Showing posts with label ಮಕ್ಕಳು. Show all posts
Showing posts with label ಮಕ್ಕಳು. Show all posts

Monday, September 11, 2023

"ನಮ್ಮೂರ ಪರಿಸರ" – ನಮ್ಮ ಗ್ರಾಮ ಪರಿಸರ. ಕುಣಿಗಲ್

 "ನಮ್ಮೂರ ಪರಿಸರ" – ನಮ್ಮ ಗ್ರಾಮ ಪರಿಸರ.

ನಮ್ಮ "ಮಧುರಿಮಾ" ಥಿಯೇಟರ್ ಮತ್ತು "ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ" ಕುಣಿಗಲ್ ನಗರದಲ್ಲಿ 2023 ಸೆಪ್ಟೆಂಬರ್ 10 ರಂದು ನಡೆಸಲಾಗಿದ್ದ ಒಂದು ವಿಭಿನ್ನ ಕಾರ್ಯಕ್ರಮ ನಮ್ಮ ಊರು ಮತ್ತು ನಮ್ಮ ಪರಿಸರವನ್ನು ಆಚರಿಸಲಾಯಿತು.
ಮಕ್ಕಳನ್ನು ಪ್ರಕೃತಿಯ ಸಂಪರ್ಕಕ್ಕೆ ತಂದು ಪಕ್ಷಿ ರಕ್ಷಣೆ, ಚಿಟ್ಟೆಗಳು, ಮತ್ತು ಪರಿಸರದಲ್ಲಿ ಅವುಗಳ ಮುಖ್ಯ ಪಾತ್ರಗಳ ಬಗ್ಗೆ ಮಹತ್ವದ ವಿಚಾರ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿತ್ತು

ಕುಣಿಗಲ್ ತಾಲೂಕಿನಲ್ಲಿರುವ 2ನೇ ತರಗತಿಯಿಂದ 10ನೇ ತರಗತಿಯ ವಯೋಮಿತ್ರ ಪ್ರದೇಶದ 40 ಮಕ್ಕಳು ಈ ಸಂಭ್ರಮಕರ ಕಾರ್ಯಕ್ರಮಕ್ಕೆ ಉತ್ಸಾಹದಿಂದ ನಮೂದಿಸಿ ಈ ಅನನ್ಯ ಅನುಭವವನ್ನು ತುಂಬಾ ಆನಂದಿಸಿದರು.

ಮಕ್ಕಳು ಈ ಶಿಕ್ಷಣಕ್ಕೆ ಮತ್ತು ಪ್ರಕೃತಿಗೆ ಮೀಸಲಾದ ಈ ಕಾರ್ಯಕ್ರಮವನ್ನು ತುಂಬಾ ಆನಂದಿಸಿದ್ದು ಹಾಗು ಇದರ ಬಗ್ಗೆ ಹೆಚ್ಚು ಹೆಚ್ಚು ಪ್ರಶ್ನೆ ಕೇಳಿ ಪ್ರಕೃತಿ ಮಡಿಲಲ್ಲಿ ಆನಂದಿಸಿದ ರೀತಿ ನಮಗೂ ಬೆರಗು ನೀಡಿತ್ತು.. ಇಂತಹ ಪ್ರಯತ್ನಗಳು ಇಂದಿನ ಯುವ ತಲೆಮಾರಿಗೆ ಅತಿ ಅಗತ್ಯ ಪರಿಸರ ಮತ್ತು ಅದರ ಸಂರಕ್ಷಣೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ನಡೆಸುತ್ತವೆ, ಕೊನೆಗೂ ಹೆಚ್ಚಿನ ಸಾಕ್ಷರತೆಗೆ ಸಹಕರಿಸುತ್ತವೆ,
ಬರಿ ಕ್ಲಾಸ್ ರೂಮ್ ನಲ್ಲಿ ಕುಳಿತು ಪಕ್ಷಿ, ಗಿಡ ಮರ , ಚಿಟ್ಟೆ ಪ್ರಾಣಿಗಳ ಬಗ್ಗೆ ತೋರಿಸುವುದಲ್ಲ, ಮಕ್ಕಳಿಗೆ ಪರಿಸರದ ಬಗ್ಗೆ ಹೆಚ್ಚಿನ ಅರಿವು ಮೂಡಬೇಕು ಎಂದರೆ ಹೊರಗೆ ಇಂತಹ ಪರಿಸರದಲ್ಲಿ ನೆಡೆದಾಡಿ ಓಡಾಡಿ ಅನುಭವಿಸಿ ತಿಳಿದು ಕೊಳ್ಳ ಬೇಕು..

ನನ್ನ ಬಾಲ್ಯ ಸ್ನೇಹಿತ ಚಂದ್ರಮೌಳಿ 'ಮಧುರಿಮಾ ಥಿಯೇಟರ್' ನಲ್ಲಿ ಚಿಕ್ಕ ಮಕ್ಕಳಿಗಾಗಿ ರಂಗಶಿಬಿರ ಮತ್ತು ಇನ್ನು ಅನೇಕ ಕಾರ್ಯಕ್ರಮಗಳನ್ನು ಆಯೋಜಿ ಯಶಸ್ವಿ ಆಗಿದ್ದರೆ.
ಒಮ್ಮೆ ಇದರ ಬಗ್ಗೆ ಮಾತನಾಡುತ್ತ, ನನ್ನ ಹತ್ತಿರ ಒಂದು ಪ್ರಸ್ತಾಪ ಇಟ್ಟರು.. ನಾವೇಕೆ ಕುಣಿಗಲ್ ನಲ್ಲಿ ನೀನು ಆಯೋಜಿಸುವ ಪರಿಸರ, ಪಕ್ಷಿ ವೀಕ್ಷಣೆ ಕಾರ್ಯಕಮ ಮಾಡಬಾರದು ಎಂದು , ನಾನು ಹಿಂದೆ ಮುಂದೆ ನೋಡದೆ ತಕ್ಷಣವೇ ಒಪ್ಪಿಗೆ ನೀಡಿದ್ದೆ,, ಕಾರಣ ಕುಣಿಗಲ್ ನನ್ನ ಹುಟ್ಟುಸ್ಥಳವೂ ಆಗಿದೆ, ಹತ್ತನೇ ತರಗತಿಯವರೆಗೂ ನಾನು ಇಲ್ಲಿ ಅಧ್ಯಯನ ಮಾಡಿದ್ದೇನೆ. ನಾನು ಆಗಾಗ ಗ್ರಾಮೀಣ ಮಕ್ಕಳಿಗೆ ಪಕ್ಷಿ ಮತ್ತು ಪ್ರಕೃತಿಶಿಬಿರ ನಡೆಸುತ್ತೇನೆ, ಆದ್ದರಿಂದ ಈ ಅವಕಾಶ ಬಂದಾಗ ನಾನು ನನ್ನ ಸಹಮತ ನೀಡುವುದರಲ್ಲಿ ಸಂದೇಹವಿರಲಿಲ್ಲ

ನಾವು ಶೀಘ್ರದಲ್ಲೇ ದಿನಾಂಕವನ್ನು ಹೊಂದಿಸಿ, ಮಕ್ಕಳನ್ನು ಪ್ರಕೃತಿಯ ಸಂಪರ್ಕಕ್ಕೆ ಸಹಯೋಗ ಮಾಡಲು ಅಗತ್ಯ ವಿರುವ ಸಿದ್ಧತೆ ಮಾಡಿಕೊಳ್ಳಲು ಶುರುಮಾಡಿದೆವು..
ನಾನು ನಮಗೆ ಬೇಕಾದ ಸಹಾಯಕ್ಕಾಗಿ ನಮ್ಮ ಬೆಂಗಳೂರು ಪಕ್ಷಿ ಸಂಚಾಲನಾ ಗುಂಪಿಗೆ ನನ್ನ ಉತ್ಸಾಹವನ್ನು ಹೇಳಿದ ತಕ್ಷಣ ನಮ್ಮ ಟೀಮ್ ನ ವರಪ್ರಸಾದ್ , ಶಿವಂ, ವಿಜಯರಾಣಿ, ಮುನಿಷ್ ಗೌಡ, ರಕ್ಷಾ, ಅನುಪಮ, ಸೂರಿ ಮತ್ತು ನನ್ನ 12 ವರ್ಷದ ಮಗ ಪ್ರಣವ್ ಸಹ ಒಪ್ಪಿಗೆ ಸೂಚಿ ನಮ್ಮ ಜೊತೆ ಕೈಜೋಡಿಸಲು ಅನುವಾದರು.

