲ್ಲಿಲ್ಲದ ಪ್ರೀತಿ....ನಮ್ಮ ಅಮ್ಮನಿಗೂ ಅಸ್ಟೆ.. ನಾನು ಅಂದರೆ ಅಸ್ಟು ಪ್ರೀತಿ....ಯಾಕೆ ಅಂದ್ರೆ ನಾನು ಒಬ್ಬನೇ ಇದ್ದಿನಲ್ವ.. ನಂಗೆ compit ಮಾಡೋಕೆ ನನ್ನ ಜೊತೆ ಯಾರು ಇಲ್ಲ.. ಅದಕ್ಕೆ ನನ್ನ ಅಮ್ಮ ಎಲ್ಲ ಪ್ರೀತಿಯನ್ನು ನನಗೆ ಕೊಟ್ಟಿದ್ದಾರೆ.... ಇದರಲ್ಲಿ ನಾನು ತುಂಬ ಲಕ್ಕಿ... ಅಮ್ಮನ ಬಗ್ಗೆ ಏನ್ ಬರಿಯೋದು,,, ಏನ್ ಅಂತ ಹೇಳ್ಕೊಳೋದು...ಅಲ್ವ.. ? ಏನ್ ಹೇಳಿದ್ರು ಸಾಲೊಲ್ಲ ಏನ್ ಬರೆದರು ಮುಗಿಯೊಲ್ಲ... ನಾವು ಚಿಕ್ಕ ಮಕ್ಕಳಾಗಿದ್ದ ಗಿನಿಂದಲೂ,,,ನಮ್ಮ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ನಮ್ಮ ಜೊತೆಯಲ್ಲಿ ಇರುತ್ತಾ ನಮಗೆ ನೋವು ಅದಾಗ ಅವರು ಅದನ್ನ ಅನುಭವಿಸಿ.. ನಮಗೆ ಧೈರ್ಯ ತುಂಬುತ್ತಾ..ನಮ್ಮ ನಗುವಿನಲ್ಲಿ ಅವರ ನಗುವನ್ನು ಕಾಣುತ್ತ... ಓಹ್ ಏನ್ ಅಂತ ಬರೆಯೋದು ರೀ ಅಮ್ಮನ ಬಗ್ಗೆ... ಅವರಿಗಾಗಿಯೇ ಒಂದು ದಿನ Mothers day ಅಂತ ಹೇಳಿ ಬಿಟ್ರೆ ಏನು ಸಾಕಾಗೋಲ್ಲ.... ಅಮ್ಮ ಅನ್ನುವುದು yavagalu ಎವರ್ ಗ್ರೀನ್...... ಪ್ರತಿ ಕ್ಷಣದಲ್ಲೂ ನೆನಪಾದಾಗ ನೆನಸಿ ನಮಿಸ ಬೇಕು ಅವರಿಗೆ.... ಸರಿ ಬಿಡಿ.. ನನಗೆ emotional ಆಗಿ ಅಸ್ಟು ಚೆನ್ನಾಗಿ ಬರಿಯೋಕೆ ಬರೋಲ್ಲ....(ಇದರಲ್ಲಿ ಬರಿಯುವಂತ್ತದ್ದು ಏನು ಇಲ್ಲ) .. ಆದರೆ ನನ್ನ ಪ್ರೀತಿಯ ಅಮ್ಮನ ಹಳೆಯ ನೆನಪುಗಳನ್ನು ... ಅವರ ಕೆಲವು ಒಳ್ಳೆ ಕಲೆಯನ್ನು ಅವರ ಹವ್ಯಾಸವನ್ನು ನಿಮ್ಮ ಜೊತೆ ಬಿಚ್ಚಿಡುತ್ತಾ ಇದ್ದೇನೆ...
ನನ್ನ ಜೊತೆಗಿರುವವರು, ನನ್ನ ಬಲ್ಲವರು ಎಲ್ಲ ಹೇಳ್ತಾರೆ,, ಗುರು ನೀನು ತುಂಬ ಕ್ರಿಯೇಟಿವ್ ಮೈಂಡ್ ಕಣೋ .. ಏನಾದ್ರು ಹೊಸದನ್ನು ಮಾಡ್ತಾ ಇರುತ್ತಿಯ,, ಏನಾದ್ರು ವೆರೈಟಿ ಇರುತ್ತೆ ನಿನ್ನ ಹವ್ಯಾಸಗಳಲ್ಲಿ ಅಂತ........ ಹೌದು ಇದು ನನಗೆ ಬಂದಿದ್ದು ನನ್ನ ಅಮ್ಮನಿಂದ.....ಅವರು ಅಸ್ಟೆ... ಚಿಕ್ಕವರಿರಬೇಕದ್ರೆ ಎಲ್ಲ activities ನಲ್ಲೂ ಮುಂದಿದ್ದರಂತೆ.... ನಮ್ಮ ಅಮ್ಮ ಓದಿದ್ದು ಬರಿ SSLC ಅಸ್ಟೆ.. ಆದರೆ ಅಮ್ಮನಿಗೆ ಓದಿಗಿಂತ ಬೇರೆ ಚಟುವಟಿಗೆ ಗಳಲ್ಲಿ ಆಸಕ್ತಿ ಜಾಸ್ತಿ ಇತ್ತಂತೆ. ಅಮ್ಮ ಚಿಕ್ಕವರಿರಬೇಕಾದರೆ handy craft ನಲ್ಲಿ ತುಂಬ ಆಸಕ್ತಿ ಬೆಳೆಸಿಕೊಂಡು ಇದ್ದರು... ಏನಾದರೂ ಹೊಸ ಡಿಸೈನ್ ಕಂಡರೆ ಅದಸ್ಟು ಬೇಗನೆ ಅದನ್ನ ನೋಡಿ ಇವರು ಅದೇ ಥರ ಮಾಡುತ್ತ ಇದ್ದರಂತೆ... ಅಸ್ಟು ಇಂಟರೆಸ್ಟ್ ಅವರಿಗೆ.. ನನ್ನ ಅಮ್ಮ ಉಲ್ಲನ್ ನಿಂದ ಸ್ವೆಟರ್ , ಟೋಪಿ, ಶಾಲು ಹಾಕೋದ್ರಲ್ಲಿ expert.... ನನಗೆ ಗೊತ್ತಿರೋ ಪ್ರಕಾರ ನಾನು PUC ಓದೋವರವಿಗು ಹೊರಗಡೆ ಉಲ್ಲನ್ ಸ್ವೆಟರ್ , ಶಾಲು ಅಂತ ತೆಗೆದುಕೊಂಡಿರೋ ನೆನಪಿಲ್ಲ... ನನ್ನ ಹಾಗು ನನ್ನ ಅಪ್ಪನ swterna ಅಮ್ಮನೇ ನಿದಾನಕ್ಕೆ ಕೂತು ಹಾಕಿ ಕೊಟ್ಟಿರುವುದು... ನಮ್ಮ ಅಪ್ಪ ಇವಾಗಲು ಕೂಡ ಅಮ್ಮ ಹಾಕಿಕೊಟ್ಟಿರುವ ಸ್ವೆಟರ್ ಅನ್ನೇ ಹಾಕೊಥ ಇರೋದು... ನಾನು ಚಿಕ್ಕವನಿರಬೇಕಾದರೆ ನನಗೆ ಹಾವಿನ desing ಇರುವ ಒಂದು ಹಸರು ಬಣ್ಣದ ಸ್ವೆಟರ್ ಹಾಕಿ ಕೊಟ್ಟಿದ್ದರು.... ಅದು ಎಷ್ಟು ಚೆನ್ನಾಗಿ ಇತ್ತು ಅಂದರೆ, ಎಲ್ಲರೂ ಹೊಟ್ಟೆ ಉರಿ ಪಟ್ತ್ಕೊಥ ಇದ್ರೂ... ದಾರಿನಲ್ಲಿ ಹೋಗ್ತಾ ಇರಬೇಕಾದ್ರೆ ಎಸ್ಟೋ ಜನ ಆಂಟಿ ಬಂದು " ಪುಟ್ಟ ಈ ಸ್ವೆಟರ್ ಎಲ್ಲಿಂದ ತಗೊಂಡ್ ಬಂದಿದ್ದು " ಅಂತ ಕೇಳಿರುವುದು ಇನ್ನು ನೆನಪಿದೆ...... ಇದಿಸ್ಟೇ ಅಲ್ಲ.. ನನ್ನ ಅಮ್ಮ ಮಣಿ ನಲ್ಲಿ , ವೈರ್ ನಲ್ಲಿ ತುಂಬ ತರಹದ ಕಲ ಕೃತಿಗಳನ್ನ ಮಾಡಿದ್ದರೆ... ಆದರೆ ಎಲ್ಲವನ್ನು ಜೋಪಾನ ಮಾಡಲಿಕ್ಕೆ ಆಗಲಿಲ್ಲಾ.... ( ಕೆಲವರು desing ನೋಡಿ ಕೊಡ್ತೇವೆ ಅಂತ ತೆಗೆದುಕೊಂಡು ಹೋದವರು ವಾಪಸ್ ತಂದೇ ಕೊಡಲಿಲ್ಲ ...ಅವರ ಮೇಲೆ ನನಗೆ ಇನ್ನು ಸಿಟ್ಟು ಇದೆ , ಪಾಪ ಅಮ್ಮ ಎಷ್ಟು ಕಷ್ಟ ಪಟ್ಟು ಹಾಕಿದ್ದರು ಗೊತ್ತ...) ಆದರೆ ಅದರಲ್ಲಿ ಕೆಲವೊಂತು ಹಾಗೆ ಜೋಪಾನ ಮಾಡಿ ಇಟ್ಟುಕೊಂಡಿದ್ದೇನೆ....... ನಾನ್ ಅಂತು ಒಂದು ಸಾಮಾನನ್ನು ಕಳೆದು ಹಾಕುವುದಿಲ್ಲ... ನನಗೆ ಚಿಕ್ಕವನಿರಬೇಕಾದರೆ ತೆಗೆದು ಕೊಟ್ಟ ಪಿಲ್ಲಂಗೊವಿ .. ಸಣ್ಣ ಸಣ್ಣ ಬೊಂಬೆ ಸಹ ಜೋಪಾನವಾಗಿ ಇಟ್ಟಿದ್ದೇನೆ.. ಅಂತದ್ರಲ್ಲಿ ನಮ್ ಅಮ್ಮ ಮಾಡಿದ ಅಸ್ಟು ಒಳ್ಳೆ ಕಲಾಕೃತಿಗಳನ್ನ ಬಿಡೋಕೆ ಆಗುತ್ತ.... ಮೊದಲು ಪ್ರತಿಬಾರಿ ದಸರಾ ಟೈಮ್ ನಲ್ಲಿ ಎಲ್ಲ ಬೊಂಬೆ , ಎಲ್ಲ ಮಣಿ ಸಾಮಾನುಗಳನ್ನು (ಎಲ್ಲ ಅಮ್ಮ ಮಾಡಿದ್ದೂ ಚಿತ್ರಸಮೇತ ಹಾಕಿದ್ದೇನೆ ನೋಡಿ ಕೆಳಗಡೆ ) ಇಡ್ತಾ ಇದ್ವಿ... ಇವಾಗ ಅದಕೆಲ್ಲ ಟೈಮ್ ಇಲ್ಲ.. ಅದೆಲ್ಲ ಇವಾಗ ನಮ್ಮ ಮನೆ ಶೋ ಕೇಸ್ ನಲ್ಲಿ ಜೋಪಾನವಾಗಿ ಎಲ್ಲರೂ ನೋಡುವ ಹಾಗೆ ಕುಳಿತಿದೆ..... ನಾನು ಚಿಕ್ಕವ ನಿದ್ದಾಗ ಅಮ್ಮನ ಜೊತೆ ಸೇರಿಕೊಂಡು ಇಂಥ ಕಲಾಕೃತಿಗಳನ್ನ ಮಾಡೋಕ್ಕೆ help ಮಾಡ್ತಾ ಇದ್ದೆ.. ನನಗೆ ಇನ್ನು ನೆನಪಿದೆ... ಅಮ್ಮ ಏನಾದ್ರು ಕತೆ ಹೇಳ್ತಾ,, ಶಾಲನ್ನೋ ಸ್ವೆಟರ್ ಅನ್ನೋ ..ಹಾಕ್ತಾ ಇರಬೇಕಾದ್ರೆ ನಾನು ಉಲ್ಲನ್ ತಗೊಂಡು ಸುತ್ತುತ್ತ ಇದ್ದೆ...ಕೆಲವೊಮ್ಮೆ ಗಜಿ ಬಿಜಿ ಮಾಡಿ ಸುಕ್ಕು ಮಾಡಿ ಬಿಟ್ಟು ಓಡಿಹೊಗ್ತಾ ಇದ್ದೆ. ಹಾ ಹಾ... ನೆನೆಸಿಕೊಂಡರೆ ಮಜಾ ಇರುತ್ತೆ... ಹಾಗೆ ಅಮ್ಮನಿಗೆ ಹೆಲ್ಪ್ ಕೂಡ ಮಾಡ್ತಾ ಇದ್ದೆ ಗೊತ್ತ... ಅಮ್ಮ ಏನಾದ್ರು ಹೊಸ ಚಿತ್ರ ಬಿಡಿಸಿ ಏನಾದ್ರು ಮಾಡ್ತಾ ಇರಬೇಕಾದ್ರೆ ನಾನು ಫೆವಿಕಾಲ್ ತಗೊಂಡು ಅದನ್ನೆಲ್ಲಾ ಜೋಡಿಸಿ ಅಂಟಿಸ್ಥ ಇದ್ದೆ.. ಹೀಗೆ ಸಣ್ಣ ಪುಟ್ಟ ಕೆಲಸಗಳನು ಮಾಡ್ತಾ ಅಮ್ಮನ ಜೊತೆ ನಾನು ಸಾತ್ ಕೊಡ್ತಾ ಇದ್ದೆ... ಒಹ್ ಜಾಸ್ತಿ ಹೇಳಿದೆ ಅಂತ ಕಾಣುತ್ತೆ ಅಮ್ಮನ ಬಗ್ಗೆ,, ಇವಾಗ ಅವರೇ ಅವರ ಕೈಯಾರ ಮಾಡಿರುವ ಕಾಲಕೃತಿಗಳನ್ನ ನೋಡಿ... ನೀವೇ ಹೇಳಿ ... ಹೀಗೆ ಇದೆ ಅಂತ.....


