Friday, November 27, 2015

ಕನ್ನಡ ಹಬ್ಬ 2015 - IT ಕಂಪನಿ ನಲ್ಲಿ ಕನ್ನಡ ಹಬ್ಬದ ಸಡಗರ ಸಂಬ್ರಮ

ಕನ್ನಡ ಹಬ್ಬ ೨೦೧೫ – Thomson Reuters

        






ಕನ್ನಡ ಏನೆ ಕುಣಿದಾಡುವುದೆನ್ನೆದೆ....ಕನ್ನಡ ಎನೆ ಕಿವಿ ನಿಮಿರುವುದು...
ಏನೋ ಗೊತ್ತಿಲ್ಲ ನಮ್ಮ ಕನ್ನಡ ರಾಜ್ಯೋತ್ಸವ ಅಂದರೆ ನಮ್ಮ ಮನೆ ಹಬ್ಬದ ತರ.. ಏನೋ ಸಂಬ್ರಮ .. ಪ್ರತಿ ವರ್ಷದಂತೆ ಈ ವರುಷವೂ ನಮ್ಮ ಕಂಪನಿ “Thomson Reuters “ ನಲ್ಲಿ ಕನ್ನಡ ರಾಜ್ಯೋತ್ಸವದ ಕರಲವ ಜೋರಾಗಿತ್ತು... ಒಂಬತ್ತು ವರುಷದ ಕೆಳಗೆ ನಮ್ಮ ಕಂಪನಿ ಕೆಲವು ಸಮಾನ ಮನಸ್ಕರು ಸೇರಿ ಶುರು ಮಾಡಿದ ಕನ್ನಡದ ಹಬ್ಬ ..(ನಾಗೇಶ್ ಪ್ರಭುಸ್ವಾಮಿ , ಮಹೇಶ್ ಕೊರ, ಹರೀಶ್ ಕೊರವಂಗಳ , ಭರತ್ ಕುಮಾರ್ ಹೀಗೆ ಕೆಲ ಸ್ನೇಹಿತರು ಇವಾಗ ನಮ್ಮ ಕಂಪನಿ ನಲ್ಲಿ ಇಲ್ಲ) ಆದರೆ ಅವರು ಹಾಕಿಕೊಟ್ಟ ಮಾರ್ಗದರ್ಶನ ಈಗ ದೊಡ್ಡ ಹೆಮ್ಮರವಾಗಿ ಬೆಳೆದಿದೆ ಪ್ರತಿ ವರುಷ ಈ ನಮ್ಮ ಹಬ್ಬದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಬೆಳೆಯುತ್ತಾ ಇದೆ . ಈ ಉತ್ಸವ ಸಡಗರ ದಲ್ಲಿ ನನ್ನದು ಒಂದು ಚಿಕ್ಕ ಸೇವೆ, ಶ್ರಮ, ಓಡಾಟ ಎಲ್ಲವೂ ಸೇರಿ ನನಗೆ ನೆಮ್ಮದಿ ಮತ್ತೆ ಸಂತೋಷ ಕೊಡುತ್ತಿದ್ದೆ ... ಪ್ರತಿ ವರುಷವೂ ಹೊಸ ಹೊಸ ಪ್ರಯತ್ನ ಗಳನ್ನೂ ಮಾಡುತ್ತಾ ಮುಂದುವರಿತಾ ಇದೆ ನಮ್ಮ ಕನ್ನಡ ಹಬ್ಬ.
ನಮ್ಮಂಥ IT ಕಂಪನಿ ನಲ್ಲಿ ಕನ್ನಡ ಮಾತನಾಡುವವರನ್ನು ಹುಡುಕಬೇಕು .... ಮಾತನಾಡಲು ಬಂದರು ಏನೋ ಸಂಕೋಚ , ಏನೋ ಹಿಂಜರಿತ ಆದರೆ ನಮ್ಮ ಕಂಪನಿ ನಲ್ಲಿ ಇದೆಲ್ಲವನ್ನು ತೊರೆದು ಉತ್ಸಾಹ ದಿಂದ ನಮ್ಮ ಕನ್ನಡ ಸಹದ್ಯೋಗಿಗಳು ಕೈ ಜೋಡಿಸುತ್ತಾರೆ. ಹಾಗೆಯೇ ನಮ್ಮ ಕಂಪನಿಯ ಆಡಳಿತ ವರ್ಗವು ಸಂಪೂರ್ಣ ಬೆಂಬಲ ನೀಡ ಪ್ರೋತ್ಸಾಹಿಸುತ್ತಾರೆ. ಇಷ್ಟು ಸಾಕಲ್ಲವೇ ಕನ್ನಡ ಹಬ್ಬದ ಸಡಗರ ಮನೆ ಮಾಡಲು.....!!!!!
ಒಂದು ತಿಂಗಳಿನಿಂದ ನಡೆಸಿದ ಓಡಾಟ ಶ್ರಮ ನವೆಂಬರ್ ೨೫ ಬುದವಾರದಂದು ಸಾರ್ಥಕ ಎನಿಸಿತು. ಈ ಸರಿಯ ನಮ್ಮ ಕಾರ್ಯಕ್ರಮಕ್ಕೆ ಪ್ರಸಿದ್ದ ಹಾಸ್ಯ ಕಲಾವಿದರಾದ ಶ್ರೀ ನಾಗರಾಜ್ ಕೋಟೆ ಅವರು ಹಾಗು ಸರಸ್ವತಿ ಪುತ್ರ, ತಮ್ಮ ಜೀವಮಾನದ ಪ್ರತಿ ಸಮಯವನ್ನು ಪುಸ್ತಕ ಸಂಗ್ರಹಕ್ಕೆ ಮೀಸಲಿಟ್ಟು ಹಳ್ಳಿಗಾಡಿನಲ್ಲಿ ಒಂದು ಅದ್ಭುತ ಎನ್ನುವ ಏಕ ವ್ಯಕ್ತಿ ನಿರ್ಮಿತ ಬೃಹತ್ ಗ್ರಂಥಾಲಯವನ್ನು ನಿರ್ಮಿಸಿರುವ ಶ್ರೀಯುತ “ ಅಂಕೆ ಗೌಡರು” ಆಗಮಿಸಿದ್ದರು.