ವಿಸ್ತಾರವಾದ ಸಿದ್ಧತೆಯೊಡನೆ, ನಾವು 2023 ಸೆಪ್ಟೆಂಬರ್ 10 ರಂದು ಬೆಳಿಗ್ಗೆಯ ಸಮಯಕ್ಕೆ ಈ ಕಾರ್ಯಕ್ರಮವನ್ನು ಮಾಡಲು ನಿರ್ಧರಿಸಿದ್ದೆವು.

"ನಮ್ಮ ಕುಣಿಗಲ್ . ಹತ್ತಿರದ ಪ್ರಕೃತಿಯ ವಿವಿಧತೆಯನ್ನು ಮತ್ತು ಪಕ್ಷಿ ಜೀವನವನ್ನು ಅನ್ವೇಷಿಸಲು . ನಾನು ಬೇಗುರು ಕೆರೆಗೆ ವೀಕ್ಷಿಸಲು ನಿರ್ಧರಿಸಿದೆವು , ಏಕೆಂದರೆ ಹಿಂದಿನ ಶಿಶಿರದಲ್ಲಿ ನಾನು ಈ ಕೆರೆಯಲ್ಲಿ ಅನೇಕ ವಲಸೆ ಪಕ್ಷಿಗಳನ್ನು ಗಮನಿಸಿದ್ದೆ "

"10ನೇ ತಾರೀಖು, ಆದಿತ್ಯಾಸ್ತಮನ್ನು ಸ್ವಾಗತಿಸುವ ಕೆರೆಯ ಹತ್ತಿರ ನಾವು ಬೆಂಗಳೂರಿನಿಂದ 5:30 ಗಂಟೆಗೆ ಹೊರಟು, 6:30 ಗಂಟೆಗೆ ಬೇಗುರು ಕೆರೆಯ ಹತ್ತಿರ ಬಂದೆವು.
ಶುಭ್ರ ಬೆಳಗಿನ ಸಮಯ, ಮೋಡ ಮಳೆ ಇರಲಿಲ್ಲ ಮತ್ತು ನಾವು ಕೆರೆಯ ಸುತ್ತಲೂ ಅಲ್ಲಿನ ಅದ್ಭುತ ದೃಶ್ಯಗಳನ್ನು ನೋಡಲು ಅಣುವಾಗಿದ್ದೆವು,
ಕೆರೆ ಹತ್ತಿರ ಸಾಮಾನ್ಯ ಇಲ್ಲೇ ವಾಸಿಸುವ ಹಕ್ಕಿಗಳ ಚಲನ ವಲನ ನೋಡುತ್ತಾ ಅವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ ಮುಂದೆ ಸಾಗಿದೆವು, ಅಷ್ಟರಲ್ಲಿ ಏರಿ ಮೇಲಿನಿಂದ ಪಕ್ಕದ ಹೊಲ ಮತ್ತೆ ವಿಸ್ತಾರವಾದ ಗದ್ದೆ ಗಮನಿಸುತ್ತಾ ಇರಬೇಕಾದರೆ ನಮ್ಮ ತಂಡದ ಮುನೀಶ್ . ಜಾಕಲ್ ಅಂದರೆ ನರಿಗಳ ಗುಂಪನ್ನು ಪತ್ತೆ ಮಾಡಿ ಹೇಳಿದರು.. ಅಬ್ಬಬ್ಬಾ ನರಿ ನೋಡಿ ತುಂಬಾ ದಿನ ಆಗಿತ್ತು, ಒಂದು ಪೂರ್ಣ ನರಿಗಳ ಕುಟುಂಬ ಅಲ್ಲಿ ಬೆಳಗಿನ ಎಳೆ ಬಿಸಿಲಿನಲ್ಲಿ ಆಟ ಆಡುತ್ತ ಇದ್ದವು ... ಇದರ ಅಂದವನ್ನು ಕಣ್ಣು ತುಂಬಿಸಿ, ವಿಡಿಯೋ ಮತ್ತು ಫೋಟೋಗಳನ್ನು ಸೆರೆ ಹಿಡಿದು... ಮೂಢನೆ ಸಾಗಿದೇವು, ಅದರಲ್ಲಿ ಕೆಂಪು ಮುನಿಯಾ ಮತ್ತು ಇಬಿಸ್ ಪಕ್ಷಿಗಳ ಚಲನ ವಲನ ತುಂಬ ಖುಷಿ ಕೊಟ್ಟಿತು .


"ನಾವು 7:45 ಗಂಟೆಯವರೆಗೂ ನಮ್ಮ ಬೆಳಿಗ್ಗೆಯ ಪಕ್ಷಿ ವೀಕ್ಷಣೆ ಮುಕ್ತಾಯಗೊಳಿಸಿ, ಕುಣಿಗಲ್ಲಿ ನಲ್ಲಿ ಇರುವ 'ಹೋಟೆಲ್ ಪರಿಮಳ' ಎಂಬ ಶಾಕಾಹಾರಿ ಹೋಟೆಲ್ ಗೆ ಹೋದೆವು. ಇಲ್ಲಿ ನಮ್ಮತಂಡ ಬೆಣ್ಣೆ ಮಸಾಲ ದೋಸೆಯನ್ನು ಸ್ವಾದಿಸಿದೆವು. ಇದು ತುಂಬಾ ಹಳೆಯ ಹೋಟೆಲ್. ಈ ಹೋಟೆಲ್ ನೋಡುತ್ತಾ ಇಲ್ಲಿ ತಿಂಡಿ ತಿನ್ನುತ್ತಾ ನನ್ನ ಬಾಲ್ಯ ನೆನಪುಗಳ ಕಣ್ಣ ಮುಂದೆ ಬಂದವು.. ಈ ಹೋಟೆಲ್ ಇವಾಗ ಸ್ವಲ್ಪ ಬದಲಾಗಿದೆ...ಆಧುನಿಕತೆಗೆ ಇಂದಿನ ಸನ್ನಿವೇಶಕ್ಕೆ ಬದಲಾಗಿ ತನ್ನ ಅಂದ ಇನ್ನು ಹೆಚ್ಚಿಸಿ ಕೊಂಡಿದೆ. ಆದರೂ ಇಲ್ಲಿನ ಟೇಸ್ಟ್ ಮಾತ್ರ ಬದಲಾಗಿ ಇಲ್ಲ. ಅದೇ ಸ್ವಾದ... ಹೋಟೆಲ್ ಕಿಕ್ಕಿರಿದು ತುಂಬಿತ್ತು.


