Monday, June 29, 2009

ಚಿತ್ರ ವಿಚಿತ್ರ ಜಗತ್ತು !!! ಅಲ್ಲ ಇವರಿಗೆ ಮಾಡೋಕ್ಕೆ ಏನು ಕೆಲಸ ಇರೋಲ್ವಾ.....

ನಮ್ಮಲ್ಲಿ ವಿಚಿತ್ರ ಅಂದ್ರೆ ಏನೋ ತಪ್ಪು ಮಾಡಿರೋದು.. ಅಥವಾ ಯಾವುದಾದರು ಕೆಲಸ ಸರಿಯಾಗಿ ಮಾಡದೇ ಇದ್ದರೆ ಅದೇ ಒಂದು ವಿಚಿತ್ರ ತರ ಕಾಣುತ್ತೆ ಅಲ್ವ.... ಒಂದು ಬಿಲ್ಡಿಂಗ್ ಕಟ್ಟ್ತೋದ್ರಲ್ಲೇ ಇರಬೋದು,, ಅಥವಾ ಪಾರ್ಕ್ ಅನ್ನು neat ಆಗಿ ಇಟ್ಕೊಲೋದ್ರಲ್ಲೇ ಇರ್ಬೋದು ..... ಏನೋ ಒಂದು ಥರ ಕಾಪಿ ಕಟ್ ಮಾಡುವವರ ಥರ ಮಾಡುತ್ತೇವೆ.. ಒಂದು ಹೊಸ ಯೋಚನೆ,,innovation, ಕ್ರಿಯೇಟಿವಿಟಿ ಏನು ಇರೋಲ್ಲ... (mostly ಎಲ್ಲರೂ ನಮ್ಮ ಸ್ಕೂಲ್ಸ್ ಕಾಲೇಜ್ exams ನಲ್ಲಿ ಏನು ಪಠ್ಯ ಪುಸ್ತಕ ಇರುತ್ತದೋ ಅಸ್ತನ್ನೇ ಓದಿ ಅದೇ ರೀತಿ ಬರೆದು, ಜೀವನದಲ್ಲೂ ಅದೇ ಥರ ಅಳವಡಿಸಿಕೊಂಡ ಬಿಟ್ ಇದ್ದೇವೆ ಅಂಥ ಕಾಣುತ್ತೆ).
ನಮ್ಮ ನಿಜ ಜೀವನದಲ್ಲಿ ಎಲ್ಲೊ ಅಪರೂಪ ಒಂದು ಒಳ್ಳೆ ಕ್ರಿಯೇಟಿವ್ ವಸ್ತು ವನ್ನ ಕಾಣೋದು ಅಲ್ವ... ಹಾಗಂತ ಏನು ಚೆನ್ನಾಗಿ ಇರೋಲ್ಲ ಅಂಥ ಅಲ್ಲ ತುಂಬ ಚೆನ್ನಾಗಿ beautifull ಆಗಿ ಇರುತ್ತೆ ಆದ್ರೆ ಎಲ್ಲ ಒಂದೇ ಥರ ಇರುತ್ತೆ, ಅಂಥಹ ವಸ್ತುವನ್ನ ಮೊದಲೇ ಎಲ್ಲೊ ನೋಡಿದ ಹಾಗೆ ಅನ್ನಿಸಿರುತ್ತದೆ... different ಅಂಥ ಅನ್ನಿಸೋದೇ ಇಲ್ಲ .