ಪ್ರತಿ ವರುಷವೂ ನಮ್ಮ ಕನ್ನಡ ನಾಡು ನುಡಿ ಗಾಗಿ ಸೇವೆ ಸಲ್ಲಿಸಿದ ವ್ಯಕ್ತಿ ಗಳನ್ನೂ ಗುರುತಿಸಿ ಸನ್ಮಾನ ಮಾಡುವ ಕಾರ್ಯಕ್ರಮ ರೂಡಿಯಲ್ಲಿ ಇದೆ. ಹಾಗೆ ಈ ಸಾರಿ ನಮ್ಮ ಅಂಕೆ ಗೌಡರನ್ನು ಕರೆಸಿದ್ದು ತುಂಬ ಸಂತೋಷ ಹಾಗು ಖುಷಿ ಕೊಟ್ಟಿತು. ಇವರ ಬಗ್ಗೆ ನನಗೆ ಮೊದಲೇ ತಿಳಿದಿತ್ತು , ಕೆಲವು ವರುಷದ ಕೆಳಗೆ ನಮ್ಮ ಬ್ಲಾಗ್ ಸಂಗದಿಂದ ಇವರ ಪುಸ್ತಕದ ಮನೆಗೆ ಹೋಗಿ ಸನ್ಮಾನ ಮಾಡಿ ಬಂದಿದ್ದೆವು (ಅದರ ಬಗ್ಗೆ ಹೆಚ್ಚು ಮಾಹಿತಿಯನ್ನು ಇಲ್ಲಿ ನೋಡಿ http://guruprsad.blogspot.in/2012/06/blog-post.html) ಇವರನ್ನು ಅವಕಾಶ ಸಿಕ್ಕಾಗ ಮತ್ತೆ ಕರೆಸಿ ಎಲ್ಲರಿಗೂ ಪರಿಚಯ ಮಾಡಬೇಕು ಎಂಬ ಬಹು ದಿನಗಳ ಕನಸು ನನಸಾಯಿತು ..

ನೂರಾರು ಜನ ಒಂದೇ ತರದ T-shirt ಹಾಕಿಕೊಂಡು ಓಡಾಡುತ್ತಿದ್ದ ಆ ಸಂಬ್ರಮ ಅದ್ಬುತ...