(Mothers Day ದಿನ ಇದನ್ನ ಅಪ್ಲೋಡ್ ಮಾಡಬೇಕು ಅಂಥ ಇದ್ದೆ ಆದರೆ, ಅವೊತ್ತು ಮನೆಯಲ್ಲಿ ಇಂಟರ್ನೆಟ್ ಪ್ರಾಬ್ಲಮ್ ಇದ್ದದ್ದರಿಂದ ಅಪ್ಲೋಡ್ ಮಾಡೋಕ್ಕೆ ಆಗಲಿಲ್ಲಾ)

ಎಲ್ಲ ಮಣಿ ಬೊಂಬೆಗಳನ್ನು ಒಟ್ಟಿಗೆ ಇಟ್ಟಾಗ........


ಪ್ರಾಣಿ ಸಂಕುಲದ ಬೊಂಬೆಗಳೇ ಬೇರೆಹೂವಿನ ಕುಂಡ ದಿಂದ ಹಿಡಿದು...ಬೇರೆ ಬೇರೆ ಕಲಾಕೃತಿಗಳುನಮ್ಮ ಮನೆ ಶೋ ಕೇಸ್ ನಲ್ಲಿ ಆರಾಮವಾಗಿ ಕುಳಿತಿರುವ ಅಮ್ಮನ ಕೈಯ ಬೊಂಬೆಗಳು ...
ಇವಾಗ ಒಂದೊಂದಾಗಿ ನೋಡೋಣ ಬನ್ನಿ....ನಮ್ಮ ಮನೆ ಸೋಫಾ ಸೆಟ್ ಅಲ್ಲರಿ...... ನನ್ನ ಅಮ್ಮ ಹಾಕಿದ್ದು...... 20 ವರುಷದ ಕೆಳಗೆ !!! (ಇದರಲ್ಲಿ ಒಂದು table ಫ್ಯಾನ್ ಅನ್ನು ಯಾರೋ ತೆಗೆದು ಕೊಂಡು ಹೋಗಿ ವಾಪಸ್ ಕೊಡಲೇ ಇಲ್ಲ)


ಮಣಿ ಹಾಗು ನೈಲಾನ್ ದಾರದಿಂದ ಮಾಡಿದ್ದು....ತಾಜ್ ಮಹಲ್......ಒಂದು ಬಾಟಲಿ, ಒಂದು parachoot ಕೊಬ್ಬರಿ ಎಣ್ಣೆ ಡಬ್ಬಿ, ಮತ್ತೆ ಒಂದು ಗ್ಲಾಸ್ ಬೌಲ್ ನಿಂದ ಮಾಡಿದ ಹೂವಿನ ಕುಂಡ.....