recent ಆಗಿ ನಮ್ಮ ಕಂಪನಿ ಇಂದ Goldan Pam ರೆಸಾರ್ಟ್ ಗೆ ಹೋಗಿದ್ದೆ , ಅಲ್ಲಿ ನೋಡೋಕೆ ಎಲ್ಲ ಚೆನ್ನಾಗಿ ಇದ್ದವು,, ಅದೇ ಶಿಲ್ಪಾ ಕಲೆಗಳು, ಹುಲ್ಲು ಹಾಸು, ದೊಡ್ಡ ಸ್ವಿಮಿಂಗ್ ಪೂಲ್ , ಏನೋ different ಆಗಿ ಇರುವ ವಸ್ತು ಇಲ್ಲವೇನೋ ಅಂಥ ಅನ್ನಿಸುತ್ತಿರಬೇಕಾದರೆ ಒಂದು ಚಿಕ್ಕ fountain ಕಣ್ಣಿಗೆ ಬಿತ್ತು.. ಚಿಕ್ಕದಾದರೂ ಏನೋ ಒಂದು ಹೊಸತನ,,, ಕ್ರಿಯೇಟಿವಿಟಿ ಅದರಲ್ಲಿ ಇತ್ತು , ಅದನ್ನೇ ನೋಡ್ತಾ ಸ್ವಲ್ಪ ಸಮಯ ಅದರ ಬಗ್ಗೆನೇ ಯೋಚನೆ ಮಾಡ್ತಾ ಇದ್ದೆ,, ಇದೆ ಥರ ಏನಾದರೂ different ಆಗಿ ಇರೋದನ್ನ ಮಾಡ್ತಾ ಇದ್ದರೆ ಎಷ್ಟು ಚೆನ್ನಾಗಿ ಇರುತ್ತೆ ಅಲ್ವ ಅಂಥ..... ಹೌದಲ್ವ.. ಇಂತದಕ್ಕೆ ತುಂಬ ಕರ್ಚು ಮಾಡಿ ಏನು ಮಾಡಬೇಕಾಗಿ ಇರೋಲ್ಲ .. ಇರುವ ವಸ್ತುವಿನಲ್ಲೇ ಸ್ವಲ್ಪ different ಆಗಿ ಇರೋ ಥರ ಮಾಡಬೋದು.....
ಇದೆ ರೀತಿ ಬೆಳಗಾವಿ ಮಹಾರಾಷ್ಟ್ರದ ಗಡಿ ನಲ್ಲಿ,, ಸಿಮೆಂಟ್ ನಲ್ಲಿ ಮಾಡಿದ ಹಳ್ಳಿ ಮಾದರಿಯ ಕಲಾಕ್ರುತಿಗಳು ತುಂಬ ಪ್ರಸಿದ್ದಿ ಪಡೆದಿವೆ ಅಂತೆ...ಶಿರಡಿಗೆ ಹೋಗಬೇಕಾದರೆ ದಾರಿನಲ್ಲಿ ನೋಡಿಕೊಂಡು ಹೋಗಿದ್ವಿ,, ಆದರೆ ಫೋಟೋಗಳನ್ನ ಇನ್ನೊಮ್ಮೆ ನಿಮ್ಮ ಜೊತೆ ಹಂಚಿಕೊಲ್ತೇನೆ.. ಅದನ್ನ ನೋಡಿ ಏನೋ ಒಂದು ಥರ ಕುಷಿ ಅನ್ನಿಸ್ತು.... ಹೀಗೆ ಒಳ್ಳೆ ಪ್ರೋಸ್ತಹ ಸಿಕ್ಕರೆ ನಮ್ಮಲ್ಲೂ ಒಳ್ಳೆ ಪ್ರತಿಬೆಗಳು ಇದ್ದಾರೆ ಅವರಿಂದ ಒಳ್ಳೆ ಒಳ್ಳೆ ಹೊಸತನವನ್ನು ಪಡೆಯಬಹುದು.....