ಬೇಗ ಬೇಗ ತಿಂಡಿ ಮುಗಿಸಿ ಯೋಗ ಮಂದಿರ ಕ್ಕೆ ಬಂದೆವು... ಎಲ್ಲ ಮಕ್ಕಳು ಮೊದಲೇ ಸೇರಿ ಈ ಕಾರ್ಯಕ್ರಮಕ್ಕೆ ಎದಿರು ನೋಡುತ್ತಾ ಇದ್ದರು. ಸುಮಾರು ೪೦ ಜನ ಮಕ್ಕಳು ಎರಡನೇ ತರಗತಿ ಇಂದ ಹತ್ತನೇ ತರಗತಿ ವರಗೆ ಕುತೂಹಲದಿಂದ ಕಾಯುತ್ತ ಇದ್ದರು....
ನಮ್ಮ ಕಿರು ಪರಿಚಯ ಮುಗಿಸಿ ಮೊದಲ ಹಂತದ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟೆವು...
ಯೋಗ ಮಂದಿರ ದಿಂದ ಸುಮಾರು ೧.೫ km ದೂರ ಇರುವ "ಗಂಗೇನ ಹಳ್ಳಿ ಬಯಲು ಪ್ರದೇಶಕ್ಕೆ" ನಮ್ಮ ಗುಂಪು ಗುಂಪಾಗಿ ಹೊರಟಿತು... ಹೋಗುವ ದಾರಿ ಹೇಗೆ ಇತ್ತು ಎಂದರೆ ತೋಟ ಮತ್ತು ಹೊಲಗಳ ಮದ್ಯೆ ನಮ್ಮ ಪ್ರಯಾಣ ಸಾಗಿತ್ತು.. ದಾರಿ ಉದ್ದಕ್ಕೂ ಸಿಗುವ, ಪಕ್ಷಿಗಳ ಮತ್ತು ಚಿಟ್ಟೆಗಳ ಪರಿಚಯ ಮಾಡಿಕೊಳ್ಳುತ್ತ ಸಾಗಿತ್ತು ನಮ್ಮ ಪಯಣ.











ಕೆಲವು ಮಕ್ಕಳು ಮೊದಲನೇ ಸಲ ಬೈನಾಕ್ಯುಲರ್ ನೋಡುತ್ತಾ ಇದ್ದರು.. ತುಂಬ ಹತ್ತಿರದಿಂದ ನವಿಲು, ಬುಲ್ಬುಲ್, ಮೈನ ಇವುಗಳ ದರ್ಶನ ಮಾಡಿ ಖುಷಿ ಪಟ್ಟರು... ತಾರಾ ತರಹದ ಪ್ರಶ್ನೆಗಳನ್ನು ಕೇಳುತ್ತ ನೋಟ್ ಬುಕ್ ನಲ್ಲಿ ಅದರ ಬಗ್ಗೆ ಕೇಳಿ ಮಾಹಿತಿ ಬರೆದು ಕೊಳ್ಳುತ್ತಾ ಸಾಗಿದೆವು,, ಒಂದೂವರೆ ಕಿಲೋಮೀಟರ್ ಹೇಗೆ ಸಾಗಿತ್ತೋ ಗೊತ್ತಾಗಲಿಲ್ಲ ....ಬಣ್ಣ ಬಣ್ಣದ ಚಿಟ್ಟೆ, ಪಕ್ಷಿ, ನವಿಲು....ಹಾವು, ಹೂವ ಮತ್ತು ಗಿಡಗಳ ಪರಿಚಯ ಮಾಡಿಕೂಳ್ಳತ್ತ ಹೋದೆವು.
ಗಂಗೇನ ಹಳ್ಳಿ ಬಯಲು .. 
ಗಂಗ ಸಾಮ್ರಾಜ್ಯದ ಕುರುಹು ಗಳು ಇರುವ ಜಾಗ,, ಇಲ್ಲಿ ಇರುವ ದೇವಸ್ಥಾನ ಪೂರ್ತಿ ಬಿದ್ದು ಹೋಗಿದೆ.. ಆದರೂ ಇಲ್ಲಿನ ಜನ ಹೊಸ ದೇವಸ್ಥಾನ ಕಟ್ಟಿದ್ದಾರೆ.. ಸುಂದರ ಶಿವಲಿಂಗ ಮತ್ತು ಬಸವಣ್ಣ ಸಾವಿರಾರು ವರ್ಷಗಳ ಇತಿಹಾಸ ಹೇಳುತ್ತಾ ಇತ್ತು.. ಪಕ್ಕದಲ್ಲೇ ಇರುವ ವೀರಗಲ್ಲು ಮತ್ತು ಮಾಸ್ತಿ ಗಲ್ಲು ಇತಿಹಾಸದ ದರ್ಶನ ಮಾಡಿಸುತ್ತ ಇತ್ತು.. 
 ಇದರ ಜೊತೆಗೆ ಸುಂದರ ಹಳದಿ ಹೂವಿನ ಸೇವಂತಿಗೆ ಹೂವು ಇಲ್ಲಿನ ಪರಿಸರದ ಕಳೆ ಹೆಚ್ಚಿಸಿತ್ತು..

ದೇವಸ್ಥಾನದ ಪಕ್ಕದಲ್ಲೇ ಇರುವ ಮರದ ಕೆಳಗೆ ಮಕ್ಕಳಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.. ಹಾಗೆ ಇಲ್ಲಿನ ಸ್ಥಳ ಪರಿಚಯ ಮಾಡಿಕೊಂಡು ವಿಚಾರ ವಿನಿಮಯ ಮಾಡಿಕೊಂಡೆವು..

ತದನಂತರ ಮತ್ತೆ ಬಂದ ದಾರಿಯಲ್ಲೇ ಸಾಗಿ ಯೋಗ ಮಂದಿರಕ್ಕೆ ಬಂದೆವು..  ಮತ್ತೊಮೆ ಹೊಸ ಹೊಸ ಪಕ್ಷಿ ಮತ್ತು ಚಿಟ್ಟೆಗಳ ಪರಿಚಯ ಮಾಗೆ ಹಾವುಗಳ ಓಡಾಟ ಕಾಣ ಸಿಕ್ಕಿತ್ತು..
ಯೋಗ ಮಂದಿರದಲ್ಲಿ ಚಿಕ್ಕ ಮಕ್ಕಳಿಗೆ ಪಕ್ಷಿ ಮತ್ತು ಪರಿಸರದ ಬಗ್ಗೆ ಕೆಲವು ಗೇಮ್ಸ್ ಅನ್ನು ಆಡಿಸಿ . ಒಂದು ಪುಟ್ಟ ಪರಿಸರ ಪಕ್ಷಿಗಳ ಬಗ್ಗೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಇನ್ನು ಕುತೂಹಲ ಮೂಡಿಸುತ್ತು..
ಇದಾದ ನಂತರ ಈ ದಿನದ ನೆನಪಿಗಾಗಿ "ಕದಂಬ ವೃಕ್ಷ " ಸಸ್ಯ ನೆಟ್ಟು  ಈ ದಿನದ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಮೆರಗು ನೀಡಿತ್ತು..
ಚಿಕ್ಕ ಮತ್ತು ಚೊಕ್ಕ ಊಟ ನಂತರ,  ಇಂದಿಂದ ಕಾರ್ಯಕಮದ ಬಗ್ಗೆ ಅಭಿಪ್ರಾಯ ಮತ್ತು ವಂದನಾರ್ಪಣೆ ಇತ್ತು.


ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷರಾದ ಶ್ರೀ ರಾಮಣ್ಣ ಅವರ ಅರ್ಥಪೂರ್ಣ ಅನಿಸಿಕೆ ಮತ್ತು ಮಾತು ಮನಮುಟ್ಟುವಂತೆ ಇತ್ತು.. ಇವರು ನಿವೃತ್ತ ಕನ್ನಡ ಶಿಕ್ಷಕರು ಕೂಡ ... ಇವರ ಮಾತಿನಲ್ಲಿ ತೂಕ ಮತ್ತು ಅರ್ಥಪೂರ್ಣ ಅಭಿಪ್ರಾಯ ಎಲ್ಲರನ್ನು ಮತ್ತೆ ಯೋಚಿಸುವ ಹಾಗೆ ಮಾಡಿತ್ತು..