ಗಂಡು ಬೇರುಂಡ.......ಬರಿ ಮಣಿ ಇಂದ ಮಾಡಿದ್ದು.... ಎರಡು ಬೇರೆ ಬೇರೆ desing.....
ಇದು ನನ್ನ ಆಲ್ ಟೈಮ್ ಫೇವರೆಟ್ ... ಮಂಟಪ,, ಹಾಗು ಅದರ ಒಳಗೆ ಪುಟ್ಟ ಶಿವ ಲಿಂಗ...... ಲಿಂಗದ ಮೇಲಇನ ಹಾವಿನ ಹೆಡೆಯನ್ನು ನೋಡಿ ...ಎಲ್ಲ ಮಣಿ ಬೊಂಬೆಗಳು......ನಮ್ಮ ದೀವಾನದ ಮೇಲೆ... ರೆಡಿ ಆಗಿ ಕುಳಿತಿವೆ... ಫೋಟೋ ಸೆಶನ್ ge.......

ಅವೊತ್ತು ಅಮ್ಮ ಕೂಡ ಎಷ್ಟು ಕುಶಿ ಇಂದ ಎಲ್ಲ ಬೊಂಬೆಗಳನ್ನು ಕ್ಲೀನ್ ಮಾಡಿ ಕೊಡ್ತಾ ಇದ್ರೂ ಗೊತ್ತ.... mothers day ದಿನ.....ನನಗೆ ಅಮ್ಮ ಮಾಡಿರುವ ಫೋಟೋಸ್ ತೆಗೆದು ಅವರನ್ನ ಹೋಗಳೊದ್ರಲ್ಲೇ ಕಾಲ ಕಳೆದು ಹೋಯ್ತು........ಹಾಗೆ ಅವರ ಹಳೆ ನೆನಪುಗಳನ್ನು ಕೂಡ.........
ಪುಟ್ಟ ಹುಡುಗಿ........ಡಾನ್ಸ್ ಮಾಡ್ತಾ ಇರೋ ಬೊಂಬೆ..... ಗೋಡೆಗೆ ತಗಲಾಕಿ ಆಟ ಆಡಿಸಬೇಕು.....


ಈ ತರಹದ ಎಸ್ಟೋ ಆನೆಗಳನ್ನು ಹಾಕಿದ್ದರೆ ನನ್ನ ಅಮ್ಮ...... ಕೆಲವರಿಗೆ ಗಿಫ್ಟ್ ಅಂತಾನು ಕೊಟ್ಟಿದ್ದಾರೆ......

ಕೊಕ್ಕರೆ ಹಾಗು ಮೊಲ...........


ಕುದುರೆ......

ಪುಟ್ಟ duck.........

ಏನ್ ಹೇಳಿ..... ಕೋಳಿ ಹುಂಜ...........
ಹಾಂ ... ಕಾಡಿನ ರಾಜ....ಸಿಂಹ.......
show kasininda tegeyuva modalu.........ಬೃಂದಾವನ..... ಅದರ ಪಕ್ಕ ಚಿಕ್ಕ ಮಣಿ ಇಂದ ಮಾಡಿದ ಬಾಳೇ ಚಿಪ್ಪು...


ತಲೆ ಮೇಲೆ ಏನೋ ಹೊತ್ತುಕೊಂಡಿರುವ ಬೊಂಬೆ......


ನಮ್ಮ ಮನೆಯ ನಾಯಿಗಳ ಹಿಂದೂ..... ಪಮೊರಿಯನ್, ಜೂಲಿ ನಾಯಿ,
ಬುಟ್ಟಿ.... ಅದರೊಳಗೆ ಪುಟ್ಟ ಬಾಳೇ ಹಣ್ಣು.....


ಚಿಕ್ಕ ಚೇರು......ವೈರ್ ನಿಂದ ಕಟ್ ಮಾಡಿ ಹಾಕಿರುವ ನಾಯಿ ಮರಿ...ಇದು ನನ್ನ ಹಾಗು ಅಮ್ಮನ ಅಚ್ಚು ಮೆಚ್ಚಿನ ಚಿಟ್ಟೆ.... ಇದನ್ನ ಹಾಕೋಕೆ ಅಮ್ಮ ತುಂಬ ಒದ್ದಡಿದ್ದರಂತೆ.... ಆದರೆ ಇದರಲ್ಲಿ ಕೆಲವು ಚಿಟ್ಟೆಗಳು ಯಾರೋ desing ನೋಡಿ ಹಾಕಿ ಕೊಡ್ತೇವೆ ಅಂಥ ತೆಗೆದು ಕೊಂಡು ಹೋಗಿ ಹಾಳು ಮಾಡಿ ಬಿಟ್ ಇದ್ದಾರೆ.....
ಹಾ,,, ಹಾ ತೊಟ್ಟಿಲು ಹಾಗು ಅದರೊಳಗೆ ಇರುವ ಪುಟ್ಟ ಪಾಪು......ಇದು ಅಸ್ತೆ... ಇವಾಗ desing ಗೆ ಅಂಥ ಒಂದೇ ಉಳಿಡಿರುವುದು


