Showing posts with label pencil Art. Show all posts
Showing posts with label pencil Art. Show all posts

Monday, December 13, 2010

ಪೆನ್ಸಿಲ್ ಲೆಡ್ ನಲ್ಲೆ ಅರಳುವ ಇವರ ಕಲೆ ಅದ್ಬುತ...


ನಮಸ್ಕಾರ....


ತುಂಬಾ ದಿನಗಳ ಬಳಿಕ, ನನ್ನ ನೆಚ್ಚಿನ ಬ್ಲಾಗ್ ಲೋಕದ ಕಡೆ ತಲೆ ಹಾಕ್ತಾ ಇದೇನೇ,,,, ಮದುವೆ ಗಲಾಟೆ, ಹಾಗು ಕೆಲಸದ ಒತ್ತಡಗಳ ನಡುವೆ.....ನನ್ನ ಈ ಹವ್ಯಾಸ ತಪ್ಪೇ ಹೋಗಿತ್ತು.....ಕಳೆದ ೨ ತಿಂಗಳಿನಿಂದ ನನ್ನ ಬ್ಲಾಗ್ ಅಪ್ಡೇಟ್ ಮಾಡೋದು ಇರಲಿ,,, ಬೇರೆಯವರ ಬ್ಲಾಗ್ ಅನ್ನು ಓದೋಕು ಟೈಮ್ ಇರಲಿಲ್ಲ..... ಕೊನೆಗೂ,, ಸ್ವಲ್ಪ ಫ್ರೀ ಮಾಡಿಕೊಂಡು ಇದರ ಕಡೆ ಬಂದಿದ್ದೇನೆ......

ನಮ್ಮ ಬ್ಲಾಗ್ ಸ್ನೇಹಿತರ ತುಂಬಾ ಒಳ್ಳೆಯ ಲೇಖನಗಳನ್ನು,, ಕವನಗಳನ್ನು ಮಿಸ್ ಮಾಡಿಕೊಂಡೆ ಅಂತ ಕಾಣುತ್ತೆ... ಇರಲಿ... ನಿದಾನಕ್ಕೆ ಸಮಯ ಸಿಕ್ಕಾಗ ,,, ನೋಡಿ ಪ್ರತಿಕ್ರಿಯಿಸುತ್ತೇನೆ .....

ಇವಾಗ ಮತ್ತದೇ ನನ್ನ ಹುಡುಕಾಟದ ಅದ್ಬುತ ವಿಸ್ಮಯಗಳ ವಿಚಾರಗಳೊಂದಿಗೆ ನಿಮ್ಮ ಮುಂದೆ ಬರ್ತಾ ಇದೇನೇ...

ನನ್ನ ಹಿಂದಿನ ಬ್ಲಾಗ್ ಗಳಲ್ಲಿ... ಪೆನ್ಸಿಲ್ ನ ಚಿತ್ತಾರದ.. ಪೆನ್ಸಿಲ್ ಅನ್ನೇ ಉಪಯೋಗಿಸಿ ಅದರಿಂದ ಮಾಡಿದ ಕಲಾಕ್ರುತಿಗಳನ್ನ ಹಾಗು ಅದರ ಬಗ್ಗೆ ಹೇಳಿದ್ದೆ( http://guruprsad.blogspot.com/2009/10/blog-post_22.html).... ಅಲ್ವ... ಹಾಗೆ ಇಲ್ಲಿ ನೋಡಿ, ಯಾರೋ ಒಬ್ಬ ಭೂಪ,,, ಪೆನ್ಸಿಲ್ ಮುಂದಿನ ಲೆಡ್ ನಿಂದಲೇ ಬೆರಗಾಗುವ ರೀತಿನಲ್ಲಿ ತನ್ನ ಕಲೆ ಯನ್ನು ಒರೆಗೆ ಹಚ್ಚಿದ್ದಾನೆ,,,, , ಅಕ್ಕಿ ಕಾಳಿನಲ್ಲಿ ಹೆಸರು ಬರೆಯೋದನ್ನು,,, ಗೋದಿ ಕಾಳಿನಲ್ಲಿ ಹೆಸರು ಬರೆಯೋದನ್ನು,,, ನೋಡಿದ್ದೇವೆ,,, ಆದರೆ ಚಿಕ್ಕ ಪೆನ್ಸಿಲ್ ಮುಂದಿನ ಲೆಡ್ ನಿಂದಲೇ,,,, ಅದ್ಬುತ ಎನಿಸುವ ಕಲೆಗಳನ್ನ ಮಾಡಿ ತನ್ನ ಚಮತ್ಕಾರ ತೋರಿಸಿರುವುದನ್ನು ನೋಡಿದ್ದೀರಾ.... ... ಪೆನ್ಸಿಲ್ ನ ಉಪಯೋಗಿಸಿಕೊಂಡೆ ಎಷ್ಟು ಒಳ್ಳೆಯ ಕಲಾಕೃತಿಗಳನ್ನ ಮಾಡುತ್ತಾರೆ ನೋಡಿ.... ಎಷ್ಟು ವಿಸ್ಮಯ ಅಲ್ವ....

ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ....

















Thursday, October 22, 2009

ಪೆನ್ಸಿಲ್ ನಿಂದಲೇ ಅರಳುವ ಸುಂದರ ಕಲೆ....

ಅಲ್ಲ, ನಾವು ಪೆನ್ಸಿಲ್ ನ ಚಿತ್ರ ಬರಿಯೋಕೆ ಮಾತ್ರ ಉಪಯೋಗಿಸುತ್ತೇವೆ ಅಲ್ವ... ಇದೆ ಪೆನ್ಸಿಲ್ ನ ಉಪಯೋಗಿಸಿ . ಎಸ್ಟೋ ಜನ ಕಲಾವಿದರು. ಎಂತೆಂಥ ಚಿತ್ರಗಳನ್ನ , ಕಲಾಕ್ರುತಿಗಳನ್ನ ಬರೆದಿದ್ದಾರೆ ತಾನೆ...


ಆದರೆ ಇಲ್ಲಿ ನೋಡಿ...Jennifer maestre ಎಂಬ ಕಲೆಗಾರ್ತಿ(?) ,, ಪೆನ್ಸಿಲ್ ಇರೋದು ಬರಿ ಚಿತ್ರ ಬರೆಯುವುದಕ್ಕೆ ಮಾತ್ರ  ಅಲ್ಲ..ಪೆನ್ಸಿಲ್ ಅನ್ನೇ ಉಪಯೋಗಿಸಿಕೊಂಡು ಈ ಥರ ಕಲೆ ಯನ್ನು ಮಾಡಬಹುದು ಅಂತ ಮಾಡಿ ತೋರಿಸಿ ಕೊಟ್ಟು ಇದ್ದಾರೆ... ಇದೊಂತರ ವಿಚಿತ್ರ ಕಲೆ ಅಲ್ವ....ಹೊಸ ಕ್ರಿಯೇಟಿವಿಟಿ .. ಎಷ್ಟು ಚೆನ್ನಾಗಿ ಇದೆ ನೋಡಿ ಇವರು ಮಾಡಿರುವ ಕಲಾಕೃತಿಗಳು .. ವಾಹ್ ...
ನೂರಾರು ಪೆನ್ಸಿಲ್ ಗಳನ್ನ ಉಪಯೋಗಿಸಿ, ಚಿಕ್ಕ ಚಿಕ್ಕದಾಗಿ sculpture ಮಾಡಿಕೊಂಡು ಅದಕ್ಕೆ ಒಪ್ಪುವ ಹಾಗೆ ಜೋಡಿಸಿ,,, ಒಂದಕಿಂಥ ಒಂದು ಆಕರ್ಷಿಸುವ ರೀತಿನಲ್ಲಿ ಮಾಡಿದ್ದರಲ್ಲ ನಿಜಕ್ಕೂ ಅವಳಿಗೆ ನನ್ನ ದೊಡ್ಡ ನಮನ...

ಇದೊಂತರ ಹೊಸ ಕ್ರಿಯೇಟಿವಿಟಿ ... ಚಿಕ್ಕ ಮಕ್ಕಳಿಗೆ ಇಂಥದನ್ನ ತೋರಿಸಿ ಅವರಲ್ಲೂ ಹೊಸ ಹೊಸ ಬಗೆಯ ಕ್ರಿಯೇಟಿವ್ ಮೈಂಡ್ ನ ಡೆವಲಪ್ ಮಾಡಬೇಕು....

ಮನಸೊಂದಿದ್ದರೆ ಏನೆ ಸಿಕ್ಕರೂ ಅದರಲ್ಲೇ ಒಂದು ಕಲೆಯನ್ನ ತಯಾರಿಸಬಹುದು ಎನ್ನುವುದಕ್ಕೆ ಇಂಥಹ art ಗಳೇ ಉದಾಹರಣೆ.... ಏನಂತಿರ,,,ನಿದಾನಕ್ಕೆ  ನೋಡಿ ನಿಮ್ಮ ಅನಿಸಿಕೆ ತಿಳಿಸಿ....