ಹಾಂ ಈ ವಿಚಾರ ನನ್ನ ತಲೆ ನಲ್ಲಿ ಯಾಕೆ ಬಂತು ಅಂದ್ರೆ... ಈ ಕೆಳಗಿನ ಚಿತ್ರಗಳನ್ನು ನೋಡಿ ,,, ಮಾಡಕ್ಕೆ ಏನು ಕೆಲಸ ಇಲ್ಲವೇನೋ ಅನ್ನುವಂತೆ,,, ಚಿತ್ರ ವಿಚಿತ್ರ ವನ್ನು ಮಾಡಿದ್ದಾರೆ ಇದನ್ನು ನೋಡಿ ಯೋಚಿಸುತ್ತಾಇರಬೇಕಾದರೆ ನನಗು ಈ ಯೋಚನೆ ಗಳು ಬಂದವು,,, ನೀವು ನೋಡಿ,, ಈ ಥರದಹ ವಿಚಿತ್ರ ಯೋಚನೆ ಬಂದರೆ,, ಅಥವಾ ವಿಚಿತ್ರ ಕಲೆಗಳನ್ನು ನಿಮ್ಮ ಸುತ್ತ ಮುತ್ತ ನೋಡಿದ್ದರೆ ,, ನನ್ನ ಜೊತೆಗೂ ಹಂಚಿ ಕೊಳ್ಳಿ.....ಸುಮ್ನೆ ಹಾಗೆ ...ಯಾರೋ ನೆತಾಡೋ ತರ ಮನುಷ್ಯನ ಅಕ್ರುತಿಯನ್ನ ಮಾಡಿ ಬಿಟ್ ಇದ್ದಾರೆ ಅಸ್ಟೆ....