ಈ ಶಿಬಿರದಲ್ಲಿ ಪಾಲ್ಗೊಂಡಿದ್ದ ಕೆಲವು ಮಕ್ಕಳ ಅಭಿಪ್ರಾಯ " ಸಾಮಾನ್ಯ ವಾಗಿ ಭಾನುವಾರ ಟಿವಿ ಮತ್ತು ಮೊಬೈಲ್ ನೋಡಿಕೊಂಡು ಟೈಮ್ ವೇಸ್ಟ್ ಮಾಡುತ್ತ ಇದ್ದ ನಾವು , ಇಂದಿನ ಕಾರ್ಯಕ್ರಮದಲ್ಲಿ ಪರಿಸರ ಪಕ್ಷಿಗಳು ಮತ್ತು ಚಿಟ್ಟೆಗಳ ಪ್ರತ್ಯಕ್ಷ ದರ್ಶನ ಮಾಡಿ, ಎಂತಹ ಅಮೂಲ್ಯ ಸಮಯ ಸದುಪಯೋಗ ಪಡಿಸಿಕೊಂಡೆವು ಎಂದು ಹೇಳುವಾಗ " ನಮ್ಮ ಈ ಕಾರ್ಯಕ್ರಮದ ಸಾರ್ಥಕತೆ , ಯಶಸ್ವಿ ನಮ್ಮ ನ್ನು ಇನ್ನು ಎತ್ತರಕ್ಕೆ ಏರಿಸಿದ್ದೆವು ..
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಚಾಲಕರು ಅರುಣ್ ಅಣ್ಣ ತುಂಬ ಮುತುವರ್ಜಿ ವಹಿಸಿ, ಊಟ ತಿಂಡಿ ವ್ಯವಸ್ಥೆ ಅಚ್ಚು ಕಟ್ಟಾಗಿ ಮಾಡಿದ್ದರು ..

ಕೊನೆಯದಾಗಿ, "ಮಧುರಿಮಾ" ಥಿಯೇಟರ್" ನ ಶ್ರೀ ಯುತ ಚಂದ್ರಮೌಳಿ ಇಂತಹ ಹೊಸ ಹೊಸ ಪ್ರಯೋಗ ಗಳಿಗೆ ಮುನ್ನುಡಿ ಬರೆದು... ಇಷ್ಟು ಅಚ್ಚು ಕಟ್ಟಾಗಿ ನಿರ್ವಹಣೆ ಮಾಡಿದ್ದಕ್ಕೆ ನಮ್ಮ ಕಡೆ ಇಂದ ಒಂದು ದೊಡ್ಡ ಪ್ರಣಾಮಗಳು...


Special thanks to https://www.early-bird.in/. for Beautiful Kannada Posters and Flashcards and presentation


ಗುರುಪ್ರಸಾದ್ 
9886286681
guru.prasadkr@gmail.com

 Please watch Event photos here. 

Monday, July 25, 2022

ಮಕ್ಕಳು ಮತ್ತು ಪರಿಸರ ಹಾಗು ವನದರ್ಶನ ಪ್ರವಾಸ

 



ನಾಗಮಂಗಲ ಕನ್ನಡ ಸಂಘ ವತಿ ಇಂದ ಆಯೋಜಿಸಿದ್ದ ಚಿಕ್ಕ ಮಕ್ಕಳ "ವನಪ್ರವಾಸಕ್ಕೆ" ನನ್ನನ್ನು ಪಕ್ಷಿಗಳ ಬಗ್ಗೆ ಹಾಗು ಪರಿಸರದ ಬಗ್ಗೆ ಚಿಕ್ಕ ಮಕ್ಕಳಿಗೆ ತಿಳಿಸಿಕೊಡಲು ಕರೆದಿದ್ದರು.
ನಾಗಮಂಗಲ ತಾಲೂಕಿನ ಚೆನ್ನಸಂದ್ರ ಹತ್ತಿರ ಇರುವ ಕಿರು ಅರಣ್ಯಕ್ಕೆ ಚಿಕ್ಕಮಕ್ಕಳ ಸಮೇತ ನಾವೆಲ್ಲ ಹೋಗಿದ್ದೆವು.
ಬೇರೆ ಬೇರೆ ಶಾಲೆಗಳಿಂದ ಆಯ್ದ ಸುಮಾರು ಮೂವತ್ತು ೩೦ ಜನ ಶಾಲೆ ಮಕ್ಕಳು ಬಂದಿದ್ದರು.


ನಾಗಮಂಗಲ ತಾಲೂಕಿನ ಕನ್ನಡ ಸಂಘ ಅದ್ಭುತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಚಿಕ್ಕ ಮಕ್ಕಳ ಉತ್ಸಾಹ .. ಅವರ ತರ ತರಹದ ಕುತೂಹಲ ಬರಿತ ಪ್ರಶ್ನೆಗಳು. ಕಾಡಿನ ಪರಿಸರದಲ್ಲಿ ಇವರು ಪಾಲ್ಗೊಂಡ ರೀತಿ.. ನಮಗೆ ಇನ್ನಷ್ಷ್ಟು ಹೇಳಬೇಕು ಎಂದು ಪ್ರೇರೇಪಿಸಿತ್ತು.
ಬೇರೆ ಬೇರೆ ಶಾಲೆಯ ಮಕ್ಕಳು ಎಲ್ಲ ಸೇರಿ ಕಲಿತು ಬೆರೆತು.. ಪರಿಸರದ ಬಗ್ಗೆ , ಪ್ಲಾಸ್ಟಿಕ್ ನಿಂದ ಆಗುವ ಅನಾಹುತದ ಬಗ್ಗೆ , ಪಕ್ಷಿಗಳ ಬಗ್ಗೆ, ಮರ ಗಿಡ ಇವುಗಳ ಬಗ್ಗೆ ಪ್ರತ್ಯಕ್ಷವಾಗಿ ತಿಳಿದು ಕೊಂಡರು...
ನಮ್ಮ ತಂಡದ ಜೊತೆ ಬೆಂಗಳೂರಿನಿಂದ ಬಂದಿದ್ದ.. ವರಪ್ರಸಾದ್ ಮತ್ತು ಕುಟುಂಬ, ಸುರೇಶ ಅವರ ಕುಟುಂಬ ಹಾಗು ರಾಮ್ ಪ್ರಸಾದ್, ರಾಮಚಂದ್ರ ರಾವ್, ಯಶಸ್ವಿ ಜಯಕುಮಾರ್ ಹಾಗು ಭಾಸ್ಕರ ಅವರು ತುಂಬ ಆಸಕ್ತಿ ಇಂದ ಮಕ್ಕಳ ಜೊತೆ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ಮಕ್ಕಳ ಜೊತೆ ಕಾಡಿನಲ್ಲಿ ಕಳೆದ ಸಮಯ..  ಕಾಡಿನ ಮಧ್ಯದಲ್ಲೇ ಎಲ್ಲರ ಜೊತೆ ಗೊಡಿ ಮಾಡಿದ ಮಧ್ಯಾಹ್ನದ ಊಟ ...ಆಹಾ ಹಸಿರು ಪರಿಸರದಲ್ಲಿ ಎಂತಹ ಸವಿ ಸಮಯ....