ಬರಿ ವೈರ್ ನಿಂದ ಸುಮ್ನೆ ಕೂತಿರಬೇಕಾದರೆ ಹಾಕಿರುವ ಜಿಂಕೆ......ಮನೆ ಯಾ ಹೂವಿನ ಕುಂಡ...... ಗಟ್ಟಿ ತಂತಿ ಹಾಗು ವೈರ್ ಬಳಸಿ ಮಾಡಿರುವುದು.....ಪುಟ್ಟ ಬುಟ್ಟಿ..... ಹಾಗು ವೈರ್ ನಲ್ಲಿ ಹಾಕಿರುವ ಅರಿಶಿನ ದ ಗಿಳಿ.. ಮಾಡುವೆ ಮನೆಗಳಲ್ಲಿ ಈ ಥರಹದು ಕೊಡುತಿದ್ದರು...ನನ್ನ ಪ್ರೀತಿಯ ಕರಿ ಆನೆ............


ಉಲ್ಲನ್ ಹಾಗು mesh ನಿಂದ ಮಾಡಿರುವ ವೆಂಕಟೇಶ್ವರ ಸ್ವಾಮಿ......

ಕುಕ್ಕರ್ ಗೆ ಹಾಕೋ ಗಾಸ್ಕೆಟ್ ಬರುತಲ್ವ ಅದರಿಂದ ಮಾಡಿರುವುದು.... ಇವಾಗಲು ಗೋಡೆ ಮೇಲೆ ಎಷ್ಟು ಚೆನ್ನಾಗಿ ಕಾಣುತ್ತೆ ಗೊತ್ತ...


ಒಂದು ಬಲ್ಬ್ ನಲ್ಲಿ ಮಾಡಿರುವ ಹೂವಿನ ಕುಂಡ.......


ಇದನ್ನ ಏಲಕ್ಕಿ ಸಿಪ್ಪೆ ನಲ್ಲಿ ಮಾಡಿರುವದು... ಇದು ಮಾಡುವುದಕ್ಕೆ ಅಮ್ಮ ತುಂಬ ಕಸ್ಟ ಪಟ್ಟಿದ್ದರಂತೆ ಮೊದಲು ಚಿತ್ರ ಬಿಡಿಸಿ,, ಆಮೇಲೆ ಏಲಕ್ಕಿ ಸಿಪ್ಪೆನಲ್ಲಿ ಅಂಟಿಸಿ ಮಾಡಿರುವದು.........ನಮ್ಮ ಮನೆಗೆ ಬಂದೋರೆಲ್ಲ ಈ ಗೋಲಿ ಗೊಂಚಲಿನ ದ್ರಾಕ್ಷಿ ನ ಹೊಗಳದೆ ಹೋಗೋದಿಲ್ಲ....... ಬರಿ ಗೋಲಿ ಹಾಗು ವೈರ್ ನಿಂದ ಮಾಡಿರುವ ಈ ದ್ರಾಕ್ಷಿ ಗೊಂಚಲು 25 ವರುಷದ ಕೆಳಗೆ ಮಾಡಿದ್ದು... ಇಂದಿಗೂ ಕೂಡ ಎಷ್ಟು ಚೆನ್ನಾಗಿ ಇದೆ ಗೊತ್ತ..... ನೆನ್ನೆ ಮೊನ್ನೆ ಹಾಕಿರೋ ಹಾಗೆ ಇದೆ.....

ಮೈಸೂರಿನ ಅನೆ ಅಂಬಾರಿಇದು ಅಮ್ಮ ಮಾಡಿರು ಅಪರೂಪದ ಕಲೆ..... ಬರಿ ಬೆಂಕಿ ಕಡ್ಡಿ use ಮಾಡ್ಕೊಂಡು ಹಾಕಿರುವುದು...... ಇವಾಗ್ಲು ಎಷ್ಟು ಚೆನ್ನಾಗಿ ಇದೆ ಗೊತ್ತ... ಯಾರು ಬಂದ್ರು ಇದನ್ನ ನೋಡಿ ಕೇಳ್ತಾರೆ...........ಇದು ಹತ್ತಿ ಹಾಗು ಸಿಲ್ವರ್ ಮಣಿ ಇಂದ ಮಾಡಿದ್ದು....... ನಮ್ಮರೂಮಿನಲ್ಲಿ ಜೋಪಾನವಾಗಿ ಇದೆ...... ಇ ಮೊಲ....

ಕೊನೆಯದಾಗಿ , ಸಿರಿಂಜ್ (ಇಂಜೆಕ್ಷನ್ ಕೊಡಬೇಕಾದರೆ ಒಂದು ಚಿಕ್ಕ ಬಾಟಲಿನಿಂದ ಔಷದನ ತಗೊತರಲ್ವ) ಬಾಟಲಿ ನಲ್ಲಿ ಮಾಡಿರುವ ಮಂಟಪ..... ಮನೆ ಚೇಂಜ್ ಮಾಡೋವಾಗ ಸ್ವಲ್ಪ ಹಾಳಾಗಿ,, ಹಾಗು ಹೀಗೂ ಇಸ್ಟು ಉಳ್ಕೊಂಡ್ ಇದೆ.........

(ಇಲ್ಲಿರುವುದೆಲ್ಲ ನಮ್ಮ ಅಮ್ಮ ಚಿಕ್ಕವರಾಗಿದ್ದಾಗ ಮಾಡಿರುವುದು ಅಂದರೆ 20 25 varshada ಕೆಳಗೆ ..... ಇವಾಗ ಅಸ್ಟೊಂದು ಮಾಡ್ತಾ ಇಲ್ಲ.......)

