Wednesday, July 5, 2023

ಜಿಮ್ ಕಾರ್ಬೆಟ್ ಎನ್ನುವ ಕಾಡಿನೊಳಗಿನ ರೋಮಾಂಚಕ ಪಯಣ - ಭಾಗ 1

 





ಜಿಮ್ ಕಾರ್ಬೆಟ್.... ಹುಲಿಗಳ ಕಾಡು.... ದಟ್ಟಾರಣ್ಯ.... ಅತಿ ಹೆಚ್ಚು ಸಂಖ್ಯೆಯಲ್ಲಿ ಹುಲಿಗಳು ಇರುವ ಕಾಡು..

ಹಿಮಾಲಯದ ತಪ್ಪಲಿನ ವಿಶಾಲ ಜಾಗದಲ್ಲಿ ನೈನಿತಾಲ್ ಮತ್ತು ಭಿಮತಾಲ್ ಮುಂತಾದ ಬೆಟ್ಟ ಗಳಿಂದ ಆವೃತವಾದ

ದಂಡಕಾರಣ್ಯ ..... ನಮ್ಮ ಭಾರತದ ಮೊದಲ ಹಾಗು ತುಂಬ ಹಳೆಯ ನ್ಯಾಷನಲ್ ಪಾರ್ಕ್. ಜಿಮ್ ಕಾರ್ಬೆಟ್ ಕಾಡು ಸುಮಾರು ೧೩೧೮.೫೪ sq KM ಅಷ್ಟು ವಿಸ್ತಾರವಾಗಿದೆ...

ಇಂತಹ ಕಾಡಿಗೆ ಸಫಾರಿ ಮಾಡಲು ಅಲ್ಲಿಗೆ ಹೋಗಿ ಬರಲು ತುಂಬ ಸರಿ ಪ್ರಯತ್ನ ಪಟ್ಟಿದ್ದೆ. ಕಾರಣಾಂತರ ಗಳಿಂದ ಹೋಗಲು ಆಗಿರಲಿಲ್ಲ. ಕಳೆದ ತಿಂಗಳು ಜೂನ್ ನಲ್ಲಿ ಸಡನ್ ಆಗಿ ಹೋಗಿ ಬರಲು ಅವಕಾಶ ಸಿಕ್ಕಿತ್ತು !!!! ಅದು ಎಂತ ಅವಕಾಶ ಎನ್ನುತ್ತೀರಿ !!! ..... ಕಾಡಿನಲ್ಲಿ ಇಲ್ಲಿನ ಫಾರೆಸ್ಟ್ ಡಿಪಾರ್ಟ್ಮೆಂಟ್ ಆಯೋಜಿಸಿದ್ದ ಬರ್ಡ್ ಸರ್ವೇ ಮಾಡಲು.....

ಮೊದಲೇ ಹೋಗಬೇಕು ಎಂದು ಕಾಯುತ್ತ ಇದ್ದ ನನಗೆ ಇಂಥ ಒಳ್ಳೆ ಚಾನ್ಸ್ ...ಬಾಯಿಗೆ ಜಾಮೂನು ಬಿದ್ದ ಹಾಗೆ ಹಾಗಿತ್ತು.

ಕರ್ನಾಟಕದ ನಾಗರಹೊಳೆ, ತಮಿಳುನಾಡಿನ ಹೊಸೂರು ಹಾಗು ಸೇಲಂ ಕಾಡಿನಲ್ಲಿ ಮತ್ತು ಕೇರಳ ಕಾಡಿನಲ್ಲಿ ಬರ್ಡ್ ಸರ್ವೇ ಮಾಡಿ ಅನುಭವ ವಿದ್ದ ನನಗೆ ...ಈ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ ಇನ್ನೊಂದು ರೀತಿ ಕುತೂಹಲ ಉಂಟು ಮಾಡಿತ್ತು...

ಕಡಿಮೆ ಸಮಯದಲ್ಲಿ ಹೋಗಬೇಕಾಗಿ ಇದ್ದದ್ದರಿಂದ . ಹೇಗೋ ಮ್ಯಾನೇಜ್ ಮಾಡಿ ಆಫೀಸ್ ನಿಂದ ಒಂದು ನಾಲ್ಕು ದಿನ ರಜೆ ಗಿಟ್ಟಿಸಿ....ಹೊರಡುವ ತಯಾರಿ ಮಾಡಿಕೊಂಡೆ ...

