Tuesday, March 10, 2009

ನೆನಪಿನ ಬುತ್ತಿ ಇಂದ......ಇಪ್ಪತು ವರುಷದ ಕೆಳಗೆ.....

ಮಾರ್ಚ್ , ಏಪ್ರಿಲ್ ಸಮಯ ಬಂತು ಅಂದರೆ ಸಾಕು... ವಿದ್ಯಾರ್ಥಿಗಳಿಗೆಲ್ಲ ಒಂದು ಥರ tension, exam ಭಯ, ಒಂದು ಸರಿ exam ಮುಗಿತು ಅಂದ್ರೆ ಸಾಕು,,,, ಬೇಸಿಗೆ ರಜೆ ಶುರು ಆಯಿತು ಅಂದ್ರೆ ಅ ಮಕ್ಕಳನು ಹಿಡಿಯೌವುದಕ್ಕೆ ಆಗೋದಿಲ್ಲ..
ಮೊನ್ನೆ ಭಾನುವಾರ, ಕರೆಂಟ್ ಹೋಗಿತ್ತು ಭಾನುವಾರದ ಸಂಜೆ...ಹಾಗೆ ಹೊರಗಡೆ ಬಂದು ನನ್ನ ಟೆರೆಸ್ ಮೇಲೆ ನಿನ್ಥ್ಕೊಂಡ್ ನೋಡ್ತಾ ಇದ್ದೆ, ಚಿಕ್ಕ ಮಕ್ಕಳ ಅ ಆಟ, ಪಾಠ, ಕರೆಂಟ್ ಇಲ್ಲದಿದ್ದಾಗ ಓದ್ಕೊಳೋದು ಬೇಡ ಅಂಥ, ಅಥವ ಓದಿ ಓದಿ ಸಾಕಾಯ್ತು ಅಂಥ ಎಲ್ಲ ಮಕ್ಕಳು ಹೊರಗಡೆ ಬಂದು ಆಟ ಅಡ್ತ ಇದ್ರೂ...ಅದನ್ನ ನೋಡಿದಾಗ ನನಗು ನನ್ನ ಬಾಲ್ಯದ ನೆನಪು ಹಾಗೆ ನನ್ನ ಮನಸಿನಲ್ಲಿ ಹಾಯ್ದು ಹೋಯ್ತು,, ಅವೊತು ರಾತ್ರಿ ಪೂರ್ತಿ ನನ್ನ ಬಾಲ್ಯದ ನೆನಪುಗಳೇ ಬರುಥ ಇದ್ದವು.....
ಇದನ್ನೇ ಯೋಚಿಸುತಿರಬೇಕಾದರೆ.. ನಾವು ನಮ್ಮ ರಜೆ ಸಮಯವನ್ನು ಹೇಗೆ ಕಳೆಯುತ ಇದ್ವಿ ಅಂಥ ನೆನಪು ಮದ್ಕೊಥ ಇದ್ದೆ.. ಒಂದು ೨೦ -೨೩ ವರುಷದ ಕೆಳಗೆ ಇರಬೇಕು,, ಅವಾಗ ಹೊಸ ಟ್ರೆಂಡ್ ಅಂದ್ರೆ TV... ಹೊಸದಾಗಿ ಎಲ್ಲರ ಮನೆಯನ್ನು ಆವರಿಸುತ್ತ ಇದ್ದ ಕಾಲ. ನಮಗೂ ರಜೆ ಸಮಯದಲ್ಲಿ ಒಳ್ಳೆ ಟೈಮ್ ಪಾಸು ಅಂಥ ಇದ್ದಿದೆ ಅದೊಂದು,, ಈಗಿನ ಥರ,, ಕಂಪ್ಯೂಟರ್ ಗೇಮ್ಸ್, ಕಂಪ್ಯೂಟರ್ಸ್, ಎಲ್ಲ ಇರಲಿಲ್ಲ.. ಹೊರಗಡೆ ನಮ್ಮ ಸ್ನೇಹಿತರ ಜೊತೆ ಲಗೋರಿ, ಗೋಲಿ, ಚಿಲ್ಲಿ ದಂಡು, ಬುಗುರಿ , ಕ್ರಿಕೆಟ್ ಆಡಿಕೊಂಡು ಸಂಜೆ ಆದ್ರೆ ಸಾಕು TV ಮುಂದೆ ಬಂದು ಕುಥ್ಕೊಥ ಇದ್ವಿ, ಅವಾಗ ಇದ್ದಿದೆ ಒಂದೇ ಒಂದು channelu ಅದುವೇ ದೂರದರ್ಶನ !!!!
ಅದರಲ್ಲಿ ಏನ್ ಬರುತ್ಹೋ ಅದನ್ನೇ ನೋಡಬೇಕು ಬೇರೆ optione ಇರಲ್ಲಿಲ್ಲ ಅಲ್ವ? ಹಂ ಎಲ್ಲಿ ಇತ್ತು,, ಅದೇ ನಮ್ಮ ಮನೋರಂಜನೆಯ ಪೆಟ್ಟಿಗೆ ಅಸ್ತೆ...
ನಿಮಗೆ ಅವಾಗ ಬರುತಿದ್ದ ಯಾವುದಾದರು ಸೀರಿಯಲ್ ನೆನಪಿದೆಯೆ, ನಾವು ಯಾವ ಧಾರಾವಾಹಿಯನ್ನ ತುಂಬ ನೋಡ್ತಾ ಇದ್ದದ್ದು ನೆನಪು ಇದೆಯಾ? ಸ್ವಲ್ಪ ನಿಮ್ಮ ಬಾಲ್ಯದ ನೆನಪಿನಂಗಳಕ್ಕೆ ಬನ್ನಿ..............
ನಮ್ಮ ದಂತದ ಹಿಂದಿನ ರಹಸ್ಯ ಕಾಲ್ಗತೆ ತೂಥ್ ಪೌಡರ್.......