ಮುಂದಿನ ಬ್ಲಾಗ್ ನಲ್ಲಿ ಅಮ್ಮ ಹಾಕಿರುವ ಸ್ವೆಟರ್ ಹಾಗು ಉಲ್ಲನ್ ನಿಂದ ಮಾಡಿರುವ ಕೆಲವೊಂದು ಚಿತ್ರಗಳನು ಅಪ್ಲೋಡ್ ಮಾಡ್ತೇನೆ...)
ಇದು istte ಅಲ್ಲ ಇನ್ನು ಕೆಲವು ಫೋಟೋಗಳನ್ನು ಅಪ್ಲೋಡ್ ಮಾಡೋದಕ್ಕೆ ಆಗಲಿಲ್ಲಾ ಅದೆಲ್ಲವನ್ನೂ ನನ್ನ ಪಿಕಾಸ alubum ನಲ್ಲಿ ಇಟ್ಟಿದ್ದೇನೆ.... ಇನ್ನು ನೋಡಬೇಕೆಂದರೆ.....ಇಲ್ಲಿ ಕ್ಲಿಕ್ ಮಾಡಿ .....


My mothers Arts - Saraswathi.

http://picasaweb.google.co.in/guru.prasadkr/MyMothersArtsSaraswathi?authkey=Gv1sRgCL7D6rm008DonwE#

21 comments:

 1. ಗುರು,

  ಇಂಥ ಅಮ್ಮನಂಥ ಅಮ್ಮನನ್ನು ಪಡೆದ ನೀವೆ ಧನ್ಯರು. ಅವರು ಮಾಡಿರುವ ಕಲಾಕೃತಿಗಳಲ್ಲಿ ಯಾವುದನ್ನು ಹೊಗಳೋದು...ಒಂದಾ ಎರಡಾ...ನೋಡಲು ಎರಡು ಕಣ್ಣು ಸಾಲದು...ಅವರ ಕೃಯೇಟಿವಿಟಿಗೆ ತಾಳ್ಮೆಗೆ, ಶ್ರದ್ಧೆಗೆ ನನ್ನ ಅಭಿನಂದನೆಗಳು...ಮತ್ತು ಅಮ್ಮಂದಿನ ದಿನದ ಶುಭಾಶಯಗಳು...

  ಇಂಥವನ್ನು ನೋಡಲು ಅವಕಾಶ ಮಾಡಿಕೊಟ್ಟ ನಿಮಗೂ ಧನ್ಯವಾದಗಳು...

  ReplyDelete
 2. ಅದ್ಭುತ ಕಲಾಕೃತಿಗಳು. ನಿಮ್ಮ ತಾಯಿಯವರಿಗೆ ನನ್ನ ಕಡೆಯಿ೦ದ ನಮನಗಳು. ನಾವು ಕೂಡ ಆ ಖಾಲಿ ಕೊಬರಿಎಣ್ಣೆ ಬಾಟಲ್ ನಿ೦ದ ಫ್ಲವರ್ ವಾಸ್, ಮತ್ತೆ ಹಾಳಾಗಿರೊ ಗ್ಯಾಸ್ಕೆಟ್ ಮೇಲೆ ಬೆ೦ಕಿಕಡ್ಡಿ ಮತ್ತು ಫಿಷರ್ ಟೇಪ್ ನಿ೦ದ ಹ್ಯಾ೦ಗಿ೦ಗ ಮಾಡ್ತಾ ಇದ್ವಿ. ಎಲ್ಲ ನೆನಪಾಯ್ತು.

  ReplyDelete
 3. ತುಂಬಾ ಚೆನ್ನಾಗಿದೆ ಗುರು ನಿಮ್ಮ ಅಮ್ಮನ ಕಲೆಯೆಲ್ಲ ನೋಡಿ ನನ್ನಮ್ಮನ ಕಲೆ ಅವರ ಕೆಲಸ ಎಲ್ಲವೊ ನೆನಪಾಯಿತು ನಮ್ಮ ಅಮ್ಮ ಕೂಡ ಇದೆ ತರಹ ಅದೆಷ್ಟು ಕಲಾಕೃತಿ ಮಾಡಿದ್ದಾರೋ ಲೆಕ್ಕವೇ ಇಲ್ಲ........ನೀವು ನಿಮ್ಮ ಅಮ್ಮನ ಸಾಧನೆಯನ್ನು ಎತ್ತಿ ಹಿಡಿದಿರಲ್ಲ ಭೇಷ್!!!!! ಅಮ್ಮ ಎಂದೆಂದು ನಗುತಿರಲಿ ನಿಮ್ಮ ಅಮ್ಮನ ಪ್ರೀತಿ ಸದಾ ಹಸಿರಾಗಿರಲಿ!!!!ನಾನು ಪುಟ್ಟ ಕವನ ಬರೆದಿದ್ದೇನೆ ಅಮ್ಮನ ಬಗ್ಗೆ ನೋಡಿ ನೀವೊಮ್ಮೆ!!!
  ನಮ್ಮ ಕಣ್ಣು ತಂಪು ಮಾಡಿಸಿದಿರಿ ಈ ಎಲ್ಲಾ ಕಲಾಕೃತಿಗಳಿಂದ ನಿಮಗೆ ನನ್ನ ಆತ್ಮೀಯ ಧನ್ಯವಾದಗಳು

  ಅದರಲ್ಲಿ ಒಂದೇ ಒಂದು ಆಕೃತಿ ಮಾಡೊದನ್ನ ಕಲಿರಿ ನೋಡೋಣ ಬರುತ್ತ ನಿಮಗೆ...? ಹ ಹಾ ಹ ಅಹಾ....