ಜೂನ್ ಇಪ್ಪತ್ತನೇ ತಾರೀಕು ನಾವು ಜಿಮ್ ಕಾರ್ಬೆಟ್ ಹೆಡ್ ಆಫೀಸ್ ರಾಮನಗರ್ ನಲ್ಲಿ ೧೦:೩೦ ಕ್ಕೆ ರಿಪೋರ್ಟ್ ಮಾಡಿಕೊಳ್ಳ ಬೇಕಿತ್ತು..

ಕಾಡಿನ ಮತ್ತು ಅಲ್ಲಿ ಇರಬೇಕಾಗುವ ಜಾಗ ಪರಿಸರ ಬಗ್ಗೆ ಸ್ವಲ್ಪ ಗೊತ್ತಿದ್ದರಿಂದ ಬೇಕಾಗಿರುವ ಬಟ್ಟೆ , ಬರೆ ಸ್ಲೀಪಿಂಗ್ ಬ್ಯಾಗ್, ಕ್ಯಾಮರಾ, ಬೈನಾಕ್ಯುಲರ್...ಎಲ್ಲ ರೆಡಿ ಮಾಡಿಕೊಂಡು ಜೂನ್ ೧೯ ನೇ ತಾರೀಖು ಸಂಜೆ ಬೆಂಗಳೂರು ಡೆಲ್ಲಿ ಫ್ಲೈಟ್ ಹತ್ತಿದೆವು.. ನನ್ನ ಜೊತೆ ಬೆಂಗಳೂರಿನಿಂದ ಮಧುಸುಧನ್, ಸುಧಾಕರ್ ಇಬ್ಬರು ಜೊತೆಯಾದರು..

ಡೆಲ್ಲಿ ಗೆ ಮಧ್ಯರಾತ್ರಿ ಹೊತ್ತಿಗೆ ತಲುಪಿ ಅಲ್ಲಿಂದ ಮೊದಲೇ ಬುಕ್ ಮಾಡಿದ್ದ ಕಾರ್ ನಲ್ಲಿ ಉತ್ತರಾಖಂಡ್ ನ ರಾಮನಗರ್ ಕಡೆ ಹೊರಟೆವು ...

ರಾಮನಗರ್ ತಲುಪುವ ಹೊತ್ತಿಗೆ ಬೆಳಿಗ್ಗೆ ಆರು ಘಂಟೆ ಆಗಿತ್ತು.. ಹೆಡ್ ಆಫೀಸ್ ಪಕ್ಕದಲ್ಲೇ ಒಂದು ಸಣ್ಣ ರೂಮ್ ಬುಕ್ ಮಾಡಿ ಫ್ರೆಶ್ ಆಗಿ . ಡೈರೆಕ್ಟರ್ ಆಫೀಸ್ ಗೆ ಹೋಗಿ ರಿಪೋರ್ಟ್ ಮಾಡಿಕೊಂಡೆವು... ಇಲ್ಲಿಗೆ ಬೆಂಗಳೂರಿನಿಂದ ಬಂದಿದ್ದ ಮುನೇಶ್ ಗೌಡ ಅವರು ಜೊತೆಯಾದರು. ಒಟ್ಟು ನಾವು ನಾಲ್ಕು ಜನ ಬೆಂಗಳೂರಿಗರು .... ನಮ್ಮ ಜೊತೆ ಬೇರೆ ಒಂದಿಬ್ಬರು ಕರ್ನಾಟಕ ಮತ್ತು ಬೆಂಗಳೂರಿನಿಂದ ಬಂದಿದ್ದರು ....