ಮೊದಲಿಗೆ ನಮ್ಮ ಕರ್ನಾಟಕ ಜಾನಪದ ಕಲೆಗಳಲ್ಲಿ ಒಂದಾದ “ಕಂಸಾಳೆ” ಯೊಂದಿಗೆ ಕಾರ್ಯಕ್ರಮ ಉತ್ಸವ ಶುರು ಆಯಿತು ಆಮೇಲೆ ಕಂಪನಿ ಮುಖ್ಯಸ್ಥ ರಿಂದ ಹಾಗು ಕಾರ್ಯಕ್ರಮಕ್ಕೆ ಬಂದಿದ್ದ ಗಣ್ಯರಿಂದ ದೀಪ ಬೆಳಗುವ ಕಾರ್ಯಕ್ರಮ ನಂತರ ನಾಡಗೀತೆ ಯನ್ನು ಹಾಡಲಾಯಿತು .




ಪ್ರತಿ ವರುಷ ಕರ್ನಾಟಕ ಒಂದೊಂದು ಜಾನಪದ ಕಲೆ ಹಾಗು ಸಂಸ್ಕೃತಿ ಬಿಂಬಿಸುವ ಪ್ರಯತ್ನ ನೆಡಯುತ್ತಿದೆ.  ಡೊಳ್ಳು ಕುಣಿತ, ಪೂಜಾಕುಣಿತ, ಬೊಂಬೆ ಆಟ , ದೇವರ ಪಟದ ಕುಣಿತ.  ಹೀಗೆ ವರ್ಷ ವರ್ಷವೂ ಒಂದೊಂದು ಕಲೆ ಯನ್ನು ನಮ್ಮ ಕಂಪನಿಯ ಹೊರ ರಾಜ್ಯದ ಸಹದ್ಯೋಗಿಗಳಿಗೆ ತಿಳಿಸುವ ಒಂದು ಪ್ರಯತ್ನ...  



ಅಂಕೆ ಗೌಡರ ಚಿಕ್ಕ ಹಾಗು ಸೊಗಸಾದ ಭಾಷಣ ಎಲ್ಲರ ಮನಸಿನಲ್ಲೂ ಪುಸ್ತಕದ ಬಗ್ಗೆ , ಅದರ ಮಾಹಿತಿ ಸಂಗ್ರಹಿಸುವ ಬಗ್ಗೆ ಅರಿವು ಹಾಗು ಚಿಂತನೆ ಮೂಡಿಸಿತು....  



ತದನಂತರ ನಾಗರಾಜ್ ಕೋಟೆ ಅವರ ಹಾಸ್ಯ ನಗೆಯ ಹೊನಲನ್ನೇ ಹರಿಸಿತು.


ನಮ್ಮ ಈ  ಎಲ್ಲ ಕಾರ್ಯಕ್ರಮಗಳಿಗೆ ಕಿರೀಟ ಎಂದರೆ “ನಮ್ಮ   ಸಂಸ್ಥೆಯ ಸಹದ್ಯೋಗಿ ಗಳಾದ  Alexander Brooks ಅವರ ಟೀಂ  (ಅಮೇರಿಕ ದಿಂದ ಬಂದಿರುವ) ಹಾಡಿದ ಕನ್ನಡ ಹಾಡು, ಅದ್ಬುತ !!! ಅಮೋಘ !!!! ಹಾಗು ಆಶ್ಚರ್ಯ ಚಕಿತರನ್ನಗಿಸಿತು.  ಅವರು ಅದೆಷ್ಟು ಚೆನ್ನಾಗಿ ಶಿವನ ಹಾಡನ್ನು ಹಾಡಿದರೆಂದರೆ ಅಬ್ಬ  ಅಲ್ಲಿ ನೆರೆದಿದ್ದ ಎಲ್ಲರೂ ಒಂದು ಚೂರು ಗಲಾಟೆ ಮಾಡದೆ ಸದ್ದೇ ಇಲ್ಲದೆ ಅವರ ಹಾಡನ್ನು ಕೇಳುತ್ತ ಇದ್ದರು. ಹಾಡು ಮುಗಿದ ಮೇಲೆ ಮತ್ತೊಮ್ಮೆ ಮತ್ತೊಮ್ಮೆ... ಎನ್ನುವ ಕರಾಡತನ......      ಅದರ ವೀಡಿಯೊ ಇಲ್ಲಿದೆ ನೋಡಿ


