Showing posts with label ಸಮುದ್ರದ ಅಲೆ. Show all posts
Showing posts with label ಸಮುದ್ರದ ಅಲೆ. Show all posts

Thursday, May 21, 2009

ಸಮುದ್ರದ ಅಲೆ ಅಲೆಗಳಲ್ಲೇ ಇವರ ಕಲೆ---- clark little

ನೀವು ಸಮುದ್ರ (sea) ಹತ್ರ ಹೋಗಿದ್ದಿರಾ ? ನಿಮಗೆ ಏನು ಇಷ್ಟ ಆಗುತ್ತೆ ಸಮುದ್ರದ ಕಿನಾರೆನಲ್ಲಿ... ಮರಳು....sunset, ಬೀಚ್, ಅಥವ ಒಂದರ ಹಿಂದೆ ಒಂದಂತೆ ಬಂದು ಅಪ್ಪಳಿಸುವ ಅಲೆಗಳ ಭೋರ್ಗರೆತ .? ನನಗಂತೂ ಸಮುದ್ರದ ದೊಡ್ಡ ದೊಡ್ಡ , ಅಬ್ಬರದ ಶಬ್ದ ಮಾಡಿ ಕೊಂಡು ಬರುವ ಅಲೆಗಳನ್ನು ನೋಡಿಕೊಂಡು ಮರಳಿನಲ್ಲಿ ಕೂತಿರುವುದಕ್ಕೆ ತುಂಬ ಇಷ್ಟ....
ಪ್ರಶಾಂತ ವಾದ ಸಂಜೆಯಲ್ಲಿ, ಒಬ್ಬರೇ ಸಮುದ್ರದ ಹತ್ತಿರ ಮರಳಿನಲ್ಲಿ ಕುಳಿತುಕೊಂಡು....ಸಮುದ್ರದ ಆಲೆಗಳನ್ನೇ ನೋಡುತ್ತಾ.....ಏನಾದರೂ ಯೋಚನೆ ಮಾಡ್ತಾ ಇರೋದು ಎಷ್ಟು ಚೆನ್ನ ಇರುತ್ತೆ ಅಲ್ವ..... ಅಲೆ ಆಲೆ ಗಳ ರೂಪದಲ್ಲೇ ನಮ್ಮ ಮನಸಿನಲ್ಲೂ ನೆನಪು ಎಂಬ ಅಲೆಗಳು ಏಳುತ್ತಾ ಇರುತ್ತೆ ಅಲ್ವ......
ಹಾಂ ಬಿಡಿ,, ಇವಾಗ ನಾನು ಹೇಳಲು ಹೊರಟಿರುವುದು ಒಬ್ಬ ಕಲೆಗಾರನ ಬಗ್ಗೆ,,, ಹಾಗು ಅವನ ಕಲೆಯ ಬಗ್ಗೆ. UK ನಲ್ಲಿ ಪ್ರಸಾರವಾಗುವ "ಗಾರ್ಡಿಯನ್ ಪೇಪರ್" ನ ನೋಡ್ತಾ ಇರಬೇಕಾದ್ರೆ ಇವರ ಬಗ್ಗೆ ಕುತೂಹಲ ಮಾಹಿತಿ ಸಿಕ್ತು.... ಇವರ determination ಗೆ,,, ಇವರ dedicationge ನಿಜವಾಗ್ಲೂ ತಲೆ ಬಾಗಲೇ ಬೇಕು.
ಯಾರಿಗಾದರೂ ಸಮುದ್ರದ ಮುಂದೆ ಹೋಗಿ ಅಲೆಗಳ ಫೋಟೋ ತೆಗಿರಿ ಅಂದ್ರೆ...ಎಷ್ಟು ಅಂತ ಅಲೆಗಳ ಫೋಟೋನೇ ತೆಗೀತಿರ ಅಲ್ವ.....ಏನೋ sunset ನ ಸ್ವಲ್ಪ ಚೆನ್ನಾಗಿ ಅಲೆಗಳ ಮೇಲೆ,,ಅಥವಾ ನೆರಳು ಬೀಳುವಂತೆ ಇನ್ನೇನೋ different ಆಗಿ ತೆಗಿಬಹುದು.... aste ಅಲ್ವ... ಇನ್ನೇನಾದ್ರು ಮಾಡೋಕೆ ಆಗುತ್ತ ಯೋಚಿಸಿ..... ಗೊತ್ತಾಗಲಿಲ್ಲ ಅಂದ್ರೆ ಇಲ್ಲಿ ನೋಡಿ ......

ನಾನು ಹೇಳಬೇಕು ಅಂತ ಇರುವುದು clark little.. ಅನ್ನುವ ಕಲೆಗಾರನ ಬಗ್ಗೆ

ಇವರು ಹುಟ್ಟಿದು ಬೆಳೆದಿದ್ದು north shore of the Hawaiian island Oahu. ಇವರು ತಮ್ಮ ಜೀವನವನ್ನು ಫೋಟೋಗ್ರಫಿ ಗೆ ಅಂತ ಮೀಸಲಿಟ್ಟಿದ್ದಾರೆ.. ಅದು ಎಂಥ ಫೋಟೋಗ್ರಫಿಕ್ ಗೆ ಗೊತ್ತ,, ಬರಿ Waves. ಸಮುದ್ರದ ಅಲೆಗಳು... Surfs.. ಇಸ್ಟರಲ್ಲೇ ಏನನ್ನೋ ಸಾಧಿಸಲು ಹೊರಟಿದ್ದಾರೆ ,, ಮತ್ತು ಅಸದ್ಯವಾದದ್ದನ್ನು ,,,imagin ಮಾಡಿಕೊಳ್ಳೋಕೆ ಆಗದೆ ಇರುವುದನ್ನು ಸಾದಿಸಿ ತೋರಿಸಿದ್ದಾರೆ ...... ಇವರ ಬಗ್ಗೆ ನಾನೇನು ಹೆಚ್ಚಿಗೆ ಹೇಳುವುದಿಲ್ಲ ಅವರ ಕಲೆ ಯನ್ನು ಅವರ ಫೋಟೋಗ್ರಫಿ ಮೂಲಕನೆ ನೋಡಿ ತಿಳಿಯಿರಿ ....























"ಒಬ್ಬ ಕಲೆಗಾರ ಕನುಸುಗಾರ ಏನನ್ನಾದರೂ ಮಾಡಬೇಕು ಅಂಥ determination ನಿಂದ ಹೊರಟರೆ ಇಂಥ ಅದ್ಬುತಗಳು ಎಸ್ಟೋ ಸಿಗುತ್ತವೆ ಅಲ್ವ......... "
ಇವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗು ಫೋಟೋ ಗಳಿಗಾಗಿ ಇಲ್ಲಿ ನೋಡಿ http://www.clarklittlephotography.com/
(ನನಗೆ ನಮ್ಮ ಬ್ಲಾಗಿನ ಸ್ನೇಹಿತರಾದ ಮಲ್ಲಿಕಾರ್ಜುನ್ ಹಾಗು ಶಿವೂ ಅವರ ಬಗ್ಗೆ ಅವರ ಕ್ರಿಯೇಟಿವಿಟಿ ಬಗ್ಗೆ ತುಂಬ ಹೆಮ್ಮೆ ಇದೆ... ಆವರು ಫೋಟೋಗ್ರಫಿ ನಲ್ಲಿ ಇನ್ನಸ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ನನ್ನ ಹಾರೈಕೆ)