ಸರಿಯಾಗಿ ನೋಡಿ, ಕುದುರೆ ಮೇಲೆ ಅಲ್ಲ ಕೂತಿರೋದು,,, ಉಲ್ಟಾ ಆಗಿ....

ರಬ್ಬರ್ ನಲ್ಲಿ ಮಾಡಿರೋದುಇಷ್ಟು ದೊಡ್ಡ ಚಿಕ್ಕ ಮಗುನ ?


ವಿಚಿತ್ರವಾಗಿ ಇಲ್ವಾ ?


ಇದು ಹೇಗೆ ಇದೆ?


flight ಅಲ್ಲ ರೀ,, ಮೀನು.......ಇದು ಏನಕ್ಕೊಸ್ಕರ ಮಾಡಿದ್ದರೋ ಗೊತ್ತಿಲ್ಲ .. ನಿಮಗೆ ಗೊತ್ತಾದ್ರೆ ಹೇಳಿ...:-)

ಗೋಡೆ ಪಕ್ಕದಲ್ಲಿ ನಿತು ಫೋಟೋ ತೆಗಿಥ ಇರೋದು ಒಂದು cementinalli ಮಾಡಿರುವ ಬೊಂಬೆ ರೀ....

Wednesday, June 24, 2009

ನಿಂಬೆ ಹಣ್ಣಿನ ಹಬ್ಬ.....!!!!! menton


menton ಒಂದು ಸುಂದರವಾದ ನಗರ ಇದು french-italian boarder ನಲ್ಲಿ ಇದೆ ... ಸುತ್ತಲು ನೀರಿನಿಂದ ಹಾಗು ಬೆಟ್ಟದಿಂದ ಆವೃತ ವಾದ ಒಂದು ಸುಂದರ ನಗರವಂತೆ,, ಸುತ್ತಲು ಬೆಟ್ಟಗಳು ಇರುವುದರಿಂದ ಬಲವಾಗಿ ಬೀಸುವ ಗಾಳಿ ಅಸ್ತು ಪ್ರಬಲವಾಗಿ ಇಲ್ಲದೆ ಇರುವ ಕಾರಣ,, ಇಲ್ಲಿ ಯಾವಾಗಲು ಒಳ್ಳೆಯ ಹವಾಮಾನ ಇರುತ್ತಂತೆ...
ನಿಮಗೆ ಗೊತ್ತಿರ ಬೇಕಲ್ವ... ನಮ್ಮ ಲಾಲ್ ಬಾಗ್ ನಲ್ಲಿ ಒಂದು ಸೀಸನ್ ನಲ್ಲಿ ಪಲ ಪುಷ್ಪ್ಹ ಗಳ ಪ್ರದರ್ಶನ ನಡೆಯುತ್ತೆ .... ಇಂತದ್ದನ್ನು ನೋಡಲು ಎಷ್ಟು ಚೆನ್ನಾಗಿ ಇರುತ್ತೆ ಅಲ್ವ...
ಇದೆ ರೀತಿ ಈ menton ಅನ್ನೋ ಸಿಟಿ ನಲ್ಲಿ ಪ್ರತಿ ಬೇಸಿಗೆ ಸಮಯದಲ್ಲಿ lemons- ನಿಂಬೆ ಹಣ್ಣುಗಳ ಪ್ರದರ್ಶನ ನಡೆಯುತ್ತೆ,, ಇದು ಎಷ್ಟು ಪ್ರಸಿದ್ದಿ ಪಡೆದಿದೆ ಅಂದರೆ... ತುಂಬ ದೇಶದಿಂದ ಜನರು ಇದನ್ನು ನೋಡಲು ಬರುತ್ತಾರೆ... ಪ್ರತಿವರ್ಷ ಇದು ಅಭಿವೃದ್ದಿ ಹೊಂದುತ್ತಾ ಇದೆ ಅಂತೆ ....ಅದು ಎಷ್ಟು ನಿಂಬೆ ಹಣ್ಣನ್ನು ಬೆಳೆಯುತ್ತಾರೋ ಏನ್ ಕತೆನೋ,, ಕೆಳಗೆ ಇರುವ ಚಿತ್ರ ನೋಡಿ....ನೀವೇ ಹೇಳಿ...... ಇಡಿ ಪಾರ್ಕ್ ಅನ್ನು ನಿಂಬೆ ಹಣ್ಣುಗಳ ರಾಶಿ ಇಂದ ತುಂಬಿಸಿ ಇದ್ದಾರೆ ಹಾಗೆ ಅದರಲ್ಲೇ ಅದ್ಬುತ ಕಲಾಕೃತಿಗಳು ಬೇರೆ ......
ಅಲ್ಲೇ ಇರುವ ನನ್ನ ಸ್ನೇಹಿತನೊಬ್ಬ ಇದರಬಗ್ಗೆ ಹೇಳಿದ್ದ..ಕೂತುಹಲದಿಂದ ಹಾಗೆ ಸ್ವಲ್ಪ ಇಂಟರ್ನೆಟ್ ನಲ್ಲಿ ಹುಡುಕಾಡಿದಾಗ ನನಗೆ ಸಿಕ್ಕ ಮಾಹಿತಿ ಇಷ್ಟು ,, ಯಾರಾದರು ಫ್ರಾನ್ಸ್ ಗೆ ಪ್ರವಾಸ ಹೋಗುವವರಿದ್ದರೆ ಇಲ್ಲಿಗೂ ಒಮ್ಮೆ ಹೋಗಿ ಬನ್ನಿ.....
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ : - http://www.menton.com/uk/menton/index.html


Saturday, June 20, 2009

3D paintings.. ಮತ್ತೆ ಬಂದಿದೆ,,, !!!!!

ನನ್ನ ಬ್ಲಾಗ್ ನಲ್ಲಿ ಹಿಂದೆ ರೋಡ್ side ನಲ್ಲಿ ಮಾಡೋ 3D ಪೇಂಟಿಂಗ್ pictures ಹಾಕ್ಕಿದ್ದೆ .. ನೀವೆಲ್ಲ ನೋಡಿ ಕುಶಿ ಪಟ್ಟಿದ್ರಿ ಅಲ್ವ.... ನೋಡಿಲ್ಲ ಅಂದ್ರೆ ಅದನ್ನ ಇನ್ನೊಮೆ ನೋಡಿ....(http://guruprsad.blogspot.com/2009/03/amazing-paintings.html) ಇ ಬ್ಲಾಗ್ ಅನ್ನು ಆಮೇಲೆ ನೋಡಿ. ಅದರ ಮುಂದುವರಿದ ಭಾಗನೇ ಇಲ್ಲಿ ಇರೋದು..... ಅಂದ್ರೆ ಅದೇ ಥರದದ್ದು

..............