ಗುರುಪ್ರಸಾದ್, ಮುನೀಶ್ ಗೌಡ,ಮಧು,ಸುಧಾಕರ್. ನಮ್ಮ ಬೆಂಗಳೂರಿನಿಂದ ಬಂದಿದ್ದ ತಂಡ



ಭಾರತದ ಬೇರೆ ಬೇರೆ ಭಾಗಗಳಿಂದ ಬಂದಿದ್ದ birders ಮತ್ತು naturalist ಅವರನ್ನು ಪರಿಚಯ ಮಾಡಿಕೊಂಡು ಅಲ್ಲಿನ ಕಾಡು ಹಾಗೆ ನಮಗೆ ಯಾವ ಜಾಗಕ್ಕೆ ಹಾಕುತ್ತಾರೋ ಎಂಬ ಕುತೂಹಲದಿಂದ ಪಟ್ಟಿ ಬಿಡುಗಡೆ ಮಾಡುವುದನ್ನು ಕಾಯುತ್ತಿದ್ದೆವು.

ಮೊದಲೇ ಊಹಿಸಿಕೊಂಡ ಹಾಗೆ ನಾವು ನಾಲ್ವರಿಗೂ ಬೇರೆ ಬೇರೆ ಕಡೆಯ ಕ್ಯಾಂಪ್ ಗಳು ಸಿಕ್ಕಿದ್ದು, ಅದರಲ್ಲಿ ನನ್ನ ಅದೃಷ್ಟ ಏನೋ ಎಂಬಂತೆ ಮುನೀಶ್ ಜೊತೆ ಬರಬೇಕಾಗಿ ಇದ್ದ ಒಬ್ಬರು ಅವರ ಕ್ಯಾಂಪ್ ನಲ್ಲಿ ಬರದೇ ಇದ್ದಿದ್ದರಿಂದ .. ನಾನು ಅಲ್ಲಿನ ಆಫೀಸರ್ ಗೆ ಹೇಳಿ ಮುನೀಶ್ ಮತ್ತೆ ನಾನು ಒಂದೇ ಕ್ಯಾಂಪ್ ನಲ್ಲಿ ಇರುವ ಹಾಗೆ ಒಟ್ಟಿಗೆ ಹಾಕಿಸಿಕೊಂಡೆವು..

ಜಿಮ್ ಕಾರ್ಬೆಟ್ ವಲಯದ ಡೈರೆಕ್ಟರ್ Dr ಧೀರಜ್ ಪಾಂಡೆ ಮತ್ತು ಫಾರೆಸ್ಟ್ ಆಫೀಸರ್ ಗಳು ಕಾಡಿನ ಬಗ್ಗೆ ಮತ್ತು ಅಲ್ಲಿ ನಾವು ನೆಡೆದು ಕೊಳ್ಳುವ ಬಗ್ಗೆ ವಿವರಿಸಿ ಹೇಳುತ್ತಾ ಇದ್ದರು. ಅವರಿಗೆ ನಮ್ಮ ಸುರಕ್ಷತೆ ಮೊದಲ ಆದ್ಯತೆ ಆಗಿತ್ತು.. ಇಡೀ ಭಾರತದಲ್ಲಿ ಅತಿ ಹೆಚ್ಚು ಹುಲಿ ಮತ್ತು ಆನೆ ಇರುವ ಪ್ರದೇಶದಲ್ಲಿ ನಾವು ಕಾಲು ನೆಡಿಗೆ ಯಲ್ಲಿ ನೆಡೆದು ಬರ್ಡ್ ಸರ್ವೇ ಮಾಡಬೇಕಾಗಿ ಇತ್ತು.. ಇಂತಹ ದಟ್ಟ ಕಾಡಿನಲ್ಲಿ ಕೆಲವೇ ಕೆಲವು ಸೆಕೆಂಡ್ ಗಳ ಅಂತರದಲ್ಲಿ ಅನಾಹುತ ಆಗುವ ಸಂಭವ ಜಾಸ್ತಿ ಇತ್ತು... ಯಾಕೆ ಅಂದರೆ ಅಂತ ಬೌಗೋಳಿಕ ವಲದ ದಟ್ಟ ಅರಣ್ಯ ಇದು.. ಅದ ಕಾರಣ ಇಲ್ಲಿನ ಪರಿಸರ ಮತ್ತು ಕಾಡಿನ ಬಗ್ಗೆ ತುಂಬ ವಿವರವಾಗಿ ಮತ್ತು ನಾವು ನೆಡೆದು ಕೊಳ್ಳುವ ಸಂಪೂರ್ಣ ಮಾಹಿತಿ ಕೊಟ್ಟಿದ್ದರು. ಹಾಗೆ ಬರ್ಡ್ ಸರ್ವೇ ನೆಡೆಯುವ ರೀತಿ , ನಾವು collect ಮಾಡಬೇಕಾದ ಡೇಟಾ ಮುಂತಾದ ಮಾಹಿತಿ ವಿನಿಮಯ ಆಗಿ ನಾವು ನಮ್ಮ ನಿಯೋಜನೆ ಆಗಿದ್ದ ಕ್ಯಾಂಪ್ ಕಡೆ ಹೊರಡುವ ಸಮಯ ಮಧ್ಯಾಹ್ನ ಎರಡು ಘಂಟೆ ಆಗಿತ್ತು...