ಅಮೇಲೆ ನಮ್ಮ ಸಹದ್ಯೋಗಿ ಒಬ್ಬರು ನರ್ತನ ಡ್ಯಾನ್ಸ್ ಶಾಲೆ ಸ್ಟೂಡೆಂಟ್ , ಅವರ ಗ್ರೂಪ್ ನಿಂದ ಮೂಡಿ ಬಂದ ಕನ್ನಡ ನಾಡು ನುಡಿ ಹಾಗು ಸಂಸ್ಕೃತಿಯ ಹಾಡು, ನೃತ್ಯ ಮನಮೋಹಕ.    ಅದಾದಮೇಲೆ ಚಿಕ್ಕ ಮಕ್ಕಳಿಂದ ಭಾರತ ನಾಟ್ಯ ಕಾರ್ಯಕ್ರಮ .  ಹಾಗೆ ನಮ್ಮ ಕಂಪನಿ ಸಹದ್ಯೋಗಿಗಳಿಂದ ಅಣಕು ಪ್ರದರ್ಶನ (MAD Ads)




ಅದಾದ ಮೇಲೆ ವಿಜಯ್ ಶ್ರೀಕಂಠ ಮೂರ್ತಿ ಅವರಿಂದ ಏಕಪಾತ್ರ ಅಭಿನಯ “ ಸ್ತ್ರೀ ಎಂದರೆ ಇಷ್ಟೇ ಸಾಕೆ “   ತುಂಬ ಅದ್ಬುತ ವಾಗಿ ಮೂಡಿ ಬಂದಿತ್ತು ..    ಹಾಗೆ ಮತ್ತೊಂದು ಸೋಲೋ ಡಾನ್ಸ್ ಜಾನ್ ಮತ್ತು ತಂಡದವರಿಂದ.
ಕೊನೆಯದಾಗಿ Flash mob  ...   ಕಾರ್ಯಕ್ರಮದ ಮಧ್ಯದಿಂದ ಎದ್ದು ಬಂದು ಗ್ರೂಪ್ ಡಾನ್ಸ್....  ಅದ್ಬುತವಾಗಿತ್ತು








ನನ್ನ ಕಡೆ ಇಂದ ಒಂದು ಚಿಕ್ಕ ಫೋಟೋ ಪ್ರದರ್ಶನ ಏರ್ಪಡಿಸಿದ್ದೆ.  ನಮ್ಮ ಕರ್ನಾಟಕದ ಬಗ್ಗೆ, ನಮ್ಮ ಕರ್ನಾಟಕದಲ್ಲಿ ಇರುವ ಪ್ರೇಕ್ಷಣಿಯ ಸ್ಥಳಗಳ ಬಗ್ಗೆ  ನಾನೇ ತೆಗೆದ ಕೆಲವು ಫೋಟೋ ಹಾಗು ಮಾಹಿತಿ ಯನ್ನು ಹಾಕಿ ಪುಟ್ಟ ಸ್ಟಾಲ್ ಹಾಕಿದ್ದೆವು.   ಹೊರ ರಾಜ್ಯದ ಸಹದ್ಯೋಗಿ ಮಿತ್ರರು ಬಂದು ಅದನ್ನು ನೋಡಿ ಇದು ಕರ್ನಾಟಕ ದಲ್ಲಿ ಇದ್ದೀಯ ಇಲ್ಲಿಗೆ ಹೋಗಲೇ ಬೇಕು ಎಂದು  ಮತ್ತಷ್ಟು ಮಾಹಿತಿ ಪಡೆದರು .






ವರ್ಷದಿಂದ ವರ್ಷ ಬಹಳ ಅದ್ದೂರಿಯಾಗಿ ನೆಡಿತಾ ಇದೆ ನಮ್ಮ ಕನ್ನಡ ಹಬ್ಬ.   ಈ ಕಾರ್ಯಕ್ರಮಕ್ಕೆ ಹಗಲಿರುಳೂ  ತಮ್ಮ ಕೆಲಸದ ಮದ್ಯೆ ಬಿಡುವು ಮಾಡಿ ಕೊಂಡು ಓಡಾಡಿದ ನಮ್ಮ ಸಹದ್ಯೋಗಿ ಮಿತ್ರರಿಗೆಲ್ಲ ಧನ್ಯವಾದಗಳು.  ಮುಖ್ಯವಾಗಿ “ಮನು ಗೌಡ” , “ಲಕ್ಷ್ಮಿ ಸಿದ್ದಪ್ಪ”, “ಉಮೇಶ್” , “ಜಯಪ್ರಕಾಶ ಗೌಡ” , ಸೂರಜ್, ಉಮೇಶ್ ನಿರಂಜನ್, ಅಭಿಷೇಕ್. ಇನ್ನು ತುಂಬ ಜನ..... ಎಲ್ಲರಿಗೂ ಧನ್ಯವಾದಗಳು 

19 comments:

  1. Throughout the article reading I had a smile on my face.. :) :) I missed it but now felt like I was there.. :) :)

    ReplyDelete
  2. ತುಂಬಾ ಚನ಼ಾಗಿ ಮೂಡಿ ಬಂದಿದೆ ಗುರುಗಳೆ.