ಇಲ್ಲೊಂದು ಟೀಂ ಅದೇ ತರ ರೋಡ್ ಸೈಡ್ ನಲ್ಲಿ ಅದು ಕೆಲವೇ ಗಂಟೆಗಳಲ್ಲಿ ಒಂದು ದೊಡ್ಡ ದಾದ ice ಕಂದಕವನ್ನೇ ಸೃಷ್ಟಿ ಮಾಡಿದ್ದರೆ ನೋಡಿ.......ಏನ್ ಕಲೆ ಅಲ್ವ .......ಚಿತ್ರ ಕೃಪೆ :- ಹಾಗೆ ಹುಡುಕಾಡುತ್ತ ಸಿಕ್ಕಿದ್ದು.....(mostly ಮೇಲ್ ನಲ್ಲೂ ಬಂದಿರುತ್ತೆ)

Monday, June 15, 2009

ನಡೆದಾಡಲು ರಸ್ತೆಗಳೇ ಇಲ್ಲ ಅಂದ್ರೆ ಹೇಗೆ ಇರುತ್ತೆ!!!!!! ಯೋಚಿಸಿ....

ಸುಮ್ನೆ ಹಾಗೆ imagin ಮಾಡ್ಕೊಳ್ಳಿ !!!!!

ನಡೆದಾಡಲು ರಸ್ತೆಗಳೇ ಇಲ್ಲ ಅಂದ್ರೆ ಹೇಗೆ ಇರುತ್ತೆ....?

ಈ ರೀತಿನು ಇರೋಕೆ ಸಾದ್ಯನ.? !!!!!!!!!

ಹೌದು ಸಾದ್ಯ ಇದೆ.. ಇಲ್ಲಿ ನೋಡಿ....

ಹಾಲೆಂಡ್ ದೇಶದ ಒಂದು ಹಳ್ಳಿ.... ಈ ಹಳ್ಳಿ ನಲ್ಲಿ ನಡೆದಾಡಲು ಒಂದೇ ಒಂದು ರಸ್ತೇನೆ ಇಲ್ಲ... ನಂಬೋಕೆ ಕಷ್ಟ ಆಗ್ತಾ ಇದ್ದೀಯ... ಹೌದು,, ಇಲ್ಲಿ ಇರುವುದೆಲ್ಲ ನೀರು ರಸ್ತೆಗಳು....ಈ ಹಳ್ಳಿ ನಲ್ಲಿ ಯಾವುದೇ ಮನೆಗೆ ಹೋಗಬೇಕಂದ್ರೆ boat ನಲ್ಲಿ ಹೋಗಬೇಕು.. boat ನಲ್ಲೆ ಬರಬೇಕು .... ಮಜಾ ಇರುತ್ತೆ ಅಲ್ವ..... ನಡೆದಾಡುವ ಅಗತ್ಯನೇ ಇಲ್ಲ......