ಅಲ್ಲೇ ಕೊಟ್ಟಿದ್ದ ಊಟದ ಪ್ಯಾಕ್ ಅನ್ನು ತೆಗೆದು ಕೊಂಡು ನಮ್ಮ ಜೊತೆಗಾರರಿಗೆ ಬೈ ಹೇಳಿ ನಮಗಾಗಿ ಕಾಯುತ್ತ ಇದ್ದ ಓಪನ್ ಜಿಪ್ಸಿ ಕಡೆ ಹೊರಟೆವು...



ಇಲ್ಲಿಂದ ಶುರು ಆಗಿದ್ದೆ ಜಿಮ್ ಕಾರ್ಬೆಟ್ ಎನ್ನುವ ಕಾಡಿನೊಳಗಿನ ರೋಮಾಂಚಕ ಪಯಣ.....

ರಾಮ್ನಗರ್ ಇಂದ ನಮಗೆ ನಿಯೋಜನೆ ಗೊಂಡಿದ್ದ ಸ್ಥಳ ಸುಮಾರು 130 km ದೂರ ಇತ್ತು ...ಇದರ ಮುಕ್ಕಾಲೂ ಭಾಗ ಕಾಡಿನ ಒಳಗಿನಿಂದ ಹೋಗಬೇಕಾಗಿದ್ದರಿಂದ ನನ್ನ ಕುತೂಹಲ ..ಎದೆಬಡಿದ ಮೊದಲ ದಿನವೇ ಜಾಸ್ತಿ ಆಗಿತ್ತು....

ನಾರ್ತ್ ಈಸ್ಟ್ ಮತ್ತು ಈ ವಲದಲ್ಲಿ ಸಿಗುವ ಪಕ್ಷಿ ವೈವಿದ್ಯತೆ ಬೇರೆಯದೇ ಇರುತ್ತೆ.. ನಮಗೆ ಇಲ್ಲಿ ಕಾಣ ಸಿಗುವ ಪಕ್ಷಿ ಎಲ್ಲ ಹೊಸದು.. ಇದರ ಬಗ್ಗೆ ತಿಳಿದು ಕೊಳ್ಳಲು ನೋಡಲು ನನ್ನ ಮನಸ್ಸು ಹಾತೊರೆಯುತ್ತ ಇತ್ತು...

ನಾವು ಹೋಗಬೇಕಿದ್ದ ಜಾಗದ ಕಡೆ , ಅಲ್ಲೇ ಸುತ್ತ ಮುತ್ತ ಹತ್ತಿರ ವಿದ್ದ ಬೇರೆ ಬೇರೆ ಕ್ಯಾಂಪ್ ನಲ್ಲಿ ಇರುವ ಮಿತ್ರರು ನಮ್ಮ ಜೀಪ್ನಲ್ಲೇ ಜೊತೆ ಗೂಡಿದರು.. ಅದರಲ್ಲಿ ಒಂದಿಬ್ಬರು ಉತ್ತರಾಖಂಡ್ ರಾಜ್ಯದವರೇ ಆಗಿದ್ದರು ಅವರ ಮಾಹಿತಿ ಪ್ರಕಾರ ಹೋಗುವ ದಾರಿಯಲ್ಲೇ ಹುಲಿ ಮತ್ತು ಆನೆ ಮುಂತಾದ ಕಾಡು ಪ್ರಾಣಿ ಸಿಗುವ ಸಂಭವ ಜಾಸ್ತಿ ಇದೆ ಎಂದು ಹೇಳಿದಾಗ ... ನಾನು ಒಳಗೆ ಇಟ್ಟಿದ್ದ ಕ್ಯಾಮೆರಾ ತೆಗೆದು ಕೈನಲ್ಲೇ ಹಿಡಿದುಕೊಂಡೆ..








ಒಂದರ ಹಿಂದೆ ಒಂದಂತೆ ಮೂರು ಜೀಪು ಗಳು ಕಾಡಿನ ದಾರಿ ಸೀಳುತ್ತ ...ಧೂಳೆಬ್ಬಿಸುತ್ತ ಬರೋ ಎಂದು ಹೊರಟಿತು...






ಕಾಡಿನಲ್ಲಿ ಸಿಗುವ ಒಂದೊಂದು ಚೆಕ್ ಪೋಸ್ಟ್ ಅಲ್ಲಿ ಎಂಟ್ರಿ ಮಾಡುತ್ತ ಸುಂದರ ಕಾಡಿನ ಪರಿಸರದ ನೋಟ ಸವಿಯುತ್ತ ಓಪನ್ ಜಿಪ್ಸಿ ನಲ್ಲಿ ನಮ್ಮ ಪಯಣ ಸಾಗಿತ್ತು...

ದಾರಿಯಲ್ಲಿ ಹೋಗುತ್ತಾ ಇರಬೇಕಾದರೆ ನಮ್ಮ ಬರ್ಡ್ ಕೌಂಟ್ ಶುರು ಆಗಿತ್ತು.. ಆಗಲೇ ಕೆಲವು ಅಪರೂಪದ ಪಕ್ಷಿಗಳ ದರ್ಶನ ಆಗುತ್ತಾ ಇತ್ತು... ವಿಶಾಲ ಹುಲ್ಲು ಗಾವಲು....ಹಳ್ಳ ಕೊಳ್ಳಗಳಿಂದ ಕೂಡಿದ ರಸ್ತೆ.. ಮಧ್ಯ ಮಧ್ಯ ಸಿಗುವ ನದಿ ತೊರೆ ಗಳನ್ನ ಧಾಟಿ ನಮ್ಮ ಜೀಪು ಮುನ್ನುಗ್ಗುತ್ತ ಇತ್ತು... ದಾರಿಯಲ್ಲಿ ಸಿಗುವ ಕೆಲವು ಫಾರೆಸ್ಟ್ ಪಾಯಿಂಟ್ ಗಳಲ್ಲಿ ಅಲ್ಲಿ ಇಳಿಸ ಬೇಕಾದ ಸಹ ಪಯಣಿಗರನ್ನು ಇಳಿಸಿ .. ನಮ್ಮ ಜೀಪು ಮುಂದೆ ಸಾಗಿತು... ದಾರಿ ಉದ್ದಕ್ಕೂ ಅಲ್ಲಲ್ಲಿ ಕಾಣ ಸಿಗುತ್ತಾ ಇದ್ದ ಜಿಂಕೆ , ಕಡವೆ, ಸಾರಂಗ .....ನವಿಲಿನ ಕೂಗು .....ಪಕ್ಷಿಗಳ ಚಿಲಿಪಿಲಿ ಕಲರವ ....ಇವೆಲ್ಲವನ್ನೂ ಬೆರಗು ಕಣ್ಣಿನಿಂದ ನೋಡುತ್ತಾ ಸಾಗಿತ್ತು ನಮ್ಮ ಪಯಣ..

ಮಧ್ಯೆ ಒಂದು ಕಡೆ ಚೆಕ್ ಪೋಸ್ಟ್ ನಲ್ಲಿ ಎಲ್ಲ ಜೀಪುಗಳು ನಿಲ್ಲಿಸಿ ನಮಗೆ ಕೊಟ್ಟಿದ್ದ ಊಟದ ಪ್ಯಾಕ್ ಅನ್ನು (ಸ್ನ್ಯಾಕ್ ಪ್ಯಾಕ್) ತಿಂದು ನೀರು ಕುಡಿದು ..ನಮ್ಮ ಪ್ರಯಾಣ ಮುಂದುವರಿಸಿದೆವು...



