ಪ್ರಶಾಂತ ವಾದ ಸಂಜೆಯಲ್ಲಿ, ಒಬ್ಬರೇ ಸಮುದ್ರದ ಹತ್ತಿರ ಮರಳಿನಲ್ಲಿ ಕುಳಿತುಕೊಂಡು....ಸಮುದ್ರದ ಆಲೆಗಳನ್ನೇ ನೋಡುತ್ತಾ.....ಏನಾದರೂ ಯೋಚನೆ ಮಾಡ್ತಾ ಇರೋದು ಎಷ್ಟು ಚೆನ್ನ ಇರುತ್ತೆ ಅಲ್ವ..... ಅಲೆ ಆಲೆ ಗಳ ರೂಪದಲ್ಲೇ ನಮ್ಮ ಮನಸಿನಲ್ಲೂ ನೆನಪು ಎಂಬ ಅಲೆಗಳು ಏಳುತ್ತಾ ಇರುತ್ತೆ ಅಲ್ವ......
ಹಾಂ ಬಿಡಿ,, ಇವಾಗ ನಾನು ಹೇಳಲು ಹೊರಟಿರುವುದು ಒಬ್ಬ ಕಲೆಗಾರನ ಬಗ್ಗೆ,,, ಹಾಗು ಅವನ ಕಲೆಯ ಬಗ್ಗೆ. UK ನಲ್ಲಿ ಪ್ರಸಾರವಾಗುವ "ಗಾರ್ಡಿಯನ್ ಪೇಪರ್" ನ ನೋಡ್ತಾ ಇರಬೇಕಾದ್ರೆ ಇವರ ಬಗ್ಗೆ ಕುತೂಹಲ ಮಾಹಿತಿ ಸಿಕ್ತು.... ಇವರ determination ಗೆ,,, ಇವರ dedicationge ನಿಜವಾಗ್ಲೂ ತಲೆ ಬಾಗಲೇ ಬೇಕು.
ಯಾರಿಗಾದರೂ ಸಮುದ್ರದ ಮುಂದೆ ಹೋಗಿ ಅಲೆಗಳ ಫೋಟೋ ತೆಗಿರಿ ಅಂದ್ರೆ...ಎಷ್ಟು ಅಂತ ಅಲೆಗಳ ಫೋಟೋನೇ ತೆಗೀತಿರ ಅಲ್ವ.....ಏನೋ sunset ನ ಸ್ವಲ್ಪ ಚೆನ್ನಾಗಿ ಅಲೆಗಳ ಮೇಲೆ,,ಅಥವಾ ನೆರಳು ಬೀಳುವಂತೆ ಇನ್ನೇನೋ different ಆಗಿ ತೆಗಿಬಹುದು.... aste ಅಲ್ವ... ಇನ್ನೇನಾದ್ರು ಮಾಡೋಕೆ ಆಗುತ್ತ ಯೋಚಿಸಿ..... ಗೊತ್ತಾಗಲಿಲ್ಲ ಅಂದ್ರೆ ಇಲ್ಲಿ ನೋಡಿ ......
ನಾನು ಹೇಳಬೇಕು ಅಂತ ಇರುವುದು clark little.. ಅನ್ನುವ ಕಲೆಗಾರನ ಬಗ್ಗೆ

ಇವರು ಹುಟ್ಟಿದು ಬೆಳೆದಿದ್ದು north shore of the Hawaiian island Oahu. ಇವರು ತಮ್ಮ ಜೀವನವನ್ನು ಫೋಟೋಗ್ರಫಿ ಗೆ ಅಂತ ಮೀಸಲಿಟ್ಟಿದ್ದಾರೆ.. ಅದು ಎಂಥ ಫೋಟೋಗ್ರಫಿಕ್ ಗೆ ಗೊತ್ತ,, ಬರಿ Waves. ಸಮುದ್ರದ ಅಲೆಗಳು... Surfs.. ಇಸ್ಟರಲ್ಲೇ ಏನನ್ನೋ ಸಾಧಿಸಲು ಹೊರಟಿದ್ದಾರೆ ,, ಮತ್ತು ಅಸದ್ಯವಾದದ್ದನ್ನು ,,,imagin ಮಾಡಿಕೊಳ್ಳೋಕೆ ಆಗದೆ ಇರುವುದನ್ನು ಸಾದಿಸಿ ತೋರಿಸಿದ್ದಾರೆ ...... ಇವರ ಬಗ್ಗೆ ನಾನೇನು ಹೆಚ್ಚಿಗೆ ಹೇಳುವುದಿಲ್ಲ ಅವರ ಕಲೆ ಯನ್ನು ಅವರ ಫೋಟೋಗ್ರಫಿ ಮೂಲಕನೆ ನೋಡಿ ತಿಳಿಯಿರಿ ....