ನಮ್ಮ ಬೆಂಗಳೂರಿನಲ್ಲಿ ಮಳೆ ಬಂದಾಗ ಇರೋ ರೋಡಿನಲ್ಲೆಲ್ಲ ನೀರು ತುಂಬಿಕೊಂಡು ಇರುವುದನ್ನು ನೋಡಿದ್ದೇವೆ... ಹಾಗೆ ಇದರಲ್ಲೇ ಸಂಚಾರವನ್ನು ಮಾಡಿರುತ್ತೇವೆ..... ಆದರೆ ಇಲ್ಲಿ ನೋಡಿ..... ನೀರೆ ಇಲ್ಲಿಯ ಜನರ ರಸ್ತೆ... ಏನೆ ಬೇಕಾದರು ನೀರಮೇಲೆ ಹೋಗಬೇಕು ಅದರಲ್ಲೇ ಬರಬೇಕಂತೆ...ಶಾಪಿಂಗ್, ಹಣ್ಣು ತರಕಾರಿ,,,, ಎಲ್ಲ ನೀರುರಸ್ತೆ ಮೇಲೆ....... ಆದರೆ ಮನೆಗಳು ಮಾತ್ರ ನೆಲದಮೇಲೆ ಗಟ್ಟಿ ಮುಟ್ಟಾಗಿ ಇದೆ.... ಮಳೆಬಂದಾಗ,,, ರಸ್ತೆ ಎಲ್ಲ ನೀರು ತುಂಬಿಕೊಂಡು ಹಾಳಾಯ್ತು ಅಂಥ ಹೇಳೋ ಪ್ರಮೆಯನೆ ಇಲ್ಲ.. ರಸ್ತೆನಲ್ಲಿ ಗುಂಡಿ ಬಿದ್ದಿದೆ ಅಂಥ ಕಂಪ್ಲೇಂಟ್ ಮಾಡೋ ಹಾಗು ಇಲ್ಲ.. ಟಾರ್ ಹಾಕಿ ಅಂಥ Gov ನ ಕೇಳೋಹಾಗು ಇಲ್ಲ .. ಹಾ imagin ಮಡ್ಕೊಲೋಕೆ ಕಷ್ಟ ಆಗುತ್ತೆ,, ಆದ್ರೆ ಇಲ್ಲಿಯ ಜನ ಹೀಗೆ ಬದುಕುತ್ತ ಇದ್ದರೆ..... ನೋಡಿ ನೀವೇ ಈ ನೀರುರಸ್ತೆಯ ಹಳ್ಳಿ ಹೇಗೆ ಇದೆ ಅಂಥ..... !!!! ಚಿತ್ರ ವಿಚಿತ್ರ ಜಗತ್ತು....ಅಲ್ವ ?

(ನಮ್ಮ ಎಡ್ಡಿ ಸರಕಾರಕ್ಕೆ ಈ ಥರ ರಸ್ತೆ ಮಾಡಿ ಅಂಥ ಪ್ರೊಪೋಸಲ್ ಕೊಡ್ತಾ ಇದೇನೇ,,, ನಿಮಗೆ ಇಷ್ಟ ಆದ್ರೆ ನನ್ನ ಮನವಿ ಪತ್ರಕ್ಕೆ ನಿಮ್ಮ sign ಹಾಕ್ತೀರಾ? :-) )Thursday, June 11, 2009

ಪುಟ್ಟ ಪುಟ್ಟ ಪಾಪುವಿನ ತಾಯಿ - Camille Allen !!!!


ಎಷ್ಟು ಪುಟ್ಟ ಮಗು ಅಲ್ವ....ಬರಿ ಅಂಗೈ ನಲ್ಲಿ ಮಲಗಿಸಿಕೊಳ್ಳ ಬಹುದು ....ಎಲ್ಲಿ ಹುಟ್ಟಿರೋದು ಇ ಮಗು ಅಂಥ ಯೋಚಿಸ್ತಾ ಇದ್ದೀರಾ ? ಇದು ಅನಿಮೇಷನ್ ನ ? ಅಥವಾ ಫೋಟೋ ಕೈ ಚಳಕನ........... ಏನ್ ಇರಬೋದು.....
ಮುಂದೆ ಓದಿ........