ಕಾಡಿನ ಕಚ್ಚಾ ರಸ್ತೆ. ಬರಿ ಮಣ್ಣು ರೋಡು ಅದರಲ್ಲೂ ಒಂದರ ಹಿಂದೆ ಒಂದಂತೆ ಜೀಪು ಸಾಗುತ್ತ ಇರಬೇಕಾದರೆ ಬರುತಿದ್ದ ಧೂಳು ನಮ್ಮ ಮೈ ಕೈ ಮುಖ ಎಲ್ಲ ಕಡೆ ಆವರಿಸಿತ್ತು...ಸದ್ಯ ನನ್ನ ಕ್ಯಾಮೆರಾ ಗೆ ಡಸ್ಟ್ ಪ್ರೂಫ್ ಹೊದ್ದಿಸಿದ್ದೆ ...ಬಚಾವಾಗಿತ್ತು... :-)


ವಿಶಾಲ ಅರಣ್ಯ ....ಒಮ್ಮೆಮ್ಮೆ ಧಟ್ಟ ಕಾಡಿನ ಒಳಗೆ ...ಮರುಕ್ಷಣ ದೊಡ್ಡ ಹುಲ್ಲು ಗಾವಲಿನ ಬಯಲು... ಮುಂದೆ ದೊಡ್ಡ ಹಳ್ಳ ಮತ್ತೊಮ್ಮೆ ಕಡಿದಾದ ಬೆಟ್ಟ ಗುಡ್ಡ ಸಾಲು ......ಜಿಮ್ ಕಾರ್ಬೆಟ್ ಅನ್ನುವ ಕಾಡು ನಿದಾನವಾಗಿ ತನ್ನ ಸೌಂದರ್ಯ ತೋರಿಸುತ್ತ ಇತ್ತು..

ಆಗಲೇ ಸಂಜೆ ಐದು ಘಂಟೆ ಆಗಿದೆ ನಾವು ತಲುಪ ಬೇಕಾದ ಸ್ಥಳ ಇನ್ನು ತುಂಬ ದೂರ ಇತ್ತು... ಡ್ರೈವರ್ ಕೂಡ ಹೊಸಬ.. ನಮ್ಮದು ಓಪನ್ ಜಿಪ್ಸಿ ಬೇರೆ.. ಮೇಲೆ ನೋಡಿದರೇ ಮೋಡಗಳ ಸಾಲು ನಿದಾನಕ್ಕೆ ಆವರಿಸುತ್ತಾ ಇದ್ದೆ. ನನಗೆ ಇವಾಗ ಭಯ ಆಗುವುದಕ್ಕೆ ಶುರು ಆಯಿತು.. ನಾವು ನೆನೆದರೆ ಪರವಾಗಿಲ್ಲ ನಮ್ಮ ಕ್ಯಾಮೆರಾ ಗತಿ ಏನು ಎಂದು ಯೋಚನೆ ಶುರುವಾಯಿತು.. ಅಲ್ಲಿ ತನಕ ಸುಮ್ಮನೆ ಇದ್ದ ಮಳೆ ರಾಯ ಒಂದೇ ಸಮನೆ ಧೋ ಎಂದು ಭಾರಿಸುವುದಕ್ಕೆ ಶುರು ಮಾಡಿದ... ಸದ್ಯ ನಮ್ಮ ಡ್ರೈವರ್ ಇಳಿದು ಜಿಪ್ಸಿ ಮೇಲೆ ಇದ್ದ ಟಾರ್ಪಲ್ ಕವರ್ ಮಾಡಿ ಫುಲ್ ಪ್ಯಾಕ್ ಮಾಡಿದ.. ಆದರೂ ನನಗೆ ಭಯ ವಾಟರ್ ಪ್ರೂಫ್ ಕವರ್ ಇದ್ದರು ಕ್ಯಾಮೆರಾ ಮೇಲೆ ನೀರು ಬೀಳದೆ ಇರುವ ಹಾಗೆ ನೋಡಿಕೊಳ್ಳ ಬೇಕಾದ ಜವಾಬ್ದಾರಿ ನನ್ನ ಮೇಲೆ ಇತ್ತು.