ನಮ್ಮ ತಂಡದ ಚಿಕ್ಕ ಮಕ್ಕಳಾದ ವಿಶೇಷ್ ಹಾಗು ಅಕ್ಷೋಭ್ಯ ತಮ್ಮ ಜೊತೆ ಕೆಲವು ಮಕ್ಕಳನ್ನು ಸೇರಿಸಿಕೊಂಡು ಪಕ್ಷಿಗಳ ಬಗ್ಗೆ ಒಳ್ಳೆ ವಿವರಣೆ ಕೊಡುತ್ತ ಅವರ ಜೊತೆ ಪಾಲ್ಗೊಂಡಿದ್ದು ಖುಷಿ ಕೊಟ್ಟಿತು..
ಒಂದು ಸುಂದರ ಭಾನುವಾರ , ನಾಗಮಂಗಲ ತಾಲೂಕಿನ ಸ್ವಚ್ಛ ಪರಿಸರದಲ್ಲಿ, ಚಿಕ್ಕ ಮಕ್ಕಳ ಜೊತೆ ಕಳೆಯುವ ಒಂದು ಅವಕಾಶ ನಮ್ಮದಾಗಿತ್ತು..
ಇಂತಹ ಅವಕಾಶ ಮಾಡಿ ಕೊಟ್ಟ ನಾಗಮಂಗಲ ತಾಲೂಕಿನ ಕನ್ನಡ ಸಂಘಕ್ಕೆ ನನ್ನ ಅನಂತ ವಂದನೆಗಳು...

ಹೆಚ್ಚಿನ ಫೋಟೋ ಹಾಗು ವಿಡಿಯೋ ಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ನೋಡಬಹುದು 
https://photos.app.goo.gl/fSR5kgGyWrZdsuA97
https://photos.app.goo.gl/5LVPofDRwsRdHrbp6















                        ಕಾಡಿನ ಮಧ್ಯದಲ್ಲೇ ಚಿಕ್ಕಮಕ್ಕಳ ಜೊತೆ ಸವಿ ಭೋಜನ 




ಪ್ಲಾಸ್ಟಿಕ್  ಬಳಕೆ ಕಡಿಮೆ ಮಾಡುವ  ಬಗ್ಗೆ ಪ್ರತಿಜ್ಞೆ ತೆಗೆದು ಕೊಳ್ಳುತ್ತಾ ಇರುವುದು 




Monday, September 20, 2021

ಮಕ್ಕಳು - ಪರಿಸರ - ಪಕ್ಷಿಲೋಕ - ಪುಸ್ತಕಮನೆ

ಮಕ್ಕಳು - ಪರಿಸರ - ಪಕ್ಷಿಲೋಕ - ಪುಸ್ತಕಮನೆ 

 

ಮಕ್ಕಳ ಜೊತೆ ಒಂದು ದಿನದ ಪರಿಸರ ಪ್ರಕೃತಿ ಹಾಗೂ ಪಕ್ಷಿಗಳ ಬಗ್ಗೆ ನಮ್ಮ ಪ್ರವಾಸ ಪಕ್ಷಿಗಳ ಅದ್ಭುತ ತಾಣ ಎನಿಸಿರುವ ರಂಗನತಿಟ್ಟು ಪಕ್ಷಿಧಾಮ ಹಾಗೂ ಅದರ ಪಕ್ಕದಲ್ಲೇ ಇರುವ ಕರಿಘಟ್ಟ ಎನ್ನುವ ಬೆಟ್ಟದ ಮೇಲೆ ಚಾರಣ ಎಂದು ನಿಗದಿಯಾಗಿತ್ತು.

ಸೆಪ್ಟೆಂಬರ್ 19 ಭಾನುವಾರ ಬೆಳಗ್ಗೆ ಆರು ಗಂಟೆಗೆ ನಮ್ಮ ಪರಿಸರ ಪ್ರೇಮಿಗಳ ಪಯಣ (12 ಮಕ್ಕಳು ಹಾಗೂ ಕೆಲವರ ತಂದೆ-ತಾಯಿಗಳು ಸೇರಿ 23ಜನ) ಶುರುವಾಯಿತು. ಜ್ಞಾನಭಾರತಿ ಬಡಾವಣೆಯಲ್ಲಿರುವ ನಮ್ಮ ಮನೆಯ ಹತ್ತಿರದಿಂದಲೇ ಮೊದಲ ಪಾಯಿಂಟ್ ಇಂದು ನಿಗದಿಪಡಿಸಿದ ಪಡಿಸಲಾಗಿತ್ತು. ಎಲ್ಲಾ ಮಕ್ಕಳು ಹೇಳಿದ ಸಮಯಕ್ಕೆ ಸರಿಯಾಗಿ ಅಂದರೆ 05:45 ಬೆಳಗ್ಗೆ ಬಂದು ಸೇರಿದರು.

ಮಕ್ಕಳೆಲ್ಲ ಅಷ್ಟು ಬೇಗನೆ ಎದ್ದು ಬೇಗ ಬೇಗ ರೆಡಿಯಾಗಿ ಈ ಪರಿಸರ ಪ್ರವಾಸಕ್ಕೆ ತುಂಬಾ ಉತ್ಸಾಹದಿಂದ ಬಂದಿದ್ದು ನೋಡಿ ನನಗೆ ಆಶ್ಚರ್ಯವಾಯಿತು. ಮಕ್ಕಳು ಲೇಟಾಗಿ ಬರಬಹುದೆಂದು ಅರ್ಧಗಂಟೆ ಬಫರ್ ಟೈಮ್ ಇಟ್ಟುಕೊಂಡಿದ್ದೆ .. ಆದರೆ ಎಲ್ಲರೂ ಸಮಯಕ್ಕೆ ಸರಿಯಾಗಿ ಆಗಮಿಸಿ ಇಂತಹ ಪ್ರವಾಸದಲ್ಲಿ ತಮ್ಮ ಉತ್ಸಾಹ ಹೇಗಿದೆಯೆಂದು ತೋರಿಸಿದರು. 

 ದಿಯಾ ಪುಟ್ಟಿ, ಪ್ರೇಕ್ಷಾ, ದರ್ಶಲ್ , ನಾಗಶ್ರೀ ವಿದ್ಯಾ, ನಿಶ್ಚಿತ್, ತನ್ಮಯ್, ಪುನೀತ್, ಅದಿತಿ ಮತ್ತು ವಿಶೇಷ್, ಲಕ್ಷ್  .... ಎಲ್ಲರೂ ನಮ್ಮ ಮನೆಯ ಮುಂದೆ ಸೇರಿಯಾಗಿತ್ತು ಇದರ ಜೊತೆಗೆ ನನ್ನ ಮಕ್ಕಳಾದ ಪ್ರಣವ್ ಮತ್ತು ತೀಕ್ಷ್ಣ ಅವರು ಕೂಡ ರೆಡಿಯಾಗಿ ಎಲ್ಲರ ಜೊತೆ ಒಂದಾದರು




ಆದರೆ ನಮ್ಮನ್ನು ಕರೆದುಕೊಂಡು ಹೋಗಬೇಕೆಂದು ಇದ್ದ ಮಿನಿ ಬಸ್ ಅದೇ ಸ್ವಲ್ಪ ಲೇಟ್ ಆಗಿತ್ತು, ಜಾಸ್ತಿ ಹೊತ್ತೇನೂ ಅಲ್ಲ ಐದೂವರೆಗೆ ಬರಬೇಕಾದ ಬಸ್ಸು ಒಂದು ಇಪ್ಪತ್ತು ನಿಮಿಷ ತಡವಾಗಿ ಬಂದಿತ್ತು. ಅದಾಗಲೇ ಎಲ್ಲ ಮಕ್ಕಳು ಅವರ ತಂದೆ ತಾಯಿಯರು ಬಂದು ಸೇರಿದ್ದು, ಬಸ್ ಬಂದಾಗ ತಡಮಾಡದೆ ಒಂದು ಸಣ್ಣ ಪೂಜೆಯನ್ನು ಮುಗಿಸಿ ಎಲ್ಲರೂ ಮಿನಿ ಬಸ್ ಅನ್ನೋ ಹತ್ತಿದೆವು.