Camille Allen ಇವರು ಸದ್ಯ ಇರುವುದು Powell River, in British Columbia, Canada. ಇವರಿಗೆ ಮದುವೆ ಆಗಿದೆ... ಆದರೆ ಮಕ್ಕಳು ಇಲ್ಲ... ಇನ್ನು 28 ವರ್ಷ ವಯಸು ... ಆದರೆ ಇವರಿಗೆ ಮಕ್ಕಳ ಮೇಲೆ ಇರುವ ಪ್ರೀತಿ ಮಾತ್ರ ಅಸ್ಟಿಸ್ತಲ್ಲ ....ನೀವು ನೋಡಿರಬಹುದು,, ಚಿಕ್ಕ ಚಿಕ್ಕ baby dolls ಅನ್ನು ಮೇಲ್ ನಲ್ಲಿ,,, ಇದು ಯಾವ ಥರ ಅನಿಮೇಷನ್ ಅಥವ ಫೋಟೋಗ್ರಫಿ ಅಂತ ಯೋಚಿಸಿರಬೇಕಲ್ವ? ಹೌದು,, ಇದು ಅನಿಮೇಷನ್ ಅಲ್ಲ, ಫೋಟೋಗ್ರಫಿ ಕೂಡ ಅಲ್ಲ... ಇದನ್ನು ಮಾಡಿರುವುದು Camille Allen ಅನ್ನುವ ಅದ್ಬುತ ಆರ್ಟಿಸ್ಟ್.ಈ ರೀತಿ ಮಾಡುವುದನ್ನು ಇವರ ಗಂಡನ ತಾಯಿ ಇಂದ ಕಲಿತರಂತೆ..polymer clay ಇಂದ ರಿಯಲ್ ಪಾಪುವಿನ ದೊಡ್ಡದಾದ Sculpt ಮಾಡ್ತಾ ಇದ್ದರಂತೆ... ಹಾಗೆ ಮಾಡುತ್ತ ಇರಬೇಕಾದರೆ ಮಿಕ್ಕಿದ polymer clay ಇಂದ ಪುಟ್ಟ clay into a miniature baby ಮಾಡಿದರಂತೆ ... ಹೀಗೆ ಫಸ್ಟ್ ಟೈಮ್ ಮಾಡಿದ baby ಅವರಿಗೆ ತುಂಬ ಇಷ್ಟ ಆಗಿ.. ಇದರಲ್ಲೇ ಇನ್ನು ಅನೇಕ ಈ ರೀತಿಯ ಪುಟ್ಟ ಪುಟ್ಟ ಪಾಪು ವಿನ Sculpt ಮಾಡುತ್ತಾ ಅದನ್ನು ಸೇಲ್ ಮಾಡ್ತಾ ಇದ್ದರೆ... ಈ ತರಹದ ಎಸ್ಟೋ ಕಲಾಕೃತಿಗಳು ಅವಾರ್ಡ್ ಕೂಡ ತಗೊಂಡ ಇದೆ......ತುಂಬ ಚಿಕ್ಕ ದಾಗಿ ಇರುವ baby modlings ಮಾಡೋದಕ್ಕೆ ತುಂಬ ಕಷ್ಟ ಅಂತೆ,,,, ಆದರು ತಮ್ಮ ಛಲ ವನ್ನು ಬಿಡದೆ.. ಚಿಕ್ಕ ಮಗು ಹೇಗೆ ಇರುತ್ತೋ ಅದೇ ರೀತಿ,, ಒಂದು ಚಿಕ್ಕ ಸುಕ್ಕು, ಕೈ ನ ಉಗುರು ಕೂಡ ಬಿಡದಂತೆ ಮಾಡುವುದರಲ್ಲಿ ಪಳಗಿದ್ದಾರೆ......ಎಷ್ಟು realistic ಆಗಿ ಇದೆ ಇವರ ಪುಟ್ಟ ಪುಟ್ಟ baby Sculpt ಅಂದ್ರೆ , ನೀವೇ ನೋಡಿ ಹೇಳಿ.... ಇವರ ಒಂದೊಂದು ಕಲಾಕೃತಿಗಳನ್ನು ಹಾಗು ಅದನ್ನು ಮಾಡಿರುವ ರೀತಿಯನ್ನು ಅವರ ವೆಬ್ಸೈಟ್ ನಲ್ಲಿ ಹೇಳಿಕೊಂಡಿದ್ದಾರೆ....ಕೆಳಗಿನ ಫೋಟೋ ನೋಡಿ ಇಷ್ಟ ಆದರೆ ಇವರ ವೆಬ್ ಸೈಟ್ ಗೆ ಒಮ್ಮೆ ಬೇಟಿ ಕೊಡಿ....http://camilleallen.com/


ಗುರು :-)