"ಒಬ್ಬ ಕಲೆಗಾರ ಕನುಸುಗಾರ ಏನನ್ನಾದರೂ ಮಾಡಬೇಕು ಅಂಥ determination ನಿಂದ ಹೊರಟರೆ ಇಂಥ ಅದ್ಬುತಗಳು ಎಸ್ಟೋ ಸಿಗುತ್ತವೆ ಅಲ್ವ......... "
ಇವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗು ಫೋಟೋ ಗಳಿಗಾಗಿ ಇಲ್ಲಿ ನೋಡಿ http://www.clarklittlephotography.com/
(ನನಗೆ ನಮ್ಮ ಬ್ಲಾಗಿನ ಸ್ನೇಹಿತರಾದ ಮಲ್ಲಿಕಾರ್ಜುನ್ ಹಾಗು ಶಿವೂ ಅವರ ಬಗ್ಗೆ ಅವರ ಕ್ರಿಯೇಟಿವಿಟಿ ಬಗ್ಗೆ ತುಂಬ ಹೆಮ್ಮೆ ಇದೆ... ಆವರು ಫೋಟೋಗ್ರಫಿ ನಲ್ಲಿ ಇನ್ನಸ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ನನ್ನ ಹಾರೈಕೆ)
ಅದ್ಭುತ ಕಲಾವಿದ.
ReplyDeleteಪ್ರತಿಭೆಯನ್ನು ಮೆಚ್ಚಲೇಬೇಕು
ಹೌದು ಅದ್ಬುತ ಪ್ರತಿಭೆ....
ReplyDeleteಇವರ ಫೋಟೋಗಳು ಲಂಡನ್ ನಲ್ಲಿ ಇವಾಗ ಪ್ರದರ್ಶನ ಗೊಳ್ಳುತ್ತ ಇದೆ. ಇದರಿಂದ ತುಂಬ popularity ಕೂಡ ಸಿಕ್ತ ಇದೆ ಈ ಕಲಾವಿದನಿಗೆ....
ಗುರು ಅವರೆ,
ReplyDeleteಎಂಥ Top Class ಫೋಟೋಗಳಲ್ವ? ಈತನ ಮುಂದೆ ಸಣ್ಣ ಹುಲ್ಲುಕಡ್ಡಿ ನಾನು.ಆತನ vision, dedication ಅನುಕರಣೀಯ. ಇಂತಹ ಮಹಾನ್ ವ್ಯಕ್ತಿ ಮತ್ತು ಆತನ ಚಿತ್ರಗಳನ್ನು ನಮಗೆ ತೋರಿಸಿ ಸ್ಫೂರ್ತಿ ನೀಡಿದ ನಿಮಗೆ ತುಂಬಾ ಧನ್ಯವಾದಗಳು.
ಗುರು ಅವರೆ,
ReplyDeleteಜೀವ ಭಯವನ್ನು ತೊರೆದು ಅದ್ಭುತವನ್ನು ಸಾಧಿಸುವ ಇಂಥಾ ಕಲಾವಿದರಿಗೆ ನನ್ನ ಹ್ಯಾಟ್ಸ್ ಆಫ್!! Good Morning Americaದಲ್ಲಿ ಇವರ ಸಂದರ್ಶನವಿತ್ತು ೨-೩ ತಿಂಗಳ ಹಿಂದೆ..ಸಿಂಪ್ಲಿ ಗ್ರೇಟ್!!
ಈ ಫೋಟೋಗಳು ನನಗೆ ಈಮೈಲ್ ನಲ್ಲಿ ಬಂದಿತ್ತು, ನಿಮಗೆ fwd ಮಾಡಿದ್ದೆ ಬೆಳಗ್ಗೆ, ಆದ್ರೆ ನೀವು ಭಾರಿ ಫಾಸ್ಟ್.. ಆಗಲೇ ಇಲ್ಲಿ ಪೋಸ್ಟ್ ಆಗಿವೆ:) ಅಲ್ಲದೆ vodafone zoo fwd ಕೂಡ ಇದೆ ನಿಮ್ಮ ಮೈಲ್ ನೋಡಿ!!
ಗುರು ನಿಮ್ಮ ವಿಭಿನ್ನ ಮತ್ತು ಬಹು ಅಹ್ಲಾದಕರ postಗಳು ನಮಗೆ ಹೊಸ್ತರ ಪರಿಚಯಮಾಡುತ್ತವೆ
ReplyDeleteನಿಜ ಶಿವು ಅವರ ಅಮೋಘ ಪ್ರತಿಭೆಗೆ ನಮ್ಮೆಲ್ಲರ ತುಂಬುಹೃದಯದ ಶುಭಕಾಮನೆಗಳು, ಕಲೆಯನ್ನು ಅನುಭವಿಸುವಿದು, ಆನಂದಿಸುವುದು ನಮ್ಮ ಕೆಲಸ..ಶಿವುನಂತಹ ಮುಕ್ಕಣ್ಣರಿಗೆ ಆ ಅವಕಾಶವನ್ನು ನಮಗೆ ನೀಡುವ ಕೆಲಸ.
ಗುರು..ಈ ಸುಂದರ ಮೇಲ್ ನಂಗೂ ಬಂದಿತ್ತು...ಆದರೆ ಇದರ ಹಿಂದೆ ಇಷ್ಟು ದೊಡ್ಡ ಕಲಾಪ್ರತಿಭೆ ಇದೆ ಅನ್ನೋದನ್ನು ಯಾರೂ ಹೇಳಿರಲಿಲ್ಲ..ಆ ಮೇಲ್ ನಲ್ಲೂ ಬರೆದಿರಲ್ಲ! ಗುಡ್..ಓದಿ ತುಂಬಾ ಖುಷಿಯಾಯಿತು.ಮನ ತುಂಬಾ ಖುಷಿಯ ಆಹ್ಲಾದ ನೀಡಿತ್ತು. ನೀವೂ ಒಬ್ಬ ಕಲೆಗಾರ ಬಿಡ್ರೀ..!!
ReplyDelete-ಧರಿತ್ರಿ
ಗುರು,
ReplyDeleteಫೋಟೋಗ್ರಫಿ ಅಂದ ತಕ್ಷಣ ಯಾವುದೇ ಬ್ಲಾಗ್, ಸೈಟ್ ಆಗಲಿ ಓಡಿ ಬರುವುದರಲ್ಲಿ ಮೊದಲಿಗ ನಾನು..ನಿಮ್ಮ ಬ್ಲಾಗ್ ಸದಾ ಹೊಸ ಕಲೆಯನ್ನು ಪರಿಚಯಿಸುವುದರಲ್ಲಿ ಮುಂದಿದೆ. ಮತ್ತು ಅದಕ್ಕಾಗಿ ಕಾಯುತ್ತೇನೆ ನಾನು. ಮತ್ತೆ ಇಲ್ಲಿ ನಮ್ಮವನೇ[ಫೋಟೋಗ್ರಫಿ]clark littleನ ಕಲೆಯನ್ನು ಅವನ Determination, achievements, ಅರ್ಪಣ ಮನೋಭಾವನೆಗಳನ್ನು ಚೆನ್ನಾಗಿ ಚಿತ್ರಗಳ ಮೂಲಕ ತೋರಿಸಿದ್ದೀರಿ...
ಮತ್ತೆ ಬೇರೆಯವರ ಕಲೆಯನ್ನು ನೋಡಿ ಮನಃಪೂರ್ವಕವಾಗಿ ಆನಂದಿಸುವುದು... ಅಭಿನಂದಿಸುವುದು...ನಮ್ಮಲ್ಲಿ ಕಡಿಮೆ. [ಅಭಿನಂದಿಸುವುದಕ್ಕಿಂತ ಕಾಲೆಳೆಯುವುದಕ್ಕೆ ಕಾಯುತ್ತಿರುವ ಇಂಥ ಸಮಯದಲ್ಲಿ]ನೀವು ಅನೇಕರ ಕಲೆ ಸಾಧನೆಗಳನ್ನು ಗುರುತಿಸಿ ಇತರರು ನೋಡಿ ಗುರುತಿಸಲಿ, ಸಂತೋಷಪಡಲಿ ಅಂದುಕೊಂಡು ಅವರ ಚಿತ್ರಗಳನ್ನು ಕಲಾಕೃತಿಗಳನ್ನು ನಿಮ್ಮ ಬ್ಲಾಗಿನಲ್ಲಿ ಹಾಕುತ್ತೀರಿ. ಹೀಗೆ ಪ್ರೋತ್ಸಾಹಿಸುವುದರಲ್ಲಿ ನೀವು ಮೊದಲಿಗರು..ಜೊತೆಗೆ ನಿಮ್ಮ ಲೇಖನದಲ್ಲಿ ನಮ್ಮನ್ನು ಅಭಿನಂದಿಸಿದ್ದೀರಿ. [ ಹೂವಿನ ಜೊತೆಗೆ ನಾರು ಸ್ವರ್ಗ ಸೇರುವಂತೆ]
ಧನ್ಯವಾದಗಳು
ಅದ್ಭುತವಾದ ಚಿತ್ರಗಳು. ರೋಮಾ೦ಚಕ ಅನುಭವ ಕೊಡ್ತಾವೆ. ವರ್ಣಿಸಲು ಶಬ್ದರಾಹಿತ್ಯ ಕಾಡುತ್ತಿದೆ. ಚೆನ್ನಾಗಿದೆ.
ReplyDeleteಅದ್ಭುತವೆನಿಸುವ೦ತಹ ಕಲಾಕೃತಿಗಳು. ಆ ಕಲಾವಿದನಿಗೊ೦ದು ಹ್ಯಾಟ್ಸ್ ಆಫ್. ಪರಿಚಯಕ್ಕಾಗಿ ಧನ್ಯವಾದಗಳು.
ReplyDeleteಅದ್ಭುತ ಕಲಾವಿದ.
ReplyDeleteಅವರ ಪ್ರತಿಭೆಯನ್ನು ನೀವು ನಮ್ಮೊಂದಿಗೆ ಹಂಚಿಕೊಂಡಿರಲ್ಲ ನಿಮ್ಮನ್ನೊ ಮೆಚ್ಚಬೇಕು ಒಳ್ಳೆಯದನ್ನೆಲ್ಲಾ ಮೆಚ್ಚುಗೆಯಲ್ಲಿ ತೋರಿಸಬೇಕು ನಿಮ್ಮ ಕೆಲಸ ನಿಜಕ್ಕೊ ಒಳ್ಳೆಯದು.. ಹೀಗೆ ಮುಂದುವರಿಸಿ
ಮಲ್ಲಿಕಾರ್ಜುನ್
ReplyDeleteಇವರದು ಅದ್ಬುತ ಪ್ರತಿಬೆ.....ಇವಾಗ ಫೋಟೋಗಳನ್ನು ನೋಡಲು ಅದನ್ನ imagin ಮಾಡಿಕೊಳ್ಳಲು ತುಂಬ ಕುಶಿ ಆಗುತ್ತೆ....
ಇದನ್ನು ತೆಗೆಯುವ ಕಷ್ಟ ನಿಮ್ಮಗಳಿಗೆ ಗೊತ್ತಿರಬೇಕು
ಹೀಗೆ ಬರುತ್ತಿರಿ
ಗುರು
ರೂಪಶ್ರಿ
ReplyDeleteಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ...ಹೌದು ನನಗು ಮೇಲ್ ನಲ್ಲಿ ಇದು ಬಂದಿತ್ತು,, ಆದರೆ ಇದನ್ನು ನಾನು ಮೊದಲೇ ನೋಡಿದ್ದೇ..