ಗೋಲ್ಡ್ ಸ್ಪಾಟ್,, zzzzz zing ಗೋಲ್ಡ್ ಸ್ಪಾಟ್....


ಪಾನ್ ಮಸಾಲ ಪಾನ್ ಪಸಂದ್...


ಇ ಲವ್ ಯೌ ರಸ್ನ...........

ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ.......ಟಿಂಗ್ ಟಿಂಗ್.....
keo karpiನ ಹೇರ್ ಆಯಿಲ್
nutrin ಕೋಕೋ ನ ಕೋಕಿ --- ಚಾಕೊಲೆಟ್


vita.....


ವದಿಲಾಲ್ ಐಸ್ ಕ್ರೀಮ್



ಬಿಗ್ ಬಬೂಲ್

ಹಸಿವಾಗಿದಿಯ cerelac ಕೊಡಿ ಮಗುಗೆ.....

Douber ತೂಥ್ ಪವರ್


ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ವಾಹಿನಿ,, ದೂರದರ್ಶನ ........



ನೆನಪಿದೆಯೆ..... ರೋಬೋರ್ತ್....... ದಾರವಾಹಿ....




ಮೌಗಲಿ ಕಥೆ ಇನ್ನು ಹಾಗೆ ಇದೆ ಅಲ್ವ ನಮ್ಮ ಮನಸಿನಲ್ಲಿ....

ರಾಮಯನ್...........ಅ ರಾಮನ ಅನೆಗು ಇದನ್ನ ಮಾರಿಯೋಕೆ ಆಗೋಲ್ಲ...... ಇ ತರಹದ ಇನ್ನೊಂದು ಸೀರಿಯಲ್ ನಾನು ನೋಡಿಲ್ಲ.... ಏನ್ ಇಂಟರೆಸ್ಟ್ ನಿಂದ ನೋಡ್ತಾ ಇದ್ವಿ ಅಲ್ವ....


ಹಾಲಿನಂಥ ಹೊಳಪು,, ನಿರ್ಮಾ ನಿರ್ಮಾ ವಾಶಿಂಗ್ ಪೋವೆದೆರ್ ನಿರ್ಮಾ........


ಇವೊಗ್ಲು ಇದೆ..... HMT watches



ನಟರಾಜ್ ಪೆನ್ಸಿಲ್............



digjam suitings and shirtings

ವಿಕ್ರಮ್ ಮತ್ತೆ ಬೇತಾಳ ನ ಕಥೆಗಳು..... ಥ್ರಿಲ್ಲಿಂಗ್ ಅಲ್ವ.......

ನೆನಪಿದೆಯೆ, ಮಾಲ್ಗುಡಿ ಡೇಸ್ ನ ಸ್ವಾಮಿ

ಸಂಜಯ್ ಖಾನ್ ಟಿಪ್ಪು ಸುಲ್ತಾನ್...........

ಮಹಾಭಾರತ್..................... ಟೈಟಲ್ ಸಾಂಗ್ ಒಂದೇ ಸಾಕು..... TV ಮುಂದೆ ಕುಥ್ಕೊಳದಕ್ಕೆ


ಪಾನ್ ಮಸಾಲ ಪಾನ್ ಪರಾಗ್......

ಗೃಹಿಣಿಯರ ಅಚ್ಚು ಮೆಚ್ಚಿನ ಸಂಗಾತಿ ... HAWKINs

ಲಿಜ್ಜತ್ ಪಪಾದ್ ಹಹ್ಹ ಹಾ ಹಾ ಹಾಹ ...................


8 comments:

  1. ಗುರು,

    ಸೂಪರ್ ಕಣ್ರೀ....ಎಲ್ಲಾ ಹಳೆಯ ನೆನಪುಗಳನ್ನು ಇಲ್ಲಿ ಗುಡ್ಡೆ ಹಾಕಿದಿರಿ...ಮತ್ತೆ ನಮ್ಮ ಬಾಲ್ಯವನ್ನು ನೆನಪಿಸಿದಿರಿ....ಅದೇ ಮಹಾಭಾರತ, ರಾಮಾಯಣ, ಕೋಲ್ಗೇಟ್, ವಿಟಾ, ಒಂದೇ ಎರಡೆ....ಅದರಲ್ಲೂ ನನಗೆ ಮಾಲ್ಗುಡಿ ಧಾರವಾಹಿ ತುಂಬಾ ಅಚ್ಚುಮೆಚ್ಚು...[ಅದರ ಪ್ರಭಾವದಿಂದ ನಾನು ನನ್ನ ಮಲ್ಲೇಶ್ವರಂ ರೈಲ್ವೇ ನಿಲ್ದಾಣವನ್ನು " ಮಾಲ್ಗುಡಿಡೇಸ್ ನೆನಪಿಸುವ ನಿಲ್ದಾಣ" ಅಂತ ಬರೆದಾಗ ಅದು ಸುಧಾ ಪತ್ರಿಕೆಯಲ್ಲಿ ಪ್ರಕಟವಾಯಿತು...ಮತ್ತೆ ಇಲ್ಲಿ ಬ್ಲಾಗಿನಲ್ಲೂ ಹಾಕಿದ್ದೇನೆ. Friday, September 26, 2008
    ]
    ಸುಂದರ ನೆನಪುಗಳು...ಸವಿಸವಿ ನೆನಪುಗಳು...

    ReplyDelete
  2. ಥ್ಯಾಂಕ್ಸ್ ಶಿವೂ, ಹಾಂ ಖಂಡಿತ ನಿಮ್ಮ ಬ್ಲಾಗ್ ಗೆ ಬಂದು ಅ article ನ ನೋಡ್ತೇನೆ

    ReplyDelete
  3. ಗುರು..

    ಮತ್ತೆ ಹಳೆಯ ನೆನಪಿನ ಲೋಕಕ್ಕೆ ಕರೆದೊಯ್ದು ಬಿಟ್ಟಿರಿ..

    ಅಂದಿನ ಮಹಾಭಾರತ, ಸ್ವಾಮಿ. (ಮಾಲ್ಗುಡಿ ಡೇಯ್ಸ್). ಧಾರವಾಹಿಗಳಂತೂ ಸೂಪರ್..!

    ತುಂಬ ಚೆನ್ನಾಗಿದೆ...

    ನಿಮ್ಮ ಚಿತ್ರಲೇಖನಕ್ಕೆ

    ಅಭಿನಂದನೆಗಳು..

    ReplyDelete
  4. haLeya nenapu marukaLiside... chenagide..

    ReplyDelete
  5. ಹಲೋ ಮನಸು,
    ತುಂಬ ಧನ್ಯವಾದಗಳು ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದಕ್ಕೆ , ಮೃದು ಮನಸಿನ ಬ್ಲಾಗಿನಂಗಳಕ್ಕೆ ಬಂದು ಹೋಗಿದೇನೆ, ಆದರೆ ಪ್ರತಿಕ್ರಿಯಿಸಿರಲಿಲ್ಲ, ಬಿಡುವಾದಾಗ ನಿಮ್ಮ ಬ್ಲಾಗಿಗೆ ಬೆಟ್ಟಿ ಕೊಟ್ಟು ನಿದಾನಕ್ಕೆ ನಿಮ್ಮ ಬರಹವನ್ನು ಓದುತ್ತೇನೆ.

    ReplyDelete
  6. ಥ್ಯಾಂಕ್ಸ್ ಪ್ರಕಾಶ್.

    ReplyDelete
  7. http://www.youtube.com/watch?v=pFbEguE1rEU
    yee hadu marthu bitra?

    ReplyDelete
  8. ಹಾಂ, ಈ ಹಾಡನ್ನು ಮರಿಯೋಕೆ ಆಗುತ್ತ ,, ತುಂಬ ಥ್ಯಾಂಕ್ಸ್ songs ಲಿಂಕ್ ಕೊಟ್ಟಿದಕ್ಕೆ. ಅಂದಹಾಗೆ ತಮ್ಮ ಹೆಸರು ಗೊತ್ತಾಗಲಿಲ್ಲ ಅನಾಮಿಕರವರೆ..

    ReplyDelete