ಅಕ್ಷೋಭ್ಯ ಹಾಗು ಅವರ ಅಪ್ಪ ಅಮ್ಮ ಕೆಂಗೇರಿ ಬಳಿ ಸೇರಿಕೊಂಡರು,  

ಶಾರ್ವಿ  ಮತ್ತು ನವೀನ್  ಕುಟುಂಬ ಬಿಡದಿ ಬಳಿ ನಮ್ಮ ಜೊತೆ ಸೇರಿಕೊಂಡರು.   ಅವರು ಬೇರೆ  ಕಾರಿನಲ್ಲಿ ನಮ್ಮ ಹಿಂದೆಯೇ ಬಂದಿದ್ದರು..

ಭಾನುವಾರವಾದ ಕಾರಣ ಮೈಸೂರು ಕಡೆಗಿನ ಟ್ರಾಫಿಕ್ ಸ್ವಲ್ಪ ಹೆಚ್ಚೇ ಇದ್ದಿತು. ಬಿಡದಿ ಸಮೀಪ ಶಿವು ಸಾಗರ ಎಂಬ ಕಡೆ ಎಲ್ಲಾ ಮಕ್ಕಳು ಹಾಗೂ ದೊಡ್ಡವರು ಬಿಸಿಬಿಸಿ ತಟ್ಟೆ ಇಡ್ಲಿ ಹಾಗೂ ಉದ್ದಿನವಡೆಯ ಸ್ವಾದವನ್ನು ಸವಿದು ಬೆಳಗಿನ ಉಪಹಾರವನ್ನು ಮುಗಿಸಿ, ಮುಂದಿನ ಡೆಸ್ಟಿನೇಷನ್ ಕರಿ ಘಟ್ಟಕ್ಕೆ ನಮ್ಮ ಪಯಣ ಸಾಗಿತು..

ಬಿಸಿಬಿಸಿ ತಟ್ಟೆಇಡ್ಲಿ ಯ ಉಪಹಾರದ ಮಹಿಮೆ ಎಲ್ಲಾ ಚಿಕ್ಕಮಕ್ಕಳ ಜೋಶ್ ತುಂಬಾ ಜೋರಾಗಿ ಇತ್ತು.

ಮೊದಲೇ ಎಲ್ಲರಿಗೂ ಹೇಳಿದಾಗೆ 10 ಕ್ವಿಜ್ ಗಳನ್ನು ಪ್ರಕೃತಿ ಬಗ್ಗೆ ಪ್ರಾಣಿ-ಪಕ್ಷಿಗಳ ಬಗ್ಗೆ ಬರೆದುಕೊಂಡು ಬಂದಿದ್ದರು.

ಬಿಡದಿ ಬಿಟ್ಟಮೇಲೆ ಕರಿಘಟ್ಟ ಕ್ಕೆ ಹೋಗುವ ತನಕ ಇವರ ಪ್ರಶ್ನಾವಳಿಗಳ ಕಾರುಬಾರು, 12 ಮಕ್ಕಳನ್ನು ಹಾಗೂ ಬಂದಿದ್ದ ದೊಡ್ಡವರನ್ನು ಸೇರಿಸಿ ಮೂರು ಗುಂಪುಗಳನ್ನಾಗಿ ಮಾಡಿ ರಸಪ್ರಶ್ನೆ ವಿನಿಮಯ ಶುರುವಾಗಿತ್ತು..

ಎಲ್ಲಾ ಮಕ್ಕಳು ತುಂಬಾ ಕಾಳಜಿ ವಹಿಸಿ ಕೆಲವೊಂದು ಕಷ್ಟಕರವಾದ ಕ್ವಿಜ್ ಗಳನ್ನು ಬರೆದುಕೊಂಡು ಬಂದಿದ್ದರು. ಒಂದೊಂದು ಗುಂಪಿಗೆ ಎರಡು ಪ್ರಶ್ನೆಗಳು ... ಹಕ್ಕಿಗಳ ಬಗ್ಗೆ ಸೋಲಾರ್ ಸಿಸ್ಟಮ್ ಬಗ್ಗೆ ಹಾಗೂ ಕೆಲವೊಂದು ರಿಡಲ್ ಗಳು... ಪ್ರಶ್ನಾವಳಿಗಳನ್ನು ಕೇಳುತ್ತಾ ತಮ್ಮ ತಮ್ಮ ಬುದ್ಧಿಮತ್ತೆಯನ್ನು ಪ್ರದರ್ಶಿಸುತ್ತಾ ಖುಷಿಯಿಂದ ಸಾಗಿದೆವು


ಕ್ವಿಜ್  ನಲ್ಲಿ ತಲ್ಲೀನ ರಾಗಿರುವ ಮಕ್ಕಳು 

ಕರಿಘಟ್ಟ ತಲುಪುವಹೊತ್ತಿಗೆ 9:30 ಆಗಿತ್ತು ಬೆಟ್ಟದಮೇಲೆ ಹೋಗಿ ನಮ್ಮ ಮಿನಿ ಬಸ್ಸಿನಲ್ಲಿ ನಿಲ್ಲಿಸಿ. ಕರಿಘಟ್ಟದ ವ್ಯೂ ಪಾಯಿಂಟ್ ಹಾಗೂ ಸುತ್ತಮುತ್ತ ಪರಿಸರದಲ್ಲಿ ಓಡಾಡಿಕೊಂಡು ಕೆಲವೊಂದು ವಿಶೇಷ ಪಕ್ಷಿಗಳಾದ, ನೀಲಿ ನೊಣ ಹಿಡುಕ, ಮಟಪಕ್ಷಿ, ರಾಜಪಕ್ಷಿ, ಸರ್ಪೆಂಟ್ ಈಗಲ್, ಸನ್ ಬರ್ಡ್ಸ್, ಲಾಫಿಂಗ್ ಡವ್, ಮಂಗಟ್ಟೆ ಇನ್ನು ಮುಂತಾದ ಪಕ್ಷಿಗಳನ್ನು ಹತ್ತಿರದಿಂದ ನೋಡಿ ತಾವು ತಂದಿದ್ದ ಕ್ಯಾಮೆರಾದಲ್ಲಿ ಸೆರೆಹಿಡಿದು ಖುಷಿಪಟ್ಟರು.











ನನ್ನ ಮಗಳು Teekshna (ತೀಕ್ಷ್ಣ)  ಬರೆಯುವುದರಲ್ಲಿ ತಲ್ಲೀನರಾಗಿ ಇರುವುದು 


ಕರಿಘಟ್ಟದ ದೇವಸ್ಥಾನ ತುಂಬಾ ರಶ್ ಇದ್ದ ಕಾರಣ ಹೋಗಲಾಗಲಿಲ್ಲ. ಹಾಗೆ ಬಿಸಿಲು ಜಾಸ್ತಿ ಇರುವ ಕಾರಣ ಆದಷ್ಟು ಬೇಗ ರಂಗನತಿಟ್ಟಿನ ಕಡೆ ಮುಖ ಮಾಡಿದೆವು.