  ReplyDelete
 4. ತುಂಬಾ ಚೆನ್ನಾಗಿದೆ ಗುರು... ಒಂದನ್ನು ಮೀರಿಸುವ ಮತ್ತೊಂದು ಕಲಾಕೃತಿಗಳು! ನಿಮ್ಮ ಅಮ್ಮನವರ ಈ ಕಲೆಯನ್ನೂ ಅದೆಷ್ಟು ಹೊಗಳಿದರೂ ಸಾಲಲಾರದು. ವಂದನೆಗಳನ್ನು ಜೊತೆಗೆ ಅಮ್ಮಂದಿರ ದಿನದ ಶುಭಾಶಯಗಳನ್ನು ತಿಳಿಸಿ.

  ReplyDelete
 5. ಶಿವೂ,
  ಧನ್ಯವಾದಗಳು .. ಖಂಡಿತ ಅಮ್ಮನಿಗೆ ನಿಮ್ಮ ಶುಭಾಶಯಗಳನ್ನು ತಿಳಿಸುವೆ.

  ReplyDelete
 6. ವಿನುತ
  ನನ್ನ ತಾಯಿಯ ಕಲೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು ... ಹಾಗೆ ಇವುಗಳನ್ನು ನೋಡುತ್ತಾ ನೀವು ಮಾಡಿರುವ ಫ್ಲವರ್ ವಾಸ್ ನೆನಪಾಗಿದ್ದು ಕೇಳಿ ಖುಷಿ ಆಯಿತು... ನಿಮ್ಮ ನಮನಗಳನ್ನು ಅಮ್ಮನಿಗೆ ತಿಳಿಸುತ್ತೇನೆ ..
  ಗುರು

  ReplyDelete
 7. ಮನಸು,
  ನನ್ನ ಅಮ್ಮನ ಕಲೆಯನ್ನು ಮೆಚ್ಚಿ ಕೊಂಡಿದ್ದಕ್ಕೆ ಧನ್ಯವಾದಗಳು ,, ಹಾಗೆ ನಿಮ್ಮ ಅಮ್ಮನವರು ಮಾಡಿರುವ ಕಲೆ ನೆನಪಿಸಿಕೊಂಡಿದಕ್ಕು ಕೂಡ...
  ಮನಸು ನನಗೆ ಈ ಥರ ಎಲ್ಲ ಮಾಡೋಕ್ಕೆ ಬರೋಲ್ಲ ಆದರೆ ನನ್ನ ಪ್ರಪಂಚವೇ ಬೇರೆ ಇದೆ... ನಿದಾನಕ್ಕೆ ಅದನ್ನ share ಮಾಡ್ಕೋತೇನೆ...

  ಗುರು

  ReplyDelete
 8. ಧನ್ಯವಾದಗಳು ದಿವ್ಯ ... ನಿಮ್ಮ ಶುಭಾಶಯ ಖಂಡಿತ ಅಮ್ಮನಿಗೆ ತಲುಪಿಸುತ್ತೇನೆ.....

  ReplyDelete
 9. ತು೦ಬಾ ಅ೦ದ್ರೆ ತು೦ಬಾನೇ ಚೆನ್ನಾಗಿದೆ... ಒ೦ದಕ್ಕಿ೦ತ ಒ೦ದು ಚೆನ್ನಾಗಿವೆ.... ನಿಮ್ಮ ಅಮ್ಮನ ಕಲೆ ನಿಜಕ್ಕೂ ಅದ್ಭುತ..... ತು೦ಬಾ ಇಷ್ಟವಾಯಿತು ಗುರು.

  ReplyDelete
 10. ಪಿಕಾಸದಲ್ಲಿರುವ ಕಲಾಕೃತಿಗಳನ್ನು ಕಣ್ಣು ತು೦ಬಿಸಿಕೊ೦ಡೆ....ಉಲ್ಲನ್ ಬಗೆಗಿನ ಮು೦ದಿನ ಪೋಸ್ಟಿಗೆ ಕಾತುರದಿ೦ದ ಕಾಯುತ್ತಿದ್ದೇನೆ.

  ReplyDelete
 11. ತುಂಬ ಥ್ಯಾಂಕ್ಸ್ ಸುದೇಶ್, :-)

  ReplyDelete
 12. ಸಿಕ್ಖಾಪಟ್ಟೆ ಟ್ಯಾಲೆಂಟು ನಿಮ್ಮ ತಾಯಿಯವರಿಗೆ.. ನಿಮ್ಮ ಅಭಿಮಾನ, ಹಿಗ್ಗು, ಕಂಡು ಸಂತೋಷ ಆಯ್ತು. ಆ ವಾಪಸ್ಸು ಕೊಡದೆ ಇರೋ ಟೇಬಲ್ ಫಾನಿಗಿರೋ ನಿಮ್ಮ ಫೀಲಿಂಗು ನಗು ತಂದಿತು...ಹೌದಲ್ವಾ ಜೀವನದಲ್ಲಿ ಈ ಚಿಕ್ಕ ಚಿಕ್ಕ ವಿಷಯಗಳೇ ಜಾಸ್ತಿ ಖುಷಿ ಕೊಡುವುದು..ಈ ಪೋಸ್ಟ್ನಲ್ಲಿ ಇರೋ ಚಿತ್ರಗಳು, ಅದರೊಳಗೆ ಮೂಡಿದ್ದ ಕಲೆ ಬಹಳ ಸೊಗಸಾಗಿತ್ತು...ನಿಮ್ಮ ತಾಯಿಯವರಿಗೂ ಅಭಿನಂದನೆಗಳು..