ಅಲ್ಲಿ ಮಳೆ ಭಯಂಕರ .. ಬಂದರೆ ಒಂದೇ ಸಮನೆ ಜೋರಾಗಿ ಸುರಿಯುತ್ತದೆ .. ಟಾರ್ಪಲ್ ಒಳಗೆ ಇಂದ ನೀರು ಸೋರುತ್ತಾ ಇತ್ತು.. ಮುಂದೆ ಸಿಕ್ಕ ಒಂದು ಫಾರೆಸ್ಟ್ ಚೆಕ್ ಪಾಯಿಂಟ್ ನಲ್ಲಿ .. ಅಲ್ಲಿ ಇಳಿಯ ಬೇಕಿದ್ದ ಜನರನ್ನು ಇಳಿಸಿ .. ಕಾಡು ಬಿಟ್ಟು ನಮ್ಮ ಜೀಪು ಮೇನ್ ರೋಡ್ ಗೆ ಬಂದಿತು.. !!!!! ಆಗಲೇ ಒಂದು ಆಶ್ಚರ್ಯ ಘಟನೆ ಕಣ್ಣ ಮುಂದೆ ನಡೆದುಹೋಯಿತು!!!!... ನಮ್ಮ ಜೀಪ್ ನಲ್ಲಿ ಮುಂದೆ ಕುಳಿತಿದ್ದ ಇಬ್ಬರು ಅಲ್ಲಿ ನೋಡಿ ...ಅಲ್ಲಿ ಅಲ್ಲಿ,,,, ಎನ್ನುತ್ತ ಕೂಗಿ ಕೊಂಡರು ಅಷ್ಟೇ ... ಅಂತಹ ಬ್ಯುಸಿಯಾದ ರೋಡಿನಲ್ಲಿ .... ಒಂದು ಚಿರತೆ ಚಂಗೆಂದು ರೋಡಿನ ಮಧ್ಯದಿಂದ ಹಾರಿ ಇನ್ನೊಂದು ಕಡೆ ಹೋಯಿತು .... ನಾವು ಗಾಡಿಯನ್ನು ನಿಲ್ಲಿಸಿ ಜೋರಾಗಿ ಸುರಿಯುತ್ತ ಇದ್ದ ಮಳೆ ಲೆಕ್ಕಿಸದೇ ಇಳಿದು ನೋಡಿದೆವು ... ಅದು ಯಾವ ಮಾಯದಲ್ಲಿ ಎಲ್ಲಿ ಮರೆಯಾಗಿ ಹೋಯಿತೋ ಆ ಚಿರತೆ...... ಅಬ್ಭಾ ಅಂತ ಮಳೆಯಲ್ಲೂ ಮೈ ರೋಮಾಂಚನದ ಅನುಭವ..

ಅದೇ ಗುಂಗಿನಲ್ಲಿ ಸ್ವಲ್ಪ ದೂರ ಸಾಗುತ್ತ ಇರಬೇಕಾದರೆ ಮಳೆ ಸಂಪೂರ್ಣ ನಿಂತು ಹೋಯ್ತು .... ಜೀಪಿಗೆ ಹೊದಿಸಿದ್ದ ಟಾರ್ಪಲ್ ತೆಗೆದು ....ಸುತ್ತಲಿನ ಆ ತಂಪಾದ ಪರಿಸರ ನೋಡುತ್ತಾ ಮೋಡಗಳ ಮಧ್ಯೆ ಅವಾಗ ಅವಾಗ ಕಾಣಿಸುತ್ತ ಇದ್ದ ಸೂರ್ಯಾಸ್ತ ನೋಡುತ್ತಾ ನಮ್ಮ ಕ್ಯಾಂಪ್ ಯಾವಾಗ ಬರುತ್ತೋ ಎಂದು ಕಾಯುತ್ತ ಇದ್ದೇವು ..