ಪಕ್ಷಿಕಾಶಿ ರಂಗನತಿಟ್ಟು ತಲುಪಿದಾಗ 10 ಮುಕ್ಕಾಲಿನ ಸಮಯ. ಮೊದಲಿಗೆ ನಮ್ಮ ಭಾರತದ ಹಕ್ಕಿಗಳ ಮನುಷ್ಯ ಅಂದರೆ ಬರ್ಡ್ ಮ್ಯಾನ್ ಎಂದು ಪ್ರಸಿದ್ಧರಾಗಿರುವ ಡಾಕ್ಟರ್ ಸಲೀಮ್ ಅಲಿ ಸರ್ ಅವರ ಮ್ಯೂಸಿಯಂಗೆ ಅಲ್ಲಿ ಚೆನ್ನಾಗಿ ವಿವರಣೆಯೊಂದಿಗೆ ಅರ್ಥಪೂರ್ಣವಾದ ಮಾಹಿತಿಗಳನ್ನು ಚಿಕ್ಕ ಮಕ್ಕಳು ಹಾಗೂ ದೊಡ್ಡವರು ನೋಡಿ ಹಿಡಿದುಕೊಂಡರು.. ಒಂದು ಕಡೆಯಿಂದ ಒಂದು ಬಟನ್ ಒತ್ತಿದರೇ ಸಾಕು ಆ ಹಕ್ಕಿಗಳ ಕೂಗು ಕೇಳಿಸುತ್ತಾ ಗಿದ್ದ ಮರದ ಹತ್ತಿರ.. ಚಿಕ್ಕ ಮಕ್ಕಳು ಕುತೂಹಲದಿಂದ ಅದನ್ನು ಒತ್ತಿ ಒತ್ತಿ ಬೇರೆಬೇರೆ ಹಕ್ಕಿಗಳ ಕೂಗುಗಳನ್ನು ಹೇಳುತ್ತಾ ಇದ್ದರು... ಹಾಗೆ ರಂಗನತಿಟ್ಟು ಮತ್ತು ಅಲ್ಲಿ ಬರುವ ವಲಸೆ ಹಕ್ಕಿಗಳ ಹಾಗೆ ಅಲ್ಲಿ ನೀರಿನಲ್ಲಿ ವಾಸಿಸುವ ಹಕ್ಕಿಗಳು ಹಾಗೂ ಅವುಗಳ ಕೊಕ್ಕಿನ ರಚನೆಗಳು ಅವುಗಳ ಪಾದಗಳ ರಚನೆಗಳು ಇವುಗಳನ್ನೆಲ್ಲಾ ತಿಳಿದುಕೊಂಡು ತುಂಬಾ ಖುಷಿ ಪಟ್ಟರು.













ಅಲ್ಲಿಂದ ಹೊರಗೆ ಬರುತ್ತಿದ್ದ ಹಾಗೆ ಕೆಂಬರಲು ಅಂದರೆ ಬ್ಲಾಕ್ ಹೆಡೆಡ್ ಐಬಿಸ್ ಇವುಗಳ ಹಾರಾಟ ತಮ್ಮ ಮರಿಗಳಿಗೆ ಆಹಾರವನ್ನು ತಿಳಿಸುತ್ತಿದ್ದ ರೀತಿ ... ಕಾವೇರಿ ನದಿಯ ವಿಹಂಗಮ ನೋಟ ಇವುಗಳನ್ನೆಲ್ಲ ನೋಡಿ ಚಿಕ್ಕ ಮಕ್ಕಳು ಹಾಗು ದೊಡ್ಡವರು ಪಟ್ಟ ಖುಷಿ ಅಷ್ಟಿಷ್ಟಲ್ಲ. ನೀರು ಹೆಚ್ಚಿದ್ದ ಕಾರಣ ಬೋಟಿಂಗ್ ಸಾಧ್ಯವಾಗಲಿಲ್ಲ. ಆದರೂ ಒಂದು ಗಂಟೆಗಳ ಕಾಲ ದಟ್ಟವಾಗಿ ಹಬ್ಬಿರುವ ಮರಗಳ ಮಧ್ಯೆ ನಡೆದಾಡುತ್ತ ಅಲ್ಲಿರುವ ಪಕ್ಷಿಗಳನ್ನು ನೋಡುತ್ತಾ ಮರ ಗಿಡಗಳನ್ನು ಮುಟ್ಟುತ್ತಾ... ಖುಷಿಯಿಂದ ಒಬ್ಬರಿಗೊಬ್ಬರು ಆಟವಾಡುತ್ತಾ ಸಾಗುತ್ತಿದ್ದರು ...

ಒಂದು ಗಂಟೆ ಹೊತ್ತಿಗೆ ಎಲ್ಲರ ಹೊಟ್ಟೆಯು ತಾಳ ಹಾಕುವುದಕ್ಕೆ ಶುರುಮಾಡಿತ್ತು .... ಮೊದಲೇ ನಾನು ನಿರ್ಧರಿಸಿದ್ದ ಹಾಗೆ ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ಹತ್ತಿರ ಇರುವ ತೋಟದಮನೆ ಎಂಬಲ್ಲಿಗೆ ಹೋದೆವು.

ಅಪ್ಪಟ ಹಳ್ಳಿಮನೆಯ ಸೊಗಡಿನ ಜಾಗ ಮರಗಿಡಗಳ ಮಧ್ಯೆ ಕುಳಿತು ಊಟ ಮಾಡುವ ಸಮಯ ಎಲ್ಲರಿಗೂ ಇಷ್ಟವಾಯಿತು. ತುಂಬಾ ಚಿಕ್ಕದಾದ ಹಾಗೂ ಅಚ್ಚುಕಟ್ಟಾಗಿ ಇರುವ ತೋಟದ ಮನೆಯೆಂಬ ಮನೆ ಹೋಟೆಲ್ ಹಾಗೂ ಇಲ್ಲಿನ ಆಹಾರಗಳು ಎಲ್ಲರಿಗೂ ತುಂಬಾ ರುಚಿಸಿದವು ... ಒಂದೆರಡು ಗಂಟೆಗಳ ಕಾಲ ಇಲ್ಲೇ ಕಳೆದು ಊಟ ಮುಗಿಸಿ ಮತ್ತೊಂದು ಅದ್ಭುತ ಪ್ರಪಂಚಕ್ಕೆ ನಮ್ಮ ಮಕ್ಕಳನ್ನು ಕರೆದುಕೊಂಡು ಹೋದೆ.



ಪ್ರಕೃತಿಯ ಮಡಿಲಲ್ಲಿ ಹೊಟ್ಟೆ ಹಸಿದಾಗ ಮಾಡುವ ಊಟ ಆಹಾ ಹಾ ......   ತೋಟದ ಮನೆ ಯಲ್ಲಿ ಮನೆ ಸೊಗಡಿನ ಊಟ 



ಅಂಕೇಗೌಡರ ಪುಸ್ತಕ ಮನೆ 

ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಹಾಗೂ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಇವುಗಳ ಸೇರ್ಪಡೆಗೆ ಹತ್ತಿರವಿರುವ ಸುಮಾರು 18 ಲಕ್ಷ ಪುಸ್ತಕಗಳನ್ನು ಸಂಗ್ರಹಿಸಿರುವ ಏಕ ವ್ಯಕ್ತಿಯ ಸಾಧನೆ ಎನಿಸಿರುವ ಶ್ರೀಯುತ ಅಂಕೇಗೌಡರ ಪುಸ್ತಕದ ಮನೆಗೆ ಮಕ್ಕಳು ಕಾಲಿಟ್ಟಿದ್ದೇ ತಡ ಎಲ್ಲರನ್ನೂ ಆಶ್ಚರ್ಯ ಕುತೂಹಲ ಮನೆಮಾಡಿತ್ತು.