    ReplyDelete
  3. ತುಂಬಾ ಚನ಼ಾಗಿ ಮೂಡಿ ಬಂದಿದೆ ಗುರುಗಳೆ.

    ReplyDelete
  4. Amazing...thunba chennagi moodi bandide blog matthu kaaryakrama... Tamage mangalavaagali....

    God bless you.... Jai Karnataka... Jai Bharath..

    ReplyDelete
  5. Iddannu nodi thumba emme annuste Gurugale.. Naavu namma companylli praramba maadbeku innu munde :)

    ReplyDelete
  6. Super Guruprasad...you put complete program in this blog..it was like a recap for me

    ReplyDelete
  7. ಧನ್ಯವಾದಗಳು ಸಂತೋಷ್

    ReplyDelete
  8. ಧನ್ಯವಾದಗಳು ಲೋಹಿ, ಖಂಡಿತ ಪ್ರಾರಂಭ ಮಾಡಿ.... ನಾವುಗಳು ಅಲ್ಲದೆ ಬೇರೆ ಯಾರು ಮಾಡುತ್ತಾರೆ..... ಏನಾದರು ಮಾಹಿತಿ ಬೇಕಿದ್ದಲ್ಲಿ ಸಂಪರ್ಕಿಸಿ...

    ReplyDelete
  9. ಧನ್ಯವಾದಗಳು ಸಂತೋಷ್ ಕೆ

    ReplyDelete
  10. ಗುರು ಪ್ರಸಾದ್ ಮೊದಲಿಗೆ ನಿಮ್ಮ ಸೂಪರ್ ಲೇಖನವನ್ನು ತಡವಾಗಿ ಓದಿದ್ದಕ್ಕೆ ಕ್ಷಮೆ..

    ಸುಂದರ ಚಿತ್ರಗಳು, ಸುಂದರ ವಿವರಣೆ, ಸುಂದರ ವಿಶ್ಲೇಷಣೆ ಇವೂ ಮೊದಲು ನಿಲ್ಲುತ್ತವೆ

    ಕರುನಾಡಿನ ಸೊಬಗನ್ನು ಪರಿಚಯಿಸುವ ಚಿತ್ರಗಳು ವಿವರಗಳು ಇವುಗಳ ಬಗ್ಗೆ ನೀವು ಮಾಡಿರುವ ಪ್ರಯತ್ನ ಅತ್ಯಂತ ಶ್ಲಾಘನೀಯ

    ತನ್ನ ಜೀವಮಾನದ ದುಡಿಮೆಯನ್ನೆಲ್ಲ ಪುಸ್ತಕ ಸಂಗ್ರಹಣೆಗೆ ಸುರಿದು.. ಅಬ್ಬಬ್ಬ ಎನ್ನಿಸುವ ಪುಸ್ತಕ ಸಂಗ್ರಹಾಲಯ ಮಾಡಿರುವ ಶ್ರೀ ಅಂಕೆ ಗೌಡರನ್ನು ಕರೆಸಿ ಸನ್ಮಾನಿಸಿ ಅವರ ಪರಿಚಯವನ್ನು ನಿಮ್ಮ ಸಂಸ್ಥೆಯ ಸಹೋದ್ಯೋಗಿಗಳಿಗೆ ಪರಿಚಯಿಸಿರುವುದು ಉತ್ತಮ ಕಾರ್ಯ. ಇಂಥಹ ಪ್ರತಿಭೆಗಳಿಗೆ ಗುರುತಿಸುವಿಕೆ ಖಂಡಿತ ಬೇಕು ಹಾಗೂ ಹೆಚ್ಚೆಚ್ಚು ಜನರಿಗೆ ತಲುಪಬೇಕು.

    ಈ ನಾಡಿಗೆ ಬಂದು, ತಮ್ಮ ಭಾಷೆಯ ಸೊಗಡಿನಲ್ಲಿ ಕನ್ನಡ ಹಾಡನ್ನು ಹಾಡಿರುವ ಪಾಶ್ಚಾತ್ಯ ಸಹೋದ್ಯೋಗಿಗಳ ಪ್ರಯತ್ನ ಅಬ್ಬಾ ಅಬ್ಬಾಬ್ಬ ಎನ್ನಿಸುತ್ತೆ.. ಅವರಿಗೆ ಅಭಿನಂದನೆಗಳು


    ಸುಂದರ ಕಾರ್ಯಕ್ರಮವನ್ನು ಅಷ್ಟೇ ಸುಂದರವಾಗಿ ನಿರೂಪಿಸಿರುವ ನಿಮ್ಮ ಬರಹ, ಚಿತ್ರಗಳಿಗೆ ಜೈ ಎನ್ನುತ್ತಾ
    ಕರುನಾಡ ತಾಯಿ ಸದಾ ಚಿನ್ಮಯಿ ಎಂದು ಹೇಳುತ್ತೇನೆ

    ಸೂಪರ್ ಗುರು

    ReplyDelete
  11. Recap of the fantastic day in TR :) Will last long in our memories!

    ReplyDelete
  12. ಗುರು ಪ್ರಪಂಚದ ಪ್ರೀತಿಯ ಸ್ನೇಹಿತರೇ
    ನಿಮ್ಮ ಕನ್ನಡ ಭಾಷೆ, ಸಂಸ್ಕೃತಿ ಅಭಿಮಾನಕ್ಕೆ ಕೋಟಿ ಕೋಟಿ ನಮನಗಳು.ನೀವು ಅಭಿವ್ಯಕ್ತಿಸುತ್ತಿರುವ ಕನ್ನಡತನ ನೋಡಿ ತುಂಬಾ ಸಂತೋಷವಾಯಿತು.ಕನ್ನಡಮ್ಮನ ತೇರನ್ನು ಇನ್ನೂ ವಿಜಂಭ್ರಣೆಯಿಂದ ಆಚರಿಸಲು ನಿಮಗೆ ಹಾಗೂ ನಿಮ್ಮ ಸ್ನೇಹಿತರಿಗೆ ಹೆಚ್ಚಿನ ಸ್ಪೂರ್ತಿ ಸದಾ ಇರಲಿ ಯೆಂದು ಹಾರೈಸುವೆ.ಕನ್ನಡಾಭಿಮಾನಿ; ಡಾ.ಮ.ತಿಮ್ಮಪ್ಪ.ನಿವತ್ತಿ ಜಿಲ್ಲಾ ಆರೋಗ್ಯಾಧಿಕಾರಿ.

    ReplyDelete
  13. ಗುರು ಪ್ರಪಂಚದ ಪ್ರೀತಿಯ ಸ್ನೇಹಿತರೇ
    ನಿಮ್ಮ ಕನ್ನಡ ಭಾಷೆ, ಸಂಸ್ಕೃತಿ ಅಭಿಮಾನಕ್ಕೆ ಕೋಟಿ ಕೋಟಿ ನಮನಗಳು.ನೀವು ಅಭಿವ್ಯಕ್ತಿಸುತ್ತಿರುವ ಕನ್ನಡತನ ನೋಡಿ ತುಂಬಾ ಸಂತೋಷವಾಯಿತು.ಕನ್ನಡಮ್ಮನ ತೇರನ್ನು ಇನ್ನೂ ವಿಜಂಭ್ರಣೆಯಿಂದ ಆಚರಿಸಲು ನಿಮಗೆ ಹಾಗೂ ನಿಮ್ಮ ಸ್ನೇಹಿತರಿಗೆ ಹೆಚ್ಚಿನ ಸ್ಪೂರ್ತಿ ಸದಾ ಇರಲಿ ಯೆಂದು ಹಾರೈಸುವೆ.ಕನ್ನಡಾಭಿಮಾನಿ; ಡಾ.ಮ.ತಿಮ್ಮಪ್ಪ.ನಿವತ್ತಿ ಜಿಲ್ಲಾ ಆರೋಗ್ಯಾಧಿಕಾರಿ.

    ReplyDelete
  14. Nicely captured guru, it was really a fantastic day in TR. We all enjoyed.

    ReplyDelete
  15. ತುಂಭಾ ಧನ್ಯವಾದಗಳು ತಿಮ್ಮಪ್ಪ ಸರ್.

    ReplyDelete
  16. ಥ್ಯಾಂಕ್ಸ್ ಚೈತ್ರ

    ReplyDelete
  17. ಧನ್ಯವಾದಗಳು ಶ್ರೀಕಾಂತ್ ಅಣ್ಣ

    ReplyDelete