ಸಂಜೆ ೭ ಘಂಟೆ ..ಇನ್ನು ಕತ್ತಲು ಆಗಿರಲಿಲ್ಲ... ಸುಂದರ ಪರಿಸರ ಬೆಟ್ಟ ಗುಡ್ಡಗಳ ಸಾಲು.. ಪಕ್ಕದಲ್ಲಿ ದೊಡ್ಡದಾದ ಕಣಿವೆ... ಕೆಳಗೆ ಹರಿಯುತ್ತ ಇದ್ದ ನೀರಿನ ಭೋರ್ಗರೆತದ ಸದ್ದು .... ಇವುಗಳನ್ನು ನೋಡುತ್ತಾ ಮುಂದಿನ ಸ್ಟಾಪ್ ನಮ್ಮದೇ ಎಂದು ಹೇಳಿದಾಗ .. ಆ ಕ್ಯಾಂಪ್ ಹೇಗೆ ಇರುತ್ತದೋ ಏನು ಕುತೂಹಲ ದಿಂದ ನಾನು ಮತ್ತು ಮುನೀಶ್ ಕಾಯುತ್ತಾ ಕುಳಿತಿದ್ದೆವು...

ರಾತ್ರಿ ೭:೩೦ ರ ಹೊತ್ತಿಗೆ ನಾವು ಇಳಿಯ ಬೇಕಾದ ಕ್ಯಾಂಪ್ ಬಂದೆ ಬಿಟ್ಟಿತು ...ಕಾಡಿನ ಮಧ್ಯೆ...ಒಂದು ಪುಟ್ಟ ಗುಡ್ಡ ದ ಮೇಲೆ ನಮ್ಮ ಕ್ಯಾಂಪ್ ಲೈಟ್ ಕಾಣಿಸಿತು ... ಅಲ್ಲಿಗೆ ಹೋಗಲು ಅಲ್ಲೇ ಹರಿಯುತ್ತ ಇದ್ದ ನದಿ ಧಾಟಿ ಮೇಲೆ ಹೋಗಬೇಕು.... ಅರೆ ಅರೆ .... ಆಗಲೇ ನನ್ನ ಮೈ ಪುಳಕ ಗೊಂಡು ರೋಮಾಂಚನ ಆಯಿತು... ನಮ್ಮ ಜೀಪು ಸಣ್ಣಗೆ ಹರಿಯುತ್ತ ಇದ್ದ ನದಿ ದಾಟಿ ಪುಟ್ಟ ಗುಡ್ಡ ಏರಿ ನಮ್ಮ ಕ್ಯಾಂಪ್ ಗೆ ತಂದು ಬಂದು ಬಿಟ್ಟಿತು.....






ದೊಡ್ಡದಾದ ಹೇಳೇ ಕಾಲದ ಬಂಗಲೆ ..ಸುತ್ತಲೂ ಕಾಡು ಮದ್ಯ ಈ ಕ್ಯಾಂಪ್. ಕ್ಯಾಂಪ್ ಸುತ್ತ ಸೋಲಾರ್ ತಂತಿ ಬೇಲಿ......ರಾತ್ರಿ ಬೆಳಗಿನಲ್ಲೇ ಅದನ್ನು ನೋಡಿ... ಮುಂದಿನ ಮೂರು ದಿನ ಸ್ವರ್ಗ ದಲ್ಲೇ ಇರುತ್ತೇವೇ ಎಂದು ಕೊಂಡು ನಮ್ಮ ನಮ್ಮ ಬ್ಯಾಗ್ ಇಳಿಸಿ ಒಳ ಹೋದೆವು ....

ಕಾಡಿನಲ್ಲಿನ ಆ ಏಳು ಘಂಟೆ ಪಯಣ.... ಎಲ್ಲ ತರದ ಅನುಭವ ಶುರುವಿನಲ್ಲೇ ಕೊಟ್ಟು.... ಜಿಮ್ ಕಾರ್ಬೆಟ್ ಎನ್ನುವ ದಟ್ಟ ಅರಣ್ಯದ ಬಗ್ಗೆ ನನಗೆ ಇದ್ದ ಕುತೂಹಲಕ್ಕೆ ದೊಡ್ಡ ಮುನ್ನುಡಿ ಬರೆದಿತ್ತು.....




(ಮುಂದುವರೆಯುವುದು ...........ನಿಜವಾದ ಮೈ ನೆವಿರೇಳಿಸುವ ರೋಚಕ ಅನುಭವ ಶುರುವಾಗುವುದೇ ಇಲ್ಲಿಂದ ..... :-)