ಮೊದಲೇ ನಾನು ಶ್ರೀಯುತ ಅಂಕೆ ಗೌಡರಿಗೆ ನಮ್ಮ ಮಕ್ಕಳ ಜೊತೆಗೆ ಬರುವುದನ್ನು ತಿಳಿಸಿದೆ, ಅವರು ಯಾವುದೋ ಒಂದು ಸನ್ಮಾನವನ್ನು ಬೆಳಿಗ್ಗೆ ಮುಗಿಸಿ ಆದಷ್ಟು ಬೇಗ ಇಲ್ಲಿಗೆ ಬಂದು ಸೇರಿದ್ದರು. ನಮ್ಮ ಅದೃಷ್ಟ ಅವರೇ ನಮ್ಮ ಜೊತೆಗಿದ್ದು ತಮ್ಮ ಪುಸ್ತಕ ಬಂಡಾರ ರಾಶಿಯನ್ನು ಎಲ್ಲಾ ಮಕ್ಕಳಿಗೂ ತೋರಿಸುತ್ತಾ ಹಾಗೂ ತಮ್ಮ ಹತ್ತಿರ ವಿದ್ದ  ಸ್ಟ್ಯಾಂಪ್ಮ ತ್ತು ಹಳೆ ಕಾಲದ ನಾಣ್ಯಗಳ ಸಂಗ್ರಹವನ್ನು.. ತುಂಬಾ ಹಳೆಯದಾದ ಇಂಟರ್ನ್ಯಾಷನಲ್ ಪುಸ್ತಕಗಳನ್ನು ನೋಡುವಾಗ ಎಲ್ಲಾ ಮಕ್ಕಳ ಮೈಗಳು ಜುಮ್ಮೆಂದವು ....

ಎಲ್ಲಾ ಮಕ್ಕಳನ್ನು ಕೂಡಿಸಿಕೊಂಡು ನಿಮಗೆ ಏನು ಅನಿಸಿತು ಹಾಗೂ ಏನಾದ್ರೂ ಪ್ರಶ್ನೆಗಳನ್ನು ಕೇಳುವುದಿದ್ದರೆ ಕೇಳಿ ಎಂದು ಅಂಕೆ ಗೌಡರು ಹೇಳಿದಾಗ ನಮ್ಮ ಗುಂಪಿನ ಒಂದೊಂದು ಮಕ್ಕಳು ಕೂಡ ತಮ್ಮ ಅನಿಸಿಕೆ ತಿಳಿಸಿ ಅಂಕೆ ಗೌಡರಿಗೆ ಪ್ರಶ್ನೆಗಳ ಸುರಿಮಳೆಗೈದರು... ಈ ಮಕ್ಕಳ ಸ್ಫೂರ್ತಿಯನ್ನು ಕಂಡು ಅಂಕೆ ಗೌಡರು ಕೆಲವೊಂದು ಆಶೀರ್ವಚನವನ್ನು ನೀಡಿ  ನಿಮಗೆ ಯಾವುದು ಬೇಕು ಆ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಎಂದರು.. ಚಿಕ್ಕ ಮಕ್ಕಳು ತಮ್ಮ ಕೈಗೆ ಸಿಕ್ಕ ಕುತೂಹಲದ ಪುಸ್ತಕಗಳನ್ನು ತೆಗೆದುಕೊಂಡು ಅಂಕೇಗೌಡರ ಹಸ್ತಾಕ್ಷರಗಳನ್ನು ಹಾಕಿಸಿಕೊಂಡು ಖುಷಿಪಟ್ಟರು.


ಅಂಕೇಗೌಡರ ಜೊತೆ ನಮ್ಮ ತಂಡದ ಒಂದು ಚಿತ್ರ 

ಪುಸ್ತಕಗಳ ಸಮುದ್ರದಲ್ಲಿ ಈಜಾಡುತ್ತಾ ಇರುವ ಮಕ್ಕಳು ... ಒಂದೊಂದು ಹಳೆಯ ಪುಸ್ತಕ ಒಂದೊಂದು ಅಚ್ಚರಿ 










ಇಂಟರ್ನ್ಯಾಷನಲ್ ಎಡಿಷನ್ ಪುಸ್ತಕ ಅದ್ಬುತ ಮಾಹಿತಿ ಯುಕ್ತ raptors  ಗಳ  ಪರಿಚಯ 


ಬೆಂಗಳೂರಿಗೆ ವಾಪಸ್ ಬರುವಾಗ ಹೆಚ್ಚಿನ ಟ್ರಾಫಿಕ್ ಇರುತ್ತದೆಯೆಂದು ಆದಷ್ಟು ಬೇಗ ಅವರಿಗೆ ನಮ್ಮ ಸಣ್ಣ ಸನ್ಮಾನವನ್ನು ಮಾಡಿ ಹೊರಟೆವು.

ಬಿಸಿಲು ಹೆಚ್ಚಾಗಿದ್ದ ಕಾರಣ ಅಲ್ಲೇ ಹತ್ತಿರವಿದ್ದ ಕಬ್ಬಿನ ಹಾಲು ಹಾಗೂ ಗೋಲಿಸೋಡ ಗಳನ್ನು ಕುಡಿದು ಹೊಟ್ಟೆಯನ್ನು ತಂಪು ಮಾಡಿಕೊಂಡು ನಮ್ಮ ದಿನದ ಕಾರ್ಯಕ್ರಮವನ್ನು ಮುಗಿಸಿ ನಮ್ಮ ಪಯಣ ಮನೆಗಳ ಕಡೆ ಸಾಗಿತ್ತು.





ವಾಪಸ್ ಬರುವಾಗ ನಮ್ಮ ಜೊತೆ ಬಂದಿದ್ದ  DJ "ಯಶಸ್ವಿ "ಯವರು ಒಳ್ಳೆ ಒಳ್ಳೆಯ ಹಾಡುಗಳನ್ನು ಹಾಕಿ ಮಕ್ಕಳಿಗೆ ಕುಣಿಯಲು ಹೇಳಿದರು ಬರುತ್ತಾ ದಾರಿಯುದ್ದಕ್ಕೂ ಚಿಕ್ಕಮಕ್ಕಳ ಅಮ್ಮ ಆಯಾಸ ಗಳನ್ನು ಮರೆತು ಹಾಡಿಗೆ ಡಾನ್ಸ್ಅನ್ನು ಮಾಡುತ್ತಾ ಕುಣಿದು ಕುಪ್ಪಳಿಸುತ್ತಾ ಜಾಲಿ ಇಂದ ಬಂದು ಸೇರಿದೆವು.

ಒಂದು ಅರ್ಥ ಪೂರ್ಣ ಪರಿಸರ, ಪುಸ್ತಕ , ಪಕ್ಷಿ ಲೋಕ ಇವುಗಳ ಒಂದು ದಿನದ ನಮ್ಮ ಕಾರ್ಯಕ್ರಮ ಯಶಸ್ವಿ ಯಾಗಿ ಮುಗಿಯಿತು,

ಚಿಕ್ಕ ಮಕ್ಕಳ ಕುತೂಹಲ, ಖುಷಿ, ಅವರೊಟ್ಟಿಗಿನ ನಲಿದಾಟ ಅವರ ಜೊತೆ ದೊಡ್ಡವರಾದ ನಾವು ಕೂಡ ಚಿಕ್ಕಮಕ್ಕಳ ತರ ವರ್ತಿಸಿ ಖುಷಿಪಟ್ಟು ಸಂಭ್ರಮಿಸಿ ಒಂದು ದಿನವನ್ನು ಸಂತೋಷದಿಂದ ಕಳೆಯದವು

ಈ ಪ್ರವಾಸದ ಎಲ್ಲ ಫೋಟೋ ಮತ್ತು ವಿಡಿಯೋ ಗಳು  ಈ ಲಿಂಕ್ ನಲ್ಲಿ 

https://photos.app.goo.gl/k51vKnwSF1CAWxy36




ಪರಿಸರ, ಪ್ರಕೃತಿ, ಮರ, ಗಿಡ  ಪ್ರಾಣಿ, ಪಕ್ಷಿ , ಇವುಗಳನ್ನು ಅನುಭವಿಸಿಯೇ ಬೆಳೆಯಬೇಕು... ಇದಕ್ಕಾಗಿ ನನ್ನ ಒಂದು ಸಣ್ಣ ಪ್ರಯತ್ನ  ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ...