ಈ ಮೇಲಿನ ಚಿತ್ರ ನೋಡಿ...maclaren f1 ಕಾರು.... ಎಷ್ಟು ಚೆನ್ನಾಗಿ ಇದೆ ಅಲ್ವ
"ಏನ್ ಇದು ,, ಯಾವುದೊ ಒಂದು ಕಾರ್ ,,ಮರದಲ್ಲಿ neat ಆಗಿ ಕೆತ್ತಿದ್ದಾರೆ ಅಸ್ಟೇ...ಇದನ್ನ ನೋಡಿ ಅಂತ ಹೇಳ್ತಾ ಇದ್ದನಾಲ್ಲ " ಅಂತ ಅನ್ಕೊತಾ ಇದ್ದೀರಾ....ಅಲ್ಲೇ ಇರೋದು ಇದರ ಹಿಂದಿನ ರೋಚಕ ಕತೆ....ನೀವು ಕೇಳಿದ್ರೆ ನಿಜವಾಗ್ಲೂ ಸುಸ್ತು ಅಗಿಬಿಡ್ತಿರ.....ಹೌದು ಇದನ್ನ ಮಾಡಿರುವುದು ಮರದಲ್ಲಿ ಅಲ್ಲ . ಬೆಂಕಿ ಕಡ್ಡಿ ಯಲ್ಲಿ.....!!!!! ಬೆಂಕಿ ಕಡ್ಡಿನಲ್ಲಿ ಈ ಥರ ಕಾರ್ ಮಾಡೋದ.....? ಅಂತ ನೀವು ಕೂಡ ಅನ್ಕೊತಾ ಇದ್ದೀರಾ ಅಲ್ವ... ಹೌದು ರೀ...
"Michael Arndt" ಎಂಬ ಕಲೆಗಾರ....956,000 matchsticks , (ಬೆಂಕಿ ಕಡ್ಡಿಗಳನ್ನ) ಉಪಯೋಗಿಸಿ. 1686 tubes of glue (ಫೆವಿಕಾಲ್ ) ನ ಉಪಯೋಗಿಸಿ ಬರೋಬ್ಬರಿ 6 ವರ್ಷ ತಗೊಂಡು ಇದನ್ನ ಮುಗಿಸಿದ್ದಾನಂತೆ.......!!!!!
ನಿಜವಾಗ್ಲೂ ತಾಳ್ಮೆ ಅಂದ್ರೆ ಇದು ಅಲ್ವ....ಏನೋ ಒಂದು ವಸ್ತುವನ್ನ ಕಲೆಯನ್ನ ಮಾಡಬೇಕು ಅಂತ ಮನಸು ಮಾಡಿದರೆ ಅಬ್ಬಬ್ಬ ಅಂದ್ರು ಒಂದು 6 ತಿಂಗಳು ಅಥವಾ ಒಂದು ವರ್ಷ ತಗೊಬೋದು... ಆದರೆ ಈ ಬೆಂಕಿ ಕಡ್ಡಿಯ ಶಿಲ್ಪಿ...maclaren f1 ಕಾರು ಹೇಗೆ ಇದೆಯೋ ಅದೇ ರೀತಿ..matchstick ನಲ್ಲಿ ಮಾಡಲೇ ಬೇಕು ಅಂತ ಪಣತೊಟ್ಟು 6 ವರ್ಷ ಕಷ್ಟ ಪಟ್ಟು ಮಾಡಿಯೇ ತೀರಿಸಿದ್ದಾನೆ ನೋಡಿ... ಛಲ ಅಂದ್ರೆ ಇದು ಅಲ್ವ.... "ನಿಜವಾಗ್ಲೂ Michael Arndt ಛಲ. ತಾಳ್ಮೆ, ಶ್ರದ್ದೆ, ಹಾಗು ಕಲೆಗೆ ,, ನನ್ನ ಅನಂತ ಅನಂತ ನಮನಗಳು......"
ಇವನು McLaren 4/14 F1 car, ಹೇಗೆ ಇದೆಯೋ ಅದೇ ರೀತಿ ಇದನ್ನ ಮಾಡಿದ್ದರಂತೆ, ಇದಕ್ಕೆ ತಗುಲಿರುವ ಕರ್ಚು...6000 Euros , ಇದರ ಇನ್ನೊದು ವಿಶೇಷ ಏನು ಅಂದ್ರೆ, ಇದನ್ನು 45 ಪಾರ್ಟ್ಸ್ ಮಾಡಿ ಎಲ್ಲೆಲ್ಲಿ ಬೆಂಕಿಕಡ್ಡಿಯ ಪ್ರದರ್ಶನ ಇರುತ್ತೋ ಅಲ್ಲೆಲ್ಲ ತೆಗೆದುಕೊಂಡು ಹೋಗಿ ಪ್ರದರ್ಶನ ಮಾಡ್ತಾ ಇದ್ದಾರಂತೆ....
ಅಬ್ಬ ಎಂತೆಂಥ ಮಹಾನುಭಾವರಿರುತ್ತಾರೆ ... ಇವನ ಕೆಲಸ ನೋಡ್ತಾ ಇರಬೇಕಾದ್ರೆ ನನಗೆ ನಮ್ಮ ಶಿಲ್ಪಿಗಳ ನೆನಪಾಯಿತು.. ಅವರು ಅಸ್ಟೇ .. ಒಂದು ಕಲ್ಲನ್ನು ಕೆತ್ತಿ ಶಿಲ್ಪ ಮಾಡಬೇಕಾದರೆ ವರ್ಷನು ಗಟ್ಟಲೆ ಕಷ್ಟ ಪಡ್ತಾ ಇದ್ರೂ,,, ಇವನು ಈಗ ಅದುನಿಕಯುಗದ ಬೆಂಕಿ ಕಡ್ಡಿ ಶಿಲ್ಪಿ ಅಂದರೆ ತಪ್ಪೇನು ಇಲ್ಲ ಅಲ್ವ....!!!!
Once again hats of you Mr Michael Arndt .......
ನನ್ನ ಹಿಂದಿನ post ಗಳಲ್ಲಿ ಬೆಂಕಿ ಕಡ್ಡಿಯ ಬೇರೆ ಬೇರೆ ಕಲೆ ಬಗ್ಗೆ ಉಲ್ಲೇಕಿಸಿದ್ದೇನೆ, ನೋಡಲು ಇಲ್ಲಿ ಕ್ಲಿಕ್ ಮಾಡಿ