  ReplyDelete
 13. ಅದ್ಭುತವಾಗಿದೆ.. ಒಂದನ್ನು ಮೀರಿಸಿ ಇನ್ನೊಂದು!! ತುಂಬಾ ಖುಶಿ ಆಯಿತು ನೋಡಿ:) ಅವರ ಕೈಚಳಕಕ್ಕೆ ಹ್ಯಾಟ್ಸ್ ಆಫ್!!!
  ಇವೆಲ್ಲವನ್ನು ನಮ್ಮೋಮ್ದಿಗೆ ಹಂಚಿಕೊಂಡಿದಕ್ಕೆ ನಿಮಗೆ ಥ್ಯಾಂಕ್ಸ್!

  ReplyDelete
 14. ಅಮ್ಮ ಎಂಬ ಮಾತಿಗಿಂತ
  ಬೇರೆ ಮಂತ್ರ ಏನಿದೆ?
  ಅದು ನೀಡುವ ಶಾಂತಿ-ಕಾಂತಿ
  ಯಾವ ತಾರೆ ರವಿಗಿದೆ?(ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ)
  ಅಲ್ವೇ?
  ಗುರು..ನಿಮ್ಮಮ್ಮಂಗೆ ನನ್ನ ನೆನೆಕೆಗಳನ್ನೂ ತಿಳಿಸಿ..ನಮ್ಮ ಬದುಕಿನ ಪ್ರತಿ ಕ್ಷಣವೂ ಅನುದಿನವೂ ಅಮ್ಮಂದೇ ಅಲ್ಲವೇ? ಬರಹ ತುಂಬಾ ಇಷ್ಟವಾಯಿತು.
  ಅಮ್ಮ ಅಂದ್ರೆ ಬದುಕು, ಅಮ್ಮ ಅಂದ್ರೆ ಸತ್ಯ..ಅಮ್ಮನ ಬಗ್ಗೆ ಏನು ಹೇಳಿದ್ರೂ, ಎಷ್ಟೇ ಬರೆದ್ರೂ ಕಡಿಮೆನೇ ಅಲ್ವಾ? ಅಮ್ಮನ ಅದ್ಭುತ ಪ್ರತಿಭೆಗೆ ನನ್ನದೂ ಪ್ರೀತಿಯ ಸಲಾಂ..
  ಅಭಿನಂದನೆಗಳು
  -ಧರಿತ್ರಿ

  ReplyDelete
 15. ಧನ್ಯವಾದಗಳು ಪ್ರತಿಭಾರವರೆ.
  ಹೌದು ಹಳೆಯ ನೆನಪುಗಳನ್ನು ಇ ರೀತಿ ನೆನಪಿಸಿಕೊಲ್ಥ ಇರಬೇಕಾದ್ರೆ ಎಷ್ಟು ಖುಷಿ ಇರುತ್ತೆ ಅಲ್ವ.. Mothers ಡೇ ಅಂತ ಅಮ್ಮನಿಗೆ ಏನು ತೆಗೆದು ಕೊಡಲಿಲ್ಲ,, ಆದರೆ ಅವರ ಕಲೆಯನ್ನು ಹವ್ಯಾಸವನ್ನು ಫೋಟೋ ತೆಗೆದು ನನ್ನ ಬ್ಲಾಗ್ನಲ್ಲಿ ಹಾಕ್ತೇನೆ ಅಂದಾಗ ಅವರಿಗೂ ಎಷ್ಟು ಕುಶಿ ಆಯಿತು ಗೊತ್ತ... ಅವರ ಜೊತೆಗೆ ನಂಗು ಅಸ್ಟೆ..
  ಹೀಗೆ ಬರುತ್ತಿರಿ

  ReplyDelete
 16. ರೂಪಶ್ರಿ ..
  ತುಂಬ ಥ್ಯಾಂಕ್ಸ್ ನನ್ನ ಅಮ್ಮ ಕಲೆ ಯನ್ನು ಮೆಚ್ಚಿ ಅಭಿನಂದಿಸಿದಕ್ಕೆ .

  ಗುರು

  ReplyDelete
 17. ತುಂಬ ಥ್ಯಾಂಕ್ಸ್ ಧರಿತ್ರಿ
  ಅಮ್ಮನ ಬಗ್ಗೆ ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟರ ಚಿಕ್ಕ ಸಾಲು ತುಂಬ ಚೆನ್ನಾಗಿ ಇದೆ..
  ಮೆಚ್ಚಿದಕ್ಕೆ ಧನ್ಯವಾದಗಳು , ಅಮ್ಮನಿಗೆ ನಿಮ್ಮ ಅಭಿನಂದನೆ ತಿಳಿಸುತ್ತೇನೆ...

  ReplyDelete
 18. ತುಂಬ ಚೆನ್ನಾಗಿದೆ..ಒಂದಕ್ಕಿಂತ ಒಂದು ಚೆನ್ನಾಗಿದೆ...ಕೆಲವೊಂದನ್ನು ನಾವು ಕೂಡ ಮಾಡ್ತಿದ್ವಿ ..ಎಲ್ಲ ನೆನಪಾಯ್ತು..ನನ್ನ ಕಡೆಯಿಂದ ನಿಮ್ಮ ಅಮ್ಮನಿಗೆ ಅಭಿನಂದನೆ ಗಳನ್ನೂ ತಿಳಿಸಿ..

  ReplyDelete