ನಿಮ್ಮ ಮೇಲ್ ಸಿಕ್ಕಿತು,, ನೀವು ಹೇಳಿದ ಸಂದರ್ಶನ ವನ್ನು ಡೌನ್ಲೋಡ್ ಮಾಡಿ ನೋಡ್ತೇನೆ
ಗುರು
ಜಲನಯನ
ReplyDeleteಥ್ಯಾಂಕ್ಸ್.... ಕಲೆ ಅಂತ ಇರೋದು ಯಾವಾಗಲು ನೋಡಿ ಆನಂದಿಸೋಕೆ ಅಲ್ವ... ಅದು ನಿಂತ ನೀರಾಗಬಾರದು.....ಎಲ್ಲರೂ ನೋಡಿ ಹೋಗಲಿ ಅದರಿಂದ ಸ್ಫೂರ್ತಿ ಪಡೆದು ಇನ್ನು ಹೆಚ್ಚಿನದನ್ನು ಸಾಡಿಸಲು ಅಣಿಯಾಗಬೇಕು
ಹೀಗೆ ಬರುತ್ತಿರಿ ಸರ್....
ಗುರು
ಥ್ಯಾಂಕ್ಸ್ ಧರಿತ್ರಿ.... :-)
ReplyDeleteಶಿವೂ ತುಂಬ ಥ್ಯಾಂಕ್ಸ್.
ReplyDeleteನಿಮ್ಮಲ್ಲೂ ಅ ಕಲೆ ಇದೆ ಸರ್,, ತುಂಬ ವಿಭಿನ್ನ ವಾದ ವಿಶಿಷ್ಟವಾದ ಫೋಟೋ ಗಳೊಂದಿಗೆ ನಿಮ್ಮನು ಗುರುತಿಸಿಕೊಂದಿದ್ದಿರ....ಹೀಗೆ ಮುಂದುವರಿಯಲಿ ನಿಮ್ಮ ಇ ಹವ್ಯಾಸ.....:-)
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಪರಾಂಜಪೆ...
ReplyDeleteಧನ್ಯವಾದಗಳು ವಿನುತ.. ಹೀಗೆ ಬರುತ್ತಿರಿ
ReplyDeleteಮನಸು
ReplyDeleteಖಂಡಿಥವಾಗಳು ನಿಮ್ಮಗಳ ಅಭಿನ೦ದನೆಗಳಿಂದ ಹೀಗೆ ಮುಂದುವರಿಸುತ್ತೇನೆ,,,,
ಗುರು
ಗುರು ಅವರೆ,
ReplyDeleteನಿಮ್ಮ ಪ್ರಪಂಚ ಚೆನ್ನಾಗಿದೆ. ಅದ್ಭುತವಾದ ಫೋಟೋಗಳು ಹಾಕಿದ್ದೀರ.
ತುಂಬಾ ತುಂಬಾ ತುಂಬಾನೆ ಚೆನ್ನಾಗಿದೆ !!!!!!!!
ReplyDeleteಅಂತರ್ವಾಣಿ ರವರೆ,, ನನ್ನ ಬ್ಲಾಗಿಗೆ ಬಂದು ಮೆಚ್ಚಿಕೊಂದಿದಕ್ಕೆ ಧನ್ಯವಾದಗಳು...
ReplyDeleteನಿಮ್ಮ ಕನಸು ವಿಚಿತ್ರವಾಗಿ ಇದೆ.... ನಿಮ್ಮ ಬ್ಲಾಗ್ ಅನ್ನು ಲಿಂಕ್ ಮಾಡಿಕೊಂಡಿದ್ದೇನೆ,,,,,
ಹೀಗೆ ಬರುತ್ತಿರಿ
ಇಂದುಶ್ರಿ.
ReplyDeleteನನ್ನ ಬ್ಲಾಗಿನ ಲೋಕಕ್ಕೆ ಸ್ವಾಗತ.....ಮೆಚ್ಚಿಕೊಂದಿದ್ದಕೆ ಧನ್ಯವಾದಗಳು....
ಹೀಗೆ ಬರುತ್ತಿರಿ.. ಸಾದ್ಯವಾದರೆ ನನ್ನ ಹಳೆಯಾ ಲೇಖನಗಳನ್ನು ಓದಿ ನೋಡಿ.....
ಗುರು